ಅನಿಸಿಕೆಗಳು

ವಿಶ್ವವಿದ್ಯಾಲಯದ ಕೆಲಸ

ಕೋವಿಡ್ ಬಗ್ಗೆ ಇಷ್ಟೊಂದು ವ್ಯವಸ್ಥಿತವಾದ ಲೇಖನ ಸರಣಿ ಕನ್ನಡದಲ್ಲಿ ನಿಮ್ಮದೇ ಮೊದಲು. ಒಂದು ವಿ.ವಿ. ಮಾಡಬೇಕಾದ ಕೆಲಸವನ್ನು ನೀವು ಮಾಡುತ್ತಿದ್ದೀರಿ. ಹೆಮ್ಮೆಯಿದೆ!

-ಡಾ.ಕಿರಣ್ ವಿ.ಎಸ್., ಬೆಂಗಳೂರು.

 

ಆಕರ್ಷಕ ಕ್ಲಿಕ್

ಅಕ್ಟೋಬರ್ ಸಂಚಿಕೆಯ ‘ನನ್ನ ಕ್ಲಿಕ್’ ಅಂಕಣದಲ್ಲಿ ಪ್ರಕಟವಾದ ಛಾಯಾಚಿತ್ರಗಳು ಆಕರ್ಷಕವಾಗಿವೆ.  ಮೃಗ ಪಕ್ಷಿಗಳು ಜೀವ ತಳೆದು ಕಣ್ಮುಂದೆ ಬಂದಂತೆ ಭಾಸವಾಯಿತು. ಇಂತಹ ನೇತ್ರಾನಂದಕರ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಛಾಯಾಗ್ರಾಹಕ ದಿನೇಶ್ ಅಲ್ಲಮಪ್ರಭು ಅವರಿಗೆ ಅಭಿನಂದನೆಗಳು.

-ಮಂಜುನಾಥ ಡಿ.ಎಸ್., ಬೆಂಗಳೂರು.

 

ಶಿರಸಿ ಕಾಲೇಜುಗಳಿಗೆ ಪ್ರಾಯೋಜಿಸುವೆ

ಪತ್ರಿಕೆಯನ್ನು ಕರ್ನಾಟಕದ ಎಲ್ಲ ಕಾಲೇಜು ಗ್ರಂಥಾಲಯಗಳಿಗೆ ಕಳಿಸುವ ಒಂದು ಯೋಜನೆ ಹಾಕಿ. ತಾಲೂಕು ಸ್ತರಗಳಲ್ಲಿ ಈ ಯೋಜನೆ ಇರಲಿ. ಪ್ರತಿ ತಾಲೂಕನ್ನೂ ಒಬ್ಬ ವ್ಯಕ್ತಿ ಪ್ರಾಯೋಜನೆ ಮಾಡಬಹುದು. ಈ ಯೋಚನೆ ನನಗೆ ಬರಲು ಕಾರಣ, ಶಿರಸಿ ತಾಲೂಕಿನಲ್ಲಿರುವ ಎಲ್ಲ ಕಾಲೇಜು ಗ್ರಂಥಾಲಯಗಳಿಗೆ ಸಮಾಜಮುಖಿಯನ್ನು ಸ್ಪಾನ್ಸರ್ ಮಾಡುವ ಉದ್ದೇಶ ನನ್ನದು. ಶಿರಸಿ ಕಾಲೇಜುಗಳ ವಿವರ ತರಿಸಿಕೊಂಡು ಅವುಗಳಿಗೆ ಸಮಾಜಮುಖಿ ವಾರ್ಷಿಕ ಚಂದಾ ಎಷ್ಟಾಗುತ್ತದೆ ಎಂದು ನನಗೆ ತಿಳಿಸಿದರೆ, ನಾನು ಆ ಜವಾಬ್ದಾರಿಯನ್ನು ತಗೊಳ್ಳ ಬಯಸುತ್ತೇನೆ. ಹಾಗೆಯೇ, ಇನ್ಯಾವುದಾದರೂ ತಾಲೂಕಿಗಾಗಿ ಒಬ್ಬ ಪ್ರಾಯೋಜಕರನ್ನು ಹುಡುಕುವ ಕೆಲಸವನ್ನು ಕೂಡ ಮಾಡುತ್ತೇನೆ.

-ಕಮಲಾಕರ ಕಡವೆ, ಅಹಮದನಗರ.

