ಅಫೀಮು ಯಾವ ಧರ್ಮದ್ದಾದರೂ ನಶೆ ಒಂದೇ!

ಸಂಪಾದಕೀಯ

ಹರಡುತ್ತಿರುವ ಮುಸ್ಲಿಂ ದ್ವೇಷ ಕುರಿತು ಒಮ್ಮೆ ಪ್ರಗತಿಪರ ಗೆಳೆಯರೊಬ್ಬರು ತಾವು ಸಿದ್ಧಪಡಿಸಿದ `ಜಂಟಿ ಪತ್ರಿಕಾ ಹೇಳಿಕೆಪ್ರತಿಯೊಂದನ್ನು ವಾಟ್ಸಾಪ್ನಲ್ಲಿ ಕಳಿಸಿ, `ಇದಕ್ಕೆ ನಿಮ್ಮ ಹೆಸರನ್ನು ಬಳಸಿಕೊಳ್ಳಬಹುದೇ?’ ಎಂದು ಕೇಳಿದರು. ಅವರಿಗೆ ನೀಡಿದ ಉತ್ತರ:

ಅಭ್ಯಂತರವಿಲ್ಲ. ಆದರೆ ಸಮಾನ ಮನಸ್ಕರು ಎಂದು ಗುರುತಿಸಿಕೊಳ್ಳುವ ನಮ್ಮಂತಹವರು ಇಂತಹ ಸಂದರ್ಭದಲ್ಲಿ ಈವರೆಗೆ ನೀಡುತ್ತಾ ಬಂದಿರುವ ಬಗೆಯ ಹೇಳಿಕೆಗಳ ಫಲಿತಾಂಶವನ್ನು ತುಸು ಪರಿಶೀಲಿಸುವ ಅಗತ್ಯವಿದೆ. ಇಲ್ಲದಿದ್ದರೆ ಇಂತಹ ಒಮ್ಮುಖದ ಟಿಪ್ಪಣಿಯನ್ನು ನಾವೇ ತಯಾರಿಸಿ, ನಾವೇ ಪ್ರಕಟಿಸಿ, ನಾವೇ ಓದಿ ಸುಮ್ಮನಾಗಬೇಕಷ್ಟೇ.

ಮುಸ್ಲಿಂ ದ್ವೇಷವನ್ನು ವ್ಯವಸ್ಥಿತವಾಗಿ, ಉದ್ದೇಶಪೂರ್ವಕವಾಗಿ ಹರಡುವವರ ಮನಃಪರಿವರ್ತನೆ ಕಾರ್ಯ ವ್ಯರ್ಥ. ಆದರೆ ತಪ್ಪು ತಿಳಿವಳಿಕೆಯಿಂದ, ಮಾಹಿತಿ ಕೊರತೆಯಿಂದ, ಹಾದಿತಪ್ಪಿಸುವವರ ದೆಸೆಯಿಂದ ಅನ್ಯ ಕೋಮಿನವರನ್ನು ಅನುಮಾನಿಸುತ್ತಿರುವ ಬಹುದೊಡ್ಡ ಸಂಖ್ಯೆಯ ಸಾಮಾನ್ಯ ಜನರನ್ನು ಖಂಡಿತವಾಗಿ ತಿದ್ದಲು ಸಾಧ್ಯ; ಅದು ಅಗತ್ಯವಾಗಿ ಆಗಬೇಕಾದ ಕೆಲಸ. ಆದರೆ ಅವರಿಗೆ ತಿಳಿ ಹೇಳುವವರ ಬಗ್ಗೆ ವಿಶ್ವಾಸವಿರಬೇಕು. ಅಂತಹ ವಿಶ್ವಾಸ ಮೂಡಿಸುವ ನಿಷ್ಪಕ್ಷಪಾತ ವರ್ತನೆ, ಧೋರಣೆಯನ್ನು ನಾವು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ.

ವಿಚಾರವಾದಿಗಳು, ಪ್ರಗತಿಪರರು ಎಂದರೆ ಒಂದು ಕೋಮನ್ನು ಓಲೈಸುವವರು; ಧರ್ಮದ ಹುಳುಕುಊನಗಳನ್ನು ಕುರಿತು ಮಾತಾಡದವರು ಎಂಬ ಸಾರ್ವತ್ರಿಕ ಅಸಮಾಧಾನ ನಮ್ಮ ಗಮನದಲ್ಲಿರಬೇಕು. ಹಿನ್ನೆಲೆಯಲ್ಲಿ ನೀವು ಸಿದ್ಧಪಡಿಸಿರುವ ಹೇಳಿಕೆಯ ಆರಂಭದಲ್ಲಿ ಇಂತಹ ವಾತಾವರಣಕ್ಕೆ ಕಾರಣವಾಗಿರುವ ಕೆಲವು ಮುಸ್ಲಿಂ ಅವಿವೇಕಿಗಳ ನಡವಳಿಕೆ, ಅವಾಂತರಗಳನ್ನು ನಿರ್ದಿಷ್ಟವಾಗಿ, ನಿಖರವಾಗಿ ಖಂಡಿಸಬೇಕು.

