ಇದು ಕೆಲಸ ಮಾಡುವ ಸರಕಾರ ಅಲ್ಲ

ಸಂಪುಟಸಭೆ ಎಂದರೆ ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಾದ ಯೋಜನೆಗಳು ಮತ್ತು ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾಣ ಕೈಗೊಳ್ಳುವ ಅಧಿಕಾರ ಕೇಂದ್ರದ ಉನ್ನತ ಸ್ಥಾನ. ಇಂಥ ಮಹತ್ವದ ಸಂಪುಟ ಸಭೆಯಲ್ಲಿ ಈ ಸರಕಾರದ ಸಚಿವರು ತಮಗೆ ಆ ಖಾತೆ ಕೊಟ್ಟಿಲ್ಲ, ಈ ಖಾತೆ ಬೇಕಿತ್ತು, ಆ ಶಾಸಕರಿಗೆ ಅಂಥ ನಿಗಮ-ಮಂಡಳಿ ಕೊಡಬೇಕು, ಇವರಿಗೆ ಇಂಥದು ಕೊಡಬೇಕು ಎಂಬ ಕಚ್ಚಾಟವೇ ಹೆಚ್ಚಾಗಿ ನಡೆದಿದೆ.

ಕರ್ನಾಟಕದಲ್ಲಿ ಈಗಿರುವ ಸಮ್ಮಿಶ್ರ ಸರಕಾರ ಒಂದು ಅನಿವಾರ್ಯ ಸ್ಥಿತಿಯಲ್ಲಿ ನಿರ್ಮಾಣವಾದ ಒಪ್ಪಂದದ ಸರಕಾರ. ಜನರು ಕಳೆದ ಚುನಾವಣೆಯಲ್ಲಿ ಬದಲಾವಣೆ ಬಯಸಿ ನೀಡಿದ ತೀರ್ಪಿಗೆ ಅನುಗುಣವಾದ ಸರಕಾರದ ಇದಲ್ಲ. ಆಗಿನ ಸ್ಥಿತಿಯಲ್ಲಿ ಕಾಂಗ್ರೆಸ್ ಬೇಡ ಎನ್ನುವ ಅಭಿಪ್ರಾಯ ಬಂದಿತ್ತು. ಜೆಡಿಎಸ್ ಬಗ್ಗೆ ಯಾವುದೇ ಖಚಿತ ಅಭಿಪ್ರಾಯ ಇರದಿದ್ದರೂ ಬಿಜೆಪಿ ಜೊತೆ ಸೇರಿಕೊಂಡು ಸರಕಾರ ಮಾಡಬಹುದು ಎಂಬ ಅಭಿಪ್ರಾಯವಿತ್ತು. ಆದರೆ ಕಾಂಗ್ರೆಸ್ ತಾನು ದೇಶದಲ್ಲಿ ನಿರ್ನಾಮವಾಗದೇ ಬದುಕಬೇಕು ಎಂಬ ಕಾರಣಕ್ಕಾಗಿ ತನಗಿಂತ ಅರ್ಧಕ್ಕೂ ಕಡಿಮೆ ಶಾಸಕರನ್ನು ಹೊಂದಿದ ಜೆಡಿಎಸ್ ಮುಂದೆ ಶರಣಾಯಿತು.

ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಪ್ರಾದೇಶಿಕತೆಯಲ್ಲೇ ಪ್ರಾದೇಶಿಕವಾದ ಹಾಗೂ ಒಂದು ಜಾತಿ ಮತ್ತು ಒಂದು ಕುಟುಂಬದ ಹಿಡಿತದಲ್ಲಿರುವ ಜನತಾದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಇದು ಜನಪರವಲ್ಲದ ಸರಕಾರ ಎಂಬ ಸಂದೇಶ ಆಗಲೇ ಜನ ರಿಗೆ ಹೋಯಿತು. ಸರಕಾರ ರಚನೆಯಾದ ಮೇಲೂ ಒಂದೇ ಕುಟುಂಬದ ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಅಗಿದ್ದರಿಂದ ಒಂದು ವಿಚಿತ್ರ ‘ನಿಯರೆಸ್ಟ್ ಆ್ಯಂಡ್ ಡಿಯರೆಸ್ಟ್ ಎನಿಮಿ ಕಾಂಬಿನೇಷನ್’ ಆರಂಭವಾಯಿತು. ಹಳೆಯ ಮೈಸೂರು ಭಾಗದಲ್ಲಿ ಚುನಾವಣೆಯಲ್ಲಿ ಹೊಡೆದಾಡಿದವರು ಈಗ ಮೇಲ್ನೋಟಕ್ಕೆ ಹೊಂದಾಣಿಕೆ ಮಾಡಿಕೊಂಡರೂ ಆಂತರ್ಯದಲ್ಲಿ ಒಬ್ಬರನ್ನೊಬ್ಬರು ಮುಗಿಸುವ ಯತ್ನ ಶುರು ಮಾಡಿಕೊಂಡರು. ಅಂದರೆ ಹೊರಗಡೆಯಿಂದ ಅಧಿಕಾರ ಹಂಚಿಕೆ ಎನಿಸಿದರೂ ಒಳಗೆ ಹೊಡೆದಾಟ ನಡೆಯುತ್ತಿದೆ.

