ಆಸ್ಪತ್ರೆಗಳ ಕಾರ್ಯತಂತ್ರ ಗೊತ್ತಿರಲಿ!

ಆರು ದಶಕಗಳ ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ವೈದ್ಯಕೀಯ ಜ್ಞಾನವನ್ನು ಸಂಪೂರ್ಣವಾಗಿ ಪಡೆಯಲು ಐದೂವರೆ ವರ್ಷಗಳ ಕಾಲ ಕಲಿಯಬೇಕಿತ್ತು. ಪ್ರತಿ ರೋಗಿಯನ್ನು ವಿವರವಾಗಿ ಪರೀಕ್ಷಿಸಿ, ರೋಗಿ ಹೇಳುವ ವಿವರಗಳು ಹಾಗೂ ವೈದ್ಯರು ಪತ್ತೆ ಮಾಡುವ ರೋಗ ಲಕ್ಷಣಗಳಿಂದಲೇ ರೋಗ ನಿರ್ಣಯ ಮಾಡಬೇಕಾಗಿತ್ತು. ಅತ್ಯಗತ್ಯವಾದ ಲ್ಯಾಬ್ ಪರೀಕ್ಷೆ, ಕ್ಷಕಿರಣ ಇತ್ಯಾದಿಗಳನ್ನು ಬಳಿಕವಷ್ಟೇ ಮಾಡಿಸಬೇಕಾಗಿತ್ತು.

ಈಗ ಕಲಿಯುವ ಅವಧಿಯನ್ನು ನಾಲ್ಕೂವರೆ ವರ್ಷಕ್ಕೆ ಇಳಿಸಲಾಗಿದೆ. ‘ರೋಗಿಯನ್ನು ಉಪಚರಿಸು ರೋಗವನ್ನಲ್ಲ’ ಎಂಬ ಆದೇಶ ಹಾಗೂ ಅದರ ಪಾಲನೆ ಮಾಯವಾಗಿ ‘ಟ್ರೀಟ್ ದ ಡಿಸೀಸ್ ನಾಟ್ ದ ಪೇಷೆಂಟ್’ ಎನ್ನುವ ಪರಿಸ್ಥಿತಿ ಉಂಟಾಗಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣವಾದ ಬಳಿಕ ಮನುಷ್ಯನ ಜೀವಿತಾವಧಿ ಬಹಳಷ್ಟು ಹೆಚ್ಚಾಗಿದೆ. ದೀರ್ಘಕಾಲ ಆರೋಗ್ಯವಾಗಿ ಬದುಕಬೇಕೆಂಬ ಆಸೆಯೂ ಹೆಚ್ಚಿರಬಹುದು. ಕೊನೆಯವರೆಗೂ ಆರೋಗ್ಯವಾಗಿಯೇ ಇರಬೇಕೆಂಬ ಬಯಕೆಯ ಕಾರಣ ಹಾಗೂ ಜಾಹೀರಾತುಗಳಲ್ಲಿ ಬರುವ ಪ್ರಕಟಣೆಗಳ ಕಾರಣದಿಂದ ವರ್ಷಕ್ಕೊಮ್ಮೆಯೋ ಆರು ತಿಂಗಳಿಗೊಮ್ಮೆಯೋ ದೇಹದ ಎಲ್ಲ ಅಂಗಗಳ ಪರೀಕ್ಷೆ ಮಾಡಿಸಿಕೊಳ್ಳುವ ಬಯಕೆ ಬಹಳಷ್ಟು ಜನರಿ ಗಿರುತ್ತದೆ. ಸರ್ಕಾರಿ ಆಸ್ಪತ್ರೆಗಳಷ್ಟೇ ಇಂಥ ವ್ಯವಸ್ಥೆಯನ್ನು ರೂಪಿಸುವುದು ಕಷ್ಟಸಾಧ್ಯ. ಅದಕ್ಕಾಗಿಯೇ ಕಾರ್ಪೊರೇಟ್ ವ್ಯವಸ್ಥೆ ಜಾರಿಗೆ ಬರುತ್ತಿದೆ. ಇಂತಹ ಆಸ್ಪತ್ರೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ್ದು, ದುಬಾರಿ ಯಂತ್ರೋಪಕರಣಗಳನ್ನು ಸ್ಥಾಪಿಸುತ್ತಾರೆ. ನಿಗದಿತ ಶುಲ್ಕ ನೀಡದೆ ಇಂತಹ ವ್ಯವಸ್ಥೆಗಳನ್ನು ರೂಪಿಸುವುದು, ನಿರ್ವಹಿಸುವುದು ಹಾಗೂ ಮುಂದುವರಿಸುವುದು ಅಸಾಧ್ಯ.

ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ತಪಾಸಣೆ, ರೋಗ ಪ್ರಗತಿ ಹಾಗೂ ಚಿಕಿತ್ಸೆಯನ್ನು ನಿರ್ಣಯಿಸಲು ಅಪರೂಪದ ಪರೀಕ್ಷೆಗಳನ್ನು ವಿವರವಾಗಿ ಮಾಡುವ ಅಗತ್ಯವಿದೆ.

