ಅಭಿವೃದ್ಧಿಯ ವಿರೋಧಾಭಾಸ

ಡಾ.ಎ.ರವೀಂದ್ರ ಅವರ ‘ಗವರ್ನಿಂಗ್ ಅ್ಯನ್ ಇಂಡಿಯನ್ ಸ್ಟೇಟ್‍ ಕರ್ನಾಟಕ ಇನ್ ಫೋಕಸ್’ ಕೃತಿಯಿಂದ ಆಯ್ದ ‘ದಿ ಡೆವಲೆಪ್‍ಮೆಂಟ್ ಪ್ಯಾರಾಡಾಕ್ಸ್’ ಸಂಗ್ರಹಾನುವಾದ.

ರಾಜ್ಯಶಾಸ್ತ್ರಜ್ಞ ಸಂದೀಪ್ ದೇಸಾಯಿ ಅವರು ಕೃತಿಯ ಬೆನ್ನುಡಿಯಲ್ಲಿ ಹೇಳಿದಂತೆ: ಈ ಪುಸ್ತಕದ ಮೂಲ ಉದ್ದೇಶ ಭಾರತದ ರಾಜ್ಯಗಳಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಹೇಗೆ ಆಡಳಿತ ನಡೆಸಲ್ಪಡುತ್ತದೆ ಎಂಬುದನ್ನು ಪರಿಶೀಲಿಸುವುದಾಗಿದೆ. ಬೃಹತ್ತಾದ ಮತ್ತು ವೈವಿಧ್ಯದಿಂದ ಕೂಡಿದ ನಮ್ಮ ದೇಶದಲ್ಲಿ ಪ್ರತಿಯೊಂದು ರಾಜ್ಯವೂ ವಿಶಿಷ್ಟವಾಗಿರುತ್ತದೆ. ಹಾಗಾಗಿ ತನ್ನದೇ ಆದ ಭಾಷೆ, ಸಂಸ್ಕೃತಿ, ಪರಂಪರೆ, ಆರ್ಥಿಕಾಭಿವೃದ್ಧಿಯ ಸ್ಥಾನ ಹೊಂದಿರುವ ರಾಜ್ಯಗಳನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡಬೇಕಾಗುತ್ತದೆ.

ಬಹುಚರ್ಚೆಗಳ ಬಳಿಕ ರೂಪುಗೊಂಡಿರುವ ನಮ್ಮ ಸಂವಿಧಾನವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಾಗೂ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಅಧಿಕಾರವನ್ನು ಹಂಚಿಕೆ ಮಾಡಿದೆ. ಆದಾಗ್ಯೂ ನೀತಿ ಮತ್ತು ಆಚರಣೆ, ಕಾನೂನು ಮತ್ತು ಅದರ ಕಾರ್ಯರೂಪ ಕುರಿತಂತೆ ಬಹಳಷ್ಟು ಅಂತರ ಕಾಣಿಸುತ್ತದೆ. ಈ ಇಜ್ಜೋಡಿತನ ಮತ್ತು ವಾಸ್ತವಿಕ ಚಿತ್ರಣವನ್ನು ಕಟ್ಟಿಕೊಡುವುದು ಈ ಕೃತಿಯ ಕೇಂದ್ರ ಗುರಿ.

Governing an Indian State

Karnataka in Focus

– A. Ravindra Siya

publishing House

New Delhi – 110084

Imprint: 2019, Price: Rs.795

ರಾಜಕಾರಣ ಮತ್ತು ಸಾರ್ವಜನಿಕ ಆಡಳಿತಗಳ ಮೂಲ ಉದ್ದೇಶ, ದೇಶದ ಮತ್ತು ಜನರ ಆರ್ಥಿಕ ಅಭಿವೃದ್ಧಿ. ಸರ್ಕಾರದ ಕಾರ್ಯನೀತಿಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳು ಈ ಉದ್ದೇಶವನ್ನುಈಡೇರಿಸುವುದಾಗಿವೆ. ಭಾರತದಂತಹ ಅಭಿವೃದ್ಧಿಶೀಲ  ಹಾಗೂ ಸಂಕೀರ್ಣ ಪ್ರಜಾಪ್ರಭುತ್ವದಲ್ಲಿಅಭಿವೃದ್ಧಿಯ ಪಥ, ಭಾರೀ ಸವಾಲುಗಳೊಂದಿಗೆ ತಳಕು ಹಾಕಿಕೊಂಡಿರುತ್ತದೆ.

ಭಾರತ: ಬೆಳವಣಿಗೆಯ ದೃಷ್ಟಿಕೋನ
ಭಾರತದ ಬೆಳವಣಿಗೆ ಕಥನವು ವಿರೋಧಾಭಾಸ ಒಡಪುಗಳಿಂದ ಕೂಡಿದ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗಳನ್ನು ಪ್ರತಿನಿಧಿಸುತ್ತದೆ. 1950ರ ದಶಕದ ಇನ್ನಿಲ್ಲದ ಬಡತನ, ನಿರುದ್ಯೋಗ, ಅನಾರೋಗ್ಯ ಮತ್ತು ನಿರಕ್ಷರತೆಯ ಮಟ್ಟದಿಂದ 21ನೆಯ ಶತಮಾನದ ದಾಪುಗಾಲಿಡುತ್ತಿರುವ ಆರ್ಥಿಕ  ವ್ಯವಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ಸ್ವಾತಂತ್ರ್ಯೋತ್ತರದ  ಕಳೆದ 70 ವರ್ಷಗಳ ಸಮಾಜೋ-ಆರ್ಥಿಕ ಅಭಿವೃದ್ಧಿಯನ್ನು ಎರಡು ಹಂತಗಳಾಗಿ ವಿಭಾಗಿಸಿಕೊಳ್ಳಬಹುದು. 1947 ರಿಂದ 1992 ರವರೆಗಿನ 45 ವರ್ಷಗಳು ಅಂದಿನ ಆರ್ಥಿಕ ಸಾಧನೆಗಳನ್ನು ಸರ್ಕಾರೀ ಸ್ವಾಮ್ಯವು ನಿಯಂತ್ರಿಸುತ್ತಿದ್ದ ಕಾಲ. 1990ರ ನಂತರದ ಎರಡನೆಯ ಹಂತವು ಆರ್ಥಿಕ ಸುಧಾರಣೆಗಳ, ಹೆಚ್ಚು ಹೆಚ್ಚು ಉದಾರವಾದೀ ಮಾರುಕಟ್ಟೆಯೆಡೆಗೆ ಸಾಗಿದ ಕಾಲ.  1934ರಲ್ಲೇ `ಭಾರತದಲ್ಲಿ ಯೋಜಿತ ಆರ್ಥಿಕತೆ’ ಎಂಬ ತಮ್ಮ ಪುಸ್ತಕದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರು ಸೂಚಿಸಿದ್ದಂತಹ `ಯೋಜನೆಗಳು, ಆರ್ಥಿಕ ಅಭಿವೃದ್ಧಿಯ  ಉಪಕರಣಗಳು’ ಎಂಬ ನಂಬಿಕೆಗೆ ಬದ್ಧರಾಗಿದ್ದ ಪ್ರಥಮ ಪ್ರಧಾನಿ ನೆಹರು ಅವರು 1950ರಲ್ಲಿ ಯೋಜನಾ ಆಯೋಗವನ್ನು ಸ್ಥಾಪಿಸಿದರು. `ದೇಶದ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಸಮತೂಕದಲ್ಲಿ ಬಳಸಬಹುದಾದ ಯೋಜನೆಗಳನ್ನು ರೂಪಿಸುವುದು’ ಆಯೋಗದ ಆದ್ಯ ಕೆಲಸವಾಗಿತ್ತು. ಜೊತೆಗೆ ಯೋಜನೆಯ ಯಶಸ್ವೀ ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳನ್ನೂ ಶಿಫಾರಸ್ಸು ಮಾಡಬೇಕಿತ್ತು.

ಲೇಖಕರು

ಡಾ.ಎ.ರವೀಂದ್ರ ಅವರು ದಕ್ಷ ಐಎಎಸ್‍ ಅಧಿಕಾರಿಯಾಗಿ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ; 2002ರಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರು. ಅಭಿವೃದ್ಧಿಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಮಾಡಿರುವ ಅವರು ನಗರ ಪ್ರದೇಶ ಮತ್ತು ಜಲನಿರ್ವಹಣೆಯಲ್ಲಿ ವಿಶೇಷ ತಜ್ಞರು.

ಆಸ್ತಿ ತೆರಿಗೆಯ ಸ್ವಯಂ ನಿಗದಿ ಯೋಜನೆ, ಬಾಂಡುಗಳ ಮೂಲಕ ನಗರ ಮೂಲ ಸೌಕರ್ಯಗಳಿಗೆ ಸಂಪನ್ಮೂಲ ಸಂಗ್ರಹಣೆ ಮೊದಲಾದ ಆಡಳಿತ ಸುಧಾರಣಾ ಯೋಜನೆಗಳನ್ನು ರೂಪಿಸಿದ ಶ್ರೇಯಸ್ಸು ರವೀಂದ್ರ ಅವರಿಗೆ ಸಲ್ಲುತ್ತದೆ.  4ನೇ ಹಂತದ ಕಾವೇರಿ ನೀರು ಸರಬರಾಜು ಮತ್ತು ಬೆಂಗಳೂರಿನ ಮೆಟ್ರೊ ರೈಲು ಯೋಜನೆಗಳು ಕೂಡ ಇವರಿಂದಲೇ  ಚಾಲನೆ  ಪಡೆದವು.

ನಿವೃತ್ತರಾದ  ನಂತರ ಕರ್ನಾಟಕ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿ, ಐ.ಐ.ಎಂ.ನಲ್ಲಿ ಹಿರಿಯ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸುಸ್ಥಿರ ಅಭಿವೃದ್ಧಿ ಕೇಂದ್ರದ  ಮುಖ್ಯಸ್ಥರಾಗಿ ಕ್ರಿಯಾಶೀಲರಾಗಿದ್ದಾರೆ. ಅನೇಕ ವಿದ್ವತ್ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

1951ರಲ್ಲಿ  ಪ್ರಾರಂಭಿಸಿ 12 ಪಂಚವಾರ್ಷಿಕ ಯೋಜನೆಗಳು ಮತ್ತು 3 ಏಕವಾರ್ಷಿಕ ಯೋಜನೆಗಳನ್ನು ದೇಶವು ಹಾದು ಬಂದಿದೆ. ರಾಷ್ಟ್ರೀಯ ಆದಾಯವನ್ನು ಗರಿಷ್ಠಗೊಳಿಸುವುದು, ಕೃಷಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು, ಕ್ಷಿಪ್ರ ಕೈಗಾರಿಕೀಕರಣ ಮತ್ತು ಸಂಪೂರ್ಣ ಉದ್ಯೋಗ ಈ ಯೋಜನೆಗಳ ಪ್ರಧಾನ ಗುರಿಯಾಗಿತ್ತು. ಆರ್ಥಿಕ ಅಭಿವೃದ್ಧಿ ಯೊಂದಿಗೇ  ನಮ್ಮ ಸಂವಿಧಾನವು ಒಳಗೊಂಡಿರುವ DPSP (Directive principles of State Policy) ಅನ್ವಯ ಸಾಮಾಜಿಕ ನ್ಯಾಯವನ್ನುಒದಗಿಸುವುದೂ ಸಹ ಯೋಜನೆಯ ಒಂದು ಗುರಿ.

ಯೋಜನಾ ಯುಗದ ಮೊದಲ ಮೂರು ದಶಕಗಳಲ್ಲಿ ನಿಧಾನ ಪ್ರಗತಿ ಸಾಧನೆಯಾಯಿತು. ನಂತರ 1980ರ ದಶಕದಲ್ಲಿ ಮಧ್ಯಮ ವೇಗದ ಪ್ರಗತಿ ಸಾಧನೆಯಾಯಿತು. ಈ ಅವಧಿಯಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧ ನರದ್ಧತಿಯಂಥ  ಪ್ರಮುಖ ನಿರ್ಧಾರಗಳನ್ನು ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ತೆಗೆದುಕೊಂಡರು. ರಾಜೀವ್‍ ಗಾಂಧಿಯವರ ಕಾಲದಲ್ಲಿ ಕಂಪ್ಯೂಟರೀಕರಣಕ್ಕೆ ಒತ್ತು ನೀಡಲಾಯಿತು. ಆದಾಗ್ಯೂ  1990ರ  ವೇಳೆಗೆ ದೇಶವು ಆರ್ಥಿಕ  ಸಂಕಷ್ಟಕ್ಕೆ ಸಿಲುಕಿತು. ವಿದೇಶಿ ವಿನಿಮಯದ ಮೀಸಲು ಧನ ಆತಂಕ ಕರವಾಗಿ ಕುಸಿದಿತ್ತು. 15 ದಿನಗಳ ಬಿಲ್ ಗಳನ್ನು ಪಾವತಿಸಬಹುದಾದಷ್ಟು ಮಾತ್ರ ನಗದು ಇತ್ತು. ಅದೊಂದು ಹತಾಶ ಪರಿಸ್ಥಿತಿ. ಅಂದಿನ ಪ್ರಧಾನಿ ಚಂದ್ರಶೇಖರ ಅವರು 20 ಕೋಟಿ ಡಾಲರ್ ಸಾಲ ಪಡೆಯಲು ಕಾಪಿಟ್ಟಿದ್ದ ಚಿನ್ನವನ್ನು ಒತ್ತೆ ಇಡಬೇಕಾಯಿತು.

