ಅತ್ಯುತ್ತಮ ಸಂದರ್ಶನ

ಐಪಿಎಸ್ ಅಧಿಕಾರಿ ಆರ್.ಚೇತನ್ ಅವರು ಬೆಳೆದ ಪರಿಸರ, ಹವ್ಯಾಸ, ಆಸಕ್ತಿ, ಮನೆಯ ವಾತಾವರಣ, ಬಾಲ್ಯದ ಶಿಕ್ಷಣ, ಅವರು ಕಂಡ ಸಿವಿಲ್ ಸರ್ವಿಸ್ ಪರೀಕ್ಷೆಯ ಕನಸು ಮತ್ತು ನನಸು ಮಾಡಿದ ದಿಟ್ಟ ನಡೆ, ಪೊಲೀಸ್ ಇಲಾಖೆಯ ಸವಾಲುಗಳು, ಅಧಿಕಾರಿ ವರ್ಗದ ಹಾಗೂ ಜನಸಾಮಾನ್ಯರ ಸಹಕಾರದ ಪ್ರಾಮುಖ್ಯ, ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನದ ನುಡಿಗಳು ಅತ್ಯುತ್ತಮ ಸಂದರ್ಶನವಾಗಿ ಮೂಡಿಬಂದಿದೆ. ಜೊತೆಗೆ ಅವರ ತುಂಬು ಕುಟುಂಬದ ಭಾವಚಿತ್ರವನ್ನು ನೋಡಿ ತುಂಬಾ ಸಂತೋಷವಾಯಿತು. ಈ ಅಂಕಣ ನಾಗರಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಅಚ್ಚಳಿಯದೆ ಉಳಿಯುತ್ತದೆ. ದಕ್ಷ ಅಧಿಕಾರಿ ಆರ್.ಚೇತನ್ ರವರಿಗೂ ಸಂದರ್ಶಿಸಿದ ಡಾ.ಅರವಿಂದ ಪಟೇಲ್ ರವರಿಗೂ ಅಭಿನಂದನೆಗಳು.

-ಡಾ.ಎನ್.ಟಿ.ಅನಿಲ್, ಬೆಂಗಳೂರು.

Leave a Reply

Your email address will not be published.