ಆಂಡಯ್ಯ ಕವಿಯ ವಿಶಿಷ್ಟ ಖಂಡಕಾವ್ಯ ಕಬ್ಬಿಗರ ಕಾವ

ಕನ್ನಡವೆಂಬ ರತ್ನದ ಕನ್ನಡಿಯಲ್ಲಿ ನೋಡಿಕೊಂಡರೆ ದೋಷವೇನಾದರೂ ಬರುವುದೇ? -ಇದು ಕವಿ ಅಂಡಯ್ಯ ಬೀಸುವ ಚಾಟಿ ಏಟು!

ಹಳಗನ್ನಡ ಪರಂಪರೆಯಲ್ಲಿ ‘ಕಬ್ಬಿಗರ ಕಾವ’ ಹೆಸರಿನ ಖಂಡಕಾವ್ಯಕ್ಕೆ ವಿಶೇಷವಾದ ಸ್ಥಾನವಿದೆ. ಇದನ್ನು ರಚಿಸಿದ ಕವಿ ಆಂಡಯ್ಯ. ಇವನ ಕಾಲ ಹನ್ನೊಂದನೆ ಶತಮಾನದ ಕೊನೆ, ಹನ್ನೆರಡನೆ ಶತಮಾನದ ಆರಂಭ. ಈ ಕಾಲಘಟ್ಟ ಕನ್ನಡ ಸೃಜನಶೀಲ ಪ್ರಯೋಗದ ಸಂಕೀರ್ಣ ಕಾಲ. ಆಂಡಯ್ಯ ಚಂಪೂ ಕಾವ್ಯದ ಯುಗದಲ್ಲಿ ಇದ್ದರೂ ಅದಕ್ಕೆ ಸವಾಲೆಸೆದು ಹೊಸನೆಲೆಯ ಕಾವ್ಯ ರಚನೆಗೆ ಮುಂದಾದದ್ದು ಕನ್ನಡದ ಮಟ್ಟಿಗೆ ಅಪರೂಪದ ಸಂಗತಿ.

ಕನ್ನಡಕ್ಕೊಡೆಯನೋರ್ವನೆ ಪಂಪನೆನಿಸಿಕೊಂಡ ಮಹಾಕವಿ ‘ದೇಸಿಯೊಳ್ ಪುಗುವುದು ಪೊಕ್ಕು ಮಾರ್ಗದೊಳೆ ತಳ್ವುದು’ ಎಂಬ ಭಾಷಾ ಇಕ್ಕಟ್ಟಿನಲ್ಲಿ ಸಿಲುಕಿ ಮಾರ್ಗದ ಕಡೆ ವಾಲಿದ. ಮುಂದೆ ಬಂದ ಗಂಭೀರ ಕವಿಗಳೆಲ್ಲರೂ ಮಾರ್ಗ ಪರಂಪರೆಯನ್ನು ಮುನ್ನಡೆಸಿದರು. ಆದರೆ ಆಂಡಯ್ಯನು ಮಾತ್ರ ದೇಸಿ ಮಾರ್ಗವೇ ಈ ನೆಲದ ಮಾರ್ಗವೆಂದರಿತು ಅಚ್ಚಕನ್ನಡದಲ್ಲಿ ಕಾವ್ಯ ಬರೆಯುವ ಕೌಶಲವನ್ನು ತೋರಿದನು. ಆಂಡಯ್ಯ ಜೈನ ಧರ್ಮದ ಅನುಯಾಯಿಯಾಗಿದ್ದರೂ ಕಾವ್ಯಧರ್ಮವನ್ನು ಲೌಕಿಕಗೊಳಿಸಿದ. ಪೌರಾಣಿಕ ಕಥಾವಸ್ತುವಾದ ಶಿವ-ಮನ್ಮಥಕಥೆಯನ್ನು ಎಲ್ಲೂ ಆಗಮಿಕ ಚೌಕಟ್ಟಿನಲ್ಲಿರಿಸದೇ ಸಾಮಾಜೀಕರಣಗೊಳಿಸಿರುವುದು ಆತನ ಪ್ರತಿಭಾ ಕುಶಲತೆಗೆ ನಿದರ್ಶನ. ಕಬ್ಬಿಗರ ಕಾವ ಕೃತಿಯು ದೇಶಭಾಷಾ ದೃಷ್ಟಿಯಿಂದ ಅಧ್ಯಯನಕ್ಕೊಳಪಡುವಂಥದ್ದು. ಸಂಸ್ಕೃತ-ಪ್ರಾಕೃತದಿಂದ ಪ್ರೇರಿತರಾದ ಕನ್ನಡ ಬರೆಹಗಾರ ಮತ್ತು ಓದುಗರ ಸಮೂಹಕ್ಕೆ ಆಂಡಯ್ಯ ನೀಡುವ ಉತ್ತರ ಸೊಗಸಾಗಿದೆ-