ಮೇಲೆ ತಿಳಿಸಿದ ವೈರಾಣು ಜ್ವರಗಳು ವಿವರವಾದ ಲ್ಯಾಬ್ ಪರೀಕ್ಷೆಗಳನ್ನು ಮಾಡದೆ ಪತ್ತೆ ಮಾಡಲು ಸಾಧ್ಯವಿಲ್ಲ. ಅಲ್ಲದೆ ರೋಗದ ಪ್ರಗತಿ ಯಾವ ರೀತಿ ಇದೆ ಎಂದು ತಿಳಿಯಲು ಸಹ ಒಂದಕ್ಕಿಂತ ಹೆಚ್ಚು ಸಲ ಪ್ರಯೋಗಶಾಲೆಯ ಮೊರೆ ಹೋಗಬೇಕಾಗುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ತಪಾಸಣೆ, ರೋಗ ಪ್ರಗತಿ ಹಾಗೂ ಚಿಕಿತ್ಸೆಯನ್ನು ನಿರ್ಣಯಿಸಲು ಅಪರೂಪದ ಪರೀಕ್ಷೆಗಳನ್ನು ವಿವರವಾಗಿ ಮಾಡುವ ಅಗತ್ಯವಿದೆ. ದೀರ್ಘಕಾಲೀನ ಚಿಕಿತ್ಸೆ ರೋಗಿಗೆ ಹೊರೆಯಾಗುವುದು ಸತ್ಯಸಂಗತಿ. ರೋಗಿಗೆ ಹಾಗೂ ಅವರ ಬಂಧುಗಳಿಗೆ ಇಂತಹ ಚಿಕಿತ್ಸೆ ಅಗತ್ಯವೇ ಎಂಬ ಸಂಶಯ ಮೂಡುವುದು ಸಹಜ.

ಲಕ್ಷಾಂತರ ರೂಪಾಯಿಗಳ ಲ್ಯಾಬ್ ಹಾಗೂ ಕೋಟಿಗಟ್ಟಲೆ ಬೆಲೆಬಾಳುವ ಸ್ಕ್ಯಾನಿಂಗ್, ಎಂ.ಆರ್.ಐ, ಸಿಟಿ ಸ್ಕ್ಯಾನಿಂಗ್ ಇತ್ಯಾದಿ ಯಂತ್ರಗಳ ಕೇಂದ್ರಗಳನ್ನು ಸ್ಥಾಪಿಸಿ, ಮುನ್ನಡೆಸಬೇಕಾದ ಸಂಸ್ಥೆಗಳು ತಮ್ಮ ಉಪಕರಣಗಳನ್ನು ಅನೇಕ ಸಲ ಅಗತ್ಯವಿಲ್ಲದಿದ್ದರೂ ರೋಗಿಗಳ ಮೇಲೆ ಪ್ರಯೋಗಿಸುವ ಸಂದರ್ಭಗಳು ಖಂಡಿತ ಇವೆ. ಇದಲ್ಲದೆ ಕೆಲವು ಸಂಸ್ಥೆಗಳು, ಉದಾಹರಣೆಗಾಗಿ ಜೀವವಿಮಾ ನಿಗಮ ತಮ್ಮ ಸಿಬ್ಬಂದಿಗೆ ಸಂಸ್ಥೆಯ ಖರ್ಚಿನಲ್ಲಿ ಇಂತಹ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿವೆ. ಬಂಧುಬಳಗದ ಯಾವುದೇ ಸದಸ್ಯನಿಗೆ ಆರೋಗ್ಯ ಸಮಸ್ಯೆ ಇದ್ದರೆ ತಾನು ಸಹ ಅದೇ ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಹಂಬಲ ಅನೇಕರಿಗಿರುತ್ತದೆ.

ಇಂಥ ಪ್ರಕರಣಗಳನ್ನು ಕಡಿಮೆ ಮಾಡಲು ಪ್ರತಿಯೊಬ್ಬ ವ್ಯಕ್ತಿಯೂ ವರ್ಷವೆಲ್ಲ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವ ವ್ಯಾಯಾಮ, ಮನೆಕೆಲಸ, ದೇಹದ ತೂಕ ನಿಯಂತ್ರಣ, ಒಳ್ಳೆಯ ಹವ್ಯಾಸಗಳು ಹಾಗೂ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಪ್ರವಾಸ, ಹೊಸ ಸ್ನೇಹಿತರ ಪರಿಚಯ ಇಂತಹವನ್ನು ಕೈಗೊಳ್ಳಬೇಕು.

