ಅಪ್ರಸ್ತುತತೆಯ ಹಾದಿಯಲ್ಲಿ ಸಿಸಿಪಿ

ಶೇಷಾದ್ರಿ ಚಾರಿ

ಅನುವಾದ: ಹರ್ಷವರ್ಧನ ವಿ.ಶೀಲವಂತ

ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಆರ್ಎಸ್ಎಸ್ನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಲ್ಲಿ ಗ್ರಹಿಸಿ, ಒಳಾರ್ಥ ವಿಶ್ಲೇಷಿಸಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳಿಗೆ ಸಮೀಕರಿಸಿ ಬರೆಯುತ್ತಾರೆ ಶೇಷಾದ್ರಿ ಚಾರಿ.

ರಾಷ್ಟ್ರಗಳು ಕಳೆಗುಂದಿ ಸರಿದು ಹೋಗುತ್ತವೆ, ಎಂಬುದು ಕಾರ್ಲ್ ಮಾಕ್ರ್ಸ್ ಘೋಷಿಸಿದ ತುಂಬ ಪ್ರಸಿದ್ಧ ಮಾತು. ಆದರೆ, ಕಣ್ಮರೆಯಾದದ್ದು ಕಮ್ಯುನಿಸ್ಟ್ ಪಕ್ಷಗಳು ಅಥವಾ ಅವು ಪ್ರಕ್ರಿಯೆಯಲ್ಲಿವೆ. ಕಮ್ಯುನಿಸ್ಟ್ ಆಡಳಿತವನ್ನು ವಿಶ್ವ ಮಟ್ಟದಲ್ಲಿ ಸ್ಥಾಪಿಸಿ, ತನ್ಮೂಲಕ ಜಾಗತಿಕವಾಗಿ ಕಮ್ಯುನಿಸ್ಟ್ ಕ್ರಾಂತಿಯನ್ನು ದೈದೀಪ್ಯಮಾನವಾಗಿಸುವ ಧ್ಯೇಯೋದ್ದೇಶ ಹಾಗೂ ಕಲ್ಯಾಣ ರಾಷ್ಟ್ರದ (ರಾಮ ರಾಜ್ಯ) ಪರಿಕಲ್ಪನೆಯನ್ನು ಅಂತಾರಾಷ್ಟ್ರೀಯ ಸಮುದಾಯಗಳೊಂದಿಗೆ ತಾದಾತ್ಮ್ಯಗೊಳಿಸುವ ಬಗ್ಗೆ ಹೊಂದಿದ್ದ ಅರಿವಿನ ಮರೆವು ಕಾರಣ. ಇದೆಲ್ಲವೂ ಇಂದಿಗೆ ಕಲ್ಪಿತ ಕಾದಂಬರಿಯಂತೆ ಭಾಸವಾಗುತ್ತಿದೆ.

1935 ರಲ್ಲಿ ಜರುಗಿದ ಕೊನೆಯ ಜಾಗತಿಕ ಸಮಾವೇಶದ ಬಳಿಕ, ಕಮ್ಯುನಿಸ್ಟ್ ಪಕ್ಷದ ಅತೀದೊಡ್ಡ ಸಮಾವೇಶ ಆಯೋಜಿತವಾಗಿದ್ದು ಬೀಜಿಂಗ್ನಲ್ಲಿ, ಜುಲೈ 1, 2021 ರಂದು; ಮತ್ತು ಸಮಾವೇಶ ಜಾಗತಿಕವಾಗಿ ಯಾವುದೇ ಪ್ರಸ್ತುತತೆ ಗಳಿಸದಿರುವುದು. ಅದು ಚೈನಾದ ಕಮ್ಯುನಿಸ್ಟ್ ಪಕ್ಷದ (ಸಿಸಿಪಿ) ಶತಮಾನೋತ್ಸವವಾಗಿತ್ತು. ಇದು ಎರಡು ನೀತಿಗಳನ್ನು ಪ್ರತಿಪಾದಿಸುತ್ತದೆ. ಮಾಕ್ರ್ಸ್ವಾದ ಮತ್ತು ಬಂಡವಾಳಶಾಹಿ ರಾಷ್ಟ್ರಗಳಿಗಿಂತಲೂ ನಿರ್ದಯವಾಗಿ ಬಂಡವಾಳಶಾಹಿ ನೀತಿಯನ್ನು ಪಾಲಿಸುವುದು.