ಕನ್ನಡದೊಳ್ಪಿನ ನುಡಿಯಂ
ಮುನ್ನಿದರೊಳೆ ನೋಡಿ ತಿಳಿದುಕೊಳ್ವುದು ಚದುರಂ
ರನ್ನದ ಕನ್ನಡಿಯಂ ನಲ
ವಿನ್ನೋಡಿದವಂಗೆ ಕುಂದದೇನಾದಪುದೋ||

ಚತುರ, ಜಾಣನಾದವನು ಕನ್ನಡದ ಸುಂದರ ನುಡಿಗಳನ್ನು ಇದರಲ್ಲಿ ಮೊದಲೇ ನೋಡಿ ತಿಳಿಯಲಿ. ಕನ್ನಡವೆಂಬ ರತ್ನದ ಕನ್ನಡಿಯಲ್ಲಿ ನೋಡಿಕೊಂಡರೆ ದೋಷವೇನಾದರೂ ಬರುವುದೇ ಎಂಬ ಚಾಟಿಯ ಮಾತನ್ನು ಆಡುತ್ತಾನೆ. ಇದು ಆಂಡಯ್ಯನ ಕನ್ನಡ ನುಡಿಪ್ರೇಮ. ಕವಿಯ ಸಮಕಾಲೀನ ಸಾಮಾಜಿಕ ಪರಿಸರ, ಸಾಹಿತ್ಯದ ದೃಷ್ಟಿಯಿಂದ ಭಾಷಿಕ ಸಂಘರ್ಷದ ಕಾಲ. ಪಂಡಿತರಿಂದ ದೇಸಿ ಭಾಷೆಗಳಿಗೆ ಮನ್ನಣೆ ಸಿಗಲಾರದ ಸಂದರ್ಭದಲ್ಲಿ ಕಬ್ಬಿಗರ ಕಾವ ರಚನೆಯಾದುದು ವಿಶೇಷ.

ಕನ್ನಡದಲ್ಲಿ ಕವಿರಾಜಮಾರ್ಗ ಮತ್ತು ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ನಾಡಿನ ವರ್ಣನೆಯು ಸೊಗಸಾಗಿ ಬಂದಿದೆ. ಅಂತೆಯೇ ಆಂಡಯ್ಯ ತನ್ನ ಕಾವ್ಯದಲ್ಲಿ ಕನ್ನಡ ನಾಡಿನ ವರ್ಣನೆಯನ್ನು ಮಾಡುತ್ತಾನೆ. ಕಾವ್ಯಾರಂಭದಲ್ಲಿಯೇ ದೇಶ-ಭಾಷಾ ವರ್ಣನೆ ಇದೆ. ಕವಿಯೇ ಹೇಳಿಕೊಂಡಂತೆ ಸೊಗಸಾದ ಸಂಸ್ಕತವನ್ನು ಬೆರಕೆ ಮಾಡದೆಯೇ ಕನ್ನಡದಲ್ಲಿ ಮನೋಹರವಾಗಿ ಕಾವ್ಯವನ್ನು ಹೇಳುವುದಕ್ಕೆ ಈ ಮುಂಚಿನ ಹಿರಿಯ ಕವಿಗಳು ಸಮರ್ಥರಾಗಲಿಲ್ಲ. ಆದ್ದರಿಂದ ತತ್ಸಮ, ತದ್ಭವ, ಸಮಸಂಸ್ಕತ ಭಾಷಾ ಪ್ರಯೋಗವೇ ಕಾವ್ಯದ ತುಂಬಾ ಆವರಿಸಿದೆ. ಕಾಮನ ಕಥೆಯ ಆರಂಭಿಸುವ ಮೊದಲೇ ಕನ್ನಡ ನಾಡಿನ ವರ್ಣನೆ ಹೀಗಿದೆ.