ಉಚಿತ ಪರೀಕ್ಷೆ, ಕಡಿಮೆ ದರದ ಸಂಪೂರ್ಣ ದೇಹ ಪರೀಕ್ಷೆ ಇತ್ಯಾದಿ ಹೆಸರಿನಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಹಣ ಮಾಡುತ್ತಿರುವುದು ಗುಟ್ಟಿನ ವಿಷಯವೇನಲ್ಲ. ತಮ್ಮ ಏಳಿಗೆ ಹಾಗೂ ವಿಸ್ತರಣೆ ಸಿಬ್ಬಂದಿಯ ಬೇಡಿಕೆಗಳನ್ನು ಪೂರೈಸಲು ಇವು ಅಗತ್ಯವಿರಬಹುದು. ಇಂಥ ಪ್ರಕರಣಗಳನ್ನು ಕಡಿಮೆ ಮಾಡಲು ಪ್ರತಿಯೊಬ್ಬ ವ್ಯಕ್ತಿಯೂ ವರ್ಷವೆಲ್ಲ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವ ವ್ಯಾಯಾಮ, ಮನೆಕೆಲಸ, ದೇಹದ ತೂಕ ನಿಯಂತ್ರಣ, ಒಳ್ಳೆಯ ಹವ್ಯಾಸಗಳು ಹಾಗೂ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಪ್ರವಾಸ, ಹೊಸ ಸ್ನೇಹಿತರ ಪರಿಚಯ ಇಂತಹವನ್ನು ಕೈಗೊಳ್ಳಬೇಕು.

ನಂಬಿಕೆಗೆ ಅರ್ಹವಾದ ಕುಟುಂಬ ವೈದ್ಯರಲ್ಲಿ ತಮ್ಮ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ಅವರ ಸೂಚನೆಯಂತೆ ಮಾತ್ರ ಅಗತ್ಯ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಳ್ಳಬೇಕು. ಎಲ್ಲ ಆರೋಗ್ಯ ಸಮಸ್ಯೆಗಳು ತೀವ್ರವಾದವು, ದೊಡ್ಡ ಆಸ್ಪತ್ರೆಗಳಿಗೆ ಹೋದಾಗ ಮಾತ್ರ ತಮ್ಮ ಆರೋಗ್ಯ ಸುಧಾರಿಸುತ್ತದೆ ಎಂಬ ಮನೋಭಾವವನ್ನು ಬದಲಿಸಿಕೊಳ್ಳಬೇಕು. ಹೀಗಾದರೆ ಮಾತ್ರ ಕಾರ್ಪೊರೇಟ್ ಸಂಸ್ಥೆಗಳು ತಮ್ಮನ್ನು ತುಸು ಮಟ್ಟಿಗಾದರೂ ತಿದ್ದಿಕೊಳ್ಳಬಹುದು ಹಾಗೂ ಸುಲಿಗೆ ತಪ್ಪಿಸಬಹುದು!

ಕೆಲವು ವಿಶೇಷ ಪ್ರಕರಣಗಳನ್ನು ಇಲ್ಲಿ ಹೇಳುವುದು ಸೂಕ್ತ ಎಂದು ಬಯಸುತ್ತೇನೆ. ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ಹದಿನೈದು ವರ್ಷಗಳಾಗಿದ್ದ ನನ್ನ ಮಿತ್ರ ಹಾಗೂ ವೈದ್ಯಕೀಯ ತಜ್ಞರೊಬ್ಬರು ಕಾರ್ಪೊರೇಟ್ ಆಸ್ಪತ್ರೆಯೊಂದರಲ್ಲಿ ಕರ್ತವ್ಯ ನಿರತ ವೈದ್ಯರಾಗಿ ಸೇರಿದರು. ತಮ್ಮ ತಿಳಿವಳಿಕೆಯಿಂದ ರೋಗಿಗಳಿಗೆ ಯಾವುದೇ ಪರೀಕ್ಷೆ ಮಾಡಿಸದೆ ರೋಗ ಲಕ್ಷಣಗಳಿಂದ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡುತ್ತಿದ್ದರು. ಇದು ಅಲ್ಲಿನ ನಿರ್ವಾಹಕರ ಗಮನಕ್ಕೆ ಬಂದಾಗ ಅವರ ಕೆಲಸ ಕೇವಲ ಕೇಸ್ ಶೀಟ್ ತಯಾರಿಸಿ ಸೂಪರ್ ಸ್ಪೆಷಲಿಸ್ಟ್ ಗೆ ರವಾನಿಸುವುದು ಹಾಗೂ ಅದಕ್ಕೂ ಮೊದಲು ವಿವರವಾದ ಲ್ಯಾಬ್ ಪರೀಕ್ಷೆ ಮಾಡಿಸುವುದು ಎಂದು ತಿಳಿಸಲಾಯಿತು. ನೊಂದ ವೈದ್ಯರು ಕೆಲವೇ ತಿಂಗಳಲ್ಲಿ ತಮ್ಮ ಹುದ್ದೆಯನ್ನು ತೊರೆದರು.

ಇದು ಇಂದಿನ ಖಾಸಗಿ ಆಸ್ಪತ್ರೆಗಳ ಕಾರ್ಯತಂತ್ರಗಳಿಗೆ ನಿದರ್ಶನ ಹಾಗೂ ರೋಗಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗೆ ಸುಳಿವು.

*ಲೇಖಕರು ಹಾಸನದವರು, ನಿವೃತ್ತ ಸರ್ಕಾರಿ ವೈದ್ಯಾಧಿಕಾರಿ; ಲೇಖಕರು.

Leave a Reply

Your email address will not be published.