ಆಸೆಯೆಂಬ ಭ್ರಾಂತಿ

ಮೈಕೇಲ್ ಪಿಲ್ಸ್ ಬರಿಯವರು ಅಮೇರಿಕಾದ ಚೀನಾ ತಜ್ಞರಲ್ಲಿ ಉನ್ನತ ಸ್ಥಾನ ಗಳಿಸಿದವರು. 40 ಕ್ಕೂ ಅಧಿಕ ವರ್ಷಗಳನ್ನು ಅಮೇರಿಕಾದ ಸರ್ಕಾರದ ವಿವಿಧ ಹುದ್ದೆಗಳನ್ನುನಿರ್ವಹಿಸಿದ ಪಿಲ್ಸ್ ಬರಿಯವರು 2014 ರಿಂದ ವಾಶಿಂಗ್ ಟನ್ ನಲ್ಲಿರುವ ಹಡ್ಸನ್ ಇನ್ಸ್ಟಿಸ್ಟ್ಯೂಟ್ ನಲ್ಲಿ ಚೀನಾ ಪೀಠದ ಡೈರೆಕ್ಟರ್ ಆಗಿದ್ದಾರೆ. ಚೀನಾ ಬಗ್ಗೆ ಮೂರು ಪುಸ್ತಕ ಬರೆದಿದ್ದಾರೆ. ಅವರ ಇತ್ತೀಚಿನ ಪುಸ್ತಕ The Hundred Year Marathon ವಾಷಿಂಗ್ ಟನ್ ಪತ್ರಿಕೆಯ ಟಾಪ್ ಸೆಲ್ಲರ್ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿತ್ತು. ಈ ಕೃತಿಯ ಪ್ರವೇಶಿಕೆಯ ಸಂಗ್ರಹಾನುವಾದ ನಿಮಗಾಗಿ…

 

ಆಸೆಯೆಂಬ ಭ್ರಾಂತಿ

2012 ನವೆಂಬರ್ 30ರ ಮಧ್ಯಾಹ್ನ ನ್ಯೂಯಾರ್ಕ್ ನ ಮಾಲ್ ಒಂದರಲ್ಲಿ ಚೀನಾ ಕಲಾವಿದ ಕೈ ಗುವೋ ಚಿಯಾಂಗ್, ತಮ್ಮ ಕಲೆಯನ್ನು ಎಲ್ಲರ ಎದುರು ಪ್ರದರ್ಶಿಸಲು ಅಣಿಯಾಗುತ್ತಿದ್ದರು. ಚೀನಾದ ಈ ಕಲಾವಿದ 2008ರ ಬೀಜಿಂಗ್ ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭದಲ್ಲಿ ತೋರಿಸಲಾದ ಬಿರುಸು ಬಾಣಗಳ ಚಿತ್ತಾಕರ್ಷಕ ಪ್ರದರ್ಶನದ ಉಸ್ತುವಾರಿಯನ್ನು ಹೊತ್ತಿದ್ದರು ಮತ್ತು ಆ ವಿಜೃಂಭಣೆಯಿಂದ ವಿಶ್ವದೆಲ್ಲೆಡೆ ಮನೆಮಾತಾಗಿದ್ದರು. ತಮ್ಮ ಜೀವಮಾನದಾದ್ಯಂತ ಕೈ ಚೀನಾ ದೇಶವನ್ನು ಪ್ರತಿನಿಧಿಸುವ ಅನೇಕ ಚಿಹ್ನೆಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದರು. ಒಂದೇ ಒಂದು ಉದಾಹರಣೆಯಿಂದ ಇದನ್ನು ಸ್ಪಷ್ಟಪಡಿಸಬಹುದು. 

ಚೀನಾದ ಮಹಾಗೋಡೆಯ ಗುಂಟ ಹತ್ತು ಕಿಲೋಮೀಟರ್ ಉದ್ದ ದೊಂದಿ ಉರಿಸುವ ಮೂಲಕ ಅದು ಆಕಾಶದಿಂದಲೂ ನಿಚ್ಚಳವಾಗಿ ಕಾಣುವ ಹಾಗೆ ಮಾಡಿದ್ದು ಇದೇ ಕೈ ಚಿಯಾಂಗ್. ಹಿಂದಿನ ದಿನ ಸ್ಮಿತ್ ಸೊನಿಯನ್ ಇನ್‌ಸ್ಟಿಟ್ಯೂಟ್ ನಲ್ಲಿ ಅವರನ್ನು ಅಭಿನಂದಿಸಲು ಅಮೆರಿಕದ ವಿದೇಶಾಂಗ ಸಚಿವೆ ಹಿಲರಿ ಕ್ಲಿಲಂಟ್ ಆಗಮಿಸಿದ್ದರು. ದೊಡ್ಡ ಸಮಾರಂಭದಲ್ಲಿ ಅಭಿನಂದನೆಯ ಕೇಂದ್ರ ಬಿಂದುವಾಗಿದ್ದ ಚಿಯಾಂಗ್ ಇಂದು ತಮ್ಮ ಪ್ರದರ್ಶಕ ಕಲೆಯನ್ನು ಎಲ್ಲರಿಗೂ ತೋರಿಸುವವರಿದ್ದರು.

ಅವರ ಮುಂದಿದ್ದದ್ದು ನಾಲ್ಕು ಮಹಡಿ ಎತ್ತರವಿದ್ದ ಒಂದು ಕ್ರಿಸ್ ಮಸ್ ಮರ. ಅದನ್ನು 2000ಕ್ಕೂ ಹೆಚ್ಚಿನ ಸ್ಫೋಟಕಗಳಿಂದ ಸಜ್ಜುಗೊಳಿಸಲಾಗಿತ್ತು. ಕೈ ಚಿಯಾಂಗ್ ತಮ್ಮ ಕೈಯಲ್ಲಿದ್ದ ರಿಮೋಟ್ ನ ಗುಂಡಿ ಒತ್ತುತ್ತಿದ್ದಂತೆ, ದೊಡ್ಡ ಸರಪಟಾಕಿಯಂತೆ ಕಿವಿ ಗಡಚಿಕ್ಕುವ ಸದ್ದಾಯಿತು. ಆ ಕ್ರಿಸ್ ಮಸ್ ಮರದ ಎಲ್ಲ ಭಾಗಗಳು ಆ ಮಾಲ್ ನ ಅಷ್ಟೂ ಕಡೆ ದೂರ ದೂರ ಬಾಣದಂತೆ ತೂರಿದವು. ಐದು ನಿಮಿಷದ ಆವೇಶದ ನಂತರ ಎಲ್ಲ ಸ್ತಬ್ಧವಾಗುತ್ತಿದ್ದಂತೆ ಕ್ರಿಸ್ ಮಸ್ ಮರ ಕರಿಮರದ ಬೊಡ್ಡೆಯಾಗಿತ್ತು ಮತ್ತು ಸಣ್ಣಗೆ ಕಪ್ಪು ಹೊಗೆ ಸೂಸುತ್ತಿತ್ತು.   ಕೈ ಚಿಯಾಂಗ್ ಕೈ ಎತ್ತಿ, ಆ ಕಲೆಯ ಶೀರ್ಷಿಕೆಯತ್ತ ಎಲ್ಲರ ಗಮನ ಸೆಳೆದರು. ಆ ಪ್ರದರ್ಶಕ ಕಲೆ ನಾಲ್ಕು ನೂರು ವರ್ಷಗಳ ಹಿಂದೆ ಚೀನಾ ‘ಸುಡು ಮದ್ದು’ ಸಂಶೋಧಿಸಿದ ಬಗ್ಗೆ ಎಲ್ಲರ ಗಮನ ಸೆಳೆಯುವುದಾಗಿತ್ತು.  ನನ್ನನ್ನೂ ಸೇರಿದಂತೆ ಎಲ್ಲರೂ ಚಪ್ಪಾಳೆ ಹೊಡೆದೆವು. ಅವರನ್ನು ಮತ್ತೆ ಮತ್ತೆ ಅಭಿನಂದಿಸಲಾಯಿತು.

ನೂರು ವರ್ಷಗಳ ಮ್ಯಾರಥಾನ್

ನದಿಮೂಲ ಕಂಡವರಾರು ಋಷಿಮೂಲ ಕಂಡವರಾರು ಎಂದು ನಾವು ಕನ್ನಡದಲ್ಲಿ ಹೇಳಬಹುದು. ಅದೇ ರೀತಿಯಲ್ಲಿ ಕಮ್ಯುನಿಸ್ಟ್ ಚೀನಾದ ರಹಸ್ಯ ತಂತ್ರಗಳನ್ನು ಬಲ್ಲವರಾರು ಎಂದು ಹೊಸದಾಗಿ ನಾಣ್ಣುಡಿಯೊಂದನ್ನು ಸೇರಿಸಬೇಕಾದೀತು. ಇದಕ್ಕೆ ಪೂರಕವಾಗಿ ಅಮೆರಿಕದ ಪ್ರಭಾವಿ ರಾಜತಾಂತ್ರಿಕ ಮತ್ತು ಸಂಶೋಧಕ ಮೈಕೆಲ್ ಪಿಲ್ಸ್ಬರಿಯವರು ಈ ‘ನೂರು ವರ್ಷಗಳ ಮ್ಯಾರಥಾನ್’ ಪುಸ್ತಕದಲ್ಲಿ ಇದುವರೆಗೆ ಎಲ್ಲೂ ಬರದಷ್ಟು ವಿಶದವಾಗಿ ಚೀನಾದ ರಹಸ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 2015ರ ಅಂತ್ಯದಲ್ಲಿ ಪ್ರಕಟವಾದ ಈ ಪುಸ್ತಕ ಕಳೆದ ಒಂದು ವರ್ಷದಲ್ಲಿ ಹೆಚ್ಚಿನ ಪ್ರಚಾರ ಪಡೆದು ಚೀನಾ ಸರ್ಕಾರದ ಅಂತರರಾಷ್ಟ್ರೀಯ ರಣತಂತ್ರವನ್ನು ಜಗತ್ತಿನೆದುರು ಜಗಜ್ಜಾಹೀರು ಮಾಡಿದೆ.

ಮೊದಲಿಗೆ ಈ ಪುಸ್ತಕದ ಶೀರ್ಷಿಕೆಯ ಬಗ್ಗೆ ಎರಡು ಮಾತು. 1949ರಲ್ಲಿ ಅಧಿಕಾರಕ್ಕೆ ಬಂದ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ನೂರು ವರ್ಷದ ಒಳಗೆ, ಅಂದರೆ 2049ರ ಮೊದಲು, ವಿಶ್ವದ ದೊಡ್ಡಣ್ಣನಾಗಿ ಮೆರೆಯಬೇಕೆನ್ನುವ ರಹಸ್ಯ ರಣನೀತಿಯನ್ನು ಚೀನಾ ಹೊಂದಿದೆಯಂತೆ. ಅದಕ್ಕೆ ಪೂರಕವಾಗಿ ಮೊದಲ ಅರವತ್ತು ವರ್ಷಗಳ ತಯ್ಯಾರಿಯ ನಂತರ 2011 ರಿಂದ ಈಚೆಗೆ ಗರಿಗೆದರಿ ಬಾಲಬಿಚ್ಚಲು ಶುರುಮಾಡಿದೆಯಂತೆ. ಈ ವಿಷಯದಲ್ಲಿ ಅಗಾಧ ಅನುಭವ ಮತ್ತು ಸಂಶೋಧನೆ ಮಾಡಿರುವ ಪಿಲ್ಸ್ಬರಿ ಈ ಪುಸ್ತಕದಲ್ಲಿ ಸುದೀರ್ಘ ವೃತ್ತಾಂತಗಳ, ವೈಯಕ್ತಿಕ ಅನುಭವಗಳ, ರಾಜತಾಂತ್ರಿಕ ರಹಸ್ಯಗಳ, ಗೂಢಚಾರಿ ಮೂಲಗಳ ಹಾಗೂ ಹಲವಾರು ಸಂದರ್ಶನಗಳ ಮುಖಾಂತರ ಸಾಬೀತು ಮಾಡಿದ್ದಾರೆ. ಚೀನಾದ ಧೋರಣೆಯ ಬಗ್ಗೆ ಕೇವಲ ಸಂದೇಹ ಪಡುತ್ತಿದ್ದವರು ಈ ಪುಸ್ತಕವನ್ನು ಓದಿದ ನಂತರದಲ್ಲಿ ಯಾವುದೇ ಸಂದೇಹರಹಿತರಾಗಿ ಚೀನಾದ ಗುಪ್ತ ಕಾರ್ಯಸೂಚಿಯನ್ನು ಅರಿಯಬಲ್ಲವರಾಗಿದ್ದಾರೆ. ಚೀನಾದ ರಾಜತಾಂತ್ರಿಕತೆಯನ್ನು ಹಾಡಹಗಲೇ ನಡುಬೀದಿಯಲ್ಲಿ ಬೆತ್ತಲೆಗೊಳಿಸಿರುವ ಈ ಪುಸ್ತಕ ಸತ್ಯಶೋಧಕ ಅಧ್ಯಯನ ಹಾಗೂ ಸಾಹಿತ್ಯರಚನೆಗೆ ಮಾದರಿಯೂ ಆಗಿದೆ.