1990ರ ದಶಕವು ಭಾರತದ ಆರ್ಥಿಕ ಇತಿಹಾಸದಲ್ಲಿ ಒಂದು ಸಂಕ್ರಮಣ ಕಾಲ. ಪ್ರಧಾನಿ ನರಸಿಂಹರಾವ್ ಅವರು ಅಂದಿನ ವಿಷಮ ಪರಿಸ್ಥಿತಿಯಲ್ಲಿ ಲೈಸೆನ್ಸ್ ರಾಜ್‍ ಅಥವಾ ಪರವಾನಗೀ ಶಾಹಿಯನ್ನು ಕೊನೆಗಾಣಿಸಿ ಔದ್ಯಮಿಕ ಮತ್ತು ಎಫ್.ಡಿ.ಐ. (ವಿದೇಶಿ ನೇರ ಹೂಡಿಕೆ) ನೀತಿಗಳನ್ನು ಉದಾರವಾಗಿ ಸಡಿಲಗಳಿಸಿದರು. ಮಾಹಿತಿ ತಂತ್ರಜ್ಞಾನದ ಜೊತೆಗೇ ಸೇವಾಕ್ಷೇತ್ರದ ಬೆಳವಣಿಗೆಯಿಂದಾಗಿ ಆರ್ಥಿಕತೆ ಮೇಲ್ಮುಖವಾಯಿತು. ಭಾರತವು ಇಂದು ಜಗತ್ತಿನ 6ನೆಯ ಬೃಹತ್‍ ಆರ್ಥಿಕ ವ್ಯವಸ್ಥೆಯಾಗಿದೆ. ಖರೀದಿ ಶಕ್ತಿ ಹೋಲಿಕೆ (Purchasing Power Parity)ಮಾನ ದಂಡದಲ್ಲಿ 4ನೆಯ ಸ್ಥಾನದಲ್ಲಿದೆ.

ಪೂರ್ವದ ರಾಜ್ಯಗಳಲ್ಲಿ ಒರಿಸ್ಸಾ ಹಲವಾರು ವಿಷಯಗಳಲ್ಲಿ ತನ್ನ ಹಿಂದಿರುವಿಕೆಯನ್ನು ಮುಂದುವರೆಸಿಕೊಂಡೇ ಬಂದಿದೆ. ಬಂಗಾಲವು ಕೈಗಾರಿಕೆಯಲ್ಲಿ ಕಮ್ಯುನಿಸ್ಟ್  ಆಡಳಿತದ ಮೂರು ದಶಕಗಳಲ್ಲೂ ನಿಂತ ನೀರಾಗಿಯೇ ಉಳಿದು ಕೊಂಡಿದೆ.

ಆರ್ಥಿಕ ಸಂರಚನೆಗಳು ಬದಲಾಗುತ್ತಿರುವ ಸಂಯೋಜನೆಯು ಸೇವಾಕ್ಷೇತ್ರದಲ್ಲಿಅಸಾಧಾರಣ ಬೆಳವಣಿಗೆಯನ್ನು ತೋರಿಸುತ್ತಿದೆ. ಆದರೆ ತಯಾರಿಕಾ ಕ್ಷೇತ್ರ ನಿಂತ ನೀರಾಗಿದೆ. ಕೃಷಿ ಇಳಿ ಮುಖವಾಗಿದೆ. ಖಾಸಗಿ ವಲಯವು ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಮೂಲ ಸೌಕರ್ಯ, ಟೆಲಿಕಾಂ, ವಿಮಾನಯಾನ ಮತ್ತು ಹೆದ್ದಾರಿ ಕ್ಷೇತ್ರಗಳಲ್ಲಿ ಎದ್ದು ಕಾಣುವ  ಲಾಭವಾಗಿದೆ. ಭಾರತದ ಬೆಳವಣಿಗೆಯ ಕಥನಕ್ಕೆ ಋಣಾತ್ಮಕ ಮುಖವೂ ಇದೆ. 1950ರಲ್ಲಿ ಶೇ.45ರಷ್ಟಿದ್ದ ಬಡತನಮಟ್ಟ ಶೇ. 22ಕ್ಕೆ ಇಳಿದಿದ್ದರೂ ನಮ್ಮಲ್ಲಿ 20 ಕೋಟಿಜನ ಬಡವರಿದ್ದಾರೆ. 1951ರಲ್ಲಿ ಶೇ.12.2 ಇದ್ದ ಸಾಕ್ಷರತೆಯು ಶೇ.75 ಆಗಿದೆ. ಆದರೆ ಜಾಗತಿಕವಾಗಿ ಅತ್ಯಂತ ಹೆಚ್ಚು ಜನ ಅನಕ್ಷರಸ್ಥರಿರುವುದು ನಮ್ಮಲ್ಲೇ (30 ಕೋಟಿ). ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 131ನೆಯ ಸ್ಥಾನದಲ್ಲಿದ್ದೇವೆ. ಸುಲಭವಾಗಿ ವ್ಯವಹಾರೋದ್ಯಮ ಮಾಡಲು ಇರುವ ಅನುಕೂಲಗಳ ಸೂಚ್ಯಂಕದಲ್ಲಿ(Ease of doing business index) 100ನೇ ಸ್ಥಾನ. ಜಾಗತಿಕ ಹಸಿರು ಸೂಚ್ಯಂಕದ ಪ್ರಕಾರ 119ಕ್ಕೆ 103ನೆಯ ಸ್ಥಾನದಲ್ಲಿದ್ದೇವೆ. ಹೆಚ್ಚುತ್ತಿರುವ ಕೃಷಿ ಸಂಬಂಧಿತ ಕ್ಷೋಭೆಯು ಗಂಭೀರವಾದ ವಿಷಯವಾಗಿದೆ.

ಬೆಳವಣಿಗೆ ಮತ್ತು ಅಭಿವೃದ್ಧಿಯ ಕಥನವನ್ನು ಪ್ರತ್ಯೇಕ ರಾಜ್ಯ ಅಥವಾ ಪ್ರದೇಶಗಳ ದೃಷ್ಟಿ ಕೋನಗಳಿಂದ ನೋಡಿದಾಗ ಅಖಿಲ ಭಾರತ ಅಂಕಿ ಅಂಶಗಳು ಮತ್ತು ಸರಾಸರಿಗಳು ದಾರಿ ತಪ್ಪಿಸಬಹುದು. ಉತ್ತರದ ಬಿಹಾರ, ಛತ್ತೀಸಘಢ, ಜಾರ್ಖಂಡ್, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶಗಳು ದಕ್ಷಿಣದ ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಹಾಗೂ ಪಶ್ಚಿಮದ ಗುಜರಾತ್ ಮತ್ತು ಮಹಾರಾಷ್ಟ್ರಗಳಿಗಿಂತ  ಬಹಳ  ಹಿಂದುಳಿದಿವೆ. ಪಂಜಾಬ್ ಮತ್ತು ಹರ್ಯಾಣಗಳು ಕೃಷಿ ಮತ್ತು ಸಣ್ಣ ಉದ್ದಿಮೆಗಳಲ್ಲಿ ಮುಂದಿವೆ. ಪೂರ್ವದ ರಾಜ್ಯಗಳಲ್ಲಿ ಒರಿಸ್ಸಾ ಹಲವಾರು ವಿಷಯಗಳಲ್ಲಿ ತನ್ನ ಹಿಂದಿರುವಿಕೆಯನ್ನು ಮುಂದುವರೆಸಿಕೊಂಡೇ ಬಂದಿದೆ. ಬಂಗಾಲವು ಕೈಗಾರಿಕೆಯಲ್ಲಿ ಕಮ್ಯುನಿಸ್ಟ್  ಆಡಳಿತದ ಮೂರು ದಶಕಗಳಲ್ಲೂ ನಿಂತ ನೀರಾಗಿಯೇ ಉಳಿದು ಕೊಂಡಿದೆ. ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾ ಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಾಗಳು ಭೌಗೋಳಿಕ ಪ್ರತಿಕೂಲಗಳಿಂದಾಗಿ ಹಿಂದೆ ಬಿದ್ದಿವೆ.

ಭಾರತದ ವೈವಿಧ್ಯ ಹೇಗಿದೆ ಯೆಂದರೆ, ಅದರ ಬೆಳವಣಿಗೆಯ ಕಥನವನ್ನು ಒಂದೇ ಕುಂಚದಲ್ಲಿ ಚಿತ್ರಿಸಲಾಗುವುದಿಲ್ಲ. ಆದ್ದರಿಂದ ಭಾರತದ ಅಭಿವೃದ್ಧಿಯ ವೈವಿಧ್ಯಮಯ ಅಂಶಗಳನ್ನು ಗ್ರಹಿಸಲು ರಾಜ್ಯಗಳನ್ನು ಮತ್ತು ಪ್ರದೇಶಗಳನ್ನು ಪ್ರತ್ಯೇಕವಾಗಿ ಪರಿಗಣಿಸುವುದು ಮುಖ್ಯ ವಾಗುತ್ತದೆ. ಇಲ್ಲಿ ಕರ್ನಾಟಕದ ಬೆಳವಣಿಗೆಯ ಕಥನವನ್ನು ಮತ್ತು ಅದು ಸಂಪೂರ್ಣ ಅಭಿವೃದ್ಧಿಯಾದ  ರಾಜ್ಯವಾಗಲು ಎದುರಿಸಬೇಕಾದ ಸವಾಲುಗಳ ಕಿರು ವಿಶ್ಲೇಷಣೆಯನ್ನು ಮಾಡಲಾಗಿದೆ.

ಕರ್ನಾಟಕ ಅಭಿವೃದ್ಧಿಯ ಮಾದರಿ
“ಭಾರತದ ಭೂಭಾಗದಲ್ಲಿ ಶೇ.5.8 ಇರುವ 5.05 ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕವನ್ನು ದೇಶದ ಮುಂದುವರೆದ ರಾಜ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. “ಉಳಿದ ಭಾರತ ಎದುರಿಸುತ್ತಿರುವ ಸವಾಲುಗಳು ಮತ್ತು ವೈರುಧ್ಯಗಳನ್ನು ಕರ್ನಾಟಕವೂ ಹೊಂದಿದೆ. ಸಂಭಾಳಿಸಲಾಗದ ಆಡಳಿತ, ಲಿಂಗ ಅಸಮಾನತೆ ಮತ್ತು ಪ್ರಾದೇಶಿಕ ಅಸಮತೋಲನಗಳ ಮುಂದುವರಿಕೆ ಹಾಗೂ ಎದ್ದು ಕಾಣುವಂತೆ ಹೆಚ್ಚುತ್ತಿರುವ ಗ್ರಾಮೀಣ ಮತ್ತು ನಗರದ ಅಂತರಗಳು ಬೆಂಗಳೂರಿನ ಅದ್ಭುತ ತಂತ್ರಜ್ಞಾನ ನೇತೃತ್ವದ ಬೆಳವಣಿಗೆಯಲ್ಲಿ ಮಿಳಿತವಾಗಿವೆ.” ಕಡೆಕೋಡಿ ಮತ್ತಿತರರ ಈ ವಿವರಣೆಯನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಅಗತ್ಯ.

ಹೊಸ ಮಾದರಿಯ ಅಭಿವೃದ್ಧಿಯನ್ನು ಹುಟ್ಟು ಹಾಕುವುದಕ್ಕಾಗಿ ತಂತ್ರಜ್ಞಾನ ನೇತೃತ್ವದ ಬೆಳವಣಿಗೆ ಮತ್ತು ವಿಕೇಂದ್ರೀ ಕರಣಗಳನ್ನು ಒಟ್ಟಾಗಿಯೇನೂ ನಿಯೋಜಿಸಲಿಲ್ಲ. ಚಾರಿತ್ರಿಕ ಕಾರಣಗಳು ಮತ್ತು ಸಾಂದರ್ಭಿಕ  ಪರಿಸ್ಥಿತಿಗಳಿಂದ ಇದು ಸೃಷ್ಟಿಯಾಯಿತು. 1980ರ ದಶಕದಲ್ಲಿ ಕಾಕತಾಳೀಯವೆಂಬಂತೆ ತಂತ್ರಜ್ಞಾನ ಕ್ರಾಂತಿಯು ಅಮೆರಿಕದಿಂದ ಬಂತು. ಹಾಗೆಯೇ ಹೊಸ ರಾಜಕೀಯ ಪಕ್ಷದ ಹೊಸ ರಾಜಕಾರಣದಿಂದ ಸ್ಥಳೀಯ ಆಡಳಿತ ಸುಧಾರಣೆ ಆಯಿತು. ಅಧಿಕಾರ ವರ್ಗಾವಣೆ ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿ ನಗರ ಸ್ಥಳೀಯ ಸಂಸ್ಥೆಗಳ ಸ್ವಾಯತ್ತತೆ ಬಹಳ ಕಡಿಮೆಯಾಗಿದ್ದು ಗಮನಿಸಬೇಕಾದ ಒಂದು ಅಂಶ.

