ಇದೇನಾ ಸಂಭವಾಮಿ ಅನ್ನೊದು?

ನೆಹರೂ ಅವರನ್ನು ನಿಂದಿಸುತ್ತಿದ್ದ ನನಗೆ ಈಗ ತಪ್ಪಿನ ಅರಿವಾಗಿದೆ. ಆತ ಚಲಿಸುವ ಬ್ರಾಹ್ಮಣ. ಜಗತ್ತನ್ನು ಕಂಡ ಬ್ರಾಹ್ಮಣ. ಆದ್ದರಿಂದಲೆ ಭಾರತ ಸಮಾಜವಾದವನ್ನು ಅನುಸರಿಸಿತು. ಬ್ರಾಹ್ಮಣ ಚಲಿಸಿದ ಕಡೆ ಭಾರತ ಚಲಿಸಿದೆ, ಪ್ರಗತಿಶೀಲವಾಗಿದೆ; ಬ್ರಾಹ್ಮಣ ನಿಂತ ಕಡೆ ಭಾರತ ಚಾಣಕ್ಕೀಕರಣಗೊಂಡಿದೆ. ಅದೇ ಸ್ಥಿತಿಗೆ ನಾವೀಗ ಬಂದು ತಲುಪಿದ್ದೇವೆ. 

ಭೂಮಿ ಗುಂಡಾಗಿದೆ, ಜಾತಿಯೂ ಗುಂಡಾಗಿದೆಯೆ?

ಮತ್ತೆ ಒಕ್ಕರಿಸಿತು ನವ ಸನಾತನ ವಾದ; 2019ರ ಲೋಕಸಭಾ ಚುನಾವಣೆಯ ಮೂಲಕ. ವಿಷಯವಿಲ್ಲ, ವಿಚಾರವಿಲ್ಲ; ಸುಳ್ಳೇ ಎಲ್ಲವೂ ಆಯಿತಲ್ಲ! ನಮ್ಮ ಜಾತಿತಾತ ಅವತರಿಸಿದ್ದೂ ಹೀಗೆಯೆ. ಹಿಂದೂ ಧರ್ಮದ ಪಿತಾಮಹರಲ್ಲಿ ಒಬ್ಬನಾದ ಮನು ಅದನ್ನೇ ಧರ್ಮಶಾಸ್ತ್ರವಾಗಿ ಬರೆದ. ಇದೇ ಅಧಿಕೃತ ಎಂದು ಹಿಂದೂ ಪುನರುತ್ಥಾನವಾದಿಗಳು ಹೇಳುತ್ತಾ ಬಂದಿದ್ದಾರೆ; ಆಗಲೂ ಈಗಲೂ. ಭಾರತಕ್ಕಂತೂ ಇದರಿಂದ ಮುಕ್ತಿ ಇಲ್ಲವೆಂದು ಕಾಣುತ್ತಿದೆ.

ಕೇವಲ ಎಪ್ಪತ್ತೈದು ವರ್ಷಗಳ ಅವಧಿಯಲ್ಲೆ ಸಮಾಜವಾದವನ್ನು ಗುಡಿಸಿ ಗುಂಡಾಂತರ ಮಾಡಿ ನವ ಮನುವಾದವನ್ನು ಮುನ್ನೆಲೆಗೆ ತಂದ ಸನಾತನವಾದಿಗಳ ಯೋಜನೆ ಎಂಥ ಸಾಹಸ. ಇದೇ ಭಾರತ ಬ್ರಾಹ್ಮಣ್ಯದ ಮಹಾವಿಶೇಷ. ನೆಹರೂ ಅವರನ್ನು ನಿಂದಿಸುತ್ತಿದ್ದ ನನಗೆ ಈಗ ತಪ್ಪಿನ ಅರಿವಾಗಿದೆ. ಆತ ಚಲಿಸುವ ಬ್ರಾಹ್ಮಣ. ಜಗತ್ತನ್ನು ಕಂಡ ಬ್ರಾಹ್ಮಣ. ಆದ್ದರಿಂದಲೆ ಭಾರತ ಸಮಾಜವಾದವನ್ನು ಅನುಸರಿಸಿತು. ಬ್ರಾಹ್ಮಣ ಚಲಿಸಿದ ಕಡೆ ಭಾರತ ಚಲಿಸಿದೆ, ಪ್ರಗತಿಶೀಲವಾಗಿದೆ; ಬ್ರಾಹ್ಮಣ ನಿಂತ ಕಡೆ ಭಾರತ ಚಾಣಕ್ಕೀಕರಣಗೊಂಡಿದೆ. ಅದೇ ಸ್ಥಿತಿಗೆ ನಾವೀಗ ಬಂದು ತಲುಪಿದ್ದೇವೆ.

ಭಾರತದ ಶೂದ್ರ ಆರ್ಥಿಕವಾಗಿ ಚಲಿಸಿದ್ದಾನೆಯೆ ಹೊರತು, ಇನ್ನೂವರೆಗೆ ಸಾಂಸ್ಕೃತಿಕವಾಗಿ ಚಲಿಸಿಲ್ಲ. ಸಂಸ್ಕೃತೀಕರಣ ಎಂದರೆ ಬ್ರಾಹ್ಮಣೀಕರಣ ಎಂದು ತಿಳಿದಿದ್ದಾನೆಯೆ ಹೊರತು, ಅದರಿಂದ ಆಚೆಗೆ ಒಂದು ಹೆಜ್ಜೆಯನ್ನೂ ಚಲಿಸಿಲ್ಲ.