ಪ್ರಾಸಂಗಿಕವಾಗಿ, ಕೆಲವೇ ಕೆಲವಷ್ಟು ಜಾಗತಿಕ ಧುರೀಣರು ಸಾರ್ವಜನಿಕವಾಗಿ ಸಿಸಿಪಿಗೆ ಶತಮಾನೋತ್ಸವದ ಶುಭಾಶಯಗಳನ್ನು ಕೋರಿದರು. ರಷ್ಯಾದ ರಾಷ್ಟ್ರಪತಿ ವ್ಲಾಡಿಮೀರ್ ಪುಟಿನ್ ಸಹ ಸಮಾರಂಭದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಾಗಿ, ‘ತನ್ನ ವಯಕ್ತಿಕ ಸಾಮಥ್ರ್ಯದಲ್ಲಿ ಮಾತ್ರ ಸಿಸಿಪಿಯನ್ನು ಅಭಿನಂದಿಸುತ್ತಿದ್ದು, ರಷ್ಯಾ ರಾಷ್ಟ್ರದ ಪರವಾಗಿ ಅಥವಾ ರಷ್ಯನ್ನರ ಪರವಾಗಿ ಅಲ್ಲ ಎಂದು ವರದಿಯಾಗಿದೆ.

ಒಂದಂತೂ ಸ್ಪಷ್ಟ, ಶತಮಾನೋತ್ಸವ ಧಿಕ್ಕರಿಸಿದ್ದು ರಂಗದಾಟಕ್ಕೆ ತೆರೆ ಬಿತ್ತು ಎಂಬರ್ಥವಲ್ಲ. ಬಹುತೇಕ ಪಾಶ್ಚಿಮಾತ್ಯ ಬಂಡವಾಳಶಾಹಿ ರಾಷ್ಟ್ರಗಳು ಮತ್ತು ಇನ್ನೂ ಅನೇಕ ವಲಯದ ರಾಷ್ಟ್ರಗಳಲ್ಲಿ ಚೈನಾದ ಹೆಜ್ಜೆ ಗುರುತುಗಳು ಅಗಾಧವಾಗಿವೆ. ಸಿಸಿಪಿಗೆ ಬಹುಶಃ ಇದು ತಿಳಿದಿತ್ತು. ಹೀಗಾಗಿ, ಅಮೇರಿಕದ ಹಿರಿಕಿರಿಯ ಮಾಧ್ಯಮಗಳಿಗೆ ಹೇರಳ ಹಣ ಸುರಿದು, ಜಾಗೆಯನ್ನು ಖರೀದಿಸಿ, ಪ್ರಚಾರ ಪಡೆಯಲು ಪ್ರಾರಂಭಿಸಿತು ಎಂದು, ಅಮೆರಿಕದ ನ್ಯಾಯಾಂಗ ಇಲಾಖೆಗೆ ಸಲ್ಲಿಸಲಾದ ದಾಖಲೆಗಳು ತೋರಿಸುತ್ತವೆ.