ಅನುವಾದಕರು

ಪರಮೇಶ್ವರ ಗುರುಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್  ವಿಷಯದಲ್ಲಿ ಎಂ.ಎ. ಮಾಡಿದ್ದಾರೆ. ಇಂಗ್ಲಿಷ್‍ ಉಪನ್ಯಾಸಕರಾಗಿ  ವೃತ್ತಿ ಆರಂಭಿಸಿದ ಅವರು ಪರಿಸರ, ಮಾನವ ಹಕ್ಕುಗಳು, ದೃಶ್ಯ-ಶ್ರಾವ್ಯ ಮಾಧ್ಯಮ ಕ್ಷೇತ್ರಗಳಲ್ಲಿ ಆಸಕ್ತಿಯಿಂದ ತೊಡಗಿಸಿ ಕೊಂಡವರು. ಬೆಂಗಳೂರು  ಫಿಲ್ಮ್ ಸೊಸೈಟಿಯ ಕಾರ್ಯನಿರ್ವಾಹಕ  ಮಂಡಳಿ ಸದಸ್ಯರಾಗಿ, ಸಂವಹನ ಸಂಸ್ಥೆಯ ಮುಖ್ಯಸ್ಥರಾಗಿ, ಮಹಾರಾಜ ಕಾಲೇಜಿನ ಸಿನಿಮಾ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕರಾಗಿ ಸೇವೆಗೈದಿದ್ದಾರೆ.

ಸಾಹಿತ್ಯ, ಸಿನೆಮಾ ಮತ್ತು ಕಲೆಗಳ ತಾಂತ್ರಿಕ ಅಂಶಗಳ ಬಗ್ಗೆ ಕುತೂಹಲಿ. ಸುಮಾರು 200 ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಿನಿಮಾತ ಯಾರಿಕೆಯ ತರಬೇತಿ ಶಿಬಿರಗಳನ್ನು ನಡೆಸುತ್ತಾರೆ.

ಬೆಂಗಳೂರು ಮತ್ತಿತರ ನಗರಗಳ ಬೆಳವಣಿಗೆ ಕೈಗಾರಿಕೆ ಮತ್ತು ಸರ್ಕಾರದ ನೀತಿಗಳಿಂದ ಮುನ್ನಡೆಸಲ್ಪಟ್ಟಿತು. ಕರ್ನಾಟಕದ ಸಮಾಜೋ ಆರ್ಥಿಕ ವಿಶ್ಲೇಷಣೆಯಿಂದ ಅರ್ಥವಾಗುವುದೇನೆಂದರೆ, ಆರ್ಥಿಕ ಬೆಳವಣಿಗೆಯಲ್ಲಿ ಸರ್ಕಾರವು ಚೆನ್ನಾಗಿ ಕೆಲಸ ಮಾಡಿದೆ. ಆದರೆ ಮಾನವ ಅಭಿವೃದ್ಧಿಯಲ್ಲಿ  ಹಿಂದೆ ಬಿದ್ದಿದೆ. ತಂತ್ರಜ್ಞಾನ ಮತ್ತು ಸ್ಥಳೀಯ ಕ್ಷೇತ್ರಗಳಿಗೆ ಒತ್ತು ನೀಡಿದ್ದರಿಂದ ಕರ್ನಾಟಕವು `ಗಣ್ಯರ’ ಮಾದರಿಯ (ಎಲಿಟಿಸ್ಟ್) ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂದು ಕೆಲ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

1960-61 ರಿಂದ 2017-18ರ ವರೆಗಿನ ಒಟ್ಟುಆಂತರಿಕ ಉತ್ಪನ್ನ (ಜಿಡಿಪಿ) ಹಂಚಿಕೆಯಲ್ಲಿ ಕರ್ನಾಟಕವು ಸೇವಾಕ್ಷೇತ್ರದಲ್ಲಿ ಬಹಳ ಮುಂದಿದೆ. ಕೃಷಿಯಲ್ಲಿ ಹಿಂದಿದೆ. ಕೈಗಾರಿಕೆಯಲ್ಲಿ ಪರವಾಗಿಲ್ಲ. ಬಡತನ ಶೇ. 21ರ ಷ್ಟಿದ್ದು 1 ಕೋಟಿ ಮೂವತ್ತು ಲಕ್ಷ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ.

ಕರ್ನಾಟಕದ ಬೆಳವಣಿಗೆಯ ಪಥವನ್ನು ಗಮನಿಸಿದರೆ ರಾಜ್ಯದ ಒಟ್ಟು ಆದಾಯದಲ್ಲಿ ಬೆಂಗಳೂರಿನ ಕೊಡುಗೆ ಶೇ.60 ಇದೆ. ತಲಾ ವಾರ್ಷಿಕ ಆದಾಯದಲ್ಲಿ ಬೆಂಗಳೂರು ರಾಜ್ಯ ಸರಾಸರಿಯ 3.2 ಪಟ್ಟಿದೆ.  ಜಿಡಿಪಿಯಲ್ಲಿ ಹಿಂದಿರುವ ಚಿಕ್ಕಬಳ್ಳಾಪುರದ 11 ಪಟ್ಟು ಇದೆ.

ಯೋಜನಾ ಆಯೋಗವು 2007ರಲ್ಲಿ ಪ್ರಕಟಿಸಿರುವ ಕರ್ನಾಟಕ ಅಭಿವೃದ್ಧಿ ವರದಿಯ ಪ್ರಕಾರ:

• ಆದಾಯ, ಮಾನವ ಅಭಿವೃದ್ಧಿ, ಅಥವಾ ಆಡಳಿತ ಸೂಚಿಗಳ ಪ್ರಕಾರ ಕರ್ನಾಟಕವು ರಾಷ್ಟ್ರೀಯ ಸರಾಸರಿಗಿಂತ ಮೇಲಿದೆ.
• ಬೆಳವಣಿಗೆಯಲ್ಲಿ ವಿವಿಧ ಕ್ಷೇತ್ರಗಳ ಮತ್ತು ಪ್ರದೇಶಗಳ ನಡುವಿನ ಸಮತೋಲನ ಕಡಿಮೆಯಾಗುತ್ತಿದೆ.
• ವಿಕೇಂದ್ರೀಕರಣ ಮತ್ತು ಅನುಷ್ಠಾನ ಚೆನ್ನಾಗಿದ್ದು ಗ್ರಾಮ ಪಂಚಾಯಿತಿಗಳು ಒಳ್ಳೆಯ ಕೆಲಸ ಮಾಡಿವೆ.
• ತಂತ್ರಜ್ಞಾನ ಅಭಿವೃದ್ಧಿ, ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆ  ಹಾಗೂ ಒಳ್ಳೆಯ ಆಡಳಿತದಲ್ಲಿ ಕರ್ನಾಟಕವು ಯಾವಾಗಲೂ ತನ್ನ             ಸಾಮಥ್ರ್ಯವನ್ನು ತೋರಿಸಿದೆ.

ಮೂಲ (key)ಬೆಳವಣಿಗೆಯ ದೃಷ್ಟಿಕೋನದಿಂದ ಕರ್ನಾಟಕದ ಮುಂದಿರುವ ಸವಾಲುಗಳು ಹೀಗಿವೆ:

1. ಬರ-ಕೃಷಿ-ಜಲ
2. ಮಾನವ ಅಭಿವೃದ್ಧಿ
3. ಪ್ರಾದೇಶಿಕ ಅಸಮತೆ
4. ನಗರ ಬೆಳವಣಿಗೆಯ ನಿರ್ವಹಣೆ
5. ಮೂಲ ಸೌಕರ್ಯಗಳು

ಬರ-ಕೃಷಿ-ಜಲ

ಈ ಮೂರೂ ಪರಸ್ಪರ ಸಂಬಂಧ ಹೊಂದಿದ್ದು ಇವುಗಳನ್ನು ಸಮನ್ವಯದೊಂದಿಗೆ ನಿರ್ವಹಿಸಬೇಕು. ದುರಾದೃಷ್ಟವೆಂದರೆ, ಸರ್ಕಾರದ ಕಾರ್ಯನೀತಿಗಳು ಈ ಮೂರನ್ನೂ ಬೇರೆ ಬೇರೆಯಾಗಿ ನಿರ್ವಹಿಸುತ್ತಿವೆ. ಕೃಷಿಯನ್ನು ಕೃಷಿಇಲಾಖೆ, ಕೃಷಿಸಾಲವನ್ನು ಸಹಕಾರಿ ಇಲಾಖೆ  ಹಾಗು ಬ್ಯಾಂಕುಗಳು, ಬರವನ್ನು ಕಂದಾಯ ಇಲಾಖೆಗಳು ಬೇರೆ ಬೇರೆಯಾಗಿ ನಿರ್ವಹಿಸುತ್ತಿವೆ. ಜಲ ಸಂಪನ್ಮೂಲಕ್ಕೆ (ನೀರಾವರಿ) ಗ್ರಾಮೀಣ ಅಭಿವೃದ್ಧಿ ಮತ್ತು ನಗರಾಭಿವೃದ್ಧಿ ಎಂಬ ಎರಡು ಇಲಾಖೆಗಳಲ್ಲದೆ ಬೃಹತ್ ನೀರಾವರಿ ಮತ್ತು ಸಣ್ಣ ನೀರಾವರಿ ಎಂಬ ಎರಡು ಪ್ರತ್ಯೇಕ ಸಚಿವಾಲಯಗಳಿವೆ. ಅಂತರ್ಜಲ ನಿರ್ವಹಣೆಗಾಗಿ ಇರುವ ಗಣಿ ಮತ್ತು ಭೂಗರ್ಭ ಇಲಾಖೆಯನ್ನೂ ಸೇರಿಸಿಕೊಂಡರೆ ಜಲ ನಿರ್ವಹಣೆಗಾಗಿ ಐದು ಸಚಿವಾಲಯಗಳಾದುವು.

ಬರ, ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಮರುಕಳಿಸುವ ಸಮಸ್ಯೆ. ಸಾಧಾರಣ ಕ್ಕಿಂತ ಶೇ.25ರಷ್ಟು ಕಡಿಮೆ ಮಳೆಯಾದರೆ ಬರ ಪರಿಸ್ಥಿತಿ ಬಂದಂತೆ. ಬರ ಪರಿಸ್ಥಿತಿಯಲ್ಲಿ ಅಂತರ್ಜಲ ಕಡಿಮೆಯಾಗಿ ಕೆರೆಗಳು ಜಲಾಶಯಗಳು ಒಣಗಿ ಬೆಳೆ ವೈಫಲ್ಯವಾಗುತ್ತದೆ. ಭಾರತದ ವಿಸ್ತೀರ್ಣದಲ್ಲಿ ಶೇ.19ರಷ್ಟು ಬರ ಸಂಭವನೀಯ ಪ್ರದೇಶವೆಂದು ಅಂದಾಜಿಸಲಾಗಿದೆ. ಇಂಥ ಪ್ರದೇಶಗಳು ಕಾಲದಿಂದ ಕಾಲಕ್ಕೆ ಹೆಚ್ಚಾಗುತ್ತಲೇ ಇವೆ. ಭಾರತ, ಮೂರು ವರ್ಷಕ್ಕೊಮ್ಮೆ ಬರದಿಂದ ನರಳುತ್ತದೆ. ಕರ್ನಾಟಕವು ಭಾರತದಲ್ಲಿ ಹೆಚ್ಚು ಜಲ ಕೊರತೆ ಇರುವ ರಾಜ್ಯಗಳಲ್ಲಿ ಒಂದು. ರಾಜ್ಯದಉತ್ತರ ಭಾಗವು ಹೆಚ್ಚು ಹೆಚ್ಚು ಬರಸಂಭವನೀಯ ಪ್ರದೇಶವಾಗುತ್ತಿದೆ. ಕರ್ನಾಟಕವು ಕಳೆದ 15 ವರ್ಷಗಳಲ್ಲಿ 12 ಬರಗಳನ್ನು ಕಂಡಿದೆ. ಇದರಿಂದ ರಾಜ್ಯದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಬೆಳೆ ವೈಫಲ್ಯದಿಂದ ರೈತರ ಜೀವನಾಧಾರ ಕುಂಠಿತ ವಾಗುತ್ತದೆ. ರೈತಾಪಿ ಜನರ ವಲಸೆಗೆ ಇಂಬು ಕೊಡುತ್ತದೆ.

ಬರವಿಲ್ಲದ ಕಾಲದಲ್ಲೇ ಉತ್ತರ ಕರ್ನಾಟಕದಿಂದ ಶೇ. 5-10 ಜನಸಂಖ್ಯೆಯ ವಲಸೆಯನ್ನುಅಂದಾಜಿಸಲಾಗಿದೆ. ಬರಗಾಲದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಪಿ.ಸಾಯಿನಾಥ್‍ ಅವರ ಪ್ರಕಾರ 1991ರಿಂದ  2001 ರವರೆಗೆ ವ್ಯವಸಾಯ ಮುಖ್ಯ ಕಸುಬಾಗಿದ್ದ 70 ಲಕ್ಷ ಜನ ಕೃಷಿಯನ್ನು ಕೈಬಿಟ್ಟಿದ್ದಾರೆ. ಗೋವಾದ 14 ಕೊಳಚೆ ಪ್ರದೇಶಗಳಲ್ಲಿ ಇರುವವರಲ್ಲಿ ಹೆಚ್ಚಿನ ವಲಸಿಗರು ಉತ್ತರ ಕರ್ನಾಟಕದವರಾಗಿದ್ದಾರೆ. ವಲಸೆಯನ್ನು ತಡೆಗಟ್ಟಲು ನರೇಗಾ ಯೋಜನೆ ಸೋತಿದೆ. ಇದು, ಸರ್ಕಾರದ ವೈಫಲ್ಯವಲ್ಲ. ಪ್ರವಾಸೀ ಕಾಲದಲ್ಲಿ ಗೋವಾದಲ್ಲಿ ದೊರೆಯುವ ಹೆಚ್ಚಿನ ಕೂಲಿ ಕಾರಣವಾಗಿದೆ.