ಭಾರತದ ಶೂದ್ರ ಆರ್ಥಿಕವಾಗಿ ಚಲಿಸಿದ್ದಾನೆಯೆ ಹೊರತು, ಇನ್ನೂವರೆಗೆ ಸಂಸ್ಕೃತಿಕವಾಗಿ ಚಲಿಸಿಲ್ಲ. ಸಂಸ್ಕೃತೀಕರಣ ಎಂದರೆ ಬ್ರಾಹ್ಮಣೀಕರಣ ಎಂದು ತಿಳಿದಿದ್ದಾನೆಯೆ ಹೊರತು, ಅದರಿಂದ ಆಚೆಗೆ ಒಂದು ಹೆಜ್ಜೆಯನ್ನೂ ಚಲಿಸಿಲ್ಲ. ಸತ್ಯನಾರಾಯಣ ಪೂಜೆಗೆ ಮುಗೀಬೀಳುವ ದಲಿತ, ನೂರಾರು ದೇವಾಲಯಗಳ ಎದುರು ಮಂಡಿಯೂರಿ ಕೂರುವ ಒಕ್ಕಲಿಗ ಮುಖ್ಯಮಂತ್ರಿ, ರಾಜಕೀಯ ಅಧಿಕಾರಕ್ಕಾಗಿ ಸನಾತನಿಗಳ ಬೆನ್ನು ಹತ್ತುವ ಲಿಂಗಾಯತ ಯಾರ ಪ್ರತಿನಿಧಿಗಳು! ತಳವರ್ಗಗಳ ಪಾಡು ಬಿಡಿ, ಜಾತಿ ಬಹುಸಂಖ್ಯಾತರು, ಜಾತಿ ಬಂಡವಾಳಿಗರ ನಡುವೆ ನವ ತಿರುಪೆದಾರರು. ತಮ್ಮ ಜಾತಿಗಾಗಿ ಒಬ್ಬ ಸ್ವಾಮಿಯನ್ನು ನೇಮಿಸಿಕೊಂಡರೂ ತಕ್ಕುದಾದ ರಾಜಕೀಯ ಬೇಡಿಕೆ ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿ ಸಂಸ್ಕೃತಿಕವಾಗಿಯೂ, ಆರ್ಥಿಕವಾಗಿಯೂ ದೃಢತೆ ಇರುವ ಜಾತಿಯವರೆಂದರೆ ಅದು ಬ್ರಾಹ್ಮಣರು. ಅವರು ಚಲಿಸದೆ ಭಾರತ ಚಲಿಸುವುದಿಲ್ಲ. ಉಳಿದವರು ತಮ್ಮ ದೃಢತೆಯ ಮಾನದಂಡ ಯಾವುದೆಂದು ಗ್ರಹಿಸಿಯೆ ಇಲ್ಲವಲ್ಲ. ಎಡಪಂಥಿ ಹೇಳುತ್ತಾನೆ- ಒಂದು ಸಮುದಾಯದ ಆರ್ಥಿಕತೆಯು ಸಾಂಸ್ಕೃತಿಯನ್ನು ನಿರ್ಮಿಸುತ್ತದೆ ಎಂದು. ಒಂದು ಸಮುದಾಯದ ಪ್ರಾಥಮಿಕ ಹಂತದಲ್ಲಿ ಇದು ನಿಜ. ಈಗಾಗಲೇ ಭಾವನಾತ್ಮಕ ಸಂಸ್ಕೃತಿಯನ್ನು ನಿರ್ಮಿಸಿಕೊಂಡ ಜನವರ್ಗಗಳಲ್ಲಿ ಸಂಸ್ಕೃತಿಯೆ ಎಲ್ಲವನ್ನೂ ನಿರ್ಧರಿಸುತ್ತದೆ. ಎಂಥ ತಂತ್ರಜ್ಞಾನ ಪ್ರವೇಶಿಸಿದರೂಬದಲಾಗದ ಭಾರತದ ಜಾತಿಪದ್ಧತಿಯೆ ಇದಕ್ಕೆ ಉದಾಹರಣೆ.

ಉತ್ತರ ಕರ್ನಾಟಕದಲ್ಲಿ ಪ್ರತ್ಯಕ್ಷವಾಗಿ ಬಿಜೆಪಿಯನ್ನೇ ಬೆಂಬಲಿಸಿದರು. ಹೀಗೆ ವಿಚಾರವಾದಿಗಳು ನವಜಾತಿಗಳಾದರೇ ಹೊರತು ನವ ಕರ್ನಾಟಕ- ನವ ಭಾರತವನ್ನು ದರ್ಶಿಸಲೇ ಇಲ್ಲ. ಬಹುತೇಕ ಶೂದ್ರ ವಿಚಾರವಾದಿಗಳು ಬ್ರಾಹ್ಮಣರಿಗೆ ಸಿಗುತ್ತಿದ್ದ ಸವಲತ್ತುಗಳು ತಮ್ಮ ಜಾತಿಗೂ ಸಿಗಲೆಂದು ಹೋರಾಡಿದರೆ ಹೊರತು