ಸರಕಾರ ರಚನೆ ಬಗ್ಗೆ ಸಿದ್ಧರಾವiಯ್ಯ, ಕಾಂಗ್ರೆಸ್ ಮತ್ತು ಜನತಾದಳದ ವ್ಯಾಖ್ಯಾನಗಳು ಬೇರೆಬೇರೆಯಾಗಿದ್ದವು. ದೇವೇಗೌಡರು ತಮ್ಮ ಪ್ರಭಾವ ಬಳಸಿ ಕಾಂಗ್ರೆಸ್ಸಿನ ಪ್ರಮುಖ ಶಾಸಕರು ಸಚಿವರಾಗದಂತೆ ನೋಡಿಕೊಂಡರು. ಹೇಗೋ ಜಾತಿ ಕಾರಣಕ್ಕಾಗಿ ಡಿ.ಕೆ.ಶಿವಕುಮಾರ ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

ಅಸ್ತಿತ್ವದ ಪ್ರಶ್ನೆ ಬಂದಾಗ ಸಿದ್ಧರಾಮಯ್ಯ ಅವರಿಗೆ ಜನತಾದಳ ದೊಂದಿಗೆ ಹೋಗಲು ಮನಸ್ಸು ಇರಲಿಲ್ಲ. ಆದ್ದರಿಂದ ಸರಕಾರ ರಚನೆ ಬಗ್ಗೆ ಸಿದ್ಧರಾವiಯ್ಯ, ಕಾಂಗ್ರೆಸ್ ಮತ್ತು ಜನತಾದಳದ ವ್ಯಾಖ್ಯಾನಗಳು ಬೇರೆಬೇರೆಯಾಗಿದ್ದವು. ದೇವೇಗೌಡರು ತಮ್ಮ ಪ್ರಭಾವ ಬಳಸಿ ಕಾಂಗ್ರೆಸ್ಸಿನ ಪ್ರಮುಖ ಶಾಸಕರು ಸಚಿವರಾಗದಂತೆ ನೋಡಿಕೊಂಡರು. ಹೇಗೋ ಜಾತಿ ಕಾರಣಕ್ಕಾಗಿ ಡಿ.ಕೆ.ಶಿವಕುಮಾರ ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಸಿದ್ಧರಾಮಯ್ಯ ಕಡೆಯವರು ಯಾರೂ ಸಚಿವರಾಗದಂತೆ ಮಾಡಿದರು.ಇದು ಈ ಸರ್ಕಾರ ರಚನೆಗೊಂಡ ಹಿನ್ನೆಲೆ. 