ಮೂರು ಉಪಾಯಗಳು

 1. ನಿಮ್ಮ ಪತ್ರಿಕೆ ಅಕೌಂಟಿಗೆ ೨೫.೧೦.೨೦೨೦ಕ್ಕೆಇಪ್ಪತ್ತು ಸಾವಿರ ರೂಪಾಯಿಟ್ರಾನ್ಸಫರ್ ಮಾಡುತ್ತೇನೆ.
 1. ಪತ್ರಿಕೆಯ ಬೆಲೆಯನ್ನು ರೂ.೫೦ ರಿಂದ೫೫ಕ್ಕೆ ಏರಿಸಿದರೆ?
 1. ಪತ್ರಿಕೆಯ ಓದುಗರು, ಹಿತೈಷಿಗಳು ತಮ್ಮಸ್ನೇಹ ವರ್ತುಲದಲ್ಲಿ೫ರಿಂದ ೧೦ ಜನರನ್ನು ವಾರ್ಷಿಕ ಚಂದಾನೀಡುವಂತೆ ಮನವೊಲಿಸಬಹುದು.

ಈ ಮೂರು ಉಪಾಯಗಳು ಈ ಕ್ಷಣ ಹೊಳೆದಿವೆ.

-ಮಾಲತಿ ಪಟ್ಟಣಶೆಟ್ಟಿ, ಧಾರವಾಡ.

 

 

 

ಯಶ ಕಾಣಲಿ

ಪ್ರಯತ್ನ ಯಶಸ್ವಿಯಾಗಲಿ. ವರ್ಷಕ್ಕೆ ಎರಡು ಬಾರಿಯಂತೆ ಕನಿಷ್ಠ ಒಂದು ಸಾವಿರ ಕೊಡುವೆ.

-ಓ.ಎಲ್.ನಾಗಭೂಷಣಸ್ವಾಮಿ, ಮೈಸೂರು.

 

 

 

ನಂಬಲರ್ಹ ಮಾಹಿತಿ

ಹೇಮಂತ್ ಎಲ್. ಅವರ ‘ಕೋವಿಡ್ ಕೊನೆಗೆ ದಾರಿ ಯಾವುದಯ್ಯಾ’ ಲೇಖನ ವಿಶೇಷವಾದುದು, ನಂಬಲರ್ಹವಾದುದು, ವೈಜ್ಞಾನಿಕ ಸಮರ್ಥನೆಯಿಂದ ಕೂಡಿದುದು. ಇದು ಕೋವಿಡ್ ಕುರಿತಂತೆ ನಾವು ವಹಿಸಲೇಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅತ್ಯಂತ ಸ್ಪಷ್ಟವಾಗಿ ದಾರಿ ತೋರಿಸುತ್ತದೆ;

ಬಹಳ ಉಪಯುಕ್ತ ಮಾಹಿತಿಗಳಿಂದ ಕೂಡಿದೆ, ಖಚಿತವಾಗಿದೆ, ನೇರವಾಗಿದೆ, ಸುಳ್ಳು ಭರವಸೆಗಳಿಂದ ಮುಕ್ತವಾಗಿದೆ.

ಇದು ಕೋವಿಡ್ ಬಗ್ಗೆ ಮಾಹಿತಿ ಬಯಸುವವರು ಓದಲೇ ಬೇಕಾದ ಅತ್ಯುತ್ತಮ ಲೇಖನ. ಎಲೆಕ್ಟ್ರಿಕಲ್-ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರೊಬ್ಬರು ವೈದ್ಯಕೀಯ ಕ್ಷೇತ್ರ ಕುರಿತು ಇಷ್ಟೊಂದು ಆಳವಾಗಿ ವಿಷಯ ಸಂಗ್ರಹಿಸಿ ಅದನ್ನು ಸಮರ್ಥವಾಗಿ ಮಂಡಿಸುವ ಕ್ರಮ ಅದ್ಭುತ.

-ಸಿ.ಚಿಕ್ಕತಿಮ್ಮಯ್ಯ, ಹಂದನಕೆರೆ.