ದೂರತಳ್ಳಲು ಮುಖ್ಯ ಕಾರಣವೆಂದರೆ, ಮಾವೋನಂತೆ ಪೋಷಾಕು ಧರಿಸಿಕೊಂಡು, ಷಿ ಜಿನ್ಪಿಂಗ್ ಮಾಡಿದ ರಣೋತ್ಸಾಹದ ಭಾಷಣ. “ಪಕ್ಷದ ಮಹಾಕಾರ್ಯದರ್ಶಿ ಹುದ್ದೆಯ ಮಹತ್ವದ ಸ್ಥಾನಮಾನವನ್ನು ನಾವು ಕಡ್ಡಾಯವಾಗಿ ಎತ್ತಿಹಿಡಿಯಬೇಕು..” ಆಗ್ರಿಹಿಸಿದ್ದು ಷಿ ಜಿನ್ಪಿಂಗ್, ಪಕ್ಷದ ಸೆಕ್ರೆಟರಿ ಜನರಲ್. ನಂತರ, ಅಧ್ಯಕ್ಷ ಷಿ ಜಿನ್ಪಿಂಗ್ ಮಹಾಕಾರ್ಯದರ್ಶಿ ಷಿ ಜಿನ್ಪಿಂಗ್ಗೆ ಹಾಗೂ ಪಕ್ಷಕ್ಕೆ ಮತ್ತು ಅಂತಿಂಥವರಿಗೆ ಅಭಯ ನೀಡಿ, “ಚೈನಾವನ್ನು ಪೀಡಿಸಲು, ದಬ್ಬಾಳಿಕೆ ಮಾಡಲು ಅಥವಾ ಅಧೀನ ಪಡಿಸಿಕೊಳ್ಳಲು ಪ್ರಯತ್ನಿಸುವವರ ತಲೆಯನ್ನು 1.4 ಬಿಲಿಯನ್ ಚೀನಿಯರಿಂದ ನಿರ್ಮಿತವಾದ ಅದ್ಭುತ ಉಕ್ಕಿನ ಗೋಡೆಗೆಗ್ರೇಟ್ ವಾಲ್ ಆಫ್ ಸ್ಟೀಲ್ಗೆ ಜಜ್ಜಿ, ರಕ್ತ ತರ್ಪಣಗೈಯ್ಯಲಾಗುವುದು.” ಬಳಿಕ, ಷಿ ಜಿಂಗ್ಪಿಂಗ್, ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್) ಮಹಾದಂಡನಾಯಕ, ಮಹಾ ಕಾರ್ಯದರ್ಶಿ ಷಿ ಜಿಂಗ್ಪಿಂಗ್ಗೆ ಅಭಯ ನೀಡಿ, ಪಿಎಲ್ ಅಗ್ರಗಣ್ಯ ಮತ್ತು ಪ್ರಪ್ರಥಮವಾಗಿ ಪಕ್ಷದ ಸೇನೆಯಾಗಿದ್ದು, ದ್ವಿತೀಯವಾಗಿ, ರಾಷ್ಟ್ರದ ಸೈನ್ಯ.. ಎಂದದ್ದು. ಭಾಷಣದಿಂದ ಬಾಕಿ ಜಗತ್ತು ಅರ್ಥ ಮಾಡಿಕೊಳ್ಳಬೇಕಾದ್ದೇನಿದೆ?

ಪಶ್ಚಿಮದ ಕಡೆಗೆ ಬೆರಳು ತೋರಿದ ಷಿ ಜಿಂಗ್ಪಿಂಗ್ ಕೆಟ್ಟ ಭಾವದಿಂದ ಕೂಡಿದ ಭಾಷಣದಿಂದ ಒಂದು ಸೂಚನೆಯಂತೂ ಸ್ಪಷ್ಟ. ಚೈನಾದಲ್ಲಿ ಮೂರೂ ಅಧಿಕಾರ ಕೇಂದ್ರಗಳನ್ನು ಯಾರು ನಿಯಂತ್ರಿಸುತ್ತಾರೋ, ಅವರಿಗೆ ಈಗಲೂ ಅವರ ಅಧಿಕಾರ, ಸ್ಥಾನಮಾನ ಮತ್ತು ಅಧಿಕಾರಾವಧಿ ಬಗ್ಗೆ ಖಚಿತತೆ ಇಲ್ಲ. ಧ್ವನಿ ನಿಶ್ಚಿತವಾಗಿಯೂ ಭಯಭೀತ ಮತ್ತು ಅಧಿಕಾರ ಯಂತ್ರದ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಿರುವ, ಪದಚ್ಯುತ ಗೊಳಿಸಬಹುದಾದ ಆತಂಕ ಮನೆಮಾಡಿದ ಮತ್ತು ಆರ್ಥಿಕ ಮಂದಗತಿ ಸಿಸಿಪಿಗೆ ತಂದೊಡ್ಡಿದ ಬೆದರಿಕೆಯ ಕಾರಣದಿಂದ, ಆತನ ಮತ್ತು ಆತ ಹೊಂದಿದ ಅಧಿಕಾರದ ಮೇಲಿನ ಹಿಡಿತ ಸಡಿಲಗೊಳ್ಳುತ್ತಿರುವ ಸೂಚನೆ.