ಭಾರತದ ಮೇಲುಜಾತಿ ಏನೇ ಹೊಸದು, ಎಲ್ಲಿಂದ ಬಂದರೂ ಅದನ್ನು ಮೊದಲಿಗೆ ತನ್ನ ಬಾಯಲ್ಲಿ ಹಾಕಿಕೊಳ್ಳುತ್ತದೆ; ಅಷ್ಟು ಸುಸಂಘಟಿತವಾಗಿದೆ ಅದು. ಭಾರತಕ್ಕೆ ಬಂದ ಜಾಗತೀಕರಣ ಕೂಡ ಪ್ರಧಾನಮಂತ್ರಿ ನರಸಿಂಹರಾಯರ ಕೂಸು. ಅದು ಆರ್ಥಿಕ ಮೇಲು ಜಾತಿ/ವರ್ಗ. ಈಗ ಅವೆರಡೂ ನಮ್ಮಲ್ಲಿ ಒಂದುಗೂಡಿವೆ. ಅವರ ರಾಜಕೀಯ 2019ರ ಲೋಕಸಭಾ ಚುನಾವಣೆಯಲ್ಲಿ ಅವತರಿಸಿದೆ. ಒಂದು ಪ್ರಬಲ ಸಂಸ್ಕೃತಿಕ ಶಕ್ತಿ ಮತ್ತೊಂದು ಪ್ರಬಲ ಆರ್ಥಿಕ ಶಕ್ತಿ. ಅವೆರಡೂ ಒಂದಾಗಿವೆ, ಅವನ್ನು ಗೆಲ್ಲುವುದಕ್ಕೆ ಹರಸಾಹಸ ಮಾಡಬೇಕಾಗಿದೆ.

ವಿಚಾರವಂತರಾದ ನಾವು ಬೊಗಳಿದ್ದೇ ಬಂತು, ವೇದಿಕೆಯಿಂದ ಜನರ ಮಧ್ಯೆ ಹೋಗಲಿಲ್ಲ; ಪಟ್ಟ ಪ್ರಯತ್ನಗಳು ಗರ್ಭಧರಿಸಲೇ ಇಲ್ಲ. ಸಮಾಜವಾದಿ ಹಿನ್ನೆಲೆಯಿಂದ ಬಂದವರೆನುವ ರೈತ ಸಂಘದವರು ದಕ್ಷಿಣ ಕರ್ನಾಟಕದಲ್ಲಿ ಪರೋಕ್ಷವಾಗಿ, ಉತ್ತರ ಕರ್ನಾಟಕದಲ್ಲಿ ಪ್ರತ್ಯಕ್ಷವಾಗಿ ಬಿಜೆಪಿಯನ್ನೇ ಬೆಂಬಲಿಸಿದರು. ಹೀಗೆ ವಿಚಾರವಾದಿಗಳು ನವಜಾತಿಗಳಾದರೇ ಹೊರತು ನವ ಕರ್ನಾಟಕ- ನವ ಭಾರತವನ್ನು ದರ್ಶಿಸಲೇ ಇಲ್ಲ. ಬಹುತೇಕ ಶೂದ್ರ ವಿಚಾರವಾದಿಗಳು ಬ್ರಾಹ್ಮಣರಿಗೆ ಸಿಗುತ್ತಿದ್ದ ಸವಲತ್ತುಗಳು ತಮ್ಮ ಜಾತಿಗೂ ಸಿಗಲೆಂದು ಹೋರಾಡಿದರೆ ಹೊರತು; ಈ ಮಧ್ಯೆ ತಳಜಾತಿಗಳ ಕಡೆಗೆ ಕರುಣೆ ತೋರಿದರೆ ಹೊರತು ಎಲ್ಲರ ಸಮಾನತೆಗಾಗಿ ತುಂಬು ಮನಸ್ಸಿನಿಂದ ಹೋರಾಡಲಿಲ್ಲ. ಅವರ ಹೋರಾಟ ನಿಜವಾದುದೇ ಆಗಿದ್ದರೆ ಗ್ರಾಮ ಭಾರತದಲ್ಲಿ ಅಸ್ಪ್ರಶ್ಯತೆ ಉಳಿಯಲು ಅವಕಾಶವೇ ಇರಲಿಲ್ಲ. ಅಸ್ಪ್ರಶ್ಯತೆಯನ್ನು ಆಚರಣೆಗೆ ತಂದ ಬ್ರಾಹ್ಮಣರು ಸ್ವತಂತ್ರ ಭಾರತದಲ್ಲೂ ದಲಿತರನ್ನು ಮುಟ್ಟಿಸಿಕೊಳ್ಳುವ ಕಾಯಕದಿಂದ ಪಟ್ಟಣಗಳ ಕಡೆಗೆ ಜಾರಿಕೊಂಡು ತಮ್ಮ ಸ್ಪ್ರಶ್ಯತೆಯನ್ನು ಕಾಪಾಡಿಕೊಂಡು, ತಮ್ಮ ಧರ್ಮವನ್ನು ಉಳಿಸಿಕೊಂಡರು. ಕಾಯಕದವನಿಗೆ ಅಸ್ಪ್ರಶ್ಯತೆ ಇಲ್ಲ, ಅದೊಂದು ಬ್ರಾಹ್ಮಣನ ಭ್ರಾಮಕ ರೋಗ ಎಂಬುದನ್ನು ಅರಿಯದಾದರು. ಜಾತಿಯನ್ನು ಬಿಟ್ಟ ಹಾಗೆ- ಬಿಡದ ಹಾಗೆ ನಡೆದುಕೊಂಡ ಈ ತಗಲೂಪಿ ಆಟ ನಿರ್ದಿಷ್ಟವಾಗಿ ಜಾತಿಯ ಬಗ್ಗೆ ಏನೂ ನಿಲುವು ತೆಗೆದುಕೊಂಡಂತೆ ಆಗಲಿಲ್ಲ.

