ಅಂತರ್ಜಾಲದ ಅಪಾಯಗಳೂ ಆಪತ್ತುಗಳೂ

ವಂದಿತಾ ದುಬೆ ಮನಶ್ಶಾಸ್ತ್ರ ಚಿಕಿತ್ಸಕರಾಗಿದ್ದು 1995ರಲ್ಲಿ ಮುಂಬಯಿಯ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಎಂಎ ಪದವಿ ಮಾಡಿದಾಗಿನಿಂದಲೂ ಮಕ್ಕಳು ಮತ್ತು ಕುಟುಂಬಗಳ ನಡುವೆ ತಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ. 2006ರಲ್ಲಿ ಅಮೆರಿಕದಲ್ಲಿ ಮನಶ್ಶಾಸ್ತ್ರ ಚಿಕಿತ್ಸೆಯ ಡಾಕ್ಟರೇಟ್ ಪಡೆದಿದ್ದಾರೆ. ಮಕ್ಕಳು ಎದುರಿಸುವ ಲೈಂಗಿಕ ದೌರ್ಜನ್ಯದ ಬಗ್ಗೆ ಅನೇಕ ಸಂಶೋಧನೆಗಳನ್ನು ನಡೆಸಿರುವ ವಂದಿತಾ ದುಬೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ. ಅಮೆರಿಕ ಮತ್ತು ಭಾರತದಲ್ಲಿ ಮಾನಸಿಕ ಚಿಕಿತ್ಸೆ ನೀಡುವಲ್ಲಿ ನಿರತರಾಗಿರುವ ವಂದಿತಾ ದುಬೆ ಅನೇಕ ಶಾಲೆಗಳಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ್ದಾರೆ. ಗುರಗಾಂವ್‍ನಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಹಿಮಾಲಯದ ತಪ್ಪಲಲ್ಲಿನ ಕುಮಾಂವ್‍ನಲ್ಲಿ ನೆಲೆಸಿರುವ ವಂದಿತಾ ದುಬೆ ಸರಳ ಜೀವನ ನಡೆಸುತ್ತಿದ್ದಾರೆ. ಅಲ್ಲಿ ತಮ್ಮ ಪತಿ, ಇಬ್ಬರು ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ.

ವಂದಿತಾ ದುಬೆ ಅವರ ‘ಪೇರೆಂಟಿಂಗ್ ಇನ್ ದಿ ಏಜ್ ಆಫ್ ಸೆಕ್ಸ್‍ಪೋಸರ್’ ಪುಸ್ತಕದ ಒಂದು ಅಧ್ಯಾಯ ಇಲ್ಲಿದೆ; ನಿಮ್ಮ ಓದಿಗೆ.

ಅಂತರ್ಜಾಲ ಎನ್ನುವುದು ಮಾಹಿತಿಯ ಚಿನ್ನದ ಗಣಿ. ಮತ್ತೊಂದೆಡೆ ಇಲ್ಲಿ ಲಭ್ಯವಿರುವ ಮಾಹಿತಿ ಗೊತ್ತುಗುರಿಯಿಲ್ಲದ ಮತ್ತು ತಿದ್ದುಪಡಿಯಾಗದ ಮಾಹಿತಿಯಾಗಿರುತ್ತದೆ. ಉಪಕರಣವನ್ನು ತೆರೆದು ನೋಡಿದ ಕೂಡಲೇ ಇಲ್ಲಿ ಕಾಣಲಾಗುವ ಮಾಹಿತಿಗೆ, ಫೋಟೋಗಳಿಗೆ, ವಿಡಿಯೋಗಳಿಗೆ ವಯಸ್ಕ ಶ್ರೇಣಿ ನೀಡಲಾಗುವುದಿಲ್ಲ. ಮಕ್ಕಳು ಮನೆಯೊಳಗಿನ ಸುರಕ್ಷಿತ ವಲಯದಲ್ಲಿದ್ದುಕೊಂಡೇ ಅಂತರ್ಜಾಲವನ್ನು ಹೊಕ್ಕು ನೋಡಬಹುದು. ಆದರೆ ಒಳಹೊಕ್ಕ ಕೂಡಲೇ ಅವರು ಅಸುರಕ್ಷಿತರಾಗುತ್ತಾರೆ. ನೈಜ ಪ್ರಪಂಚದಲ್ಲಿ ಇರುವ ಎಲ್ಲ ಅಪಾಯಗಳೂ ಸಹ ವಾಸ್ತವ ಜಗತ್ತಿನಲ್ಲೂ ಇರುತ್ತದೆ. ಮಕ್ಕಳು ತಾವು ಅರ್ಥಮಾಡಿಕೊಳ್ಳಲಾಗದ, ಯೋಚಿಸಲಾಗದ ಮಾಹಿತಿಯನ್ನು ನೋಡುತ್ತಾರೆ. ಉದಾಹರಣೆಗೆ ಅಶ್ಲೀಲ ಚಿತ್ರಗಳು, ಲೈಂಗಿಕ ದೂಷಣೆ ಅಥವಾ ಹಿಂಸೆಯನ್ನು ಕಾಣುತ್ತಾರೆ. ಎಲ್ಲ ರೀತಿಯ ಅಶ್ಲೀಲತೆ, ಅತ್ಯಾಚಾರದ ದೃಶ್ಯಗಳು, ತೀವ್ರತೆರನಾದ ಅಶ್ಲೀಲ ಚಿತ್ರಗಳು ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಾಗುತ್ತದೆ. ಈ ರೀತಿಯ ತೀವ್ರತೆರನಾದ ಅಶ್ಲೀಲತೆಯನ್ನು ಮಕ್ಕಳು ನೋಡಿದರೆ ಯುವ ಮನಸುಗಳನ್ನು ಗೊಂದಲಕ್ಕೀಡುಮಾಡುತ್ತದೆ, ಪ್ರಕ್ಷುಬ್ಧಗೊಳಿಸುತ್ತದೆ. ಮಕ್ಕಳು ದೊಡ್ಡವರಿಂದ ದೌರ್ಜನ್ಯಕ್ಕೊಳಗಾಗುತ್ತಾರೆ, ಹಿಂಸೆಗೊಳಗಾಗುತ್ತಾರೆ. ಹಾಗೆಯೇ ಲೈಂಗಿಕ ಅತ್ಯಾಚಾರಿಗಳಿಗೆ ಸುಲಭ ತುತ್ತಾಗುತ್ತಾರೆ. ಎಳೆಯ ವಯಸ್ಸಿನಲ್ಲೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು, ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಸೇವನೆಗೆ ಬಲಿಯಾಗುವುದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತರ್ಜಾಲದಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು, ಭಾವಚಿತ್ರಗಳನ್ನು ಹಂಚಿಕೊಳ್ಳುವುದು ಅಥವಾ ಯಾವ ಮಾಹಿತಿಯೂ ಇಲ್ಲದೆಯೇ ಸ್ನೇಹ ಬೆಳೆಸುವುದು ಇವೆಲ್ಲವೂ ಅಪಾಯಕಾರಿಯಾಗುತ್ತವೆ.

ಅಪ್ರಾಪ್ತರಲ್ಲಿನ ಆವೇಗದ ವರ್ತನೆಯ ಪೈಕಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು, ಧೂಮ್ರಪಾನ ಮಾಡಲು ಪ್ರಯತ್ನಿಸುವುದು, ಮದ್ಯಪಾನ ಮತ್ತು ಮಾದಕದ್ರವ್ಯ ಸೇವನೆಗೆ ಪ್ರಯತ್ನಿಸುವುದು ಮುಖ್ಯವಾಗಿವೆ. ಪ್ರೌಢ ವಯಸ್ಕರ ಮಿದುಳು ಬೆಳೆಯುವ ಹಂತದಲ್ಲಿರುವುದರಿಂದ ಈ ಚಟಗಳನ್ನು ಬಿಡುವುದಿಲ್ಲ, ಇಪತ್ತು ವಯಸ್ಸನ್ನು ದಾಟುವವರೆಗೂ ಮುಂದುವರೆಸುತ್ತಾರೆ. ಇಂಥವರಲ್ಲಿ ಉನ್ಮಾದ ಹೆಚ್ಚಿಸುವ ವಸ್ತುಗಳು ಪರಿಣಾಮಕಾರಿಯಾಗಿರುತ್ತವೆ.

ಅಂತರ್ಜಾಲ ಬಂದ್ ಆಗುವುದೇ ಇಲ್ಲ. ಮಿದುಳಿನಲ್ಲಿ ರಾತ್ರಿಯವೇಳೆ ನಿದ್ರೆ-ಎಚ್ಚರದ ಚಕ್ರದಲ್ಲಿ ನಡೆಯುವ ಬದಲಾವಣೆಗಳ ಪರಿಣಾಮವಾಗಿ ಬಹುತೇಕ ಹರೆಯದ ಮಕ್ಕಳು ತಡರಾತ್ರಿಯವರೆಗೂ ಎಚ್ಚರದಿಂದಿರಲು ಬಯಸುತ್ತಾರೆ.ಈ ಪ್ರವೃತ್ತಿಯನ್ನು ಅಂತರ್ಜಾಲ ಉತ್ತೇಜಿಸುತ್ತದೆ. ಆದರೆ ಮಿದುಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಸೂಕ್ತ ಪ್ರಮಾಣದ ನಿದ್ರೆ ಅತ್ಯವಶ್ಯವಾಗಿರುತ್ತದೆ. ನಿದ್ರಾಹೀನತೆಯಿಂದ ಆಯಾಸ, ಬಳಲಿಕೆ ಹೆಚ್ಚಾಗುತ್ತದೆ, ಏಕಾಗ್ರತೆಯ ಕೊರತೆ ಹೆಚ್ಚಾಗುತ್ತದೆ, ಖಿನ್ನತೆಯೂ ಉಂಟಾಗುತ್ತದೆ. ಪ್ರೌಢ ವಯಸ್ಕರ ಬಗ್ಗೆ ನಡೆಸಲಾಗಿರುವ ಅಧ್ಯಯನದ ಅನುಸಾರ ಹೆಚ್ಚಿನ ಆವೇಗದ ವರ್ತನೆ ಮತ್ತು ಅಪರಾಧಿ ಮನೋಭಾವ ಇರುವವರು ನಿದ್ರಾಹೀನತೆಯಿಂದ ಬಳಲುತ್ತಾರೆ. ಅಪ್ರಾಪ್ತರಲ್ಲಿನ ಆವೇಗದ ವರ್ತನೆಯ ಪೈಕಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು, ಧೂಮ್ರಪಾನ ಮಾಡಲು ಪ್ರಯತ್ನಿಸುವುದು, ಮದ್ಯಪಾನ ಮತ್ತು ಮಾದಕದ್ರವ್ಯ ಸೇವನೆಗೆ ಪ್ರಯತ್ನಿಸುವುದು ಮುಖ್ಯವಾಗಿವೆ. ಪ್ರೌಢ ವಯಸ್ಕರ ಮಿದುಳು ಬೆಳೆಯುವ ಹಂತದಲ್ಲಿರುವುದರಿಂದ ಈ ಚಟಗಳನ್ನು ಬಿಡುವುದಿಲ್ಲ, ಇಪತ್ತು ವಯಸ್ಸನ್ನು ದಾಟುವವರೆಗೂ ಮುಂದುವರೆಸುತ್ತಾರೆ. ಇಂಥವರಲ್ಲಿ ಉನ್ಮಾದ ಹೆಚ್ಚಿಸುವ ವಸ್ತುಗಳು ಪರಿಣಾಮಕಾರಿಯಾಗಿರುತ್ತವೆ. ಉದಾಹರಣೆಗೆ ಪ್ರೌಢ ವಯಸ್ಕರು ಮದ್ಯಪಾನ ಮಾಡಿದರೆ ವಯಸ್ಕರಿಗಿಂತಲೂ ಹೆಚ್ಚು ಮದ್ಯ ಸೇವಿಸುತ್ತಾರೆ. ಯೌವ್ವನದಲ್ಲಿ ಮದ್ಯಪಾನ ಮಾಡುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವುದು ವಯಸ್ಕ ಹಂತದಲ್ಲಿ ಮದ್ಯಪಾನದ ಅವಲಂಬಲನೆಯನ್ನೇ ಆಧರಿಸಿರುತ್ತದೆ. ಸಣ್ಣ ಪ್ರಮಾಣದ ನಿಕೋಟಿನ್ ದ್ರವ್ಯ ಪ್ರೌಢ ವಯಸ್ಕರನ್ನು ವ್ಯಸನಿಗಳನ್ನಾಗಿ ಮಾಡಿಬಿಡುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಅಂತರ್ಜಾಲ ವ್ಯಸನದ ಪರಿಣಾಮವನ್ನು ಕುರಿತು ಸಂಶೋಧನೆ ಇನ್ನೂ ನಡೆಯುತ್ತಿದ್ದರೂ ಇನ್ನೂ ಬೆಳೆಯುವ ಹಂತದಲ್ಲಿರುವ ಪ್ರೌಢ ವಯಸ್ಕರ ಮಿದುಳು ಯಾವುದೇ ವ್ಯಸನಕ್ಕೆ ಬಲಿಯಾದರೂ ಅಪಾಯಕಾರಿಯಾಗುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳಿವೆ.

