ಎಲ್ಲಿಂದಲೋ ಬಂದವರು!

ಎಲ್ಲಿಂದಲೋ ಬಂದವರು ತಮಟೆ ಬಾರಿಸುತ್ತಾ, ‘ಎಲ್ಲಿದ್ರೀ ಇಲ್ಲೀ ತಂಕಾ? ಎಲ್ಲಿಂದ ಬಂದ್ರಣ್ಣಾ ಎಂದು ಹಾಡತೊಡಗಿದರು. ಮತ್ತೊಬ್ಬ ಪ್ರಶ್ನಿಸಿದವರ ಮುಖಕಮಲ ವರ್ಣವನ್ನು ವೀಕ್ಷಿಸುತ್ತಾ, ‘ಕೆಂಪಾದವೋ ಎಲ್ಲಾ ಕೆಂಪಾದವೋ…’ ಎಂದು ಕೆಂಬಾವುಟ ಹಾರಿಸಿದ!

ಬಾಲಚಂದ್ರ ಬಿ.ಎನ್.

‘ನೀನು ಎಲ್ಲಿಂದ ಬಂದೆ?’

ಥಟ್ಟನೆ ತೂರಿ ಬಂದ ಪ್ರಶ್ನೆಗೆ ರಸ್ತೆ ಬದಿಯಲ್ಲಿ ಮಲಗಿ ಉತ್ತಮ ದಿನಗಳ ಕನಸು ಕಾಣುತ್ತಿದ್ದ ಜನ ಬೆಚ್ಚಿ ಬಿದ್ದರು. ಎದ್ದು ಕಣ್ಣೊರೆಸಿಕೊಂಡು ನೋಡಿದಾಗ ಒಬ್ಬ ದಾಡೀವಾಲ ಮತ್ತೊಬ್ಬ ದಡೂತಿವಾಲ ಕೈಯಲ್ಲಿ ರಾಜದಂಡವನ್ನು ಮತ್ತು ಪಟ್ಟಾಭಿಷಿಕ್ತ ಖಡ್ಗವನ್ನು ಹಿಡಿದು ನಿಂತಿದ್ದರು.

ಗೊಂದಲಗೊಂಡ ಜನ, ‘ಏನು ಸ್ವಾಮಿ, ಯಾರು ನೀವು ಏನೋ ಕೇಳಿದ ಹಾಗಿತ್ತಲ್ಲ’ ಎಂಬಿತ್ಯಾದಿ ಕುಶಲ ಪ್ರಶ್ನೆಗಳನ್ನು ಮಾಡಿದರು.

ಖಡ್ಗಪಾಣಿ ಮತ್ತು ದಂಡಪಾಣಿಗಳಿಬ್ಬರೂ ಮತ್ತೆ ಏಕಸ್ವರದಿಂದ, ‘ನೀನು ಎಲ್ಲಿಂದ ಬಂದೆ’ ಎಂದು ಪ್ರಶ್ನಿಸಿದರು.

ಪರದೇಶಿ ಜನಗಳ ತಲೆ ಕೆಟ್ಟು ಹೋಯಿತು.

‘ಅಂದರೆ…? ಏನು ಕೇಳುತ್ತಿದ್ದೀರಾ ನೀವು? ನಮಗರ್ಥವಾಗಲಿಲ್ಲವಲ್ಲ’ ಎಂದು ಕೈಕೈ ಹಿಸುಕಿಕೊಳ್ಳುವಷ್ಟರಲ್ಲಿ ದಂಡಪಾಣಿ ಕೈಲಿದ್ದ ರಾಜದಂಡವನ್ನು ಝಳಪಿಸುತ್ತಾ ಉಗ್ರವಾಗಿ ಕಣ್ಬಿಡುತ್ತ ಸ್ವಲ್ಪ ಜೋರಾಗಿಯೇ ಆರ್ಭಟಿಸಿದ, ‘ನೀನು ಎಲ್ಲಿಂದ ಬಂದೆ?’

ಈಗ ನೆರದಿದ್ದ ಜನಕ್ಕೆ ಸ್ವಲ್ಪ ಭಯವಾಗತೊಡಗಿತು.

