ಒಂದಷ್ಟು ಭಾರ ಹೊತ್ತರೆ ತಪ್ಪೇನು?

ಪೌರತ್ವದಂಥ ಮೂಲಭೂತ ವಿಷಯದಲ್ಲಿ ಅಧಿಕಾರಶಾಹಿಯ ಅನಗತ್ಯ ಹಸ್ತಕ್ಷೇಪಕ್ಕೆ ಸಿಎಎ ಮತ್ತು ಎನ್‍ಆರ್‍ಸಿ ದಾರಿಮಾಡಿಕೊಟ್ಟಿದೆ. ಪ್ರಜಾಸತ್ತಾತ್ಮಕ, ಮುಕ್ತ, ಸಹನಶೀಲ ಹಾಗೂ ಎಲ್ಲರನ್ನೂ ಒಳಗೊಳ್ಳುವಂಥ ರೀತಿಯಲ್ಲಿ ಈ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲವೆ? ಹಾಗೆ ಮಾಡಿದರೆ ಇದೊಂದು ರಾಷ್ಟ್ರೀಯ ಮಿಷನ್ ಎಂದು ಭಾವಿಸಿ ಎಲ್ಲರೂ ಸಹಿ ಹಾಕುತ್ತಾರೆ.

ಅಭಿಜಿತ್ ಬ್ಯಾನರ್ಜಿ ಎಸ್ತರ್ ಡಫ್ಲೋ

ಇದು 2014ರ ಮಾತು. ಆಗ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು, ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬ ಪರಿಕಲ್ಪನೆಯ ಘೋಷವಾಕ್ಯವನ್ನು ತೇಲಿಬಿಟ್ಟಿದ್ದರು. ‘ಭಾರತ ಸರ್ಕಾರ ತಮ್ಮ ಜೀವನದಲ್ಲಿ ವಿಪರೀತ ಹಸ್ತಕ್ಷೇಪ ಮಾಡುತ್ತಿದೆ. ಆದರೆ ತಮಗಾಗಿ ಏನನ್ನೂ ಮಾಡುತ್ತಿಲ್ಲ’ ಎಂಬ ಮನಸ್ಥಿತಿಯಲ್ಲಿ ಅಂದಿನ ಮತದಾರನಿದ್ದ. ಆದರೆ ಅದೇ ಘೋಷಣೆಯಲ್ಲಿ ಇಂದು ಸಾಕಷ್ಟು ವೈರುಧ್ಯ ಹಾಗೂ ವಿಪರ್ಯಾಸ ಕಂಡುಬರುತ್ತಿದೆ.

ತಿದ್ದುಪಡಿಗೆ ತೀವ್ರ ವಿರೋಧ ದಾಖಲಾಗುತ್ತಿದ್ದಂತೆಯೇ, ಕಾಯ್ದೆಯನ್ನು ಬೆಂಬಲಿಸುವವರು ಕೂಡ ಸಭೆ, ಜಾಥಾಗಳನ್ನು ನಡೆಸುತ್ತಿದ್ದಾರೆ. ಈ ತಿದ್ದುಪಡಿಯನ್ನು ವಿರೋಧಿಸುತ್ತಿರುವವರ ಮುಖ್ಯ ಆಕ್ಷೇಪ `ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿ ಈ ನಿರ್ಣಯ ತರಲಾಗಿದೆ’ ಎಂಬುದಾಗಿದೆ. ಪರವಾಗಿರುವವರು ನೆರೆಯ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿವರಗಳನ್ನು ಬಿಚ್ಚಿಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಎರಡರ ನಡುವೆ ಕಾಯ್ದೆಯನ್ನು ತಮ್ಮ ಸ್ವಹಿತಾಸಕ್ತಿಗೆ ಪೂರಕವಾಗಿ ವ್ಯಾಖ್ಯಾನಿಸುವ, ವಾಸ್ತವವನ್ನು ಮರೆ ಮಾಚುವ, ಕಲ್ಪಿತ ಸಂಗತಿಗಳನ್ನು ಮುಂದಿಟ್ಟು ಜನರನ್ನು ಭೀತಿಗೆ ಒಳಪಡಿಸುವ ಪ್ರಯತ್ನಗಳೂ ನಡೆಯುತ್ತಿವೆ.

