ಒಳಮೀಸಲಾತಿ ವಿವಾದ ಅಸ್ಪøಶ್ಯರ ಕಳವಳದ ಕಾರಣಗಳು

-ಹನುಮೇಶ್ ಗುಂಡೂರು

ಮೀಸಲಾತಿ ಹುಟ್ಟಿಗೆ ಕಾರಣವಾದ ಅಸ್ಪøಶ್ಯ ವರ್ಗ ಈಗ ಒಳಮೀಸಲಾತಿ ವರ್ಗೀಕರಣಕ್ಕಾಗಿ ಸುದೀರ್ಘ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಳಮೀಸಲಾತಿ ಎನ್ನುವುದು ಮೀಸಲಾತಿಯ ಮೂಲ ಆಶಯದ ವಿಸ್ತರಣೆಯಾಗಿದೆ; ಬುಟ್ಟಿಯಲ್ಲಿನ ಹಣ್ಣುಗಳು ಹಸಿದ ದುರ್ಬಲರಿಗೆ ಸಿಗದೆ ತಾಕತ್ತಿದ್ದವರ ಪಾಲಾಗಬಾರದು ಎಂದು ತೀರ್ಪು ನೀಡಿದೆ ಸುಪ್ರೀಂ ಕೋರ್ಟು.

ಕರ್ನಾಟಕದಲ್ಲಿ ಸದ್ಯ ಜೀವ ಉಳಿಸಿಕೊಳ್ಳಲು ಹೆಣಗಾಡುವÀ ಕೊರೋನಾದ ಕರಾಳ ದೃಶ್ಯಗಳಾಚೆ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಬೇಕು ಎಂಬ ಅರ್ಥದಲ್ಲಿ ಮೀಸಲಾತಿ ಚರ್ಚೆಗಳು ಮುನ್ನಲೆಗೆ ಬಂದಿವೆ. ನಾಯಕರು ಶೇ.7.5 ಮೀಸಲಿಗೆ ವಾಲ್ಮೀಕಿ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಆರಂಭಿಸಿದ್ದರೆ, ಕುರುಬರು, ಗೊಲ್ಲರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಎಂದು ಬೀದಿಗೆ ಬಂದು ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇವೆಲ್ಲದರ ಮಧ್ಯೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ, ಚರ್ಚೆ ಕೂಡಾ ಬಿರುಸಾಗಿದೆ.

ಒಳ ಮೀಸಲು ಅರ್ಥಾತ್ ಮೀಸಲಾತಿ ವರ್ಗೀಕರಣಕ್ಕೆ ಪರಿಶಿಷ್ಟÀರಲ್ಲಿನ 101 ಜಾತಿಗಳೇನೂ ಆಸಕ್ತಿ ವಹಿಸಿಲ್ಲ. ಮೀಸಲಾತಿ ಸೌಲಭ್ಯ ಇದ್ದರೂ ಇಲ್ಲಿ ನಾವು ಅಸ್ಪøಶ್ಯರಂತೆ ಇದ್ದೇವೆ ಎಂಬ ನೋವು ಮಾದಿಗ ಸಮುದಾಯಕ್ಕೆ ಇದೆ. ಉದ್ಯೋಗ ಮೀಸಲಾತಿಯಲ್ಲಿ ಸಿಂಹಪಾಲು ಭೋವಿ, ಲಂಬಾಣಿ ಹಾಗೂ ಹೊಲೆಯರು ಪಡೆಯುತ್ತಿದ್ದಾರೆ. ‘ನಾವು ಯಾರ ಅನ್ನವನ್ನು ಕಸಿಯುತ್ತಿಲ್ಲ, ಜನಸಂಖ್ಯೆ ಆಧಾರದಲ್ಲಿ ನಮಗೆ ಮೀಸಲಾತಿ ಕೊಡಿ’ ಎಂಬ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಸರ್ಕಾರದಲ್ಲಿ ಲಭ್ಯವಿರುವ ಎಲ್ಲ ಅಂಕಿ ಅಂಶಗಳನ್ನು ಸಂಗ್ರಹಿಸಿ ಸಮುದಾಯದ ಮುಂದೆ ಇಡುತ್ತಿದ್ದಾರೆ. ಹೋರಾಟಕ್ಕೊಂದು ತಾತ್ವಿಕ ಹಾಗೂ ಸಂಘಟನಾತ್ಮಕ ಸ್ಪರ್ಷ ನೀಡಿದ್ದಾರೆ.