ಜೊತೆಗೆ, ಚೈನಾದ ಪ್ರತಿಯೊಬ್ಬ ಜಟ್ಟಿಬಲದ ಗಟ್ಟಿಗನಂತೆ, ಷಿ ಕೂಡ, ಸಹಿಸಲಸಾಧ್ಯವಾದ ದುಃಸ್ವಪ್ನಗಳಿಂದ ಬಳಲಿರಬಹುದು. ಅದು ಷಿನ್ಜಿಯಾಂಗ್, ತೈವಾನ್ ಅಥವಾ ಟಿಬೆಟ್ ದಂಗೆಗಳಿರಬಹುದು ಅಥವಾ ಆಂತರಿಕ ಕಲಹ ಆಗಿರಲೂಬಹುದು. ಪರಸ್ಪರ ಒಳ ಕೂಟ ನೀತಿಯ ಬಗ್ಗೆ ಇಲ್ಲಿ ಉಲ್ಲೇಖಿಸದಿರುವುದು ಉತ್ತಮ. ಪರಮಪೂಜ್ಯ ದಲಾಯಿ ಲಾಮಾ ಅವರ ಹುಟ್ಟುಹಬ್ಬಕ್ಕೆ ಹರಿದು ಬಂದ ಮಿಲಿಯನ್ಗಟ್ಟಲೇ ಶುಭಾಶಯಗಳಲ್ಲಿ, ಪ್ರಧಾನಮಂತ್ರಿ ಮೋದಿ ಅವರ ಹಾರೈಕೆಯೂ ಸೇರಿದ್ದು, ಮತ್ತಷ್ಟು ಅಸ್ವಸ್ಥತೆ ಹೆಚ್ಚಿಸುವಲ್ಲಿ ಇನ್ನೊಂದು ಸೇರ್ಪಡೆಯಾಗಿರಬಹುದು.

ಶತಮಾನೋತ್ಸವ ಆಚರಣೆ ಬಹುಶಃ ಪಕ್ಷಕ್ಕೆ ಸ್ತುತಿ ಗೀತೆಗಳನ್ನು ಸಮರ್ಪಿಸುವ ಸಂದರ್ಭ ಒದಗಿಸುವುದಾಗಿತ್ತೇನೋ.. ಆದರೆ, ಸ್ಪಷ್ಟವಾಗಿದ್ದು ಸಿಸಿಪಿ ಒಂದು ಸಂಸ್ಥೆಯಾಗಿ ಮತ್ತು ಯಾವ ಪ್ರಮುಖ ಸಿದ್ಧಾಂತಗಳ ಮೇಲೆ ನೂರು ವರ್ಷಗಳ ಹಿಂದೆ ಜನ್ಮ ತಾಳಿತೋ, ಎಲ್ಲವೂ ಗೌಣವೆಂಬಂತೆ ಈಗ ಅಪ್ರಸ್ತುತತೆಯತ್ತ ದಾಪುಗಾಲಿಕ್ಕುತ್ತಿರುವುದು.

