ಆನ್‍ಲೈನ್ ಸೇವೆಯಲ್ಲಿ ಆಮೆಗತಿ!

ಅಂತೂ ಇಂತೂ ಅನುಮತಿ ಪಡೆದು ಉದ್ದಿಮೆ ಪ್ರಾರಂಭಿಸಿದಲ್ಲಿ ಕೇಂದ್ರ ಸರ್ಕಾರದ ಹೊರಲಾಗದ ತೆರಿಗೆ ಹೊರೆ, ಕರ್ನಾಟಕ ರಾಜ್ಯದ ರೋಗಗ್ರಸ್ತ ಹಣಕಾಸು ಸಂಸ್ಥೆಗಳು, ಕಾರ್ಮಿಕರ ಕೊರತೆಗಳು ಕೈಗಾರಿಕೆ ಬೆಳೆಯಲು ಅವಕಾಶ ನೀಡುತ್ತಿಲ್ಲ.

ನಮ್ಮ ರಾಜ್ಯದಲ್ಲಿ ಸರ್ ಎಮ್.ವಿಶ್ವೇಶ್ವರಯ್ಯನವರ ಕಾಲದಲ್ಲಿ ಅನೇಕ ಕೈಗಾರಿಕೆಗಳು, ಬ್ಯಾಂಕ್‍ಗಳು ಸ್ಥಾಪನೆಯಾದವು. ಇತ್ತೀಚಿಗಿನ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೀತಿಯಿಂದಾಗಿ ರಾಜ್ಯದಲ್ಲಿನ ಕೈಗಾರಿಕೆಗಳಿಗೆ ಸುಟ್ಟ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದ ಎಲ್ಲಾ ವಲಯದ ಕೈಗಾರಿಕೆಗಳು ದುಡಿಯುವ ಬಂಡವಾಳದ ಕೊರತೆ, ವಿದೇಶಿ ಮಾರುಕಟ್ಟೆಯ ಅಹಿತಕರ ಪೈಪೋಟಿ, ಕಾರ್ಮಿಕರ ಸಮಸ್ಯೆ, ಕಚ್ಚಾವಸ್ತುಗಳ ಅಲಭ್ಯತೆ ಸಮಸ್ಯೆಗಳನ್ನು ಎದುರಿಸುತ್ತಿವೆ. ಈವರೆಗೆ ಹೇಗೋ ಆಡಳಿತಗಾರರ ಚಾಣಾಕ್ಯತೆಯಿಂದ ಉದ್ಯಮಗಳನ್ನು ತಕ್ಕಮಟ್ಟಿನ ಲಾಭದಲ್ಲಿ ನಡಿಸಿಕೊಂಡು ಹೋಗಲಾಗುತ್ತಿತ್ತು. ಈಗ ರಾಜ್ಯದ ಕಳೆದ 10 ವರ್ಷಗಳ ರಾಜಕೀಯ ಅಸ್ಥಿರತೆಯಿಂದಾಗಿ ಎಲ್ಲಾ ವಲಯದ ಕೈಗಾರಿಕೆಗಳು ಬಾಗಿಲು ಹಾಕುವ ಪರಿಸ್ಥಿತಿಗೆ ಬಂದು ತಲುಪಿವೆ.

ರಾಜ್ಯದ ಕೈಗಾರಿಕೆ ನೀತಿಯಿಂದ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕಾದರೆ ತನ್ನ ಅರ್ಧಪಾಲು ಬಂಡವಾಳವನ್ನು ಸಂಬಂಧಿತ ಇಲಾಖೆಗಳಿಂದ ಪರವಾನಗಿ ಪಡೆಯುವಲ್ಲೇ ಖರ್ಚು ಮಾಡಬೇಕಾಗಿದೆ. ಮೊದಲನೆಯದಾಗಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಬೇಕಾಗಿದೆ. ಇದು ಸುಲಭದ ಕೆಲಸವಲ್ಲ. ಇದರಲ್ಲಿನ ನಿಯಮಗಳನ್ನು ಪಾಲಿಸಲು ಸಾಧ್ಯವಿಲ್ಲ. ಈ ಎಲ್ಲಾ ಕಾರ್ಯಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಇದರ ವೈಬ್ ಸೈಟ್ ಯಾವಾಗಲೂ ನೆಟ್‍ವರ್ಕ್ ತೊಂದರೆ, ಬ್ಯೂಸಿ ಸರ್ವರ್‍ಗಳಿಂದ ಕೂಡಿರುತ್ತದೆ!