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ಕುರಿತು ದೇಶಾದ್ಯಂತ ಈಗ ನಡೆದಿರುವ ಚರ್ಚೆಯನ್ನು ಇದೇ ಪರಿಕಲ್ಪನೆಯ ಮಸೂರದಲ್ಲೇ ನೋಡಬೇಕಾಗಿದೆ. ಸಮೀಕ್ಷೆ ನಡೆಸುವಾಗ ನಿಖರ ಅಂಕಿ ಅಂಶಗಳನ್ನು ಪಡೆಯುವುದು ಎಷ್ಟು ಕಷ್ಟ ಎಂಬುದು ಅದನ್ನು ನಡೆಸಿದವರಿಗೆಲ್ಲ ಚೆನ್ನಾಗಿ ಗೊತ್ತು. ಪಾಸ್‍ಪೋರ್ಟ್ ಪಡೆಯಲು ಅರ್ಜಿ ತುಂಬುವಾಗ ಕೇಳಲಾಗುವ ಪ್ರಶ್ನೆಗಳಿಗೆ ನಾವೆಲ್ಲ ಹೇಗೆ ಸಿದ್ಧ ಉತ್ತರವನ್ನೋ ಅಥವಾ ಕೊಸರಿಕೊಳ್ಳುವ ಉತ್ತರವನ್ನೋ ಕೊಡುತ್ತೇವೆ ಎಂಬುದನ್ನು ಗಮನಿಸಿ.

ಇಲ್ಲಿಂದ ಒಂದೆರಡು ತಾಸು ದೂರದ ಪ್ರಯಾಣ  ಮಾಡಿದರೆ ಸಿಗುತ್ತದೆ ಆ ಸ್ಥಳ. ಅದು ಇಲ್ಲಿಂದ ಪೂರ್ವಕ್ಕೋ, ದಕ್ಷಿಣಕ್ಕೋ ಇದೆ. ಸರಿಯಾಗಿ ಗೊತ್ತಿಲ್ಲ’’.

ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಹೀಗೊಂದು ಸಮೀಕ್ಷೆ ನಡೆಸಲು ಹೋದಾಗ ನಮಗಾದ ಅನುಭವವನ್ನು ನಾನಿಲ್ಲಿ ಹೇಳಲೇಬೇಕು. ಸುಮಾರು 20 ಮಹಿಳೆಯರಿಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಎಲ್ಲರದೂ ಅದೇ ಉತ್ತರ. ‘’ನೀವು ಹುಟ್ಟಿದ ಸ್ಥಳ ಯಾವುದು’’, ಎಂಬುದು ಆ ಪ್ರಶ್ನೆ. ಅದಕ್ಕೆ ಬಹುತೇಕರು ನೀಡಿದ ಉತ್ತರದ ಧಾಟಿ ಹೀಗಿದೆ. ‘’ಈ ಗ್ರಾಮದಲ್ಲಿ ಅಲ್ಲ. ಇಲ್ಲಿಂದ ಒಂದೆರಡು ತಾಸು ದೂರದ ಪ್ರಯಾಣ  ಮಾಡಿದರೆ ಸಿಗುತ್ತದೆ ಆ ಸ್ಥಳ. ಅದು ಇಲ್ಲಿಂದ ಪೂರ್ವಕ್ಕೋ, ದಕ್ಷಿಣಕ್ಕೋ ಇದೆ. ಸರಿಯಾಗಿ ಗೊತ್ತಿಲ್ಲ’’.

ನಮ್ಮ ಮುಂದಿನ ಈ ಪ್ರಶ್ನೆ- ‘’ಹಾಗಾದರೆ ಇಲ್ಲಿಗೆ ನೀವು ಬಂದಿದ್ದು ಹೇಗೆ?’’