ಬರವನ್ನು ಹೇಗೆ ನಿಭಾಯಿಸಲಾಗುತ್ತದೆ?

ಕಂದಾಯ ಇಲಾಖೆಯು ಬರ ಪರಿಸ್ಥಿತಿ ಕುರಿತ ಮಾಹಿತಿಯನ್ನು ಸಂಗ್ರಹಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತದೆ. ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲೆಯಾ ತಾಲ್ಲೂಕುಗಳನ್ನು `ಬರ ಪೀಡಿತ’ ಎಂದು ಘೋಷಿಸುತ್ತದೆ. ಘೋಷಿತ ಪ್ರದೇಶಗಳಿಗೆ `ವಿಪತ್ತು ಪರಿಹಾರ ನಿಧಿ’ಯ ಅಡಿ ಪರಿಹಾರ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತದೆ.

ವ್ಯವಸಾಯ

ವ್ಯವಸಾಯವು ಭಾರತೀಯ ಆರ್ಥಿಕತೆಗೆ ಬಹಳ ನಿರ್ಣಾಯಕವಾಗಿದ್ದು, ಅದನ್ನು ಕೇವಲ ಕೃಷಿ ಉತ್ಪನ್ನಗಳಿಂದಲೇ ಪರಿಗಣಿಸಲಾಗುವುದಿಲ್ಲ. ನೀರಾವರಿ ಮತ್ತು ಸಾರ್ವಜನಿಕ ಹೂಡಿಕೆಯಿಂದಾಗಿ ಆಹಾರಧಾನ್ಯಗಳ ಉತ್ಪಾದನೆ ಹೆಚ್ಚಾಗುತ್ತಿದೆ ನಿಜ. ಆದರೆ, ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತಿರುವುದು, ಕಡಿಮೆಯಾಗುತ್ತಿರುವ  ಫಸಲು, ಕುಸಿಯುತ್ತಿರುವ ಅಂತರ್ಜಲ ಮಟ್ಟ, ದುಬಾರಿಯಾಗುತ್ತಿರುವ  ಹೂಡಿಕೆ, ಸಾಲದ ಹೊರೆ, ಕಡಿಮೆ ಲಾಭ ಮತ್ತು ಬಂಡವಾಳ ಹೊಂದಿಸುವ ಸಾಧ್ಯತೆಯ ಮಿತಿಗಳು ರೈತನನ್ನು ಕಾಡಿಸುತ್ತಿವೆ. ಕರ್ನಾಟಕ ಸರ್ಕಾರವು 1996ರಲ್ಲಿ ಹೂಡಿಕೆ ಸಾಲ ವಿಸ್ತರಣೆ ಮತ್ತು ವಿಸ್ತರಣಾ ವಿಧಾನಗಳ  ಮಾರ್ಪಾಟುಗಳನ್ನು ಬೆಂಬಲಿಸುವ `ಕೃಷಿ ನೀತಿ’ಯೊಂದನ್ನು ಸಂರಚಿಸಿತು. ಆದಾಗ್ಯೂ ರಾಜ್ಯ ಆರ್ಥಿಕತೆಗೆ ಕೃಷಿಯ ಕೊಡುಗೆ ಕ್ಷೀಣಿಸುತ್ತಿದೆ.

ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದ ಉದ್ದಗಲಕ್ಕೂ  ಕೃಷಿ  ಕ್ಷೇತ್ರವು ಸಂಕೀರ್ಣವಾದ ತೊಂದರೆಗಳಿಂದ ಬಾಧಿತವಾಗಿದೆ. ಹೆಚ್ಚುತ್ತಿರುವ ಉತ್ಪನ್ನಗಳು ರೈತರಿಗೆ ಹೆಚ್ಚಿನ ಆದಾಯವನ್ನೇನೂ ತರುತ್ತಿಲ್ಲ. ಆತ್ಮವಿಶ್ವಾಸದ ಕೊರತೆ ರೈತರನ್ನು ಆತ್ಮಹತ್ಯೆಗೆ ದೂಡುತ್ತಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣದ ನಂತರ ಕರ್ನಾಟಕವು ರೈತರ ಆತ್ಮಹತ್ಯೆಯಲ್ಲಿ ಮೂರನೆಯ ಸ್ಥಾನದಲ್ಲಿದೆ. ಕೇಂದ್ರ ಕೃಷಿ ಸಚಿವರು ಪಾರ್ಲಿಮೆಂಟಿಗೆ 2018ರ ಮಾರ್ಚಿಯಲ್ಲಿ ಕೊಟ್ಟ ಮಾಹಿತಿ ಪ್ರಕಾರ 2015-16 ಕ್ಕಿಂತ ಶೇ 32ರಷ್ಟು ಹೆಚ್ಚಾಗಿದೆ. ರೈತರ ಹೋರಾಟಗಳು ಹೆಚ್ಚುತ್ತಲೇ ಇದ್ದರೂ ಕೇಂದ್ರ  ಮತ್ತು ರಾಜ್ಯ  ಸರ್ಕಾರಗಳು ದೇಶ ಎದುರಿಸುತ್ತಿರುವ  ಕೃಷಿ ಸಮಸ್ಯೆಗಳಿಗೆ ಉತ್ತರ ಹುಡುಕುವಲ್ಲಿ ಗೊಂದಲಗೊಂಡಿವೆ.

ಬೆಂಗಳೂರು: ಸೆಣಸುತ್ತಿರುವ ಐಟಿ ದೈತ್ಯ

1960ರ ದಶಕದಲ್ಲಿ ಸುಮಾರು10 ಲಕ್ಷ ಜನಸಂಖ್ಯೆಯ, ನಿಧಾನಗತಿಯ ಆರಾಮ ನಗರವಾಗಿದ್ದ ಬೆಂಗಳೂರು ಜಗತ್ತಿನ ಭೂಪಟದಲ್ಲಿ ಹೆಸರಾಂತ ಸ್ಥಳವಾಗಿ ಮೆಗಾಸಿಟಿಯ ಸ್ಥಾನಮಾನ ಪಡೆದಿರುವುದೊಂದು ಅದ್ಭುತಕಥೆ. ಆರ್ಥಿಕತೆಯಲ್ಲಿ, ಜನಸಂಖ್ಯೆಯಲ್ಲಿ ಹಾಗೂ ವಿಸ್ತೀರ್ಣದಲ್ಲಿ ಬೆಂಗಳೂರಿನ ಬೆಳವಣಿಗೆ ಅಸಾಧಾರಣವಾದದ್ದು. ಇಂದು 1000 ಚದರ ಕಿ.ಮೀ ಸ್ಥಳದಲ್ಲಿ 1 ಕೋಟಿ10 ಲಕ್ಷ ಜನರಿಗೆ ಆಶ್ರಯ ನೀಡಿದೆ. ಈ ನಗರದ 750 ಚದರ ಕಿ.ಮೀ ಅಳತೆಯ ನಗರ ಪಾಲಿಕೆ ದೇಶದಲ್ಲೇ ಬೃಹತ್ತಾದದ್ದು. ಈ ನಗರದ ತಲಾ ಆದಾಯ ದೇಶದಲ್ಲೇ ಹೆಚ್ಚಿನದು.

ಬೆಂಗಳೂರು ಕರ್ನಾಟಕದ ರಾಜಕೀಯ, ಕೈಗಾರಿಕಾ ಮತ್ತು ವಾಣಿಜ್ಯ ರಾಜಧಾನಿಯಾಗಿದೆ. ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಲ್ಲದೆ ಜಾಗತಿಕ ತಂತ್ರಜ್ಞಾನದ ಕೇಂದ್ರ  ಬಿಂದುವಾಗಿದೆ. ಆದರೆ ಈ ನಗರದ ಭೌತಿಕ ಮೂಲ ಸೌಕರ್ಯವು ವಿಷಾದಕರವಾಗಿದೆ. ನೀರು ಸರಬರಾಜಿನಲ್ಲಿ ಕೊರತೆಯಿದೆ. ಸಾರ್ವಜನಿಕ ಶುಚಿತ್ವ ಕೆಟ್ಟದಾಗಿದೆ. ಸಾರ್ವಜನಿಕ ಸಾರಿಗೆ ಅಸಮರ್ಪಕವಾಗಿದೆ. ಸಂಚಾರ ಸಮಯದ ಗೊಣಗಾಟ ನಿತ್ಯತಪ್ಪಿದ್ದಲ್ಲ. ಒತ್ತಡ ಸಮಯದ(peak hour)ಪ್ರಯಾಣ ಒಂದು ದುಃಸ್ವಪ್ನ, ಮಾಯವಾಗುತ್ತಿರುವ ಸುಪ್ರಸಿದ್ಧ ಮರಸಾಲುಗಳು ಮತ್ತು ಮಾಲಿನ್ಯ ಪೂರಿತ ಕೆರೆಗಳು.

ಬೃಹತ್‍ ಯೋಜನೆಯ ಪ್ರಕ್ರಿಯೆ ನಗರದ ಸುಸ್ಥಿರ ಬೆಳವಣಿಗೆಗೆ ದಾರಿದೀಪವಾಗುವ ಬದಲಿಗೆ ಅಧಿಕಾರಿಗಳ ಮತ್ತು ನಾಗರಿಕರತ ಗಾದೆಯಲ್ಲಿ ಸ್ತಬ್ಧವಾಗಿದೆ. ನಗರದ ಬೆಳವಣಿಗೆಯನ್ನು ನಿರ್ವಹಿಸಲು ಸ್ಪಷ್ಟವಾದ ಸಾರ್ವಜನಿಕ ನೀತಿ ಇಲ್ಲದಿರುವುದು ನಗರ ಭೂಮಿಯ ಮಾರುಕಟ್ಟೆಯನ್ನು ವಿರೂಪ ಗೊಳಿಸಿದೆ. ನಗರಾಭಿವೃದ್ಧಿಯನ್ನುಅರಾಜಕತೆಯೆಡೆಗೆ ದೂಡಿದೆ.

ಬೆಂಗಳೂರಿನ ಕಥೆ, ಬಹುಶಃ ಭಾರತದಲ್ಲಿನ ನಗರಾಡಳಿತದ ಸಂಕೀರ್ಣತೆಯನ್ನು ಬಿಂಬಿಸುತ್ತದೆ.

ಸರ್ಕಾರದ ಆಡಳಿತ ವ್ಯವಸ್ಥೆಯು ಹಿಂದೆ ಹಸಿರು ಕ್ರಾಂತಿಯ ಸಮಯದಲ್ಲಿ ಚಾಚಿದ್ದ ಸಹಾಯ ಹಸ್ತವು ಅಕ್ಷರಶಃ ಇಂದು ಕುಸಿದಿದೆ. ರೈತರ ಬದಲಾದ ಅವಶ್ಯಕತೆಗಳನ್ನು ಗುರುತಿಸುವುದರಲ್ಲಿ ಸೋತಿದೆ. ಕೃಷಿವಲಯವನ್ನು ಪುನಶ್ಚೇತನಗೊಳಿಸುವಂತಹ  ರೈತ  ಮತ್ತು ಮಾರುಕಟ್ಟೆ ಸ್ನೇಹಿ ಸುಧಾರಣೆಗಳತ್ತ ಸರ್ಕಾರ ಗಮನ ಹರಿಸಬೇಕಿದೆ. ಕೃಷಿ  ಉತ್ಪನ್ನ  ಮತ್ತು ಲಾಭ  ಹೆಚ್ಚಾಗುವುದಕ್ಕೆ ಅಡ್ಡಗಾಲಾಗಿರುವ ಕಾನೂನು ನಿರ್ಬಂಧಗಳನ್ನು ತೊಡೆದು ಹಾಕಿ ಸಂಬಂಧಿತ ಪಾಲುದಾರರ ನಡುವೆ ಸಹಭಾಗಿತ್ವವನ್ನು ಅನುವು  ಮಾಡಿಸಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರ ಸಾಮಥ್ರ್ಯವನ್ನು ಹೆಚ್ಚಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ.

ಮರುಕಳಿಸುತ್ತಿರುವ ಬರ ಮತ್ತು ಕೃಷಿವಲಯದ ಅತೃಪ್ತಿಕರ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಜಲ ನಿರ್ವಹಣೆಯು ಮಹತ್ವದ ಪಾತ್ರವಹಿಸುತ್ತದೆ. ಕೈಗಾರಿಕೆ ಮತ್ತು ಕೃಷಿಯಲ್ಲಿ ಅತೀ ನೀರಿನ ಬಳಕ, ಅನಿಯಂತ್ರಿತ ಅಂತರ್ಜಲ ಸೆಳೆಯುವಿಕೆ, ನೀರಿನ ಅಸಮರ್ಪಕ ಬಳಕೆ ಮತ್ತು ಕುಸಿಯುತ್ತಿರುವ ನೀರಿನ ಗುಣಮಟ್ಟಗಳು ಜಲಕ್ಷೇತ್ರದ ಕೆಲವು  ಪ್ರಮುಖ ಸವಾಲುಗಳು. ಈ ಕುರಿತ ಭವಿಷ್ಯದ ಅಂದಾಜು ದಿಗಿಲು ಹುಟ್ಟಿಸುವಂತಿದೆ.