ಈ ಸರಕು ಸೇನೆಯ ದಾಳಿಗೆ ಜನ ‘ಜನಪದರಾಗಿ’, ಅಂದರೆ `ಸಂಸ್ಕೃತಿ ಪದ’ ರಾಗಿ ಉಳಿಯಲಿಲ್ಲ. ಶತಮಾನಗಳಿಂದ ಕಳಕೊಂಡವನೂ ತಾನು ಪಡೆಯುತ್ತಿದ್ದೇನೆ ಎಂಬ ಭ್ರಮೆಗೆ ಒಳಗಾದ. ನಮ್ಮ ಸನಾತನ ಧರ್ಮದಲ್ಲಿ ಎಲ್ಲವೂ ಸರಿಯಿದೆ ಎಂದು ತಿಳಿದು ಬದುಕಿದನಲ್ಲ, ಅದೇ ಪರಿಸ್ಥಿತಿಗೆ ಬಂದು ತಲುಪಿದ್ದಾನೆ.

ನಿಲುವಿಲ್ಲದವನಿಗೆ ನೆಲೆ ಇರುವುದಿಲ್ಲ. ಗುದರಿಸಿತು ನೋಡಿ ಜಾಗತೀಕರಣ; ಅದರ ಸರಕೀಕರಣದ ಜೊತೆಗೆ ಎಲ್ಲ ಮನುಷ್ಯರೂ ಸರಕುಗಳೇ ಆಗಿಹೋದರು. ಜೊತೆಗೆ ರಾಜ್ಯ-ಭಾಷಾ ಸಂಸ್ಕೃತಿಗಳನ್ನು ತಾಟಸ್ಥ್ಯಗೊಳಿಸಲಾಯಿತು. ಗಣರಾಜ್ಯ ಪರಿಕಲ್ಪನೆ ಕುಸಿಯುತ್ತಾ ನಡೆಯಿತು. ನಿಜದ ಧರ್ಮ, ಅಂದರೆ ನೈತಿಕತೆಯನ್ನೇ ಕಳೆದುಕೊಂಡರು `ಜನ’. ಈ ಸರಕು ಸಂಸ್ಕೃತಿ ಎಂಬುದು ಜಾಗತಿಕ ಜಾತಿ. ಜಾತಿ, ಜಾತಿಗಳಿಗಿಂತ ಮೇಲಾದ ಜಾತಿ; ಉದ್ಯಮಪತಿಗಳ ಜಾತಿ. ಜಾತಿ ಎಂದರೆ ಸಿಗುವುದನ್ನೆಲ್ಲ ತನ್ನ ಕಡೆಗೇ ಸೆಳೆದುಕೊಳ್ಳುವ ನಾಜೂಕಿನ ಸಂಘಟನೆ ಎಂದು ತಾನೆ ಅರ್ಥ. ಈ ಸರಕು ಸೇನೆಯ ದಾಳಿಗೆ ಜನ ‘ಜನಪದರಾಗಿ’, ಅಂದರೆ `ಸಂಸ್ಕೃತಿ ಪದ’ ರಾಗಿ ಉಳಿಯಲಿಲ್ಲ. ಶತಮಾನಗಳಿಂದ ಕಳಕೊಂಡವನೂ ತಾನು ಪಡೆಯುತ್ತಿದ್ದೇನೆ ಎಂಬ ಭ್ರಮೆಗೆ ಒಳಗಾದ. ನಮ್ಮ ಸನಾತನ ಧರ್ಮದಲ್ಲಿ ಎಲ್ಲವೂ ಸರಿಯಿದೆ ಎಂದು ತಿಳಿದು ಬದುಕಿದನಲ್ಲ, ಅದೇ ಪರಿಸ್ಥಿತಿಗೆ ಬಂದು ತಲುಪಿದ್ದಾನೆ. ಆಗ ಸುಲಿಗೆ ಹತ್ತಿರದಲ್ಲಿದ್ದರೂ ತಿಳಿವಳಿಕೆ ಇರಲಿಲ್ಲ, ಈಗ ಸತ್ಯ ತಿಳಿಯಲು ದೂರ ತಲೆ ಚಾಚಬೇಕು. ಅದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವನು ಹತ್ತಿರದ ಉದ್ಯಮಪತಿಯ ಕಡೆಗೇ ಕೈ ಚಾಚಿದ್ದಾನೆ. 

ಕಳೆದ ಐದು ವರ್ಷದಿಂದ ನಮ್ಮ ದೇಶದ ಕೇಂದ್ರದಲ್ಲಿರುವುದು ಉದ್ಯಮಪತಿಯ ರಾಜಕಾರಣ. ಮೋದಿ ಕೇವಲ ಒಬ್ಬ ಮನುಷ್ಯ. ಅವನಿಗಾಗಿ ಬೃಹತ್ ಉದ್ಯಮಿಗಳು ಬೃಹತ್ ಬಂಡವಾಳ ಹೂಡಿದ್ದಾರೆ. ಅವರ ಉದ್ದೇಶ ಭಾರತವನ್ನು ರಾಜಕೀಯವಾಗಿ ಜಿಟಚಿಣ ಮಾಡಿಕೊಳ್ಳುವುದು. ಜಾಗತೀಕರಣದ ಪರಮತತ್ವಗಳಲ್ಲಿ ಒಂದು The world is flat; ಜಗತ್ತು ಸಮತಟ್ಟಾಗಿದೆ ಎನ್ನುವುದು. ನಿಜದಲ್ಲಿ ಭೂಮಿ ಸಮತಟ್ಟಾಗಿದೆಯಾ? ಸಂಸ್ಕೃತಿ ಸಮತಟ್ಟಾಗಿದೆಯಾ? ಧರ್ಮಗಳೆಂಬುವು ಸಮತಟ್ಟಾಗಿವೆಯಾ? ಮೈಸೂರಿನ ಬಸ್ಸು ನೇರವಾಗಿ ವಾಷಿಂಗ್‍ಟನ್‍ಗೆ ಹೋಗುತ್ತದೆಯಾ? ಮತ್ತೆ !