ನತಾದಳ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ , ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿತ್ತು. ಹಾಗೆ ಹೇಳುವ ಮೂಲಕ ಸಿಕ್ಕಿಹಾಕಿಕೊಂಡಿತು. ಏಕೆಂದರೆ ಒಂದು ಗಣರಾಜ್ಯದಲ್ಲಿ ಕರ್ನಾಟಕ ಒಂದು ಅಂಗ ರಾಜ್ಯ. ನಮಗೆ ಕೆಲವು ನಿಯಮಗಳಿವೆ. ನಮ್ಮ ವೆಚ್ಚ ಉತ್ಪನ್ನಕ್ಕಿಂತ ಹೆಚ್ಚಿರಬಾರದು ಎಂಬುದು ನಿಯಮ. ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಈ ನಿಯಮಗಳನ್ನು ನಾವೇ ಮಾಡಿಕೊಂಡಿದ್ದೇವೆ. ಜನತಾದಳ ಹೇಳಿದ ಹಾಗೆ ಸಂಪೂರ್ಣ ಸಾಲ ಮನ್ನಾ ಮಾಡಿದರೆ ಆರ್ಥಿಕ ಶಿಸ್ತನ್ನು ಉಲ್ಲಂಘಿಸುತ್ತೇವೆ ಎಂಬ ಕಾರಣಕ್ಕೆ ಸಿದ್ಧರಾಮಯ್ಯ ಸಾಲಮನ್ನಾ ಮಾಡುವುದನ್ನು ವಿರೋದಿಸತೊಡಗಿದರು . ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ ಬಜೆಟ್ಟಿನಲ್ಲಿ ಸಾಲ ಮನ್ನಾ ಘೋಷಣೆ ಮಾಡದಂತೆ ಪದೇ ಪದೇ ಎಚ್ಚರಿಕೆ ನೀಡಿದರು.

ಸಿದ್ಧರಾಮಯ್ಯ ಹೀಗೆ ವಿರೋಧಿಸಲು ಇನ್ನೂ ಒಂದು ಕಾರಣವಿತ್ತು. ಅದೇನೆಂದರೆ ಇದು ಕೆಲಸ ಮಾಡುವ ಸರಕಾರ ಎನಿಸಿಕೊಳ್ಳಬಾರದು ಎಂಬ ಒಳ ಉದ್ದೇಶವಿತ್ತು. ಈ ತಿಕ್ಕಾಟ ನಡೆಯುತ್ತಿರುವಾಗಲೇ ಬಜೆಟ್ ಮಂಡನೆ ದಿನ ಹತ್ತಿರ ಬಂತು.ಆಗಲೂ ಸಾಲ ಮನ್ನಾ ಘೋಷಿಸಲು ವಿರೋಧ ವ್ಯಕ್ತವಾಯಿತು. ಆದರೂ ಹೇಗೋ ಮಾಡಿ ಅಧಿಕಾರಿಗಳನ್ನು ಮತ್ತು ಕಾಂಗ್ರೆಸ್ಸಿನವರನ್ನು ಒಪ್ಪಿಸಿ ಸಾಲ ಮನ್ನಾ ಪ್ರಕಟಿಸಿದರು. ಆದರೆ ಚುನಾವಣೆಯಲ್ಲಿ ಹೇಳಿದಂತೆ ಸಂಪೂರ್ಣ ಸಾಲ ಮನ್ನಾ ಪ್ರಕಟಿಸದೇ ಎರಡು ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿದರು.

ಸಾಲ ಮನ್ನಾ ಮಾಡಲು ಹಲವು ನಿರ್ಬಂಧಗಳನ್ನು ಹೇರತೊಡಗಿದರು. ಆದಾಯ ತೆರಿಗೆ ಪಾವತಿಸುವವರಿಗೆ ಸಾಲ ಮನ್ನಾ ಇಲ್ಲ, ಯಂತ್ರೋಪಕರಣಗಳಿಗೆ ಮಾಡಿದ ಸಾಲ ಮನ್ನಾಇಲ್ಲ, ಮುಂತಾದ ಷರತ್ತುಗಳನ್ನು ಹಾಕಿದರು. ಅಷ್ಟಾದರೂ ಸಾಲ ಮನ್ನಾ ಯೋಜನೆ ಸಮರ್ಪಕ ಜಾರಿಯಾಗಿದೆ ಎಂದು ನೋಡಿದರೆ ಇದುವರೆಗೆ ಒಂದು ಸಾವಿರ ಕೋಟಿ ರೂಪಾಯಿ ಸಾಲವನ್ನೂ ತೀರಿಸಿಲ್ಲ ಎಂದು ಸರಕಾರಿ ದಾಖಲೆಗಳೇ ಹೇಳುತ್ತಿವೆ.