ತುಂಬಿದ ಬೆಳೆ ಹೊತ್ತು ನಿಂತ ಗದ್ದೆ, ತೋಟ, ಅದನ್ನು ಮುತ್ತಿಕೊಂಡ ಹಕ್ಕಿಗಳ ಹಿಂಡು, ಅವುಗಳನ್ನು ಹಿಡಿಯಲು ಸುಂದರ ಸ್ತ್ರೀಯರು, ಈ ಸುಂದರಿಯರನ್ನು ನೋಡಲು ಪ್ರವಾಸಿಗರು ಇದ್ದಾರೆ. ಸೊಗಸುಗಾರ್ತಿಯರ ಗುಂಪು ಇದೆ. ದೊಡ್ಡ ಪಟ್ಟಣಗಳಿವೆ. ಮಹಲುಗಳಿವೆ. ಮಾವು, ಮಲ್ಲಿಗೆ, ಕೋಗಿಲೆ, ಪಾರಿವಾಳಗಳ ಕಲರವವಿದೆ.

ಈ ನಾಡಿನಲ್ಲಿ ಹೊಂಡಗಳಿವೆ. ಅದರೊಳಗೆ ಅರ್ಧ ಅರಳಿದ ಕಮಲಗಳು, ಸುಗಂಧಕ್ಕೆ ಮುತ್ತಿಕೊಂಡು ಝೇಂಕರಿಸುವ ಹೆಣ್ಣು ದುಂಬಿಗಳು, ಅಲ್ಲಲ್ಲಿ ನೀರಲ್ಲಿರುವ ಹಂಸಗಳು, ವಿಸ್ತಾರವಾದ ಬಯಲಲ್ಲಿ ಕಬ್ಬಿನ ಹೊಲಗಳಿವೆ. ಎಳೆ ನೀರಿನ ಹೊಳೆಗಳಿವೆ. ತುಂಬಿದ ಬೆಳೆ ಹೊತ್ತು ನಿಂತ ಗದ್ದೆ, ತೋಟ, ಅದನ್ನು ಮುತ್ತಿಕೊಂಡ ಹಕ್ಕಿಗಳ ಹಿಂಡು, ಅವುಗಳನ್ನು ಹಿಡಿಯಲು ಸುಂದರ ಸ್ತ್ರೀಯರು, ಈ ಸುಂದರಿಯರನ್ನು ನೋಡಲು ಪ್ರವಾಸಿಗರು ಇದ್ದಾರೆ. ಸೊಗಸುಗಾರ್ತಿಯರ ಗುಂಪು ಇದೆ. ದೊಡ್ಡ ಪಟ್ಟಣಗಳಿವೆ. ಮಹಲುಗಳಿವೆ. ಮಾವು, ಮಲ್ಲಿಗೆ, ಕೋಗಿಲೆ, ಪಾರಿವಾಳಗಳ ಕಲರವವಿದೆ.

ಪಲವುಂ ನಾಲಗೆಯುಳ್ಳವಂ ಬಗೆವೊಡೆಂದುಂ ಬಣ್ಣಿಸಲ್ಕಾರನಂ
ನೆಲನಂ ಮತ್ತಿನ ಮಾನಿಸರ್ ಪೊಗಳಲೇನಂ ಬಲ್ಗೆರೆಂಬೊಂದು ಬ
ಲ್ಲುಲಿಯಂ ನೆಟ್ಟನೆ ತಾಳ್ದು ಕನ್ನಡಮೆನಿಪ್ಪಾನಾಡು ಚೆಲ್ವಾಯ್ತು ಮೆ
ಲ್ಲೆಲರಿಂ ಪೂತ ಕೊಳಂಗಳಿಂ ಕೆರೆಗಳಿಂ ಕಾಲೂರ್ಗಳಿಂ ಕೆಯ್ಗಳಿಂ ||