ನಂತರ ಉದ್ದಿಮೆದಾರ ಉದ್ಯೋಗ ಪ್ರಾರಂಭಿಸಲು ಸಂಬಂಧಿತ ಇಲಾಖೆಗಳಾದ ಕೈಗಾರಿಕಾ ಇಲಾಖೆ, ಪರಿಸರ ಇಲಾಖೆ, ಸ್ಥಳೀಯ ಆಡಳಿತ ನಡೆಸುವ ಪುರಸಭೆ/ನಗರ ಸಭೆಗಳಿಂದ ಅನುಮತಿ ಪಡೆಯಬೇಕಾಗಿದೆ. ಇದನ್ನು ಸಹ ಆನ್ ಲೈನ್ ಮಾಡಲಾಗಿದ್ದು, ಪರವಾನಗಿ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸದರಿ ಅರ್ಜಿಗಳನ್ನು ಪುನಃ ಸಂಬಂಧಿತ ಇಲಾಖೆಗಳಿಗೆ ಅರ್ಜಿದಾರರು ನೀಡಬೇಕಾಗಿದೆ. ಇದರಿಂದ ಉದ್ದಿಮೆದಾರ ಸಂಬಂಧಿತ ಇಲಾಖೆಗೆ ಅಲೆದಾಡುವಂತಾಗಿದೆ. ಸರ್ಕಾರದ ಆನ್ ಲೈನ್ ಸೇವೆಗಳಿಂದಾಗಿ ಸರ್ಕಾರಿ ಕೆಲಸಗಳು ಆಮೆಗತಿಯ ವೇಗವನ್ನು ಹೊಂದಿವೆಯೇ ಹೊರತು ವೇಗವಾಗಿ ಮುಗಿಯುತ್ತಿಲ್ಲ. ಇಷ್ಟಾದರೂ ಯಾವುದೇ ಪರವಾನಗಿ ಪಡೆಯಬೇಕಾದರೂ ಇಲಾಖಾಧಿಕಾರಿಗೆ ಕೈಬಿಸಿ ಮಾಡುವುದು ತಪ್ಪಿಲ್ಲ.

ಅಂತೂ ಇಂತೂ ಅನುಮತಿ ಪಡೆದು ಉದ್ದಿಮೆ ಪ್ರಾರಂಭಿಸಿದಲ್ಲಿ ಕೇಂದ್ರ ಸರ್ಕಾರದ ಹೊರಲಾಗದ ತೆರಿಗೆ ಹೊರೆ, ಕರ್ನಾಟಕ ರಾಜ್ಯದ ರೋಗಗ್ರಸ್ತ ಹಣಕಾಸು ಸಂಸ್ಥೆಗಳು, ಕಾರ್ಮಿಕರ ಕೊರತೆಗಳು ಕೈಗಾರಿಕೆ ಬೆಳೆಯಲು ಅವಕಾಶ ನೀಡುತ್ತಿಲ್ಲ.

ನಮ್ಮ ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಸಕ್ಕರೆ ಕಾರ್ಖಾನೆಗಳನ್ನು ಕಾಣಬಹುದು. ಇದನ್ನು ಹೊರತುಪಡಿಸಿ ಸಣ್ಣಪುಟ್ಟ ಕೈಗಾರಿಕೆಗಳು ಬೆರಳೆಣಿಕೆಯಷ್ಟು ಕಾಣಸಿಗುತ್ತವೆ. ರಾಜ್ಯದಲ್ಲಿ ಪ್ರಾರಂಭವಾದ ಸಹಕಾರಿ ಸಂಘಗಳು ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಕಾಯ್ದೆ 1959ರ ಅಡಿಯಲ್ಲಿ ನೋಂದಣಿಯಾಗಿರುತ್ತವೆ.

ರಾಜ್ಯದಲ್ಲಿ ಎಲ್ಲಾ ರಂಗಗಳಲ್ಲಿ ತೊಡಗಿಸಿಕೊಂಡಿರುವ ಕ್ಷೇತ್ರ ಅಂದರೆ ಸಹಕಾರಿ ಕ್ಷೇತ್ರ. ಸಹಕಾರವೆಂದರೆ ಒಂದೇ ಉದ್ದೇಶಗಳನ್ನು ಹೊಂದಿರುವ ಜನರಿಂದ ರಚಿತವಾದ ಗುಂಪು. ನಮ್ಮ ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಸಕ್ಕರೆ ಕಾರ್ಖಾನೆಗಳನ್ನು ಕಾಣಬಹುದು. ಇದನ್ನು ಹೊರತುಪಡಿಸಿ ಸಣ್ಣಪುಟ್ಟ ಕೈಗಾರಿಕೆಗಳು ಬೆರಳೆಣಿಕೆಯಷ್ಟು ಕಾಣಸಿಗುತ್ತವೆ. ರಾಜ್ಯದಲ್ಲಿ ಪ್ರಾರಂಭವಾದ ಸಹಕಾರಿ ಸಂಘಗಳು ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಕಾಯ್ದೆ 1959ರ ಅಡಿಯಲ್ಲಿ ನೋಂದಣಿಯಾಗಿರುತ್ತವೆ. ಇವು ಯಾವುದೇ ವ್ಯವಹಾರ ಪ್ರಾರಂಭಿಸಬೇಕಾದರೂ ಸಹಕಾರ ಇಲಾಖೆಯಿಂದ ಅನುಮತಿ ಪಡೆದು ಕಾನೂನಿನ ಚೌಕಟ್ಟಿನ ಒಳಗೆ ನಡೆಸಬೇಕಾಗುತ್ತದೆ.