‘’ನನ್ನ ತಾಯಿ ಪಕ್ಕದ ಹಳ್ಳಿಯವಳು. ನಾನು ಹುಟ್ಟಿದ್ದು ಆಕೆಯನ್ನು ಮದುವೆ ಮಾಡಿಕೊಟ್ಟ ಸ್ಥಳದಲ್ಲಿ. ಆದರೆ ನಮ್ಮಪ್ಪ ಇನ್ನೊಂದು ಮದುವೆ ಮಾಡಿಕೊಂಡು ನಮ್ಮನ್ನು ಮತ್ತೆ ಮೊದಲಿನ ಸ್ಥಳಕ್ಕೇ ಕಳಿಸಿಬಿಟ್ಟ. ಆಗ ನನಗೆ ಆರೇಳು ವರ್ಷ ಇರಬೇಕು. ಹಾಗೆಂದು ಮೊದಲಿನ ಊರಿಗೆ ಹೋದಾಗ ನಮ್ಮನ್ನು ನಮ್ಮ ಸೋದರ ಮಾವ ಕರೆದುಕೊಳ್ಳಲಿಲ್ಲ. ಕೊನೆಗೆ ಈ ಊರಿನ ಮಹಿಳೆಯೊಬ್ಬಳು ನಮಗೆ ಇಲ್ಲಿ ಇರಲು ಸ್ಥಳವೊಂದನ್ನು ನೀಡಿದಳು,’’ ಹೀಗೆ ಸಾಗಿತ್ತು ಆಕೆಯ ವಿವರಣೆ.

‘’ಹಾಗಾದರೆ ಆ ಊರಿನ ಹೆಸರನ್ನಾದರೂ ಹೇಳುವಿಯಾ?”

‘’ನನ್ನ ತಾಯಿಗೆ ಗೊತ್ತಿತ್ತು. ಆದರೆ ಆಕೆ ಈಗ ಬದುಕಿಲ್ಲ.’’

ನಾವಾಗ ವಿಧಿ ಇಲ್ಲದೆ, ಜನ್ಮಸ್ಥಳದ ಮುಂದೆ ‘ಗೊತ್ತಿಲ್ಲ’ ಎಂಬ ಸಂಕೇತಾಕ್ಷರವನ್ನು (ಬಹುಶಃ 9999 ಇರಬೇಕು) ನಮೂದಿಸಿದೆವು.

ಇಂಥ ಮಹಿಳೆಯರ ಸಂಖ್ಯೆಯೇ ಹೇರಳವಾಗಿರುವಾಗ ಎನ್‍ಆರ್‍ಸಿ ಸಮೀಕ್ಷೆಗೆ ಬರುವವರಿಗೆ ಸರಿಯಾದ ಉತ್ತರ, ಮಾಹಿತಿ ಹೇಗೆ ತಾನೆ ದೊರೆತೀತು? ಹಾಗೊಮ್ಮೆ ಸಮರ್ಪಕ ಮಾಹಿತಿ, ಉತ್ತರ ಸಿಗದಿದ್ದರೆ ಮುಂದೇನು?

ಹಿಂದು, ಸಿಖ್, ಬೌದ್ಧ, ಕ್ರಿಶ್ಚಿಯನ್ ವಲಸೆಗಾರರ ರಕ್ಷಣೆಗೆ ಸಿಎಎ ಇದೆ. ಆದರೆ ಮುಸ್ಲಿಮರಿಗೆ ಏನಿದೆ?

ಏನೂ ಇಲ್ಲ.

ಇಂಥವರಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ. ಆಗ ಅವರು ಅಪರಾಧಿಗಳೆನಿಸುತ್ತಾರೆ, ಪರದೇಶಿಗಳಾಗುತ್ತಾರೆ ಅಥವಾ ಕೆಲವು ಅಧಿಕಾರಿಗಳ ಮರ್ಜಿಗೆ ಒಳಗಾಗುತ್ತಾರೆ. ಅಂದರೆ ಇಂಥ ಪಾಪದವರ ಸ್ಥಾನಮಾನ ಏನು ಎಂಬುದು ಈ ಅಧಿಕಾರಿಗಳ ನಿರ್ಧಾರವನ್ನು ಅವಲಂಬಿಸಿರುತ್ತದೆ. ಇದು ಒಂಥರದ ಜೂಜಾಟ ಎಂಬುದು ನಮ್ಮಂಥ ಸಮೀಕ್ಷೆದಾರರಿಗೆ ಗೊತ್ತು.

ಈ ನಿಟ್ಟಿನಲ್ಲಿ ನೋಡುವುದಾದರೆ ಇದು ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ದ ವೈಖರಿಯಂತೂ ಅಲ್ಲ. ಇದು ಪೌರತ್ವದಂಥ ಪ್ರಮುಖ ಪ್ರಶ್ನೆಯನ್ನು ಆಧಿಕಾರಶಾಹಿಗಳ ಕೈಗೆ ಒಪ್ಪಿಸುವಂತಹ ಘೋರ ಪ್ರಮಾದದ ಕೆಲಸ. ನೀವು ಈ ದೇಶದ ಪೌರರಲ್ಲ ಎಂಬುದು ಸಮಿಕ್ಷೆಯ ಬಳಿಕ ಗೊತ್ತಾದರೆ… ಹಾಗಾದರೆ ಇಲ್ಲಿಯವರೆಗೆ ನಾನು ವಾಸಿಸಿದ್ದು ಎಲ್ಲಿ? ನೀನು ಇದುವರೆಗೆ ಇದ್ದ ಸ್ಥಳದಲ್ಲಿ ಇನ್ನುಮಂದೆ ಇರುವಂತಿಲ್ಲ. ಯಾರಿಗೂ ನೀನು ಬೇಡವಾದವ ಎಂದಾದರೆ ಏನರ್ಥ? ಇಂಥ ಹತ್ತು ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಯುವಜನರು ಆತಂಕಗೊಂಡಿರುವುದು ಹಾಗೂ ಕುಪಿತಗೊಂಡಿರುವುದು ಇದಕ್ಕೇ.

ಅಸ್ಸಾಂನಲ್ಲಿ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕಸರತ್ತು ನಡೆಯಿತು. ಆದರೆ ಅದರಿಂದ ದೊರೆತ ಫಲಿತಾಂಶವಾದರೂ ಏನು?

ಸರ್ಕಾರ ಇತರ ವಿಷಯವನ್ನೂ ಇಲ್ಲಿ ಗಮನಿಸಬೇಕು. ಪೌರತ್ವ ಕುರಿತಾದ ಚರ್ಚೆ ಹಾಗೂ ಸಂವಾದದಲ್ಲಿ ಸರಕಾರ ಸಾಬೀತುಪಡಿಸಲು ಹೊರಟಿರುವುದೇನೆಂದರೆ, ವಲಸೆಗಾರರು ದೇಶಕ್ಕೆ ಮಾರಕ ಮತ್ತು ಕಂಟಕ ಎಂಬುದು. ಅಸ್ಸಾಂನಲ್ಲಿ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕಸರತ್ತು ನಡೆಯಿತು. ಆದರೆ ಅದರಿಂದ ದೊರೆತ ಫಲಿತಾಂಶವಾದರೂ ಏನು? ಧರ್ಮ ಯಾವುದೇ ಆಗಿರಲಿ, ವಲಸೆ ಬಂದ ಎಲ್ಲರದೂ ಒಂದೇ ಸಮಸ್ಯೆ. ಅದೇನೆಂದರೆ ಪೌರತ್ವವನ್ನುಸಾಬೀತುಪಡಿಸಲು ಅವರಾರಿಗೂ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿಯೇ ಅಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಒಂದು ಶಾಪವಾಗಿದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ಅಪ್ರಿಯವಾಗಿದೆ.