ಪಿಲ್ಸ್ಬರಿಯವರು ನಲವತ್ತು ವರ್ಷಗಳ ಕಾಲ ಚೀನಾದ ಸರ್ಕಾರ ಮತ್ತು ಜನರನ್ನು ಅಧ್ಯಯನ ಮಾಡಿದವರು. ಚೀನಾ ಸೈನ್ಯದ ಜನರಲ್‌ಗಳನ್ನು, ಅಧಿಕಾರಿಗಳನ್ನು ಪ್ರಾಧ್ಯಾಪಕರನ್ನು ಹಾಗೂ ಪಕ್ಷದ ಪದಾಧಿಕಾರಿಗಳನ್ನು ಹತ್ತಿರದಿಂದ ಬಲ್ಲವರು. ಚೀನಿ ಭಾಷೆ ಹಾಗೂ ಸಾಹಿತ್ಯದ ಮೇಲೆ ಅಪಾರ ಪಾಂಡಿತ್ಯ ಉಳ್ಳವರು. ಚೀನಾದ ಇತಿಹಾಸ, ಪುರಾತನ ಗ್ರಂಥಗಳು, ಪ್ರಾಚೀನ ರಣನೀತಿ ಹಾಗೂ ಇವುಗಳು ಹೇಗೆ ಆಧುನಿಕ ಚೀನಾ ನಾಯಕತ್ವದ ಮೇಲೆ ಪ್ರಭಾವ ಬೀರಿದೆಯೆಂಬುದನ್ನು ಅರಿತವರು. ಈ ಸುದೀರ್ಘ ಅಧ್ಯಯನದ ಆಧಾರದ ಮೇಲೆ ಪಿಲ್ಸ್ಬರಿಯವರು ತಮ್ಮ ಪ್ರಬಲ ವಾದ ಮಂಡಿಸುತ್ತಾರೆ. ಬಹಳ ಮುಖ್ಯವಾಗಿ ‘ಸುನ್ ಟ್ಜು’ರವರ ‘ದಿ ಆರ್ಟ್ ಆಫ್ ವಾರ್’ ಪುಸ್ತಕದಲ್ಲಿ ಚೀನಾದ ಇತಿಹಾಸದಲ್ಲಿ ಯುದ್ಧಪರ್ವವಾಗಿದ್ದ ಕ್ರಿಸ್ತಪೂರ್ವ 475 ರಿಂದ 221 ರವರೆಗಿನ ಸಮಯವನ್ನು ಈಗಿನ ಕಮ್ಯುನಿಸ್ಟ್ ಚೀನಾದ ನಾಯಕತ್ವ ಹೇಗೆ ಅನುಸರಿಸಿದೆ ಹಾಗೂ ಈ ರಣನೀತಿಯಲ್ಲಿ ಬರುವ ಒಂಬತ್ತು ರಹಸ್ಯತಂತ್ರಗಳು ಹೇಗೆ ಅಳವಡಿಸಿಕೊಂಡಿದೆಯನ್ನು ಹೇಳುತ್ತಾರೆ:

ಆ ಸ್ಫೋಟ ಮಾಡಿ ಹಾಕಿದ ಕಸವನ್ನು ತೆಗೆದು ಮತ್ತೆ ಸುಸ್ಥಿತಿಗೆ ತರಲು ಎರಡು ತಿಂಗಳಾದರೂ ಬೇಕಾಗಿತ್ತು.  ಅದೂ ಅಲ್ಲದೆ, ಕ್ರಿಸ್ ಮಸ್ ಗೆ ಒಂದೇ ತಿಂಗಳಿರುವಾಗ, ಕ್ರಿಶ್ಚಿಯನ್ ಧರ್ಮದ ಸಂಕೇತವಾದ ಕ್ರಿಸ್ ಮಸ್ ಮರವನ್ನು ಸುಟ್ಟುಹಾಕಿದ್ದರ ಸಾಂಕೇತಿಕ ಅರ್ಥದ ಬಗ್ಗೆ ಯಾರೂ ಚಕಾರವೆತ್ತಲಿಲ್ಲ. ಬಹುಶಃ ಇದೊಂದು ಸೂಕ್ಷ್ಮ ಸಂಗತಿಯಾಗಬಹುದೆಂದು ತಿಳಿದೇ, ಸ್ಮಿತ್ ಸೋನಿಯನ್ ಸಂಸ್ಥೆಯ ಪದಾಧಿಕಾರಿಯೊಬ್ಬರು ಇದಕ್ಕು ಕ್ರಿಸ್ ಮಸ್ ಹಬ್ಬಕ್ಕೂ ಯಾವ ಸಂಬಂಧವೂ ಇಲ್ಲವೆಂಬ ಅಧಿಕೃತ ಹೇಳಿಕೆಯನ್ನು ಕೊಟ್ಟರು. ಆದರೆ ಕೈ ಚಿಯಾಂಗ್ ಅವರ ಜಾಲ ತಾಣದಲ್ಲಿ ಈ ಸಮಾರಂಭಕ್ಕೆ ಕೊಟ್ಟ ಶೀರ್ಷಿಕೆ- ’ಕಪ್ಪು ಕ್ರಿಸ್ ಮಸ್ ಮರ’ ಎಂದೇ. 

ಹಿಂದಿನ ದಿನ ಕೈ ಅವರಿಗೆ ಅಮೆರಿಕಾ ದೇಶದ ಉನ್ನತ ಪ್ರಶಸ್ತಿಯಾದ ’ಮೆಡಲ್ ಆಫ್ ಆರ್ಟ್ಸ್’ ಕೊಟ್ಟು ಗೊರವಿಸಲಾಗಿತ್ತು. ಹಿಲರಿ ಕ್ಲಿಂಟನ್ ರಿಂದ ಆದ ಗೌರವ ಸಮರ್ಪಣೆಯ ಜೊತೆಗೆ 250,000 ಡಾಲರ್ ಗಳಷ್ಟು ದೊಡ್ಡ ಮೊತ್ತವನ್ನೂ ಅವರಿಗೆ ಕೊಡಲಾಗಿತ್ತು. ಇವೆಲ್ಲ ಅಮೆರಿಕೆಯ ಪ್ರಜೆಗಳು ಕೊಟ್ಟ ತೆರಿಗೆ ಹಣದಿಂದ ಎನ್ನುವುದನ್ನು ಮತ್ತೆ ಒತ್ತಿ ಹೇಳಬೇಕಾಗಿಲ್ಲ. ಹಿಲರಿ ಮಾತನಾಡುತ್ತಾ, ’ಕೈ ಅವರು ದೇಶ ದೇಶಗಳ ಮಧ್ಯೆ ಬಾಂಧವ್ಯವನ್ನು ಬೆಸೆದಿದ್ದಕ್ಕೆ ಮತ್ತು ಅವರ ರಾಜತಾಂತ್ರಿಕ ಸೇವೆಗೆ’ ಈ ಪ್ರಶಸ್ತಿ ನೀಡಲಾಗಿದೆ ಎಂದರು. ಕೈ ದನಿಗೂಡಿಸಿ ‘ಎಲ್ಲ ಕಲಾವಿದರೂ ಒಂದು ರೀತಿಯಲ್ಲಿ ರಾಜತಾಂತ್ರಿಕರೇ. ಅನೇಕ ಬಾರಿ ರಾಜಕೀಯ ಸಾಧಿಸಲಾಗದನ್ನು ಕಲೆ ಸಾಧ್ಯವಾಗಿಸುತ್ತದೆ’ ಎಂದರು.

ಮರುದಿನ ನಾನು ಚೀನಾ ದೇಶ ಭ್ರಷ್ಟರಾಗಿದ್ದ ಅಲ್ಲಿನ ಸರ್ಕಾರಿ ಅಧಿಕಾರಿಯೊಂದಿಗೆ ಗೌಪ್ಯವಾಗಿ ಸೇರುವುದಿತ್ತು. ಕೈ ಅವರ ಕಲೆ ಮತ್ತು ಪ್ರದರ್ಶನವನ್ನು ಸ್ವಲ್ಪ ಅನುಮಾನದಿಂದಲೇ ಕಂಡಿದ್ದ ನಾನು, ನನ್ನ ಅನುಮಾನಗಳನ್ನು ಹಂಚಿಕೊಂಡೆ. ಅಮೆರಿಕಾ ಇಂಥ ಕಲಾವಿದನಿಗೆ ಮಾಡಿದ ಗೌರವವನ್ನು ಕಂಡು ಆ ಅಧಿಕಾರಿಗೂ ಸ್ವಲ್ಪ ಗೊಂದಲವಾಗಿತ್ತು. ನಾವಿಬ್ಬರೂ ಸೇರಿ ಕೈ ಅವರ ಬಗ್ಗೆ ಹೆಚ್ಚು ತಿಳಿಯಲು ಜಾಲತಾಣಗಳಲ್ಲಿ ಹುಡುಕಿದೆವು.  ಅವರನ್ನು ಹಾಡಿ ಹೊಗಳಿದ ಇಂಗ್ಲಿಷ್ ಲೇಖನಗಳನ್ನು ಓದುವ ಗೋಜಿಗೆ ನಾನು ಹೋಗಲಿಲ್ಲ. ಆದರೆ ಚೀನಾದ ಮ್ಯಾಂಡರಿನ್ ಭಾಷೆಯಲ್ಲಿ ಕೈ ಅವರ ಬಗ್ಗೆ ಇರುವ ವರದಿ ಮತ್ತು ಲೇಖನಗಳತ್ತ ನನ್ನ ಗಮನ ಹರಿಸಿದೆ. ಕೈ ಚೀನಾದ ಜನಪ್ರಿಯ ಕಲಾವಿದರಲ್ಲಿ ಮುಖ್ಯರು. ಬಹುಶಃ ಐ ವೈ ವೈ ಅವರನ್ನು ಬಿಟ್ಟರೆ, ಎಲ್ಲರಿಗೂ ತಿಳಿದಿರುವ ಮತ್ತು ಜನರ ಕಲ್ಪನೆ ಮತ್ತು ಭಾವನೆಗಳನ್ನು ಉದ್ದೀಪಿಸುವ ಏಕೈಕ ಕಲಾವಿದ ಕೈ. ಕೈ ಅವರ ಬೆಂಬಲಿಗರಲ್ಲಿ ಕಟ್ಟರ್ ದೇಶಾಭಿಮಾನಿಗಳೂ ಸೇರಿದ್ದರು. ಪಾಶ್ಚಿಮಾತ್ಯರನ್ನು ಪ್ರತಿನಿಧಿಸುವ ಪ್ರತಿಮೆಯೊಂದನ್ನು ಅವರ ಮುಂದೆಯೇ ಧ್ವಂಸ ಮಾಡಿದ್ದನ್ನು ಹಾಡಿ ಹೊಗಳಿ ಬರೆದಿದ್ದರು. 

ಚೀನಾದ ರಾಷ್ಟ್ರೀಯವಾದಿಗಳು ತಮ್ಮನ್ನು ‘ಯಿಂಗ್ ಪೈ’ ಎಂದು ಕರೆದುಕೊಳ್ಳುತ್ತಾರೆ. ಇದರರ್ಥ ’ಗಿಡುಗ’ ಅಥವಾ ’ಹದ್ದು’ ಎಂದು. ಈ ಗುಂಪಿನ ಹಲವರು ಚೀನಾ ಸೇನೆಯ ಜನರಲ್ ಗಳು ಮತ್ತು ಸರ್ಕಾರದಲ್ಲಿದ್ದುಕೊಂಡು ’ಚೀನಾ ಮೊದಲು’ ಎನ್ನುವ ಬಲಪಂಥೀಯ ಒಲವುಳ್ಳವರು. ತುಂಬ ಕಡಿಮೆ ಅಮೆರಿಕನ್ನರು ಈ ಗುಂಪಿನವರನ್ನು ಭೇಟಿಯಾಗಿದ್ದಾರೆ. 1973ರಿಂದ ಅಮೆರಿಕಾ ಸರ್ಕಾರ ಈ ಗುಂಪಿನೊಂದಿಗೆ ಸಖ್ಯ ಬೆಳೆಸಿಕೊಳ್ಳುವ ಕೆಲಸ ವಹಿಸಿದ್ದರಿಂದ, ಅಂದಿನಿಂದ ಈಚಿನವರೆವಿಗೂ ನಾನು ಅವರನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ನನ್ನ ಹಲವು ಸಹೋದ್ಯೋಗಿಗಳು ಈ ಗುಂಪನ್ನು ಕೆಲಸಕ್ಕೆ ಬಾರದ ನಾಲಾಯಕ್ ಜನ ಎಂದು ಜರೆಯುವುದುಂಟು. ಆದರೆ ನನ್ನ ಪ್ರಕಾರ ಅವರು ಚೀನಾದ ನಿಜವಾದ ಭಾವನೆಗಳನ್ನು ಮುನ್ನೆಲೆಗೆ ತರುವವರು.   