1960ರಷ್ಟು ಹಿಂದೆಯೇ ಕಮ್ಯುನಿಸ್ಟ್ ಪಕ್ಷಗಳ ಪ್ರಭಾವಳಿ ಮತ್ತು ಜಾಗತಿಕ ಮಟ್ಟದಲ್ಲಿ ಕಮ್ಯುನಿಸ್ಟ್ ವಿಚಾರಧಾರೆ ಪ್ರಣೀತ ಕಲ್ಯಾಣರಾಜ್ಯದ ಪರಿಕಲ್ಪನೆಗೆ ಮಬ್ಬುಮುಸುಕಲು ಆರಂಭಿಸಿತ್ತು. ಸಿದ್ಧಾಂತದೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದ, ಪಶ್ಚಿಮದ ರಾಷ್ಟ್ರಗಳೊಂದಿಗೆ ಶಾಂತಿಯುತ ಸಹಬಾಳ್ವೆಗೆ ಸಹಮತ ವ್ಯಕ್ತಪಡಿಸುವಲ್ಲಿ ಚೈನಾ ಭಿನ್ನಮತ ತಾಳಿ ತಿರಸ್ಕರಿಸಿದ್ದು, ಸೋವಿಯತ್ ಯೂನಿಯನ್ ಅಮೆರಿಕೆಗೆ ಶರಣಾಗತಿ ಸೂಚಿಸಿದ್ದನ್ನು ಗಮನಿಸಿ (1962ರಲ್ಲಿ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ಪ್ರಸಂಗ), ಬೆಳವಣಿಗೆಗಳ ಪರಿಣಾಮವಾಗಿ 1963ರಲ್ಲಿÀ ಸೈನೋಸೋವಿಯತ್ ಬಿರುಕು, ಜಾಗತಿಕವಾಗಿ, ಭಾರತವೂ ಸೇರಿದಂತೆ ಕಮ್ಯುನಿಸ್ಟ್ ಪಕ್ಷಗಳಲ್ಲಿ ಮೂಡಿದ ಒಡಕುಗಳು.

ಆದರೆ ಆಗ, ಸಿಸಿಪಿ, ಮಾವೋಗಿಂತ ಬುದ್ಧಿವಂತರ ಮುಂದಾಳತ್ವದಲ್ಲಿ, ಮೂಲಾಕಾರ ಬದಲಿಸಿಕೊಂಡು, ಪಾಶ್ಚಿಮಾತ್ಯರನ್ನು ಮತ್ತು ಬಂಡವಾಳಶಾಹಿ ಗಳನ್ನು ಅಪ್ಪಿ, ಓಲೈಸಲು ಮೊದಲು ಮಾಡಿತು. ಸೋವಿಯತ್ ಯೂನಿ ಯನ್ ಕಮ್ಯುನಿಸ್ಟ್ ಪಕ್ಷವನ್ನೂ ಮೀರಿಸಿ, ಬದುಕಿತು.

ಶೀತಲ ಸಮರದ ಬಳಿಕ, ಸಿಸಿಪಿ ಪ್ರಸ್ತಾಪಿಸಿದ್ದು, “ಸಮೃದ್ಧಿ ಮೊದಲು, ಪಕ್ಷವಲ್ಲ.” ಬಳಿಕ ತುಂಬ ಚೆನ್ನಾಗಿಯೇ ಕಾರ್ಯನಿರ್ವಹಿಸಿತು ಕೂಡ.

ಆದರೆ ಪಕ್ಷದ ಕತೆ ಮುಗಿದಿದೆ, ಅಥವಾ ಮುಂಬರುವ ವರ್ಷಗಳಲ್ಲಿ ಮುಗಿಯಲಿದೆ, ಇದು ಕೇವಲ ಸಿಸಿಪಿ ನ್ಯೂನತೆಗಳ ಕಾರಣದಿಂದ ಮಾತ್ರವಲ್ಲ; ಏಕೆಂದರೆ ಜಾಗತಿಕವಾಗಿಯೇ ರಾಜಕೀಯ ಪಕ್ಷಗಳು ತಮ್ಮ ಪ್ರಸ್ತುತತೆಯನ್ನು ಇಂದಿಗೆ ಕಳೆದುಕೊಳ್ಳುತ್ತಿವೆ. ಪಕ್ಷಗಳು ಮತ್ತು ಸಿದ್ಧಾಂತಗಳು ಸಮಸ್ಯೆಗಳು ಮತ್ತು ವ್ಯಕ್ತಿUಳಾಗಿ ಅತ್ಯಂತ ವೇಗವಾಗಿ ಬದಲಾಗುತ್ತಿವೆ.