‘ಸ್ವಾಮೀ, ನಾವೆಲ್ಲಾ ವಿವಿಧ ವೃತ್ತಿಗೆ ಸೇರಿದವರು. ಯಾಚಕರೂ ಪರದೇಶಿಗಳೂ ಇದ್ದೇವೆ. ಕೆಲವರು ರೈಲ್ವೇ ಸ್ಟೇಷನ್ನಿನಲ್ಲಿ ಕೂಲಿ ಮಾಡುತ್ತಾರೆ. ಮತ್ತೆ ಕೆಲವರು ಅಲ್ಲೇ ಭಿಕ್ಷೆ ಬೇಡುತ್ತಾರೆ. ಮತ್ತಷ್ಟು ಜನ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಾರೆ. ಇನ್ನಷ್ಟು ಜನ ಮಂದಿರ, ಮಸೀದಿ, ಚರ್ಚುಗಳ ಮುಂದೆ ಬೂಟ್ ಪಾಲಿಶ್ ಮಾಡುತ್ತಾರೆ’.

ದಾಡಿವಾಲಾ ಮತ್ತು ದಡೂತಿವಾಲಾ ಇಬ್ಬರ ಮುಖದಲ್ಲೂ ಕಿರುನಗೆ ಅರಳಿತು.

‘ಅದಕ್ಕೂ ಮುನ್ನ ಎಲ್ಲಿದ್ದಿರಿ?’ ತಮಗೆ ಬೇಕಾದ ಉತ್ತರ ಸಿಕ್ಕುತ್ತಿದೆ ಎಂಬ ಆತ್ಮವಿಶ್ವಾಸದೊಡನೆ ಪ್ರಶ್ನಿಸಿದರು.

‘ಅದಕ್ಕೂ ಮುನ್ನ ಸ್ವಾಮೀ, ನಮ್ಮಮ್ಮನ ಹೊಟ್ಟೆಯಲ್ಲಿದ್ದೆವು. ಅವರೂ ಸಹ ಇದೇ ರೈಲ್ವೇ ಸ್ಟೇಷನ್ನಿನಲ್ಲಿ, ಇದೇ ರಸ್ತೆ ಬದಿಗಳಲ್ಲಿ, ಇದೇ ಮಂದಿರ ಚರ್ಚು ಮಸೀದಿಗಳ ಮುಂದೆ..’

ಇದೇ ರಸ್ತೆ ಬದಿಗಳಲ್ಲಿ, ಇದೇ ಮಂದಿರ ಚರ್ಚು ಮಸೀದಿಗಳ ಮುಂದೆ…’

‘ಸಾಕು ಬಾಯಿಮುಚ್ಚು!’ ದಂಡಪಾಣಿ ಗದರಿಸಿದ.

ಪರದೇಶಿಗಳು ಬಾಯಿಮುಚ್ಚಿದರು.

‘ಅದಕ್ಕೂ ಮುನ್ನ ನಿಮ್ಮ ಅಮ್ಮ ಅಪ್ಪ ಎಲ್ಲಿದ್ದರು?’

ಪರದೇಶಿಗಳು ತಲೆಕೆರೆದುಕೊಳ್ಳುತ್ತಾ, ‘ಅವರು ಅವರವರ ಅಮ್ಮನ ಹೊಟ್ಟೆಯಿಂದ ಬರುವ ಮುನ್ನ ಅವರೂ ಸಹ ಇದೇ ರೈಲ್ವೇ ಸ್ಟೇಷನ್ನಿನಲ್ಲಿ, ಇದೇ ರಸ್ತೆ ಬದಿಗಳಲ್ಲಿ, ಇದೇ ಮಂದಿರ ಚರ್ಚು ಮಸೀದಿಗಳ ಮುಂದೆ…’

ಇಬ್ಬರ ಮುಖದಲ್ಲೂ ಅಸಹನೆ ತಾಂಡವವಾಡತೊಡಗಿತು.