• 2030ರ ವೇಳೆಗೆ ಶೇ.40ರಷ್ಟು  ಜನರಿಗೆ ನೀರುದೊರೆಯುವುದಿಲ್ಲ.
• 2020ರ ವೇಳೆಗೆ ದೆಹಲಿ, ಚನ್ನೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿ 21 ನಗರಗಳಲ್ಲಿ ಅಂತರ್ಜಲ ಮಾಯವಾಗುತ್ತದೆ.
• ನೀರಿನ ಸಮಸ್ಯೆಯಿಂದಾಗಿ 2050ರ ವೇಳೆಗೆ ಜಿಡಿಪಿಯಲ್ಲಿ ಶೇ.50ರಷ್ಟು ಇಲ್ಲವಾಗುತ್ತದೆ.

ಅಕ್ಕಿ ಮತ್ತು ಕಬ್ಬಿನ ಕೃಷಿಗಾಗಿ ನೀರಿನ ದುರುಪಯೋಗ ಅಥವಾ ಅಸಮರ್ಥ ನಿರ್ವಹಣೆ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ನೀರಾವರಿಯ ಮೂಲ ಸಮಸ್ಯೆಗಳಲ್ಲಿ ಇದೊಂದು.

ನೀತಿ ಆಯೋಗವು 2018ರಲ್ಲಿ ಹೊರತಂದಿರುವ `ಸಂಯೋಜಿತ(composite)ಜಲ ನಿರ್ವಹಣಾ ಸೂಚಿ’ಯ ಪ್ರಕಾರ, ಉತ್ತಮ ಜಲ ನಿರ್ವಹಣಾ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೆಯ ಸ್ಥಾನದಲ್ಲಿದೆ. ಋಣಾತ್ಮಕ ವಿಷಯವೆಂದರೆ, ಕರ್ನಾಟಕವು ಅಂತರ್ಜಲ ಪುನಶ್ಚೇತನಕ್ಕೆ ಅಗತ್ಯ ಗಮನ ಹರಿಸಿಲ್ಲ.

ಕರ್ನಾಟಕವು ಉತ್ತರದ ಕಡೆ ಕೃಷ್ಣ ಮತ್ತು ದಕ್ಷಿಣದ ಕಡೆ ಕಾವೇರಿ ನದಿಗಳನ್ನು ಹೊಂದಿದೆ. ಇವೆರಡೂ ಅಂತರ ರಾಜ್ಯ ನದಿಗಳಾಗಿದ್ದು ಅಂತರ ರಾಜ್ಯ ಜಲ ನಿರ್ವಹಣಾ ವಿವಾದಗಳ ಸುಳಿಯಲ್ಲಿ ಸಿಲುಕಿ ಕೊಂಡಿವೆ. ಇದಕ್ಕಾಗಿ ಗಣನೀಯ ಸಮಯ ಮತ್ತು ಸಂಪನ್ಮೂಲಗಳನ್ನು ಟ್ರಿಬ್ಯುನಲ್ ಮತ್ತು ನ್ಯಾಯಾಲಯಗಳಲ್ಲಿ ವ್ಯಯಿಸಬೇಕಿದೆ. ಇದರಲ್ಲಿ ಕಾವೇರಿ ವಿವಾದವು ಹೆಚ್ಚು ಸಮಸ್ಯಾತ್ಮಕವಾಗಿದೆ.

ನಾನು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ 2002ರ ಕೆಟ್ಟ ಬರಗಾಲದಲ್ಲಿ ಗಣನೀಯ ಸಮಯವನ್ನು ತಮಿಳು ನಾಡಿನೊಂದಿಗಿನ ವ್ಯಾಜ್ಯದಲ್ಲಿ ಕಳೆಯ ಬೇಕಾಯಿತು. ಅಂದು ನನ್ನ ಮುಖ್ಯ ಮಂತ್ರಿಗಳು ಮತ್ತು ನಾನು ಜೈಲುಪಾಲಾಗುವುದು ಕೂದಲೆಳೆಯಲ್ಲಿ ತಪ್ಪಿತ್ತು. ದುರಾದೃಷ್ಟಕರ  ವಾಸ್ತವವೇನೆಂದರೆ, ಎಲ್ಲ ಧರ್ಮಗ್ರಂಥಗಳೂ ಪವಿತ್ರ ಎನ್ನುವ `ನೀರು’, ರಾಜಕೀಯ ಲಾಭಕ್ಕಾಗಿ ಬಳಸುವ ಸರಕಾಗಿ ಬಿಟ್ಟಿದೆ. ನೀರಿನ ರಾಜಕೀಯ ದೇಶಕ್ಕೆ ಹೊರೆಯಾಗುತ್ತಿದೆ. ಸಂಪನ್ಮೂಲಗಳನ್ನು ಹಾಳು ಮಾಡುತ್ತಾ ಜನರಿಗೆ ಮೂಲಭೂತ ಅಗತ್ಯಗಳನ್ನು ನಿರಾಕರಿಸುತ್ತಿದೆ. ಬಹುಬೇಡಿಕೆಯ ಅಕ್ಕಿ ಮತ್ತು ಕಬ್ಬಿನ ಕೃಷಿಗಾಗಿ ನೀರಿನ ದುರುಪಯೋಗ ಅಥವಾ ಅಸಮರ್ಥ ನಿರ್ವಹಣೆ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ನೀರಾವರಿಯ ಮೂಲ ಸಮಸ್ಯೆಗಳಲ್ಲಿ ಇದೊಂದು. ಕರ್ನಾಟಕ ಮತ್ತು ತಮಿಳು ನಾಡಿನ ರೈತರು ಈ ಎರಡು ಬೆಳೆಗಳಿಗೆ ಕಟ್ಟು ಬಿದ್ದಿದ್ದಾರೆ. ಬರಗಾಲದ ನೀರಿನ ಕೊರತೆಯು ಜಲ ನಿರ್ವಹಣಾ ಸಮಸ್ಯೆ ಆಗುವ ಬದಲು ರಾಜಕೀಯ ಸಮಸ್ಯೆ ಆಗಿದೆ.

ಈಗ ಎಲ್ಲ ರಾಜ್ಯಗಳಲ್ಲೂ ಜಲ ನಿಯಂತ್ರಣ ಆಯೋಗದ ಅವಶ್ಯಕತೆ ಇದೆ. ಕೇಂದ್ರ  ಗೃಹ  ಸಚಿವಾಲಯವು, ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದೊಂದಿಗೆ ರಚಿಸಲಾಗಿರುವ ರಾಷ್ಟ್ರೀಯ ವಿಪತ್ತು ಅಪಾಯ ಸೂಚಿಯ ಪ್ರಕಾರ ಕರ್ನಾಟಕವು ವಿಪತ್ತಿಗೀಡಾಗಬಹುದಾದ ರಾಜ್ಯಗಳ ಪಟ್ಟಿಯಲ್ಲಿ ಆರನೆಯ ಸ್ಥಾನದಲ್ಲಿದೆ.

ರಾಷ್ಟ್ರ ಮತ್ತು ರಾಜ್ಯ ಸರ್ಕಾರದ ನೀತಿಗಳು ಕುಡಿಯುವ ನೀರಿಗೆ ಆದ್ಯತೆ ನೀಡಿವೆ. ಕರ್ನಾಟಕದ ಕುಡಿಯುವ ನೀರಿನ ಸರಬರಾಜು ರಾಷ್ಟ್ರೀಯ ಮಟ್ಟಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಇದೆ. ನೀರಿನ ಬಿಕ್ಕಟ್ಟು ಎಂದರೆ ಸರ್ಕಾರದ ನೀತಿಗಳ ಮತ್ತು ಆಡಳಿತದ ಬಿಕ್ಕಟ್ಟು ಎಂದರ್ಥ. ಎಲ್ಲ ಆರ್ಥಿಕ  ತತ್ವಗಳನ್ನು ತೂರಿದ ನೀರಿನದರ ನೀತಿಯು ನೀರಿನ ಬೇಜವಾಬ್ದಾರಿ ಬಳಕೆಗೆ ಇಂಬು ಕೊಟ್ಟಿದೆ. ಜಗತ್ತಿನಲ್ಲೇ ಅಂತರ್ಜಲದ ಬಳಕೆ ಭಾರತದಲ್ಲಿ ಹೆಚ್ಚು. ನೀರನ್ನು ಅಗ್ಗದ  ಸರಕನ್ನಾಗಿಸುವ  ಭರದಲ್ಲಿ ಸಾರ್ವಜನಿಕ ನೀತಿಯು ನಮ್ಮಲ್ಲಿ ಸೋತಿರುವುದು ಎದ್ದು ಕಾಣಿಸುತ್ತದೆ.

ಜಗತ್ತಿನಲ್ಲಿ ಅತಿ ಕಡಿಮೆ ನೀರುದರವನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇದರಿಂದ ನೀರಿನ ಬಳಕೆ ಅಸಮರ್ಪಕವಾಗಿ ದೊಡ್ಡ ಪ್ರಮಾಣದಲ್ಲಿ ನೀರು ಅಪವ್ಯಯವಾಗುತ್ತಿದೆ. ಅಧ್ಯಯನಗಳಲ್ಲಿ ಕಂಡುಬಂದಿರುವಂತೆ ಜಲಸಬ್ಸಿಡಿಗಳ ಲಾಭವು ಬಡವರಿಗಿಂತ  ಶ್ರೀಮಂತರಿಗೆ ಹೆಚ್ಚು ಇದೆ. ಈಗ ಎಲ್ಲ ರಾಜ್ಯಗಳಲ್ಲೂ ಜಲ ನಿಯಂತ್ರಣ ಆಯೋಗದ ಅವಶ್ಯಕತೆ ಇದೆ. ಕೇಂದ್ರ  ಗೃಹ  ಸಚಿವಾಲಯವು, ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದೊಂದಿಗೆ ರಚಿಸಲಾಗಿರುವ ರಾಷ್ಟ್ರೀಯ ವಿಪತ್ತು ಅಪಾಯ ಸೂಚಿಯ ಪ್ರಕಾರ ಕರ್ನಾಟಕವು ವಿಪತ್ತಿಗೀಡಾಗಬಹುದಾದ ರಾಜ್ಯಗಳ ಪಟ್ಟಿಯಲ್ಲಿ ಆರನೆಯ ಸ್ಥಾನದಲ್ಲಿದೆ. ಬೆಂಗಳೂರು ಮತ್ತು ಕಲಬುರಗಿ ಜಿಲ್ಲೆಗಳು ಹೆಚ್ಚು ಹಾನಿಗೆ ಈಡಾಗಬಹುದಾದ ಪಟ್ಟಿಯಲ್ಲಿ 7 ಮತ್ತು 9ನೆಯ ಸ್ಥಾನದಲ್ಲಿವೆ. ನಮ್ಮ ರಾಜ್ಯವು `ವಿಪತ್ತು ನಿರ್ವಹಣಾ ಘಟಕ’ವೊಂದನ್ನು ರಚಿಸಿದೆ. ಆದರೆ ಈ ಘಟಕವು ವಿಪತ್ತನ್ನು ನಿರ್ವಹಿಸುವ ಸಾಮಥ್ರ್ಯವನ್ನು ರೂಢಿಸುವಲ್ಲಿ ಮತ್ತು ಹವಾಮಾನ ಬದಲಾವಣೆ ಒಡ್ಡುವ ಸವಾಲುಗಳನ್ನು ಎದುರಿಸುವಲ್ಲಿ ಹೆಚ್ಚು ಕ್ರಿಯಾಶೀಲವಾಗಬೇಕಿದೆ.

ಮಾನವ ಅಭಿವೃದ್ಧಿ

ಮಾನವ ಅಭಿವೃದ್ಧಿಯ ಮುನ್ನಡೆಯನ್ನು ಅಳೆಯಲು ಮಾನವ ಅಭಿವೃದ್ಧಿ ಸೂಚಿಯ 3 ಮಾನದಂಡಗಳನ್ನು ಬಳಸಲಾಗುತ್ತದೆ.

1. ದೀರ್ಘವಾದ ಮತ್ತು ಆರೋಗ್ಯಕರ ಬದುಕು,

2. ಜ್ಞಾನಕ್ಕೆ ಪ್ರವೇಶಾವಕಾಶ ಮತ್ತು

3. ಸಭ್ಯ ಬದುಕನ್ನು ಬದುಕುವ ಅವಕಾಶ.  188 ದೇಶಗಳಲ್ಲಿ 131ನೆಯ ಸ್ಥಾನದಲ್ಲಿರುವ ಭಾರತ ಈ ವಿಷಯದಲ್ಲಿ ಬಹಳ ಹಿಂದೆಇದೆ.
1999ರಲ್ಲಿ ಕರ್ನಾಟಕವು ಮೊದಲ ಮಾನವ ಅಭಿವೃದ್ಧಿ ವರದಿಯನ್ನು ಪ್ರಕಟಿಸಿತು.

