ಇ-ಲರ್ನಿಂಗ್ ಏಕೆ ಸುಸ್ಥಿರ ಪರಿಹಾರವಲ್ಲ?

ಕೋವಿಡ್19 ಹರಡುವಿಕೆಯ ಭೀತಿಯಿಂದಾಗಿ ಶಾಲೆ ಮುಚ್ಚುವ ಹಂತಕ್ಕೆ ಬರುವ ಮೊದಲು ಕೊಯಮತ್ತೂರಿನ ಹನ್ನೆರಡನೇ ತರಗತಿ ವಿದ್ಯಾರ್ಥಿನಿ ಶ್ರುತಿ ಶ್ರೀಲಕ್ಷ್ಮಿ ಕೊನೆಯದಾಗಿ ಶಾಲೆಗೆ ಹೋಗಿದ್ದು ಮಾರ್ಚ್ 16 ರಂದು. ಅಂದಿನಿAದ ಅವರು ವಾಟ್ಸಾಪ್ ಮೂಲಕವೇ ಕಲಿಯುತ್ತಿದ್ದಾಳೆ. ಟಿಪ್ಪಣಿಗಳು ಮತ್ತು ಕಾರ್ಯಯೋಜನೆಗಳನ್ನು ಅವರ ತರಗತಿಯ ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಗೊಂದಲಗಳನ್ನು ಪರಿಹರಿಸಲು ಶಿಕ್ಷಕರಿಗೆ ಕರೆ ಮಾಡುತ್ತಾರೆ. ಆದರೆ ಈ ವ್ಯವಸ್ಥೆಯನ್ನು ಆಕೆ ಉತ್ತಮ ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಾಳೆ. “ನಾನು ಕ್ಲಾಸ್‌ರೂಂನಲ್ಲಿ ಕಲಿಯಲು ಬಯಸುತ್ತೇನೆ. ಈಗ, ನಾನು ವಾಟ್ಸಾಪ್‌ನಲ್ಲಿ ಎಲ್ಲವನ್ನೂ ಮಾಡಬೇಕು -ಕಾರ್ಯಯೋಜನೆಗಳನ್ನು ಸಲ್ಲಿಸುವುದು, ಸ್ನೇಹಿತರೊಂದಿಗೆ ಮಾತನಾಡುವುದು, ಅನುಮಾನಗಳನ್ನು ಕೇಳುವುದು… ಇದೊಂದು ರೀತಿ ಬೋರಿಂಗ್ ಅನಿಸುತ್ತದೆ” ಎಂದು ಆಕೆ ಹೇಳುತ್ತಾಳೆ.

ಶಾಲೆಗಳ ಮುಚ್ಚುವಿಕೆಯಿಂದಾಗಿ ವಿಶ್ವದಾದ್ಯಂತ ಕಲಿಕೆಯ ತೊಂದರೆ ಅನುಭವಿಸುತ್ತಿರುವ 1.26 ಶತಕೋಟಿ ಮಕ್ಕಳಲ್ಲಿ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ -ಯುನೆಸ್ಕೋ- ಅಂದಾಜಿನ ಪ್ರಕಾರ) ಶ್ರುತಿ ಕೂಡ ಒಬ್ಬಾಕೆ. ಇದು ವಿಶ್ವದ ವಿದ್ಯಾರ್ಥಿ ಜನಸಂಖ್ಯೆಯ ಶೇಕಡ 72ರಷ್ಟು. ಇವರಲ್ಲಿ ಭಾರತವು 320 ದಶಲಕ್ಷಕ್ಕೂ ಹೆಚ್ಚಿನವರನ್ನು ಒಳಗೊಂಡಿದೆ. ಅವರೆಲ್ಲ ತಮ್ಮ ಶಾಲೆ ಕಾಲೇಜುಗಳಿಗೆ ಯಾವಾಗ ಮರಳಬಹುದು ಎಂಬುದು ಇನ್ನೂ ಖಚಿತವಾಗಿಲ್ಲ.

