ಆರ್.ಎಸ್.ಎಸ್. ಕುರಿತ ಅಧ್ಯಯನ ಆಧಾರಿತ ಕೃತಿಗಳು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಕಳೆದ ಎರಡು ದಶಕಗಳಲ್ಲಿ ಹಲವಾರು ಉತ್ಕೃಷ್ಟ ಕೃತಿಗಳು ಹೊರಬಂದಿವೆ. 1990ರ ದಶಕದಲ್ಲಿ ಹಿಂದೂ ರಾಷ್ಟ್ರೀಯತೆಯು ಪ್ರವರ್ಧಮಾನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಘ ಪರಿವಾರಕ್ಕೆ ಸೇರಿದ ಸಂಘಟನೆಗಳು, ಅವುಗಳ ವಿಚಾರಧಾರೆ, ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ಪ್ರಪಂಚದಾದ್ಯಂತ ಹಲವಾರು ವಿದ್ವಾಂಸರು ಕೈಗೊಂಡಿದ್ದಾರೆ. ಅಂತಹ ಅಧ್ಯಯನ ಆಧಾರಿತ ಕೃತಿಗಳನ್ನು ಇಲ್ಲಿ ಸಮಾಜಮುಖಿಯ ಓದುಗರ ಗಮನಕ್ಕೆ ತರುತ್ತಿದ್ದೇವೆ.

ಆರ್.ಎಸ್.ಎಸ್. ಕುರಿತಾದ ಅಧ್ಯಯನವನ್ನು ಮಾಡಿರುವ ವಿದ್ವಾಂಸರ ಪೈಕಿ ಪ್ರಮುಖರು ವಾಲ್ಟರ್ ಆಂಡರ್ಸನ್ ಮತ್ತು ಶ್ರೀಧರ್ ದಾಮ್ಲೆ. ಅವರ ಎರಡು ಮುಖ್ಯ ಕೃತಿಗಳಲ್ಲಿ ಮೊದಲನೆಯದು ‘ದ ಬ್ರದರ್‍ಹುಡ್ ಇನ್ ಸಾ¥sóÀ್ರನ್ -ದ ರಾಷ್ಟ್ರೀಯ ಸ್ವಯಂಸೇವಕ ಸಂಘ್ ಅಂಡ್ ಹಿಂದು ರಿವೈವಲಿಸಮ್’ (ಪೆಂಗ್ವಿನ್: 2019). ಈ ಕೃತಿಯಲ್ಲಿ ಆಂಡರ್ಸನ್ ಮತ್ತು ದಾಮ್ಲೆಯವರು 1925ರಿಂದ ಇಂದಿನ ತನಕ ಆರ್.ಎಸ್.ಎಸ್. ಬೆಳವಣಿಗೆಯನ್ನು ಪುನಾರಚಿಸಿದ್ದಾರೆ. ಓದುಗರಿಗೆ ಆರ್.ಎಸ್.ಎಸ್. ನ ಆಂತರಿಕ ವಿದ್ಯಮಾನಗಳನ್ನು ವ್ಯವಸ್ಥಿತವಾಗಿ ಪರಿಚಯಿಸುವ ಮೊದಲ ಕೃತಿಯಿದು. ಆರ್.ಎಸ್.ಎಸ್. ಹುಟ್ಟು, ವಿಚಾರಧಾರೆ, ತರಬೇತಿ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಂಡರ್ಸನ್ ಮತ್ತು ದಾಮ್ಲೆಯವರು ಚರ್ಚಿಸುತ್ತಾರೆ.  