ದೊಡ್ಡ ದೊಡ್ಡ ಉದ್ಯಮಪತಿಗಳ ಸರಕುಗಳು ಸಲೀಸಾಗಿ ದರಿದ್ರ ದೇಶಗಳ ಕಡೆಗೆ ಹೋಗಿ, ಚೆನ್ನಾಗಿ ವ್ಯಾಪಾರವಾಗಿ, ಉದ್ಯಮಿಗಳ ಜೇಬು ಮತ್ತೂ ತುಂಬಲಿ ಎನ್ನುವ ಕಾರಣಕ್ಕೆ ಭೂಮಿ ಸಮತಟ್ಟಾಗಿದೆ. ಜೂನ್ 1, 2019ರ ಆ ಒಂದು ಸುದ್ದಿ ಓದಿದಿರಾ? ಭಾರತ ರಷ್ಯಾದಿಂದ ಎಸ್-400 ಯುದ್ಧ ಉಪಕರಣ ಕೊಂಡದ್ದಕ್ಕೆ ಅಮೆರಿಕ ಸಿಟ್ಟಾಗಿದೆ. ಇದರ ಅರ್ಥ ಏನು ಗೊತ್ತಾ? ಅದೇ ಉಪಕರಣವನ್ನು ನಮ್ಮಿಂದ ಕೊಳ್ಳಬಹುದಿತ್ತು ಎಂದು. ಅಂದರೆ ನಮ್ಮ ಜೇಬು ಮೊದಲು ತುಂಬಿ ಎಂದು. ಏಕಚಕ್ರೀ ನಗರದ ಜನರಿಗೆ ಏನಾದರೇನು, ಬಕಾಸುರನಿಗೆ ಬರಬೇಕಾದುದು ಬರಬೇಕು ತಾನೆ.

ಬೇನಾಮಿ ಆಸ್ತಿ ಮುಟ್ಟುಗೋಲು ಕಾನೂನು ಕೂಡ. ಇದು ಎಲ್ಲ ಪಕ್ಷ-ಜಾತಿ ಶ್ರೀಮಂತರ ವ್ಯವಹಾರವನ್ನು ತಡೆಯುವುದಿದ್ದಲ್ಲಿ ಎಷ್ಟು ಬಡಜನರಿಗೆ ಅನುಕೂಲವಾಗುತ್ತಿತ್ತು. ಸ್ವಿಜರ್‍ಲೆಂಡಿನ ಕಳ್ಳ ಹಣವೂ ಬರುತ್ತಿತ್ತು. ಇನ್ನು ಜಿ.ಎಸ್.ಟಿ. ಯಾರದೆಂದು ಗೊತ್ತಿದೆಯಲ್ಲ.

23 ಮೇ 2019ರ ಫಲಿತಾಂಶದಲ್ಲಿ ಭಾರತದ ಗಣರಾಜ್ಯಗಳ ಮುಖ್ಯಮಂತ್ರಿಗಳು ವಿಜಯನಗರ ಸಾಮ್ರಾಜ್ಯದ ಪುಡಿ ಪಾಳೇಗಾರರ ಥರ ಕಂಡರು. ಅವರಿಗೂ ಭಾರತದ ಗಣರಾಜ್ಯದ ಬಗ್ಗೆ ತಲೆಗೆ ಹತ್ತಲಿಲ್ಲ. ಹಾಗೇನಾದರೂ ಅವರ ತಲೆಯಲ್ಲಿ ‘ಸಾಮಾನು’ ಇದ್ದಿದ್ದರೆ ನಿಜವಾದ ಭಾರತದ ಗಣರಾಜ್ಯ ಆರಂಭವಾಗುತ್ತಿತ್ತು. ಇವರ ಹಣೆಯಲ್ಲಿ ಬರೆದವನೂ ಆ ಉದ್ಯಮಪತಿಯೆ ಅಲ್ಲವೆ. ಅದರ ಕಾರಣವೆ ಅವರು ಪ್ರತಿಯೊಬ್ಬರೂ ಪ್ರಧಾನಿಯಾಗಿ ಜಾಗತಿಕ ಪ್ರಭುವಿನ ಕೃಪಾಕಟಾಕ್ಷಕ್ಕೆ ಒಳಗಾಗಬೇಕೆಂದು ಬಯಸಿದ್ದರು. ಅದು ಆ ಪ್ರಭುವಿಗೆ ಬೇಕಿರಲಿಲ್ಲ ಎಂದು ಆ ಮುಠ್ಠಾಳರಿಗೇನು ಗೊತ್ತು. ಇದೇ ರೀತಿ ಈ ಹೊತ್ತಿನ ಬಹುತೇಕ ರಾಜಕಾರಣಿಗಳು ದೊಡ್ಡ ಪ್ರಭುವಿನ ಎಂಜಲು ನೆಕ್ಕಲು ಪೈಪೋಟಿ ನಡೆಸುತ್ತಿದ್ದಾರೆ. ಆದರೆ ನವ ವಸಾಹತುಶಾಹಿಯ ಮೊದಲ ಆದ್ಯತೆ ಸ್ಥಳೀಯ ಅನನ್ಯತೆಗಳನ್ನು ಅಳಿಸಿ ಹಾಕುವುದು. ಅವರಿಗೆ ಅಡೆತಡೆ ಇಲ್ಲದ ದೊಡ್ಡ ಮಾರುಕಟ್ಟೆ ಬೇಕಲ್ಲವೆ. ಅದನ್ನು ಮೋದಿಯ ಮೂಲಕ ಮಾಡಿಸ ಹೊರಟಿದ್ದಾರೆ.