ಹೀಗಾಗಿ ಸಹಕಾರಿ ಕ್ಷೇತ್ರದ ಸ್ವಾಮ್ಯದಲ್ಲಿ ನಡೆಯುತ್ತಿರುವ ಕೈಗಾರಿಕೆಗಳು ಕಾನೂನುಬದ್ಧವಾಗಿ ವ್ಯವಹಾರಗಳನ್ನು ನಡೆಸುತ್ತಿವೆ. ಹೀಗಿರುವಾಗ ಖಾಸಗಿ ವಲಯದವರು ಮಾಡಿದಂತೆ ತೆರಿಗೆ ವಂಚನೆ, ಕಳ್ಳಸಾಗಾಣಿಕೆಯಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳವುದಿಲ್ಲ. ಅಷ್ಟೇ ಅಲ್ಲದೆ ಸಹಕಾರಿ ವಲಯದ ಕೈಗಾರಿಕೆಗಳಲ್ಲಿ ಅತಿಯಾದ ನೀತಿ ನಿಯಮಗಳ ಹೇರುವಿಕೆ, ಹಣಕಾಸು ನೀಡುವ ಸಂಸ್ಥೆಗಳ ಅಲಭ್ಯತೆಗಳು, ದುಡಿಯುವ ಬಂಡವಾಳ ಕೊರತೆ, ಕಚ್ಚಾವಸ್ತುಗಳ ಕೊರತೆ, ಅತಿಯಾದ ತೆರಿಗೆಗಳಿಂದ ಕೈಗಾರಿಕೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಎಡಗೈಯಲ್ಲಿ ಜೀವ ಹಿಡಿದು ನಡೆಯುತ್ತಿವೆ.

ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರ ಚೇತರಿಸಿಕೊಂಡು ಉತ್ತುಂಗದ ಮಟ್ಟಕ್ಕೆ ಏರಬೇಕಾದರೆ ಅಳಿವಿನ ಅಂಚಿನಲ್ಲಿರುವ ಕೈಗಾರಿಕೆಗಳಿಗೆ ಟ್ಯಾಕ್ಸ್ ರಿಯಾಯಿತಿ, ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕಾಗಿದೆ. ಕೈಗಾರಿಕೆಗಳಿಗೆ ತಮ್ಮ ವ್ಯವಹಾರ ವಿಸ್ತರಿಸಲು, ಹೊಸ ಕಾರ್ಯಗಳನ್ನು ಕೈಗೊಳ್ಳಲು ಸ್ವಾಯುತ್ತತೆ ನೀಡಿ, ವಿನಾಕಾರಣ ಹೇರುತ್ತಿರುವ ಅತಿಯಾದ ತೆರಿಗೆ, ಪಾಲಿಸಲು ಸಾಧ್ಯವಾಗದ ಕೈಗಾರಿಕೆ ನಿಯಮಗಳನ್ನು ಕೈಬಿಡಬೇಕಾಗಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಕೈಗಾರಿಕೆಗಳನ್ನು ಯುವಜನತೆಗೆ ಪ್ರಾರಂಭಿಸಲು ಅನುಕೂಲವಾಗುವಂತಹ ಯೋಜನೆಗಳನ್ನು ಪ್ರಾರಂಭಿಸಿ, ಸ್ವಂಯಂ ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡಬಹುದಾಗಿದೆ. ಈ ಎಲ್ಲಾ ಅಂಶಗಳು ಸಹಕಾರಿ ಕ್ಷೇತ್ರಕ್ಕೂ ಅನ್ವಯಿಸುತ್ತದೆ.

*ಲೇಖಕರು ಶಿರಸಿಯ ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆ ಟಿ.ಎಸ್.ಎಸ್. ನ ಪ್ರಧಾನ ವ್ಯವಸ್ಥಾಪಕರು. ಮೂಲತಃ ಶಿರಸಿ ತಾಲೂಕಿನ ಹಲಸನಹಳ್ಳಿಯ ಕೃಷಿ ಕುಟುಂಬಕ್ಕೆ ಸೇರಿದ*

Leave a Reply

Your email address will not be published.