ಅರುಣ್ ಮಿಶ್ರಾ ತೀರ್ಪು

ರಾಜಕೀಯವಾಗಿ ಸಂಕಷ್ಟ ಎದುರಾದಾಗ ಮಾತ್ರ ಒಳ ಮೀಸಲು ಚರ್ಚೆ ಕೈಗೆತ್ತಿಕೊಂಡು ಮತಗಳನ್ನು ಒಗ್ಗೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ ಮಾದಿಗ ಸಮುದಾಯದ ಮುಖಂಡರು ನಂತರ ಸುಮ್ಮನಾಗುತ್ತಿದ್ದರು.  ಆದರೆÀ ಕಳೆದ ಆಗಸ್ಟ್ 27ರಂದು ಸುಪ್ರಿಂ ಕೋರ್ಟ್‍ನ ಅರುಣ್ ಮಿಶ್ರಾ, ಇಂದಿರಾ ಬ್ಯಾನರ್ಜಿ, ವಿನೀತ್ ಶರಣ್, ಎಂ.ಆರ್.ಷಾ ಮತ್ತು ಅನಿರುದ್ಧ ಬೋಸ್ ಒಳಗೊಂಡ ಐದು ಮಂದಿ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಮಹತ್ವದ ಮಾನ್ಯತಾ ತೀರ್ಪು ನೀಡುವುದರ ಮೂಲಕ ಒಳಮೀಸಲು ಹೋರಾಟಗಳಿಗೆ ಮತ್ತೆ ಜೀವ ತುಂಬಿದ್ದಾರೆ. 78 ಪುಟಗಳ ಒಟ್ಟಾರೆ ತೀರ್ಪಿನಲ್ಲಿ ಪರಿಶಿಷ್ಟ ಜತಿಯವರಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ ಎಂಬ ಅಭಿಪ್ರಾಯ ಪ್ರಧಾನವಾಗಿ ಬಿಂಬಿತವಾಗಿರುವುದೇ ಮಾದಿಗ ಸಮುದಾಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಗೆ ಕಾರಣವಾಗಿದೆ.

ಆಂಧ್ರ ಪ್ರಕರಣದಲ್ಲಿ ಸೋಲಾಗಿತ್ತು

ಹಿಂದೊಮ್ಮೆ ಆಂಧ್ರ ಪ್ರದೇಶದಲ್ಲಿ ಕೃಷ್ಣ ಮಾದಿಗ ನೇತೃತ್ವದಲ್ಲಿ ಮಾದಿಗ ದಂಡೋರ ಸಂಘಟನೆ ಹುಟ್ಟಿಕೊಂಡು ಒಳಮೀಸಲಾತಿ ಅಗತ್ಯ ಪ್ರತಿಪಾದಿಸಿತ್ತು. ಪರಿಣಾಮ ಆಂಧ್ರ ಸರ್ಕಾರ ಜಸ್ಟೀಸ್ ಪಿ.ರಾಮಚಂದ್ರರಾಜು ನೇತೃತ್ವದಲ್ಲಿ ಒಳಮೀಸಲಾತಿ ಆಯೋಗ ರಚಿಸಿತು. ವೈಜÁ್ಞನಿಕವಾಗಿ ಅಧ್ಯಯನ ಮಾಡಿದ ಆಯೋಗ ಪರಿಶಿಷ್ಟ ಜತಿಯಲ್ಲಿ ಜನಸಂಖ್ಯೆವಾರು ಮೀಸಲಾತಿ ನೀಡುವುದು ಸಂವಿಧಾನಬದ್ಧ ಹಕ್ಕು ಎಂದು ತಿಳಿಸಿತು. ಈ ವರದಿಯನ್ನಾಧರಿಸಿ ಮೊದಲ ಬಾರಿಗೆ ಆಂಧ್ರದಲ್ಲಿ ಒಳಮೀಸಲು ಜಾರಿಗೆ ತರಲಾಗಿತ್ತು.

ಒಳಮೀಸಲು ಪ್ರಶ್ನಿಸಿ ಆಂಧ್ರದ ಇ.ವಿ.ಚಿನ್ನಯ್ಯ ಎಂಬುವವರು ಸರ್ವೋಚ್ಚ ನ್ಯಾಯಲಯದ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ಜಸ್ಟೀಸ್ ಸಂತೋಷ್ ಹೆಗ್ಡೆ ನೇತೃತ್ವದ ಪಂಚಪೀಠ 2005ರಲ್ಲಿ ನೀಡಿದ ತೀರ್ಪು ಮಾದಿಗ ಸಮುದಾಯಕ್ಕೆ ವ್ಯತಿರಿಕ್ತವಾಗಿತ್ತು. ಪರಿಶಿಷ್ಟ ಜÁತಿಗಳ ಪಟ್ಟಿಯು ಅಸ್ಪಶ್ಯತೆಯ ಅತ್ಯಂತ ಹಿಂದುಳಿಯುವಿಕೆÀ ಆಧರಿಸಿದ ವರ್ಗೀಕರಣವಾದ್ದರಿಂದ ಅದರೊಳಗೆ ಸೇರ್ಪಡೆಯಾಗಿರುವ ಎಲ್ಲ ಜÁತಿಗಳು ಏಕರೂಪಿಯಾಗಿ ಸಾಮಾಜಿಕ ಅಸಮಾನತೆಗೆ ಗುರಿಯಾಗಿವೆ. ಪರಿಶಿಷ್ಟ ಜÁತಿಗಳಲ್ಲಿ ಮೀಸಲು ವರ್ಗೀಕರಿಸಿದರೆ ಮತ್ತೆ ಅಸಮಾನತೆಯಲ್ಲಿ ಅಸಮಾನತೆ ಉಂಟಾಗುತ್ತದೆ. ಸಂವಿಧಾನದ ವಿಧಿ 341(1) ಮತ್ತು 342(1) ರ ಪ್ರಕಾರ ಮೀಸಲಾತಿ ವರ್ಗೀಕರಣ ಮಾಡುವುದು ಮತ್ತು ಪರಿಶಿಷ್ಟ ಜÁತಿ ಪಟ್ಟಿಯಿಂದ ಯಾವುದೇ ಜಾತಿ ತೆಗೆಯಲು ಮತ್ತು ಸೇರಿಸಲು ಸಂಸತ್ತು, ರಾಷ್ಟ್ರಪತಿಗಳಿಗೆ ಮಾತ್ರ ಅಧಿಕಾರವಿದೆ; ರಾಜ್ಯ ಸರ್ಕಾರಗಳ ಅಧಿಕಾರದ ವ್ಯಾಪ್ತಿಗೆ ಬರುವುದಿಲ್ಲವೆಂಬ ಅಂಶವನ್ನು  ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ಇದು ಸ್ಪಷ್ಟವಾಗಿ ಸಂವಿಧಾನ ಉಲ್ಲಂಘನೆ ಎಂದು ತಿಳಿಸಿ ಆಂಧ್ರ ಸರ್ಕಾರ ನೀಡಿದ್ದ ಒಳಮೀಸಲಾತಿಯನ್ನು ರದ್ದುಪಡಿಸಿತ್ತು.