ಇಷ್ಟು ದೊಡ್ಡ ಮಟ್ಟದ ಕಸರತ್ತು ನಡೆಸಿದರೂ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿಗರನ್ನು ಗುರುತಿಸಲು ಸಾಧ್ಯವಾಗಿಲ್ಲ. ಕಡಿಮೆ ಕೌಶಲ್ಯ ಹೊಂದಿರುವ ಅಥವಾ ಕೌಶಲ್ಯರಹಿತ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ವಲಸೆ ಬಂದರೆ ಅದು ಸ್ಥಳೀಯ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸರ್ಕಾರದ ಹೇಳಿಕೆ. ಆದರೆ ಈ ರೀತಿಯ ಸಮಸ್ಯೆ ಆಗಿಲ್ಲಎಂಬುದನ್ನು ನಾವು ಇತ್ತೀಚೆಗೆ ಬರೆದಿರುವ, ‘ಗುಡ್ ಎಕನಾಮಿಕ್ಸ್ ಫಾರ್ ಹಾರ್ಡ್ ಟೈಮ್ಸ್’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದೇವೆ.

ಈ ವರ್ಗದ ಜನರು ಈ ಪ್ರದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ವಲಸೆ ಬಂದ ಬಳಿಕವೂ ಇದೇ ವರ್ಗಕ್ಕೆ ಸೇರಿದ ಸ್ಥಳೀಯ ಆದಾಯದ ಮೇಲೆ ಹೇಳಿಕೊಳ್ಳುವಂಥ ಪರಿಣಾಮ ಬೀರಿಲ್ಲ. ಬದಲಾಗಿ ಇದನ್ನು ಎರಡು ಭಾಗಗಳಾಗಿ ನೋಡಬೇಕು. ಮೊದಲನೆಯ ಭಾಗವೆಂದರೆ- ಈ ಮಂದಿ ಸ್ಥಳೀಯರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಾರೆ ಎಂಬುದು. ಎರಡನೆಯದೂ ಗಮನಾರ್ಹ. ಅದೇನೆಂದರೆ ಈ ಜನರೂ ಸಹ ಆಹಾರ ಮತ್ತಿತರ ವಸ್ತುಗಳನ್ನು ಖರೀದಿಸಲು ಹಣ ಖರ್ಚು ಮಾಡುತ್ತಾರೆ. ಇದರಿಂದಾಗಿ ಸ್ಥಳೀಯವಾಗಿ ಆದಾಯ ಬರುತ್ತದೆ.

ಸರ್ಕಾರ ಸಾಕಷ್ಟು ಉದ್ಯೋಗ ಸೃಷ್ಟಿಸದಿರುವ ಪರಿಣಾಮವಾಗಿ ಮಧ್ಯಮವರ್ಗದ ಜನರೂ ಕೆಳಹಂತದ ಕೆಲಸಗಳಿಗೆ ಮುಗಿಬಿದ್ದಿದ್ದಾರೆ.