ಅದನ್ನು ನೋಡಿದ ಜನ ಮೆಲ್ಲನೆ ಜಾಗ ಖಾಲಿ ಮಾಡಿ ಪರಾರಿಯಾಗಲು ಹವಣಿಸುತ್ತಿದ್ದಂತೆಯೇ ಇಬ್ಬರೂ, ‘ಎಲ್ಲರೂ ನಿಲ್ಲಿ!’ ಎಂದು ರಾಜದಂಡ ಮತ್ತು ಪಟ್ಟಾಭಿಷಿಕ್ತ ಖಡ್ಗವನ್ನು ಮೇಲೆತ್ತಿದರು.

ಜನ ಪ್ರತಿಮೆಗಳಂತೆ ಸ್ತಬ್ಧರಾಗಿ ನಿಂತಲ್ಲೇ ನಿಂತುಕೊಂಡರು.

‘ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಿಲ್ಲದ ಜನ ಇಲ್ಲಿರುವುದು ಬೇಕಿಲ್ಲ. ಈಗ ಕೇಳಿದ ಪ್ರಶ್ನೆಗಳಿಗೆ ಶೀಘ್ರದಲ್ಲೇ ವಿವರವಾದ ಪ್ರತಿಕ್ರಿಯೆ ಬಾರದಿದ್ದಲ್ಲಿ ನೀವೆಲ್ಲಾ ಎಲ್ಲಿಂದ ಬಂದಿರೋ ಅಲ್ಲಿಗೇ ತೆರಳಬೇಕಾದೀತು’ ಎಂದು ಕಟುವಾಗಿ ಎಚ್ಚರಿಸಿದರು.

ಏನೂ ಹೇಳಲು ತೋಚದ ಜನ ಸುಮ್ಮನೆ ನಿಂತಿರುವಂತೆಯೇ ಖಡ್ಗಧಾರಿ ಮತ್ತು ದಂಡಧಾರಿಗಳ ಬಳಿ ಆಪ್ತಸೇವಕನೊಬ್ಬ ಬಂದು ಪಶ್ಚಿಮದಲ್ಲಿರುವ ಬಂಗಾಳದೇಶದಿಂದ ಕಹಿಸುದ್ದಿಯೊಂದು ಬಂದಿರುವುದಾಗಿ ತಿಳಿಸಿದ.

ಈ ಹುಡಗರ ಸ್ಥಿತಿ ಹಿಂದೆ ಭೇಟಿ ಮಾಡಿದ ಪರದೇಶಿಗಳ ಸ್ಥಿತಿಯಷ್ಟು ಭೀಕರವಾಗಿರಲಿಲ್ಲ.

ಮುಖವನ್ನು ಕಮಲದಂತೆ ಕೆಂಪಾಗಿಸಿಕೊಂಡ ಇಬ್ಬರೂ ಮತ್ತೊಮ್ಮೆ ಜನರಿಗೆ ಗಡುವು ನೀಡಿ, ಮುಂದಿನ ಬಾರಿ ಬರುವಷ್ಟರಲ್ಲಿ ಉತ್ತರ ಸಿದ್ಧವಾಗಿರಿಸಿಕೊಂಡಿರಲು ಎಚ್ಚರಿಸಿ ಅಲ್ಲಿಂದ ತುರ್ತಾಗಿ ನಿರ್ಗಮಿಸಿದರು.

ಈ ಬಾರಿ ವಿದ್ಯಾಲಯವೊಂದರ ಬಳಿ ಅಶ್ವಿನಿ ದೇವತೆಗಳಂತೆ ಪ್ರತ್ಯಕ್ಷವಾದ ಇಬ್ಬರೂ ಅಲ್ಲಿ ಸಾಗುತ್ತಿದ್ದ ಹುಡುಗರನ್ನು ಎಡತಾಕಿಕೊಂಡರು. ಈ ಹುಡಗರ ಸ್ಥಿತಿ ಹಿಂದೆ ಭೇಟಿ ಮಾಡಿದ ಪರದೇಶಿಗಳ ಸ್ಥಿತಿಯಷ್ಟು ಭೀಕರವಾಗಿರಲಿಲ್ಲ.

ಮೊದಲು ಸಣ್ಣ ಸಣ್ಣ ಹುಡುಗರನ್ನು ಹಿಡಿದು, ‘ನೀನು ಎಲ್ಲಿಂದ ಬಂದೆ ಗೊತ್ತಾ?’ ಎಂದು ಪ್ರಶ್ನಿಸಿದಾಗ ಮಕ್ಕಳು ಪಿಳಿಪಿಳಿ ಕಣ್ಬಿಡುತ್ತಾ, ಚಕಿತರಾಗಿ ನೋಡತೊಡಗಿದರು.