ಪಂಜಾಬಿನಲ್ಲೂ ನೀಡಲಾಗಿತ್ತು

ಪಂಜÁಬ್ ಸರ್ಕಾರ ಪರಿಶಿಷ್ಟ ಜÁತಿಗಳಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ಒಳಮೀಸಲಾತಿ ನೀಡಿದ್ದರ ವಿರುದ್ಧ ದವಿಂದರ್ ಸಿಂಗ್ ಎಂಬುವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಜಸ್ಟೀಸ್ ಅರುಣ್ ಕುಮರ್ ಮಿಶ್ರಾ ನೇತೃತ್ವದ ಪಂಚಪೀಠ ಆಗಸ್ಟ್ 27ರಂದು ನೀಡಿದ ತೀರ್ಪಿನಲ್ಲಿ ಪರಿಶಿಷ್ಟ ಜÁತಿಯವರಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಪರಿಶಿಷ್ಟ ಜÁತಿಗಳ ಪಟ್ಟಿ ಏಕ ಸ್ವರೂಪದ ಸಮುದಾಯವಲ್ಲ ಎಂದು ಅನೇಕ ರಾಜ್ಯಗಳ ನ್ಯಾಯಿಕ ಆಯೋಗಗಳ ದಾಖಲೆಗಳು ಹೇಳುತ್ತವೆ. ಒಳಮೀಸಲಾತಿಯನ್ನು ನಿರಾಕರಿಸುವುದು ಅಸಮಾನರ ನ್ಯಾಯದ ಭಾಗವೇ ಆಗಿದೆ. ಮೀಸಲಾತಿಯ ನ್ಯಾಯೋಜಿತ ಹಂಚಿಕೆ ಸಾಮಾಜಿಕ ನ್ಯಾಯದ ಭಾಗವೇ ಆಗಿದೆ. ಒಳಮೀಸಲಾತಿ ಎನ್ನುವುದು ಮೀಸಲಾತಿಯ ಮೂಲ ಆಶಯದ ವಿಸ್ತರಣೆಯಾಗಿದೆ. ಬುಟ್ಟಿಯಲ್ಲಿನ ಹಣ್ಣುಗಳು ಹಸಿದ ದುರ್ಬಲರಿಗೆ ಸಿಗದೆ ತಾಕತ್ತಿದ್ದವರ ಪಾಲಾಗಬಾರದು ಎಂದು ತೀರ್ಪು ನೀಡಿತು.

ಇದೇ ಅಂತಿಮವಲ್ಲ

ಈ ತೀರ್ಪು ಇ.ವಿ.ಚಿನ್ನಯ್ಯ ಪ್ರಕರಣ ಮರುಪರಿಶೀಲಿಸುವ ಅಗತ್ಯವನ್ನು ಪ್ರತಿಪಾದಿಸಿತ್ತು. ಜಸ್ಟೀಸ್ ಸಂತೋಷ್ ಹೆಗ್ಡೆ ನೇತೃತ್ವದ ಪೀಠ ಐದು ಮಂದಿ ನ್ಯಾಯಾಧೀಶರನ್ನು ಒಳಗೊಂಡಿತ್ತು. ಅದೇ ರೀತಿ ಜಸ್ಟೀಸ್ ಅರುಣ್‍ಕುಮಾರ್ ಮಿಶ್ರ್ರಾ ನೇತೃತ್ವದ ಪೀಠ ಕೂಡ ಐವರು ನ್ಯಾಯಾಧೀಶರನ್ನು ಒಳಗೊಂಡಿರುವುದರಿಂದ ಸಮಾನಾಂತರ ಪೀಠದ ತೀರ್ಪುಗಳು ವಿಮರ್ಶೆಗೆ ಒಳಪಟ್ಟು  ಊರ್ಜಿತವಾಗುವುದಿಲ್ಲ. 