ರಾಜಕೀಯ ಪಕ್ಷಗಳು ಸದ್ಯ ಧ್ರುವೀಕರಣದ ಹಂತದಲ್ಲಿವೆ. ಅವುಗಳ ಪ್ರಣಾಳಿಕೆ ಮತ್ತು ಪ್ರದಾನಿಕೆಯ ಭಿನ್ನ ವಿಧಗಳೂ ಲೆಕ್ಕಕ್ಕಿಲ್ಲ. ಪಕ್ಷಗಳು ತಮ್ಮ ಪ್ರಸ್ತುತತೆ ಕಳೆದುಕೊಳ್ಳುತ್ತಿವೆ ಅಥವಾ ಅವುಗಳ ಪ್ರಭಾವ ಕುಗ್ಗುತ್ತಿದೆ. ಸರ್ವಾಧಿಕಾರಿಗಳು ಮತ್ತು ನಿರಂಕುಶಮತಿಗಳು ರಾಜಕೀಯ ಪಕ್ಷಗಳ ಪ್ರತಿ ತಿರಸ್ಕಾರ ಭಾವವನ್ನು ಬೆಳೆಸಿಕೊಂಡು ಬಂದಿದ್ದಾರೆ.

ಆಗಾಗ, ಸಾಧ್ಯವಾದಾಗಲೊಮ್ಮೆ ಅವರು ಪಕ್ಷಗಳನ್ನು ಕಿತ್ತೊಗೆದಿದ್ದಾರೆ ಅಥವಾ ಅವರೊಂದಿಗೆ ಕಾದಾಡಿ ಅಧಿಕಾರ ಕಿತ್ತುಕೊಂಡಿದ್ದಾರೆ. ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳಲ್ಲೂ ಕೂಡ, ಪಕ್ಷಗಳ ಸ್ವಭಾವ ಬದಲಾಗಿದೆ. ಈಗ ಅವು ಸಿದ್ಧಾಂತಗಳನ್ನು ಪ್ರತಿಪಾದಿಸುವ, ನೆಚ್ಚಿಕೊಂಡಿರುವ ಕೈದೀವಿಗೆಯಾಗಿ ಉಳಿದಿಲ್ಲ. ಮೌಲ್ಯಾದರ್ಶಗಳು ಮತ್ತು ಸಿದ್ಧಾಂತಗಳ ಮಧ್ಯದ ವಿರೋಧಾಭಾಸಗಳಾಗಿ, ಸ್ವಂತಿಕೆಯನ್ನೂ ತೂರಿಕೊಂಡು ಪಡಪೋಷಿಯಂತೆ ಪೈಪೋಟಿಗಿಳಿದಿವೆ. ಬಿಡಿ ಇನ್ನು ಉದಾತ್ತವಾದ ಸಂವಿಧಾನದ ಆಶಯಗಳನ್ನು ಇವು ಹೇಗೆ ಎತ್ತಿಹಿಡಿದಾವು..

ನಿಟ್ಟಿನಲ್ಲಿ ಯುರೋಪಿನ ರಾಷ್ಟ್ರಗಳು ತುಂಬ ಎಚ್ಚರಿಕೆಯಿಂದ ಬೆಳವಣಿಗೆಗಳನ್ನು ಒಂದು ಬದಿಯಿಂದ ಗಮನಿಸುತ್ತಿದ್ದು, ಮತ್ತೊಂದು ಕಡೆಯಿಂದ, ನವ ರಾಜಕೀಯದತ್ತ ಜಾಗ್ರತೆಯಿಂದ ಹೆಜ್ಜೆಹಾಕಲು ಹೆಚ್ಚು ಉತ್ಸುಕತೆಯಿಂದ ಪ್ರಯತ್ನಿಸುತ್ತಿವೆ. ಅವುಗಳ ಪೈಕಿ ಬಹುತೇಕ ರಾಷ್ಟ್ರಗಳು ಪಕ್ಷ ಆಧಾರಿತ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಗೆ ಪರ್ಯಾಯವಾಗಿ ನವ ಮಾದರಿ ರೂಪಿಸಲು ಆಲೋಚಿಸುತ್ತಿವೆ.