ಅವರ ಕೈಲಿದ್ದ ಅಲಂಕೃತ ದಂಡ ಖಡ್ಗಗಳ ಕಡೆ ಕುತೂಹಲದಿಂದ ನೋಡುತ್ತಿದ್ದ ಮಕ್ಕಳಿಗೆ ಇಬ್ಬರೂ ಎರಡು ಮೂರು ಬಾರಿ, ‘ನೀನು ಎಲ್ಲಿಂದ ಬಂದೆ’ ಎಂಬ ಪ್ರಶ್ನೆ ಕೇಳುತ್ತಿದ್ದಂತೆಯೇ ಬೇಸರವಾಗತೊಡಗಿತು. ಪ್ರಶ್ನಿಸುತ್ತಿದ್ದವರ ದನಿ ಕಠಿಣವಾಗುತ್ತಿದ್ದಂತೆಯೇ ಭಯವೂ ಆಗತೊಡಗಿತು.

ಮೆಲ್ಲನೆ ಬಿಕ್ಕುತ್ತಾ, ಗದ್ಗದ ದನಿಯಿಂದ ‘ಅಮ್ಮಾ’ ಎನ್ನುತ್ತಿದ್ದಂತೆಯೇ ದೂತನೊಬ್ಬ ದಂಡಪಾಣಿಯ ಹತ್ತಿರ ಬಂದು, ‘ಪ್ರಭೂ! ರಾಜಾಸ್ಥಾನ ಮತ್ತು ಕೇರಳದಿಂದಲೂ ದುರ್ವಾರ್ತೆ ಬಂದಿದೆ’ ಎಂದು ಉಸುರಿದ.

ಮಸ್ತಕದೊಳಗೆ ತುರುಕಿಕೊಳ್ಳುವ ಪ್ರಯತ್ನದ ಅಂಗವಾಗಿ ವಾದ, ವಿವಾದ, ಚರ್ಚೆ, ವಾಗ್ವಾದ, ಹರಟೆ, ಜಗಳ, ಭಿನ್ನಮತ, ಮಂಡನೆ, ಖಂಡನೆ, ಪ್ರತಿಭಟನೆ ಇವೇ ಮುಂತಾದ ಚೌಷಷ್ಟಿ ವಿದ್ಯೆಗಳಲ್ಲಿ ನಿರತವಾಗಿದ್ದ ಹಿರಿಯ ವಿದ್ಯಾರ್ಥಿಗಳ ಗುಂಪಿನತ್ತ ಖಡ್ಗಪಾಣಿ ಮತ್ತು ದಂಡಪಾಣಿಗಳು ಸಾಗಿದರು.

ಕುಪಿತರಾದ ಖಡ್ಗಪಾಣಿ ಮತ್ತು ದಂಡಪಾಣಿಗಳಿಬ್ಬರೂ ಬಾಡಿದ ಕಮಲಗಳಂತಿದ್ದ ಮಕ್ಕಳ ಮುಖ ನೋಡಿ, ಅದೇ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಳ್ಳೋಣವೆಂದು ಅತ್ತ ಸಾಗಿದರು.

ಅಲ್ಲೇ ಕಟ್ಟೆಯ ಮೇಲೆ ಒಂದು ರಾಶಿ ಪುಸ್ತಕಗಳನ್ನಿಟ್ಟುಕೊಂಡು, ಅವನ್ನು ಮಸ್ತಕದೊಳಗೆ ತುರುಕಿಕೊಳ್ಳುವ ಪ್ರಯತ್ನದ ಅಂಗವಾಗಿ ವಾದ, ವಿವಾದ, ಚರ್ಚೆ, ವಾಗ್ವಾದ, ಹರಟೆ, ಜಗಳ, ಭಿನ್ನಮತ, ಮಂಡನೆ, ಖಂಡನೆ, ಪ್ರತಿಭಟನೆ ಇವೇ ಮುಂತಾದ ಚೌಷಷ್ಟಿ ವಿದ್ಯೆಗಳಲ್ಲಿ ನಿರತವಾಗಿದ್ದ ಹಿರಿಯ ವಿದ್ಯಾರ್ಥಿಗಳ ಗುಂಪಿನತ್ತ ಖಡ್ಗಪಾಣಿ ಮತ್ತು ದಂಡಪಾಣಿಗಳು ಸಾಗಿದರು.