ವಿಶ್ವ ವ್ಯಾಪಾರದಲ್ಲಿ ಅಮೆರಿಕೆಯ ಪತನ ಮತ್ತು ಚೀನಾದ ವಾರಸುದಾರಿಕೆಯ ಕಥನದಲ್ಲಿ ನಂಬಿಕೆಯಿಟ್ಟು ಅದನ್ನು ಅನವರತವೂ ಪೋಷಿಸುವ ಗುಂಪಿಗೆ ಕೈ ಅವರ ಪ್ರೋತ್ಸಾಹ ನಿರಂತರವಾಗಿ ಇರುವುದನ್ನು ಗಮನಿಸಿದ್ದೇವೆ  (ಕಾಕತಾಳೀಯವೆಂಬಂತೆ, ಅವರ ಹೆಸರು ಗುವೋ ಚಿಯಾಂಗ್ ಎಂದರೆ ‘ಶಕ್ತಿಶಾಲಿ ರಾಷ್ಟ್ರ ಎಂದು). ಈ ಸಿದ್ಧಾಂತವನ್ನು ಪೋಷಿಸುವ ಅನೇಕ ಪ್ರದರ್ಶನಗಳನ್ನು ಕೈ ಅವರು ನೀಡಿದ್ದಾರೆ. ಉದಾಹರಣೆಗೆ ಅಫಗಾನಿಸ್ತಾನದಲ್ಲಿ ಅಮೆರಿಕದ ಸೈನಿಕರು ಭಯೋತ್ಪಾದಕರಿಂದ ಹತರಾಗುತ್ತಿದ್ದಾಗ, ಕೈ ಅವರು ಒಂದು ಕಾರ್ ಬಾಂಬ್ ಸ್ಫೋಟವಾಗುವುದನ್ನು ಕೇಂದ್ರವಾಗಿಟ್ಟುಕೊಂಡು, ನೋಡುಗರನ್ನು ’ಯುದ್ಧ ಮತ್ತು ಭಯೋತ್ಪಾದನೆಯಲ್ಲಿರುವ ಸೌಂದರ್ಯ’ ವನ್ನು ಆಸ್ವಾದಿಸುವಂತೆ ಆಹ್ವಾನಿಸಿದರು.

ಶಕ್ತಿಶಾಲಿ ರಾಷ್ಟ್ರವಾಗಿ ಅಮೆರಿಕಕ್ಕೆ ಪರ್ಯಾಯವಾಗಿ ಹೊರಮೊಮ್ಮಲು ಚೀನಾದ ರಹಸ್ಯ ತಂತ್ರ

  1. ವಿರೋಧಿಶಕ್ತಿಗೆ ನಿಮ್ಮ ಬಗ್ಗೆ ಉದಾಸೀನ ಬರುವ ಹಾಗೆ ಮಾಡಬೇಕು.
  2. ವಿರೋಧಿಶಕ್ತಿಯ ಸಲಹೆಗಾರರನ್ನು ನಿಮ್ಮ ತೆಕ್ಕೆಗೆ ಸೆಳೆದುಕೊಳ್ಳಬೇಕು.
  3. ವಿಜಯ ಸಾಧಿಸಲು ವರ್ಷಗಳ-ದಶಕಗಳ ಕಾಲದ ತಾಳ್ಮೆ ತೋರಿಸಬೇಕು.
  4. ವಿರೋಧಿಶಕ್ತಿಯ ವಿಚಾರ ಮತ್ತು ಶಸ್ತ್ರಾಸ್ತ್ರಗಳನ್ನು ಕದಿಯಬೇಕು.
  5. ಸೈನಿಕಶಕ್ತಿಯೇ ಸುದೀರ್ಘ ಯುದ್ಧವೊಂದನ್ನು ಗೆಲ್ಲಲು ಸಾಕಾಗದು.
  6. ಪಟ್ಟಭದ್ರ ಶಕ್ತಿಯು ತನ್ನ ಸ್ಥಾನ ಉಳಿಸಿಕೊಳ್ಳಲು ಯಾವುದೇ ಅತಿರೇಕದ ಕ್ರಮ ಕೈಗೊಳ್ಳುವುದೆಂದು ಅರಿಯಬೇಕು.
  7. ಆಕ್ರಮಣಕ್ಕೆ ಸೂಕ್ತವಾದ ಕಾಲಕ್ಕೆ ಕಾಯುವುದನ್ನು ಮರೆಯಬಾರದು ಹಾಗೂ ಬೇರೆಯವರು ನಿಮ್ಮ ಪರವಾಗಿ ಕೆಲಸ ಮಾಡುವಂತೆ ಕೃತ್ರಿಮ ನಡವಳಿಕೆ ತೋರಬೇಕು.
  8. ನಿಮ್ಮ ವಿರೋಧಿಶಕ್ತಿಗಳ ಎದುರು ನಿಮ್ಮ ಶಕ್ತಿ ಅಳೆಯಲು ಬೇಕಿರುವ ಸಾಧನ-ಮಾನದಂಡ ಹುಡುಕಿಕೊಳ್ಳಬೇಕು.
  9. ಬೇರೆಯವರು ನಿಮ್ಮನ್ನು ಸುತ್ತುವರಿಯದಂತೆ ಯಾವಾಗಲೂ ಜಾಗರೂಕರಾಗಿರಬೇಕು.

ಕ್ರಿಸ್ತಪೂರ್ವ ಸಮಯದ ಚೀನಾದಲ್ಲಿನ ಏಳು ಸಾಮ್ರಾಜ್ಯಗಳು ಪರಸ್ಪರ ಕಾದಾಡಿ ಅಂತಿಮವಾಗಿ ಒಂದು ಶಕ್ತಿ ಗೆದ್ದು ನಂತರದಲ್ಲಿ ಹೇಗೆ ಚೀನಾದೇಶವನ್ನು ಒಂದು ಮಾಡಿತೋ ಅದೇ ರೀತಿಯಲ್ಲಿ ಆಧುನಿಕ ಜಗತ್ತಿನಲ್ಲಿ ರಹಸ್ಯ ರಣನೀತಿಯಿಂದ ಚೀನಾ ಜಗತ್ತಿನ ಅಗ್ರಮಾನ್ಯ ರಾಷ್ಟçವಾಗಿ ಹೊರಹೊಮ್ಮಬೇಕು ಮತ್ತು ಅದಕ್ಕೆ ಬೇಕಿರುವ ಎಲ್ಲ ಕೃತ್ರಿಮ-ನಯವಂಚಕ ಹಾದಿಯನ್ನು ಚೀನಾ ಹೇಗೆ ಪರಿಪಾಲಿಸುತ್ತಿದೆಯೆಂದು ಪಿಲ್ಸ್ಬರಿ ಈ ಸುದೀರ್ಘ ಅಧ್ಯಯನದಲ್ಲಿ ಅತ್ಯಂತ ಸಮರ್ಥವಾಗಿ ಹೇಳಿದ್ದಾರೆ. ಅತ್ಯಂತ ಸುಲಭವಾಗಿ ಓದಿಸಿಕೊಳ್ಳುವ ಈ ಪುಸ್ತಕ ಅಂತರರಾಷ್ಟ್ರೀಯ ಸಂಬಂಧಗಳು ಹಾಗೂ ರಾಜತಾಂತ್ರಿಕ ವಿಷಯದ ವಿದ್ಯಾರ್ಥಿಗಳು ಓದಲೇಬೇಕಾದ ಹೊತ್ತಿಗೆಯಾಗಿದೆ. ಆಧುನಿಕ ಇತಿಹಾಸದಲ್ಲಿ ಆಸಕ್ತಿಯಿರುವ ಎಲ್ಲರೂ ಓದಬಹುದಾದ ಕೃತಿಯೂ ಆಗಿದೆ.

ಮೋಹನದಾಸ್

ಸೆಪ್ಟೆಂಬರ್ 11ರ ಭಯೋತ್ಪಾದಕ ಕೃತ್ಯವನ್ನು ವರ್ಣಿಸುತ್ತ, ಅದನ್ನು ಒಂದು ’’ಚಮತ್ಕಾರಿಕ ದೃಶ್ಯ’ ದಂತೆಯೂ ನೋಡಬಹುದು ಎಂದು ಹೇಳಿದರು. ಅವರ ಪ್ರಕಾರ, ಒಂದು ರೀತಿಯ ವಿಕೃತ ಮನಸ್ಸನ್ನು ಸೂಚಿಸುವ ರೀತಿಯಲ್ಲಿ, ಆ ಭಯೋತ್ಪಾದಕ ಕೃತ್ಯವೂ ಒಂದು ’ಕಲೆ’ ಯಾಗಿತ್ತು. ಇವೆಲ್ಲ ಹೇಳಿಕೆಗಳ ಸೂಕ್ಷ್ಮತೆ ಅಮೆರಿಕವನ್ನು ನೋಡಿ ನಗುವ ರೀತಿಯಲ್ಲಿ ಇತ್ತು. ಆದರೆ ನಾನೂ ಒಳಗೊಂಡಂತೆ, ಯಾವ ಅಮೆರಿಕನ್ನರೂ ಈ ರೀತಿಯಾಗಿ ಯೋಚಿಸಿದ್ದನ್ನು ನಾನು ಎಲ್ಲಿಯೂ ನೋಡಲಿಲ್ಲ.

ಕೈ ಅವರನ್ನು ಗೌರವಿಸಿ ಅಭಿನಂದಿಸಿದ ಅಮೆರಿಕದ ಸರ್ಕಾರಿ ಅಧಿಕಾರಿಗಳಿಗೆ ಕೈ ಅವರ ಈ ಹಿನ್ನೆಲೆಯೆಲ್ಲವೂ ಗೊತ್ತಿತ್ತು -ಎನ್ನುವುದನ್ನು ನಾನು ಅರಿತೆ. ಈ ‘ಅರಿವು’ ಅಮೆರಿಕ ಚೀನಾ ಕುರಿತು ಹೊಂದಿರುವ ಒಟ್ಟೂ  ಧೋರಣೆಗೆ ಕನ್ನಡಿ ಎಂದು ಭಾವಿಸಿದ್ದೇನೆ. ವಿಶ್ವದಲ್ಲಿ ಚೀನಾ ತನ್ನ ಸ್ಥಾನಮಾನವನ್ನು ಉನ್ನತೀಕರಿಸುವುದು ’ಶಾಂತಿ’ ಯ ಮುಖಾಂತರವೇ ಹೊರತು, ಬೇರೆ ದೇಶಗಳ ಅವನತಿಯ ಮುಖಾಂತರ ಅಲ್ಲ, ಎನ್ನುವುದು ಚೀನಾದ ಬಹಿರಂಗವಾಗಿ ಪ್ರಕಟಿಸಲಾದ ಸೈದ್ಧಾಂತಿಕ ಚೌಕಟ್ಟಾದರೂ, ಆಂತರಿಕವಾಗಿ ಅವರ ಕಾರ್ಯಶೀಲತೆ ವಿರುದ್ಧ ದಿಕ್ಕಿನಲ್ಲಿ ಇರುವುದನ್ನು ಗಮನಿಸಬಹುದು.

ನಾವು ಚೀನಾವನ್ನು ನೋಡುವಂತೆ, ಆ ದೇಶ ಅಮೆರಿಕವನ್ನು ನೋಡುವುದಿಲ್ಲ ಎನ್ನುವುದು ದಶಕಗಳಿಂದ ತಿಳಿದು ಬಂದಿರುವ ಸಂಗತಿ. ಇದಕ್ಕೆ ಉತ್ತರ ಒಂದು ಹಳೆಯ ಗಾದೆಯಲ್ಲಿ ಸಿಗಬಹುದು. ’ಎಲ್ಲರಿಗೂ ತಿಳಿಯುವಂತೆ ಸಮುದ್ರವನ್ನು ದಾಟು’ ಅಥವಾ ಸರಳವಾಗಿ ಹೇಳುವುದಾದರೆ ’ಎಲ್ಲರಿಗೂ ಕಾಣುವಂತೆ ಅಡಗು’.  ಚೀನಾದ ಹಳೆಯ ಜಾನಪದದಲ್ಲಿ ಮತ್ತೆ ಮತ್ತೆ ಕಾಣುವ 36 ವಿದ್ಯೆಗಳಲ್ಲಿ ಇದೂ ಒಂದು. ತಮಗಿಂತ ಶಕ್ತಿಶಾಲಿಯಾದ ಶತ್ರುವನ್ನು ಹೇಗೆ ಸೋಲಿಸುವುದು ಎಂಬುದರ ಬಗ್ಗೆ ಇರುವ ಈ ಸಿದ್ಧಾಂತಗಳಲ್ಲಿ, ಶತ್ರುವಿಗೆ ಗೊತ್ತಾಗದ ಹಾಗೆ, ಅವನ ಬಲವನ್ನೇ ಉಪಯೋಗಿಸಿಕೊಂಡು ಅವನನ್ನು ಮಣಿಸುವುದು ಹೇಗೆಂದು ಅನೇಕ ಸೂತ್ರಗಳಲ್ಲಿ ವರ್ಣಿಸಲಾಗಿದೆ. 