ಫ್ರಾನ್ಸ್ 2019ರಲ್ಲಿ, ಹವಾಮಾನ ಕುರಿತ ನಾಗರಿಕ ಸಮಾವೇಶ ಆಯೋಜಿಸಿ, ಯಾದೃಚ್ಛಿಕವಾಗಿ 150 ಜನ ನಾಗರಿಕರನ್ನು ಆಯ್ದು, ಹಸಿರು ಮನೆ ಅನಿಲಗಳ ಅಡ್ಡ ¥ರಿಣಾಮಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿ ಸಲು ತಾಳಿಕೆ ಮತ್ತು ಬಾಳಿಕೆ ಬರಬಹುದಾದ (ಸುಸ್ಥಿರ ಕಲ್ಪನೆ ಈಗಿಲ್ಲ) ಸಮಾಜೋಸುದೃಢ ಆರ್ಥಿಕಹೊರೆ ರಹಿತ, ನ್ಯಾಯೋಚಿತವಾದ ಪರಿಣಾಮಕಾರಿ ವ್ಯವಸ್ಥೆ ರೂಪಿಸುವಲ್ಲಿ ಸಹಾಯಸಹಕಾರ ಕೋರಿತು.

ಐರ್ಲೆಂಡ್ ಸಂಸತ್ತು ಕಳೆದ 2016 ರಲ್ಲಿ, ತನ್ನ ನಾಗರಿಕರ ಸಭೆ ಕರೆದು, ಗರ್ಭಪಾತದ ಸಾಂವಿಧಾನಿಕ ನಿಷೇಧ ಸೇರಿದಂತೆ ಅಂತಹುದೇ ಅನೇಕ ವಿವಾದಾತ್ಮಕ ಸಮಸ್ಯೆಗಳ ಕುರಿತು, ವಿಷಯಬದ್ಧ ಚರ್ಚೆಗೆ ಮತ್ತು ಸೂಕ್ತ ಪರಿಹಾರ ಸೂಚಿಸಲು ವೇದಿಕೆ ಕಲ್ಪಿಸಿತ್ತು. ಬಹುಮತದ ಅಭಿಪ್ರಾಯ ಗರ್ಭಪಾತದ ಮೇಲಿನ ನಿಷೇಧವನ್ನು ರದ್ದು ಪಡಿಸುವಂತೆ ಸೂಚಿತವಾದÀ ಹಿನ್ನೆಲೆ, ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹದ ಅನುಮೋದನೆಯ ಪರಿಣಾಮ, ಕಾನೂನು ಈಗ ಬದಲಾಯಿಸಲ್ಪಟ್ಟಿದೆ. ಎಲ್ಲವೂ ಪ್ರಜಾಪ್ರಭುತ್ವದ ನಿರ್ಧಾರಿತ ಮಾನದಂಡಗಳ ಅಡಿಯಲ್ಲೇ ನಡೆದಿದೆ. ಆದರೆ, ರಾಜಕೀಯ ಪಕ್ಷಗಳ ಒಳಗೊಳ್ಳುವಿಕೆ ಇಲ್ಲದೇ ಪ್ರಕ್ರಿಯೆ ಪೂರ್ಣಗೊಂಡಿದೆ.

ಅಮೆರಿಕೆಯಲ್ಲಿ, ಕಳೆದ 2019 ರಲ್ಲಿ, ಶೇ.38 ರಷ್ಟು ಜನ, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಎರಡು ಬಹುದೊಡ್ಡ ಪಕ್ಷಗಳ ಜೊತೆ ಗುರುತಿಸಿಕೊಳ್ಳಲು ನಿರಾಕರಿಸಿದರು. ಕಾರಣ, ಎರಡೂ ಪಕ್ಷಗಳನ್ನು ಜನ ಗ್ರಹಿಸಿದ್ದು ಹೀಗೆ. ತಮ್ಮ ಆಶೋತ್ತರಗಳನ್ನು ಇವು ಪ್ರತಿನಿಧಿಸಲಾರವು ಮತ್ತು ಹತಾಶವಾಗಿ ಭ್ರಷ್ಟವಾಗಿದ್ದು, ಗಣ್ಯರಿಂದ ಅಪಹರಿಸಲ್ಪಟ್ಟ ಪಕ್ಷಗಳು ಎಂದು.