ಅಶ್ಲೀಲ ಚಿತ್ರಗಳ ವೀಕ್ಷಣೆ ಮತ್ತು ಪರಿಣಾಮ

ಯೌವ್ವನದಲ್ಲಿ ಲೈಂಗಿಕ ಆಕರ್ಷಣೆ ಹೆಚ್ಚಾಗಿಯೇ ಇರುತ್ತದೆ. ಕೆಲವು ದಶಕಗಳ ಹಿಂದೆ ಮಕ್ಕಳಿಗೆ ಲೈಂಗಿಕ ಚಟುವಟಿಕೆಗಳು ಕಾದಂಬರಿ ಅಥವಾ ಚಲನಚಿತ್ರಗಳ ಮೂಲಕ ಮಾತ್ರವೇ ಪರಿಚಯವಾಗುತ್ತಿತ್ತು. ಇವುಗಳಲ್ಲಿ ಬಹುಪಾಲು ಚಿತ್ರಣಗಳು ಕಾಲ್ಪನಿಕವಾಗಿರುತ್ತಿದ್ದವು. ಕೆಲವು ಪ್ರೌಡವಯಸ್ಕರು ಪ್ಲೇಬಾಯ್‍ನಂತಹ ವಯಸ್ಕರ ಪತ್ರಿಕೆಗಳನ್ನು ಓದುತ್ತಿದ್ದರು ಅಥವಾ ವಯಸ್ಕ ಚಿತ್ರಗಳನ್ನು ನೋಡುತ್ತಿದ್ದರು. ಆದರೆ ಇವುಗಳು ಸುಲಭವಾಗಿ ಲಭಿಸುತ್ತಿರಲಿಲ್ಲ. ಈಗ ಎಲ್ಲ ರೀತಿಯ ವಿಷಯಗಳೂ ಅಂತರ್ಜಾಲದಲ್ಲಿ ಲಭ್ಯವಾಗುವುದರಿಂದ ನಾವು ಕಲ್ಪಿಸಿಕೊಳ್ಳಬಹುದಾದ ಎಲ್ಲ ವಿಷಯಗಳೂ, ಎಲ್ಲ ವಯಸ್ಸಿನವರಿಗೂ, ಸದಾ ಕಾಲವೂ ಅಂತರ್ಜಾಲದಲ್ಲಿ ದೊರೆಯುತ್ತದೆ. ಎರಡು ವರ್ಷದ ಹಸುಳೆಯೂ ಐಪ್ಯಾಡ್ ತೆಗೆದು ನೋಡುವಾಗ ಅಂತರ್ಜಾಲದ ಅಶ್ಲೀಲ ಚಿತ್ರಗಳನ್ನೂ ನೋಡುವ ಸಾಧ್ಯತೆಗಳಿರುತ್ತವೆ. ಎಲ್ಲವೂ ಉಚಿತವಾಗಿರುವುದೇ ಅಲ್ಲದೆ ಯಾವುದೇ ನಿರ್ಬಂಧವಿಲ್ಲದೆ ನೋಡುವಂತಿರುತ್ತದೆ. 14-15 ವರ್ಷದ ಯುವಕರು ಅಂತರ್ಜಾಲವನ್ನು ಜಾಲಾಡಿ ಅಶ್ಲೀಲ ಚಿತ್ರಗಳನ್ನು, ನೀಲಿ ಚಿತ್ರಗಳನ್ನು ವೀಕ್ಷಿಸುವುದು ಸಾಮಾನ್ಯ ಸಂಗತಿಯಾಗಿದೆ.

ಪೇರೆಂಟಿಂಗ್ ಇನ್ ದಿ ಏಜ್ ಆಫ್ ಸೆಕ್ಸ್‍ಪೋಸರ್

ನೀವು ಈ ಪುಸ್ತಕವನ್ನು ಓದಲು ಬಯಸಿದ್ದರೆ ನೀವು ಮಕ್ಕಳ ಪೋಷಕರಾಗಿರುತ್ತೀರಿ ಅಥವಾ ಮಕ್ಕಳ ಬಗ್ಗೆ ಕಾಳಜಿ ಉಳ್ಳವರಾಗಿರುತ್ತೀರಿ. ನೀವು ಯಾರೇ ಆಗಿದ್ದರೂ, ಮಕ್ಕಳ ಮೇಲೆ ಉಂಟಾಗುತ್ತಿರುವ ವಿವಿಧ ರೀತಿಯ ಪ್ರಭಾವಗಳ ಬಗ್ಗೆ ಕಾಳಜಿ ಇರುವ, ಮಕ್ಕಳ ಬೆಳವಣಿಗೆಗೆ ಮಾರಕವಾಗಿರುವ ಪ್ರಸ್ತುತ ಸಾಮಾಜಿಕ ಪರಿಸರದತ್ತ ಗಮನಹರಿಸುವ ವಯಸ್ಕರ ಲೋಕಕ್ಕೆ ನಿಮ್ಮನ್ನು ಸ್ವಾಗತಿಸುತ್ತೇವೆ. ಭಾರತದಲ್ಲಿ ಹಲವಾರು ಪೋಷಕರು ವ್ಯಕ್ತಪಡಿಸುತ್ತಿರುವ ಕಾಳಜಿ ಮತ್ತು ಎತ್ತುತ್ತಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಈ ಕೃತಿ ಸಿದ್ಧವಾಗಿದೆ. ಮಕ್ಕಳ ಬಾಲ್ಯದಿಂದ ವಯಸ್ಕರಾಗುವವರೆಗೂ ತಮ್ಮ ಮಕ್ಕಳು ಎದುರಿಸುವ ಲೈಂಗಿಕ ವಿಚಾರಗಳು ಮತ್ತು ಲೈಂಗಿಕ ಬೆಳವಣಿಗೆಗಳ ಬಗ್ಗೆ ಇರುವ ಆತಂಕಗಳನ್ನು ಪೋಷಕರು ಸಮರ್ಥವಾಗಿ ಎದುರಿಸಲು ಈ ಕೃತಿ ನೆರವಾಗುತ್ತದೆ. ಹಾಗೆಯೇ ಕೆಲವು ಸೂಕ್ತ ಸಲಹೆಗಳನ್ನೂ ನೀಡುತ್ತದೆ.

ನೀವು ಈ ಕೆಳಗಿನ ಪ್ರಶ್ನೆಗಳ ಬಗ್ಗೆ ಯೋಚಿಸುತ್ತಿರುವ ಪೋಷಕರು ನೀವಾಗಿದ್ದರೆ ನಿಮಗೆ ಈ ಪುಸ್ತಕದಲ್ಲಿ ಉಪಯುಕ್ತ ಮಾಹಿತಿ ಲಭ್ಯವಾಗುತ್ತದೆ :

• ಎಳೆಯ ಮಕ್ಕಳು ಮತ್ತು ಹಸುಳೆಗಳು ಲೈಂಗಿಕ ಸೃಷ್ಟಿಗಳೇ?

• ಒಂದು ಮಗುವಿನ ಲೈಂಗಿಕ ಬೆಳವಣಿಗೆ ಯಾವಾಗ ಆರಂಭವಾಗುತ್ತದೆ?

• ತನ್ನಲ್ಲಿ ಲೈಂಗಿಕ ಬೆಳವಣಿಗೆ ಆರಂಭವಾಗುವ ಹಂತದಲ್ಲಿ ಮಕ್ಕಳಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ?

• ಯಾವ ರೀತಿಯ ಲೈಂಗಿಕ ನಡವಳಿಕೆ ಸಹಜ ಯಾವುದು ಸಹಜವಲ್ಲ, ವಿಭಿನ್ನ ವಯೋಮಾಮನದಲ್ಲಿ ಇದನ್ನು ಹೇಗೆ ಪರಿಗಣಿಸುವುದು?

• ಲೈಂಗಿಕ ಕ್ರಿಯೆ ಮತ್ತು ಲೈಂಗಿಕತೆಯ ಬಗ್ಗೆ ಮಕ್ಕಳ ಹತ್ತಿರ ಹೇಗೆ ಮಾತನಾಡುವುದು ?

• ಯಾವ ಹಂತದಲ್ಲಿ ಮಕ್ಕಳೊಡನೆ ಲೈಂಗಿಕತೆಯ ಬಗ್ಗೆ, ಲೈಂಗಿಕ ಕ್ರಿಯೆಯ ಬಗ್ಗೆ ಮಾತನಾಡಬಹುದು ?

• ಲೈಂಗಿಕ ದೌರ್ಜನ್ಯದಿಂದ ನಮ್ಮ ಮಕ್ಕಳನ್ನು ಹೇಗೆ ರಕ್ಷಿಸುವುದು?

• ಒಂದು ಮಗು ಅಥವಾ ವಯಸ್ಕ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗುವುದನ್ನು ಹೇಗೆ ಕಂಡುಹಿಡಿಯುವುದು?

• ಮಕ್ಕಳು ಎಳೆಯ ವಯಸ್ಸಿನಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗದಂತೆ ಹೇಗೆ ನಿಯಂತ್ರಿಸುವುದು?

• ಮಾಧ್ಯಮಗಳಲ್ಲಿ ಲಭ್ಯವಾಗುವ ಲೈಂಗಿಕ ವಿಚಾರಗಳು ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ?

• ಮಾಧ್ಯಮಗಳ ಮೂಲಕ ಬಿತ್ತರಿಸಲಾಗುವ ಲೈಂಗಿಕ ವಿಚಾರಗಳ ಪ್ರಭಾವದಿಂದ ನಮ್ಮ ಮಕ್ಕಳನ್ನು ತಪ್ಪಿಸುವುದು ಹೇಗೆ?

• ನನ್ನ ಮಗ ಗಂಡು ಹುಡುಗರ ಬಗ್ಗೆ ಆಸಕ್ತಿ ತೋರುತ್ತಾನೆ, ಮಗಳು ಹುಡುಗಿಯರ ಬಗ್ಗೆ ಆಸಕ್ತಿ ತೋರುತ್ತಾಳೆ, ಈ ವರ್ತನೆ ಸಹಜವೇ ? ಇದನ್ನು ನಿಭಾಯಿಸುವುದು ಹೇಗೆ?

• ನನ್ನ ಮಕ್ಕಳ ವರ್ತನೆ ಅವನ ಅಥವಾ ಅವಳ ವಯೋಮಾನಕ್ಕೆ, ಲಿಂಗ ಅಸ್ಮಿತೆಗೆ ಹೊಂದುವಂತಿಲ್ಲ ಇದರಲ್ಲಿ ಏನಾದರೂ ಲೋಪ ಇದೆಯೇ ? ಇದನ್ನು ನಿಭಾಯಿಸುವುದು ಹೇಗೆ?

• ಸಾಮಾನ್ಯವಾಗಿ ನನ್ನ ಮಕ್ಕಳನ್ನು ಲೈಂಗಿಕ ಹಿಂಸೆಯಿಂದ ರಕ್ಷಿಸುವುದು ಹೇಗೆ?

• ನನ್ನ ಮಗ ಅಥವಾ ಮಗಳು ಆರೋಗ್ಯಕರವಾದ ದೇಹಭಾಷೆಯನ್ನು ರೂಢಿಸಿಕೊಳ್ಳಲು ನಾನು ಹೇಗೆ ನೆರವಾಗಬಹುದು?

• ನನ್ನ ಮಕ್ಕಳು ಅವರ ತೂಕ ಮತ್ತು ಅಂದಚೆಂದದ ಬಗ್ಗೆ ಚಿಂತಿತರಾಗಿದ್ದರೆ ಹೇಗೆ ನಿಭಾಯಿಸುವುದು?

• ನನ್ನ ಮಗುವಿನಲ್ಲಿ ಆಹಾರ ಸೇವನೆಯ ಲೋಪ ಇದೆಯೇ?

• ನನ್ನ ಮಕ್ಕಳು ಅಂತರ್ಜಾಲವನ್ನು ಬಹಳ ಉಪಯೋಗಿಸುತ್ತಾರೆ. ಅಂತರ್ಜಾಲದಿಂದ ಉಂಟಾಗುವ ಅಪಾಯಗಳೇನು?

• ಅಂತರ್ಜಾಲದ ಅಪಾಯಗಳಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?

ಈ ಪುಸ್ತಕದಲ್ಲಿರುವ ಸಲಹೆಗಳು ಮತ್ತು ಮಾಹಿತಿಗಳು ವೈಜ್ಞಾನಿಕ ಸಂಶೋಧನೆಯನ್ನು ಆಧರಿಸಿವೆ. ಮಕ್ಕಳ ಲಿಂಗ ಮತ್ತು ಲೈಂಗಿಕ ಬೆಳವಣಿಗೆಯ ಹಂತದಲ್ಲಿ ಕಂಡುಬರುವ ಚಟುವಟಿಕೆಗಳು ಮತ್ತು ವರ್ತನೆಗಳನ್ನು ಆಧರಿಸಿ ವ್ಯಾಖ್ಯಾನಿಸಲಾಗಿದೆ. ಅಷ್ಟೇ ಅಲ್ಲದೆ ನಾನು ನನ್ನದೇ ಆದ ಕೆಲವು ಅನುಭವಗಳನ್ನೂ ಇಲ್ಲಿ ಉಲ್ಲೇಖಿಸಿದ್ದೇನೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಮಕ್ಕಳೊಡನೆ ನಡೆಸಿದ ಚಟುವಟಿಕೆಗಳು ಮತ್ತು ತರಬೇತಿಯ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ಭಾರತದಲ್ಲಿನ ಪೋಷಕರು ಮತ್ತು ಮಕ್ಕಳ ನಡುವೆ, ಮಕ್ಕಳ ನಡುವೆ ಸಕ್ರಿಯವಾಗಿರುವ ಸಂಘಟನೆಗಳ ಅನುಭವಗಳ ಹಿನ್ನೆಲೆಯಲ್ಲಿ ಇಲ್ಲಿನ ಮಾಹಿತಿಯನ್ನು ಒದಗಿಸಲಾಗಿದೆ.
ಈ ಪುಸ್ತಕದಲ್ಲಿ ಚರ್ಚೆಗೊಳಪಡಿಸಲಾಗಿರುವ ವಿಚಾರಗಳನ್ನು ಭಾರತದ ಶೈಕ್ಷಣಿಕ ವಲಯದಲ್ಲಿ ಕಾಣಲಾಗುವುದಿಲ್ಲ. ಹಾಗಾಗಿ ಸಾಧ್ಯವಾದಷ್ಟು ಮಟ್ಟಿಗೆ ನಾನು ಭಾರತೀಯ ಮಾಧ್ಯಮಗಳಿಂದ ಉದಾಹರಣೆಗಳನ್ನು ಉಲ್ಲೇಖಿಸಿದ್ದೇನೆ. ಹಾಗೆಯೇ ನನ್ನ ಚಟುವಟಿಕೆಗಳು ಮತ್ತು ಭಾರತದ ಅಧ್ಯಯನದಿಂದ ಉಲ್ಲೇಖಿಸಿದ್ದೇನೆ.

ಬಹಳ ಮಟ್ಟಿಗೆ ನಾವು ಪಾಶ್ಚಿಮಾತ್ಯ ದೇಶಗಳ, ವಿಶೇಷವಾಗಿ ಅಮೆರಿಕದ, ಸಂಶೋಧನೆಗಳನ್ನು ಉಲ್ಲೇಖಿಸಿದ್ದೇನೆ. ಏಕೆಂದರೆ ಈ ಕ್ಷೇತ್ರದಲ್ಲಿ ಅಮೆರಿಕದಲ್ಲಿ ಸಾಕಷ್ಟು ಸಂಶೋಧನೆ, ಅಧ್ಯಯನ ನಡೆದಿದೆ. ಅಮೆರಿಕ ಮತ್ತು ಪಶ್ಚಿಮ ರಾಷ್ಟ್ರಗಳಿಗೆ ಅನ್ವಯಿಸುವ ಪರಿಕಲ್ಪನೆಗಳು ಮತ್ತು ಸಂಶೋಧನೆಯ ಅಂಶಗಳು ಭಾರತಕ್ಕೂ ಅನ್ವಯಿಸುತ್ತದೆ ಎಂದು ಭಾವಿಸುತ್ತೇನೆ. ಏಕೆಂದರೆ ವಿಭಿನ್ನ ಸಂಸ್ಕೃತಿಗಳನ್ನು ದಾಟಿಯೂ ಮಾನವ ಜಗತ್ತಿನ ಅನುಭವಗಳಲ್ಲಿ ಸಾಮ್ಯತೆಯನ್ನು ಕಾಣಬಹುದು.