ಚೀನಾ ದೇಶದ ಬಗ್ಗೆ ತಿಳಿವಳಿಕೆಯುಳ್ಳವನು ಎಂದರೆ, ‘ಅವನು/ಅವಳು ಅಮೆರಿಕಾ ಮತ್ತು ಚೀನಾ ದೇಶಗಳ ನಡುವೆ ಇರಬಹುದಾದ ವೈಮನಸ್ಯ ಅಥವಾ ತಪ್ಪು ಗ್ರಹಿಕೆಗಳನ್ನು ಕಡಿಮೆ ಮಾಡುವ ಸಾಮರ್ಥ್ಯವುಳ್ಳ ವ್ಯಕ್ತಿ’ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಇತಿಹಾಸ ನಮಗೆ ತಿಳಿಸುವಂತೆ, ಇಂತಹ ಮುಗ್ಧ ತಿಳಿವಳಿಕೆ ಅನೇಕ ಅನಾಹುತಗಳಿಗೆ ದಾರಿ ಮಾಡಿಕೊಟ್ಟಿದೆ. 1967ರಲ್ಲಿ ನಾನು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ. ಓದುತ್ತಿದ್ದಾಗ, ರಾಜನೀತಿ ಪಾಠ ಮಾಡುತ್ತಿದ್ದ ನನ್ನ ಪ್ರೊಫೆಸರುಗಳು, ಪಶ್ಚಿಮ ದೇಶಗಳು ಮತ್ತು ಜಪಾನ್ ಸೇರಿ ಅನೇಕ ವರ್ಷಗಳಿಂದ, ಚೀನಾ ದೇಶವನ್ನು ಹೇಗೆ ದುರುಪಯೋಗಪಡಿಸಿದ್ದಾರೆ ಎಂತಲೂ ಮತ್ತು ಈಗಿನ ತಲೆಮಾರು ಆ ತಪ್ಪುಗಳಿಗೆ ಪಶ್ಚಾತ್ತಾಪ ತೋರುವ ರೀತಿಯಲ್ಲಿ ಆ ದೇಶದ ಜೊತೆಗೆ ಉದಾರವಾಗಿ ನಡೆದುಕೊಳ್ಳಬೇಕೇಂದೂ ಹೇಳುತ್ತಿದ್ದರು. ಇಂತಹುದೇ ಸಿದ್ಧಾಂತಗಳನ್ನು ಅನೇಕ ಪುಸ್ತಕಗಳಲ್ಲೂ ಕಾಣಬಹುದಿತ್ತು.

ಈ ದೃಷ್ಟಿಕೋನ- ‘ಏನು ಅಡ್ಡಿಯಾದರೂ ಚೀನಾ ಕ್ಕೆ ನಾವು ಸಹಾಯ ಮಾಡಬೇಕು’ -ಎನ್ನುವ, ಒಂದು ರೀತಿಯ ಅಂಧ ಶ್ರದ್ಧೆ, ಚೀನಾದ ಬಗ್ಗೆ ಅಮೆರಿಕದ ನಡವಳಿಕೆಯನ್ನು ನಿರ್ಧರಿಸಿದೆ. ದೇಶವನ್ನು ಆಳುವ ಅಧ್ಯಕ್ಷರು ಮತ್ತಿತ್ತರ ಚುನಾಯಿತ ಪ್ರತಿನಿಧಿಗಳಿಗೆ ’ಚೀನಾ ತಜ್ಞ’ರು ಇದೇ ತಳಹದಿಯ ಮೇಲೆ ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ಅರಿವು ನಮ್ಮ ಅನುವಾದಗಳ ಮೇಲೂ ಪ್ರಭಾವ ಬೀರಿದೆ. ಚೀನಾದ ಅಧಿಕೃತ ಭಾಷೆಯಾದ ಮ್ಯಾಂಡರಿನ್ ಕಲಿಯುವ ಎಲ್ಲ ವಿದ್ಯಾರ್ಥಿಗಳಿಗೂ ಇದರ ಅನುಭವ ಆಗಿರುತ್ತದೆ. ಆ ಭಾಷೆಗೆ ಅಕ್ಷರಗಳ ತಳಹದಿ ಇಲ್ಲದಿರುವುದರಿಂದ ಎಲ್ಲ ವಾಕ್ಯಗಳನ್ನೂ ಸಣ್ಣ ಸಣ್ಣ ಪದಪುಂಜಗಳನ್ನು ಒಟ್ಟಿಗೇ ಸೇರಿಸುವುದರ ಮೂಲಕ ಕಟ್ಟಲಾಗುತ್ತದೆ. ಈ ಸಂಕೀರ್ಣತೆಯನ್ನು ಮತ್ತಷ್ಟು ಹೆಚ್ಚಿಸುವುದು ಪದಗಳ ಅರ್ಥಗಳ ಮೇಲೆ ಧ್ವನಿ ಮತ್ತು ಸ್ವರಗಳು ಸೇರಿ ಮಾಡುವ ಪ್ರಭಾವ. 

ಹೀಗಾಗುವುದರಿಂದ ಒಂದೇ ತರಹ ಬರೆಯುವ ಒಂದು ಪದ ನಾಲ್ಕು ಅರ್ಥ ಪಡೆದುಕೊಳ್ಳಬಹುದು. ಇದರ ಒಳ್ಳೆಯ ಉದಾಹರಣೆಯೆಂದರೆ ’ಮಾ’ ಎನ್ನುವ ಪದ. ಸಾಮಾನ್ಯವಾಗಿ ಇದರ ಅರ್ಥ ಅಮ್ಮ. ನಿಮ್ಮ ಸ್ವರವನ್ನು ಸ್ವಲ್ಪ ಹೆಚ್ಚಿಸಿದರೆ ’ಮಾ’ ದ ಅರ್ಥ ‘ಜೋಮು ಹಿಡಿಯುವುದು’ ಎಂದಾಗುತ್ತದೆ. ಇನ್ನೊಂದು ರೀತಿ ಉಚ್ಚರಿಸಿದರೆ ಕುದುರೆ. ನಿಮ್ಮ ಸ್ವರವನ್ನು ಹೆಚ್ಚಿಸಿ ಸರಕ್ಕನೆ ಇಳಿಸಿದರೆ ಅದು ‘ನಾನು ಬೈಯುತ್ತಿದ್ದೇನೆ’ ಎಂದರ್ಥ. ಇದರಿಂದ ಮ್ಯಾಂಡರಿನ್ ಮಾತನಾಡುವವರು ಗಟ್ಟಿಯಾಗಿ ಮಾತನಾಡಿದರೆ ಮಾತ್ರ ಇಂತಹ ವ್ಯತ್ಯಾಸಗಳನ್ನು ಗುರುತಿಸಬಹುದು. ಇಂಗ್ಲಿಷ್ ಭಾಷೆಗೆ 10000 ಉಚ್ಚಾರಾಂಶಗಳಿದ್ದರೆ, ಮ್ಯಾಂಡರಿನ್‌ಗೆ ಇರುವುದು 400.  ಆದ್ದರಿಂದ ಹಲವಾರು ಪದಗಳು ಬರೆಯುವುದು, ಕೇಳುವುದು ಸರಿಸುಮಾರಾಗಿ ಒಂದೇ ಆಗಿರುತ್ತದೆ. ಇವೆಲ್ಲ ಕಾರಣಗಳಿಂದ ತಪ್ಪು ತಿಳಿವಳಿಕೆ ಮತ್ತು ಅಣಕುಗಳ ಪ್ರಮಾಣ ಹೆಚ್ಚಾಗಲು ಸಹಾಯವಾಗುತ್ತದೆ. ಇದೂ ಅಲ್ಲದೆ, ಆ ಭಾಷೆಯ ಸಂಕೀರ್ಣತೆ ಅನ್ಯ ದೇಶದವರಿಗೆ ’ರಹಸ್ಯ ಸಂಕೇತ’ ವಾಗಿಯೂ ಕಾಣಬಹುದು. ರಾಜತಾಂತ್ರಿಕರು ಚೀನಾದೊಂದಿಗೆ ವ್ಯವಹರಿಸುವಾಗ ಇವೆಲ್ಲ ತೊಡರುಗಳನ್ನು ಹಾದು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಬಹುತೇಕ ’ಚೀನಾ ತಜ್ಞ’ ರಿಗೆ ಆ ಭಾಷೆಯ ಕೆಲವು ಪದಗಳನ್ನು ಬಿಟ್ಟರೆ ಹೆಚ್ಚಿನ ಪರಿಚಯವಿರುವುದಿಲ್ಲ.  ಇದರಿಂದ ಕೇಳಿದ ಕೆಲವು ವಾಕ್ಯಗಳನ್ನು ವ್ಯಾಖ್ಯಾನಿಸುವಾಗ ತಮ್ಮ ತಮ್ಮ ಸ್ವಂತ ನಂಬಿಕೆಗಳ ಮೇಲೆ ಅರ್ಥೈಸಲಾಗುತ್ತದೆ.  ಆದ್ದರಿಂದ ನಾವು ಭಾಷಣಗಳನ್ನು ಅವುಗಳ ಪರಿಧಿಯಲ್ಲಿ ಮಾತ್ರ ಕೇಳುವುದನ್ನು ಬಿಟ್ಟು, ಅವು ಯಾವ ಪರಿಸರ ಮತ್ತು ಸಂದರ್ಭದಲ್ಲಿ ಮಾಡಿದ್ದಾರೆ ಎನ್ನುವುದರ ಬಗ್ಗೆಯೂ ಗಮನ ಹರಿಸಿ, ವಾಕ್ಯಗಳಲ್ಲಿ ಅಡಗಿ ಕುಳಿತ ಅರ್ಥಗಳನ್ನು ಹುಡುಕಿ ತೆಗೆಯಬೇಕಾಗುತ್ತದೆ. ಆದರೆ ಕಳೆದ ಐವತ್ತು ವರ್ಷಗಳಲ್ಲಿ ಅಮೆರಿಕೆಯ ರಾಜತಾಂತ್ರಿಕರು ಈ ನಿಟ್ಟಿನಲ್ಲಿ ಸೋತಿದ್ದಾರೆ. ಚೀನಾ ಕಟ್ಟರ್ ಪಂಥೀಯರು ಆಡುವ ಮಾತುಗಳನ್ನು ’ಅವರ ದೇಶದ ಇತಿಹಾಸದ ಬಗ್ಗೆ ಮಾಡುತ್ತಿರುವ ಕ್ಷುಲ್ಲಕ ಹೇಳಿಕೆ’ ಎಂದು ತಿರಸ್ಕರಿಸಿ, ಅದರ ಹಿಂದಿರುವ ತಂತ್ರಗಳನ್ನು ಗುರುತಿಸಲು ವಿಫಲರಾಗಿದ್ದಾರೆ.

1971ರಲ್ಲಿ ನಿಕ್ಸನ್ ಅಧ್ಯಕ್ಷರಾದ ಮೇಲೆ, ಚೀನಾದೊಂದಿಗೆ ’ರಚನಾತ್ಮಕ ತೊಡಗಿಸಿಕೊಳ್ಳುವಿಕೆ’ ಮತ್ತು ಆ ದೇಶ ಅಭಿವೃದ್ಧಿ ಹೊಂದಲು ಸಹಾಯ ಮಾಡಬೇಕೆಂಬ ಸಿದ್ಧಾಂತವೇ ಎಲ್ಲ ಕಾರ್ಯನೀತಿಗಳನ್ನು ಪ್ರಭಾವಿಸಿವೆ. ಸ್ವಲ್ಪ ಅಲ್ಲಿ ಇಲ್ಲಿ ತೇಪೆ ಹಾಕುವುದನ್ನು ಬಿಟ್ಟರೆ ಎಂಟು ಅಧ್ಯಕ್ಷರ ಅಧಿಕಾರದ ದೀರ್ಘ ಅವಧಿಯಲ್ಲೂ ಇದೇ ಸಿದ್ಧಾಂತ ಕೆಲಸ ಮಾಡಿದೆ. ರಿಪಬ್ಲಿಕನ್ ಮತ್ತ್ ಡೆಮಾಕ್ರಟಿಕ್ ಸರ್ಕಾರಗಳ ವಿದೇಶೀ ನೀತಿಯಲ್ಲಿ ವ್ಯತ್ಯಾಸಗಳಿದ್ದರೂ, ಚೀನಾದ ಜೊತೆ ತಮ್ಮ ನೀತಿಯಲ್ಲಿ ಹೆಚ್ಚೇನೂ ಅಂತರ ಕಾಣುವುದಿಲ್ಲ. 