ಸಂಘರ್ಷ ಸಹಜ

ಭಿನ್ನ ವನ್ಯ ಜೀವಿಗಳು ಕಾಡಿನೊಳಗೆ ಇದ್ದರೂ, ಅಷ್ಟಾಗಿ ಒಂದಕ್ಕೊಂದು ಹೊಂದಿಕೊಂಡು ಬಾಳುವುದಿಲ್ಲ. ವನ್ಯಜೀವಿ ಸಂತತಿಗಳು ಬಹುತೇಕ ಪ್ರತ್ಯೇಕವಾಗೇ ಜೀವಿಸುತ್ತವೆ. ಕೆಲವೊಮ್ಮೆ ಅವುಗಳ ನಡುವೆಯೂ ಸಂಘರ್ಷ ನಡೆಯುವುದುಂಟು. ಅದೇ ಮಾದರಿಯಲ್ಲಿ ಮಾನವ ಹಾಗೂ ವನ್ಯಜೀವಿಗಳು ಪರಸ್ಪರ ಎದುರಾದಾಗ ಸಂಘರ್ಷ ಉಂಟಾಗುತ್ತದೆ.

ಮುಂಜಾಗ್ರತೆ ಕ್ರಮಗಳು:

 • ಆದಷ್ಟು ಕಾಡಂಚಿನ ಗ್ರಾಮಗಳಲ್ಲಿ ರಾತ್ರಿ ವೇಳೆಯಲ್ಲಿಕಡ್ಡಾಯವಾಗಿ ಬೀದಿ ದೀಪಗಳನ್ನು ಹಾಕುವುದು.ಜಮೀನುಗಳಲ್ಲಿ ಎಲ್ಲಿ ಸಾಧ್ಯವೋ ಅಲ್ಲಿ ಲೈಟ್‌ಗಳನ್ನುಅಳವಡಿಸುವುದು.
 • ಕಾಡಂಚಿನ ಗ್ರಾಮಗಳಲ್ಲಿ ಆನೆಗಳು ಸಾಮಾನ್ಯವಾಗಿಓಡಾಡುವ ಜಾಗದಲ್ಲಿ ರಾತ್ರಿ ವೇಳೆಯಲ್ಲಿ ಜನರುಓಡಾಡುವುದನ್ನು ಆದಷ್ಟು ಕಡಿಮೆ ಮಾಡುವುದು.
 • ಮನೆಗಳ ಬಳಿ ಮಾವಿನಂತಹ ಆನೆಗಳನ್ನು ಆಕರ್ಷಿಸುವಗಿಡಮರ ಬೆಳೆಸುವುದನ್ನು ಆದಷ್ಟು ತಡೆಯುವುದು.
 • ಆನೆಗಳನ್ನು ಸುಮ್ಮನೆ ಬೆನ್ನಟ್ಟುವ ಪ್ರಯತ್ನ ಬೇಡ. ಅರಣ್ಯಇಲಾಖೆಯವರನ್ನು ಸಂಪರ್ಕಿಸುವುದು ಉತ್ತಮ.
 • ಅಕ್ರಮ ವಿದ್ಯುತ್ ಬೇಲಿಗಳನ್ನು ನಿರ್ಮಾಣ ಮಾಡಬಾರದು.ಇದು ಕಾನೂನುಬಾಹಿರ. ಸ್ಥಳೀಯ ಅರಣ್ಯ ಇಲಾಖೆ,ಎನ್‌ಜಿಓ ಗಳನ್ನು ಸಂಪರ್ಕಿಸಿ ಸುರಕ್ಷಿತ ಸೋಲಾರ್ಬೇಲಿಗಳನ್ನು ಅಳವಡಿಸಿಕೊಳ್ಳುವುದು ಉತ್ತಮ.
 • ಬಯಲು ಶೌಚಾಲಯ ನಿಲ್ಲಿಸಿ, ಮನೆಯಲ್ಲಿ ಕಡ್ಡಾಯವಾಗಿಶೌಚಗೃಹ ಕಟ್ಟಿಸಿಕೊಳ್ಳಬೇಕು.
 • ಕಬ್ಬಿನ ಗದ್ದೆ, ಕಾಫಿ-ಟೀ ಪ್ಲಾಂಟೇಷನ್‌ನಂತಹ ಪ್ರದೇಶಗಳಲ್ಲಿಆನೆಗಳು ಇರುವ ಸುದ್ದಿ ತಿಳಿದಾಗ ಅಲ್ಲಿಗೆ ಏಕಾಏಕಿ ನುಗ್ಗದೆ,ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿ.
 • ಜಮೀನು ಕಾವಲಿಗೆ ತೆರಳಿದರೆ ಕಡ್ಡಾಯವಾಗಿಅಟ್ಟಣೆ ಬಳಸುವುದು.
 • ಜಾನುವಾರುಗಳನ್ನು ರಾತ್ರಿ ವೇಳೆ ಕಡ್ಡಾಯವಾಗಿ ಕೊಟ್ಟಿಗೆಯಒಳಗೆ ಕಟ್ಟುವುದು.
 • ಕಾಡಿನ ಹೊರಗೆ/ಜಮೀನುಗಳಲ್ಲಿ ವನ್ಯ ಜೀವಿಗಳುಕಂಡುಬಂದಾಗ ತಕ್ಷಣವೇ ಹತ್ತಿರದ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸುವುದು.