ಕನ್ನಡವೆಂಬ ಈ ನಾಡು ಸುಗಂಧಗಾಳಿಯಿಂದಲೂ ಅರಳಿದ ಈ ಸರೋವರ ಕೆರೆ, ಸಣ್ಣಸಣ್ಣ ಹಳ್ಳಿಗಳಿಂದ ಕೂಡಿದೆ. ನಗರ, ಹಳ್ಳಿಗಳಾವವು, ಬಾಗಿನಿಂತ ಮೋಡದ ಗುಂಪುಗಳಾವವು, ಕಾಡು ಯಾವುದು, ವನ ಯಾವುದು ಎಂದು ಹೇಳಲು ಅಸಾಧ್ಯವೆಂದು ಬರೆಯುತ್ತಾನೆ. ಅಷ್ಟೇ ಅಲ್ಲ ಕನ್ನಡ ನಾಡಿನಲ್ಲಿ ಮಲ್ಲಿಗೆ, ಸಂಪಿಗೆ, ದಾಳಿಂಬೆ, ಚೆಲುವಾದ ತೆಂಗು, ಅಡಕೆ, ಮಾವು ಇವುಗಳಲ್ಲದೇ ಬೇರೆ ಯಾವ ಗಿಡಮರಗಳೂ ಇಲ್ಲ. ಅಷ್ಟು ಸಮೃದ್ಧ, ಸಂಪದ್ಭರಿತ ನಾಡಿದು. ಮಂಗಗಳು ಎಳನೀರು ಕುಡಿದು ಬೀಸಾಡಿದ ಕಾಯಿಯ ನೀರು ಸೋರಿ ಮಡುವಾಗಿ ನಿಂತು ಆ ನೀರೇ ಅನೇಕ ವನವನ್ನು ಬೆಳೆಸಿವೆಯೆಂಬ ಅತಿ ಉತ್ಪ್ರೇಕ್ಷಾಲಂಕಾರದ ಮಾತುಗಳನ್ನು ಈ ನಾಡಿಗೆ ಪ್ರೀತಿಯಿಂದ ಕವಿ ಆಖ್ಯಾನ ಮಾಡಿದ್ದಾನೆ.

ನಾಡಿನ ತುಂಬ ಭತ್ತದ ಬೆಳೆ, ಚಿನ್ನದ ತಲೆಯೊಂದಿಗೆ ಬಾಗಿನಿಂತು ಶೋಭಿಸುತ್ತಿವೆ. ಕಮಲದ ಸರೋವರಗಳಿಂದ ನೀರುಂಡ ಗಾಳಿ ಹಾಯಾಗಿ ನಾಡಿನ ತುಂಬ ಬೀಸುತ್ತದೆ. ಕನ್ನಡನಾಡಿನ ಎಲ್ಲೆಡೆ ಮರಕ್ಕೆ ಬಳ್ಳಿ ಸುತ್ತಿಕೊಂಡಿದೆ, ತೋಟಗಳಲ್ಲಿ ಕೊಳಗಳಿವೆ, ಕೆರೆಗಳಲ್ಲಿ ಕಮಲಗಳಿವೆ, ಮಾವಿನ ಮರಗಳಲ್ಲಿ ಕೋಗಿಲೆಗಳಿವೆ, ಹೂಗಳ ಮೇಲೆ ಪತಂಗಗಳಿವೆ, ಹೊಂಡಗಳಲ್ಲಿ ಹಂಸಗಳಿವೆ, ವೇಶ್ಯೆಯರೆಲ್ಲಾ ಪ್ರಣಯದಲ್ಲಿ ತೊಡಗಿರುತ್ತಾರೆ, ಇಲ್ಲಿನ ನಿವಾಸಿಗಳು ಪ್ರಖ್ಯಾತರಾಗಿದ್ದಾರೆ.

ಕನ್ನಡ ನಾಡಿನ ವರ್ಣನೆಯನ್ನು ಪಂಪನು ‘ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯ…’ ಎಂದು ಉದ್ಗಾರವೆತ್ತಿದಂತೆ ಬಹುಶಃ ಆಂಡಯ್ಯನಿಗೂ ಆ ದಿವ್ಯ ಪ್ರೇರಣೆ ಆಗಿರಬೇಕು. ಇವನು ಕೂಡ-

ಗರುವರ ಗೊಟ್ಟಿಗಾರರ ನೆಗಳ್ತೆಯ ಮಿಂಡರ ಮೇಳಗಾರರ
ಕ್ಕರಿಗರ ಸಂದ ಕಬ್ಬಿಗರ ಜೋಡೆಯ ಬಂಡರಸಾರ್ದನೆತ್ತಗಾ
ರರ ಚದುರಂಗಕಾರರೊರೆಗಾರರ ಬಾಜಿಪ ಬೀಣೆಗಾರರಾ
ಗರಮೆನೆ ಪೆಂಪು ಸೊಂಪನೊಳಕೊಂಡೆಸೆದಿರ್ಪುವು ಸೊಳೆಗೇರಿಗಳ್||