ಆಂಡರ್ಸನ್ ಮತ್ತು ದಾಮ್ಲೆಯವರ ಎರಡನೆಯ ಪ್ರಮುಖ ಕೃತಿಯಾದ ‘ದ ಆರ್.ಎಸ್.ಎಸ್. ಎ ವ್ಯೂ ಟು ದ ಇನ್ಸೈಡ್ (ವೈಕಿಂಗ್, 2018) ಗ್ರಂಥವು ಆರ್.ಆರ್.ಎಸ್. ವಿವಿಧ ಕ್ಷೇತ್ರಗಳ ಮೇಲೆ ಬೀರಿರುವ ಪ್ರಭಾವವನ್ನು ವಿಶ್ಲೇಷಿಸುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಪರಿವಾರದ ಇತರೆ ಸಂಘಟನೆಗಳು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಹೇಗೆ ಅತ್ಯಂತ ಕ್ಷಿಪ್ರವಾಗಿ ಬೆಳೆದವು? ಜಾಗತೀಕರಣಕ್ಕೊಳಗಾಗಿರುವ ಈ ಕಾಲದ ಭಾರತದ ಹೊಸ ಸಾಮಾಜಿಕ ಮತ್ತು ಆರ್ಥಿಕ ಸಂದರ್ಭಗಳಿಗೆ ಆರ್.ಅರ್.ಎಸ್. ಹೇಗೆ ಪ್ರತಿಕ್ರಿಯಿಸಿದೆ? ಅದರ ಕ್ಷಿಪ್ರ ಬೆಳೆವಣಿಗೆಯು ಭಾರತದ ರಾಜಕಾರಣ ಮತ್ತು ಸಾರ್ವಜನಿಕ ನೀತಿಗಳ ಮೇಲೆ ಯಾವ ಬಗೆಯ ಪರಿಣಾಮವನ್ನು ಬೀರಿದೆ? ಈ ಮೂರು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಂಘವು ತನ್ನ ಇಂದಿರುವ ಪ್ರಭಾವವನ್ನು ಹೇಗೆ ಗಳಿಸಿಕೊಂಡಿತು ಮತ್ತು ಭಾರತೀಯ ಜನತಾ ಪಕ್ಷವೂ ಸೇರಿದಂತೆ ಪರಿವಾರದ ಇತರೆ ಸಂಘಟನೆಗಳ ಜೊತೆಗೆ ಅದರ ಸಂಬಂಧಗಳ ಚಿತ್ರಣವನ್ನು ಆಂಡರ್ಸನ್ ಮತ್ತು ದಾಮ್ಲೆ ಒದಗಿಸುತ್ತಾರೆ.

ಪತ್ರಕರ್ತ ನೀಲಾಂಜನ್ ಮುಖೋಪಾಧ್ಯಾಯ ಅವರು ಭಾರತದ ಬಲಪಂಥೀಯ ರಾಜಕಾರಣದ ಬಗ್ಗೆ ವಿಶದವಾಗಿ ಬರೆದಿರುವವರು. ಅವರ ಕೃತಿಯಾದ ‘ದ ಅರ್.ಎಸ್.ಎಸ್. ಐಕಾನ್ಸ್ ಅ¥sóï ದ ಇಂಡಿಯನ್ ರೈಟ್’ (ವೆಸ್ಟಲ್ಯಾಂಡ್ ಪಬ್ಲಿಕೇಷನ್ಸ್, 2019) ಗ್ರಂಥವು ಹಿಂದೂ ರಾಷ್ಟ್ರೀಯವಾದಿ ರಾಜಕಾರಣದ ಪ್ರಮುಖ ವ್ಯಕ್ತಿತ್ವಗಳ ಬದುಕಿನ ಚಿತ್ರಣವನ್ನು ಒದಗಿಸುತ್ತದೆ. ಆರ್.ಎಸ್.ಎಸ್. ಸ್ಥಾಪಕರಾದ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಮೊದಲಾಗಿ ಸಾವರ್ಕರ್, ಗೋಳ್ವಾಲ್ಕರ್, ಶ್ಯಾಮಾಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ, ಬಾಳಾಸಾಹೇಬ್ ದೇವರಸ್, ವಿಜಯರಾಜೆ ಸಿಂಧಿಯಾ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅದ್ವಾನಿ, ಅಶೋಕ್ ಸಿಂಘಾಲ್ ಮತ್ತು ಬಾಳಾ ಠಾಕ್ರೆಯವರ ಜೀವನಚಿತ್ರಣವನ್ನು ಕೊಡುವ ಮೂಲಕ ಸಂಘ ಪರಿವಾರದ ಇತಿಹಾಸವನ್ನು ಪರಿಚಯಿಸುವ ಕೆಲಸವನ್ನು ಮುಖೋಪಾಧ್ಯಾಯ ಮಾಡುತ್ತಾರೆ.