ಇದರ ಪರಿಣಾಮವಾಗಿ ಶಿಕ್ಷಣವು ಹೆಚ್ಚಾಗಿ ಆನ್‌ಲೈನ್‌ಗೆ ರೂಪಾಂತರಗೊಂಡಿದೆ. ಕಳೆದ ಮೂರು ತಿಂಗಳುಗಳಲ್ಲಿ ಭಾಷಾ ಅಪ್ಲಿಕೇಶನ್ ಗಳು, ವರ್ಚುವಲ್ ಟ್ಯುಟೋರಿಂಗ್, ವಿಡಿಯೋ ಕಾನ್ಫರೆನ್ಸಿಂಗ್ ಪರಿಕರಗಳು ಮತ್ತು ಆನ್‌ಲೈನ್ ಲರ್ನಿಂಗ್ ಸಾಫ್ಟ್ವೇರ್‌ಗಳ ಬಳಕೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಇಕನಾಮಿಕ್ ಫೋರಂ) ವರದಿ ಮಾಡಿದೆ. ಭಾರತವೂ ಇ-ಲರ್ನಿಂಗ್‌ನ ಭರಾಟೆಗೆ ಸಾಕ್ಷಿಯಾಗಿದ್ದು, ಝೂಮ್, ವಾಟ್ಸಾಪ್ ಮತ್ತು ಸ್ಕೆöÊಪ್ ತರಗತಿಗಳು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ರೂಢಿಯಾಗುತ್ತಿವೆ. ಆದರೂ, ಕ್ಲಾಸ್‌ರೂಂನ ಕಲಿಕೆಯ ಅನುಭವಗಳಿಗೆ ಈ ಹಠಾತ್ ಆನ್‌ಲೈನ್ ಪರಿವರ್ತನೆಯು ಸರಿದೂಗುವುದಿಲ್ಲ.

ಪ್ರಾಯೋಗಿಕತೆಯ ದುಃಸ್ವಪ್ನ

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ನೇಹಾ ಶರ್ಮಾ ಅವರ ಒಂಬತ್ತು ವರ್ಷದ ಮಗಳು ಸೋಮವಾರದಿಂದ ಶುಕ್ರವಾರದವರೆಗೆ ಝೂಮ್‌ನಲ್ಲಿ ನಾಲ್ಕು ತರಗತಿಗಳನ್ನು ಹೊಂದಿದ್ದಾಳೆ. ಎರಡು ಪ್ರಮುಖ ವಿಷಯಗಳು (ಇಂಗ್ಲಿಷ್, ವಿಜ್ಞಾನ, ಇತ್ಯಾದಿ) ಮತ್ತು ಎರಡು ಚಟುವಟಿಕೆಗಳು (ನೃತ್ಯ ಮತ್ತು ಟೇಕ್ವಾಂಡೋ). ಸ್ವತಃ ಆನ್‌ಲೈನ್ ಟ್ಯುಟರ್ ಆಗಿರುವ ನೇಹಾ ತಮ್ಮ ಮಗಳು ಇ-ಲರ್ನಿಂಗ್‌ಗೆ ಹೊಂದಿಕೊಂಡಿದ್ದರೂ, ತನಗೆ ತಿಳಿದಿರುವ ಹಲವಾರು ಪೋಷಕರು ಈ ಹೊಸ ವ್ಯವಸ್ಥೆಯಿಂದ ಸಂತೋಷವಾಗಿಲ್ಲ ಎಂದು ಹೇಳುತ್ತಾರೆ. ‘ಅನಿವಾರ್ಯವಾಗಿ ಮಕ್ಕಳಿಗೆ ಈಗ ಪರದೆಯ ಸಮಯ ಹೆಚ್ಚಿರುವುದನ್ನು ಅವರು ದೂರುತ್ತಾರೆ’ ಎನ್ನುತ್ತಾರೆ ನೇಹಾ. ‘ತಂತ್ರಜ್ಞಾನದ ವಿಷಯಕ್ಕೆ ಅಸಮಾಧಾನವಿರುವ ಕೆಲವು ಪೋಷಕರಿದ್ದಾರೆ- ಅವರು ಅದರ ಬಗ್ಗೆ ಟೀಕಿಸುತ್ತಾರೆ. ಆದ್ದರಿಂದ, ಅವರ ಮಕ್ಕಳೂ ಈ ವ್ಯವಸ್ಥೆಯನ್ನು ನಕಾರಾತ್ಮಕವಾಗಿ ನೋಡಬಹುದು. ಕೆಲವೊಮ್ಮೆ, ಇಂಟರ್ನೆಟ್ ಸಮಸ್ಯೆಗಳಿಂದ ತರಗತಿಗಳು ತೊಂದರೆಗೊಳಗಾಗುತ್ತವೆ.’