ಅಷ್ಟೇ ಅಲ್ಲದೆ, ನಾವಿಂದು ಜಾಗತಿಕ ಗ್ರಾಮದಲ್ಲಿ ಬದುಕುತ್ತಿದ್ದೇವೆ. ಅಂತರ್ಜಾಲ, ಟೆಲಿವಿಷನ್, ಚಲನಚಿತ್ರ, ವಿಡಿಯೋ ಕ್ರೀಡೆಗಳು, ಸಂಗೀತ ಇವೆಲ್ಲವೂ ಭಾರತದಂತೆಯೇ ವಿಶ್ವದ ಇತರ ದೇಶಗಳಲ್ಲೂ ಸಹ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ, ಮಕ್ಕಳಿಗೆ ಮಾಹಿತಿ ಒದಗಿಸುತ್ತವೆ. ಮಕ್ಕಳ ಅನುಭವಗಳೂ ಒಂದೇ ರೀತಿಯದ್ದಾಗಿರುತ್ತವೆ. ಮೇಲಾಗಿ, ಕುಟುಂಬಗಳ ಚಲನೆಯ ವೇಗ ಹೆಚ್ಚುತ್ತಿರುವಂತೆಲ್ಲಾ ಕುಟುಂಬಗಳು ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಾಸಿಸುವಂತೆಯೇ ವಿಶ್ವದ ಹಲವು ರಾಷ್ಟ್ರಗಳಲ್ಲೂ ಬದುಕು ಸವೆಸುತ್ತಿವೆ. ಇದರ ಪರಿಣಾಮ ನಮ್ಮ ಮಕ್ಕಳು ವಿಭಿನ್ನ ಸಂಸ್ಕೃತಿ ಮತ್ತು ಧೋರಣೆಗಳಿಗೆ ಮುಖಾಮುಖಿಯಾಗುತ್ತಾರೆ.

ಆದ್ದರಿಂದ ಈ ಜಾಗತಿಕ ವಿಚಾರ ಹರಿಯುವಿಕೆಯನ್ನು ಶೋಧಿಸುವಾಗ ನಾವು ಯಾವುದೇ ಭೌಗೋಳಿಕ ಇತಿಮಿತಿಗಳಿಗೆ ಸೀಮಿತಗೊಳಿಸಲಾಗುವುದಿಲ್ಲ.

ಈ ಪುಸ್ತಕವನ್ನು ಓದಿ, ಶೋಧಿಸಿ. ಆರಂಭದಿಂದ ಕೊನೆಯವರೆಗೂ ಸರಾಗವಾಗಿ ಓದಬಹುದು. ನಿಮಗೆ ಆಪ್ತ ಎನಿಸುವ, ಅಗತ್ಯ ಎನಿಸುವ ಅಧ್ಯಾಯಗಳನ್ನು ಮಾತ್ರ ಓದಿ ಅಥವಾ ಈ ಪುಸ್ತಕದಲ್ಲಿನ ಮಾಹಿತಿಯನ್ನು ನಿಮಗೆ ಅಗತ್ಯವಿದ್ದೆಡೆ ಆಕರದಂತೆ ಬಳಸಿ. ನಿಮಗೆ ಚಿಕ್ಕ ವಯಸ್ಸಿನ ಮಕ್ಕಳಿದ್ದರೆ ನೀವು ಇಡೀ ಪುಸ್ತಕವನ್ನು ಓದಿ. ನೀವು ಸಾಕಷ್ಟು ಬಾರಿ ಕೇಳಿರುವಂತೆ, ಮುನ್ನೆಚ್ಚರಿಕೆ ಎನ್ನುವುದು ಪೂರ್ವಸಿದ್ಧತೆಗೆ ಸಮಾನ. ಮಕ್ಕಳ ಬೆಳವಣಿಗೆಯ ಹಂತದಲ್ಲಿ ಎದುರಿಸುವ ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಪೋಷಕರಿಗೆ ಯಾವ ರೀತಿಯ ನಿರೀಕ್ಷೆಗಳಿರುತ್ತವೆ ಎನ್ನುವುದನ್ನು ನಾವು ತಿಳಿದುಕೊಳ್ಳುವುದು ಅತ್ಯವಶ್ಯ ಎಂದು ನಾನು ಭಾವಿಸುತ್ತೇನೆ.

ಹಾಗಾಗಿ ತಿಳಿದೋ ತಿಳಿಯದೆಯೋ, ಉದ್ದೇಶಪೂರ್ವಕವಾಗಿಯೋ ಲೈಂಗಿಕ ಚಿತ್ರಗಳು, ಅಶ್ಲೀಲ ಚಿತ್ರಗಳು ಅಂತರ್ಜಾಲದಲ್ಲಿ ಹೇರಳವಾಗಿ ದೊರೆಯುವಂತಾಗಿದೆ. ವಯಸ್ಕ ಲೈಂಗಿಕ ಚಿತ್ರಗಳು (ಪ್ಲೇಬಾಯ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಭಾವಚಿತ್ರಗಳಂತೆ), ಕಾನೂನುಬಾಹಿರ ಚಿತ್ರಗಳು, ಲೈಂಗಿಕ ಕ್ರಿಯೆ, ಮೃಗೀಯ ಲೈಂಗಿಕ ಕ್ರಿಯೆಗಳು, ಹಿಂಸಾತ್ಮಕ ಚಿತ್ರಗಳು ಅಂತರ್ಜಾಲದಲ್ಲಿ ಲೆಕ್ಕವಿಲ್ಲದಷ್ಟು ಲಭ್ಯವಾಗುತ್ತವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಗಳು, ಮಕ್ಕಳ ಅಶ್ಲೀಲ ಚಿತ್ರಗಳು ಮೊದಲು ಅಕ್ರಮವಾಗಿ ಪ್ರಕಟವಾಗುತ್ತಿದ್ದವು. ಈಗ ಸುಲಭವಾಗಿ ಅಂತರ್ಜಾಲದಲ್ಲಿ ದೊರೆಯುತ್ತವೆ. ಇಂತಹ ನಿಷಿದ್ಧ ವಿಷಯಗಳು ಅಂತರ್ಜಾಲದ ಮೂಲಕ ಮುಖ್ಯವಾಹಿನಿ ಪ್ರವೇಶಿಸಿದ್ದು ಮಕ್ಕಳ ಆರೋಗ್ಯಕರ ಲೈಂಗಿಕ ಬೆಳವಣಿಗೆಗೆ ಮಾರಕವಾಗುತ್ತಿದೆ. ಅಂತರ್ಜಾಲದಲ್ಲಿನ ಅಶ್ಲೀಲ ಚಿತ್ರಗಳು ಹೇಗೆ ಮಕ್ಕಳಿಗೆ ಅಷ್ಟು ಸುಲಭವಾಗಿ ದೊರೆಯುತ್ತದೆ ಎಂದು ಅಚ್ಚರಿಯಾಗುತ್ತದೆ. ಇಂತಹ ವಿಷಯಗಳಲ್ಲಿ ಆಸಕ್ತಿ ಇಲ್ಲದ ಮಕ್ಕಳಿಗೂ ಇವು ಎದುರಾಗುತ್ತವೆ. ಕೆಲವು ಅಧ್ಯಯನಗಳ ಪ್ರಕಾರ ವಯಸ್ಕರು ಅನೇಕ ಸಂದರ್ಭಗಳಲ್ಲಿ ಸಂಬಂಧವಿಲ್ಲದ ವಿಷಯವನ್ನು ಅಂತರ್ಜಾಲದಲ್ಲಿ ಹುಡುಕುವಾಗ ಅಶ್ಲೀಲ ಚಿತ್ರಗಳನ್ನು ಗಮನಿಸುತ್ತಾರೆ. ಒಂದು ಸಮೀಕ್ಷೆಯ ಅನುಸಾರ, ಶೇ 42ರಷ್ಟು ಪ್ರೌಢ ವಯಸ್ಕರು ಆನ್‍ಲೈನ್‍ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ. ಇವರ ಪೈಕಿ ಶೇ 66ರಷ್ಟು ಹರೆಯದ ಮಕ್ಕಳು ತಾವು ಬಯಸದಿದ್ದರೂ ಇದನ್ನು ನೋಡಿರುವುದಾಗಿ ಹೇಳುತ್ತಾರೆ. ಚಿಕ್ಕ ಮಕ್ಕಳಿಗೆ ಅಶ್ಲೀಲ ಚಿತ್ರಗಳು ಸುಲಭವಾಗಿ ತಲುಪುತ್ತಿರುವುದನ್ನು ಅಶ್ಲೀಲ ಚಿತ್ರಗಳ ಉದ್ಯಮವೂ ನಿರಾಕರಿಸುವುದಿಲ್ಲ. ಅಶ್ಲೀಲ ಚಿತ್ರಗಳನ್ನೇ ಪ್ರಕಟಿಸುವ ಜಾಲತಾಣಗಳ ಪೈಕಿ ಶೇ 66ರಷ್ಟಲ್ಲಿ ವಯಸ್ಕರ ವಿಷಯಗಳಿವೆ ಎಂಬ ಎಚ್ಚರಿಕೆ ಸಂದೇಶ ಇರುವುದಿಲ್ಲ. ಶೇ 75ರಷ್ಟು ಅಶ್ಲೀಲ ಜಾಲತಾಣಗಳಲ್ಲಿ ಬಳಕೆದಾರರ ವಯಸ್ಸನ್ನು ನಮೂದಿಸುವ ಮುನ್ನವೇ ಅಶ್ಲೀಲ ಚಿತ್ರಗಳ ತುಣುಕುಗಳನ್ನು ಪ್ರದರ್ಶಿಸಲಾಗುತ್ತದೆ. ಕೇವಲ ಶೇ 3ರಷ್ಟು ಜಾಲತಾಣಗಳು ಮಾತ್ರ ಬಳಕೆದಾರರ ವಯಸ್ಸನ್ನು ನಮೂದಿಸಲು ಸೂಚಿಸುತ್ತವೆ. ಸ್ಮಾರ್ಟ್ ಫೋನ್‍ಗಳಲ್ಲಿ ಅಂತರ್ಜಾಲ ಲಭ್ಯತೆಯನ್ನು ನಿರ್ಬಂಧಿಸುವ ಯಾವುದೇ ತಂತ್ರಜ್ಞಾನವನ್ನು ಅಳವಡಿಸಲಾಗಿಲ್ಲ.

ಸಾಮಾನ್ಯವಾಗಿ ಬಳಸಲಾಗುವ ಹೆಸರುಗಳನ್ನೇ ಹೋಲುವಂತಹ ಜಾಲತಾಣದ ಹೆಸರು ನಮೂದಿಸುವುದು, ಕಾರ್ಟೂನ್ ಚಿತ್ರಗಳ ಮೂಲಕ, ಮಕ್ಕಳ ಚಿತ್ರಗಳನ್ನು ಬಿಂಬಿಸುವ ಮೂಲಕ, ಆಟಗಳ ಮೂಲಕ, ನಕಲಿ ಇಮೇಲ್‍ಗಳ ಮೂಲಕ ಮಕ್ಕಳನ್ನು ತಲುಪುತ್ತವೆ.

ಅಶ್ಲೀಲತೆಯನ್ನೇ ಬಿತ್ತರಿಸುವ ಜಾಲತಾಣಗಳು ಜನಸಾಮಾನ್ಯರನ್ನು ಸುಲಭವಾಗಿ ತಲುಪಲು ಸಾಮಾನ್ಯವಾಗಿ ಯಾವುದೇ ಕೆಡಕು ಕಾಣದಂತಹ ಮಾರ್ಗಗಳನ್ನೇ ಅನುಸರಿಸುತ್ತವೆ. ಮಕ್ಕಳಗ ಗ್ರಹಿಕೆಗೆ ನಿಲುಕದಂತಹ ಪದಗಳ ಶೋಧದ ನೆಪದಲ್ಲಿ, ತಪ್ಪಾಗಿ ಉಚ್ಚರಿಸಲ್ಪಟ್ಟ ಪದಗಳ ಮೂಲಕ, ನಕಲಿ ವೆಬ್ ವಿಳಾಸಗಳ ಮೂಲಕ ಈ ರೀತಿಯ ಜಾಲತಾಣಗಳು ಅಮಾಯಕ ಮಕ್ಕಳನ್ನು ತಲುಪುತ್ತವೆ. ಸಾಮಾನ್ಯವಾಗಿ ಬಳಸಲಾಗುವ ಹೆಸರುಗಳನ್ನೇ ಹೋಲುವಂತಹ ಜಾಲತಾಣದ ಹೆಸರು ನಮೂದಿಸುವುದು, ಕಾರ್ಟೂನ್ ಚಿತ್ರಗಳ ಮೂಲಕ, ಮಕ್ಕಳ ಚಿತ್ರಗಳನ್ನು ಬಿಂಬಿಸುವ ಮೂಲಕ, ಆಟಗಳ ಮೂಲಕ, ನಕಲಿ ಇಮೇಲ್‍ಗಳ ಮೂಲಕ ಮಕ್ಕಳನ್ನು ತಲುಪುತ್ತವೆ. ಇಂತಹ ವಂಚಕ ಜಾಲಗಳಿಗೆ ಬಲಿಯಾಗಿಯೇ ಹರ್ಯಾಣದ ಗುರ್‍ಗಾಂವ್‍ನ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಶಿಕ್ಷಿತ, ಶ್ರೀಮಂತ ಕುಟುಂಬಕ್ಕೆ ಸೇರಿದ 15 ವರ್ಷದ ಬಾಲಕ ಸಮರ್ ಅಶ್ಲೀಲ ಚಿತ್ರಗಳ ವೀಕ್ಷಣೆಗೆ ಬಲಿಯಾಗಿದ್ದ. ತನ್ನ ಮನದಲ್ಲಿದ್ದ ಭಾವನೆಗಳನ್ನು, ಆತಂಕಗಳನ್ನು ಮತ್ತೊಬ್ಬರೊಡನೆ ಹೇಳಿಕೊಳ್ಳಲಾಗದೆ ಪರದಾಡುತ್ತಿದ್ದ ಬಾಲಕ ತಾನು ಅತ್ಯಾಚಾರದ ದೃಶ್ಯಗಳನ್ನೊಳಗೊಂಡ ಅಶ್ಲೀಲ ಚಿತ್ರಗಳಿಂದ ಪ್ರಕ್ಷುಬ್ಧನಾಗಿದ್ದೆ ಎಂದು ಆಪ್ತಸಮಾಲೋಚಕರ ಬಳಿ ಹೇಳಿಕೊಂಡಿದ್ದ. ಇಂತಹ ಚಿತ್ರಗಳ ಬಗ್ಗೆ ಹೆಚ್ಚು ಆಕರ್ಷಿತನಾಗಿದ್ದ ಸಮರ್, ದೀರ್ಘ ಕಾಲ ಈ ಚಿತ್ರಗಳು ಮನಸಿನಲ್ಲಿ ಉಳಿದುಕೊಂಡಿದ್ದರಿಂದ ಖಿನ್ನತೆಗೊಳಗಾಗಿದ್ದ.