ಇಂತಹ ಮತ್ತೊಂದು ವ್ಯವಸ್ಥಿತ ಅಧ್ಯಯನಗಳ ಸಂಕಲನವನ್ನು ಅಂಕಣಕಾರ ಮತ್ತು ರಾಜಕೀಯಶಾಸ್ತ್ರಜ್ಞ ಕ್ರಿಸ್ಟೋಫರ್ ಜಾ¥sóÀ್ರಲೋ ಅವರು ‘ದ ಸಂಘ ಪರಿವಾರ್ ಎ ರೀಡರ್’ (ಆಕ್ಸ¥sóÀರ್ಡ್ ಯೂನಿವರ್ಸಿಟಿ ಪ್ರೆಸ್, 2005) ಎಂಬ ಶೀರ್ಷಿಕೆಯಡಿಯಲ್ಲಿ ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಸ್ವತಃ ಜಾ¥sóÀ್ರಲೋ ಸೇರಿದಂತೆ ಥಾಮಸ್ ಬ್ಲಾಮ್ ಹ್ಯಾನ್ಸನ್, ತನಿಕಾ ಸರ್ಕಾರ್, ಮಂಜರಿ ಕಟ್ಜು, ಆಂಡರ್ಸನ್ ಮತ್ತು ದಾಮ್ಲೆಯವರ 20 ಪ್ರಬಂಧಗಳಿವೆ. ಈ ಪ್ರಬಂಧಗಳಲ್ಲಿ ಸಂಘ ಪರಿವಾರದ ಮುಖ್ಯ ಅಂಗಸಂಸ್ಥೆಗಳ ಉದ್ದೇಶ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ವಿಸ್ತೃತವಾದ ಚರ್ಚೆಯಿದೆ. ಭಾಜಪದ ಜೊತೆಗೆ, ವಿಶ್ವಹಿಂದೂ ಪರಿಷದ್, ಬಜರಂಗದಳ, ರಾಷ್ಟ್ರೀಯ ಸೇವಿಕಾ ಸಮಿತಿ, ವನವಾಸಿ ಕಲ್ಯಾಣ ಆಶ್ರಮ, ಸೇವಾ ಭಾರತಿ, ಸ್ವದೇಶಿ ಜಾಗರಣ ಮಂಚಗಳು ಇಲ್ಲಿನ ಪ್ರಬಂಧಗಳ ಕೇಂದ್ರಬಿಂದುಗಳಾಗಿವೆ.