ಹೀಗೆ ಹೇಳಿದಾಗ ಜನರು ಮತ್ತೊಂದು ವಿಷಯವನ್ನು ಪ್ರಸ್ತಾಪಿಸುತ್ತಾರೆ. ಒಂದು ಸರ್ಕಾರಿ ನೌಕರಿ ಪಡೆಯಬೇಕೆಂಬುದು ಮಧ್ಯಮವರ್ಗದವರ ಕನಸು ಮತ್ತು ಹಂಬಲ. ಆದರೆ 2019ರ ವರದಿಯ ಪ್ರಕಾರ, ಲಭ್ಯ 1.9 ಕೋಟಿ ಸ್ಥಳೀಯ ಉದ್ಯೋಗಗಳಿಗೆ, 63,000 ಜನರು ಅರ್ಜಿ ಸಲ್ಲಿಸಿದ್ದರು. ಇವರೆಲ್ಲ ಮಧ್ಯಮವರ್ಗದವರು ಹಾಗೂ ಇವೆಲ್ಲ ಕೆಳಹಂತದ ಉದ್ಯೋಗಗಳು. ಆದರೆ ಸರ್ಕಾರ ಸಾಕಷ್ಟು ಉದ್ಯೋಗ ಸೃಷ್ಟಿಸದಿರುವ ಪರಿಣಾಮವಾಗಿ ಮಧ್ಯಮವರ್ಗದ ಜನರೂ ಕೆಳಹಂತದ ಕೆಲಸಗಳಿಗೆ ಮುಗಿಬಿದ್ದಿದ್ದಾರೆ. ಇವರು ಹೆಚ್ಚಿನ ವಿದ್ಯಾರ್ಹತೆ ಹಾಗೂ ಹೆಚ್ಚಿನ ಪ್ರಭಾವ ಹೊಂದಿರುವ ಕಾರಣ ಈ ಕೆಲಸಗಳು ಅವರ ಪಾಲಾಗುವ ಸಾಧ್ಯತೆಗಳೇ ಹೆಚ್ಚು. ಹೀಗಿರುವಾಗ ವಲಸಿಗರು ಸ್ಥಳೀಯ ಉದ್ಯೋಗಾವಾಕಾಶಗಳನ್ನು ಕಸಿದುಕೊಳ್ಳುತ್ತಾರೆ ಎಂಬ ವಾದಕ್ಕೇನು ಸಮರ್ಥನೆ?

ಅಷ್ಟಕ್ಕೂ ಇಷ್ಠೆಲ್ಲ ದ್ರಾವಿಡ ಪ್ರಾಣಾಯಾಮ ನಡೆದಿರುವುದು ಸ್ಥಳೀಕರಿಗೆ ಆರ್ಥಿಕ ನ್ಯಾಯ ಒದಗಿಸುವುದಕ್ಕೇ ಅಲ್ಲವೆ? ಹಾಗಾದರೆ ಅಲ್ಲೂ ಒಂದು ದೊಡ್ಡ ಸಮಸ್ಯೆ ಇದೆ. ವಿದೇಶೀಯರನ್ನು ಬಿಟ್ಟುಬಿಡಿ. ತಮಿಳುನಾಡಿಗೆ ಪಶ್ಚಿಮ ಬಂಗಾಳದಿಂದ ಕಾರ್ಮಿಕರು ಅಥವಾ ಇತರ ಜನರು ಕೆಲಸಕ್ಕಾಗಿ ಬಂದರೆ ಅವರು ಹೊರಗಿನವರಾಗುವುದಿಲ್ಲವೇ? ಅವರು ಸ್ಥಳೀಯರ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲವೇ? ಬೇರೆ ರಾಜ್ಯದ ಮತ್ತೊಬ್ಬ ಮುಂಬೈಗೆ ಕೆಲಸಕ್ಕೆ ಬರುವಂತಿಲ್ಲವೆ? ಮುಂಬೈನ ಕೆಲಸ ಮುಂಬೈ ಜನರಿಗೆ ಮಾತ್ರ ಎಂದರೆ ಹೇಗೆ? ಹೀಗಾಗಿ, ಈ ಸ್ಥಳೀಯ ಎಂಬ ಕಲ್ಪನೆಯನ್ನೇ ಗಂಟುಮೂಟೆ ಕಟ್ಟಿಕಳಿಸಬೇಕಿದೆ.