ಬಜೆಟ್ಟಿನಲ್ಲಿರೂ.46 ಸಾವಿರಕೋಟಿ ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿದರು. ಆದರೆ ಸಾಲ ಮನ್ನಾ ಮಾಡಲು ಹಲವು ನಿರ್ಬಂಧಗಳನ್ನು ಹೇರತೊಡಗಿದರು. ಆದಾಯ ತೆರಿಗೆ ಪಾವತಿಸುವವರಿಗೆ ಸಾಲ ಮನ್ನಾ ಇಲ್ಲ, ಯಂತ್ರೋಪಕರಣಗಳಿಗೆ ಮಾಡಿದ ಸಾಲ ಮನ್ನಾಇಲ್ಲ, ಮುಂತಾದ ಷರತ್ತುಗಳನ್ನು ಹಾಕಿದರು. ಅಷ್ಟಾದರೂ ಸಾಲ ಮನ್ನಾ ಯೋಜನೆ ಸಮರ್ಪಕ ಜಾರಿಯಾಗಿದೆ ಎಂದು ನೋಡಿದರೆ ಇದುವರೆಗೆ ಒಂದು ಸಾವಿರ ಕೋಟಿ ರೂಪಾಯಿ ಸಾಲವನ್ನೂ ತೀರಿಸಿಲ್ಲ ಎಂದು ಸರಕಾರಿ ದಾಖಲೆಗಳೇ ಹೇಳುತ್ತಿವೆ. ಕಾರಣವೆಂದರೆ ಸರಕಾರ ಹಾಕಿದ ಷರತ್ತುಗಳ ಅನ್ವಯ ಫಲಾನುಭವಿಯನ್ನು ಹುಡುಕುವುದು ತೀರ ಕಷ್ಟದ ಕೆಲಸವಾಗಿದೆ. ಅದಕ್ಕಾಗಿ ಜಿಲ್ಲಧಿಕಾರಿಗಳು ನಿರ್ಣಯ ಕೈಗೊಳ್ಳಲಾಗದೇ ಬೇಸತ್ತು ಎಲ್ಲ ಕಡತಗಳನ್ನು ಬದಿಗೆ ಸರಿಸಿಟ್ಟಿದ್ದಾರೆ. ಏನಾಗುತ್ತಿದೆ ಎಂಬುದು ಮುಗ್ಧ ರೈತರಿಗೂ ತಿಳಿಯದಾಗಿದೆ. ಒಟ್ಟಾರೆ ಸಾಲ ಮನ್ನಾಎಂಬುದು ರಾಜ್ಯದಲ್ಲಿಒಂದು ಪ್ರಹಸನದಂತೆ ಆಗಿದೆ.

ಸಾಲ ಮನ್ನಾ ಪ್ರಕಟಿಸಿದ ನಂತರ ಸರಕಾರ, ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ ಪತ್ರ ಬರೆದು ಇಂಥ ರೈತನ ಖಾತೆಯಲ್ಲಿರುವ ಇಷ್ಟು ಸಾಲ ಮನ್ನಾ ಆಗಿದೆ ಎಂದು ತಿಳಿಸಬೇಕಿತ್ತು. ಬದಲಾಗಿ ಸಾಲ ಮನ್ನಾದ ಹಣವನ್ನು ಐದು ವರ್ಷಗಳಲ್ಲಿ ತೀರಿಸುವುದಾಗಿ ಹೇಳುವ ಮೂಲಕ ಇನ್ನಷ್ಟು ಗೊಂದಲ ಉಂಟಾಗಿ ಯೋಜನೆಅಲ್ಲಿಯೇ ನಿಂತಿದೆ. ಸಾಲ ಮನ್ನಾ ಮಾಡಿದ ಮೇಲೆ ಸರಕಾರ ಅದಕ್ಕೆ ಬೇಕಾದ ಹಣಕಾಸಿನ ಸಂಪನ್ಮೂಲಗಳನ್ನು ಹುಡುಕಿಕೊಂಡು ಸಾಲ ತೀರಿಸುವ ಯೋಜನೆ ಮಾಡಬೇಕಿತ್ತು. ಈ ಮೊದಲು ಜಾರಿಗೊಳಿಸಿರುವ ಅನುತ್ಪಾದಕ ಯೋಜನೆಗಳನ್ನು ಹಿಂಪಡೆದು ಸಂಪನ್ಮೂಲ ಕ್ರೋಡೀಕರಿಸಬಹುದಾಗಿತ್ತು. ಸಾಲ ಮನ್ನಾ ಮಾಡುವ ಧೈರ್ಯ ತೋರಿಸಿದವರು ಅದೇರೀತಿ ಕೆಲವು ಸಬ್ಸಿಡಿಗಳನ್ನು ಹಿಂತೆಗೆಯುವ ಧೈರ್ಯವನ್ನೂ ತೋರಿಸಬೇಕಿತ್ತು.