ಹಿರಿಯ ವಿದ್ಯಾರ್ಥಿಗಳಿಗೆ ಇವರಿಬ್ಬರ ಆಗಮನದಿಂದ ಅಷ್ಟೇನೂ ಖುಷಿಯಾಗಲಿಲ್ಲ. ಕಡೆಗಣ್ಣಿನಿಂದ ನೋಡಿ ಮತ್ತೆ ಗಹನವಾಗಿ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿದರು.

ಆದರೂ ಖಡ್ಗಪಾಣಿ ಮತ್ತು ದಂಡಪಾಣಿಗಳಿಬ್ಬರೂ ಮುಂದೆ ಹೋಗಿ ನಿಂತು, ‘ನೀವು ಎಲ್ಲಿಂದ ಬಂದಿರಿ?’ ಎಂದು ಜೋರಾಗಿ ಪ್ರಶ್ನಿಸಿದರು.

ಹುಡುಗರ ಅಸಹನೆ ಮುಖದಲ್ಲಿ ವ್ಯಕ್ತವಾಗತೊಡಗಿತು. ಆದರೂ ಸೌಜನ್ಯದಿಂದ, ‘ಇಲ್ಲಿ ಎಲ್ಲೆಲ್ಲಿಂದಲೋ ಬಂದವರು ಇದ್ದಾರೆ. ದಯವಿಟ್ಟು ಇಂಥಾ ಪ್ರಶ್ನೆ ಕೇಳಬೇಡಿ’ ಎಂದು ಮೃದುವಾಗಿ ಬಿನ್ನಯಿಸಿಕೊಂಡರು.

ಆದರೆ ಖಡ್ಗಪಾಣಿ ಮತ್ತು ದಂಡಪಾಣಿಗಳು ಮನವಿಗೆ ಮಣಿಯಲಿಲ್ಲ.

‘ನೀವು ಎಲ್ಲಿಂದ ಬಂದಿರಿ ಅಷ್ಟು ಹೇಳಿ ಸಾಕು’, ಎಂದು ರೋಷಾವೇಷದಿಂದ ಘರ್ಜಿಸಿದರು.

ಒಬ್ಬರ ಮುಖ ಒಬ್ಬರು ಕಡೆಗಣ್ಣಿನಲ್ಲೇ ನೋಡಿಕೊಂಡ ವಿದ್ಯಾರ್ಥಿಗಳ ಮುಖದಲ್ಲಿ ಕಿರುನಗೆ ಅರಳತೊಡಗಿತು.

ಇದನ್ನು ನೋಡಿದ ಖಡ್ಗಪಾಣಿ ಮತ್ತು ದಂಡಪಾಣಿಗಳ ಅಸಹನೆ ವೃದ್ಧಿಯಾಯ್ತು. ಎಲ್ಲಿಂದ ಬಂದಿದ್ದೀರಿ ಎಂದು ಹೇಳುವಿರೋ ಇಲ್ಲವೋ ಎಂದು ಕೂಗಾಡತೊಡಗಿದರು.

ಪ್ರಶ್ನೆ ಆರಂಭಿಸುತ್ತಿದ್ದಂತೆಯೇ ಮತೊಬ್ಬ ವಿದ್ಯಾರ್ಥಿ ಮುಂದೆ ಬಂದು, ‘ಖಂಡಾಂತರ ಚಲನೆಯ ಬಗ್ಗೆ ನಿಮಗೇನಾದರೂ ತಿಳಿದಿದೆಯೇ? ಕೋಟ್ಯಂತರ ವರ್ಷಗಳ ಹಿಂದೆ ಎಲ್ಲರೂ ನಿಂತಿರುವ ಭೂಮಿ ಒಂದೇ ಆಗಿತ್ತು ಎಂದು ಗೊತ್ತೇ?’