ಚಿನ್ನಯ್ಯ ಪ್ರಕರಣದ ತೀರ್ಪು ಮರುಪರಿಶೀಲನೆÀಗೆ ಒಳಪಡಬೇಕಾದರೆ ಐದಕ್ಕಿಂತÀ ಜಾಸ್ತಿ ಆಂದರೆ ಏಳು ಅದಕ್ಕಿಂತ ಹೆಚ್ಚಿನ ನ್ಯಾಯಾಧೀಶರ ಪೀಠ ರಚನೆಯಾಗಿ ಅಲ್ಲಿ ಒಳಮೀಸಲಾತಿ ಚರ್ಚೆಗೆ ಬರಬೇಕಿದೆ. ಕೇಂದ್ರ ಸರ್ಕಾರ ಹಾಗೂ ಸುಪ್ರಿಂ ಕೋರ್ಟ್ ಎಷ್ಟು ಬೇಗ ಏಳು ಇಲ್ಲವೇ ಅದಕ್ಕಿಂತ ಹೆಚ್ಚಿನ ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ರಚನೆ ಮಾಡುತ್ತದೆಯೋ ಅಷ್ಟು ಬೇಗ ಮೀಸಲು ವರ್ಗೀಕರಣದ ಹಕ್ಕೊತ್ತಾಯಗಳು ಇತ್ಯರ್ಥವಾಗುತ್ತವೆ.

ವರ್ಗೀಕರಣ ಏಕೆ ಬೇಕು?

ಈಗಾಗಲೇ ಅಸ್ಪೃಶ್ಯ ವರ್ಗಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದೆ ಬಿದ್ದಿವೆ. ಅಸ್ಪೃಶ್ಯರನ್ನು ಸಾಮಾಜಿಕ ಅಸಮಾನತೆ ಪಿಡುಗಿಗೆ ಬಲಿ ಮಾಡಿ ದೂರ ತಳ್ಳುತ್ತ ಬರಲಾಗಿದೆ. ರಾಜಕೀಯ ಪಕ್ಷಗಳು ಟಿಕೆಟ್ ನೀಡುವ ಸಂದರ್ಭದಲ್ಲಿ ಮತಗಳಿಗೆ ಲೆಕ್ಕಾಚಾರ ಆಧರಿಸಿ ಸ್ಪøಶ್ಯ ಜನಾಂಗಕ್ಕೆ ಪ್ರಾತಿನಿಧ್ಯ ನೀಡುತ್ತಿವೆ. ಮಾದಿಗ ಜನಾಂಗದ ಮತಗಳು 50 ಸಾವಿರದಷ್ಟಿದ್ದರೂ ಕೇವಲ 10 ಸಾವಿರ ಇರುವ ಲಂಬಾಣಿ, ಭೋವಿ ಜನಾಂಗದ ಶಾಸಕರನ್ನು ಆಯ್ಕೆ ಮಾಡಲಾಗುತ್ತದೆ.

ಕೆಳ ಹಂತದ ಚುನಾವಣೆಯಲ್ಲಿ ಸ್ಪøಶ್ಯ ಜನಾಂಗದ ಒಂದೇ ಮನೆ ಇದ್ದರೂ ಅವರನ್ನು ಗೆಲ್ಲಿಸುವುದರ ಮೂಲಕ ಬಹಿರಂಗ ಅಸ್ಪೃಶ್ಯತೆ ಆಚರಿಸಲಾಗುತ್ತದೆ. 2013ರ ಚುನಾವಣೆಯಲ್ಲಿ ಸ್ಪøಶ್ಯ ಜನಾಂಗಕ್ಕೆ ಸೇರಿದ ಗೂಳಿಹಟ್ಟಿ ಶೇಖರ್ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದು ಬರುತ್ತಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಮೀಸಲು ಕ್ಷೇತ್ರದಲ್ಲಿ ಸೊಲುತ್ತಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಗುಲ್ಬರ್ಗ ಲೋಕಸಭೆ ಕ್ಷೇತ್ರದಲ್ಲಿ  ಮಲ್ಲಿಕಾರ್ಜುನ ಖರ್ಗೆ ಸ್ಪøಶ್ಯ ಜÁತಿಯ (ಲಂಬಾಣಿ) ಉಮೇಶ್ ಜÁಧವ್ ವಿರುದ್ಧ ಸ್ಪರ್ಧೆ ಮಾಡಿ 95,452 ಮತಗಳ ಅಂತರದಿಂದ ಸೋತರು. ಇದು ಸಾಮಾಜಿಕ ಅಸಮಾನತೆಗೆ ಹಿಡಿದ ಕೈಗನ್ನಡಿ.