ಶ್ರೇಷ್ಠರು, ಗೋಷ್ಠಿಕಾರರು, ಹೆಸರಾದ ವಿಟರು, ಮೇಳಗಾರರು, ವಿದ್ವಾಂಸರು, ಪ್ರಸಿದ್ಧ ಕವಿಗಳು, ವಿದ್ಯಾವಂತರು, ಬಲಿಷ್ಠರು, ಲೆತ್ತಗಾರರು, ಚದುರಂಗಕಾರರು, ವೀಣೆಗಾರರು ಇದ್ದರು. ಮತ್ತು ಇವರೆಲ್ಲರಿಗೆ ಸುಖ ಸಂತೋಷ ನೀಡುವ ಸೂಳೆಗೇರಿಗಳು ಶೋಭಿಸುತ್ತಿದ್ದವು. ಹೀಗೆ ಕನ್ನಡನಾಡಿನ ನಿಸರ್ಗ ರಮ್ಯತೆಯನ್ನು, ಸುಂದರ ಮನುಷ್ಯ ಜೀವನವನ್ನು ಮನಮುಟ್ಟುವಂತೆ ವರ್ಣಿಸಿಯಾದಮೇಲೆ ನಿಜವಾದ ಪಠ್ಯದ ಕತೆ ಆರಂಭವಾಗುತ್ತದೆ.

ಇಷ್ಟು ಸೊಗಸಾದ ಕನ್ನಡನಾಡಿನಲ್ಲಿ ಪೂವಿನ ಪೊಳಲು ಎಂಬ ರಾಜಧಾನಿಯಿದೆ. ಅದನ್ನಾಳುವ ರಾಜನ ಹೆಸರು ನನೆಯಂಬ. ಅವನು ಒಂದು ದಿನ ತನ್ನ ನಿಸರ್ಗರಮಣೀಯವಾದ ಅರಮನೆಯ ಬಳಿ ಸಂತೋಷದಿಂದ ಗೋಡೆಗಳ ಮೇಲೆ ಬರೆದ ಬಣ್ಣದ ಚಿತ್ರಗಳನ್ನು ನೋಡುತ್ತಿರುತ್ತಾನೆ. ಆಗ ನಗೆಗಾರನೆಂಬುವನು ಬಂದು ಚಿತ್ರದಲ್ಲಿರುವ ವನ ನೋಡುವಿರೇಕೆ ಮನೆಯ ಪಕ್ಕದಲ್ಲಿ ಬೆಳೆದ ಹೂದೋಟವನ್ನು, ಅಲ್ಲಿರುವ ಪ್ರಣಯಾಸಕ್ತ ಮಧುರ ಧ್ವನಿಯ ಹಂಸಗಳನ್ನು ನೋಡಿರೆಂದನು. ಆ ತೋಟವನ್ನು ಕೂಡ ಕವಿ ಆಂಡಯ್ಯ ದೇವಲೋಕದ ನಿಸರ್ಗದ ಸ್ವರ್ಗವೆಂಬಂತೆ ಬಣ್ಣಿಸಿದ್ದಾನೆ. ಈ ತೋಟದ ವರ್ಣನೆಗಾಗಿಯೇ ಇಪ್ಪತ್ತು ಪದ್ಯಗಳನ್ನು ಮೀಸಲಿಟ್ಟಿದ್ದಾನೆ ಕವಿ.

ಈಕೆ ಸ್ವರ್ಗದವಳೆಂದುಕೊಂಡು ನೀವು ಯಾರು ಎಂದು ಕೇಳಲಾಗಿ ಆಕೆ ಸಂತೋಷಕ್ಕಾಗಿ ತೋಟವನ್ನು ನೋಡಲು ಬಂದೆ ಎಂದಳು. ನನೆಯೆಂಬನ ಪೂರ್ವಕತೆಯನ್ನು ಆಕೆ ನೆನಪಿಸಿ ಹೇಳತೊಡಗಿದಳು. ಶಾಪಗ್ರಸ್ಥನಾದ ನನೆಯೆಂಬನು ಪೂರ್ವಜನ್ಮದಲ್ಲಿ

ಅಂತಹ ಸುಂದರ ತೋಟದ ಮಾವಿನ ಮರದ ಕೆಳಗೆ ವನದೇವತೆಯೇನೋ ಎಂಬಂತೆ ಸುಂದರಿಯೊಬ್ಬಳು ಕೂತಿದ್ದಳು. ಅವಳನ್ನು ನೋಡಿದ ನನೆಯೆಂಬನಿಗೆ ಅತೀವ ಅಚ್ಚರಿಯಾಗಿ ಭೂಮಿಯಲ್ಲಿ ಇಂಥವಳಿದ್ದಾಳೆಯೇ ಎಂದುಕೊಂಡ. ಈಕೆ ಸ್ವರ್ಗದವಳೆಂದುಕೊಂಡು ನೀವು ಯಾರು ಎಂದು ಕೇಳಲಾಗಿ ಆಕೆ ಸಂತೋಷಕ್ಕಾಗಿ ತೋಟವನ್ನು ನೋಡಲು ಬಂದೆ ಎಂದಳು. ನನೆಯೆಂಬನ ಪೂರ್ವಕತೆಯನ್ನು ಆಕೆ ನೆನಪಿಸಿ ಹೇಳತೊಡಗಿದಳು. ಶಾಪಗ್ರಸ್ಥನಾದ ನನೆಯೆಂಬನು ಪೂರ್ವಜನ್ಮದಲ್ಲಿ-