ಒಬ್ಬ ವಿದ್ಯಾರ್ಥಿ ಮುಂದೆ ಬಂದು, ಈ ಪ್ರಶ್ನೆಯನ್ನು ಎಷ್ಟು ವರ್ಷದ ಹಿಂದಿನ ಇತಿಹಾಸದಿಂದ ನಿಮಗೆ ಉತ್ತರಿಸಬೇಕು ಎಂದು ಪ್ರಶ್ನಿಸಿದ.

ಆಯುಧಪಾಣಿಗಳು ಮುಖಮುಖ ನೋಡಿಕೊಂಡರು.

ಮತ್ತೊಬ್ಬ ವಿದ್ಯಾರ್ಥಿ ಮುಂದೆ ಬಂದು ನೂರು ವರ್ಷಗಳ ಹಿಂದಿನ ಭೂಪಟವೊಂದನ್ನು ಎದುರಿಗಿಟ್ಟು, ‘ಇದರ ಬಗ್ಗೆ ನಿಮಗೆ ತಿಳಿವಳಿಕೆಯಿದೆಯೇ?’ ಎಂದು ಕೇಳಿದ.

ಖಡ್ಗಪಾಣಿ ಮತ್ತು ದಂಡಪಾಣಿಗಳು ‘ನೀವು ಎಲ್ಲಿಂದ…’ ಎಂದು ಪ್ರಶ್ನೆ ಆರಂಭಿಸುತ್ತಿದ್ದಂತೆಯೇ ಮತೊಬ್ಬ ವಿದ್ಯಾರ್ಥಿ ಮುಂದೆ ಬಂದು, ‘ಖಂಡಾಂತರ ಚಲನೆಯ ಬಗ್ಗೆ ನಿಮಗೇನಾದರೂ ತಿಳಿದಿದೆಯೇ? ಕೋಟ್ಯಂತರ ವರ್ಷಗಳ ಹಿಂದೆ ಎಲ್ಲರೂ ನಿಂತಿರುವ ಭೂಮಿ ಒಂದೇ ಆಗಿತ್ತು ಎಂದು ಗೊತ್ತೇ?’ ಎಂದು ಪ್ರಶ್ನಿಸಿದ.

ಆಯುಧಪಾಣಿ ಮತ್ತು ದಂಡಪಾಣಿಗಳಿಬ್ಬರೂ ನಿರುತ್ತರರಾದರು.

ಆದರೆ ವಿದ್ಯಾರ್ಥಿಗಳು ಅವರನ್ನು ಬಿಡಲಿಲ್ಲ. ಈ ದಂಡ ಮತ್ತು ಖಡ್ಗ ಹಿಡಿಯುವ ಸ್ಥಾನಕ್ಕೆ ನೀವೆಲ್ಲಿಂದ ಬಂದಿರಿ ಹೇಳಿ ಎಂದು ಪೀಡಿಸತೊಡಗಿದರು.

ಮತ್ತೊಬ್ಬ ಮುಂದೆ ಬಂದು, ‘ಎಲ್ಲಿದ್ರೀ ಇಲ್ಲೀ ತಂಕಾ? ಎಲ್ಲಿಂದ ಬಂದ್ರಣ್ಣಾ’ ಎಂದು ತಮಟೆ ಬಾರಿಸುತ್ತಾ ಹಾಡತೊಡಗಿದ. ಮತ್ತೊಬ್ಬ ಇವರ ಮುಖಕಮಲ ವರ್ಣವನ್ನು ವೀಕ್ಷಿಸುತ್ತಾ, ‘ಕೆಂಪಾದವೋ ಎಲ್ಲಾ ಕೆಂಪಾದವೋ…’ ಎಂದು ಕೆಂಪು ಬಾವುಟ ಹಾರಿಸುತ್ತಿದ್ದಂತೆಯೇ ದೂತನೊಬ್ಬ ಹತ್ತಿರ ಬಂದು ಕಿವಿಯಲ್ಲಿ, ‘ಪ್ರಭೂ! ಆಂಧ್ರಪ್ರದೇಶ, ಪಂಜಾಬ್‍ನಿಂದಲೂ ಅಶುಭವಾರ್ತೆಗಳು ಬರುತ್ತಿವೆ. ತೆಲಂಗಾಣದಿಂದಲೂ ಕರ್ಣಸ್ಫೋಟಕವಾದ ಸುದ್ದಿಯೊಂದು ಬರುವ ನಿರೀಕ್ಷೆಯಿದೆ’ ಎಂದು ಉಸುರಿದ.