ಅಸ್ಪೃಶ್ಯತೆಯ ತೋಳಲಾಟಕ್ಕೆ ಮಾದಿಗ-ಹೊಲೆಯರು ಬೆಂದಿದ್ದಾರೆ. ಶೇ.18 ಮೀಸಲಾತಿಯಲ್ಲಿ ಬರುವ ಸ್ಪøಶ್ಯ ಜನಾಂಗದವರು ಕೂಡ ಇವರನ್ನು ತಮ್ಮ ಮನೆಯೊಳಗೆ ಬಿಟ್ಟುಕೊಳ್ಳವುದಿಲ್ಲ. ಮೀಸಲಾತಿ ಹುಟ್ಟಿಗೆ ಕಾರಣವಾದ ಅಸ್ಪøಶ್ಯ ವರ್ಗದವರು ಈಗ ಮೀಸಲಾತಿ ವಂಚನೆಗೆ ಒಳಗಾಗಿ ಒಳಮೀಸಲಾತಿ ವರ್ಗೀಕರಣಕ್ಕಾಗಿ ಸುದೀರ್ಘ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಅಸ್ಪøಶ್ಯತೆ ಸಾಮಾಜಿಕ ಅಸಮಾನತೆ ತಾಂಡವಕ್ಕೆ ಮಾದಿಗರು ಹೊಲೆಯರು ಮತ್ತು ಸಂಬಂಧಿಸಿದ ಒಟ್ಟು 79 ಜÁತಿಗಳು ಬಲಿಯಾಗಿವೆ. ಅಸ್ಪøಶ್ಯತೆಯ ಸೋಂಕು ಬಡಿಯದ ಸ್ಪøಶ್ಯ ಜನಾಂಗಗಳು 1976ರಲ್ಲಿ ಹಾವನೂರು ಆಯೋಗದ ಮೂಲಕ ಒಳನುಸುಳಿಕೊಂಡಿದ್ದಾರೆ. ಸದಾಶಿವ ಆಯೋಗದ ವರದಿಯನ್ನು ಸ್ಪøಶ್ಯ ವರ್ಗ ವಿರೋಧ ಮಾಡುತ್ತಿರುವುದು ಏಕೆ? ಎಂಬ ಅಂಶ ಸ್ಪಷ್ಟವಾಗಿದೆ. ಹೆರಿಗೆ ನೋವು ಗರ್ಭಿಣಿಗೆ ಗೊತ್ತಲ್ಲದೇ ಸೂಲಗಿತ್ತಿಗದು ಬಾಧಿಸುವುದಿಲ್ಲ.

ಸದಾಶಿವ ಆಯೋಗದ ವರದಿ

ಸದಾಶಿವ ಆಯೋಗ ವರದಿ ತಯಾರಿಸಲು ವಿದ್ಯೆಉದ್ಯೋಗ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಕುರಿತು ಸಮಗ್ರ ಅಧ್ಯಯನ ಕೈಗೊಳ್ಳಲಾಗಿತ್ತು. ಅನೇಕ ಪ್ರಶ್ನಾವಳಿಗಳನ್ನು ತಯಾರಿಸಿಕೊಂಡು ಮನೆಮನೆಗೆ ಹೋಗಿ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಶೈಕ್ಷಣಿಕ ಸಂಸ್ಥೆಗಳು, ಸಂಘಟನೆಗಳ ಸಭೆ ಕರೆದು ಪ್ರಾಥಮಿಕ, ದ್ವಿತೀಯ ದತ್ತಾಂಶವನ್ನು ವರದಿಯಲ್ಲಿ ಕಲೆಹಾಕಿದ್ದಾರೆ. ಉದ್ಯೋಗ ವಲಯ, ಕೃಷಿಭೂಮಿ, ಹಲವು ಆಯಾಮಗಳ ಸಂಗ್ರಹಿಸಿದ ಅಂಕಿ ಅಂಶಗಳನ್ನು ವರದಿ ಒಳಗೊಂಡಿದೆ. ಜನಸಂಖ್ಯೆ ಆಧಾರಿತ ಮೀಸಲು ವರ್ಗೀಕರಣಕ್ಕೆ ಸದಾಶಿವ ಆಯೋಗದ ವರದಿ ಅಡಿಪಾಯ ಎನ್ನಲಾಗುತ್ತಿದೆ.

ಸದಾಶಿವ ಆಯೋಗದ ವರದಿ ಬಹಿರಂಗಗೊಂಡಿಲ್ಲ, ಶಾಸನ ಸಭೆಯಲ್ಲಿ ಮಂಡನೆಯಾಗಿಲ್ಲ. ಆದರೂ ಅದೊಂದು ಅವೈe್ಞÁನಿಕವೆಂಬ ಕೂಗು ಎದ್ದಿದೆ.