ವಿಭಕ್ತ ಕುಟುಂಬಗಳಲ್ಲಿ, ವಿಶೇಷವಾಗಿ, ಪೋಷಕರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಕೆಲಸವನ್ನು ಕಳೆದುಕೊಳ್ಳಬೇಕಾಗಬಹುದು. ಅವರಲ್ಲಿ ಕೆಲವರು ಸಾಂಕ್ರಾಮಿಕ ರೋಗವನ್ನು ತಗ್ಗಿಸುವಲ್ಲಿ ತೀರಾ ಅಗತ್ಯವಿರುವ ಆರೋಗ್ಯ ವೃತ್ತಿಪರರಾಗಿರಬಹುದು. ಇಲ್ಲಿ ಶಿಕ್ಷಕರ ಮೇಲೂ ಒತ್ತಡವಿದೆ. ಚೆನ್ನೈನ ಕೆಸಿ ಪ್ರೌಢ ಶಾಲೆಯ ಪ್ರಾಂಶುಪಾಲರಾದ ವಲ್ಲಿ ಸುಬ್ಬಯ್ಯ, ‘ಪ್ರತಿಯೊಬ್ಬ ಶಿಕ್ಷಕನಿಗೂ ವಿಶಿಷ್ಟವಾದ ಬೋಧನಾ ಶೈಲಿ ಇದೆ. ಒಂದು ಅವಧಿಯಲ್ಲಿ, ಅವರು ಮಕ್ಕಳೊಂದಿಗೆ ಒಡನಾಡುತ್ತಿದ್ದರು. ತರಗತಿಯಲ್ಲಿ ಅವರ ದೇಹಭಾಷೆ, ಸಹಪಾಠಿಗಳೊಂದಿಗಿನ ಅವರ ಬೆರೆಯುವಿಕೆ- ಸಣ್ಣ ಗುಂಪುಗಳು ಮತ್ತು ದೊಡ್ಡ ಗುಂಪುಗಳಲ್ಲಿ ಇದು ಹೇಗೆ ಭಿನ್ನವಾಗಿದೆ ಎಂಬುದನ್ನು ಗಮನಿಸುವುದರ ಮೂಲಕ ಇದನ್ನು ಮಾಡಲಾಗುತ್ತದೆ. ಈಗ, ಅವರು ಅವುಗಳನ್ನು ಕಂಪ್ಯೂಟರ್ ಪರದೆಗಳಲ್ಲಿ ನೋಡುತ್ತಾರೆ. ಅಲ್ಲದೆ ಸಾಕಷ್ಟು ಅಡಚಣೆಗಳು ಈ ಸಂದರ್ಭ ಉಂಟಾಗಬಹುದು. ತರಗತಿಯ ಸಮಯದಲ್ಲಿ ನಾಯಿಯೂ ಒಳಬರಬಹುದು.’

ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಸಹ ಹೊಸ ದಿನಚರಿಗಳಿಗೆ ತ್ವರಿತವಾಗಿ ಹೊಂದಿಕೊಳ್ಳಬೇಕು. ‘ಹಿಂದಿನಂತೆ 9-10 ವೇಳಾಪಟ್ಟಿಯನ್ನು ಹೊಂದಲು ಸಾಧ್ಯವಿಲ್ಲ’ ಎಂದು ವಲ್ಲಿ ಹೇಳುತ್ತಾರೆ, ‘ನಾವು ಕೆಲವು ವಾರಗಳಲ್ಲಿ ನಮ್ಮ ಮಾದರಿಯನ್ನು ಮರುಶೋಧಿಸಬೇಕಾಗಿತ್ತು. ನಾವು ಅದನ್ನು ಯಶಸ್ವಿಯಾಗಿ ಮಾಡಬಲ್ಲೆವು. ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯ ಬೆಂಬಲಕ್ಕೆ ಧನ್ಯವಾದಗಳು” ತರಗತಿಗಳನ್ನು ಏಳಕ್ಕಿಂತ ಹೆಚ್ಚು ಮಕ್ಕಳು ಇರದ ಗುಂಪುಗಳಾಗಿ ವಿಂಗಡಿಸಲಾಗಿದೆ. ಶಿಕ್ಷಕರು ನಿಯಮಿತವಾಗಿ ಪೋಷಕರಿಗೆ ತಮ್ಮ ಮಗುವಿನ ಪ್ರಗತಿಯ ಕುರಿತು ಪ್ರತ್ಯೇಕವಾಗಿ ತಿಳಿಸುತ್ತಾರೆ. ಶಾಲೆಯು ಆನ್‌ಲೈನ್‌ನಲ್ಲಿ ಪರೀಕ್ಷೆಗಳನ್ನು ನಡೆಸುವಲ್ಲಿ ಯಶಸ್ವಿಯಾಗಿದೆ. “ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆಯ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಕೇಳಲಾಯಿತು. ಇದು ಅವರನ್ನು ಜವಾಬ್ದಾರರನ್ನಾಗಿ ಮಾಡುವ ಉತ್ತಮ ಮಾರ್ಗವೆಂದು ನಾವು ಭಾವಿಸಿದ್ದೇವೆ. ಜೊತೆಗೆ, ಅವರೊಂದಿಗೆ ಪುಸ್ತಕವಿದ್ದರೂ ಸಹ, ಪ್ರಶ್ನೆಗಳಿಗೆ ಅವರ ಸ್ವಂತ ಆಲೋಚನೆಯ ಪರಿಹಾರಗಳ ಅಗತ್ಯವಿದೆ.”

ಡಿಜಿಟಲ್ ಡಿವೈಡ್

ಕಂಪ್ಯೂಟರ್ ಹೊಂದಿರುವ ಗ್ರಾಮೀಣ ಕುಟುಂಬಗಳು: 4.4%

ಕಂಪ್ಯೂಟರ್ ಹೊಂದಿರುವ ನಗರ ಕುಟುಂಬಗಳು: 23.4%

ಇಂಟರ್ನೆಟ್ ಹೊಂದಿರುವ ಗ್ರಾಮೀಣ ಕುಟುಂಬಗಳು: 14.9%

ಇಂಟರ್ನೆಟ್ ಹೊಂದಿರುವ ನಗರ ಕುಟುಂಬಗಳು: 42%

(2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆ)

ಆದಾಗ್ಯೂ, ದೊಡ್ಡ-ಪ್ರಮಾಣದ, ಹೆಚ್ಚಿನ ಹೊಣೆಗಾರಿಕೆಯ ಪರೀಕ್ಷೆಗಳನ್ನು ನಡೆಸುವುದು ಜಟಿಲವಾದ ಸಂಗತಿ. ಹೆಚ್ಚಿನ ಬೋರ್ಡ್ ಮತ್ತು ಪ್ರವೇಶ ಪರೀಕ್ಷೆಗಳನ್ನು ಮುಂದೂಡಲಾಗಿದೆ ಅಥವಾ ಅಮಾನತುಗೊಳಿಸಲಾಗಿದೆ. ಇದು ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಸಮಸ್ಯೆಯುಂಟುಮಾಡುತ್ತದೆ. ಉದಾಹರಣೆಗೆ, ಮುಂದಿನ ವರ್ಷದ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ನಿರ್ಧರಿಸಲಾದ ವಿದ್ಯಾರ್ಥಿಗಳು ಈಗಾಗಲೇ ಸೂಚನಾ ಸಮಯವನ್ನು ಕಳೆದುಕೊಂಡಿದ್ದಾರೆ.