*

ಸಮಗ್ರ ದೃಷ್ಟಿಕೋನ ಇರಿಸಿಕೊಂಡವರಿಗೆ ಅನೇಕ ಸಲ ಒಂದು ಅನುಮಾನ ಕಾಡುತ್ತದೆ. ರಾಜಕಾರಣಿಗಳು ಲಾಭಕ್ಕಾಗಿ ತಮಗೆ ಅನುಕೂಲವಾಗುವ ಧರ್ಮಜಾತಿಗಳನ್ನು ಬಳಸಿಕೊಂಡುಓಟ್ ಬ್ಯಾಂಕ್ಸೃಷ್ಟಿಸಿಕೊಂಡಂತೆ ಪ್ರಗತಿಪರರು ತಮ್ಮ ಪ್ರತಿಪಾದನೆಯ ಅಬ್ಬರದಲ್ಲಿ ಅಲ್ಪಸಂಖ್ಯಾತರ ಮೌಢ್ಯ, ಅವೈಚಾರಿಕತೆ, ಕರ್ಮಠತನ ಮರೆಮಾಚುತ್ತಿರುವರೇ…? ಧಾರ್ಮಿಕ ಮೂಲಭೂತವಾದದ ಬಗ್ಗೆ ಮಾತನಾಡುವುದು ನಷ್ಟದ ಬಾಬತ್ತು ಎಂದು ರಾಜಕಾರಣಿಗಳು ಭಾವಿಸುವುದು ಸಹಜ. ಆದರೆ ವಿಚಾರವಂತರೇಕೆ ಬಗ್ಗೆ ನಿಷ್ಠುರವಾಗಿ, ಗಟ್ಟಿಯಾಗಿ ಮಾತನಾಡಲೊಲ್ಲರು…?

ಇಂತಹ ಪಕ್ಷಪಾತದ ಧೋರಣೆ ಮತ್ತು ವರ್ತನೆಯಿಂದ ಒಂದೆಡೆ ಬಹುಸಂಖ್ಯಾತರ ಅಪನಂಬಿಕೆ ಇನ್ನೊಂದೆಡೆ ಅಲ್ಪಸಂಖ್ಯಾತರ ಯಥಾಸ್ಥಿತಿಗೆ ನೀರೆರೆಯುವಿಕೆ ಸಾಧಿಸಿದಂತಾಗುವುದು ಕಹಿಸತ್ಯ. ಅಫೀಮು ಯಾವ ಧರ್ಮದ್ದಾದರೂ ನಶೆ ಒಂದೇ!

ಸಂದರ್ಭ ಬಂದಾಗ ಅಶಕ್ತರು, ಅಲ್ಪಸಂಖ್ಯಾತರು, ಅಶಿಕ್ಷಿತರು, ಅಸಹಾಯಕರ ಪರ ನಿಲ್ಲುವುದು ಮನುಷ್ಯ ಧರ್ಮ. ಅಂತಹವರ ರಕ್ಷಣೆ ಕೂಡಾ ನಾಗರಿಕ ಸಮಾಜದ ಜವಾಬ್ದಾರಿ. ಆದರೆ ರಕ್ಷಣೆ ಶಾಶ್ವತ ಆಗಬೇಕಿಲ್ಲ. ಅವರಲ್ಲಿ ತಮ್ಮನ್ನು ತಾವೇ ಕಾಪಾಡಿಕೊಳ್ಳುವ ಸಾಮಥ್ರ್ಯ, ಪ್ರಜ್ಞಾವಂತಿಕೆ ಬೆಳೆಸುವ ಕರ್ತವ್ಯವನ್ನು ಸಮಾಜ ನಿಭಾಯಿಸಬೇಕು. ರಕ್ಷಣೆ ಮತ್ತು ಸುಧಾರಣೆ ಒಟ್ಟೊಟ್ಟಿಗೇ ಚಲಿಸುವುದು ಪ್ರಗತಿಪರ ಲಕ್ಷಣ. ಕಾಲದ ಅಗತ್ಯ ಮತ್ತು ಬೇಡಿಕೆಗೆ ತಕ್ಕಂತೆ ಸುಧಾರಣೆಬದಲಾವಣೆ ಅಳವಡಿಸಿಕೊಳ್ಳುವುದು ವ್ಯಕ್ತಿ, ದೇಶ, ಭಾಷೆ, ಧರ್ಮ, ವ್ಯವಸ್ಥೆಗೆ ಅನಿವಾರ್ಯ. ಪ್ರಜ್ಞಾಪೂರ್ವಕವಾಗಿ ಬದಲಾವಣೆಗೆ ಪಕ್ಕಾಗದೇ ಉಳಿಯುವುದೆಂದರೆ ಕಾಲದ ಓಟದಲ್ಲಿ ಹಿಂದುಳಿಯುವುದೆಂದೇ ಅರ್ಥ.

ಧಾರ್ಮಿಕತೆಗೆ ತಗುಲಿಕೊಂಡ ಸಾಮಾಜಿಕ ಸುಧಾರಣೆಯಂತಹ ಸೂಕ್ಷ್ಮ ವಿಚಾರಗಳನ್ನು ಸಾಮಾನ್ಯವಾಗಿ ಖಾಸಗಿಯಾಗಿ ಮಾತನಾಡಿಕೊಳ್ಳುವುದೇ ಹೆಚ್ಚು. ಇಂತಹ ವಿಷಯಗಳನ್ನು, ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಲು ಅನೇಕರು ಹಿಂಜರಿಯುತ್ತಾರೆ. ಇದಕ್ಕೆ ಅಪವಾದವೆಂಬಂತೆ ಮುಸ್ಲಿಮರ ಸಾಮಾಜಿಕ ಸುಧಾರಣೆಯಂತಹ ಬಹುಮುಖ್ಯ ವಿಷಯವನ್ನು ನಿಮ್ಮಸಮಾಜಮುಖಿಮುಖ್ಯಚರ್ಚೆಗೆ ಒಡ್ಡುವ ಮೂಲಕ ಮುನ್ನೆಲೆಗೆ ತಂದಿದೆ. ನೀವೂ ದನಿ ಸೇರಿಸಿ.

ಸಂಪಾದಕ

Leave a Reply

Your email address will not be published.