ಜಾ¥sóÀ್ರಲೋ ಸಂಪಾದಿಸಿರುವ ಮತ್ತೊಂದು ಬಹುಮುಖ್ಯವಾದ ಕೃತಿಯೆಂದರೆ ‘ಹಿಂದೂ ನಾಷನಲಿಸಮ್ ಎ ರೀಡರ್’ (ಪ್ರಿನ್ಸಟನ್ ಯೂನಿವರ್ಸಿಟಿ ಪ್ರೆಸ್, 2007). ದಕ್ಷಿಣ ಏಷ್ಯಾದ ಧಾರ್ಮಿಕ ರಾಷ್ಟ್ರೀಯತೆಗಳ ಬಗ್ಗೆ ವಿಶೇಷ ಪರಿಣತಿ ಹೊಂದಿರುವ ಜಾ¥sóÀ್ರಲೋ ತಮ್ಮ ಸಂಶೋಧನೆಗಳ ಸಮಯದಲ್ಲಿ ಅಭ್ಯಸಿಸಿದ ಐತಿಹಾಸಿಕ ದಾಖಲೆಗಳು ಮತ್ತು ಹಿಂದೂ ರಾಷ್ಟ್ರೀಯತೆಯ ಅಧ್ವರ್ಯುಗಳ ಬರಹಗಳ ಆಯ್ದ ಭಾಗಗಳನ್ನು ಇಲ್ಲಿ ಸಂಕಲಿಸಿದ್ದಾರೆ. ದಯಾನಂದ ಸರಸ್ವತಿ, ಹರಬಿಲಾಸ ಸರ್ದಾ, ಮದನಮೋಹನ ಮಾಳವೀಯಾ, ಲಾಲಾ ಲಜಪತ ರಾಯ್, ಸ್ವಾಮಿ ಶ್ರದ್ಧಾನಂದ, ಸಾವರ್ಕರ್, ಗೋಲ್ವಾಲ್ಕರ್, ದೀನ್‍ದಯಾಲ್ ಉಪಾಧ್ಯಾಯ ಮತ್ತು ಬಲರಾಜ್ ಮಧೋಕರ ಬರಹಗಳನ್ನು ಇಲ್ಲಿ ಓದುಗರು ಕಾಣಬಹುದು. ಜೊತೆಗೆ ಹಿಂದೂ ರಾಷ್ಟ್ರೀಯವಾದಿಗಳಿಗೆ ಮುಖ್ಯವಾಗಿರುವ ವಿಷಯಗಳಾದ ಜಮ್ಮು ಮತ್ತು ಕಾಶ್ಮೀರ, ಮತಾಂತರ, ರಾಷ್ಟ್ರೀಯ ಭಾಷೆ, ಶಿಕ್ಷಣ, ಅಯೋಧ್ಯಾ ವಿವಾದ, ಜಾತ್ಯಾತೀತತೆ ಇತ್ಯಾದಿಗಳ ಬಗ್ಗೆ ಸಂಘ ಪರಿವಾರದ ನಿಲುವುಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸುವ ದಾಖಲೆಗಳು ಸಹ ಇಲ್ಲಿವೆ. ಜಾ¥sóÀ್ರಲೋ ಅವರ ವಿಸ್ತøತವಾದ ಪರಿಚಯಾತ್ಮಕ ಮುನ್ನುಡಿಯು ಕೃತಿಯ ಮಹತ್ವವನ್ನು ಹೆಚ್ಚಿಸುತ್ತದೆ.