ಮೋದಿ ಗೆದ್ದುದಲ್ಲ, ಅವನ ಯಜಮಾನರು ಗೆದ್ದರು. ನೋಟು ಅಮಾನ್ನ್ಯೀಕರಣ, ಜಿ.ಎಸ್.ಟಿ. ಅನುಷ್ಠಾನ ಯಾರ ಪ್ರೇರಣೆ? ನೋಟು ಅಮಾನ್ನ್ಯೀಕರಣ ಭಾರತದ ಜಾತಿ-ಪಕ್ಷದ ನೀತಿ. ವಿರೋಧ ಪಕ್ಷದ ರಾಜಕೀಯ ಶ್ರೀಮಂತರನ್ನು ಬಲಿ ಹಾಕುವುದು. ಬೇನಾಮಿ ಆಸ್ತಿ ಮುಟ್ಟುಗೋಲು ಕಾನೂನು ಕೂಡ. ಇದು ಎಲ್ಲ ಪಕ್ಷ-ಜಾತಿ ಶ್ರೀಮಂತರ ವ್ಯವಹಾರವನ್ನು ತಡೆಯುವುದಿದ್ದಲ್ಲಿ ಎಷ್ಟು ಬಡಜನರಿಗೆ ಅನುಕೂಲವಾಗುತ್ತಿತ್ತು. ಸ್ವಿಜರ್‍ಲೆಂಡಿನ ಕಳ್ಳ ಹಣವೂ ಬರುತ್ತಿತ್ತು. ಇನ್ನು ಜಿ.ಎಸ್.ಟಿ. ಯಾರದೆಂದು ಗೊತ್ತಿದೆಯಲ್ಲ.

ಜಾಗತೀಕರಣವೆಂದರೆ ಆರಂಭಿಕವಾಗಿ ಅದು ಆರ್ಥಿಕ ಜಾಗತೀಕರಣ. ಅದರ ಬಲಕ್ಕೆ ಬೇಕು ಸಾಂಸ್ಕೃತಿಕ ಜಾಗತೀಕರಣ ಮತ್ತು ರಾಜಕೀಯ ಜಾಗತೀಕರಣ. ಭಾರತದಲ್ಲಿ ಇದು 2019ರ ಲೋಕಸಭಾ ಚುನಾವಣೆಯಿಂದ ಪೂರ್ಣಗೊಂಡಿದೆ. ಭಾರತದ ಜಾತಿ ಬಂಡವಾಳಿಗರು ಈ ಮೊದಲ ಐದು ವರ್ಷಗಳಲ್ಲಿ ಭಾರತದ ಉದ್ಯಮಗಳನ್ನು ಬಳಸಿಕೊಂಡರು. ನಂತರದಲ್ಲಿ ಜಾಗತಿಕ ಉದ್ಯಮಿಗಳನ್ನು ಇವರ ಜೊತೆಗೆ ತಗಲುಹಾಕಿದರು. ಕಳೆದ ಐದು ವರ್ಷಗಳಲ್ಲಿ ಏನೂ ಪ್ರಗತಿ ಸಾಧಿಸಲಾಗದ ಸನಾತನಿಗಳು 2019ರ ಲೋಕಸಭಾ ಚುನಾವಣೆಯಲ್ಲಿ ಈ ದೇಶದ ಜನರನ್ನು ಸರಕು ಮಾಡಲು ಹೊರಟಂತೆ, ಈ ದೇಶದ ಧರ್ಮ, ಸಂಸ್ಕೃತಿ ಮತ್ತು ರಾಜಕೀಯವನ್ನು ಕೂಡ ಮಾರುವ ಸರಕಾಗಿ ಪರಿವರ್ತಿಸಹೊರಟಿದ್ದಾರೆ. ಈ ಚುನಾವಣೆಯ ಪ್ರಕ್ರಿಯೆ ಉದ್ದಕ್ಕೂ ಎಲ್ಲಾದರೂ ಅವರು ವಿಷಯ, ವಿಚಾರದ ಮಾತೆತ್ತಿದ್ದು ಇದೆಯಾ? ಅವರ ಸರಕು ಪ್ರಕ್ರಿಯೆಯನ್ನು ನೋಡಿ:

1. ಹಿಂದುತ್ವ ವಾದ: ತಮ್ಮ ಜೊತೆಗೆ ಶಾಮೀಲಾಗದ ಮುಸ್ಲಿಂ, ಕ್ರೈಸ್ತರನ್ನು ಚುನಾವಣೆಯಿಂದ ಹೊರಗುಳಿಸಿದ್ದು. ಮುಸ್ಲಿಮರನ್ನು ಬಿಡಿ ಅವರು ಭಾರತದ ಚರಿತ್ರೆಯುದ್ದಕ್ಕೂ ಹಿಂದು ಸನಾತನಿಗಳಿಗೆ ಸಡ್ಡು ಹೊಡೆದು ನಿಂತವರು. ಹಿಂದೂಗಳಲ್ಲಿಂದ ನೊಂದವರನ್ನು ತಮ್ಮ ಜೊತೆಗೆ ಸೇ ರಿಸಿಕೊಂಡರು. ತಮ್ಮ ಗಿರಾಕಿಗಳನ್ನು ಸೆಳೆದುಕೊಂಡ ಕಾರಣಕ್ಕೆ ಅವರ ಮೇಲೆ ಪ್ರಖಾಂಡ ಸಿಟ್ಟು ಇದೆ.