ಮಾನವ ಅಭಿವೃದ್ಧಿ ವರದಿಯನ್ನು ಹೊರತರುವುದರಲ್ಲಿ ಕರ್ನಾಟಕ ಮುಂದಾಳಾಗಿದೆ. ನಂತರ ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳನ್ನೂ ಹೊರತಂದಿದೆ.  2014ರಲ್ಲಿ “ಜಿಲ್ಲೆಗಳ, ತಾಲೂಕುಗಳ ಮತ್ತು ನಗರ ಸಂಸ್ಥೆಗಳಲ್ಲಿ ಮಾನವ ಅಭಿವೃದ್ಧಿ ಸಾಧನೆ” ಎಂಬ ಶ್ಲಾಘನೀಯ ವರದಿಯನ್ನು ಹೊರತಂದಿದೆ. ಈ ಕೆಲಸವನ್ನು ಜಿಲ್ಲಾ ಪಂಚಾಯಿತಿಗೆ  ವಹಿಸಲಾಗಿತ್ತು. ಸರ್ಕಾರಿ ಆಡಳಿತ ಯಂತ್ರದ ಮೇಲ್ವಿಚಾರಣೆಯಲ್ಲಿ ವಿಶ್ವವಿದ್ಯಾಲಯಗಳ ಸಂಶೋಧನಾ ಸಂಸ್ಥೆಗಳ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ವರದಿ ತಯಾರಾಯಿತು. ಇದರಿಂದಾಗಿ ಜಿಲ್ಲಾ, ತಾಲ್ಲೂಕು/ನಗರ/ಪಟ್ಟಣಗಳ ಮಟ್ಟದಲ್ಲಿ ಎಲ್ಲರೀತಿಯ  ಮಾನವ ಅಭಿವೃದ್ಧಿ ಸೂಚಕ ದತ್ತಾಂಶಗಳ  ಮಹಾ ಸಂಗ್ರಹವಾಯಿತು.

ಆರೋಗ್ಯಕರ  ರಾಜ್ಯಗಳು, ಪ್ರಗತಿಶೀಲ ಭಾರತ” ಆರೋಗ್ಯ ಸೂಚಿಯ ಪ್ರಕಾರ ದೊಡ್ಡ ರಾಜ್ಯಗಳ  ಪೈಕಿ ಕರ್ನಾಟಕವು 9ನೆಯ ಸ್ಥಾನದಲ್ಲಿದೆ. ಕೇರಳ ಮೊದಲನೆಯ ಸ್ಥಾನದಲ್ಲಿದೆ.

ಕಾರ್ಯಾನುಷ್ಠಾನದಲ್ಲಿ ಮಾತ್ರ ಕರ್ನಾಟಕವು 1991ರಿಂದ ಇಳಿಮುಖ  ಪ್ರವೃತ್ತಿ ಪ್ರದರ್ಶಿಸುತ್ತಿದೆ. ಆರ್ಥಿಕ ಬೆಳವಣಿಗೆಯ ಲಾಭಗಳು ಸಮಷ್ಟಿಗೆ ಹನಿಯುವಂಥ ಸಾಂಪ್ರದಾಯಿಕ ತಂತ್ರವನ್ನೇ ಅವಲಂಬಿಸಿತು. ತಮಿಳುನಾಡು, ಆರ್ಥಿಕ ಬೆಳವಣಿಗೆಯೊಂದಿಗೇ  ಸಾರ್ವಜನಿಕ ನೀತಿಯ ಮಧ್ಯ ಪ್ರವೇಶಗಳನ್ನು ಬಳಸಿ ಮಾನವ ಅಭಿವೃದ್ಧಿಯನ್ನು ಸಾಧಿಸಿತು. ಈ ವಿಷಯದಲ್ಲಿ ಕರ್ನಾಟಕ 6ನೆಯ ಸ್ಥಾನದಿಂದ  7ನೆಯ ಸ್ಥಾನಕ್ಕಿಳಿದಿದ್ದರೆ ತಮಿಳು ನಾಡು 7ನೆಯ ಸ್ಥಾನದಿಂದ 3ನೆಯ ಸ್ಥಾನಕ್ಕೇರಿದೆ. ಈಶಾನ್ಯದ  ಜಿಲ್ಲೆಗಳನ್ನು ಕಡೆಗಣಿಸಿದ್ದೂ ಕೂಡ ಕರ್ನಾಟಕದ ಸಾಧನೆಗಳನ್ನು ದುರ್ಬಲಗೊಳಿಸಿತು.

ನೀತಿ ಆಯೋಗವು 2018ರಲ್ಲಿ ಬಿಡುಗಡೆ ಮಾಡಿದ, 2015-16ರ “ಆರೋಗ್ಯಕರ  ರಾಜ್ಯಗಳು, ಪ್ರಗತಿಶೀಲ ಭಾರತ” ಆರೋಗ್ಯ ಸೂಚಿಯ ಪ್ರಕಾರ ದೊಡ್ಡ ರಾಜ್ಯಗಳ  ಪೈಕಿ ಕರ್ನಾಟಕವು 9ನೆಯ ಸ್ಥಾನದಲ್ಲಿದೆ. ಕೇರಳ ಮೊದಲನೆಯ ಸ್ಥಾನದಲ್ಲಿದೆ. ಇದಕ್ಕೆ, ಆರೋಗ್ಯ ಇಲಾಖೆಯ ಅಧಿಕಾರಿಗಳ ಪದೇ ಪದೇ  ವರ್ಗಾವಣೆ  ಮತ್ತು  ಖಾಲಿ ಬಿಟ್ಟು ಕೊಂಡಿರುವ  ಹುದ್ದೆಗಳಂಥ  ಆಡಳಿತಾತ್ಮಕ  ತಪ್ಪುಗಳೂ  ಕಾರಣ.

ಶಾಲಾ ಶಿಕ್ಷಣದ ಸ್ಥಿತಿಗತಿ

ಕರ್ನಾಟಕವು ಸಾರ್ವಜನಿಕ ಶಿಕ್ಷಣದಲ್ಲಿ ಹೆಚ್ಚು ಸಂಖ್ಯೆಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಇತ್ತೀಚೆಗೆ ಸರ್ಕಾರಿ ಶಾಲೆಗಳು ಕಡಿಮೆಯಾಗುತ್ತಿವೆ. ಖಾಸಗಿ ಶಾಲೆಗಳು ದುಪ್ಪಟ್ಟು ಹೆಚ್ಚಾಗಿವೆ. ಖಾಸಗಿ ಶಾಲೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. 2010-11ರಿಂದ 2015-16ರವರೆಗಿನ ಆರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ನೋಂದಣಿ 1 ಕೋಟಿ 30 ಲಕ್ಷ ಕಡಿಮೆಯಾಗಿದೆ. ಖಾಸಗಿ ಶಾಲೆಗಳಲ್ಲಿ 1 ಕೋಟಿ 70 ಲಕ್ಷ ಹೆಚ್ಚಾಗಿದೆ. ಡಿಸೆಂಬರ್ 28, 2015ರ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳಿಗಿಂತ 4 ಪಟ್ಟು ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಸರ್ಕಾರಿ ಶಾಲೆಗಳ ಕಟ್ಟಡಗಳು ಮತ್ತು ಶಿಕ್ಷಕರ ಸಂಬಳ ಬಹಳ ಹೆಚ್ಚು ಇರುವುದು ಒಂದು ವ್ಯಂಗ್ಯ. ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳ ಸಾಧನೆ ಬಹಳ ನಿರಾಶಾದಾಯಕವಾಗಿದೆ.

ಕೆಲವು  ಶಿಕ್ಷಣತಜ್ಞರ  ಪ್ರಕಾರ ಇದಕ್ಕೆ ಶಿಕ್ಣಣ  ಹಕ್ಕು ಕಾಯಿದೆ,  2009(ಖಖಿಇ)ಕಾರಣ. ಈ ಕಾಯಿದೆಯ 12ನೇ  ಸೆಕ್ಷನ್ ಪ್ರಕಾರ ಖಾಸಗಿ ಶಾಲೆಗಳು ಶೇ.25ರಷ್ಟು ಸೀಟುಗಳ ಅವಕಾಶವನ್ನು ಅನುಕೂಲ ರಹಿತ ಮಕ್ಕಳಿಗೆ ಕಲ್ಪಿಸಬೇಕು. ಈ ಕಾಯಿದೆಯಟೀಕಾಕಾರರು, “ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಸರ್ಕಾರಕ್ಕೆಅನುಕೂಲಕರ ಏಕೆಂದರೆ, ಈ ಮೂಲಕ, ಖಾಲಿ ಶಾಲಾ ಕಟ್ಟಡಗಳನ್ನು ನಿಭಾಯಿಸುವ ಮತ್ತು ಶಿಕ್ಷಕರಿಗೆ ಕೊಡುವ ಭಾರೀ ಸಂಬಳದ ಹೊರೆ ಸರ್ಕಾರಕ್ಕೆ ನಿವಾರಣೆಯಾಗುತ್ತದೆ” ಎನ್ನುತ್ತಾರೆ. ಖಾಸಗಿಯವರಿಗೆ  ಹೆಚ್ಚುವರಿ  ಮಕ್ಕಳನ್ನು ಸೇರಿಸಿಕೊಳ್ಳುವ  ಜವಾಬ್ದಾರಿಯಲ್ಲದೆ  ಸರ್ಕಾರದಿಂದ  ಮರುಪಾವತಿಯಾಗುವ ಕಡಿಮೆದರ, ವಿಳಂಬ ಮತ್ತು ಲಂಚದ ಗೋಳುಗಳು ಇವೆ.

ಶಿಕ್ಷಣದ ಗುಣಮಟ್ಟ ಹೆಚ್ಚು ಹೆಚ್ಚು ಕ್ಲೇಶಕರವಾಗುತ್ತಿದೆ.  ಪ್ರಥಮ್ ಎಂಬ ಸರ್ಕಾರೇತರ ಸಂಸ್ಥೆಯೊಂದು ಪ್ರಕಟಿಸಿರುವ 2016ರ ವಾರ್ಷಿಕ ಶಿಕ್ಷಣ ವರದಿಯ ಪ್ರಕಾರ ಗ್ರಾಮೀಣ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಕ್ಕಳಲ್ಲಿ ಶೇ.57 ಮಕ್ಕಳಿಗೆ ಗಣಿತದಲ್ಲಿ ಸರಳ ಭಾಗಾಕಾರವನ್ನು ಮಾಡಲಾಗಲಿಲ್ಲ ಮತ್ತು ಅರ್ಧದಷ್ಟು ಮಕ್ಕಳಿಗೆ ಸುಲಭವಾಗಿದ್ದ ಇಂಗ್ಲಿಷ್  ವಾಕ್ಯಗಳನ್ನು ಓದಲಾಗಲಿಲ್ಲ. ಇನ್ನೂ ಅಧ್ವಾನವೇನೆಂದರೆ, ಶೇ.30ರಷ್ಟು 8ನೆಯ ತರಗತಿಯ ಮಕ್ಕಳಿಗೆ 2ನೆಯ ತರಗತಿಯ ಪಠ್ಯವನ್ನು ಓದಲಾಗಲಿಲ್ಲ. ಕಂಡು ಕೊಂಡ ಇನ್ನಷ್ಟು ಅಂಶಗಳೇನೆಂದರೆ, ಸಾಕಷ್ಟು ಶಿಕ್ಷಕರುಗಳಿಲ್ಲ ಮತ್ತು ಇಳಿಮುಖವಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಿಂದಾಗಿ ಶಾಲೆಗಳು ಸಣ್ಣಗಾಗುತ್ತಿದ್ದಾವೆ ಹಾಗು ಏಕಶಿಕ್ಷಕ  ಕೋಣೆಗಳಾಗುತ್ತಿವೆ. ಕರ್ನಾಟಕದಲ್ಲಿ ಶಾಲಾ ಕಟ್ಟಡಗಳು  ಹೆಚ್ಚಿವೆ  ನಿಜ. ಆದರೆ ಸೌಲಭ್ಯಗಳಿಲ್ಲ. ಇದ್ದರೂ ಬಳಸಲು ಯೋಗ್ಯವಾಗಿಲ್ಲ. ಶೇ.34ರಷ್ಟು  ಶಾಲೆಗಳು ಶೌಚಾಲಯಗಳನ್ನು ಹೊಂದಿವೆ. ಆದರೆ ಬಳಸಲನರ್ಹವಾಗಿವೆ.