ಇವುಗಳ ಬಗ್ಗೆ ನಾನು ಕೊಂಚ ಅಧಿಕಾರಯುತವಾಗಿ ಮಾತನಾಡಬಲ್ಲೆ. ನಾನು ಈ ಗುಂಪಿನಲ್ಲಿ ಹಲವಾರು ದಶಕಗಳನ್ನು ಕಳೆದಿದ್ದೇನೆ. 1969ರಲ್ಲಿ ಶ್ವೇತಭವನ ಚೀನಾದೊಂದಿಗೆ ಬಾಂಧವ್ಯ ಬೆಳೆಸಲು ಪ್ರಾರಂಭಿಸಿದಾಗಿನಿಂದಲೂ, ನಾನು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ತಾಂತ್ರಿಕ ಮತ್ತು ಮಿಲಿಟರಿ ವಿಭಾಗಗಳಲ್ಲಿ ಸಹಾಯ ಹಸ್ತ ಚಾಚುವ ನಿರ್ಧಾರ ಅಂದು ತೆಗೆದುಕೊಂಡಿದ್ದು, ಇತ್ತೀಚಿನವರೆವಿಗೂ ಅದನ್ನು ಪಾಲಿಸಿಕೊಂಡು ಬಂದಿದ್ದೇವೆ. ಕಮ್ಯುನಿಸ್ಟ್ ಚೀನಾದ ಆಂತರಿಕ ರಚನೆ ದುರ್ಬಲವೆಂದೂ, ಕೊನೆಗೂ ಆ ದೇಶವೂ ಪ್ರಜಾತಾಂತ್ರಿಕ ವ್ಯವಸ್ಥೆಗೆ ಸೇರುವುದೆಂಬ ಮುಗ್ಧ ನಂಬಿಕೆ ಇದರ ಹಿಂದಿದೆ. ಜೊತೆಗೆ ಚೀನಾಗೆ ಪ್ರಾದೇಶಿಕ ಅಥವಾ ಜಾಗತಿಕ ಪ್ರಾಬಲ್ಯ ಗಳಿಸಬೇಕೆಂಬ ಇರಾದೆ ಇಲ್ಲವೆಂಬ ನಂಬಿಕೆಯೂ ಇದೆ. ಚೀನಾದ ಮೂಲಭೂತವಾದಿಗಳ ಪ್ರಭಾವ ನಿಕೃಷ್ಟವಾದದ್ದು ಎಂಬ ಹುಂಬ ವಿಶ್ವಾಸವೂ ಇದರ ಹಿಂದಿದೆ. ಇಂತಹ ಅನೇಕ ನಂಬಿಕೆಗಳು ಹುಸಿಯೆಂದು ಈಗ ಸಾಬೀತಾಗಿದೆ. ಈ ನಂಬಿಕೆಗಳ ದೆಸೆಯಿಂದ ಆಗಿದ್ದ ತಪ್ಪುಗಳ ಸಂಖ್ಯೆ ಅಗಾಧವೆಂದು ನಮಗೆ ತಿಳಿಯುತ್ತಿದೆ. ಚೀನಾ ಬಹಿರಂಗವಾಗಿ ತೋರುವ ಪ್ರತಿಕ್ರಿಯೆಯಿಂದ ಇದು ಗೋಚರ; ಮತ್ತಷ್ಟು ಖಚಿತವಾಗುವುದು ಅದು ಯಾವ ವಿಷಯಗಳ ಬಗ್ಗೆ ಮೌನ ತಾಳುತ್ತದೆ ಎನ್ನುವುದನ್ನು ಗಮನಿಸುವುದರಿಂದ.

ಭ್ರಮೆ-1

ನಿರಂತರ ಒಳಗೊಳ್ಳುವಿಕೆಯಿಂದ ಸಂಪೂರ್ಣ ಸಹಕಾರ ಸಾಧ್ಯ.

ಕಳೆದ ನಾಲ್ಕು ದಶಕಗಳ ನಿರಂತರ ಒಳಗೊಳ್ಳುವಿಕೆಯಿಂದ ಚೀನಾ ನಮ್ಮ ಜೊತೆ ಸಹಬಾಳ್ವೆ ನಡೆಸಿದ್ದರಿಂದ, ಎರಡೂ ದೇಶಗಳ ನಡುವೆ ಇರುವ ಕೆಲವು ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆಂದು ನಂಬಿದ್ದೆವು.  ಹಾಗಾಗಲಿಲ್ಲ. ಸ್ಥಳೀಯ ಮತ್ತು ವಿಶ್ವದ ಆಗು ಹೋಗುಗಳ ಬಗ್ಗೆ ಇರುವ ಸೈದ್ದಾಂತಿಕ ಭಿನ್ನತೆಗಳು -ವ್ಯಾಪಾರ ಮತ್ತು ತಂತ್ರಜ್ಞಾನ- ಈ ಎರಡು ಆಯಾಮಗಳ ದೆಸೆಯಿಂದ ಒಮ್ಮತ ಮೂಡುವುದಕ್ಕೆ ಸಾಧ್ಯ ಎಂಬ ಭಾವನೆಯಿತ್ತು. ಅದು ಸುಳ್ಳಾಗಿದೆ. ಚೀನಾ ನಮ್ಮ ಎಲ್ಲ ನಿರೀಕ್ಷೆಗಳನ್ನು ಸುಳ್ಳು ಮಾಡಿದೆ.

ಯುದ್ಧದಿಂದ ತತ್ತರಿಸಿ ಹೋಗಿರುವ ಆಫಗಾನಿಸ್ತಾನದ ಪುನರ್ನಿಮಾಣ ಮತ್ತು ಆರ್ಥಿಕ ಸಬಲತೆಗೆ ಮಾಡಿದ ಪ್ರಯತ್ನಗಳಿಗೆಲ್ಲ ಚೀನಾ ಅಡ್ಡಬಂದಿದೆ. ಇದಕ್ಕೆ ಸಂವಾದಿಯಾಗಿ ಪಶ್ಚಿಮದ ಸರ್ಕಾರಗಳನ್ನೆಲ್ಲ ಶತ್ರುವಿನಂತೆ ಕಾಣುವ ಸೂಡಾನ್ ಮತ್ತು ಉತ್ತರ ಕೊರಿಯಾ ಜೊತೆ ಸಂಬಂಧ ಕುದುರಿಸಿದೆ. ಹಾಗೆಯೇ ಅಮೆರಿಕದ ಸ್ನೇಹಿತರ ಜೊತೆಯೂ ತನ್ನದೇ ಆದ ಕಾರ್ಯಸೂಚಿಯನ್ನು ಬೆಳೆಸಿಕೊಳ್ಳುತ್ತಿದೆ. ಈ ಕಾರ್ಯಸೂಚಿಗಳು ಬಹಳಷ್ಟು ಬಾರಿ ಅಮೆರಿಕದ ಸೈದ್ಧಾಂತಿಕ ತಿಳಿವಳಿಕೆಗೆ ವಿರುದ್ಧವಾಗಿರುತ್ತದೆ.

ಸೆಪ್ಟೆಂಬರ್ 11ರಲ್ಲಿ ಭಯೋತ್ಪಾದಕ ಕೃತ್ಯವೆಸಿಗಿದ ನಂತರ, ಚೀನಾ ಮತ್ತು ಅಮೆರಿಕ ದೇಶಗಳು ’ಭಯೋತ್ಪಾದನೆಯ ವಿರುದ್ಧದ ಸಮರ” ದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುಕೊಡುತ್ತವೆಂದು ಭಾವಿಸಲಾಗಿತ್ತು. ಶೀತಲ ಸಮರದ ಸಮಯದಲ್ಲಿ ಸೋವಿಯತ್ ವಿರುದ್ಧ ಒಟ್ಟುಗೂಡಿದಂತೆಯೇ ಈ ಬಾರಿಯೂ ಆಗಬಹುದು ಎಂದು ನಂಬಲಾಗಿತ್ತು. ಆದರೆ ಇಂಥದ್ದೇನೂ ಆಗದೆ, ಭಯೋತ್ಪಾದನೆಯ ಸಂದರ್ಭದಲ್ಲಿ ಎರಡೂ ದೇಶಗಳ ಸಹಯೋಗ ಗಮನಾರ್ಹವಾದನ್ನೇನೂ ಸಾಧಿಸಲಿಲ್ಲ.

ಭ್ರಮೆ 2

ಚೀನಾ ಪ್ರಜಾತಂತ್ರವಾಗುವ ಹಾದಿಯಲ್ಲಿ ಹೆಜ್ಜೆಯಿಡುತ್ತಿದೆ.

ಕಳೆದ ಮೂವತ್ತು ವರ್ಷಗಳಲ್ಲಿ ಖಂಡಿತವಾಗಿಯೂ ಚೀನಾ ಬದಲಾಗಿದೆ. ಆದರೆ ನಮ್ಮ ಯೋಚನೆಯಂತೆ, ಆ ದೇಶದ ರಾಜಕೀಯ ವ್ಯವಸ್ಥೆಯೇನೂ ಹೆಚ್ಚಾಗಿ ಬದಲಾದಂತೆ ಕಾಣುವುದಿಲ್ಲ. ಬದಲಾವಣೆ ಆಗಿಯೇ ತೀರುತ್ತದೆ ಎಂದು ನಂಬಿದ್ದ ಚೀನಾ ತಜ್ಞರೂ ಇತ್ತೀಚೆಗೆ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಪ್ರಿನ್ಸ್ ಟರ್ನ್ ವಿಶ್ವವಿದ್ಯಾನಿಲಯದ ಆರೊನ್ ಫ್ರೀಡ್ ಬರ್ಗ್ ಅವರ ಪ್ರಕಾರ ಕಮ್ಯೂನಿಸ್ಟ್ ಪಾರ್ಟಿ ಅವನತಿಗೆ ಬದಲಾಗಿ ಇನ್ನೂ ಹಲವಾರು ದಶಕಗಳು ಅದರ ಹಿಡಿತವನ್ನು ಮುಂದುವರೆಸಲಿದೆ.

ಇಪ್ಪತ್ತು ಅಥವಾ ಮೂವತ್ತು ವರ್ಷಗಳ ನಂತರ ಚೀನಾ ಸದ್ಯದ ಸ್ಥಿತಿಗಿಂತ ಹೆಚ್ಚು ಬಲಶಾಲಿಯಾಗಿಯೂ, ಆರ್ಥಿಕವಾಗಿ ಸದೃಢವೂ ಆಗುತ್ತದೆ. ಆದರೆ ಅದನ್ನು ಆಳಲು ಕಮ್ಯುನಿಸ್ಟ್ ಸರ್ಕಾರವೇ ಇರುವ ಸಾಧ್ಯತೆ ಹೆಚ್ಚು.  ಅಧಿಕಾರಶಾಹಿ ಸರ್ಕಾರ ‘ಭಿನ್ನಾಭಿಪ್ರಾಯಗಳ ಬಗ್ಗೆ ಅಸಹನೆ ತೋರುವ ಮತ್ತು ಸಂಘಟಿತ ರಾಜಕೀಯ ವ್ಯವಸ್ಥೆ ವಿರೋಧ ವ್ಯಕ್ತಪಡಿಸುವುದನ್ನು ಮುಂದುವರೆಸುತ್ತದೆ ಎನ್ನಲಾಗಿದೆ. ಅಮೆರಿಕ ಮಾದರಿಯ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯ ಬದಲಾಗಿ, ಆ ದೇಶ ’ಸರ್ವಾಧಿಕಾರಯುಕ್ತ ಬಂಡವಾಳಶಾಹಿ’ ಸಿದ್ಧಾಂತಗಳನ್ನು ತನ್ನದಾಗಿಸಿಕೊಳ್ಳುತ್ತದೆ ಎಂದು ಚೀನಾ ತಜ್ಞರು ಅಭಿಪ್ರಾಯ ಪಡುತ್ತಾರೆ.

ಕೊಲಂಬಿಯಾ ವಿಶ್ವವಿದ್ಯಾನಿಲಯದ ಆಂಡ್ರ‍್ಯೂ ನೇಥನ್ ಅವರು ’ಜರ್ನಲ್ ಆಫ್ ಡೆಮೋಕ್ರಸಿ’ಯಲ್ಲಿ ಬರೆಯುತ್ತಾ, ಈ ಬದಲಾವಣೆಯನ್ನು ’ಸರ್ವಾಧಿಕಾರದ ಸ್ಥಿತಿಸ್ಥಾಪಕತ್ವ’ ಎಂದು ಕರೆದಿದ್ದಾರೆ.  ಹೀಗಿದ್ದರೂ, ಪ್ರಜಾತಂತ್ರ ವ್ಯವಸ್ಥೆಯ ಬೀಜಗಳನ್ನು ಚೀನಾ ಹಳ್ಳಿಗಳಲ್ಲಿ ನೋಡಬಹುದು ಎಂಬ ಭ್ರಮೆಯನ್ನು ಇತ್ತೀಚಿನವರೆಗೂ ಚೀನಾ ತಜ್ಞರು ಹೊಂದಿದ್ದರು. ಹಳ್ಳಿ ಮತ್ತು ಪಟ್ಟಣಗಳಲ್ಲಿ ಆಗಿರುವ ಈ ಬದಲಾವಣೆ ಬಹುಬೇಗ ಚೀನಾದ ದೊಡ್ಡ ನಗರಗಳಿಗೂ ಹಬ್ಬಿ, ಪ್ರಾಂತೀಯ ಮತ್ತು ರಾಷ್ಟ್ರೀಯ ಚುನಾವಣೆಗಳಿಗೂ ದಾರಿ ಮಾಡುಕೊಡುತ್ತದೆ ಎಂಬ ನಂಬಿಕೆ ಈಗ ಹುಸಿಯಾಗಿದೆ. ಕಮ್ಯುನಿಸ್ಟ್ ವ್ಯವಸ್ಥೆಯಿಂದ ನಿಧಾನವಾಗಿಯಾದರೂ ಪ್ರಜಾತಂತ್ರದ ಕಡೆಗಿನ ಈ ಪಯಣ ಖಂಡಿತವಾಗಿ ಆಗುತ್ತದೆಂದು, ನನ್ನನ್ನೂ ಒಳಗೊಂಡಂತೆ, ಎಲ್ಲರೂ ನಂಬಿದ್ದರು ಅಥವಾ ನಾವೆಲ್ಲ ಅದನ್ನು ನಂಬಲು ಬಯಸಿದ್ದೆವು.