2. ನವ ರಾಷ್ಟ್ರೀಯವಾದ: ರಾಜ್ಯಗಳನ್ನು ತಳವರ್ಗಗಳನ್ನು ತಾಟಸ್ಥ್ಯದಲ್ಲಿಡುವುದು. ಗೋಹತ್ಯೆ ನಿಷೇಧ, ರಾಮಮಂದಿರ ನಿರ್ಮಾಣದ ಹಿಂದಿನ ಮರ್ಮವೇನು. ಇನ್ನೊಬ್ಬರನ್ನು ಸುಮ್ಮನಿರಿಸಿ ತಮ್ಮ ಅನುಕೂಲ ಸಾಧಿಸಿಕೊಳ್ಳುವುದು. ತನ್ನ ನಿಲುವು, ಧರ್ಮ ಅಥವ ಬದುಕಿಗಾಗಿ ಅನ್ಯರನ್ನು ನಿಷ್ಕ್ರಿಯಗೊಳಿಸುವುದು. ವ್ಯವಹಾರ ಕಸಿದುಕೊಳ್ಳಲು ಸಂಚೂ ಕೂಡ ಸೇರಿದೆ.

3. ನವ ಜಾತಿವಾದ: ಜಾತಿಯನ್ನು ಮಾಡಬೇಡಿ ಎಂದು ಬೇರೆಯವರಿಗೆ ಹೇಳಿ ತಾವು ಜಾತಿಯನ್ನೇ ಕೇಂದ್ರವಾಗಿಟ್ಟು ಕೊಂಡು ಜನರನ್ನು ಸಂಘಟಿಸುವುದು. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಮತ್ತು ಮಾಯಾವತಿಯನ್ನು ಮಲಗಿಸಿದ್ದೂ ಹೀಗೆ. ಪ್ರಬಲ ಯಾದವ ಮತ್ತು ಪ್ರಬಲ ದಲಿತ ವರ್ಗದಿಂದ ದೂರವಿದ್ದ ಉಪಜಾತಿಗಳನ್ನು ಚೆನ್ನಾಗಿ ಬಳಸಿಕೊಂಡರು. ಅದೇ ರೀತಿ ಉತ್ತರ ಕರ್ನಾಟಕವನ್ನು ಬಳಸಿಕೊಂಡರು. ಎಸ್ಸಿಗಳಲ್ಲಿ ಕೋಲಿ ಮತ್ತು ಲಂಬಾಣಿಗಳನ್ನು ಬಳಸಿಕೊಂಡು ಖರ್ಗೆಯವರನ್ನು ಸೋಲಿಸಿದರು.

4. ನವ ವಿಚಾರವಾದ: ನಾವು ಕಥೆ ಕಟ್ಟುತ್ತೇವೆ. ನೀವು ಕೇಳಿ. ಆ ಕಥೆಗಳನ್ನು ಪ್ರಶ್ನಿಸಬೇಡಿ, ವಿಶ್ಲೇಷಿಸಬೇಡಿ. ಹಾಗೆ ಮಾಡುವುದು ಜಾತಿಗಳನ್ನು ಒಡೆದಂತೆ. ವಿಚಾರ ವಿಜ್ಞಾನದ ಪ್ರತಿಫಲನ. ವಿಜ್ಞಾನ ವಿರೋಧಿಯಾದರೆ ದೇಶ ಎಲ್ಲಿಗೆ ತಲುಪುತ್ತದೆ?

5. ನವ ಸನಾತನವಾದ: ಮೇಲುಜಾತಿಯ ಧಾರ್ಮಿಕ ಕೇಂದ್ರಗಳು ಮತ್ತು ಧರ್ಮಗುರುಗಳನ್ನು ಅಥವ ಅಂಥ ಬೆಂಬಲಿಗರನ್ನು ಮುನ್ನೆಲೆಗೆ ನಿಲ್ಲಿಸುವುದು. ಮೋದಿ ಪ್ರಮಾಣ ವಚನದಲ್ಲಿ ಯಾವ ಧರ್ಮಗುರುಗಳು ಭಾಗವಹಿಸಿದ್ದರು ಎಂಬುದನ್ನು ಗಮನಿಸಿದ್ದಾರಾ? ಒಬ್ಬ ಲಿಂಗಾಯತ ಸ್ವಾಮಿಯನ್ನು ನಾನು ಅಲ್ಲಿ ಕಾಣಲಿಲ್ಲ. ನಮ್ಮ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅಲ್ಲ, ವೇದವ್ಯಾಸನಂತೆ. ಭಾರತಕ್ಕೆ ಬೃಹತ್ ರಾಷ್ಟ್ರ ಕಲ್ಪನೆ ಬಂದುದೆ 1947ರ ನಂತರ. ಅದಕ್ಕೆ ಮೊದಲಿನವರು ರಾಷ್ಟ್ರಪಿತ ಆಗಲು ಸಾಧ್ಯವಿಲ್ಲ. ಆಗ ಭಾರತದಲ್ಲಿ ಕ್ರಿಶ್ಚಿಯನ್ನರು, ಮುಸ್ಲಿಮರು ಇರಲಿಲ್ಲವಾದ್ದರಿಂದ ಶುದ್ಧ ರಾಷ್ಟ್ರಪಿತನನ್ನು ನಮ್ಮ ಪೇಜಾವರ ಶ್ರೀಗಳು ಪುರಾಣದಿಂದ ಹುಡುಕಿರಬೇಕು. ಋಷಿ ಮೂಲ, ನದಿಮೂಲವನ್ನು ಕೇಳಬಾರದು, ಕೆಣಕ ಬಾರದು.