ಕಂಪಿನ ಪೊಳಲೆಂಬ ರಾಜಧಾನಿಯನ್ನಾಳುವ ಕಾಮನು. ಅವನ ಹೆಂಡತಿ ಚೆಲುವಿನ ಗೊಂಬೆಯಾದ ಇಚ್ಛೆಗಾರ್ತಿಯೆಂಬ ಹೆಸರು. ಈಕೆ ಹೂವಿನ ಕೊಳದಂತೆ ಸುಂದರಿ. ಈಕೆಯ ಸೌಂದರ್ಯಕ್ಕೆ ಚಂದ್ರನೇ ಕಳಂಕಿತನಾಗಿದ್ದಾನೆ. ಕಾಮ ಮತ್ತು ಇಚ್ಛೆಗಾರ್ತಿ ಸುಖದಿಂದಿದ್ದರು. ಪುಷ್ಪಬಾಣನಾದ ಈ ಕಾಮನಿಗೆ ಪ್ರಪಂಚದಲ್ಲಿ ಸೋಲದವರೆ ಇಲ್ಲ. ಒಂದು ದಿನ ಚಕೋರ ಪಕ್ಷಿಯು ಬಂದು- ಕಾಮದೇವನೇ ನಿನಗಾರು ಶತ್ರುಗಳೇ ಇಲ್ಲ. ಆದರೆ ಹಿಮಾಲಯದಲ್ಲಿ ವಾಸಿಸುವ ಶಿವನೆಂಬ ದುಷ್ಟ ಶೈವ ಯತಿಯು ಆಕಾಶದ ಬಾಲಚಂದ್ರನ್ನು ಸೆರೆಹಿಡಿದು ಸೊಕ್ಕಿನಿಂದ ಮೆರೆಯುತ್ತಿದ್ದಾನೆ ಎಂದು ಹೇಳುತ್ತದೆ.

ಶಿವ ಒಪ್ಪಲಿಲ್ಲ. ಆಗ ವಸಂತ ಮತ್ತು ಮಂದಮಾರುತ ಎಂಬ ಗೆಳೆಯರ ನೇತೃತ್ವದಲ್ಲಿ ಕೋಗಿಲೆ, ದುಂಬಿ, ಗಿಳಿ, ಚಕ್ರವಾಕ ಎಂಬ ದಂಡನಾಯಕರೊಂದಿಗೆ ತೆಂಕಣ ಗಾಳೆಯೆಂಬವನ್ನು ಸಾರಥಿಯನ್ನಾಗಿ ಮಾಡಿಕೊಂಡು ಕಾಮನು ಹಿಮಾಲಯಕ್ಕೆ ಬಂದನು.