ಶಾಲೆಗಳಲ್ಲಿ ಭಾಷೆಗಳು

ಕನ್ನಡವು ಕರ್ನಾಟಕದಲ್ಲಿ ಬಹು ಸಂಖ್ಯಾತರು ಬಳಸುವ ರಾಜ್ಯ ಭಾಷೆಯಾಗಿದ್ದರೂ ಇಲ್ಲಿ ಇತರ  ಹಲವು ಭಾಷೆಗಳ ಬಳಕೆಯಿರುವುದರಿಂದ  ಕೆಲವು  ವಾಸ್ತವ  ಸಮಸ್ಯೆಗಳಿವೆ. ಸೂಕ್ತ ಪರಿಹಾರ ಕಂಡುಕೊಳ್ಳಲು ಸರ್ಕಾರವು ಗೋಕಾಕ್  ಸಮಿತಿಯನ್ನು ರಚಿಸಿತು. ಸಮಿತಿಯ ಶಿಫಾರಸ್ಸುಗಳು  ಹೀಗಿದ್ದುವು:
1. ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡವು  ಏಕೈಕ  ಪ್ರಥಮ ಭಾಷೆಯಾಗಬೇಕು. (150 ಅಂಕಗಳು)
2. ದ್ವಿತೀಯ ಭಾಷೆಯಾಗಿ ತಮಿಳು, ತೆಲುಗು, ಮಲಯಾಳಂ, ಮರಾಠಿ, ಗುಜರಾತಿ, ಉರ್ದು ಅಥವಾ ಇಂಗ್ಲಿಷ್‍ ಅಥವಾ ಪುರಾತನ ಭಾಷೆಗಳಾದ ಸಂಸ್ಕೃತ, ಅರೇಬಿಕ್, ಲ್ಯಾಟಿನ್, ಪರ್ಷಿಯನ್, ಗ್ರೀಕ್ ಭಾಷೆಗಳಲ್ಲಿ ಯಾವುದಾದರೂ ಒಂದು ಇರಬಹುದು. (100 ಅಂಕಗಳು)
3. ಆಯ್ಕೆ ಮಾಡಿಕೊಂಡಿರುವ ದ್ವಿತೀಯ ಭಾಷೆಯನ್ನು ಬಿಟ್ಟು 2ರಲ್ಲಿರುವ  ಭಾಷೆಗಳಲ್ಲಿ ಯಾವುದಾದರೂ ಒಂದನ್ನು ತೃತೀಯ ಭಾಷೆಯಾಗಿ ಓದ ಬಹುದು. (50 ಅಂಕಗಳು)
ಈ ವರದಿಯನ್ನು ಅಂಗೀಕರಿಸಿ ಸರ್ಕಾರವು ಕೆಲವು ಮಾರ್ಪಾಡುಗಳೊಂದಿಗೆ ಜಾರಿಗೆತಂದಿತು. ಸರ್ಕಾರದ ನೀತಿಗಳೇನೇ ಇದ್ದರೂ ಖಾಸಗಿ ಶಾಲೆಗಳು ಮಾತ್ರ ಇಂಗ್ಲಿಷ್ ಮಾಧ್ಯಮವನ್ನು ಪ್ರಾಥಮಿಕ ಶಾಲಾ ಮಟ್ಟದಿಂದಲೇ ಅಳವಡಿಸಿಕೊಂಡಿವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ  ಸಂದರ್ಭದಲ್ಲೇ ಇಂಗ್ಲಿಷ್  ಮಾಧ್ಯಮ ಅಳವಡಿಸಿಕೊಂಡಿರುವ  ಶಿವಮೊಗ್ಗ ಜಿಲ್ಲೆಯ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು 1000 ಇಂಗ್ಲಿಷ್ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ತೆರೆಯುವುದಾಗಿ ಹೇಳಿದ್ದಾರೆ.

ಬಿಕ್ಕಟ್ಟಿನಲ್ಲಿ ಉನ್ನತ  ಶಿಕ್ಷಣ

ಉನ್ನತ  ಶಿಕ್ಷಣ  ವಲಯದಲ್ಲಿ ವಿಶ್ವವಿದ್ಯಾಲಯಗಳ ನಿರ್ವಹಣೆಯೇ ಬಿಕ್ಕಟ್ಟಿನಲ್ಲಿದೆ. ಗುಣಾತ್ಮಕ  ಶಿಕ್ಷಣಕ್ಕಿಂತ  ಸಂಖ್ಯಾ ವಿಸ್ತರಣೆಯೇ ಪ್ರಧಾನವಾಗಿ ಬಿಟ್ಟಿದೆ. ರಾಜ್ಯದಲ್ಲಿ 27  ಸರ್ಕಾರಿ ವಿವಿಗಳಿವೆ. ಜೊತೆಗೆ ಖಾಸಗಿ ವಿವಿಗಳು. ಅಲ್ಲದೆ. ವೃತ್ತಿಪರ ವಿಷಯಗಳಾದ  ವೈದ್ಯಕೀಯ, ಕಾನೂನು,  ಕೃಷಿ,  ಎಂಜಿನಿಯರಿಂಗ್  ಗಳಿಗೆ  ಪ್ರತ್ಯೇಕ  ಸರ್ಕಾರಿ ವಿವಿಗಳೂ ಇವೆ. ಸಂಸ್ಕೃತ, ಜಾನಪದ, ಸಂಗೀತಕ್ಕೂ ವಿವಿಗಳಿವೆ. ಜ್ಞಾನ  ಮತ್ತು ಅಧ್ಯಯನ ಶೀಲತೆಯನ್ನು  ಹಾಗೂ ವಿದ್ಯಾರ್ಥಿಗಳಲ್ಲಿ  ಪ್ರಶ್ನಿಸುವ ಚೈತನ್ಯಗಳನ್ನು ಪ್ರವರ್ತಿಸಬೇಕಾದ ವಿವಿಗಳು ಇಂದು ರಾಜಕಾರಣದ ಗುಂಡಿಗಳಾಗಿ ಹೋಗಿವೆ.

ಸರ್ಕಾರಿ ವಿವಿಗಳು ಇಂದು ರೋಗಗ್ರಸ್ತವಾಗಿವೆ. ಖಾಲಿ ಬಿದ್ದಿರುವ ಬೋಧಕ ಹುದ್ದೆಗಳ ಸಂಖ್ಯೆಯೇ ಇದಕ್ಕೆ ಪುರಾವೆ. ಖಾಯಂ ಅಧ್ಯಾಪಕರಿಗಿಂತ ಹೆಚ್ಚು ಅತಿಥಿ ಉಪನ್ಯಾಸಕರಿದ್ದಾರೆ. ವಿವಿಗಳಿಗೆ ಉಪಕುಲಪತಿ ನೇಮಕಾತಿ ಪ್ರಕ್ರಿಯೆಯಲ್ಲೇ ವಿವಾದದ ಬೀಜಗಳಿರುತ್ತವೆ. ಕೆಲ ಸಂದರ್ಭಗಳಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯಗಳು ತಲೆಯೆತ್ತಿ ಉಪ ಕುಲಪತಿಗಳ ನೇಮಕಾತಿ ವಿಳಂಬವಾಗುತ್ತದೆ. ಒಂದು ಸಂದರ್ಭದಲ್ಲಿ 7 ವಿವಿಗಳಿಗೆ ಉಪ ಕುಲಪತಿಗಳೇ ಇರಲಿಲ್ಲ. ಒಂದು ವಿವಿ  2 ವರ್ಷ ಕಾಲ ಉಪ ಕುಲಪತಿ ಇಲ್ಲದೇ ನಡೆಯಿತು. ಎಂಥ ಅಧಃಪತನ ತಲುಪಿವೆಯೆಂದರೆ ಉಪ ಕುಲಪತಿಗಳ ವಿರುದ್ಧ ಅಕ್ರಮಗಳ ವಿಚಾರಣೆ ಎಂಬುದು ಮಾಮೂಲಾಗಿ ಬಿಟ್ಟಿದೆ. ಉಪ ಕುಲಪತಿಗಳ ಅಮಾನತ್ತುಗಳು  ಮತ್ತು ತಮಿಳುನಾಡಿನಲ್ಲಿ ವಜಾ ಸಹ ಆಗಿದೆ.

ವೃತ್ತಿಪರ  ಶಿಕ್ಷಣ –ಒಂದು ಉದಾರ ನೀತಿ

ಕರ್ನಾಟಕವು ವೃತ್ತಿಪರ ಶಿಕ್ಷಣ, ವಿಶೇಷವಾಗಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಒದಗಿಸುವಲ್ಲಿ  ಮುಂಚೂಣಿಯಲ್ಲಿದೆ. ಖಾಸಗಿ ವಿದ್ಯಾಸಂಸ್ಥೆಗಳಿಗೆ ಈ ಕ್ಷೇತ್ರದಲ್ಲಿಕರ್ನಾಟಕದ ಎಲ್ಲ ಸರ್ಕಾರಗಳೂ ಉದಾರವಾಗಿ ಸಹಕರಿಸಿವೆ. ಖಾಸಗಿ ವಲಯದ ಮೊದಲ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆ (ಬಿಎಂಎಸ್)1946ರಲ್ಲಿ ಮತ್ತು ಮಣಿಪಾಲದಲ್ಲಿ ಮೊದಲ ವೈದ್ಯಕೀಯ ಶಿಕ್ಷಣ ಸಂಸ್ಥೆ 1953ರಲ್ಲೂ ಪ್ರಾರಂಭವಾದುವು. ಇಲ್ಲಿಯವರೆಗೆ ಅಸಂಖ್ಯ  ಖಾಸಗಿ ಸಂಸ್ಥೆಗಳು ಆರಂಭವಾಗಿ ಅನಿಯಂತ್ರಿತವಾಗಿ ಬೆಳೆದು ಇಂದು ಅಕ್ರಮಗಳಲ್ಲಿ ತೊಡಗಿವೆ. ಹೀಗಾಗಿ 2017ರಲ್ಲಿ ರಾಜ್ಯ ಸರ್ಕಾರವು `ಕರ್ನಾಟಕರಾಜ್ಯ ವಿಶ್ವವಿದ್ಯಾಲಯ ಮಸೂದೆ’ಯನ್ನು ಜಾರಿಗೆ ತಂದಿತು. ಇದರಿಂದ ವಿವಿಗಳ ಮೇಲೆ ರಾಜಕೀಯ ಮತ್ತುಅಧಿಕಾರ ಶಾಹಿ ಹಿಡಿತ ಹೆಚ್ಚಾಯಿತು. ತಮಾಷೆಯೆಂದರೆ ಐಐಟಿ ಮತ್ತು ಐಐಎಂ ಗಳು ಹೆಚ್ಚಿನ ಸ್ವಾಯತ್ತತೆಯೆಡೆ  ಸಾಗುತ್ತಿವೆ, ರಾಜ್ಯದ ವಿವಿಗಳಲ್ಲಿ ಸ್ವಾಯತ್ತತೆ ಸವೆದು ಹೋಗುತ್ತಿದೆ.

ಶಿಕ್ಷಣವು ಸಂವಿಧಾನದಲ್ಲಿ ಒಪ್ಪಿ ಕೊಂಡಿರುವ ಸಮವರ್ತಿ  ಪಟ್ಟಿಯಲ್ಲಿರುವ ವಿಷಯ. ಯುಜಿಸಿ, ಅಖಿಲ ಭಾರತ ತಾಂತ್ರಿಕ  ಶಿಕ್ಷಣ ಸಂಸ್ಥೆ, ಭಾರತೀಯ ವೈದ್ಯಕೀಯ ಮಂಡಳಿಯಂಥ  ಕೇಂದ್ರೀಯ ನಿಯಂತ್ರಣಾ  ಸಂಸ್ಥೆಗಳು ತಮ್ಮ ಅದಕ್ಷತೆಗಾಗಿ ಕಟು  ಟೀಕೆಗಳಿಗೆ  ಒಳಗಾಗಿವೆ.

ಪ್ರಾದೇಶಿಕ ಅಸಮತೆ

2016ರ `ಆರ್ಥಿಕ ಸಮೀಕ್ಷೆ’ಯನ್ನು ಗಮನಿಸಿದರೆ ಭಾರತದಲ್ಲಿ ಅಸಮತೆಯೆಡೆಗಿನ ಪ್ರವೃತ್ತಿ ಕಾಲದಿಂದ ಕಾಲಕ್ಕೆ ಹೆಚ್ಚಾಗುತ್ತಿದೆ, ಕಡಿಮೆಯಾಗುತ್ತಿಲ್ಲ ಎಂಬ ವಿಷಯ ತಿಳಿದುಬರುತ್ತದೆ. ತಲಾ ಬದುಕುವ ಗುಣಮಟ್ಟ ಹೆಚ್ಚಾಗುತ್ತಿದೆ. ಹಾಗೆಯೇ ಅಸಮತೆಯೂ ಹೆಚ್ಚುತ್ತಿದೆ. ಅಂದರೆ, ಕ್ರೋಢೀ ಕರಣದ ಬದಲು ವಿಭಜನೆಯಾಗುತ್ತಿದೆ. ಅಸಮರ್ಥ ಆಡಳಿತ ಮತ್ತು ಸಾಂಸ್ಥಿಕ ಸುಳಿಗಳಿಂದಾಗಿ ಕ್ರೋಢೀ ಕರಣವು ಸಾಧ್ಯವಾಗುತ್ತಿಲ್ಲ. ಮುಂದುವರಿದ ರಾಜ್ಯಗಳನ್ನು `ಮಾದರಿ’ ಮಾಡುವ ಬದಲಿಗೆ  ಹಿಂದುಳಿದ ರಾಜ್ಯಗಳು ಆಡಳಿತವನ್ನು ಸುಧಾರಿಸಿ ಕೊಳ್ಳುವಂತೆ  ಒತ್ತಾಯಿಸುತ್ತಿಲ್ಲ ಎಂಬುದು ಒಂದು ಪ್ರಶ್ನೆ.

ಪ್ರಾದೇಶಿಕ  ಹಿಂದುಳಿದಿರುವಿಕೆಗೆ  ನಿಜವಾದ ಕಾರಣ, ಮಾನವ ಅಭಿವೃದ್ಧಿಯ ಕೊರತೆ. ಆಡಳಿತದಲ್ಲಿನ  ದಕ್ಷತೆಯೂ  ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕೆಲಸ ಮಾಡಿರುವ ನನ್ನ ಅನುಭವದ ಪ್ರಕಾರ, ಹಳೆ ಮೈಸೂರಿಗೆ ಹೋಲಿಸಿದರೆ, ಹಳೆ ಬಾಂಬೆ ಪ್ರಾಂತ್ಯದ  ಬೆಳಗಾವಿ, ಬಿಜಾಪುರ ಮತ್ತು ಕಾರವಾರ ಜಿಲ್ಲೆಗಳ ಆಡಳಿತ ಗುಣಮಟ್ಟ ಚೆನ್ನಾಗಿದೆ. ಮೈಸೂರುಕಡೆ  ಸಚಿವರಿಂದ ಶಾನು ಭೋಗರವರೆಗೆ ಎಲ್ಲ  ನಿಧಾನ. ಹೈದರಾಬಾದ್‍ ಕರ್ನಾಟಕ ಪ್ರದೇಶದಲ್ಲಿ ಇನ್ನೂ ಅಧ್ವಾನ. ಬಹಳ ನಿಧಾನ.