ಆದರೆ ಈ ನನ್ನ ನಂಬಿಕೆಗೆ 1997 ರಲ್ಲಿ ಪೆಟ್ಟಾಯಿತು. ಡಾನ್ ಗುವಾಂ ಎಂಬ ಕೈಗಾರಿಕಾ ಪಟ್ಟಣದ ಹತ್ತಿರ ಇರುವ ಹಳ್ಳಿಗೆ ನಮ್ಮನ್ನೆಲ್ಲ ಒಯ್ಯಲಾಯಿತು. ಆ ಹಳ್ಳಿಯಲ್ಲಿ ನಡೆಯುತ್ತಿದ್ದ ಚುನಾವಣೆಯನ್ನು ನೇರವಾಗಿ ನೋಡಿ ಚೀನಾ ದೇಶ ಪ್ರಜಾತಂತ್ರದತ್ತ ದಾಪುಗಾಲಿಡುತ್ತಿರುವುದನ್ನು ಅಮೆರಿಕನ್ ಸರ್ಕಾರಕ್ಕೆ ತಿಳಿಸುವುದು ನಮ್ಮ ಕರ್ತವ್ಯವಾಗಿತ್ತು. ಆದರೆ ಆ ಹಳ್ಳಿಯಲ್ಲಿದ್ದ ಸಾಮಾನ್ಯ ಜನರ ಹತ್ತಿರ ಮಾತನಾಡಿ ’ಚುನಾವಣೆಯ ಪ್ರಕ್ರಿಯೆ’ ಯ ಬಗ್ಗೆ ತಿಳಿಯಲು ಯತ್ನಿಸಿದಾಗ ಪ್ರಜಾತಂತ್ರದ ‘ಸ್ವರೂಪ’ ಹೊರಗೆ ಬಂದಿತು. ಹೆಚ್ಚೆಂದರೆ, ಮತ ಯಾಚಿಸುವ ವ್ಯಕ್ತಿ ತನ್ನ ವೈಯಕ್ತಿಕ ಗುಣಗಳ ಬಗ್ಗೆ ಹೇಳಿಕೊಳ್ಳಬಹುದಾಗಿತ್ತು ಅಷ್ಟೆ. ತೆರಿಗೆಗಳ ಬಗ್ಗೆಯಾಗಲೀ, ದೇಶದ ಭವಿಷ್ಯದ ಬಗೆಗಾಗಲೀ ಅವರು ಚರ್ಚೆ ಮಾಡುವಂತಿರಲಿಲ್ಲ. ಈ ನಿಯಮಾವಳಿಗಳನ್ನು ಉಲ್ಲಂಘಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದಾಗಿತ್ತು. ಇದರಿಂದ ಚೀನಾ ಕಟ್ಟರ್‌ವಾದಿಗಳು ತಮ್ಮ ಸಿದ್ಧಾಂತಗಳನ್ನು ಮುಂದುವರೆಸುತ್ತ ಪಾಶ್ಚಿಮಾತ್ಯರ ಕಣ್ಣೊರಸಲು ಕೆಲವು ಸೀಮಿತ ಕ್ರಮಗಳನ್ನು ಕೈಗೊಂಡಿದನ್ನು ಕಾಣಬಹುದಿತ್ತು.

ಭ್ರಮೆ 3           

ಚೀನಾ ಎನ್ನುವುದು ನಾಜೂಕಿನ ಮತ್ತು ದುರ್ಬಲವಾದ ಹೂವು

1996ರಲ್ಲಿ ನಾನು ಮತ್ತು ಇನ್ನೋರ್ವ ಚೀನಾ ತಜ್ಞರಾದ ರಾಬರ್ಟ್ ಎಲ್ಸ್ ವರ್ತ್, ಚೀನಾಗೆ ಭೇಟಿ ನೀಡಿದ್ದೆವು.  ಹೊರಗಿನ ನೋಟಕ್ಕೆ ಆ ಭೇಟಿ ಚೀನಾದ ವಿದ್ವಾಂಸರ ಜೊತೆ ಮುಕ್ತ ಮಾತುಕತೆಯಾಗಿತ್ತು. ಅವರು ನಮಗೆ ಹೇಳಿದ್ದೇನೆಂದರೆ -ಚೀನಾದ ಆರ್ಥಿಕತೆ ತುಂಬ ದುರ್ಬಲವಾಗಿದೆ ಮತ್ತು ರಾಜಕೀಯ ಸ್ಥಿತಿಯೂ ನಾಜೂಕಾಗಿದೆ ಮತ್ತು ಆ ದೇಶ ಯಾವಾಗ ಬೇಕಾದರೂ ಶಿಥಿಲ ಹೊಂದಬಹುದು. ಚೀನಾ ಎದುರಿಸುತ್ತಿರುವ ಪರಿಸರ ಸಮಸ್ಯೆಗಳು, ಜನಾಂಗೀಯ ಅಲ್ಪ ಸಂಖ್ಯಾತರ ಅನುಭವಗಳು ಮತ್ತು ಸರ್ಕಾರದಲ್ಲಿರುವ ಭ್ರಷ್ಟ ಅಧಿಕಾರಿಗಳ ಬಗ್ಗೆಯೂ ತುಂಬಾ ಚಿಂತಿತರಾಗಿದ್ದಂತೆ ತೋರಿತು. ಇದರ ಜೊತೆಗೆ ಸುಧಾರಣೆಗಳನ್ನು ಮುನ್ನೆಲೆಗೆ ತರಲು ಸರ್ಕಾರ ಅಸಮರ್ಥವಾಗಿದೆಯೆಂದೂ ಹೇಳಿದರು. 

ಬೀಜಿಂಗ್ ನ ಶೀತಲ ಮಾತುಕತೆಗಳಿಗೆ ಒಗ್ಗಿ ಹೋಗಿದ್ದ ನಮಗೆ ಈ ಮುಕ್ತ ಮಾತುಕತೆಗಳು ಆಶ್ಚರ್ಯ ಮೂಡಿಸಿದುವು. ಆದರೆ ಈ ಎಲ್ಲ ಕಾರಣಗಳಿಂದ ಚೀನಾ ಒಂದು ದುರ್ಬಲ ದೇಶವೆಂದೂ, ಅದನ್ನು ಬಲಿಷ್ಟಗೊಳಿಸಲು ಅಮೆರಿಕಾದ ಬೆಂಬಲದ ಅಗತ್ಯವಿದೆಯೆಂದೂ ನಮಗೆ ತಿಳಿಹೇಳಲಾಯಿತು. ಇದು ನಮಗೆ ಚೀನಾದ ವಿದ್ವಾಂಸರು ಮಾತ್ರ ಹೇಳಲಿಲ್ಲ. ಅಮೆರಿಕದ ಪ್ರಭಾವಶಾಲೀ ಸಂಸ್ಥೆ ರಾಂಡ್ ಕಾರ್ಪೊರೇಷನ್ ಪ್ರಕಟಿಸಿದ ಒಂದು ವರದಿಯಲ್ಲಿ ಚೀನಾದ ಅಭಿವೃದ್ಧಿ ಹೇಗೆ ಕುಂಠಿತಗೊಂಡೀತೆಂದು ವಿವರಿಸುತ್ತಾ ಅದಕ್ಕೆ ಹತ್ತು ಕಾರಣಗಳನ್ನು ಸಹ ಕೊಟ್ಟಿದ್ದರು. ತಜ್ಞರು ಮತ್ತೂ ಮುಂದುವರೆದು, ಚೀನಾ ತನ್ನ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ಅಮೆರಿಕಾ ಒಂದು ವೇಳೆ ಒತ್ತಡ ಹೇರಿದರೆ, ಅದು ಚೀನಾದ ಆಂತರಿಕ ಕಲಹಗಳಿಗೆ ದಾರಿ ಮಾಡಿಕೊಟ್ಟು, ಚೀನಾ ದೇಶದ ಒಗ್ಗಟ್ಟು ನಾಶವಾಗಿ ಇಡೀ ಏಷ್ಯಾ ಖಂಡದಲ್ಲೇ ಕ್ಷೋಭೆ ಉಂಟಾಗುತ್ತದೆ ಎಂಬ  ಪ್ರಳಯಸೂಚಕ ಊಹೆಗಳನ್ನೂ ಮಾಡಲಾಯಿತು.

ಆದರೆ ನಿಜಕ್ಕೂ ಆದದ್ಡೇನು? ಚೀನಾದ ಅಭಿವೃದ್ಧಿ ನಿರಾತಂಕವಾಗಿ ಸಾಗಿದೆ ಮತ್ತು ಅದರ ಜಿಡಿಪಿ ನಿರಂತರವಾಗಿ ಪ್ರತಿಶತ 7-8ರ ಅನುಪಾತದಲ್ಲಿ ಏರುತ್ತಲೇ ಇದೆ. ಇದೇ ರೀತಿ ಮುಂದುವರೆದರೆ 2020ರ ವೇಳೆಗೆ ಅಮೆರಿಕದ ದೇಶೀಯ ಉತ್ಪನ್ನವನ್ನು ದಾಟಿ ಮುಂದೆ ಹೋಗುವ ಸಾಧ್ಯತೆ ಇದೆ.

ಭ್ರಮೆ 4           

ಚೀನಾದವರು ನಮ್ಮಂತೆಯೇ, ಥೇಟ್ ನಮ್ಮಂತೆಯೇ ಇರಲು ಬಯಸುತ್ತಾರೆ.

ನಾವು ಮುಂದುವರೆದ ದೇಶದವರು ಎಂಬ ಅಹಂಕಾರದಲ್ಲಿ ಅಮೆರಿಕನ್ನರು, ಇಡೀ ವಿಶ್ವ ತಮ್ಮಂತೆ ಇರಲು ಬಯಸುತ್ತದೆ ಎಂಬುದನ್ನು ಗಾಢವಾಗಿ ನಂಬುತ್ತಾರೆ. ಇತ್ತೀಚೆಗೆ ಇರಾಕ್ ಮತ್ತು ಅಫಘಾನಿಸ್ತಾನದಲ್ಲಿ ಅಮೆರಿಕದ ಯುದ್ಧಗಳು ಇದೇ ಸಿದ್ಧಾಂತದ ತಳಹದಿಯ ಮೇಲೆ ನಿಂತಿವೆ. ಈ ರೀತಿಯ ಮನಸ್ಥಿತಿ ಚೀನಾದೊಂದಿಗೆ ನಮ್ಮ ಸಂಬAಧವನ್ನೂ ನಿರ್ದೇಶಿಸಿದೆ.

1940ರಲ್ಲಿ ಚೀನಾದವರ ಮನಸ್ಥಿತಿಯನ್ನು ಅರಿಯಲು ಅಮೆರಿಕನ್ ಸರ್ಕಾರ ಒಂದು ಪ್ರಯೋಗವನ್ನು ಮಾಡಿತು. ನ್ಯೂಯಾರ್ಕ್ ನ ಚೈನಾ ಟೌನ್ ಪ್ರದೇಶದಲ್ಲಿದ್ದ 150 ಚೀನಾ ಸಂಜಾತರಿಗೆ ಮನಶಾಸ್ತ್ರೀಯಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಲಾಯಿತು. ಮಾರ್ಗರೇಟ್ ಮೀಡ್, ನೇತನ್ ಲೀತೆಸ್ ಮತ್ತು ರುತ್ ಬೆನೆಡಿಕ್ಟ್ ರಂತಹ ವಿದ್ವಾಂಸರನ್ನು ಒಳಗೊಂಡ ಈ ತಂಡ ಚೀನಾ ಸಂಜಾತರು ಓದುವ ಪುಸ್ತಕ, ನೋಡುವ ಸಿನೆಮಾ -ಇವುಗಳ ಮಾಹಿತಿಯನ್ನೂ ಕಲೆ ಹಾಕಿತು. ಅಮೆರಿಕನ್ ಸಂಜಾತರು ಯಾವುದಾದರೊಂದು ವಿಷಯದ ಬಗ್ಗೆ ನೇರವಾದ ಕ್ರಿಯಾ ಸಂಬಂಧವನ್ನು ಇರಿಸಿಕೊಳ್ಳಲು ಇಷ್ಟಪಟ್ಟರೆ, ಚೀನಾ ಸಂಜಾತರು ಪರೋಕ್ಷ ಕ್ರಿಯೆಗಳನ್ನು, ಸ್ಪಷ್ಟತೆ ಮತ್ತು ಪಾರದರ್ಶಕ ನಡವಳಿಕೆಗೆ ಬದಲಾಗಿ ಕೊಂಚ ಅಡ್ಡದಾರಿ ಹಿಡಿದು, ಮೋಸಗೊಳಿಸುವ ದಾರಿಗಳನ್ನು ಹುಡುಕುವ ಕಡೆ ತಮ್ಮ ಉತ್ಸುಕತೆಯನ್ನು ತೋರಿದರು. ಗುರಿಯನ್ನು ತಲುಪುವ ಯೋಜನೆಗಳು ಹೇಗೆ ಸಾಗುತ್ತವೆ ಎಂಬ ವಿಷಯದ ಬಗೆಗಿನೆ ಸಾಹಿತ್ಯವನ್ನು ಓದುವುದರ ಕುರಿತಾದ ಇನ್ನೊಂದು ಅಧ್ಯಯನದಲ್ಲಿ, ಚೀನಾ ಸಂಜಾತರು ವಂಚನೆಯನ್ನು ಆಧಾರವಾಗಿಟ್ಟುಕೊಂಡ ತಂತ್ರಗಾರಿಕೆಯ ಬಗ್ಗೆ ಹೆಚ್ಚು ಒಲವು ತೋರುವುದು ಕಂಡುಬಂದಿತು.