ಕೋಪಗೊಂಡ ಕಾಮದೇವ ಪಂಚಮುಖದ ಶಿವನನ್ನು ಕೆಡಹುವೆನೆಂದು ಶಪಥ ಮಾಡುತ್ತಾನೆ. ಬ್ರಹ್ಮ ವಿಷ್ಣು, ಇಂದ್ರರೇ ನನ್ನ ಹೂವಿನ ಬಾಣಕ್ಕೆ ಸೋತಿದ್ದಾರೆ. ಇವನಾವ ಲೆಕ್ಕವೆಂದು ನೆತ್ತಿಗಣ್ಣನ ವಿರುದ್ಧ ಯುದ್ಧ ಘೋಷಿಸುತ್ತಾನೆ. ಆ ಮುಂಚೆ ತೆಂಗಾಳಿಯನ್ನು ಕಳಿಸಿ ಚಂದ್ರನನ್ನು ಬಿಡಲು ತಿಳಿಸುತ್ತಾನೆ. ಶಿವ ಒಪ್ಪಲಿಲ್ಲ. ಆಗ ವಸಂತ ಮತ್ತು ಮಂದಮಾರುತ ಎಂಬ ಗೆಳೆಯರ ನೇತೃತ್ವದಲ್ಲಿ ಕೋಗಿಲೆ, ದುಂಬಿ, ಗಿಳಿ, ಚಕ್ರವಾಕ ಎಂಬ ದಂಡನಾಯಕರೊಂದಿಗೆ ತೆಂಕಣ ಗಾಳೆಯೆಂಬವನ್ನು ಸಾರಥಿಯನ್ನಾಗಿ ಮಾಡಿಕೊಂಡು ಕಾಮನು ಹಿಮಾಲಯಕ್ಕೆ ಬಂದನು. ಮರಿದುಂಬಿಗಳು ಹೂವಿನ ಕುಡಿಯೆಂಬ ಖಡ್ಗವಿಡಿದು ಯುದ್ಧ ಮಾಡಿ ಶಿವನ ಪಾಳಯದಿಂದ ಬಂದ ವೀರಭದ್ರನ ಸೈನ್ಯವನ್ನು ಓಡಿಸಿದನು. ಆಗ ಕೆಂಡಗಣ್ಣ (ಶಿವ) ಪುಷ್ಟಬಾಣ (ಕಾಮ) ಎದುರಾದರು.

ಇವರ ಯುದ್ಧ ನೋಡಲು ದೇವಾನುದೇವತೆಗಳು ಸಜ್ಜಾದರು. ಸೆರೆ ಹಿಡಿದ ಚಂದ್ರನನ್ನು ಈಗಲಾದರೂ ಬಿಡು ಎಂದು ಕಾಮ ಕೇಳಿದ. ಒಪ್ಪದಿದ್ದಾಗ ತನ್ನ ಕಬ್ಬಿನ ಬಿಲ್ಲಿನಿಂದ ಕಾಮ ಹೂಬಾಣ ಬಿಟ್ಟನು. ಶಿವನ ಹಣೆ, ಕೆನ್ನೆ, ಅಂಗೈ, ತೊಡೆ, ತೋಳುಗಳಲ್ಲಿ ಹೂಬಾಣ ನೆಟ್ಟು ಆ ಕೂಡಲೇ ಅವನು ಅರ್ಧನಾರೀಶ್ವರನಾದನು. ಇದರಿಂದ ಕೋಪಗೊಂಡ ಹಣೆಗಣ್ಣನಾದ ಶಿವ ಹಿರಿಯರೆಂಬುದನ್ನು ಪರಿಗಣಿಸದೇ ನನ್ನೊಡನೇ ಸೊಕ್ಕಿನಿಂದ ಯುದ್ಧ ಮಾಡುವಿಯಾಯೆಂದು ನಿನ್ನ ಹೆಂಡತಿಯನ್ನು ಕೂಡದೇ, ಯಾರಿಗೂ ಕಾಣದೇ ನೀನು ಕಾಮನೆಂಬುದನ್ನು ಮರೆತು ಎಲ್ಲಾದರೂ ಇರು ಎಂದು ಶಾಪ ಕೊಟ್ಟನು.

ಅವನ ಬಾಣಗಳೆಲ್ಲಾ ಪುಷ್ಪ ಜಾತಿಗಳು. ಹೀಗೆ ಎಕಾಲಾಜಿಕಲ್ ನೆಲೆಯಲ್ಲಿ ಇಡೀ ಕಾವ್ಯವಿದೆ. ಇಲ್ಲಿ ಬಳಸಿದ ಕನ್ನಡ ಪದಜಾಲ ವಿಶಿಷ್ಟವಾಗಿದೆ. ಕೆಲವೊಮ್ಮೆ ಈ ಪದಗಳು ಅರ್ಥವಾಗುವುದಿಲ್ಲವಾದರೂ ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗ. ಇದೊಂದು ಖಂಡಕಾವ್ಯ. ಇಂತಹ ಪ್ರಯೋಗ ಕನ್ನಡ ಕಾವ್ಯ ಚರಿತ್ರೆಯಲ್ಲಿ ಈವರೆಗೂ ಬಂದಿಲ್ಲ. ಇದು ಆಂಡಯ್ಯನ ವಿಶೇಷ ಶಕ್ತಿ.