ಮುಂದಿನ ಎರಡು ಕೃತಿಗಳು ಸಂಘ ಪರಿವಾರದ ಒಳಗಿನಿಂದಲೆ ಬಂದಿರುವ ಸ್ವಗ್ರಹಿಕೆಗಳು ಮತ್ತು ಅದರ ಮುಂದಿರುವ ಸವಾಲುಗಳ ಚಿತ್ರಣವನ್ನು ಮುಂದಿಡುತ್ತವೆ. ಸುನಿಲ್ ಅಂಬೇಕರ್ ಅವರ ‘ದ ಆರ್.ಎಸ್.ಎಸ್. ರೋಡ್‍ಮ್ಯಾಪ್ಸ್ ¥sóÀರ್ ದ 21ಸ್ಟ್ ಸೆಂಚುರಿ’ (ರೂಪಾ, 2019) ಕೃತಿಯು ಸಂಘ ಪರಿವಾರವು ಕಳೆದ ಶತಮಾನದ ತನ್ನ ಪ್ರಯಾಣವನ್ನು ಹೇಗೆ ಗ್ರಹಿಸುತ್ತದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡುತ್ತದೆ. ಅಂಬೇಕರ್ ಅವರು ಸಂಘದ ಹಿರಿಯ ಪ್ರಚಾರಕರು ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವವರು. ಈ ಕೃತಿಯಲ್ಲಿ ಭಾರತದ ಕುರಿತಾದ ಸಂಘ ಪರಿವಾರದ ಸಂಘಟನೆಯ ಗ್ರಹಿಕೆಗಳು; ಭಾರತದಲ್ಲಿ ಮುಸ್ಲಿಮರು ಮತ್ತಿತರ ಅಲ್ಪಸಂಖ್ಯಾತರ ಸ್ಥಾನಮಾನ; ಭಾರತೀಯ ಇತಿಹಾಸವನ್ನು ಪುನಾರಚಿಸುವುದು, ಕಳೆದ ಎರಡು ದಶಕಗಳ ಸಾಮಾಜಿಕ ಬದಲಾವಣೆಗಳ ಬಗ್ಗೆ ಸಂಘ ಪರಿವಾರದ ನಿಲುವು ಇತ್ಯಾದಿ ವಿವಾದಾತ್ಮಕ ವಿಷಯಗಳ ಬಗ್ಗೆ ಅಂಬೇಕರ್ ತಮ್ಮ ವಿಶ್ಲೇಷಣೆಯನ್ನು ಮುಂದಿಡುತ್ತಾರೆ.

ವೈದ್ಯ ಮತ್ತು ಬರಹಗಾರ ಸಂಜೀವ್ ಕೇಲ್ಕರ್ ತಮ್ಮ ‘ಲಾಸ್ಟ್ ಇಯರ್ಸ್ ಆ¥sóï ದ ಆರ್.ಎಸ್.ಎಸ್.’ (ಸೇಜ್, 2011) ಕೃತಿಯಲ್ಲಿ ಸಂಘ ಪರಿವಾರದ ಇತಿಹಾಸ ಮತ್ತು ಕಾರ್ಯಚಟುವಟಿಕೆಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವ ಪ್ರಯತ್ನವನ್ನು ಮಾಡುತ್ತಾರೆ. ಮೊದಲ 85 ವರ್ಷಗಳ ಇತಿಹಾಸದ ಮುಖ್ಯ ಘಟ್ಟಗಳು ಮತ್ತು ಪಲ್ಲಟಗಳನ್ನು ಕೇಲ್ಕರ್ ಗುರುತಿಸುತ್ತಾರೆ. ಜೊತೆಗೆ ಸಂಘಪರಿವಾರದ ಮತ್ತು ಅದರ ವಿರೋಧಿಗಳ ವಿಚಾರಧಾರೆಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನೂ ಕೇಲ್ಕರ್ ಮಾಡುತ್ತಾರೆ. ಜೊತೆಗೆ ಸಂಘ ಪರಿವಾರದ ಮೂಲ ಆಶಯಗಳು ಮರೆಯಾಗಿ, ಅದರ ಪರಿಣಾಮವಾಗಿ ಆಗಿರುವ ನೈತಿಕ ಪತನವನ್ನು ಸಹ ಅವರು ಚರ್ಚಿಸುತ್ತಾರೆ. ಸಂಘಟನೆಯೊಳಗಿನಿಂದ ಬಂದ ಸ್ವವಿಮರ್ಶೆಯಾಗಿರುವುದರಿಂದ ಈ ಕೃತಿಯು ಮಹತ್ವವನ್ನು ಪಡೆಯುತ್ತದೆ.

ಹಿಂದೂ ರಾಷ್ಟ್ರೀಯತೆಯ ಟೀಕಾಕಾರರ ಕೃತಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ದೊರಕುತ್ತವೆ. ಅವುಗಳಲ್ಲಿ ಮುಖ್ಯವಾದವುಗಳು ಎರಡು.