-ಸಂಜಯ ಹೊಯ್ಸಳ, ಮೈಸೂರು.

ಅಳಿಲು ಸೇವೆ

ಈ ಮೂಲಕ ರೂ.೫೦೦೦ ಚೆಕ್ ಕಳಿಸಿದ್ದೇನೆ. ಇದು ನನ್ನ ಅಳಿಲು ಸೇವೆ; ಸಮಾಜಮುಖಿ ಪತ್ರಿಕೆಯ ಅಭಿವೃದ್ಧಿಗಾಗಿ, ಪ್ರಗತಿಗಾಗಿ ಬಳಸಿ.

-ಪ್ರಕಾಶ ಪರ್ವತೀಕರ, ತಿರುಪೂರ.

ಓದುಗರಲ್ಲಿ ಒಂದು ವಿನಂತಿ

ಬೌದ್ಧಿಕ ನೆಲೆಯಲ್ಲಿ ಅದೆಷ್ಟೇ ಆದರ್ಶ, ಪಾವಿತ್ರ್ಯ, ಪಾತೀರ್ವತ್ಯದ ಅಡಿಪಾಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದರೂ ಅಂತಿಮವಾಗಿ ಪತ್ರಿಕೆಯೊಂದು ಮಾರುಕಟ್ಟೆಯ ‘ಸರಕು’ ಎಂಬುದು ಕಹಿಸತ್ಯ. ಸರಕು ಎಂದಾಕ್ಷಣ ಲಾಭನಷ್ಟದ ಲೆಕ್ಕಾಚಾರ ರಂಗ ಪ್ರವೇಶಿಸುತ್ತದೆ. ನಿಮಗೆಲ್ಲಾ ಗೊತ್ತಿರುವಂತೆ ಭಾರತದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಎರಡು ವಸ್ತುಗಳೆಂದರೆ, ರೈತರ ಉತ್ಪನ್ನ ಮತ್ತು ಪತ್ರಿಕೆ.

ಸಮಾಜಮುಖಿ ಮಾಸಿಕದ ಲೆಕ್ಕವನ್ನೇ ತೆಗೆದುಕೊಳ್ಳೋಣ. ತೊಂಬತ್ತಾರು ಪುಟಗಳಲ್ಲಿ ಸಮೃದ್ಧ ಹೂರಣ ಹೊತ್ತು ಸಂಗ್ರಾಹ್ಯ ಪುಸ್ತಕ ರೂಪದಲ್ಲಿ ನಿಮ್ಮ ಕೈಸೇರುವ ಪತ್ರಿಕೆಯ ಒಂದು ಪ್ರತಿಯ ಮುದ್ರಣ ವೆಚ್ಚವೇ ಮೂವತ್ತೊಂದು ರೂಪಾಯಿ. ಸಿಬ್ಬಂದಿಯ ಸಂಬಳ, ಲೇಖಕರ-ಕಲಾವಿದರ ಸಂಭಾವನೆ, ಕಚೇರಿ ಬಾಬತ್ತು, ಅಂಚೆ ಖರ್ಚು… ಎಲ್ಲಾ ಸೇರಿದರೆ ಒಂದು ಪ್ರತಿಯ ಉತ್ಪಾದನಾ ಖರ್ಚು ಬರೋಬ್ಬರಿ 80 ರೂಪಾಯಿ ದಾಟುತ್ತದೆ! ಆದಾಗ್ಯೂ ಸಮಾಜಮುಖಿಯ ಮುಖಬೆಲೆ 50 ರೂಪಾಯಿ ಮಾತ್ರ. ಇನ್ನು ರೂ.500 ನೀಡಿ ವಾರ್ಷಿಕ ಚಂದಾದಾರರಾದವರಿಗೆ ರೂ.41.66ಕ್ಕೆ, ಮೂರು ವರ್ಷದ ಚಂದಾದಾರರಿಗೆ ರೂ.38.88ಕ್ಕೆ, ಐದು ವರ್ಷದ ಚಂದಾದಾರರಿಗೆ ರೂ.33.33ಕ್ಕೆ ಸಮಾಜಮುಖಿ ದೊರೆಯುತ್ತಿದೆ. ಹಾಗಾದರೆ ಈ ನಷ್ಟ ಭರಿಸುವುದು ಹೇಗೆ?