ಈ ಸುದ್ದಿ ತಿಳಿದ ಇಚ್ಛೆಗಾರ್ತಿ ಮೂರ್ಛೆ ಹೋದಳು. ನಂತರ ಎಚ್ಚೆತ್ತು ವಿರಹ ತಾಪದಿಂದ ಬಳಲುತ್ತಿದ್ದಳು. ಅಷ್ಟರಲ್ಲಿ ನೀನು ಶಿವನ ಶಾಪದಿಂದ ಹೂವಿನ ಪೊಳಲಿನ ರಾಜ ನನೆಯೆಂಬನಾಗಿ ಈ ತೋಟಕ್ಕೆ ಬಂದೆ. ನನ್ನ ಮಾತುಕೇಳಿ ನಿನಗೆ ಶಾಪ ವಿಮೋಚನೆಯಾಯಿತು ಎಂದು ಸುಂದರಿ ಪೂರ್ವಕತೆಯನ್ನು ತಿಳಿಸಿದಳು. ಇದನ್ನು ಕೇಳಿದ ತೋಟದ ಗಿಳಿಯೊಂದು ಕಂಪಿನ ಪೊಳಲಿಗೆ ಸುದ್ದಿ ಮುಟ್ಟಿಸುತ್ತದೆ. ಶಿವನನ್ನು ಗೆದ್ದು ಕಾಮ, ಇಚ್ಛೆಗಾರ್ತಿಯರು ಮೆರವಣಿಗೆ ಹೊರಟು ರಾಜಧಾನಿಯಲ್ಲಿ ಸುಖವಾಗಿದ್ದರು. ಇದು ಕಥೆ.

ಕವಿ ಆಂಡಯ್ಯ ನಿಜಾರ್ಥದಲ್ಲಿ ದೇಸಿಕವಿ, ಕನ್ನಡ ಕವಿ. ಈತನ ಕಾವ್ಯವನ್ನು ಓದಿದ ಸಂಸ್ಕತ ಪಂಡಿತರು ಮದನ ವಿಜಯವೆಂದೂ, ಇನ್ನೂ ಕೆಲವರು ಸೊಬಗಿನ ಸುಗ್ಗಿ ಎಂದೂ ಕರೆದದ್ದಾಗಿ ಕವಿಯೇ ಹೇಳಿಕೊಂಡಿದ್ದಾನೆ. ಆಂಡಯ್ಯನ ಈ ಕಬ್ಬಿಗರ ಕಾವವನ್ನು ಓದಿದರೆ ಕನ್ನಡ ನಾಡಿನ ನಿಸರ್ಗದ ಚೆಲುವು ಕಣ್ಣ ಮುಂದೆ ಬರುತ್ತದೆ. ಒಂದರ್ಥದಲ್ಲಿ ಈ ಕಾವ್ಯ ಕಾಡಿನ ಕಾವ್ಯ. ಬನದ ಕಾವ್ಯ, ಪರಿಸರದ ಕಾವ್ಯ. ಕಾಮನ ಸೈನ್ಯವೆಲ್ಲಾ ಪಶು, ಪಕ್ಷಿ ಪ್ರಾಣಿಗಳು. ಅವನ ಬಾಣಗಳೆಲ್ಲಾ ಪುಷ್ಪ ಜಾತಿಗಳು. ಹೀಗೆ ಎಕಾಲಾಜಿಕಲ್ ನೆಲೆಯಲ್ಲಿ ಇಡೀ ಕಾವ್ಯವಿದೆ. ಇಲ್ಲಿ ಬಳಸಿದ ಕನ್ನಡ ಪದಜಾಲ ವಿಶಿಷ್ಟವಾಗಿದೆ. ಕೆಲವೊಮ್ಮೆ ಈ ಪದಗಳು ಅರ್ಥವಾಗುವುದಿಲ್ಲವಾದರೂ ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗ. ಇದೊಂದು ಖಂಡಕಾವ್ಯ. ಇಂತಹ ಪ್ರಯೋಗ ಕನ್ನಡ ಕಾವ್ಯ ಚರಿತ್ರೆಯಲ್ಲಿ ಈವರೆಗೂ ಬಂದಿಲ್ಲ. ಇದು ಆಂಡಯ್ಯನ ವಿಶೇಷ ಶಕ್ತಿ.

*ಸಂಯೋಜಕರು, ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ.

One Response to " ಆಂಡಯ್ಯ ಕವಿಯ ವಿಶಿಷ್ಟ ಖಂಡಕಾವ್ಯ ಕಬ್ಬಿಗರ ಕಾವ

-ಡಾ.ಜಾಜಿ ದೇವೇಂದ್ರಪ್ಪ

"

Leave a Reply

Your email address will not be published.