ಇದಕ್ಕೆಲ್ಲ ಪರಿಹಾರ ಎಂಬುದು ಇದ್ದೇ ಇದೆ ಹಾಗೂ ಅದು ಹೀಗಿದೆ: ಭಾರತವು ನಾಗರಿಕತೆಯ ಭಾರವನ್ನು ಕೊಂಚ ಹೆಚ್ಚಾಗಿ ಹೊರುವುದರಿಂದ ಇದು ಸಾಧ್ಯವಾಗಲಿದೆ. ಪ್ರಜಾಸತ್ತಾತ್ಮಕ, ಮುಕ್ತ, ಸಹನಶೀಲ ಹಾಗೂ ಒಳಗೊಳ್ಳುವಂಥ ರಾಷ್ಟ್ರೀಯ ಮಿಶನ್ ಒಂದನ್ನು ನಾವು ಕೈಗೊಂಡು ಅದಕ್ಕೆ ಎಲ್ಲರೂ ಸಹಿ ಹಾಕಿ ಎಂದು ಕೇಳುವುದು. ಹಿಂದು, ಸಿಖ್, ಕ್ರಿಶ್ಚಿಯನ್ನರಂತೆ ಅಹಮದೀಯರೂ ಪಾಕಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗಿದ್ದಾರೆ. ಅವರಿಗೂ ಭಾರತಕ್ಕೆ ತೆರೆದ ಹೃದಯದ ಸ್ವಾಗತವನ್ನೇಕೆ ಕೋರಬಾರದು? ಹಾಗೆಯೇ ಶ್ರೀಲಂಕಾದಲ್ಲಿ ಪಾಡುಪಡುತ್ತಿರುವ ಹಿಂದೂ ತಮಿಳರನ್ನೂ ಬನ್ನಿ ಎಂದು ನಾವೇಕೆ ಕರೆಯಬಾರದು? ನಾವು 130 ಕೋಟಿ ಭಾರತೀಯರಿದ್ದೇವೆ. ಇಂಥ ವಲಸಿಗರಿಂದಾಗಿ ಒಂದಷ್ಟು ಲಕ್ಷದಷ್ಟು ಜನಸಂಖ್ಯೆ ಹೆಚ್ಚಾದೀತು. ಆಗಲಿ, ಏನೀಗ? ಅಷ್ಟುಮಾತ್ರದ ಹೆಚ್ಚಿನ ಭಾರವನ್ನು ನಾವು ತಡೆದುಕೊಳ್ಳಬಹುದು. ತಡೆದುಕೊಳ್ಳಬೇಕು. ಆ ಜನರೂ ನಮ್ಮ ಜನರಲ್ಲಿ ಸಮ್ಮಿಳಿತಗೊಂಡುಬಿಡುತ್ತಾರೆ. ಆ ಧಾರಣ ಸಾಮಥ್ರ್ಯ ನಮ್ಮ ಭಾರತಕ್ಕೆ ಖಂಡಿತವಾಗಿಯೂ ಇದೆ.

* ಬ್ಯಾನರ್ಜಿ ಹಾಗೂ ಡಫ್ಲೋ ಅವರು ಸಾಗರೋತ್ತರ ಭಾರತೀಯ ನಾಗರಿಕರು ಮತ್ತು ಎಂಐಟಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರು. ಈ ದಂಪತಿ 2019ರ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. – ಕೃಪೆ: ದಿ ಇಂಡಿಯನ್ ಎಕ್ಸ್‍ಪ್ರೆಸ್

ಪೌರತ್ವ ವಿವಾದ:
ನಿಮ್ಮ ಸಮಾಜಮುಖಿ ಒಂದು ಹೆಜ್ಜೆ ಮುಂದೆ !

ಈಗ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಎಲ್ಲರೂ ಮಾತನಾಡುವವರೇ…

ಆದರೆ ನಿಮ್ಮ ನೆಚ್ಚಿನ “ಚಿಂತನಶೀಲ ಸಮಾಜಮುಖಿ” ಮಾಸಪತ್ರಿಕೆ ಕಳೆದ ವರ್ಷದ ಮಾರ್ಚ್ ತಿಂಗಳ ಸಂಚಿಕೆಯಲ್ಲಿಯೇ ಈ ಬಗ್ಗೆ ಮುಂದಾಲೋಚನೆಯಿಂದ ವಿಶ್ಲೇಷಣೆ ಮಾಡಿತ್ತು. ಆ ಲೇಖನದ ಮರು ಓದಿಗೆ ಇಲ್ಲಿನ ಕೋಡ್ ಸ್ಕ್ಯಾನ್ ಮಾಡಿ:

Leave a Reply

Your email address will not be published.