ನೋವುಂಡ ಜನರಾದ ಡೋಹರ್ ದಕ್ಕಲಿಗ, ಮೊಚಿ, ಸಮಗಾರ ಇಂತಹ ಸೂಕ್ಷ್ಮ ಅತಿಸೂಕ್ಷ್ಮ ಸಮುದಾಯಗಳಿಗೆ ಸರ್ಕಾರಿ ಮೀಸಲಾತಿ ಸೌಲಭ್ಯಗಳ ವಾಸನೆ ಕೂಡ ತಾಕಿಲ್ಲ. ತೀರಾ ನಿಕೃಷ್ಟ ಪರಿಸ್ಥಿತಿಯಲ್ಲಿ ಬದುಕು ದೂಡುತ್ತಿದ್ದಾರೆ. ಈ ವರ್ಗಗಳಿಗೆ ರಾಜಕೀಯ ಅಧಿಕಾರ ಎನ್ನುವುದು ದೂರದ ಮಾತು. ಇಂತಹ ಸಮುದಾಯಗಳಿಗೆ ಅವರವರ ಪಾಲಿನ ಮೀಸಲಾತಿ ಸಿಗಲೆಂದು ಕಳೆದ ಇಪ್ಪತ್ತೈದು ವರ್ಷಗಳ ಸುದೀರ್ಘ ಕಾಲ ಮಾದಿಗರು ಹೋರಾಟ ಮುನ್ನಡೆಸಿಕೊಂಡು ಬಂದಿದ್ದಾರೆ.

ಸದಾಶಿವ ವರದಿ ಹೂರಣ

ದಲಿತರ ಶೇ.15ರ ಮೀಸಲಾತಿಯಲ್ಲಿ ಅನ್ಯಾಯಕ್ಕೆ ಒಳಗಾದ, ಸಾಮಾಜಿಕ ಅಸ್ಪøಶ್ಯತೆಯಿಂದ ನೊಂದ ಬೆಂದ ವರ್ಗಗಳಿಗೆ ಸಂವಿಧಾನದ ಆಶಯದಂತೆ ಜನಸಂಖ್ಯೆ ಆಧಾರಿತ, ಮಿಸಲಾತಿ ಕಲ್ಪಿಸುವ ವೈಜÁ್ಞನಿಕ ಅಂಶ ಜಸ್ಟಿಸ್ ಸದಾಶಿವ ಆಯೋಗ ವರದಿ ಶಿಫಾರಸ್ಸಿನಲ್ಲಿದೆ ಎಂದು ಹೇಳಲಾಗುತ್ತಿದೆ. ಶೇ. 15 ಮೀಸಲಾತಿಯಲ್ಲಿ ಪ.ಜÁತಿ ಪಟ್ಟಿಯಲ್ಲಿ ಒಟ್ಟು 101 ಜÁತಿಗಳಿವೆ. ಅದರಲ್ಲಿ ಮಾದಿಗ ಸಂಬಂಧಿಸಿದ ಜÁತಿಗಳು 49 (ಶೇ.6) ಮೀಸಲಾತಿ ಹಂಚಿಕೆ ಹೊಲೆಯ ಸಂಬಂಧಿಸಿದ ಜÁತಿಗಳು 29 (ಶೇ. 5) ಲಂಬಾಣಿ, ಭೋವಿ, ಕೊರಚ (ಶೇ.3), ಅಲೆಮಾರಿ ಅಥವಾ ಮತಾಂತರ ಹೊಂದಿದ ಜÁತಿಗಳಿಗೆ ಶೇ.1 ರಷ್ಟನ್ನು ಪ್ರಸ್ತಾಪಿಸಲಾಗಿದೆ. ಒಟ್ಟಾರೆ 101 ಜÁತಿಗಳಿಗೆ ಸಮಾನ ಹಂಚಿಕೆ ಮಾಡಲಾಗಿದೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಸದಾಶಿವ ಆಯೋಗದ ವರದಿಯ ಸಂಪೂರ್ಣ ಮಾಹಿತಿ ಇದೆ.  ನಿಜವಾದ ಶೋಷಿತ ವರ್ಗ ಯಾರು ಎಂದು ಎಲ್ಲರಿಗೂ ಗೊತ್ತಿದೆ. ಯಾವ ಪಕ್ಷಗಳೂ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಚುನಾವಣೆ ವೇಳೆ ಸ್ಪøಶ್ಯ ಜನಾಂಗಕ್ಕೆ ಸೇರಿದವರಿಗೆ ಹೆಚ್ಚು ಸೀಟುಗಳನ್ನು ಕೊಡುತ್ತಿದ್ದಾರೆ. ದಲಿತರಲ್ಲಿ ಬಹು ಸಂಖ್ಯಾತರಾದ ಒಂದು ಕೋಟಿ ಹತ್ತಿರ ಇರುವ ಅಸ್ಪøಶ್ಯ ಜನಾಂಗದ ನಾಯಕರು ಈ ಪಕ್ಷಗಳ ಅಡಿಯಾಳಾಗಿ ತಮ್ಮ ಸಮುದಾಯಗಳಿಗೆ ಮಾರಕವಾಗಿ ಪರಿಣಮಿಸಿದ್ದಾರೆ. 