ಕ್ರಾಂತಿಯ ಕರೆ

ಈ ನಡುವೆ, ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿಂದ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಜನರು ಲಾಕ್‌ಡೌನ್ ಕಾರಣ ಶಿಕ್ಷಣಕ್ಕೆ ಪ್ರವೇಶವನ್ನು ಹೊಂದಿರುವುದಿಲ್ಲ. 2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಆಧಾರದ ಮೇಲೆ, ಶಿಕ್ಷಣದಲ್ಲಿನ ಮನೆಯ ಸಾಮಾಜಿಕ ಬಳಕೆಯ ಪ್ರಮುಖ ಸೂಚಕಗಳ ಪ್ರಕಾರ, ಗ್ರಾಮೀಣ ಭಾರತೀಯ ಕುಟುಂಬಗಳಲ್ಲಿ 15% ಕ್ಕಿಂತ ಕಡಿಮೆ ಜನರು ಇಂಟರ್ನೆಟ್ ಹೊಂದಿದ್ದಾರೆ (ನಗರ ಭಾರತೀಯ ಕುಟುಂಬಗಳಲ್ಲಿ 42%). ಗ್ರಾಮೀಣ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಕೇವಲ 13% ಜನರು (ಐದು ವರ್ಷಕ್ಕಿಂತ ಮೇಲ್ಪಟ್ಟವರು)- ಕೇವಲ 8.5% ಮಹಿಳೆಯರು – ಇಂಟರ್ನೆಟ್ ಬಳಸಬಹುದು. ಬಡ ಕುಟುಂಬಗಳು ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ ಅನ್ನು ಪಡೆಯಲು ಸಾಧ್ಯವಿಲ್ಲ.

ಸರ್ಕಾರಗಳು, ಎನ್‌ಜಿಒಗಳು ಮತ್ತು ಇತರ ಸಾರ್ವಜನಿಕ-ಖಾಸಗಿ ಸಂಸ್ಥೆಗಳು ಈ ಗಂಭೀರ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಿವೆ.

2010ರಲ್ಲಿ ಸ್ಥಾಪಿಸಲಾದ ಸಾಮಾಜಿಕ-ಶೈಕ್ಷಣಿಕ ಉದ್ಯಮವಾದ ಅವಂತಿ, ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿವರೆಗಿನ ಹಿಂದಿ ಮಾಧ್ಯಮ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. 1,000ಕ್ಕೂ ಹೆಚ್ಚು ಬಳಕೆದಾರರಿಂದ ಗೂಗಲ್ ಪ್ಲೇ ಸ್ಟೋರ್‌ನಿಂದ ಸ್ಥಾಪಿಸಲಾಗಿರುವ ‘ಸಂಕಲ್ಪ ಅಪ್ಲಿಕೇಶನ್, ಗಣಿತ ಮತ್ತು ವಿಜ್ಞಾನದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ವಿಷಯಗಳಿಗೆ ಸಂಬAಧಿಸಿ ವೀಡಿಯೊ ರೆಕಾರ್ಡ್ಗಳನ್ನು, ಉದಾಹರಣೆಗಳು ಮತ್ತು ಉತ್ತರಸಹಿತ ರಸಪ್ರಶ್ನೆಗಳನ್ನು ಒಳಗೊಂಡಿದೆ. ಅವಂತಿ ಯುಟ್ಯೂಬ್, ಟಿಕ್‌ಟಾಕ್, ಫೇಸ್‌ಬುಕ್‌ಗಳಲ್ಲಿ 9-12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಉಚಿತ ಲೈವ್ ಕ್ಲಾಸ್‌ಗಳನ್ನು ನಡೆಸುತ್ತಾರೆ.