ತ್ತೊಬ್ಬ ತಾನು ಕೇರಾಫ್ ಬ್ರಹ್ಮಲೋಕ ಎಂದು ಕಣ್ಮುಚ್ಚಿ ಬ್ರಹ್ಮಾನಂದದಲ್ಲಿ ತಲ್ಲೀನನಾದ. ಮಗದೊಬ್ಬ ತನ್ನದು ಸತ್ಯಲೋಕ ಎಂದು ಅಸತ್ಯ ನುಡಿದ.

ಅವರ ಮುಖದಲ್ಲುಂಟಾದ ಭಾವಗೋಪನವನ್ನು ನೋಡಿದ ವಿದ್ಯಾರ್ಥಿಗಳು ಸುತ್ತುವರೆದು ಕುಣಿದಾಡುತ್ತಿದ್ದಂತೆಯೇ ಅಲ್ಲಿಂದ ಹರಸಾಹಸ ಪಡುತ್ತಾ, ಪ್ರಯಾಸದಿಂದ ಖಡ್ಗಪಾಣಿಗಳು ಮತ್ತು ದಂಡಪಾಣಿಗಳಿಬ್ಬರೂ ಕಳಚಿಕೊಂಡರು.

ಸಿಕ್ಕ ಸಿಕ್ಕವರನ್ನೆಲ್ಲಾ ಇದೇ ಪ್ರಶ್ನೆ ಕೇಳುತ್ತಾ ಬಸವಳಿದ ಆಯುಧಪಾಣಿಗಳು ಕೊನೆಗೆ ರಾಜಧಾನಿ ತಲುಪಿದಾಗ ತಮ್ಮ ಸೇನಾನೆಲೆಗಳಿಗೆ ಬೆಂಕಿ ಬಿದ್ದಿರುವುದು ಕಾಣಿಸಿತು.

ಬಾಲ ಸುಟ್ಟ ಕೋತಿಯಂತೆ ಅತ್ತಿಂದಿತ್ತಾ ಇತ್ತಿಂದತ್ತಾ ಹಾರಾಡಲು ಶುರು ಮಾಡಿದ ದಂಡಪಾಣಿ ಮತ್ತು ಆಯುಧಪಾಣಿಗಳ ಉರಿ ಏನು ಮಾಡಿದರೂ ಶಮನವಾಗಲಿಲ್ಲ. ಅಯ್ಯೋ, ರಾಮಾ ಎಂದು ಚೀತ್ಕಾರ ಮಾಡುತ್ತಾ ಗೋಳಾಡಲು ಶುರುಮಾಡಿದ ಇವರಿಬ್ಬರ ಮುಂದೆ ಕಾವಿಧಾರಿಗಳ ಪರಿವಾರವೊಂದು ಕಾಣಿಸಿತು. ಎಲ್ಲರೂ ಎರಡು ಮೂರಡಿ ಉದ್ದದ ಗಡ್ಡ ಬೆಳಸಿದ್ದರು. ಕೈಲಿ ಇವರ ಬಳಿ ಇರುವುದಕ್ಕಿಂತ ಉದ್ದವಾದ ದಂಡ ಮತ್ತು ಖಡ್ಗಗಳನ್ನು ಹಿಡಿದಿದ್ದರು.

ದೀರ್ಘದಂಡ ನಮಸ್ಕಾರ ಮಾಡಿ ತಮ್ಮ ತಮ್ಮ ದಂಡ ಮತ್ತು ಖಡ್ಗಗಳನ್ನು ನೆಲಕ್ಕೆ ಮುಟ್ಟಿಸಿ ಎದ್ದು ನಿಂತ ದಂಡಪಾಣಿ ಮತ್ತು ಆಯುಧಪಾಣಿಗಳು ಅಭ್ಯಾಸಬಲದಿಂದಲೋ ಅಥವಾ ನಾಲಿಗೆ ಚಪಲದಿಂದಲೋ, ‘ನೀವು ಎಲ್ಲಿಂದ ಬಂದಿದ್ದೀರಿ?’ ಎಂದು ಪ್ರಶ್ನಿಸಿ ಕೈಮುಗಿದು ನಿಂತುಕೊಂಡರು.