ನಂತರದ ಒಂದು ವರ್ಷದ ಕಾಲ ತಾನು ವೀಕ್ಷಿಸಿದ್ದ ದೃಶ್ಯಗಳ ಬಗ್ಗೆ ಚರ್ಚೆ ಮಾಡಿದ ನಂತರ ಸಮರ್ ತನ್ನ ಭ್ರಮಾಲೋಕದಿಂದ ಹೊರಬರಲು ಸಾಧ್ಯವಾಗಿತ್ತು. ಅವನ ಪೋಷಕರು ತಮ್ಮ ಮಗನೊಡನೆ ಮಾಧ್ಯಮ ಮತ್ತು ಲಿಂಗಾಧಾರಿತ ವಿಚಾರಗಳನ್ನು ಚರ್ಚೆಮಾಡುವಷ್ಟು ಪ್ರಬುದ್ಧರಾಗಿದ್ದುದರಿಂದ ಸಮರ್ ನಂತರದ ದಿನಗಳಲ್ಲಿ ತನ್ನ ನಿಕಟವರ್ತಿಗಳೊಡನೆಯೂ ಸಂಯಮದಿಂದ ವರ್ತಿಸುವುದು ಸಾಧ್ಯವಾಗಿತ್ತು. ಆದರೆ ಎಲ್ಲ ಮಕ್ಕಳೂ ಇಷ್ಟು ಅದೃಷ್ಟವಂತರಾಗಿರುವುದಿಲ್ಲ. ತನ್ನಂತೆಯೇ ಜಾಲತಾಣದಲ್ಲಿ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ತನ್ನ ಇತರ ಸ್ನೇಹಿತರು ಇನ್ನೂ ತಮ್ಮ ಗೀಳಿನಿಂದ ಹೊರಬಂದಿಲ್ಲ ಎಂದು ಸಮರ್ ಹೇಳುತ್ತಾನೆ. ಈ ಗೆಳೆಯರು ಇತರರೊಡನೆ, ವಿಶೇಷವಾಗಿ ಹುಡುಗಿಯರೊಡನೆ ಹಿಂಸಾತ್ಮಕವಾಗಿ ವರ್ತಿಸುವುದನ್ನೂ ಸಮರ್ ನೆನಪಿಸಿಕೊಳ್ಳುತ್ತಾನೆ. ಬಹಳಷ್ಟು ಹರೆಯದ ಮಕ್ಕಳು ಅಶ್ಲೀಲ ಚಿತ್ರಗಳ ವೀಕ್ಷಣೆ ಮಾಡುವುದರಿಂದ ಇದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಒಂದು ಪೀಳಿಗೆಗೆ ಮುನ್ನ ಈ ರೀತಿಯ ಅಶ್ಲೀಲ ಚಿತ್ರಗಳನ್ನು ನೋಡುವುದೇ ಅಪರಾಧ ಎನ್ನುವ ಮನೋಭಾವ ಇತ್ತು, ಎಲ್ಲೋ ಕೆಲವರು ಮಾತ್ರವೇ ವೀಕ್ಷಿಸುತ್ತಿದ್ದರು. ಆದರೆ ಇಂದಿನ ಪೀಳಿಗೆಗೆ ಇದು ಸಾಮಾನ್ಯ ಸಂಗತಿಯಾಗಿದೆ. ಅಂತರ್ಜಾಲ ನೋಡಿದಷ್ಟೇ ಸಹಜವಾಗಿ ಅಶ್ಲೀಲ ಚಿತ್ರಗಳನ್ನೂ ವೀಕ್ಷಿಸುವುದರಿಂದ ಇದು ಹೆಚ್ಚಿನ ನೇತ್ಯಾತ್ಮಕ ಪರಿಣಾಮ ಬೀರುತ್ತದೆ. ಏಕೆಂದರೆ ಇಂತಹ ಭಾವನಾತ್ಮಕ ಮಾಹಿತಿಯನ್ನು ಅರಗಿಸಿಕೊಳ್ಳುವಂತಹ ಪ್ರಜ್ಞೆ ಮಕ್ಕಳಲ್ಲಿ ಪಕ್ವವಾಗಿರುವುದಿಲ್ಲ.

ಲೈಂಗಿಕ ಕ್ರಿಯೆಯ ಬಗ್ಗೆ ಅವಾಸ್ತವಿಕ ಗ್ರಹಿಕೆಗಳು ಹೆಚ್ಚಾಗುತ್ತವೆ ಮತ್ತು ಅವಾಸ್ತವಿಕ ನಿರೀಕ್ಷೆಗಳು ಉದ್ಭವಿಸುತ್ತವೆ. ಇದರಿಂದ ಮಕ್ಕಳ ವರ್ತನೆಯೇ ಭಿನ್ನ ದಿಕ್ಕಿನಲ್ಲಿ ಸಾಗುವುದಲ್ಲದೆ ತಮ್ಮ ಜೀವನ ಸಂಗಾತಿಗಳೊಡನೆಯೂ ಲೈಂಗಿಕ ನಿರಾಸಕ್ತಿಯಿಂದ ವರ್ತಿಸುವಂತಾಗುತ್ತದೆ.

ಅಶ್ಲೀಲ ಚಿತ್ರಗಳನ್ನು ದೀರ್ಘ ಕಾಲ ವೀಕ್ಷಿಸುವುದರಿಂದ ಪ್ರೌಢ ವಯಸ್ಕರಲ್ಲಿ ಲೈಂಗಿಕ ಚಟುವಟಿಕೆಗಳ ಬಗ್ಗೆಯೇ ತಪ್ಪು ತಿಳುವಳಿಕೆಗಳನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳಲ್ಲಿ ನಿರೂಪಿಸಲಾಗಿದೆ. ಲೈಂಗಿಕ ಕ್ರಿಯೆಯ ಬಗ್ಗೆ ಅವಾಸ್ತವಿಕ ಗ್ರಹಿಕೆಗಳು ಹೆಚ್ಚಾಗುತ್ತವೆ ಮತ್ತು ಅವಾಸ್ತವಿಕ ನಿರೀಕ್ಷೆಗಳು ಉದ್ಭವಿಸುತ್ತವೆ. ಇದರಿಂದ ಮಕ್ಕಳ ವರ್ತನೆಯೇ ಭಿನ್ನ ದಿಕ್ಕಿನಲ್ಲಿ ಸಾಗುವುದಲ್ಲದೆ ತಮ್ಮ ಜೀವನ ಸಂಗಾತಿಗಳೊಡನೆಯೂ ಲೈಂಗಿಕ ನಿರಾಸಕ್ತಿಯಿಂದ ವರ್ತಿಸುವಂತಾಗುತ್ತದೆ. ಅಷ್ಟೇ ಅಲ್ಲದೆ ಇದರಿಂದ ಲೈಂಗಿಕ ಕ್ರಿಯೆಯ ಬಗ್ಗೆ ಹೆಚ್ಚಿನ ಹಪಹಪಿ ಉಂಟಾಗಿ, ಪುರುಷರು ಲೈಂಗಿಕ ದೌರ್ಜನ್ಯ ಎಸಗುವ ಸಂಭವಗಳು ಹೆಚ್ಚಾಗುತ್ತವೆ. ಇನ್ನೂ ಅಚ್ಚರಿಯ ಅಂಶವೆಂದರೆ ಅಶ್ಲೀಲ ಚಿತ್ರಗಳ ಗೀಳು ಅಂಟಿಕೊಂಡಿರುವ ಪ್ರೌಢ ವಯಸ್ಕರು ಲೈಂಗಿಕ ದೌರ್ಜನ್ಯವನ್ನೂ ಸಹಜ ಕ್ರಿಯೆ ಎನ್ನುವಂತೆ ಸ್ವೀಕರಿಸುತ್ತಾರೆ. ಸಾಮಾನ್ಯವಾಗಿ ಈ ರೀತಿಯ ಚಟಕ್ಕೆ ಬಲಿಯಾಗಿರುವ ಮಹಿಳೆಯರು ದೈಹಿಕ ಕೀಳರಿಮೆ ಹೊಂದಿದವರಾಗಿದ್ದು ಲೈಂಗಿಕ ದೌರ್ಜನ್ಯಕ್ಕೊಳಗಾಗುವುದೇ ಅಲ್ಲದೆ ಲೈಂಗಿಕ ರೋಗಗಳಿಗೂ ತುತ್ತಾಗುತ್ತಾರೆ. ಮತ್ತೊಂದು ಚಿಂತೆಗೀಡುಮಾಡುವ ವಿಚಾರ ಎಂದರೆ ಅನೇಕ ಪೋಷಕರಿಗೆ ತಮ್ಮ ಮಕ್ಕಳು ಈ ರೀತಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡುವುದು ತಿಳಿದೇ ಇರುವುದಿಲ್ಲ. ಈ ರೀತಿಯ ಮಕ್ಕಳಲ್ಲಿ ಶೇ 25ರಷ್ಟು ತಮ್ಮ ಮನೆಯಲ್ಲಿಯೇ ಇರುವ ಹಿರಿಯ ವ್ಯಕ್ತಿಗಳಿಂದ ಪ್ರಭಾವಿತರಾಗಿರುತ್ತಾರೆ ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ. ಆದರೆ ಪೋಷಕರು ಮಾತ್ರ ತಮ್ಮ ಮಕ್ಕಳು ಅಂತರ್ಜಾಲದಲ್ಲಿ ಇಂತಹ ಅಶ್ಲೀಲ ಚಿತ್ರಗಳನ್ನು ನೋಡುವುದೇ ಇಲ್ಲ ಎಂಬ ಭರವಸೆಯನ್ನು ಹೊಂದಿರುತ್ತಾರೆ.

ಆನ್ ಲೈನ್ ಲೈಂಗಿಕ ದಾಳಿಕೋರರು

14 ವರ್ಷದ ನೇಹಾ ಎಂಬ ಬಾಲಕಿಯ ಗೆಳತಿ ಅಹಾನಾ ಕೆಲವು ವರ್ಷಗಳ ಹಿಂದೆ ಅಮೆರಿಕಕ್ಕೆ ಹೊರಟುಹೋದಳು. ಬೇಸಿಗೆ ರಜೆಯಲ್ಲಿ ಅಹಾನಾ ನೇಹಾಳನ್ನು ಭೇಟಿಯಾದಾಗ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತರ ಬಗ್ಗೆ ಮಾಹಿತಿ ನೀಡಿದ್ದಳು. ಒಂದು ದಿನ ಬೆಂಗಳೂರಿನಲ್ಲಿನ ತನ್ನ ಗೆಳೆಯರನ್ನು ಭೇಟಿ ಮಾಡಲು ನೇಹಾಳನ್ನೂ ಷಾಪಿಂಗ್ ಮಾಲ್ ಒಂದಕ್ಕೆ ಕರೆದೊಯ್ದಳು. ಆಗ ಅಹಾನಾ, ತಾನು ಆ ಗೆಳೆಯರನ್ನು ಇದುವರೆಗೂ ಭೇಟಿ ಮಾಡಿಲ್ಲವೆಂದೂ ಅವರು ಆನ್‍ಲೈನ್ ಗೆಳೆಯರು ಎಂದೂ ಹೇಳಿದ್ದಳು. ಈ ವಿಷಯವನ್ನು ನೇಹಾ ತನ್ನ ತಾಯಿಯ ಬಳಿ ಹೇಳಿದ್ದಳು. ಆಗ ನೇಹಾಳ ತಾಯಿಯೂ ಅವಳೊಡನೆ ಹೋಗಲು ಸಿದ್ಧರಾದರು. ಅಲ್ಲಿ ಭೇಟಿಯಾದ ಇಬ್ಬರೂ ವಯಸ್ಸಾದವರು ಎಂದು ಭೇಟಿ ಮಾಡಿದಾಗ ತಿಳಿಯಿತು. ತಮ್ಮ ಅದೃಷ್ಟ ಚೆನ್ನಾಗಿದೆ ಎಂದು ನಿಟ್ಟುಸಿರುಬಿಟ್ಟರು.

ಕೆಲವರು ಅಪ್ರಾಪ್ತರೊಡನೆ ಲೈಂಗಿಕ ವಿಚಾರಗಳ ಚರ್ಚೆಯನ್ನೂ ನಡೆಸಿದ್ದುಂಟು. ನಂತರ ಇಂಥವರ ವಿಳಾಸ ಪಡೆದು ಅವರನ್ನು ಸಂಪರ್ಕಿಸಲು ಯತ್ನಿಸಿದ್ದರು. ಇದು ರಿಯಾಲಿಟಿ ಷೋ ಆಗಿದ್ದುದರಿಂದ ಎಲ್ಲವೂ ಕೃತಕವಾಗಿ ನಿಯೋಜಿಸಲಾದ ಪಾತ್ರಗಳಾಗಿದ್ದವು.