ಅವಂತಿಯ ಸಹ-ಸಂಸ್ಥಾಪಕ ಅಕ್ಷಯ್ ಸಕ್ಸೇನಾ, ತಮ್ಮ ಸಂಸ್ಥೆ ಹರಿಯಾಣ, ರಾಜಸ್ಥಾನ, ಜಾರ್ಖಂಡ್ ಮತ್ತು ಮಧ್ಯಪ್ರದೇಶದ ರಾಜ್ಯ ಸರ್ಕಾರಗಳೊಂದಿಗೆ ಸಹಭಾಗಿತ್ವ ಹೊಂದಿದ್ದು, ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಲಭ್ಯವಾಗುವಂತೆ ಮಾಡಿದೆ ಎನ್ನುತ್ತಾರೆ. “ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಡಿಜಿಟಲ್ ಕಲಿಕೆಯನ್ನು ಪ್ರವೇಶಿಸಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ನೆರವಾಗಲು ನಮಗೆ ಸಾಧ್ಯವಾಗುತ್ತಿಲ್ಲ. ಅವರಿಗೆ ಯಾವುದೇ ಯೋಜನೆಗಳಿಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಫೋನ್ ಡೇಟಾ ಮತ್ತು ಫೋನ್‌ಗಳಿಗೆ ಸರ್ಕಾರ ಸಬ್ಸಿಡಿ ನೀಡಬೇಕಾಗಿದೆ. ಈ ಕಾರ್ಯ ಸಾಧ್ಯವಾದಷ್ಟು ಬೇಗ ನಡೆಯಲು ಶೀಘ್ರ ಕ್ರಮದ ಅಗತ್ಯವಿದೆ” ಎಂಬುದು ಅವರ ಅಭಿಪ್ರಾಯ.

ಇಂಟರ್ನೆಟ್ ಇಲ್ಲದ ಕುಟುಂಬಗಳಿಗೆ ಸಹಾಯ ಮಾಡಲು ಒಡಿಶಾದ ಆರಂಭಿಕ ಥಿಂಕ್ ಜೋನ್ ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್-ಐವಿಆರ್), ಸಣ್ಣ ಸಂದೇಶ ಸೇವೆ(ಎಸ್‌ಎಂಎಸ್) ಮತ್ತು ರೇಡಿಯೊವನ್ನು ಬಳಸುತ್ತಿದೆ. 3 ರಿಂದ 10 ವರ್ಷದ ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಕಲಿಕೆ ಮಾಡ್ಯೂಲ್‌ಗಳನ್ನು ಪ್ರಸಾರ ಮಾಡಲು ಇದು ಸ್ಥಳೀಯ ರೇಡಿಯೊ ಚಾನೆಲ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಚಟುವಟಿಕೆಗಳು ಒಡಿಯಾ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿದೆ. “ಪ್ರತಿಕ್ರಿಯೆ ಉತ್ತಮವಾಗಿದೆ. ನೆರೆರಾಜ್ಯಗಳ ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ ಎಂಬುದನ್ನು ನಾವು ಕಂಡುಕೊAಡಿದ್ದೇವೆ. ಏಪ್ರಿಲ್‌ನಲ್ಲಿ, ಎಸ್‌ಎಂಎಸ್ ಮತ್ತು ಐವಿಆರ್ ಮೂಲಕ ನಾವು 5,000ಕ್ಕೂ ಹೆಚ್ಚು ಕುಟುಂಬಗಳನ್ನು ತಲುಪಿದ್ದೇವೆ” ಎಂದು ಥಿಂಕ್‌ಜೋನ್ ಸಂಸ್ಥಾಪಕ ಬಿನಾಯಕ್ ಆಚಾರ್ಯ ಹೇಳುತ್ತಾರೆ.

ದೇಶದಲ್ಲಿ ಶಾಲೆಗಳ ಮುಚ್ಚುವಿಕೆಯ ಪರಿಣಾಮಗಳು ಶಿಕ್ಷಣದ ಬಗ್ಗೆಯಷ್ಟೆ ಅಲ್ಲದೆ, ಅವು ಬಹುಮುಖವಾಗಿವೆ. ಈ ಡಿಜಿಟಲ್ ವಿಭಜನೆಯಲ್ಲಿ ಮಕ್ಕಳ ಅಲ್ಪಾವಧಿಯ ಮತ್ತು ದೀರ್ಘಕಾಲೀನ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಹೆಚ್ಚಿನ ಸರ್ಕಾರಿ ಮತ್ತು ಖಾಸಗಿ ಘಟಕಗಳು ಮುಂದಾದರೆ ದೊಡ್ಡಮಟ್ಟದ ಸಾಮಾಜಿಕ ಅನಾಹುತವನ್ನು ತಪ್ಪಿಸಬಹುದು.

ಕೃಪೆ: ದ ಹಿಂದೂ

 

 

 

 

Leave a Reply

Your email address will not be published.