1940ರಲ್ಲಿ ಮಾಡಲಾದ ಈ ಅಧ್ಯಯನದ ಫಲಿತಾಂಶಗಳು -ನಮ್ಮಲ್ಲಿ ಆಳವಾಗಿ ಅಡಕಗೊಂಡಿರುವ ನಂಬಿಕೆಗಳಿಗೆ ಏಟು ಕೊಟ್ಟಿತ್ತು. ವಿಶ್ವವನ್ನು ಗ್ರಹಿಸುವ ಬಗೆ ಮತ್ತು ಅದರೊಂದಿಗೆ ಮಾಡುವ ಅನುಸಂಧಾನಗಳು ಒಂದೊಂದು ನಾಗರಿಕತೆಯಲ್ಲೂ ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗಬಹುದು ಎಂಬ ಸತ್ಯವನ್ನು ಅರಗಿಸಿಕೊಳ್ಳಲಾರದೇ ಹೋಯಿತು. ಅದೂ ಅಲ್ಲದೆ, ಇಂತಹ ವರದಿಯೊಂದನ್ನು ಸರ್ಕಾರ ಪ್ರಕಟಿಸುವುದು ರಾಜಕೀಯವಾಗಿ ಸರಿಹೊಂದಲಿಲ್ಲವಾದ್ದರಿಂದ ಸರ್ಕಾರ ಇದನ್ನು ಪ್ರಕಟಿಸಲೇ ಇಲ್ಲ.

ಈ ಅಧ್ಯಯನದ ಒಂದೇ ಒಂದು ಪ್ರತಿ ಈಗಲೂ ಲೈಬ್ರರಿ ಆಫ್ ಕಾಂಗ್ರೆಸ್ ನಲ್ಲಿದೆ. ನಾನು 2000ರಲ್ಲಿ ಚೀನಾದ ಜನರಲ್ ಗಳ ಹತ್ತಿರ ಈ ವರದಿಯ ಬಗ್ಗೆ ಪ್ರಸ್ತಾಪಿಸಿದಾಗ, ಅವರೂ ಈ ವರದಿಯ ಕೇಂದ್ರದಲ್ಲಿರುವ ಫಲಿತಾಂಶಗಳು ಸರಿಯಿದೆಯೆಂದರು. ವಂಚನೆಯ ಮೇಲೆ ಅವಲಂಬಿತವಾಗಿರುವ ತಂತ್ರಗಾರಿಕೆಗೆ ಚೀನಾದಲ್ಲಿ ಅತ್ಯಂತ ಮಹತ್ವ ಕೊಡಲಾಗಿದೆ. ಇದಕ್ಕೆ ಐತಿಹಾಸಿಕ ಮಹತ್ವವೂ ಇರುವುದರಿಂದ ಇದು ಆ ನೆಲದ ಗುಣವೆಂದು ನಂಬಿ ಅದನ್ನು ಉನ್ನತ ಸ್ಥಾನಕ್ಕೇರಿಸಲಾಗಿದೆ.  

ಭ್ರಮೆ 5                       

ಚೀನಾ ಮೂಲಭೂತವಾದಿಗಳು ದುರ್ಬಲರು

1990 ದಶಕದ ಕ್ಲಿಂಟನ್ ಸರ್ಕಾರದ ಅವಧಿಯಲ್ಲಿ, ಸಿಐಎ ಮತ್ತು ರಕ್ಷಣಾ ಇಲಾಖೆಯು, ’ಚೀನಾ ಅಮೆರಿಕವನ್ನು ವಂಚಿಸಲು ಸಾಧ್ಯವೇ?’ ಎನ್ನುವ ಪ್ರಶ್ನೆಗೆ ಉತ್ತರಗಳನ್ನು ಹುಡುಕಲು ನನ್ನನ್ನು ಕೇಳಿಕೊಂಡಿತು. ಅದುವರೆವಿಗೆ ಪ್ರಕಟವಾಗಿಲ್ಲದ ದಾಖಲೆಗಳು, ಮ್ಯಾಂಡರಿನ್ ನಲ್ಲಿ ಬರೆಯಲಾದ ವರದಿಗಳು ಮತ್ತು ಚೀನಾದಿಂದ ಹೊರಗಿದ್ದ ದೇಶಭ್ರಷ್ಟರ ಜೊತೆ ಸಂದರ್ಶನಗಳು -ಇವುಗಳ ಆಧಾರದ ಮೇಲೆ ಚೀನಾ ‘ನಾವು ನಿರಂತರ ನೋಡುತ್ತಿದ್ದರೂ ನಮ್ಮಿಂದ ಮುಚ್ಚಿಡಲಾಗಿದ್ದ ರಹಸ್ಯಗಳಿವೆ’ ಎನ್ನುವುದನ್ನು ಪತ್ತೆ ಮಾಡಿದೆ. ಕಣ್ಣಿದ್ದೂ ಕುರುಡರು ಎನ್ನುವ ಗಾದೆಗೆ ಉತ್ತರದಂತಿತ್ತು ನನ್ನ ಅಧ್ಯಯನ.

ನಾವು ಅದುವರೆವಿಗೂ ನಂಬಿಕೊಂಡು ಬಂದಿದ್ದ ಕಥಗಳಿಗೂ ವಾಸ್ತವಕ್ಕೂ ಅಗಾಧ ಅಂತರ ಕಾಣಿಸಿತು.  ಅಮೆರಿಕದಲ್ಲಿ ನೀತಿ ನಿರೂಪಣೆ ಮಾಡುವ ಜನರನ್ನು ಮರುಳುಗೊಳಿಸಿ, ಅವರಿಂದ ತಾಂತ್ರಿಕ, ಆರ್ಥಿಕ ಮತ್ತು ಮಿಲಿಟರಿ ನೆರವು ಪಡೆಯುವುದು ಹೇಗೆ ಎಂಬುದನ್ನು ವಿವರಿಸಿದ್ದ, ಚೀನಾ ದ ಯಿಂಗ್ ಪೈ (ಮೂಲಭೂತವಾದಿಗಳು) ತಯಾರಿಸಿದ್ದ ಪ್ರಸ್ತಾಪಗಳನ್ನು ಹೊರ ತೆಗೆಯಲು ಯಶಸ್ವಿಯಾದೆವು. ಈ ಮೂಲಭೂತವಾದಿಗಳು, ಚೀನಾ ದೇಶವನ್ನು 2049ರ ವೇಳೆಗೆ ವಿಶ್ವದ ಅಧಿಕೃತ ನಾಯಕತ್ವ ಹೊಂದಿರುವ ದೇಶವನ್ನಾಗಿಸಬೇಕೆಂಬ ಅಜೆಂಡಾವನ್ನು, ಮಾವೋ ತ್ಸೆ ತುಂಗ ರಿಂದ ಮೊದಲುಗೊಂಡು ಇತ್ತೀಚಿನ ನಾಯಕರ ವರೆಗೆ, ನಿರಂತರವಾಗಿ ಪೋಷಿಸುತ್ತಾ ಬಂದಿರುವುದನ್ನು ಕಾಣಬಹುದು. 

2049ರ ಹೊತ್ತಿಗೆ ಕಮ್ಯುನಿಸ್ಟ್ ಕ್ರಾಂತಿಗೆ ನೂರು ವರ್ಷಗಳಾಗುವುದು ಆಕಸ್ಮಿಕವೇನಲ್ಲ. ಈ ನೂರು ವರ್ಷದ ದಾರಿಯನ್ನು ‘ನೂರು ವರ್ಷದ ಮ್ಯಾರಾಥಾನ್’ ಎಂದು ಕರೆಯುತ್ತಾರೆ. ಇದರ ಗುರಿ ವಿದೇಶೀ ಜನಗಳಿಂದ ಚೀನಾಕ್ಕೆ ಆದ ಅಪಚಾರಗಳಿಗೆಲ್ಲ ಪ್ರತೀಕಾರ ತೀರಿಸಿಕೊಳ್ಳುವುದು. ಹೀಗಾದಲ್ಲಿ ಈ ವಿಶ್ವದ ಮೇಲೆ ಅಮೆರಿಕದ ಹಿಡಿತ ಸಡಿಲಗೊಂಡು, ಚೀನಾ ವಿಶ್ವದ ಆಧಿಪತ್ಯ ವಹಿಸಲು ಸಾಧ್ಯವಾಗಬೇಕು. ಈ ಯೋಜನೆ ’ವಂಚನೆ ಆಧಾರಿತ ತಂತ್ರಗಾರಿಕೆ’ ಯಿಂದ ಮಾತ್ರ ಸಫಲವಾಗುತ್ತದೆ ಎಂದು ಈ ಮೂಲಭೂತವಾದಿಗಳ ಪ್ರಬಲ ನಂಬಿಕೆ. 

ನಾನು ಈ ವರದಿಯನ್ನು ಸಲ್ಲಿಸಿದಾಗ, ಅಮೆರಿಕದ ಹಲವಾರು ಗುಪ್ತಚರ ವಿಶ್ಲೇಷಕರು ನಂಬಲಿಲ್ಲ. ನಾನು ನೋಡಿದ್ದ ಪ್ರಮಾಣಗಳನ್ನು ಅವರು ನೋಡಿರಲಿಲ್ಲವಾದ್ದರಿಂದ ಅವರ ಅನಿಸಿಕೆ ಸರಿಯಾಗಿತ್ತು. ಅದೂ ಅಲ್ಲದೆ, ಸಾರ್ವಕನಿಕವಾಗಿ ಚೀನಾ ಸರ್ಕಾರ ತನ್ನನ್ನೇ ತಾನು ’ಒಂದು ಹಿಂದುಳಿದ ದೇಶ” ವೆಂದೂ, ಅದರ ಶಾಂತಿಯುತ ಬೆಳವಣಿಗೆಗೆ ಅಮೆರಿಕದಂತಹ ರಾಷ್ಟ್ರಗಳ ಸಹಾಯ ಬೇಕೆಂಬ ಮನೋಭಾವವನ್ನು ಮತ್ತೆ ಮತ್ತೆ ಪ್ರಕಟಿಸಿತ್ತು.

ಅದೂ ಅಲ್ಲದೆ, ಆ ದೇಶದ ಸಂವಿಧಾನದಲ್ಲೇ ’ಚೀನಾ ವಸಹತುಶಾಹಿ ಉದ್ದೇಶಗಳನ್ನು ಹೊಂದಿರಬಾರದು’ ಎಂದು ಬರೆದಿರುವುದನ್ನು ಮತ್ತೆ ಮತ್ತೆ ಉಲ್ಲೇಖಿಸುತ್ತಾರೆ. ತಮಗೆ ವಿಶ್ವದ ಆಗುಹೋಗುಗಳನ್ನು ನಿರ್ಧರಿಸುವ ಮತ್ತು ಅದರ ದಿಕ್ಕನ್ನು ನಿರ್ದೇಶಿಸುವ ಯಾವುದೇ ಇರಾದೆ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಆದರೆ ಇದರೊಂದಿಗೇ, ಮುನ್ನೂರು ವರ್ಷಗಳ ಹಿಂದೆ ವಿಶ್ವದ ಮೂರನೇ ಒಂದು ಭಾಗ ಆರ್ಥಿಕತೆಯನ್ನು ತಾನು ನಿಯಂತ್ರಿಸುತ್ತಿದ್ದುದ್ದನ್ನು ನೆನಪಿಸಿಕೊಂಡು, ಆ ದಿನಗಳಿಗೆ ಮರಳುವುದು ತಮ್ಮ ಗುರಿಯೆಂದೂ ಹೇಳುತ್ತಾರೆ.

ವಿಶ್ವದ ಬಗೆಗೆ ಉದಾರ ನೀತಿಯನ್ನು ಪ್ರಾಮಾಣಿಕವಾಗಿ ಬೆಂಬಲಿಸುವ ಗುಂಪುಗಳೂ ಚೀನಾದಲ್ಲಿವೆ.   ‘ಪಾಂಡಾಗಳನ್ನು ಅಪ್ಪಿಕೊಳ್ಳುವವರು’ ಎಂದು ಬೇರೆಯವರು ಅಣಕದಿಂದ ನೋಡುವ ಈ ಗುಂಪು ತನ್ನನ್ನು ವಿಶ್ವ ಪ್ರೇಮಿಯೆಂದೂ, ಸ್ವದೇಶವನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡ ನೀತಿಯಲ್ಲಿ ತಮಗೆ ಅಷ್ಟು ವಿಶ್ವಾಸವಿಲ್ಲವೆಂದೂ ಹೇಳುತ್ತ, ಈ ’ಪಾಂಡ ಅಪ್ಪಿಕೊಳ್ಳುವ’ ಅಣಕನ್ನು ಗೌರವದ ಸಂಕೇತವೆಂದು  ಭಾವಿಸುತ್ತಾರೆ.  ಆದರೆ ಚೀನಾ ಮೂಲಭೂತವಾದಿಗಳ ಗುಂಪು’ ಅಮುಖ್ಯವಾದದ್ದು ಎಂದು ಹೇಳುವ ಹಾಗಿಲ್ಲ. ಬೀಜಿಂಗ್ ನ ಮುಖ್ಯ ಧೋರಣೆಗಳನ್ನೂ, ಕಾರ್ಯನೀತಿಗಳನ್ನು ನಿರ್ಧರಿಸುವವರ ಮೇಲೆ ಈ ಸಣ್ಣ ಗುಂಪು ಮಾಡುವ ಪ್ರಭಾವ ಹೆಚ್ಚು.