ಅನೇಕ ವಯಸ್ಕರು ಆನ್‍ಲೈನ್‍ನಲ್ಲಿ ಅಪ್ರಾಪ್ತರಂತೆ ಗುರುತಿಸಿಕೊಳ್ಳುವ ಮೂಲಕ ಎಳೆ ವಯಸ್ಸಿನ ಮೇಲೆ ಲೈಂಗಿಕ ದಾಳಿ ನಡೆಸಲು ಸಜ್ಜಾಗಿರುತ್ತಾರೆ. ಅಮೆರಿಕದ ಡೇಟ್‍ಲೈನ್ ಎನ್‍ಬಿಸಿ ಸುದ್ದಿವಾಹಿನಿಯೊಂದರಲ್ಲಿ ನಡೆದ ಕ್ಯಾಚ್ ಎ ಪ್ರೆಡೇಟರ್ ಎಂಬ ರಿಯಾಲಿಟಿ ಷೋನಲ್ಲಿ ಈ ವಿಷಯವನ್ನೇ ಪ್ರಧಾನವಾಗಿ ಬಿತ್ತರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅನೇಕ ಲೈಂಗಿಕ ದಾಳಿಕೋರರನ್ನು ಕಂಡುಹಿಡಿಯಲಾಗಿತ್ತು. ಈ ಎಲ್ಲ ವಯಸ್ಕರೂ ಅಪ್ರಾಪ್ತರ ಸ್ನೇಹವನ್ನು ಅಂತರ್ಜಾಲದ ಮೂಲಕ ಬೆಳೆಸಿ ಚಾಟ್ ರೂಂಗಳ ಮೂಲಕ ಸಂಪರ್ಕ ಬೆಳೆಸಿದ್ದರು. ಕೆಲವರು ಅಪ್ರಾಪ್ತರೊಡನೆ ಲೈಂಗಿಕ ವಿಚಾರಗಳ ಚರ್ಚೆಯನ್ನೂ ನಡೆಸಿದ್ದುಂಟು. ನಂತರ ಇಂಥವರ ವಿಳಾಸ ಪಡೆದು ಅವರನ್ನು ಸಂಪರ್ಕಿಸಲು ಯತ್ನಿಸಿದ್ದರು. ಇದು ರಿಯಾಲಿಟಿ ಷೋ ಆಗಿದ್ದುದರಿಂದ ಎಲ್ಲವೂ ಕೃತಕವಾಗಿ ನಿಯೋಜಿಸಲಾದ ಪಾತ್ರಗಳಾಗಿದ್ದವು. ಇದರಲ್ಲಿ ಭಾಗವಹಿಸಿದವರೆಲ್ಲರೂ ಆನ್‍ಲೈನ್ ಲೈಂಗಿಕ ದಾಳಿಕೋರರನ್ನು ಕಂಡುಹಿಡಿಯಲೆಂದೇ ಸ್ಥಾಪಿಸಲಾದ ಎನ್‍ಜಿಒ ಒಂದರ ಕಾರ್ಯಕರ್ತರಾಗಿದ್ದರು. ಹಾಗಾಗಿ ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ತೊಂದರೆ ಉಂಟಾಗಲಿಲ್ಲ. ಅದರೆ ಕಂಡುಹಿಡಿಯಲಾದ ದಾಳಿಕೋರರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.

ನಗ್ನ ಚಿತ್ರ ವೀಕ್ಷಣೆ ಮತ್ತು ಪ್ರತೀಕಾರ

ಅಮೆರಿಕದ ಕನೆಕ್ಟ್ ಸೇಫ್ಲಿ ಎಂಬ ಸಂಸ್ಥೆಯ ಪ್ರಕಾರ ಸೆಲ್ ಫೋನ್‍ಗಳ ಮೂಲಕ, ಇತರ ಗಣಕ ಯಂತ್ರ ಸಾಧನಗಳ ಮೂಲಕ ಅಥವಾ ವೆಬ್ ತಾಣಗಳ ಮೂಲಕ ನಗ್ನ ಚಿತ್ರಗಳನ್ನು ಅರೆ ನಗ್ನ ಚಿತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪ್ರವೃತ್ತಿಗೆ ಸೆಕ್ಸ್‍ಟಿಂಗ್ ಎಂದು ಕರೆಯಲಾಗುತ್ತದೆ. ಒಂದು ಸಂಶೋಧನೆಯ ಪ್ರಕಾರ ಬಹುಪಾಲು ಹರೆಯದ ಮಕ್ಕಳು ಈ ಪ್ರಕ್ರಿಯೆಯಲ್ಲಿ ತೊಡಗುವುದಿಲ್ಲ. ತೊಡಗಿದ್ದರೂ ಸಹ ಯಾವುದೇ ನೇತ್ಯಾತ್ಮಕ ಪರಿಣಾಮಗಳನ್ನು ಎದುರಿಸಿಲ್ಲ. ಆದರೆ ಸಾಮಾನ್ಯವಾಗಿ ಸೆಕ್ಸ್‍ಟಿಂಗ್ ಪ್ರಕ್ರಿಯೆಯಲ್ಲಿ ತೊಡಗುವ ಹರೆಯದ ಮಕ್ಕಳು ಮಾನಸಿಕ ಮತ್ತು ಕಾನೂನಾತ್ಮಕ ಅಪಾಯಗಳನ್ನು ಎದುರಿಸುತ್ತಾರೆ. ಈ ಚಿತ್ರಗಳನ್ನು ಉದ್ದೇಶಿತ ವ್ಯಕ್ತಿಗಳಿಗಿಂತಲೂ ಹೆಚ್ಚಿನವರಿಗೆ ಹಂಚಿದಾಗ ಅಥವಾ ಒತ್ತಾಯ ಮಾಡುವ ಸಂದರ್ಭದಲ್ಲಿ ಹಲವು ಸಮಸ್ಯೆಗಳು ಉದ್ಭವಿಸುತ್ತವೆ. ಉದ್ದೇಶಪೂರ್ವಕವಾಗಿಯೋ ಅಥವಾ ತಿಳಿಯದೆಯೋ ತೆಗೆದ ಇಂತಹ ಚಿತ್ರಗಳನ್ನು ಯಾವುದೇ ಉದ್ದೇಶವಿಲ್ಲದೆ ಅಥವಾ ಒತ್ತಡದ ಮೂಲಕ ಹಂಚಿದಾಗ ಅದನ್ನು ಪ್ರತೀಕಾರದ ಅಶ್ಲೀಲತೆ ಎಂದು ಕರೆಯಲಾಗುತ್ತದೆ. ಯಾವುದೇ ಪ್ರೇಮ ಸಂಬಂಧಗಳು, ನಿಕಟ ಸಂಬಂಧಗಳು ಮುರಿದುಬಿದ್ದಾಗ ಇಂತಹ ಪ್ರಸಂಗಗಳು ನಡೆಯುತ್ತವೆ.

ಅಪ್ರಾಪ್ತರಿಗಿಂತಲೂ ಪ್ರೌಢವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸೆಕ್ಸ್‍ಟಿಂಗ್ ಮಾಡಿರುವುದು ಕಂಡುಬಂದಿದೆ. ಈ ಸಮೀಕ್ಷೆಯ ಅನುಸಾರ ಈ ಚಟಕ್ಕೆ ಬಲಿಯಾದವರಲ್ಲಿ ಯುವಕರು ಮತ್ತು ಯುವತಿಯರು ಸಮಾನ ಸಂಖ್ಯೆಯಲ್ಲಿದ್ದಾರೆ.

ಈ ವಿಚಾರದಲ್ಲಿ ಹಲವಾರು ಆಯಾಮಗಳಿಂದ ಅಧ್ಯಯನ ಮಾಡಿರುವ ವಿದ್ವಾಂಸರ ಪ್ರಕಾರ ಸೆಕ್ಸ್‍ಟಿಂಗ್ ಮಾಡುವ ಅಪ್ರಾಪ್ತರ ಸಂಖ್ಯೆಯನ್ನು ನಿಖರವಾಗಿ ಗುರುತಿಸಲಾಗಿಲ್ಲ. ಆದರೆ ಬಹಳ ಅಲ್ಪ ಪ್ರಮಾಣದ ಹರೆಯದ ಮಕ್ಕಳು ಈ ಚಟಕ್ಕೆ ಬಲಿಯಾಗಿರುವುದು ಸ್ಪಷ್ಟ. ಅಮೆರಿಕದ ಒಂದು ಅಧ್ಯಯನದ ಪ್ರಕಾರ 12 ರಿಂದ 17 ವರ್ಷದ ಅಪ್ರಾಪ್ತರ ಪೈಕಿ ಶೇ 4ರಷ್ಟು ಮಾತ್ರ ತಮ್ಮ ನಗ್ನ ಅಥವಾ ಅರೆನಗ್ನ ಫೋಟೋಗಳನ್ನು ಹಂಚಿಕೊಂಡಿರುತ್ತಾರೆ. ಅಪ್ರಾಪ್ತರಿಗಿಂತಲೂ ಪ್ರೌಢವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸೆಕ್ಸ್‍ಟಿಂಗ್ ಮಾಡಿರುವುದು ಕಂಡುಬಂದಿದೆ. ಈ ಸಮೀಕ್ಷೆಯ ಅನುಸಾರ ಈ ಚಟಕ್ಕೆ ಬಲಿಯಾದವರಲ್ಲಿ ಯುವಕರು ಮತ್ತು ಯುವತಿಯರು ಸಮಾನ ಸಂಖ್ಯೆಯಲ್ಲಿದ್ದಾರೆ. ಈ ಸಂಖ್ಯೆಗಳೇನೇ ಇರಲಿ, ಹರೆಯದ ಮಕ್ಕಳು ವೆಬ್ ತಾಣಗಳ ಮೂಲಕ ಈ ರೀತಿಯ ಫೋಟೋಗಳನ್ನು ಹಂಚುವ ಸಾಧ್ಯತೆಗಳು ಹೆಚ್ಚಾಗುತ್ತಿದ್ದು ಅಪರಿಚಿತರಿಗೆ ಬಲಿಯಾಗುವ ಸಾಧ್ಯತೆಗಳಿವೆ. ಕೆಲವು ಪ್ರೌಢವಯಸ್ಕರ ಒತ್ತಡದಿಂದಲೂ ಹರೆಯದ ಮಕ್ಕಳು ಇಂತಹ ಫೋಟೋಗಳನ್ನು ಹಂಚಿಕೊಳ್ಳುವ ಸಾಧ್ಯತೆಗಳಿವೆ. ಪರಸ್ಪರ ಸಮ್ಮತಿಯಿಂದ ಸ್ನೇಹ ಹೊಂದಿರುವ ಹರೆಯದ ಮಕ್ಕಳು ಇತರ ಅಪ್ರಾಪ್ತರೊಡನೆ ಈ ರೀತಿಯ ಫೋಟೋಗಳನ್ನು ಹಂಚಿಕೊಳ್ಳುವುದರಿಂದ ಯಾವುದೇ ನೇತ್ಯಾತ್ಮಕ ಪರಿಣಾಮಗಳು ಉಂಟಾಗದಿರಬಹುದು ಆದರೆ ಇದರಿಂದಲೂ ಸಮಸ್ಯೆಗಳು ಉದ್ಭವಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಚಲನಚಿತ್ರ ನಟಿಯರು ಮತ್ತು ಇತರ ಪ್ರಸಿದ್ಧ ವ್ಯಕ್ತಿಗಳ ನಗ್ನ ಚಿತ್ರಗಳು, ಅರೆನಗ್ನ ಚಿತ್ರಗಳು ಸೋರಿಕೆಯಾಗಿ ಅಂತರ್ಜಾಲದಲ್ಲಿ, ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ವರದಿಗಳನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಇದೇ ಸನ್ನಿವೇಶವನ್ನು ಅಮಾಯಕ ಅಪ್ರಾಪ್ತರೂ ಸಹ ಎದುರಿಸಬಹುದು. 2004ರಲ್ಲಿ ನವದೆಹಲಿಯ ಪ್ರತಿಷ್ಠಿತ ಶಾಲೆಯೊಂದರ ಕ್ಯಾಂಪಸ್‍ನಲ್ಲೇ ಇಬ್ಬರು ವಿದ್ಯಾರ್ಥಿಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಈ ಕೃತ್ಯವನ್ನು ಆ ಬಾಲಕ ತನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದ. ನಂತರ ಈ ವಿಡಿಯೋ ವೈರಲ್ ಆಗಿ ಇಬ್ಬರನ್ನೂ ಶಾಲೆಯಿಂದ ವಜಾ ಮಾಡಲಾಗಿತ್ತು. ಇಂತಹ ವಿಡಿಯೋ ಚಿತ್ರೀಕರಿಸಿದ್ದಕ್ಕಾಗಿ ಆ ಬಾಲಕನ ವಿರುದ್ಧ ಬಂಧನದ ವಾರೆಂಟ್ ಜಾರಿಮಾಡಲಾಗಿತ್ತು. ಈ ವಿಡಿಯೋವನ್ನು ಎಂಎಂಎಸ್ ಮೂಲಕ ಹಂಚಿದ್ದು ನಂತರ ಬಿಜೀ.ಕಾಂಗೆ ಮಾರಾಟ ಮಾಡಿದ ಆರೋಪದ ಮೇಲೆ ಐಐಟಿ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿತ್ತು. ಬಿಜಿ.ಕಾಂನ ಸಿಇಒ ಅವರನ್ನು ತಮ್ಮ ಜಾಲತಾಣದಲ್ಲಿ ಈ ವಿಡಿಯೋ ಚಿತ್ರೀಕರಣವನ್ನು ಬಿತ್ತರಿಸಿದ್ದಕ್ಕಾಗಿ ಬಂಧಿಸಲಾಗಿತ್ತು. ಈ ವಿಡಿಯೋವನ್ನು ಸೀಡಿಗಳ ಮೂಲಕ ಮಾರಾಟ ಮಾಡಲಾಗಿತ್ತು.

ಮತ್ತೊಂದೆಡೆ ಶಾಲೆಯಿಂದ ವಜಾ ಆಗುವುದು, ಕಾನೂನು ಪ್ರಕ್ರಿಯೆಗಳು ಮುಂತಾದ ಕ್ರಮಗಳಿಂದ ಮಕ್ಕಳ ಭವಿಷ್ಯವೇ ಮಸುಕಾಗುತ್ತದೆ.