ಸಾಲ ಮನ್ನಾ ವಿಚಾರವನ್ನೇ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಜನರನ್ನು ಬ್ಲಾಕ್ ಮೇಲ್ ಮಾಡಿದರು. ಅಂದರೆ‘ ನಾವು ನಿಮ್ಮ ಸಾಲ ಮನ್ನಾ ಮಾಡುತ್ತಿದ್ದೆವು ಬಿಜೆಪಿಯವರು ಅಡ್ಡಿ ಮಾಡಿದರು. ಅದಕ್ಕೆ ವಿಳಂಬವಾಗಿದೆ. ಈ ಚುನಾವಣೆಯಲ್ಲಿ ನಮಗೆ ಬೆಂಬಲಿಸಿದರೆ ನಿಮ್ಮ ಸಾಲವನ್ನು ಮನ್ನಾ ಮಾಡುವುದಾಗಿ’ ಸರಕಾರ ಹೇಳಿತು.ಆದರೆ ಇವರ ಬ್ಲಾಕ್ ಮೇಲ್‍ ತಂತ್ರವನ್ನುಅರಿತ ಹಾಗೂ ಕುಟುಂಬ ರಾಜಕಾರಣದಿಂದ ಬೇಸತ್ತ ರೈತ ವರ್ಗ ವಿಶೇಷವಾಗಿ ಮಂಡ್ಯ, ಹಾಸನಗಳಲ್ಲಿ ಬೀದಿಗೆ ಬಂದು ಸರಕಾರವನ್ನು ವಿರೋಧಿಸ ತೊಡಗಿದರು.

ಈಗ ನಿರ್ಮಿಸಿರುವ ಉದ್ಯಮ ಕೇಂದ್ರಗಳಲ್ಲಿ ಯಾವುದೇ ಉತ್ಪಾದನೆ ಆಗುತ್ತಿಲ್ಲ. ಅದಕ್ಕಾಗಿ ಇತ್ತ ಕೃಷಿಯೂ ಇಲ್ಲ, ಇನ್ನೊಂದೆಡೆ ಉದ್ಯಮವೂ ಇಲ್ಲ. ಎರಡೂ ಇಲ್ಲದೇ ಯಡಬಿಡಂಗಿ ಸ್ಥಿತಿಯಲ್ಲಿ ನಾವಿದ್ದೇವೆ.

ಕಳೆದ ಬಜೆಟ್‍ನಲ್ಲಿ ಈ ಸರಕಾರ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಒಂದುಘೋಷಣೆ ಮಾಡಿತು. ಅದೇನೆಂದರೆ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ವಿಶೇಷ ಉದ್ದಿಮೆಗಳ ಕೇಂದ್ರಗಳನ್ನು ಅಭಿವೃದ್ಧಿ ಮಾಡುವುದಾಗಿ ಹೇಳಿದರು. ಒಂದು ಜಿಲ್ಲೆಯಲ್ಲಿ ಆಟಿಕೆ ಸಾಮಾನುಗಳ ಉದ್ದಿಮೆಯನ್ನು, ಇನ್ನೊಂದು ಜಿಲ್ಲೆಯಲ್ಲಿ ಸಿದ್ಧ ಉಡುಪು ಕೇಂದ್ರವನ್ನು ಹೀಗೆ ತುಮಕೂರು, ಚಿತ್ರದುರ್ಗ, ಮಂಡ್ಯ ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಚೈನಾ ಮಾದರಿಯಲ್ಲಿ ವಿಶೇಷ ಉದ್ದಿಮೆಗಳ ಕೇಂದ್ರ ಸ್ಥಾಪನೆ ಮಾಡುವುದಾಗಿ ಹೇಳಿದರು. ಆದರೆಅದರ ಸ್ವರೂಪ, ಅದಕ್ಕೆ ಬೇಕಾದ ಹಣ ಎಲ್ಲಿಂದ ತರಲಾಗುವುದು ಮತ್ತು ಅದಕ್ಕೆ ಬೇಕಾದ ಜಾಗ ಯಾವುದು ಎಂಬಿತ್ಯಾದಿ ವಿವರಗಳನ್ನು ಕೊಟ್ಟಿಲ್ಲ.