ಕೇವಲ ಹೆಚ್ಚುವರಿ  ನಿಧಿ  ಬಿಡುಗಡೆ ಮಾಡುವುದರಿಂದ ಅಥವಾ ಮೂಲ ಸೌಕರ್ಯಗಳನ್ನು ಒದಗಿಸುವುದರಿಂದ ಪ್ರಾದೇಶಿಕ ಅಸಮತೆಯನ್ನು ಸಮದೂಗಿಸುವುಕ್ಕೆ ಆಗುವುದಿಲ್ಲ.

ನಗರ ಬೆಳವಣಿಗೆಯ ನಿರ್ವಹಣೆ

ವಿಶ್ವಸಂಸ್ಥೆ ಸಾಮಾಜಿಕ ಮತ್ತು ಆರ್ಥಿಕ  ವ್ಯವಹಾರಗಳ ವಿಭಾಗದ ಪ್ರಕಾರ ಈ ಶತಮಾನದ ಅಭಿವೃದ್ಧಿಯ ಸವಾಲುಗಳಲ್ಲಿ ನಗರ ಬೆಳವಣಿಗೆಯ ನಿರ್ವಹಣೆ ಬಹಳ ಪ್ರಮುಖವಾದದ್ದು.

ನಗರೀಕರಣದ ಆಯಾಮಗಳು

21ನೆಯ ಶತಮಾನ “ನಗರಗಳ ಶತಮಾನ” ಎಂಬ ಮಾತೊಂದಿದೆ. ನಗರೀಕರಣವು ಜನರ ಬದುಕನ್ನು ರೂಪಿಸುವ  ಹಾಗೂ ಹದಗೆಡಿಸುವ ಒಂದು  ಪ್ರಬಲ ಶಕ್ತಿಯಾಗಿ ತಲೆ ಎತ್ತಿ ನಿಂತಿದೆ. ಜಗತ್ತಿನ ಅರ್ಧ ಜನರು ಇಂದು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಇದು  ಮೂರು ಆಯಾಮಗಳನ್ನು ಹೊಂದಿದೆ.  1. ಗ್ರಾಮೀಣ ಪ್ರದೇಶಗಳಿಂದ ವಲಸೆ,  2.  ಕಾರ್ಮಿಕರ ಹರಿವು ಮತ್ತು 3. ನಗರ ವಿಸ್ತರಣೆ. 1988ರಲ್ಲೇ `ರಾಷ್ಟ್ರೀಯ ನಗರೀಕರಣ ಸಮಿತಿ’ಯು, “ನಗರ ಭಾರತವು ಬೃಹತ್ತಾಗಿ ಬೆಳೆದಿದೆ. ಇದು ಭಯ ಹುಟ್ಟಿಸುವ ವಾಸ್ತವ” ಎಂದು ಹೇಳಿತ್ತು. ನಮ್ಮ ಯೋಜಕರು(plan ners)ಮತ್ತು ಆಡಳಿತ ಗಾರರು ಇದರ ಕಡೆ ಪೂರ್ಣ ಪ್ರಮಾಣದ ಮತ್ತುಏಕಾಗ್ರವಾದ ಗಮನ ನೀಡಬೇಕು ಎಂದೂ ಹೇಳಿತ್ತು.

ನಮ್ಮ ರಾಜ್ಯಗಳಲ್ಲಿ ಈ ನಗರ ಜನಸಂಖ್ಯೆ ಅಸಮವಾಗಿ ಹಂಚಿ ಹೋಗಿದೆ ಎಂಬುದನ್ನು ಮೊದಲು ಅರಿತು ಕೊಳ್ಳಬೇಕು. ದಕ್ಷಿಣ ಮತ್ತು ಪಶ್ಚಿಮದ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಉತ್ತರ ಮತ್ತು ಪೂರ್ವದ ರಾಜ್ಯಗಳಿಗಿಂತ ಹೆಚ್ಚು ನಗರೀಕರಣವಾಗಿದೆ. ಈ ಅಸಮತೋಲನವು ರಾಜ್ಯಗಳ ಅಸಮ ಅಭಿವೃದ್ಧಿಯ ದ್ಯೋತಕವಾಗಿದೆ. ಭಾರತದ ನಗರ ಜನಸಂಖ್ಯೆಯಲ್ಲಿ ಶೇ.70ರಷ್ಟು ಜನ ಒಂದನೇ ದರ್ಜೆಯ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಈ ನಗರಗಳು ಯಾವರೀತಿಯ ಹಿಡಿತಕ್ಕೂ ಸಿಗದೆ ಅಳತೆ ಮೀರಿ ಬೆಳೆಯುತ್ತಿವೆ. ಆದರೆ ನಮ್ಮಲ್ಲಿ ಸುಧಾರಣೆಯ ಪರಿಕರಗಳಿಲ್ಲ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಈ ನಗರಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಮತ್ತು ಅಭ್ಯುದಯಕ್ಕೆ ತಮ್ಮ ಕೊಡುಗೆ ನೀಡುತ್ತಿವೆ. ದೇಶದ ಭವಿಷ್ಯವು ನಮ್ಮ ನಗರಗಳ ಸುಪುಷ್ಟ ಆರ್ಥಿಕತೆಯೊಂದಿಗೆ ತಳುಕು ಹಾಕಿಕೊಂಡಿದೆ. ಆದರೆ ಅಂಥ ಆರ್ಥಿಕತೆಯ ಬೆಳೆವಣಿಗೆ ನಗರ ಸಂಸ್ಥೆಗಳ ಬೆಂಬಲವನ್ನು ಅವಲಂಬಿಸಿದೆ.

ನಗರ ವಿಕೇಂದ್ರೀಕರಣ

ಸಂವಿಧಾನದ ಪ್ರಕಾರ, ನಗರ ಅಭಿವೃದ್ಧಿಯು ಆಯಾ ರಾಜ್ಯಗಳ ವಿಷಯ ಆದ್ದರಿಂದ ನಗರಾಭಿವೃದ್ಧಿಯ  ಜವಾಬ್ದಾರಿಗಳು ರಾಜ್ಯಗಳೊಂದಿಗಿವೆ. ನಗರಾಡಳಿತ  ಸಂಸ್ಥೆಗಳು ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಗಳಿಗಾಗಿ ಯೋಜನೆಗಳನ್ನು ರೂಪಿಸುವ ಹಾಗೂ 12ನೆಯ ಶೆಡ್ಯೂಲ್ನಲ್ಲಿ ವಹಿಸಲಾಗಿರುವ ಯೋಜನೆಗಳ ಅನುಷ್ಠಾನ ಮತ್ತು ಆಚರಣೆಗಳಿಗೆ  ಸಂಬಂಧಿಸಿದ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಹೊಂದಿರುತ್ತವೆ. ಇದಕ್ಕೆ ಅಗತ್ಯವಾದ  ಕಾನೂನುಗಳನ್ನು (ಶಾಸನಗಳನ್ನು) ಮಾಡುವುದು ರಾಜ್ಯ  ಸರ್ಕಾರದ ಹೊಣೆ.

ನಗರ ಕರ್ನಾಟಕ

ಭಾರತದಲ್ಲಿ ಹೆಚ್ಚು ನಗರೀಕರಣ ವಾಗಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಉಳಿದ ಭಾರತದಂತೆಯೇ ನಗರಾಡಳಿತದ ಸಂರಚನೆಯು(urban governance structure)ಹಲವಾರು ಸಾಂಸ್ಥಿಕ ವಿಭಾಗಗಳಾಗಿದೆ. (institutional fragmentation)ನಗರಗಳಲ್ಲಿ ಚುನಾಯಿತವಾದ ಏಕೈಕ ಅಂಗ ನಗರ ಸಭೆ ಅಥವಾ ಪುರಸಭೆ, ಇತರ ಕೆಲವು ಸಂಸ್ಥೆಗಳು ನೀರು ಸರಬರಾಜು, ವಿದ್ಯತ್ ಸರಬರಾಜು, ಸಾರ್ವಜನಿಕ ಸಾರಿಗೆಯಂಥ ಸೇವೆಗಳನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತವೆ.

ನಗರದ ಮುಖ್ಯ ಸಮಸ್ಯೆಗಳು

ಕರ್ನಾಟಕದಲ್ಲಿ ವೇಗದ ನಗರೀಕರಣವು  ಹಲವು  ಸವಾಲುಗಳನ್ನು ಹುಟ್ಟಿ ಹಾಕಿದೆ. ಇಂಥ ಸವಾಲುಗಳಿಗೆ ಕೇಂದ್ರ ಸರ್ಕಾರವು ಎಚ್ಚೆತ್ತು ಕೊಳ್ಳುವ  ಮೊದಲೆ ರಾಜ್ಯ ಸರ್ಕಾರವು ಬಹಳ ಹಿಂದೆಯೇ ನಗರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ಸಾಹದ ನಿಲುವನ್ನು ತೋರಿಸಿದೆ. 1984ರಲ್ಲೇ ರಾಜ್ಯ ಸರ್ಕಾರವು `ಕರ್ನಾಟಕದ ನಗರ ನೀತಿ’ಯನ್ನು ರೂಪಿಸಿತು. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತಗಳು ಆಗಿಂದಾಗ್ಗೆ ನಗರ ಸುಧಾರಣೆಗಳು, ನಗರದ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಸೇವೆಗಳನ್ನು ತಲುಪಿಸುವಲ್ಲಿ ಹಲವಾರು ಮೊದಲ ಹೆಜ್ಜೆಗಳನ್ನು ಇಟ್ಟಿವೆ.

ಕೇಂದ್ರ ಸರ್ಕಾರವು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್(JNNURM)ಅಡಿಯಲ್ಲಿ 1. ನಗರ ಮೂಲ ಸೌಕರ್ಯ ಮತ್ತು ಆಡಳಿತ ಹಾಗೂ  2. ನಗರದ ಬಡಜನರಿಗೆ ಮೂಲಭೂತ  ಸೇವೆಗಳು ಎಂಬ ಎರಡು ಅಂಶಗಳ ಯೋಜನೆಯನ್ನು ದೇಶದ 63 ಬೃಹತ್ ನಗರಗಳಲ್ಲಿ ಆರಂಭಿಸಿತು. ಅಲ್ಲದೆ, ನಗರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ, ಸಣ್ಣ ಮತ್ತು ಮಧ್ಯಮ ನಗರಗಳಿಗೆ(UIDSSMT), ಸ್ವರ್ಣ ಜಯಂತಿ ಷಹ ರ್‍ರೋಜ್ಗಾರ್(SJSR)ಮತ್ತಿತರ ಯೋಜನೆಗಳನ್ನು ಪ್ರಾರಂಭಿಸಿತು. ಕರ್ನಾಟಕ ಸರ್ಕಾರವು ಪೌರಾಡಳಿತವನ್ನು ಗಣಕೀಕರಣಗೊಳಿಸಿ ತನ್ಮೂಲಕ ನಗರ ಸ್ಥಳ (spatial)ನೋಂದಣಿ ಮತ್ತು ಜಾಡು ಹಿಡಿಯುವ(tracking)ಪ್ರಕ್ರಿಯೆಗಳು ಹಾಗೂ ಸಾರ್ವಜನಿಕ ದೂರು ಪರಿಹಾರ ಘಟಕಗಳನ್ನು (public grievance redressal module)ಜಾರಿಗೆ ತಂದಿತು.

ಅನುಷ್ಠಾನ –ಕೀಲಿಕೈ

ವುಡ್ರೋ ವಿಲ್ಸನ್, ಪ್ರಥಮ ಮಹಾ ಯುದ್ಧದ ಸಮಯದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದವರು. ಸಾರ್ವಜನಿಕ ಆಡಳಿತ ಅವರ ಆಸಕ್ತಿಯ ವಿಷಯ. ಅವರ ಒಂದು ಮಾತು ಹೀಗಿದೆ: “ಆಡಳಿತ ಎಂದರೆ, ಕಾರ್ಯ ನಿರತ ಸರ್ಕಾರ”. ಯಾವುದೇ ಸಾರ್ವಜನಿಕ ನೀತಿ, ಕಾರ್ಯಕ್ರಮ ಅಥವಾ ಯೋಜನೆಗಳ ಯಶಸ್ವೀ ಕೀಲಿಕೈ, ಕಾರ್ಯಕ್ಷಮತೆ. ಅಂದರೆ ಅನುಷ್ಠಾನವು ಆಡಳಿತಗಾರರ ಕಾರ್ಯಕ್ಷೇತ್ರ, ಒಂದು ಮುಖ್ಯ ಕೀಲಿಕೈ.

ಸಂಗ್ರಹಾನುವಾದ: ಪರಮೇಶ್ವರ ಗುರುಸ್ವಾಮಿ.

Leave a Reply

Your email address will not be published.