ಲೈಂಗಿಕ ಕ್ರಿಯೆಯನ್ನು ಚಿತ್ರೀಕರಿಸಿದ ವಿಡಿಯೋ ತಿಳಿದೋ ತಿಳಿಯದೆಯೋ ಸಾರ್ವಜನಿಕವಾಗಿ ಬಹಿರಂಗವಾದಾಗ ಈ ವಿಡಿಯೋದಲ್ಲಿ ಭಾಗಿಯಾಗಿರುವ ಮಕ್ಕಳ ಮೇಲೆ, ಪ್ರೌಢವಯಸ್ಕರ ಮೇಲೆ ಮತ್ತು ಅವರ ಪೋಷಕರ ಮೇಲೆ ಗಂಭೀರವಾದ ಸಾಮಾಜಿಕ ಮತ್ತು ಮಾನಸಿಕ ದುಷ್ಪರಿಣಾಮಗಳುಂಟಾಗುತ್ತವೆ. ಇಂಥವರು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುತ್ತಾರೆ. ಮುಜುಗರ ಅನುಭವಿಸುತ್ತಾರೆ. ನಾಚಿಕೆಯಿಂದ ಕುಗ್ಗಿಹೋಗುತ್ತಾರೆ. ಮತ್ತೊಂದೆಡೆ ಶಾಲೆಯಿಂದ ವಜಾ ಆಗುವುದು, ಕಾನೂನು ಪ್ರಕ್ರಿಯೆಗಳು ಮುಂತಾದ ಕ್ರಮಗಳಿಂದ ಮಕ್ಕಳ ಭವಿಷ್ಯವೇ ಮಸುಕಾಗುತ್ತದೆ. ಹರೆಯದ ಮಕ್ಕಳು ಮತ್ತು ಸೆಕ್ಸ್‍ಟಿಂಗ್ ಕುರಿತು ಪ್ಯೂ ಸಂಶೋಧನಾ ಕೇಂದ್ರ ನಡೆಸಿದ ಸಮೀಕ್ಷೆಯೊಂದರಲ್ಲಿ ಹರೆಯದ ಮಕ್ಕಳು ಈ ರೀತಿಯ ಸೆಕ್ಸ್‍ಟಿಂಗ್ ಮಾಡಲು ಹಲವಾರು ಕಾರಣಗಳನ್ನು ಗುರುತಿಸಲಾಗಿದೆ. ಮಿತಿಯೇ ಇಲ್ಲದ ಮೆಸೇಜ್ ಪ್ಲಾನ್‍ಗಳನ್ನು ತಮ್ಮ ಮೊಬೈಲ್‍ನಲ್ಲಿ ಹೊಂದಿರುವ ಶೇ 75ರಷ್ಟು ಹರೆಯದ ಮಕ್ಕಳಿಗೆ ಈ ರೀತಿ ಮಾಡುವಂತೆ ಸಂದೇಶ ಬಂದಿರುತ್ತದೆ. ಶೇ 18ರಷ್ಟು ಮಕ್ಕಳಿಗೆ ನಗ್ನ, ಅರೆನಗ್ನ ಫೋಟೋ ಅಥವಾ ವಿಡಿಯೋ ಬಂದಿರುತ್ತದೆ. ಕೆಲವು ಹರೆಯದ ಮಕ್ಕಳು ಪಾಸ್‍ವರ್ಡ್ ಬಳಸುವ ಮೂಲಕ ಇಂತಹ ಸಂದೇಶಗಳನ್ನು ತಮ್ಮ ತಂದೆ ತಾಯಿಯರು ನೋಡದಂತೆ ಎಚ್ಚರ ವಹಿಸುತ್ತಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಕೆಲವು ಹರೆಯದ ಮಕ್ಕಳು ಸೆಕ್ಸ್‍ಟಿಂಗ್ ಎನ್ನುವುದು ಸಾಮಾನ್ಯವಾದ ವರ್ತನೆ ಎಂದು ಹೇಳಿದ್ದಾರೆ. ಹುಡುಗರ ಒತ್ತಾಯಕ್ಕೆ ಮಣಿದು ಹೆಚ್ಚಿನ ಸಂಖ್ಯೆಯಲ್ಲಿ ಹುಡುಗಿಯರು ಸೆಕ್ಸ್‍ಟಿಂಗ್ ಮಾಡುತ್ತಾರೆ ಎಂದು ಸ್ವಲ್ಪ ಹೆಚ್ಚಿನ ವಯಸ್ಸಿನವರು ಹೇಳುತ್ತಾರೆ. ಕೆಲವು ಪ್ರಸಂಗಗಳಲ್ಲಿ ತನ್ನ ಪ್ರಿಯಕರನಿಗೆ ನಗ್ನ ಚಿತ್ರ ಕಳುಹಿಸದಿದ್ದರೆ ಅವನು ತನ್ನ ಸ್ನೇಹವನ್ನೇ ತೊರೆಯಬಹುದು ಎಂಬ ಭೀತಿಗೊಳಗಾಗಿ ಕೆಲವು ಬಾಲಕಿಯರು ಸೆಕ್ಸ್‍ಟಿಂಗ್‍ನಲ್ಲಿ ತೊಡಗುತ್ತಾರೆ ಎಂದು ಹೇಳಲಾಗಿದೆ. ಇನ್ನು ಕೆಲವು ಹರೆಯದ ಮಕ್ಕಳು ನಿಜವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಕ್ಕೆ ಬದಲಾಗಿ ಈ ರೀತಿ ಮಾಡುವುದಾಗಿ ಹೇಳಿದ್ದಾರೆ. ಈ ರೀತಿ ಸೆಕ್ಸ್‍ಟಿಂಗ್ ಮಾಡುವ ಹರೆಯದ ಮಕ್ಕಳು ಸಾಮಾನ್ಯವಾಗಿ ಹೆಚ್ಚಿನ ಸಮಯವನ್ನು ತಮ್ಮ ಸ್ಮಾರ್ಟ್‍ಫೋನ್‍ನೊಂದಿಗೇ ಕಳೆಯುತ್ತಾರೆ ಮತ್ತು ಅದನ್ನೇ ಮನರಂಜನೆಯ ಮಾಧ್ಯಮವನ್ನಾಗಿ ಪರಿಗಣಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಮತ್ತೊಂದೆಡೆ ಪೋಷಕರೇ ತಮ್ಮ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ ಸಂದರ್ಭದಲ್ಲಿ, ಸೀಮಿತ ಮೆಸೇಜ್ ಸೌಲಭ್ಯ ಇರುವೆಡೆಯಲ್ಲಿ ಮಕ್ಕಳು ಸೆಕ್ಸ್‍ಟಿ ಕಳಿಸುವುದು ಕಡಿಮೆಯಾಗಿದೆ. ಸೀಮಿತ ಮೆಸೇಜ್ ಪ್ಲಾನ್ ಹೊಂದಿರುವ ಶೇ 8ರಷ್ಟು ಮಕ್ಕಳು, ಹಣ ನೀಡಿ ಮೆಸೇಜ್ ಮಾಡುವ ಸೌಲಭ್ಯ ಹೊಂದಿರುವವರಲ್ಲಿ ಶೇ 4ರಷ್ಟು ಮಕ್ಕಳು ಸೆಕ್ಸ್ಟ್‍ಗಳನ್ನು ಪಡೆದಿರುತ್ತಾರೆ. ಪೋಷಕರು ತಮ್ಮ ಸ್ಮಾರ್ಟ್‍ಫೋನನ್ನು ಪರಿಶೀಲಿಸುತ್ತಾರೆ ಎಂದು ತಿಳಿದಿರುವ ಮಕ್ಕಳು ನಿರ್ಬಂಧಕ್ಕೊಳಪಟ್ಟಿರುತ್ತಾರೆ. ಕೆಲವು ಮಕ್ಕಳು ಶಾಲೆಗಳಲ್ಲಿನ ನಿಯಮಗಳಿಗೆ ಹೆದರಿ ಅಥವಾ ಕಾನೂನು ಕ್ರಮಗಳಿಗೆ ಹೆದರಿ ಸೆಕ್ಟ್ಸ್ ಮಾಡಲು ಹಿಂಜರಿಯುತ್ತಾರೆ. ಕೆಲವು ಮಕ್ಕಳು ಸೆಕ್ಸ್ಟ್ ಮಾಡುವುದು ಸಾರ್ವಜನಿಕವಾಗಿ ಬಹಿರಂಗವಾಗುವುದನ್ನು ಇಚ್ಚಿಸದೆ ಇದರಿಂದ ದೂರ ಉಳಿಯುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

2014ರಲ್ಲಿ ಮೆಕಾಫಿ (ಅಂತರ್ಜಾಲ ಭದ್ರತೆಯ ಸಾಫ್ಟ್‍ವೇರ್ ಕಂಪನಿ) ನಡೆಸಿದ ಸಮೀಕ್ಷೆಯ ಅನುಸಾರ ಸಮೀಕ್ಷೆಗೊಳಗಾದ ಅಮೆರಿಕದ ಮಕ್ಕಳ ಪೈಕಿ ಶೇ 87ರಷ್ಟು ಮಕ್ಕಳು ಸೈಬರ್ ಬೆದರಿಕೆಗೆ ಬಲಿಯಾಗಿದ್ದಾರೆ. ಬೆದರಿಕೆಗೊಳಗಾದವರ ಪೈಕಿ ಶೇ 72ರಷ್ಟು ಮಕ್ಕಳು ತಮ್ಮ ಅಂದಚೆಂದವೇ ಕಾರಣ ಎಂದು ಹೇಳಿದ್ದಾರೆ.

ಸೈಬರ್ ಬೆದರಿಕೆಗಳು

ಮೈಕ್ರೋಸಾಫ್ಟ್ ಕಂಪನಿ 2012ರಲ್ಲಿ ನಡೆಸಿದ ಸಂಶೋಧನೆಯ ಅನುಸಾರ ಭಾರತದಲ್ಲಿ ಸಮೀಕ್ಷೆಗೊಳಗಾದ ಅಂತರ್ಜಾಲ ಬಳಸುವ 8 ರಿಂದ 17 ವರ್ಷಗಳ ನಡುವಿನ ಶೇ 53ರಷ್ಟು ಮಕ್ಕಳು ಸೈಬರ್ ಬೆದರಿಕೆಗಳಿಗೆ ಸಿಲುಕಿದವರಾಗಿದ್ದಾರೆ. ಅಂದರೆ ಇವರು ಆನ್‍ಲೈನ್ ಕಿರುಕುಳಕ್ಕೆ ಒಳಗಾಗಿದ್ದು, ಭೀತಿಗೊಳಗಾಗಿದ್ದಾರೆ. 2014ರಲ್ಲಿ ಮೆಕಾಫಿ (ಅಂತರ್ಜಾಲ ಭದ್ರತೆಯ ಸಾಫ್ಟ್‍ವೇರ್ ಕಂಪನಿ) ನಡೆಸಿದ ಸಮೀಕ್ಷೆಯ ಅನುಸಾರ ಸಮೀಕ್ಷೆಗೊಳಗಾದ ಅಮೆರಿಕದ ಮಕ್ಕಳ ಪೈಕಿ ಶೇ 87ರಷ್ಟು ಮಕ್ಕಳು ಸೈಬರ್ ಬೆದರಿಕೆಗೆ ಬಲಿಯಾಗಿದ್ದಾರೆ. ಬೆದರಿಕೆಗೊಳಗಾದವರ ಪೈಕಿ ಶೇ 72ರಷ್ಟು ಮಕ್ಕಳು ತಮ್ಮ ಅಂದಚೆಂದವೇ ಕಾರಣ ಎಂದು ಹೇಳಿದ್ದಾರೆ. ಶೇ 26ರಷ್ಟು ಮಕ್ಕಳು ಜನಾಂಗ ಮತ್ತು ಧರ್ಮ ಕಾರಣ ಎಂದು ಹೇಳಿದ್ದಾರೆ. ಶೇ 22ರಷ್ಟು ಮಕ್ಕಳು ತಮ್ಮ ಲಿಂಗ ಕಾರಣ ಎಂದು ಹೇಳಿದ್ದಾರೆ. ಸೈಬರ್ ಬೆದರಿಕೆ ಏಕೆ ಚಿಂತೆಗೀಡುಮಾಡುವ ವಿಚಾರವಾಗಿದೆ ಎಂದರೆ ಇದು ಬೆದರಿಕೆಗೆ ಒಳಗಾದ ವ್ಯಕ್ತಿಯ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಮೆಕಾಫಿ ಸಮೀಕ್ಷೆಯ ಅನುಸಾರ ಬೆದರಿಕೆಗೆ ಒಳಗಾದ ಶೇ 53ರಷ್ಟು ಹರೆಯದ ಮಕ್ಕಳು ಆಕ್ರೋಶಕ್ಕೊಳಗಾಗಿರುತ್ತಾರೆ ಅಥವಾ ರಕ್ಷಣೆಯ ಮೊರೆ ಹೋಗುತ್ತಾರೆ. ಶೇ 47ರಷ್ಟು ಮಕ್ಕಳು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳನ್ನು ಅಳಿಸಿಹಾಕಿದ್ದಾರೆ. ಅಷ್ಟೇ ಅಲ್ಲದೆ ಆನ್‍ಲೈನ್ ವರ್ತನೆ ಆಫ್‍ಲೈನ್ ವರ್ತನೆಯ ಮೇಲೆಯೂ ಪ್ರಭಾವ ಬೀರುತ್ತದೆ. ಇದೇ ಅಧ್ಯಯನದಲ್ಲಿ ಸಂಪರ್ಕಿಸಲಾದ ಶೇ 50ರಷ್ಟು ಹರೆಯದ ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಪ್ರತಿಕ್ರಿಯೆಗಳ ವಿರುದ್ಧ ವಾದ ಮಾಡಲಾರಂಭಿಸುತ್ತಾರೆ. ಶೇ 4ರಷ್ಟು ಮಕ್ಕಳು ಆನ್‍ಲೈನ್ ವಾಗ್ವಾದಗಳ ಸಂದರ್ಭದಲ್ಲಿ ದೈಹಿಕ ಕಲಹಕ್ಕೂ ಮುಂದಾಗುತ್ತಾರೆ.

ಅಂತರ್ಜಾಲದ ಸುರಕ್ಷಿತ ಬಳಕೆ ಡಿಜಿಟಲ್ ಭದ್ರಕೋಟೆ

ಆನ್‍ಲೈನ್ ಲೈಂಗಿಕ ದಾಳಿಕೋರರು ಅಮಾಯಕ ಹರೆಯದ ಮಕ್ಕಳು ಮತ್ತು ಪ್ರೌಢ ವಯಸ್ಕರ ಮೇಲೆ ನಡೆಸುವ ದೌರ್ಜನ್ಯಗಳ ನೈಜ ಘಟನೆಗಳನ್ನೇ ಆಧರಿಸಿ ಎಫ್‍ಬಿಐ ಪೋಷಕರಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಒದಗಿಸಿದ್ದು ಆನ್‍ಲೈನ್ ದೌರ್ಜನ್ಯವನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ. ಸೈಬರ್ ಬೆದರಿಕೆಗಳನ್ನು ತಪ್ಪಿಸಿ ಮಕ್ಕಳನ್ನು ಕಾಪಾಡುವ ದೃಷ್ಟಿಯಿಂದ ಎಂಡ್ ಟು ಸೈಬರ್ ಬುಲ್ಲಿಯಿಂಗ್ ಎಂಬ ಅಮೆರಿಕದ ಎನ್‍ಜಿಒ ಸಂಸ್ಥೆ ಕೆಲವು ಸೂತ್ರಗಳನ್ನು ಒದಗಿಸಿದೆ. ಏನು ಮಾಡಿದರೆ ಈ ನಿಟ್ಟಿನಲ್ಲಿ ಉಪಯುಕ್ತವಾಗಬಹುದು ಎಂದು ಸಂಶೋಧನೆಗಳೂ ತಿಳಿಸಿವೆ.