ಈ ಸರಕಾರ ಚೈನಾ ಮಾದರಿಯಲ್ಲಿ ಜಿಲ್ಲೆಗಳಲ್ಲಿ ಉದ್ಯಮ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹೇಳಿದಾಗ ನಮಗೂ ಖುಷಿಯಾಗಿತ್ತು. ಈ ಯೋಜನೆಯನ್ನು ಪ್ರಕಟಿಸಿದಾಗ ಹಳ್ಳಿಯ ರೈತರು ತಮ್ಮ ಕೃಷಿಯ ಜೊತೆಗೆ ಪಕ್ಕದ ಊರಿಗೆ ಹೋಗಿ ಕೈಗಾರಿಕೆಯಲ್ಲಿ ಕೆಲಸ ಮಾಡಿ ಬಂದು ಮತ್ತೆ ತಮ್ಮ ಜಮೀನಿನಲ್ಲಿ ಕೃಷಿಯಲ್ಲಿ ತೊಡಗುವಂತಾಗುತ್ತದೆ. ಇದರಿಂದ ರೈತನ ಆರ್ಥಿಕ ಸ್ಥಿತಿ ಉತ್ತಮವಾಗುವ ಜೊತೆಗೆ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಆಶಾಭಾವನೆ ಮೂಡಿತ್ತು.ಆದರೆ ಇದುವರೆಗೆ ಒಂದೂ ಉದ್ಯಮ ಸ್ಥಾಪನೆ ಆಗಿಲ್ಲ.

ಈ ಯೋಜನೆಯ ನೀಲನಕ್ಷೆಯಾವುದು ಎಂದು ಗೊತ್ತಾಗಿಲ್ಲ. ಉದ್ಯಮ ಕೇಂದ್ರ ಎಂದರೆ ಏನು ಮಾಡಲಾಗುತ್ತದೆ ಎಂಬುದು ತಿಳಿದಿಲ್ಲ. ಇನ್ನೊಂದೆಡೆ ಸರಕಾರವೇ ಜಮೀನಿನ ಬೆಲೆಯನ್ನು ಗಗನಕ್ಕೆ ಏರಿಸಿ ಕೂತಿದೆ. ಅಂದರೆ ಇವರು ಹೇಳುವುದಕ್ಕೂ ನಮ್ಮ ನಿಯಮಗಳಿಗೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ, ವಿರುದ್ಧವಾಗಿವೆ. ಅಲ್ಲದೇ ಈಗ ನಿರ್ಮಿಸಿರುವ ಉದ್ಯಮ ಕೇಂದ್ರಗಳಲ್ಲಿ ಯಾವುದೇ ಉತ್ಪಾದನೆ ಆಗುತ್ತಿಲ್ಲ. ಅದಕ್ಕಾಗಿ ಇತ್ತ ಕೃಷಿಯೂ ಇಲ್ಲ, ಇನ್ನೊಂದೆಡೆ ಉದ್ಯಮವೂ ಇಲ್ಲ. ಎರಡೂಇಲ್ಲದೇಯಡಬಿಡಂಗಿ ಸ್ಥಿತಿಯಲ್ಲಿ ನಾವಿದ್ದೇವೆ. ಈ ಸ್ಥಿತಿ ಬದಲಾವಣೆಆಗಬೇಕೆಂಬುದು ನಮ್ಮಆಗ್ರಹ ಈ ಸರಕಾರದ ಇನ್ನೊಂದು ಲೋಪವೆಂದರೆ, ಕೆಲಸ ಮಾಡುವ ಸರಕಾರ ಎನ್ನಿಸಿ ಕೊಳ್ಳಲೇ ಇಲ್ಲ. ಯಾಕೆಂದರೆ ಸಂಪುಟ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ವಿಷಯಗಳನ್ನು ಆದ್ಯತೆ ಮೇರೆಗೆ ಚರ್ಚೆಗೆ ಇಟ್ಟುಕೊಂಡು ಯೋಜನೆಗಳ ಸಾಧಕ ಬಾಧಕಗಳನ್ನು ಪರಾಮರ್ಶಿಸಿ ಅನುಮೋದನೆ ನೀಡಬೇಕು. ಸಂಪುಟ ಸಭೆಎಂದರೆ ರಾಜ್ಯದ ಹಿತವನ್ನುಗಮನದಲ್ಲಿಟ್ಟು ಕೊಂಡು ಅಗತ್ಯವಾದ ಯೋಜನೆಗಳು ಮತ್ತು ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾಣ ಕೈಗೊಳ್ಳುವ ಅಧಿಕಾರಕೇಂದ್ರದ ಉನ್ನತ ಸ್ಥಾನ. ಇಂಥ ಮಹತ್ವದ ಸಂಪುಟ ಸಭೆಯಲ್ಲಿ ಈ ಸರಕಾರದ ಸಚಿವರು ತಮಗೆ ಆ ಖಾತೆಕೊಟ್ಟಿಲ್ಲ, ಈ ಖಾತೆ ಬೇಕಿತ್ತು, ಆ ಶಾಸಕರಿಗೆ ಅಂಥ ನಿಗಮ-ಮಂಡಳಿ ಕೊಡಬೇಕು, ಇವರಿಗೆ ಇಂಥದು ಕೊಡಬೇಕು ಎಂಬ ಕಚ್ಚಾಟವೇ ಹೆಚ್ಚಾಗಿ ನಡೆದಿದೆ. ಇದು ಅಲ್ಲದೇ ಮೈತ್ರಿ ಪಕ್ಷಗಳ ಅಧಿಕಾರ ಹಂಚಿಕೆ ವಿಚಾರಕೂಡ ಸಂಪುಟ ಸಭೆಯಲ್ಲೇ ಚರ್ಚೆಯಾಗುತ್ತಿತ್ತು. ರಾಜ್ಯದ ಅಭಿವೃದ್ಧಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು ಕಡಿಮೆ.