ಎಲ್ಲಾ ಸಿದ್ಧ ಮಾದರಿಗಳನ್ನು ಬದಿಗಿಟ್ಟು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸದೊಂದು ಮಾರ್ಗ ಹುಡುಕಲು ನಿಮ್ಮ ಸಮಾಜಮುಖಿ ಮುಂದಾಗಿದೆ. ಅದುವೇ ‘ಸ್ವತಂತ್ರ ಪತ್ರಿಕೋದ್ಯಮ’. ಇದು ಇವತ್ತಿನ ಅಗತ್ಯಕ್ಕೆ ತಕ್ಕ ನಿರ್ಭೀತ, ಉದಾರವಾದಿ ಹಾಗೂ ಅಭಿವೃದ್ಧಿಪರ ಮಾದರಿ. ಇನ್ನೊಂದು ಅರ್ಥದಲ್ಲಿ ಇದು ಕನ್ನಡಿಗ ಓದುಗರ, ಓದುಗರಿಂದ, ಓದುಗರಿಗಾಗಿ ರೂಪುಗೊಂಡ ಪತ್ರಿಕೋದ್ಯಮವಾಗಿದೆ. ಇಲ್ಲಿ ಓದುಗರು ಕೇವಲ ಗ್ರಾಹಕರಲ್ಲ; ಹಣನೀಡುವÀ ಮಾಲೀಕರು, ತಿದ್ದುವ ಗುರುಗಳು, ಮಿಡಿಯುವ ಹಿತೈಷಿ, ಜೊತೆಗೆ ನಡೆಯುವ ಸಂಗಾತಿ.

ನೀವೇನು ಮಾಡಬಹುದು?

ನೀವು ಸಮಾಜಮುಖಿಯ ಒಂಚೂರು ಆರ್ಥಿಕ ಹೊರೆ ಹಂಚಿಕೊಂಡು ಸ್ವತಂತ್ರ ಪತ್ರಿಕೋದ್ಯಮ ಬೆಂಬಲಿಸಬೇಕು, ಸಹಭಾಗಿಗಳಾಗಬೇಕು. ನಿಮ್ಮ ಇತಿಮಿತಿ, ಶಕ್ತಿಸಾಮಥ್ರ್ಯಕ್ಕೆ ಅನುಗುಣವಾಗಿ ಪತ್ರಿಕೆಗೆ ಪುಟ್ಟ ಹಣಕಾಸಿನ ಸಹಾಯ ನೀಡಲು ನಮ್ಮ ಕೋರಿಕೆ. ಇದು ದೇಣಿಗೆಯ ಅರ್ಥವ್ಯಾಪ್ತಿ ಮೀರಿದ ವಿಶಾಲ ಕೊಡುಗೆ. ನೀವು ನೀಡುವ ನೆರವಿನ ‘ಹನಿ’ಗಳು ಒಟ್ಟುಗೂಡಿ ‘ಹಳ್ಳ’ವಾಗುವುದು ಅಸಾಧ್ಯವಲ್ಲ. ಕನಿಷ್ಠ ರೂ.100 ರಿಂದ ಗರಿಷ್ಠ ರೂ.20,000 ರವರೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಒಮ್ಮೆ ಅಥವಾ ಪ್ರತಿತಿಂಗಳು/ಪ್ರತಿವರ್ಷ ನೀಡುವ ಮೂಲಕ ಸ್ವತಂತ್ರ ಪತ್ರಿಕೋದ್ಯಮಕ್ಕೆ ಕೈಜೋಡಿಸಬಹುದು.

 

ಸಮಾಜಮುಖಿ ಪ್ರಕಾಶನ ಪ್ರೈ. ಲಿ., ಬ್ಯಾಂಕ್: SBI, ಸುಧಾಮನಗರ ಶಾಖೆ, ಬೆಂಗಳೂರು.

ಖಾತೆ ಸಂಖ್ಯೆ: 37262378162 IFSC: SBIN0040252 ಗೂಗಲ್ ಪೇ ಮೊಬೈಲ್ ಸಂಖ್ಯೆ: 9606934019

 

Leave a Reply

Your email address will not be published.