ಈ ಶಿಫಾರಸುಗಳನ್ನು ಆಧರಿಸಿ ಡಿಜಿಟಲ್ ಮಾಧ್ಯಮವನ್ನು ಬಳಸುವ ಮಕ್ಕಳ ರಕ್ಷಣೆಗೆ ಈ ಕೆಲವು ಸಲಹೆಗಳನ್ನು ನೀಡಲಾಗಿದೆ:
ಮಾಹಿತಿ ನೀಡುವುದು:

ಮಾಹಿತಿ ಒಂದು ಬೃಹತ್ ಶಕ್ತಿ. ಅಂತರ್ಜಾಲದ ಅಪಾಯಗಳ ಬಗ್ಗೆ ವಿವಿಧ ವಯೋಮಾನದ ಮಕ್ಕಳೊಡನೆ ಮಾತನಾಡಿ. ಇದು ಏಕೆ ಮುಖ್ಯವಾಗುತ್ತದೆ ಎಂದರೆ ಎಳೆ ಮಕ್ಕಳು, ಹರೆಯದ ಮಕ್ಕಳು ತಮ್ಮ ಸ್ನೇಹಿತರ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅಂತರ್ಜಾಲವನ್ನು ವೀಕ್ಷಿಸುತ್ತಾರೆ. ಹಾಗಾಗಿ ಈ ಮಕ್ಕಳಿಗೆ ತಿಳುವಳಿಕೆ ನೀಡಿದರೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಸ್ವತಂತ್ರವಾಗಿ ಡಿಜಿಟಲ್ ಮಾಧ್ಯಮಗಳನ್ನು ವೀಕ್ಷಿಸುವಾಗ ಈ ತಿಳುವಳಿಕೆ ಉಪಯುಕ್ತವಾಗುತ್ತದೆ. ಎಲ್ಲ ರೀತಿಯ ಜನರು ವಿವಿಧ ಕಾರಣಗಳಿಂದ ಅಂತರ್ಜಾಲವನ್ನು ವೀಕ್ಷಿಸುತ್ತಾರೆ ಎಂದು ಮಕ್ಕಳಿಗೆ ಮನದಟ್ಟು ಮಾಡಬೇಕು. ಅವರ ವಯಸ್ಸಿಗೆ ತಕ್ಕಂತೆ, ಮಕ್ಕಳಿಗೆ ಅಂತರ್ಜಾಲದ ಮೂಲಕ ಬೆದರಿಸುವ ಬಗ್ಗೆ, ವಂಚನೆ ಮಾಡುವುದರ ಬಗ್ಗೆ ಎಚ್ಚರಿಕೆಯನ್ನು ನೀಡಬೇಕು. ಅಂತರ್ಜಾಲದಲ್ಲಿ ವಿಪುಲವಾದ ಮಾಹಿತಿ ಲಭ್ಯವಾಗುತ್ತದೆ ಅವುಗಳಲ್ಲಿ ಕೆಲವು ನಿಮಗೆ ಸೂಕ್ತವಾದುವಲ್ಲ ಎಂದು ಮಕ್ಕಳಿಗೆ ತಿಳಿಯಪಡಿಸಬೇಕು. ಹರೆಯದ ಮಕ್ಕಳು ಕೆಲವೊಮ್ಮೆ ಸ್ವತಂತ್ರವಾಗಿ ತಾವೇ ಜಾಲತಾಣಗಳನ್ನು ವೀಕ್ಷಿಸುತ್ತಾರೆ. ಈ ಸಮಯದಲ್ಲಿ ಅವರಿಗೆ ಸೂಕ್ತವಾದ ಅಂತರ್ಜಾಲ ತಾಣಗಳು ಯಾವುದು ಎಂದು ಮನದಟ್ಟು ಮಾಡಬೇಕು. ಅಂತರ್ಜಾಲದಲ್ಲಿ ಲಭ್ಯವಾಗುವ ಮಾಹಿತಿ ಎಲ್ಲವೂ ಸತ್ಯವಲ್ಲ ಎಂದು ಮಕ್ಕಳಿಗೆ ತಿಳಿಸುವುದೇ ಅಲ್ಲದೆ ವೆಬ್ ತಾಣಗಳಲ್ಲಿ ಕಂಡುಬರುವ ಮಾಹಿತಿಯನ್ನು ಪರಾಮರ್ಶಿಸಿ ನೋಡಲು ಸೂಚಿಸಬೇಕು.

ಸೆಕ್ಸ್ಟಿಂಗ್ ಮತ್ತು ಅದರ ಅಪಾಯಗಳನ್ನು ಕುರಿತು ಈ ಮಕ್ಕಳ ಬಳಿ ಮಾತನಾಡಬೇಕಿದೆ. ಲಿಖಿತ ಸಂದೇಶಗಳನ್ನು, ಫೋಟೋಗಳನ್ನು ಆನ್‍ಲೈನ್ ಮೂಲಕ ಪೋಸ್ಟ್ ಮಾಡುವುದರಿಂದ ಉಂಟಾಗುವ ಕಾನೂನಾತ್ಮಕ, ಸಾಮಾಜಿಕ ಹಾಗೂ ಮಾನಸಿಕ ಪರಿಣಾಮಗಳನ್ನು ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ.

ಅಂತರ್ಜಾಲ ಮತ್ತು ಮೊಬೈಲ್ ಬಳಕೆಯಿಂದ ಮಕ್ಕಳ ನಿರೀಕ್ಷೆಗಳೇನು ಮತ್ತು ಈ ಉಪಕರಣಗಳಿಗೆ ಸಂಬಂಧಿಸಿದ ವರ್ತನೆಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಬೇಕು. ಒಮ್ಮೆ ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ ಫೋಟೋ ಅಥವಾ ವಿಷಯವನ್ನು ಅಳಿಸಲಾಗುವುದಿಲ್ಲ ಎಂದು ಅವರಿಗೆ ತಿಳಿಸಬೇಕು. ಅವರ ಸ್ನೇಹಿತರಲ್ಲದ ಅಪರಿಚಿತರು ಈ ಫೋಟೋ ಅಥವಾ ವಿಷಯವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ, ಹಾಗಾಗಿ ಯಾವುದೇ ಪೋಸ್ಟ್ ಮಾಡುವ ಮುನ್ನ ಎಚ್ಚರಿಕೆಯಿಂದಿರಬೇಕು ಎಂದು ಮನದಟ್ಟು ಮಾಡಬೇಕು. ಭಾರತದಲ್ಲಿ ಬಹುಪಾಲು ಹರೆಯದ ಮಕ್ಕಳು ಸೆಲ್ ಫೋನ್ ಬಳಸುತ್ತಿದ್ದು ಉತ್ತಮ ಗುಣಮಟ್ಟದ ಕ್ಯಾಮರಾ ಇರುವ ಸ್ಮಾರ್ಟ್‍ಫೋನ್‍ಗಳೇ ಹೆಚ್ಚಾಗಿ ಬಳಕೆಯಲ್ಲಿವೆ. ಆದ್ದರಿಂದ ಸೆಕ್ಸ್ಟಿಂಗ್ ಮತ್ತು ಅದರ ಅಪಾಯಗಳನ್ನು ಕುರಿತು ಈ ಮಕ್ಕಳ ಬಳಿ ಮಾತನಾಡಬೇಕಿದೆ. ಲಿಖಿತ ಸಂದೇಶಗಳನ್ನು, ಫೋಟೋಗಳನ್ನು ಆನ್‍ಲೈನ್ ಮೂಲಕ ಪೋಸ್ಟ್ ಮಾಡುವುದರಿಂದ ಉಂಟಾಗುವ ಕಾನೂನಾತ್ಮಕ, ಸಾಮಾಜಿಕ ಹಾಗೂ ಮಾನಸಿಕ ಪರಿಣಾಮಗಳನ್ನು ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ಪ್ರೌಢವಯಸ್ಕರ ಬಳಿ ಈ ವಿಚಾರವನ್ನು ಚರ್ಚಿಸುವ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯದ ದುಷ್ಪರಿಣಾಮಗಳು ಮತ್ತು ಆನ್‍ಲೈನ್ ದಾಳಿಕೋರರಿಂದ ಉಂಟಾಗುವ ಅಪಾಯಗಳನ್ನು ಕುರಿತು ವಿವರಿಸಬೇಕು.

ಎಚ್ಚರಿಕೆ ವಹಿಸಿ:

ಅಂತರ್ಜಾಲದಲ್ಲಿ ನಿಮ್ಮ ಮಕ್ಕಳು ವೀಕ್ಷಿಸುವ ತಾಣಗಳ ಬಗ್ಗೆ ಮತ್ತು ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ. ಒಂದು ಷಾಪಿಂಗ್ ಮಾಲ್‍ನಲ್ಲಿ ಅಥವಾ ಮಾರುಕಟ್ಟೆಯಲ್ಲಿ ನೀವು ಮಕ್ಕಳನ್ನು ಹೇಗೆ ಒಂಟಿಯಾಗಿ ಬಿಡುವುದಿಲ್ಲವೋ ಹಾಗೆಯೇ ಹಾಗೆಯೇ ಅಂತರ್ಜಾಲ ಬಳಕೆಯ ಸಂದರ್ಭದಲ್ಲೂ ವಾಸ್ತವ ಪ್ರಪಂಚದಲ್ಲಿರುವ ಮಕ್ಕಳನ್ನು ಒಬ್ಬಂಟಿಯಾಗಿ ಬಿಡಬೇಡಿ. ಮನೆಯಲ್ಲಿ ಕಂಪ್ಯೂಟರ್ ಇಡುವಾಗ ಎಲ್ಲರೂ ಬಳಸುವಂತಹ ಕೋಣೆಯಲ್ಲೇ ಇರಿಸಿ. ಮಕ್ಕಳ ಖಾಸಗಿ ಕೋಣೆಯಲ್ಲಿ ಇಡಬೇಡಿ. ಅಂತರ್ಜಾಲ ಬಳಕೆಯ ನಿರ್ವಹಣೆ ಕಷ್ಟಕರವಾದ್ದರಿಂದ ಮಕ್ಕಳಿಗೆ ಸ್ಮಾರ್ಟ್‍ಫೋನ್ ಮೂಲಕ ಅಂತರ್ಜಾಲ ಬಳಸಲು ಆಸ್ಪದ ನೀಡಬೇಡಿ. ಮಕ್ಕಳು ಬಳಸುವ ಫೋನ್ ಮೇಲೆ ನಿಗಾವಹಿಸುವುದು, ಬಳಕೆಯ ಪ್ಲಾನ್‍ಗಳನ್ನು ಸೀಮಿತಗೊಳಿಸುವುದು, ಫೋನ್ ಬಳಸುವ ಅವಧಿಯನ್ನು ನಿಯಂತ್ರಿಸುವುದು, ಫೋಟೋಗಳನ್ನು ಹಂಚಿಕೊಳ್ಳುವುದು, ದಿನದ ನಿರ್ದಿಷ್ಟ ಸಮಯದಲ್ಲಿ ಮಾತ್ರ ಫೋನ್ ಬಳಸುವಂತೆ ತಾಕೀತುಮಾಡುವುದು ಹೀಗೆ ಹಲವು ಕ್ರಮಗಳ ಮೂಲಕ ಮಕ್ಕಳನ್ನು ರಕ್ಷಿಸಬಹುದು.

ಮಕ್ಕಳ ಆನ್‍ಲೈನ್ ಸಂಭಾಷಣೆಯನ್ನು ನಿಯಂತ್ರಿಸುವುದು ಅತಿಮುಖ್ಯವಾಗುತ್ತದೆ. ಮಕ್ಕಳು ಬಳಕೆಯ ತಾಣದಲ್ಲಿ ನೀಡುವ ತಮ್ಮ ಖಾಸಗಿ ವಿವರಗಳಲ್ಲಿ ಅತಿ ಹೆಚ್ಚು ಗೋಪ್ಯತೆಯನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಗುರುತು ಹಿಡಿಯಲು ನೆರವಾಗುವ ಮಾಹಿತಿ ಮತ್ತು ಸಂಪರ್ಕ ಮಾಹಿತಿಯನ್ನು ಕೇಳುವ ಫೇಸ್ ಬುಕ್ ಇನ್ಸ್‍ಟಾಗ್ರಾಂ ಮುಂತಾದ ಸಾಮಾಜಿಕ ತಾಣಗಳಲ್ಲಿ ಖಾಸಗಿ ಗೋಪ್ಯತೆಯನ್ನು ಕಾಪಾಡಿಕೊಳ್ಳುವಂತೆ ಎಚ್ಚರ ವಹಿಸಬೇಕು. ಕೊನೆಯದಾಗಿ, ವೆಬ್ ಆಧಾರಿತ ಖಾತೆಗಳನ್ನು ಮಕ್ಕಳು ಬಳಸುವಾಗ ಮಕ್ಕಳ ಪಾಸ್‍ವರ್ಡ್‍ಗಳನ್ನು ನೀವೇ ನಿರ್ಧರಿಸಿ, ಫೋನ್, ಕಂಪ್ಯೂಟರ್ ಮತ್ತು ವೆಬ್ ತಾಣಗಳ ಪಾಸ್ ವರ್ಡ್‍ಗಳನ್ನು ನೀವೇ ನಿಭಾಯಿಸುವಂತೆ ಎಚ್ಚರವಹಿಸಿ. ನಿಮಗೆ ಪಾಸ್‍ವರ್ಡ್ ಏಕೆ ತಿಳಿದಿರಬೇಕು ಮತ್ತು ಆಗಾಗ್ಗೆ ಅವರು ಬಳಸುವ ಜಾಲತಾಣಗಳನ್ನು ಏಕೆ ನೋಡುತ್ತಿರಬೇಕು ಎಂದು ಮಕ್ಕಳಿಗೆ ಮನದಟ್ಟುಮಾಡಿ. ಅಮೆರಿಕದ ಸಮೀಕ್ಷೆಯೊಂದರ ಅನುಸಾರ ಆನ್‍ಲೈನ್ ಚಟುವಟಿಕೆಯಲ್ಲಿ ತೊಡಗಿರುವ ಶೇ 45ರಷ್ಟು ಮಕ್ಕಳು, ತಮ್ಮ ಪೋಷಕರು ತಮ್ಮ ಚಟುವಟಿಕೆಯನ್ನು ಗಮನಿಸಿದ್ದ ಪಕ್ಷದಲ್ಲಿ ಅವರ ವರ್ತನೆಯನ್ನು ಬದಲಿಸಿಕೊಳ್ಳುತ್ತಿದ್ದುದಾಗಿ ಹೇಳಿದ್ದಾರೆ. ಹಾಗಾಗಿ ಪೋಷಕರು ನಮ್ಮನ್ನು ಗಮನಿಸುತ್ತಿದ್ದಾರೆ ಎಂದು ಅರಿತಿದ್ದರೆ ಸಾಕು ಮಕ್ಕಳು ಜಾಗರೂಕರಾಗಿದ್ದು ಸುರಕ್ಷಿತವಾಗಿಯೂ ಇರುತ್ತಾರೆ.