ಸದಾಶಿವ ಆಯೋಗ ವರದಿ ತಯಾರು ಮಾಡಲು ಅಧ್ಯಕ್ಷರ ನೇಮಕ ಮಾಡಿದ್ದು ಅಂದಿನ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇದಕ್ಕಾಗಿ ಬಿಜೆಪಿ ಸರ್ಕಾರ ಹಣಕಾಸು ನೀಡಿದೆ. ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿ ಜಾರಿ ವಿಷಯ ಸೇರಿಸಿಕೊಂಡಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು 36 ಮೀಸಲು ಕ್ಷೇತ್ರಗಳಲ್ಲಿ ಕೊಟ್ಟಿರುವ ಟಿಕೆಟ್ ಆಘಾತಕಾರಿ ಸಂಗತಿ ಹೊರ ಹಾಕುತ್ತದೆ. ಮೂರೂ ಪಕ್ಷಗಳು ಕೊಟ್ಟ ಒಟ್ಟು ಟಿಕೆಟ್‍ಗಳು 108 (36 ಇಂಟು 3). ಆದರೆ ಮಾದಿಗರಿಗೆ ಇದರಲ್ಲಿನ ಪಾಲು 21 ಟಿಕೆಟ್ ಗಳು ಮಾತ್ರ. ಮಾದಿಗರಿಗೆ ಕಾಂಗ್ರೆಸ್ 8, ಬಿಜೆಪಿ 10, ಜೆಡಿಎಸ್ 3 ಟಿಕೆಟ್ ಕೊಟ್ಟಿವೆ. ಕಾಂಗ್ರೆಸ್ ಮಾದಿಗರಿಗೆ ಕೊಟ್ಟ ಕ್ಷೇತ್ರದಲ್ಲಿ ಕೆಲವು ಕಡೆ ಬಿಜೆಪಿ ಕೂಡಾ ಮಾದಿಗರನ್ನು ಕಣಕ್ಕಳಿಸಿದೆ. ಮಾದಿಗರು 40 ಸಾವಿರ ಮತದಾರರು ಹೊಂದಿರುವ ಕ್ಷೇತ್ರಗಳಾದ ಹಾವೇರಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಲಿಂಗಸೂಗುರು ಕಡೆ ಸ್ಪøಶ್ಯ ಜÁತಿಗಳಾದ ಲಂಬಾಣಿ, ಬೋವಿಗಳಿಗೆ ಮೂರು ಪಕ್ಷಗಳು ಟಿಕೆಟ್ ಕೊಟ್ಟಿದ್ದು ಜÁತಿ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸದ್ಯ ಪರಿಶಿಷ್ಟ ಜÁತಿ ಮಾದಿಗರ ಶಾಸಕರು -6, ಹೊಲೆಯರು -16, ಬೋವಿ (ವಡ್ಡರ)-7, ಲಂಬಾಣಿ-7 ಮಂದಿ ಇದ್ದಾರೆ.

ಆಂಧ್ರ ಪ್ರದೇಶ ಸರ್ಕಾರ 2013ರಲ್ಲಿ ಜಿಲ್ಲಾವಾರು ಪರಿಶಿಷ್ಟ ಜÁತಿಗಳ ಅವರವರ ಜನಸಂಖ್ಯೆಗೆ ಅನುಗುಣವಾಗಿ ಹಣಕಾಸು ನಿಗದಿ ಮಾಡಿ ಸೌಲಭ್ಯಗಳನ್ನು ಒದಗಿಸಲು ಆದೇಶ ಮಾಡಿ ಈಗಾಗಲೇ ಅನುಷ್ಠಾನಕ್ಕೆ ತಂದಿದೆ. ಪಕ್ಕದ ತಮಿಳುನಾಡಿನ ಸರ್ಕಾರ 2009ರಲ್ಲಿ ಪರಿಶಿಷ್ಟ ಜÁತಿ ಮೀಸಲಾತಿಯಲ್ಲಿ ಜನಸಂಖ್ಯೆವಾರು ಮೀಸಲಾತಿ ವರ್ಗೀಕರಣ ಮಾಡಿದೆ.

ಒಟ್ಟು ದಲಿತರ ಶೇ. 18 ಮೀಸಲಾತಿಯಲ್ಲಿ ಅರುಂಧತಿಯಾರ್, ಚಕ್ಕಲಿಯನ್ ಜÁತಿಗಳಿಗೆ ಶೇ. 3 ಒಳಮೀಸಲಾತಿ ಕಲ್ಪಿಸಿದೆ. ಇದು ಇಂದಿಗೂ ಜÁರಿಯಲ್ಲಿದೆ. ಅಂದಿನ ಕರುಣಾನಿಧಿ ಸರ್ಕಾರ ಶೋಷಿತ ವರ್ಗದ ಪರವಾದ ರಾಜಕೀಯ ಇಚ್ಛಾಶಕ್ತಿ ಪರಿಣಾಮವಾಗಿ ಇವತ್ತಿಗೂ ಸೌಲಭ್ಯಗಳನ್ನು ಸಮಾನವಾಗಿ ಹಂಚಲಾಗುತ್ತದೆ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಾಗಿದೆ.

ಕಾಗೆ-ಕೋಳಿಗಳು ಹಂಚಿಕೊಂಡು ತಿನ್ನುವಾಗ ಬುದ್ಧಿವಂತಜೀವಿ ಮನುಷ್ಯ ಮಾತ್ರ ಒಳಮೀಸಲಾತಿ ವಿಚಾರದಲ್ಲಿ ಮಾನವೀಯತೆ ಪ್ರದರ್ಶಿಸದಿರುವುದು ಬೇಸರದ ಸಂಗತಿ.