ವಕೀಲ ಮತ್ತು ಬರಹಗಾರ ಎ.ಜಿ. ನೂರಾನಿಯವರ ‘ದ ಅರ್.ಎಸ್.ಎಸ್. ಎ ಮೆನೇಸ್ ಟು ಇಂಡಿಯಾ’ (ಲೆ¥sóÀ್ಟವಲ್ರ್ಡ, 2019) ಸಂಘ ಪರಿವಾರದ ರಾಜಕಾರಣವನ್ನು ಕಟುವಾಗಿ ವಿಮರ್ಶಿಸುವ ಕೃತಿ. ಭಾರತದ ಧಾರ್ಮಿಕ ಮತ್ತು ಸಾಮುದಾಯಿಕ ಸೌಹಾರ್ದತೆಗೆ ಸಂಘ ಪರಿವಾರದ ಸಂಘಟನೆಗಳು ಅತ್ಯಂತ ದೊಡ್ಡ ಅಪಾಯವೆಂದು ವಾದಿಸುವ ನೂರಾನಿ ಭಾರತೀಯ ನಾಗರಿಕತೆಯ ಅತ್ಯಂತ ದೊಡ್ಡ ಸಾಧನೆಗಳನ್ನು ತನ್ನ ಸಂಕುಚಿತ ಮತ್ತು ವಿಭಜಕ ಚಿಂತನೆಗಳಿಂದ ನಾಶ ಮಾಡುತ್ತಿದೆ ಎನ್ನುತ್ತಾರೆ. ಪ್ರಜಾಪ್ರಭುತ್ವದ ರಾಜಕಾರಣ ಮತ್ತು ಭಾರತದ ಆತ್ಮಕ್ಕೆ ಆರ್. ಎಸ್. ಎಸ್.ನಿಂದ ಅಪಾಯವಿದೆ ಎನ್ನುವ ನಿಲುವನ್ನು ನೂರಾನಿ ತಳೆಯುತ್ತಾರೆ. 

ರಾಜಕೀಯಶಾಸ್ತ್ರಜ್ಞ ಜ್ಯೋತಿರ್ಮಯ ಶರ್ಮಾ ಅವರ ‘ಎಂ.ಎಸ್.ಗೋಲ್ವಾಲ್ಕರ್ -ದ ಆರ್.ಎಸ್.ಎಸ್. ಅಂಡ್ ಇಂಡಿಯಾ’ (ಕಾಂಟೆಕ್ಷ್ಟ್, 2019) ಕೃತಿಯು ಸಂಘ ಪರಿವಾರದ ಅತ್ಯಂತ ಪ್ರಭಾವಶಾಲಿ ಚಿಂತಕರೊಬ್ಬರ ಬರವಣಿಗೆಗಳು ಮತ್ತು ಅವುಗಳ ಪ್ರಭಾವವನ್ನು ಗುರುತಿಸುತ್ತದೆ. ಶರ್ಮಾ ಅವರ ಪ್ರಮುಖ ಉದ್ದೇಶವೆಂದರೆ ಹಿಂದುತ್ವದ ಚಿಂತನೆಗಳು ಆಧುನಿಕ ವಿಚಾರಧಾರೆಗಳ ಸಂದರ್ಭದಲ್ಲಿ ಮತ್ತು ಪ್ರಭಾವದಿಂದಲೆ ಹೇಗೆ ರೂಪುಗೊಂಡಿವೆ ಎನ್ನುವುದನ್ನು ತೋರಿಸುವುದು. ಆ ಮೂಲಕ ಆಧುನಿಕಪೂರ್ವ ಭಾರತದ ಚಿಂತನೆ ಮತ್ತು ಸಾಂಸ್ಕೃತಿಕ ಪರಂಪರೆಗಳು ಹಿಂದುತ್ವದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿಲ್ಲ ಎನ್ನುವ ವಾದವನ್ನು ಅವರು ಮುಂದಿಡುತ್ತಾರೆ.

 

 

Leave a Reply

Your email address will not be published.