ಸೂಕ್ತವಲ್ಲದ ಮಾಹಿತಿಯನ್ನು ಸೋಸಿ ನೋಡುವ, ತಡೆಗಟ್ಟುವ ಹಲವು ಸಾಫ್ಟ್‍ವೇರ್‍ಗಳು ಲಭ್ಯವಿದ್ದು ಇವುಗಳನ್ನು ಡೌನ್‍ಲೋಡ್ ಮಾಡಿ ನಿಮ್ಮ ಮಕ್ಕಳು ಬಳಸುವ ಕಂಪ್ಯೂಟರ್ ಮತ್ತು ಮೊಬೈಲ್‍ನಲ್ಲಿ ಅಳವಡಿಸಿ.

ಪೋಷಕ ನಿಯಂತ್ರಣ ಸಾಧನ ಅಳವಡಿಸಿ:

ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‍ನಲ್ಲಿ ಅಂತರ್ಜಾಲ ಸೇವೆ ಒದಗಿಸುವ ತಾಣಗಳು ಯಾವ ರೀತಿಯ ಪೋಷಕ ನಿಯಂತ್ರಣ ಸಾಧನಗಳನ್ನು ಒದಗಿಸುತ್ತದೆ ಎಂದು ಮನದಟ್ಟು ಮಾಡಿಕೊಳ್ಳಿ. ಅನೇಕ ಸಾಫ್ಟ್‍ವೇರ್ ಕಂಪನಿಗಳು, ವೆಬ್ ತಾಣಗಳು, ಮೈಕ್ರೋಸಾಫ್ಟ್, ಯು ಟ್ಯೂಬ್, ಆಪಲ್ ಮತ್ತಿತರ ಸಂಸ್ಥೆಗಳು ಒದಗಿಸುವ ಪೋಷಕ ನಿಯಂತ್ರಣ ಸಾಧನಗಳನ್ನು ಬಳಸಿ. ಸೂಕ್ತವಲ್ಲದ ಮಾಹಿತಿಯನ್ನು ಸೋಸಿ ನೋಡುವ, ತಡೆಗಟ್ಟುವ ಹಲವು ಸಾಫ್ಟ್‍ವೇರ್‍ಗಳು ಲಭ್ಯವಿದ್ದು ಇವುಗಳನ್ನು ಡೌನ್‍ಲೋಡ್ ಮಾಡಿ ನಿಮ್ಮ ಮಕ್ಕಳು ಬಳಸುವ ಕಂಪ್ಯೂಟರ್ ಮತ್ತು ಮೊಬೈಲ್‍ನಲ್ಲಿ ಅಳವಡಿಸಿ. ಮಾಲ್‍ವೇರ್, ಸ್ಪೈವೇರ್ ಮತ್ತು ವೈರಸ್‍ಗಳು ಸದಾ ಹೊಸದಾಗಿ ರೂಪುಗೊಳ್ಳುತ್ತಲೇ ಇರುತ್ತವೆ, ಹೊಸದಾಗಿ ಬಿಡುಗಡೆಯಾಗುತ್ತಲೇ ಇರುತ್ತವೆ. ಹಾಗಾಗಿ ಇತ್ತೀಚಿನದನ್ನು ಕುರಿತು ಮಾಹಿತಿ ತಿಳಿದುಕೊಳ್ಳುವುದು ಅಗತ್ಯ. ವೈರಸ್ ನಿಯಂತ್ರಣದ ಇತ್ತೀಚಿನ ಸಾಫ್ಟ್‍ವೇರ್ ಸಾಧನಗಳನ್ನು ಡೌನ್‍ಲೋಡ್ ಮಾಡಿ ಅಳವಡಿಸಿಕೊಳ್ಳಿ.

ನಿಯಮಗಳನ್ನು ರೂಪಿಸಿ:

ಅಂತರ್ಜಾಲದ ನಡವಳಿಕೆಗೆ ನಿರ್ದಿಷ್ಟ ನಿಯಮಗಳನ್ನು ರೂಪಿಸುವುದು ಅತ್ಯಗತ್ಯ . ಆನ್‍ಲೈನ್ ಮೂಲಕ, ತಾವು ಭೇಟಿಯೇ ಮಾಡಿರದ, ಯಾರೊಬ್ಬರೊಡನೆ ಗೆಳೆತನ ಮಾಡಿದರೂ ಅದನ್ನು ನಿಮಗೆ ತಿಳಿಸುವಂತೆ ನಿಮ್ಮ ಮಕ್ಕಳಿಗೆ ಸೂಚನೆ ನೀಡಿ. ಮೇಲಾಗಿ, ಆನ್‍ಲೈನ್ ಸ್ನೇಹಿತರು ನಿಮ್ಮ ಮಕ್ಕಳನ್ನು ಭೇಟಿ ಮಾಡಲು ಇಚ್ಚಿಸಿದರೆ ಈ ವಿಚಾರವನ್ನು ನಿಮಗೆ ತಿಳಿಸುವಂತೆ ಸೂಚಿಸಿ. ಆನ್‍ಲೈನ್ ಗೆಳೆಯರನ್ನು ಮಕ್ಕಳು ಭೇಟಿಯಾಗುವುದು ಸಾಧ್ಯವೇ ಇಲ್ಲ, ಹಾಗೊಮ್ಮೆ ಸಾಧ್ಯವಾಗುವುದಾದರೆ ನೀವೇ ಅವರನ್ನು ಮೊದಲು ಭೇಟಿ ಮಾಡುವುದಾಗಿ ನಿಮ್ಮ ಮಕ್ಕಳಿಗೆ ಮನದಟ್ಟುಮಾಡಿ. ಅಂತರ್ಜಾಲದಲ್ಲಿ ಅಥವಾ ಯಾವುದೇ ಆನ್‍ಲೈನ್ ಸೇವೆಯಲ್ಲಿ ಖುದ್ದಾಗಿ ತಮ್ಮ ಫೋಟೋಗಳನ್ನು ಸೇರಿಸಕೂಡದು ಎಂದು ನಿಮ್ಮ ಮಕ್ಕಳಿಗೆ ತಿಳಿಸಿ ಹೇಳಿ. ಅಪರಿಚಿತರೊಡನೆ ಅಥವಾ ಆನ್‍ಲೈನ್ ಸ್ನೇಹಿತರೊಡನೆ ಅವರ ಫೋಟೋಗಳನ್ನು ಹಂಚಿಕೊಳ್ಳದಿರುವಂತೆಯೂ ಎಚ್ಚರಿಕೆ ನೀಡಿ. ಮಕ್ಕಳು ತಮ್ಮ ಸಂಪರ್ಕ ಮಾಹಿತಿಯನ್ನು, ಹೆಸರು, ಮನೆಯ ವಿಳಾಸ, ಮೊಬೈಲ್ ಸಂಖ್ಯೆ, ಶಾಲೆಯ ಹೆಸರು ಇಂತಹ ಮಾಹಿತಿಯನ್ನು ಅಂತರ್ಜಾಲದಲ್ಲಿ ನಮೂದಿಸಕೂಡದು ಎಂದು ಮಕ್ಕಳಿಗೆ ಬುದ್ಧಿ ಹೇಳಿ. ಪೂರ್ವಾಪರ ತಿಳಿಯದ ಯಾವುದೇ ಅಂತರ್ಜಾಲ ಮೂಲದಿಂದ ಚಿತ್ರಗಳನ್ನು, ಮಾಹಿತಿಯನ್ನು ಡೌನ್‍ಲೋಡ್ ಮಾಡುವ ಮುನ್ನ ನಿಮಗೆ ವಿಷಯ ತಿಳಿಸಲು ಹೇಳಿ.

ನಿತ್ಯ ಜೀವನದಲ್ಲಿ ಯಾರಾದರೂ ಬೆದರಿಕೆ ಹಾಕುವಂತೆ ವರ್ತಿಸಿದರೆ ಅದನ್ನು ನಿಮಗೆ ತಿಳಿಸುವಂತೆ ಮಕ್ಕಳಿಗೆ ಹೇಳುತ್ತೀರಲ್ಲವೇ, ಹಾಗೆಯೇ ಅಂತರ್ಜಾಲದಲ್ಲಿ ಯಾರಾದರೂ ಬೆದರಿಕೆ ಒಡ್ಡಿದರೂ ಅದನ್ನು ನಿಮಗೆ ತಿಳಿಸುವಂತೆ ಹೇಳಿ.

ನಿತ್ಯ ಜೀವನದಲ್ಲಿ ಮಕ್ಕಳ ವರ್ತನೆಯ ಬಗ್ಗೆ, ಚಟುವಟಿಕೆಗಳ ಬಗ್ಗೆ ನೀವು ಹೇಗೆ ಮಧ್ಯಪ್ರವೇಶ ಮಾಡುವಿರೋ ಹಾಗೆಯೇ ಆನ್‍ಲೈನ್ ನಡವಳಿಕೆಯ ಬಗ್ಗೆಯೂ ಎಚ್ಚರವಹಿಸಿ. ಮಕ್ಕಳು ಅಂತರ್ಜಾಲದಲ್ಲಿ ಬಳಸುವ ಪದಗಳು ಅಥವಾ ಸಂದೇಶಗಳಲ್ಲಿ ಬಳಸುವ ಪದಗಳು ನಿತ್ಯ ಜೀವನದಲ್ಲಿ ಬಳಸುವ ಪದಗಳಷ್ಟೇ ಪರಿಣಾಮ ಬೀರುತ್ತವೆ ಎಂದು ಅವರಿಗೆ ಮನದಟ್ಟುಮಾಡಿ. ನಿತ್ಯ ಜೀವನದಲ್ಲಿ ಯಾರಾದರೂ ಬೆದರಿಕೆ ಹಾಕುವಂತೆ ವರ್ತಿಸಿದರೆ ಅದನ್ನು ನಿಮಗೆ ತಿಳಿಸುವಂತೆ ಮಕ್ಕಳಿಗೆ ಹೇಳುತ್ತೀರಲ್ಲವೇ, ಹಾಗೆಯೇ ಅಂತರ್ಜಾಲದಲ್ಲಿ ಯಾರಾದರೂ ಬೆದರಿಕೆ ಒಡ್ಡಿದರೂ ಅದನ್ನು ನಿಮಗೆ ತಿಳಿಸುವಂತೆ ಹೇಳಿ. ಯಾವುದೇ ಸಂದೇಶಗಳಿಗೆ ಪ್ರತಿಕ್ರಯಿಸುವುದು, ಅಶ್ಲೀಲವಾದ, ಉಗ್ರವಾಗಿ ಕಾಣುವ, ಕಿರುಕುಳ ಎನಿಸುವ ಯಾವುದೇ ಸಂದೇಶ ಅಥವಾ ಮಾಹಿತಿಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಮಕ್ಕಳಿಗೆ ಮನದಟ್ಟು ಮಾಡಿ.

ಹಾಗೆಯೇ ಹರೆಯದ ಮಕ್ಕಳೊಡನೆ ಮಾತನಾಡುವಾಗ ರೊಮ್ಯಾಂಟಿಕ್ ವಿಚಾರಗಳು ಪ್ರಸ್ತಾಪವಾದಾಗ ಮುಕ್ತವಾಗಿ ಮಾತನಾಡಿ. ಆತ್ಮಗೌರವ ಮತ್ತು ಸಂಬಂಧಗಳಲ್ಲಿ ಇರಬೇಕಾದ ಪರಸ್ಪರ ಗೌರವ, ಒತ್ತಡಗಳನ್ನು ಪ್ರತಿರೋಧಿಸುವುದು, ತಮಗೆ ಸರಿಹೊಂದದ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿರುವುದು, ಫೋನ್ ಮತ್ತು ಇಂಟರ್‍ನೆಟ್ ಬಳಸುವಾಗ ಇಂತಹ ನಡವಳಿಕೆಗಳ ಬಗ್ಗೆ ನಿಗಾವಹಿಸುವುದು ಹೀಗೆ ಹಲವು ವಿಚಾರಗಳ ಬಗ್ಗೆ ಮಕ್ಕಳ ಬಳಿ ಮುಕ್ತವಾಗಿ ಮಾತನಾಡಿ. ಈ ಕೆಲವು ನಿರ್ದಿಷ್ಟ ಕೆಲಸಗಳನ್ನು ಮಾಡಲು ನೀವು ವ್ಯಯ ಮಾಡುವ ಸಮಯ, ಡಿಜಿಟಲ್ ಮಾಧ್ಯಮ ಬಳಸುವ ವೇಳೆ ಮಕ್ಕಳ ರಕ್ಷಣೆಗಾಗಿ ನೀವು ನೀಡುವ ಸಲಹೆ ಮತ್ತು ಸಂದೇಶಗಳು ಅಮೂಲ್ಯವಾಗಿದ್ದು ಇದರಿಂದ ಮಕ್ಕಳು ಈ ಕ್ಷಣದಲ್ಲಿ ಮಾತ್ರವೇ ಅಲ್ಲದೆ ಭವಿಷ್ಯದಲ್ಲೂ ಸುರಕ್ಷಿತವಾಗಿ ಬದುಕಲು ನೆರವಾಗುತ್ತದೆ.

ಅನುವಾದ: ನಾ ದಿವಾಕರ

Leave a Reply

Your email address will not be published.