6. ನವ ದೇಶೀವಾದ: ನಮಗೆ ತಿಳಿದಂತೆ ಎಲ್ಲರಿಗೂ ಉದ್ಯೋಗ, ಎಲ್ಲರಿಗೂ ಬದುಕು ಕೊಡುವುದು ದೇಶೀವಾದದ ತತ್ವ. ಮೂಲತಃ ಬೃಹತ್ ಉದ್ಯಮಗಳನ್ನು ದೂರವಿಟ್ಟು ಸ್ಥಳೀಯ ಸಂಪನ್ಮೂಲ ಮತ್ತು ನೈಪುಣ್ಯದಿಂದ ಬಹುಜನರ ಬದುಕನ್ನು ಹಸನಾಗಿಸುವುದು; ಇನ್ನೊಬ್ಬರ ಉದ್ಯೋಗ ಅಥವ ಬದುಕನ್ನು ಕಿತ್ತುಕೊಳ್ಳುವುದಿಲ್ಲ. ಕರಾವಳಿ ಕರ್ನಾಟಕದಲ್ಲಿ ಸನಾತನವಾದಿಗಳು ಮಾಡುತ್ತಿರುವ ಹಲ್ಲೆ ಯಾರ ಉದ್ಯೋಗ ಕಸಿದುಕೊಳ್ಳಲು. ಪತಂಜಲಿ ವ್ಯಾಪಾರ ದೇಶೀಯವೆ? ಅದೊಂದು ರಾಜಕೀಯ ತೀರ್ಮಾನ ಅಲ್ಲವೆ?.

7. ಸಮರ ವೀರತ್ವ: ಯುದ್ಧ ಎಂದರೆ ದೇಶೀಯರು ಪರದೇಶಿಯ ಮೇಲೆ ಎಗರಿ ಬೀಳುವ ಉನ್ಮಾದಕ್ಕೆ ಒಳಗಾಗುತ್ತಾರೆ. ರೊಚ್ಚಿಗೆದ್ದ ಈ ಜನರನ್ನು ಓಟುಗಳನ್ನಾಗಿ ಪರಿವರ್ತಿಸಿಕೊಳ್ಳುವ ರಾಜ ಕೀಯ ಅನೈತಿಕವಾದುದು. ಆಚಾರವನ್ನು ಹೇಳುವ ನಾಲಗೆ ಅಮೇಧ್ಯವನ್ನು ತಿನ್ನಬಾರದು.

8. ನವ ಮಾಧ್ಯಮವಾದ: “ಮೂಕನಿಗೆ ಬಾಯಿ ಬಂದಾಗ ಹೃದಯವಂತ ಜನ ಸಂಭ್ರಮಿಸುತ್ತಾರೆ. ಬಾಯಿ ಬಂದ ಜನರನ್ನು ಬಾಯಿ ಮುಚ್ಚಿಸುವುದೇ ಈ ಹೊತ್ತಿನ ದೃಶ್ಯ ಮಾಧ್ಯಮದ ಪರಿ. ಇದು ಉದ್ಯಮಪತಿಗಳ ಆಯುಧ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯನ್ನು ಮಾಧ್ಯಮಗಳು ಯುದ್ಧದಂತೆ ಪರಿವರ್ತಿಸಿದರೆ ಹೇಗೆ? ಉದ್ಯಮಪತಿಯ ವಶದಲ್ಲಿರುವ ದೃಶ್ಯ ಮಾಧ್ಯಮಗಳು ಪ್ರಜಾಪ್ರಭುತ್ವ ವಿರೋಧಿಗಳು. ಏಟು, ಎದಿರೇಟು… ಇಂಥ ಯುದ್ಧ ಪ್ರೇರಕ ನುಡಿಗಳನ್ನು ಹಿಂದೆ ಓದಿದ್ದೀರಾ ಅಥವ ಕೇಳಿದ್ದೀರಾ?

ಮುಂಬರುವ ಚುನಾವಣೆಯಲ್ಲಿ, ಮುಂಬರುವ ಪಕ್ಷ ಏನು ಮಾಡಬಹುದು: ಕುರುಡನ ಮೇಲೆ ಕುಂಟ ಸವಾರಿ ಮಾಡಬಹುದೆ! ಇದೇನಾ ‘ಸಂಭವಾಮಿ’ ಅನ್ನೋದು.

*ಲೇಖಕರು ಹಿರಿಯ ಜನಪದ ವಿದ್ವಾಂಸರು, 40ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.

Leave a Reply

Your email address will not be published.