ಅಫೀಮಿನಿಂದಲೋ ಗಾಂಜಾದಿಂದಲೋ ಕೆಂಪಾಗಿದ್ದ ಕಣ್ಣುಗಳನ್ನು ಇನ್ನಷ್ಟು ಕೆಂಪಗೆ ಮಾಡಿಕೊಂಡ ಸಾಧುಸಂತರ ಪರಿವಾರ ಅಸಂತುಷ್ಟರಾಗಿ ಹೂಂಕಾರ ಮಾಡತೊಡಗಿತು.

ನಾಮಧಾರಿಯೊಬ್ಬ ನಾನು ವೈಕುಂಠದಿಂದ ಬಂದಿದ್ದೇನೆ ಎಂದು ಘೋಷಿಸಿದರೆ, ವಿಭೂತಿಧಾರಿಯೊಬ್ಬ ತಾನು ಕೈಲಾಸದಿಂದ ಬಂದಿದ್ದಾಗಿ ಅರುಹಿದ. ಮತ್ತೊಬ್ಬ ತಾನು ಕೇರಾಫ್ ಬ್ರಹ್ಮಲೋಕ ಎಂದು ಕಣ್ಮುಚ್ಚಿ ಬ್ರಹ್ಮಾನಂದದಲ್ಲಿ ತಲ್ಲೀನನಾದ. ಮಗದೊಬ್ಬ ತನ್ನದು ಸತ್ಯಲೋಕ ಎಂದು ಅಸತ್ಯ ನುಡಿದ.

ಇನ್ನೊಬ್ಬ ತಾನು ಆರ್ಯಾವರ್ತದಿಂದ ಬಂದಿರುವುದಾಗಿ ಹೇಳಿಕೊಂಡು ಕುಣಿದಾಡಿದ. ಅಹಿಚ್ಚತ್ರದಿಂದ ಬಂದಿದ್ದೇನೆಂದು ಹೇಳಿಕೊಂಡವನೊಬ್ಬ ಕೂಗಾಡಿದ. ಬ್ರಹ್ಮಾವರ್ತದಿಂದ. ಸಿಂಧೂದ್ವೀಪದಿಂದ, ಜಂಬೂ ದ್ವೀಪದಿಂದ, ಹೀಗೆ ಕಂಡು ಕೇಳರಿಯದ ಮೂಲಸ್ಥಾನಗಳನ್ನು ಉಲ್ಲೇಖಿಸಲು ಶುರುಮಾಡಿದ ಕೇಸರಿಧಾರಿಗಳ ಗಡಣದ ಪ್ರತಾಪವನ್ನು ಕಂಡು ಇಬ್ಬರೂ ಬೆಚ್ಚಿ ಬಿದ್ದರು.

ಅಲ್ಲಿಂದ ಮೆಲ್ಲನೆ ಪಾರಾಗಿ ತಪ್ಪಿಸಿಕೊಳ್ಳಬೇಕೆನ್ನುವಷ್ಟರಲ್ಲಿ ದೂತನೊಬ್ಬ ಬಳಿಬಂದು ಮತ್ತೊಂದು ಕಹಿಸುದ್ದಿ ಎಂದು ಅರುಹುತ್ತಿದ್ದಂತೆಯೇ ಕೋಪ ತಡೆಯಲಾರದೆ ತಮ್ಮ ಕೈಲಿದ್ದ ದಂಡ ಮತ್ತು ಖಡ್ಗವನ್ನು ಮನಸ್ವೇಚ್ಛೆಯಿಂದ ಬಳಸಿ ದೂತನನ್ನು, ‘ನೀನು ಎಲ್ಲಿಂದ ಬಂದೆ, ನೀನು ಎಲ್ಲಿಂದ ಬಂದೆ’ ಎಂದು ಪ್ರಶ್ನಿಸುತ್ತಾ ಸದೆಯತೊಡಗಿದರು. 

Leave a Reply

Your email address will not be published.