ಬೆಳವಣಿಗೆ, 1976ರಲ್ಲಿ ಜಾರ್ಜ್ ವಾಷಿಂಗ್ಟನ್ ರಾಜಕೀಯ ಪಕ್ಷಗಳನ್ನು ಟೀಕಿಸಿದ ರೀತಿಯನ್ನು ಸಮರ್ಥಿಸಿದಂತಿತ್ತು. “ಪಕ್ಷಗಳು ಕುತಂತ್ರಿ, ಮಹತ್ವಾಕಾಂಕ್ಷೆಯ ಮತ್ತು ತತ್ವರಹಿತ ಜನರಿಗೆ ಅವಕಾಶ ನೀಡಿ, “ಜನಸಾಮಾನ್ಯರನ್ನು ಅವರ ಅಧಿಕಾರಗಳಿಂದ ವಂಚಿತತರನ್ನಾಗಿಸುತ್ತಿವೆ..”

ಭಾರತದ ರಾಜಕೀಯ ಪಕ್ಷಗಳು, ಕೂಡ, ಅದೇ ದೋಣಿಯಲ್ಲಿ ಪ್ರಯಾಣಿಸುತ್ತಿರುವ ಸಹಪ್ರಯಾಣಿಕರಂತಿವೆ. ತತ್ವಸಿದ್ಧಾಂತಗಳನ್ನಾಧರಿಸಿದ ಮತ್ತು ಶ್ರೇಣಿ (ಕೇಡರ್)-ಆಧಾರಿತ ಪಕ್ಷ ಬಿಜೆಪಿಯಿಂz ಹಿಡಿದು, ರಾಜವಂಶಕೇಂದ್ರಿತ ಕಾಂಗ್ರೆಸ್ ಪಕ್ಷದ ವರೆಗೆ, ಅಥವಾ ಕುಟುಂಬದ ಸ್ವತ್ತು ಎಂಬಂತೆ ಕೌಟುಂಬಿಕ ರಾಜಕಾರಣಕ್ಕೆ ಮೀಸಲಾದÀ ಪ್ರಾದೇಶಿಕ ಪಕ್ಷಗಳ ತನಕ, ಎಲ್ಲವೂ. ಜಾಗತಿಕ ಪ್ರವೃತ್ತಿಯನ್ನು ಗಮನಿಸಿದರೆ, ಸಿದ್ಧಾಂತಗಳು ಕಾರ್ಯಸೂಚಿಗಳಾಗಿ, ತತ್ವಗಳು ಕಾರ್ಯಕ್ರಮಗಳಾಗಿ ಮತ್ತು ಸಾಂಸ್ಥಿಕ ಕಾರ್ಯನಿರ್ವಹಣಾ ಪದ್ಧತಿಯ ಚೌಕಟ್ಟು ವ್ಯಕ್ತಿತ್ವಶಾಹಿ ನಡಾವಳಿಯಾಗಿ ವಿವಿಧ ಹಂತಗಳಲ್ಲಿ ಬದಲಾಗಿದೆ. ಎಡ ಪಕ್ಷಗಳು ಬೆಳವಣಿಗೆಗಳಿಂದ ಬಾಧಿತವಾಗಿಲ್ಲ, ಆದರೆ, ಅವು ಈಗಾಗಲೇ ಅಪ್ರಸ್ತುತತೆ ಸಾಧಿಸಿಬಿಟ್ಟಿವೆ.

ಮೂಲ: ಡೆಕ್ಕನ್ ಹೆರಾಲ್ಡ್

Leave a Reply

Your email address will not be published.