ಈ ಗುಂಪಿನ ಮುಖವಾಣಿಯಾದ ’ಗ್ಲೋಬಲ್ ಟೈಮ್ಸ್’ ಪತ್ರಿಕೆ ಜನಪ್ರಿಯತೆಯಲ್ಲಿ ಮೂರನೇ ಸ್ಥಾನದಲ್ಲಿದೆ.  ಅದರ ಸಂಪಾದಕ ಹು ಕ್ಸಿ ಜಿನ್ ಅವರು ಹೀಗೆ ಹೇಳುತ್ತಾರೆ, “ಚೀನಾ ಮೂಲಭೂತವಾದಿಗಳ ಪ್ರಕಾರ, ಈ ಉದಾರವಾದಿಗಳು ಕ್ಯಾನ್ಸರ್ ಜೀವಕೋಶಗಳಂತೆ; ಅದನ್ನು ಹೀಗೆಯೇ ಬಿಟ್ಟರೆ, ಚೀನಾ ದೇಶವನ್ನೇ ಬಲಿ ತೆಗೆದುಕೊಂಡೀತು”

ನಾನು ಹಲವಾರು ದಶಕಗಳಿಂದ ಜತನದಿಂದ ಕಲೆ ಹಾಕಿದ ಅನೇಕ ದಾಖಲೆಗಳ ಆಧಾರದ ಮೇಲೆ “Chinese Views of Future Warfare” ಮತ್ತು “China Debates the Future Security

Environments” ಶೀರ್ಷಿಕೆಯುಳ್ಳ ಎರಡು ಪುಸ್ತಕಗಳನ್ನು ಬರೆದಿದ್ದೇನೆ. ಈ ಪುಸ್ತಕದಲ್ಲಿ ಚೀನಾ ಕುರಿತ ಚರ್ಚೆಯ ಎರಡೂ ಮಗ್ಗುಲುಗಳ (ಕಟ್ಟರ್ ದೇಶೀಯವಾದಿ ಮತ್ತು ಉದಾರವಾದಿ) ಟಿಪ್ಪಣಿಗಳನ್ನು ಬಳಸಿಕೊಂಡಿದ್ದೇನೆ. 

ಇಷ್ಟು ದಶಕಗಳ ಚೀನಾ ಅಧ್ಯಯನದಿಂದ ನಾನು ಕಲಿತಿದ್ದೇನೆಂದರೆ, ಸಣ್ಣ ಗುಂಪುಗಳೆಂದು ನಾವು ಬದಿಗೊತ್ತುವ ಮೂಲಭೂತವಾದಿಗಳ ಗುಂಪು ಚೀನಾದ ಸರ್ಕಾರದ ಮೇಲೆ ಬೀರುವ ಪ್ರಭಾವ ಅತ್ಯಧಿಕ. ’ಸಾಂಸ್ಕೃತಿಕ ಕ್ರಾಂತಿ’ ಸಮಯದಿಂದ ಮೊದಲುಗೊಂಡು, ಚೀನಾ ವಿಶ್ವದ ಎಲ್ಲ ದೇಶಗಳ ಜೊತೆ ಸಂಬಂಧವಿರಿಸಿಕೊಂಡು, ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯನ್ನು ಒಪ್ಪಿಕೊಳ್ಳಬೇಕೆನ್ನುವ ಉದಾರವಾದಿಗಳು ಈಗಲೂ ಇದ್ದಾರೆ.  ವ್ಯತ್ಯಾಸವೇನೆಂದರೆ, ಅವರ ನಿಲುವು ಚೀನಾದ ಸಾರ್ವಜನಿಕ ಚರ್ಚೆಯಲ್ಲಾಗಲೀ, ಪಶ್ಚಿಮ ಜಗತ್ತಿನ ಮಾಧ್ಯಮಗಳಲ್ಲಾಗಲೀ ಬಿತ್ತರಗೊಳ್ಳುವುದೇ ಇಲ್ಲ. ನಿಜವಾದ ರೀತಿಯಲ್ಲಿ ಮುಕ್ತ ಚರ್ಚೆಗೆ ಬೇಕಾದ ಸಾರ್ವಜನಿಕ ವೇದಿಕೆಗಳು ಇಲ್ಲವೇ ಇಲ್ಲ.  ಆದ್ದರಿಂದ ಹಲವು ಗುಂಪುಗಳ ಸಿದ್ಧಾಂತಗಳನ್ನು ಅಂತರ್ಗತಗೊಳಿಸಿಕೊಂಡು, ಅವುಗಳು ಚೀನಾದ ಸರ್ಕಾರದ ನೀತಿಯ ಮೇಲೆ ಮಾಡುವ ಪ್ರಭಾವದ ಪ್ರಮಾಣವನ್ನು ಅಂದಾಜು ಮಾಡಿ; ತಮ್ಮ ನಿಲುವನ್ನು ನಿರ್ಧರಿಸಬೇಕಾದ ಕಷ್ಟಕರ ಸ್ಥಿತಿ ಪಾಶ್ಚಿಮಾತ್ಯ ದೇಶಗಳ ತಜ್ಞರದು. ಇದರಿಂದ ಅನುಕೂಲವಾದ ಸಿದ್ಧಾಂತಗಳ ಮೂಲಕ ಚೀನಾ ಮುಕ್ತ ಮಾರುಕಟ್ಟೆಯ ನಿಲುವಿನೆಡೆಗೆ ಜಾರುತ್ತಿದೆ ಎಂಬ ನಂಬಿಕೆಯನ್ನು ತಮ್ಮ ಮೇಲೇ ತಾವೇ ಆಹ್ವಾನಿಸಿಕೊಂಡಿದ್ದಾರೆ. 

ಜನಪ್ರಿಯ ಗ್ರಾಹಕ ಚಿಹ್ನೆಗಳಾದ ಸ್ಟಾರ್ ಬಕ್ಸ್, ಆಪಲ್ ಮತ್ತು ಮ್ಯಾಕ್ ಡೊನಾಲ್ಡ್ ಸಂಸ್ಥೆಗಳ ವ್ಯಾಪಾರಗಳು ಚೀನಾದಲ್ಲಿ ಅಭಿವೃದ್ಧಿ ಹೊಂದುತ್ತಿರುವುದನ್ನು, ತಮ್ಮ ನಿಲುವಿನ ಸಮರ್ಥನೆಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಇವೆಲ್ಲ ಸೋಗಿನ ಹಿಂದೆ, ‘ಸೈನ್ಯಾಧಾರಿತ ಚೀನಾ’ ಮುನ್ನೆಲೆಗೆ ಬರುತ್ತಿರಬಹುದೇನೋ ಎಂಬ ಸೂಚನೆಗಳು ಕಂಡುಬರುತ್ತಿವೆ.

ದಶಕಗಳಿಂದ ಅಮೆರಿಕನ್ ಸರ್ಕಾರ ಚೀನಾಗೆ ತಂತ್ರಜ್ಞಾನ, ಮಿಲಿಟರಿ ಜ್ಞಾನ, ಗುಪ್ತಚರ ವಿಭಾಗ ಮತ್ತು ಅರ್ಥಿಕ ಸಹಾಯ -ಎಲ್ಲವನ್ನೂ ಧಾರಾಳವಾಗಿ ಕೊಡುತ್ತಾ ಬರುತ್ತಿದೆ. ಎಷ್ಟೆಂದರೆ, ಅಮೆರಿಕದ ಕಾಂಗ್ರೆಸ್ 2005ರಲ್ಲಿ, ಈ ‘ಕೊಡುವಿಕೆ’ಯ ಲೆಕ್ಕಾಚಾರಗಳೇ ಸರಿಯಿಲ್ಲ ಎಂಬ ಹೇಳಿಕೆ ಕೊಟ್ಟಿತು. ಅಮೆರಿಕ ಏನು ಕೊಡಲಿಲ್ಲವೋ ಅದನ್ನು ಕದಿಯಲಾಗಿದೆ.

’ನೂರು ವರ್ಷಗಳ ಮ್ಯಾರಾಥಾನ್’ ನ ಶಕ್ತಿಯೆಂದರೆ, ಅದು ಗೌಪ್ಯವಾಗಿ, ಯಾರಿಗೂ ಗೊತ್ತಾಗದಂತೆ ಕೆಲಸ ಮಾಡುತ್ತದೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇದನ್ನು ವಿಶದವಾಗಿ ಬರೆದಿಡುವ ಯೋಜನೆಯೂ ನಿಮಗೆ ಸಿಗುವುದಿಲ್ಲ. ಆದರೆ ಚೀನಾ ನಾಯಕರಿಗೆ ಈ ಮ್ಯಾರಥಾನ್ ಬಗ್ಗೆ ಎಷ್ಟು ಚೆನ್ನಾಗಿ ಅರಿವಿದೆಯೆಂದರೆ, ಅದರ ಬಗ್ಗೆ ಬರೆದಿಡುವ ಅವಶ್ಯಕತೆಯೂ ಇಲ್ಲ. ಇಲ್ಲಿಯವರೆಗೆ ಸಾರ್ವಜನಿಕವಾಗಿ ಇದರ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದ ಚೀನಾ ನಾಯಕತ್ವ, ಈಗ ಮುಕ್ತವಾಗಿ ಮಾತನಾಡುತ್ತಿದೆ. ಬಹುಶಃ ಆ ಗುರಿ ತಮಗೆ ಹತ್ತಿರವಾಗುತ್ತಿದೆ ಎಂಬ ವಿಶ್ವಾಸ ಹೆಚ್ಚಾಗುತ್ತಿರಬೇಕು ಮತ್ತು ಆ ದೇಶ ಸಾಗುತ್ತಿರುವ ವೇಗದಲ್ಲಿ, ಅಮೆರಿಕಾಗೆ ಅವರನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎನ್ನುವುದು ಮನದಟ್ಟಗಿರಬೇಕು.

ನಾನು 2012, 2013 ಮತ್ತು 2014ರಲ್ಲಿ ಚೀನಾಕ್ಕೆ ಭೇಟಿ ನೀಡಿದಾಗ ಈ ಬದಲಾವಣೆಯನ್ನು ನಿಚ್ಚಳವಾಗಿ ನೋಡುವಂತಾಯಿತು. ಮುಂಬರುವ ಬಹು-ಧ್ರುವೀಕೃತ ವಿಶ್ವದಲ್ಲಿ, ಸಮೂಹ ನಾಯಕತ್ವದಲ್ಲಿ ಚೀನಾ ಒಬ್ಬ ನಾಯಕನಾಗಬೇಕು ಎನ್ನುವ ಉದಾರವಾದೀ ನಿಲುವನ್ನು ಪ್ರಕಟಿಸಿದ ಹಲವರು, ಕಮ್ಯುನಿಸ್ಟ್ ಪಾರ್ಟಿಯ ನಾಯಕತ್ವದಲ್ಲಿ, ವಿಶ್ವದಲ್ಲಿ ಚೀನಾಕ್ಕೆ ನ್ಯಾಯಯುತವಾಗಿ ದೊರೆಯಬೇಕಾಗಿದ್ದ ಸ್ಥಾನ ಮುನ್ನೂರು ವರ್ಷಗಳ ಬಳಿಕ ಸಿಗುವ ಸಮಯ ಬಂದಿದೆ ಎನ್ನುವ ಮಾತನ್ನು ಆಡುತ್ತಿದ್ದಾರೆ.

ಇದನ್ನು ಹೇಳುವ ಮೂಲಕ ಅವರು ನನ್ನಂಥ ಚೀನಾ ತಜ್ಞನನ್ನೂ, ಅಮೆರಿಕದ ಸರ್ಕಾರವನ್ನೂ ಮರುಳು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ತಮ್ಮ ಗರ್ವ ಮತ್ತು ಹೆಮ್ಮೆಯನ್ನು ಮೆಲು ಮಾತಿನ ಮೂಲಕವೇ ವ್ಯಕ್ತಪಡಿಸುವ ಮೂಲಕ, ಅಮೆರಿಕದ ಇತಿಹಾಸಕ್ಕೆ ತಿರುವನ್ನು ಕೊಡಬಹುದಾದ ಪೆಟ್ಟನ್ನು ನಾವು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಈ ಮ್ಯಾರಥಾನ್ ನಡೆಯುತ್ತಿದೆ ಎನ್ನುವ ಅರಿವೇ ಇಲ್ಲದ್ದರಿಂದ ಅಮೆರಿಕ ಈ ನಿಟ್ಟಿನಲ್ಲಿ ಸೋಲನ್ನು ಕಂಡಿದೆ.

Leave a Reply

Your email address will not be published.