*ಲೇಖಕರು ವೃತ್ತಿಯಿಂದ ವಕೀಲರು, ದಲಿತ ಚಳವಳಿಯಲ್ಲಿ ಸಕ್ರಿಯರು; ಒಳಮೀಸಲಾತಿ ಪ್ರತಿಪಾದಕರು.

 

ಸಂಯಮ, ಔದಾರ್ಯ, ಸ್ವಾಭಿಮಾನ

ಮೀಸಲಾತಿಗೆ ಸಾಂವಿಧಾನಿಕ ಅವಕಾಶ ಕಲ್ಪಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರು ಇದನ್ನು ಹತ್ತು ವರ್ಷಗಳ ಕಾರ್ಯಕ್ರಮವಾಗಿ ಹೇಳಿದ್ದರೂ 70 ವರ್ಷಗಳ ನಂತರವೂ ಮುಂದುವರೆದಿರಲು ಮುಖ್ಯ ಕಾರಣಗಳು ಎರಡು:

ಒಂದು, ಮೀಸಲಾತಿಯ ಮೂಲ ಆಶಯವಾದ ಸಾಮಾಜಿಕ ನ್ಯಾಯ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ. ಎರಡನೆಯದು, ಮೀಸಲಾತಿಯ ಸೌಲಭ್ಯ ಅಗತ್ಯವಿರುವ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುತ್ತಿಲ್ಲ.

ಇದೇ ಹಿನ್ನೆಲೆಯಲ್ಲಿ ಒಳಮೀಸಲಾತಿ ವಿಷಯ ಮುನ್ನೆಲೆಗೆ ಬಂದಿರುವುದು. ಸಾಮಾಜಿಕ ನ್ಯಾಯಕ್ಕಾಗಿ ಸಾಕಷ್ಟು ದೀರ್ಘಕಾಲ ಸಂಘಟಿತವಾಗಿ ಶ್ರಮಿಸಿದ್ದ ವರ್ಗಗಳು ಪರಸ್ಪರ ಮುಖಾಮುಖಿಯಾಗುವ ಸನ್ನಿವೇಶ ಏರ್ಪಟ್ಟಿರುವುದು ಅನಪೇಕ್ಷಣೀಯ ಬೆಳವಣಿಗೆ.

ಇಂತಹ ಸನ್ನಿವೇಶದಲ್ಲಿ ಸರ್ಕಾರ ತೆಗೆದುಕೊಳ್ಳಬಹುದಾದ ತೀರ್ಮಾನಕ್ಕಿಂತ ಅತ್ಯಂತ ಮಹತ್ವಯುತವಾದದ್ದು, ಈಗ ನಿರ್ಣಾಯಕವಾದದ್ದು ದಮನಿತ ಸಮುದಾಯದ ಸಂಯಮ, ಔದಾರ್ಯ ಮತ್ತು ಸ್ವಾಭಿಮಾನ.

ಸಂಯಮವೆಂದರೆ ಆಯೋಗದ ವರದಿಯನ್ನು ಅಭಿಪ್ರಾಯಭೇದಗಳಿಗೆ, ಪ್ರತಿಭಟನೆಗಳಿಗೆ ಅವಕಾಶವಾಗದಂತೆ ಸ್ವೀಕರಿಸುವ ಮನೋಭಾವ. ಔದಾರ್ಯವೆಂದರೆ ಗಣತಿಯ ಸಂದರ್ಭದಲ್ಲಿ ತಾಂತ್ರಿಕವಾಗಿ ಆಗಿರುವ ಸಣ್ಣಪುಟ್ಟ ತಪ್ಪುಗಳನ್ನು ಪ್ರಧಾನವಾಗಿಸದಿರುವುದು. ಸ್ವಾಭಿಮಾನವೆಂದರೆ ಸಮುದಾಯದಲ್ಲಿ ತಾನು ಒಮ್ಮೆ ಮೀಸಲಾತಿಯ ಅವಕಾಶ ಪಡೆದ ನಂತರ ನಾನಾಗಿಯೇ ನನ್ನ ಕುಟುಂಬವನ್ನು ಮೀಸಲಾತಿಯ ಪರಿಧಿಯಿಂದ ಹೊರಕ್ಕೆ ತಂದು ಉಳಿದವರಿಗೆ ಅವಕಾಶ ಒದಗಿಸುವ ಕೆಚ್ಚಿನ ಭಾವ.

ಈ ಮೂರೂ ಅನುಷ್ಠಾನಕ್ಕೆ ಬರಬೇಕಾದರೆ ಉಲ್ಲೇಖಿತ ಸಮುದಾಯಗಳಲ್ಲಿ ಇರುವ ಪ್ರಜ್ಞಾವಂತ ವರ್ಗ ಈ ನಿಟ್ಟಿನಲ್ಲಿ ಕ್ರಿಯಾತ್ಮಕ ಪಾತ್ರ ನಿರ್ವಹಿಸುವುದು ಅನಿವಾರ್ಯ.

-ಹರಿಪ್ರಸಾದ್ ಸಿಂಹ

Leave a Reply

Your email address will not be published.