ಒಟ್ಟಾರೆಯಾಗಿ ಯಾವ ವಿಷಯಗಳು ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕಿತ್ತೋ ಅವುಗಳ ಬದಲಾಗಿಅವರವರ ವೈಯಕ್ತಿಕ ಹಿತಾಸಕ್ತಿಗಳು ಚರ್ಚೆಯಾದವು ಹಾಗೂ ಸರಕಾರವನ್ನು ದುರ್ಬಲಗೊಳಿಸುವ ವಿಷಯಗಳು ಹೊರಗೆ ಹರಿದಾಡ ತೊಡಗಿದವು. ಇದರಿಂದ ಸರಕಾರದ ವರ್ಚಸ್ಸಿಗೆ ಧಕ್ಕೆ ಬಂದಿತು. ಇದು ಕೆಲಸ ಮಾಡುವ ಸರಕಾರ ಅಲ್ಲಎನ್ನುವ ಭಾವನೆ ಜನರಲ್ಲಿ ಮೂಡಿತು.ರಾಜ್ಯದ ಹಿತವನ್ನುಗಂಭೀರವಾಗಿ ಪರಿಗಣಿಸುವಂಥ ಸಚಿವರ ಸಂಖ್ಯೆಯೂ ಈ ಸರಕಾರದಲ್ಲಿ ಕಡಿಮೆ.

ಈ ಸರಕಾರದಲ್ಲಿ ನೈತಿಕವಾಗಿ ದುರ್ಬಲವಾದ ಹಾಗೂ ಆಂತರಿಕವಾಗಿ ಕಚ್ಚಾಡುವ ಸಚಿವರ ಸಂಪುಟ ಅಸ್ತಿತ್ವದಲ್ಲಿರುವುದರಿಂದ ಒಂದೂ ನಿರ್ಣಯವು ಈ ವರೆಗೆ ಸರಿಯಾಗಿ ಕಾರ್ಯಗತವಾಗಿಲ್ಲ. ಬಜೆಟ್ಟಿನಲ್ಲೇ  ಪ್ರಕಟಿಸಿದ ಸಾಲ ಮನ್ನಾ ಸೇರಿದಂತೆಯಾವ ನಿರ್ಣಯಗಳು ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.

*ಲೇಖಕರು ರಾಜ್ಯಬಿಜೆಪಿ ವಕ್ತಾರರು, ಹಿರಿಯ ನಾಯಕರು; ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷರು.

Leave a Reply

Your email address will not be published.