ಓದುಗ ಬಂಧುಗಳಲ್ಲಿ ಒಂದು ಬಿನ್ನಹ

ಎರಡು ಕನಿಷ್ಟ ಹೆಚ್ಚಿಗೆ ನಿಮ್ಮಿಷ್ಟ

ಪ್ರಿಯರೇ,

ನಮಸ್ಕಾರ. ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ನಿಜ ಹೇಳಬೇಕೆಂದರೆ ನಿಮ್ಮನ್ನು ಕೇವಲ ಓದುಗರಾಗಿ ಗುರುತಿಸಲು ಅಥವಾ ಚಂದಾದಾರರೆಂದು ಕರೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ; ಗ್ರಾಹಕರೆಂದು ಭಾವಿಸಲಂತೂ ಸಾಧ್ಯವೇ ಇಲ್ಲ! ನಿಮ್ಮನ್ನು ಸಮಾಜಮುಖಿ ಕುಟುಂಬದ ಗೌರವಾನ್ವಿತ ಸದಸ್ಯರು ಎಂದು ಪರಿಗಣಿಸುವುದು ನನಗೆ ಹೆಮ್ಮೆಯ ಸಂಗತಿ.

ನೀವು ಸಮಾಜಮುಖೀ ಪಯಣದ ಸಹವರ್ತಿಗಳಾಗಿ ಕಳೆದ ಎರಡು ವರ್ಷಗಳಿಂದ ಜೊತೆಗಿದ್ದೀರಿ. ನಮ್ಮ ದಾರಿ, ಗುರಿ, ಗಡಿ, ಗೋಡೆಗಳನ್ನು ಗಮನಿಸಿದ್ದೀರಿ. ನಮ್ಮ ಬಳಗದ ಗಂಭೀರ ಪ್ರಯೋಗ, ಚಟುವಟಿಕೆಗಳತ್ತ ಕುತೂಹಲ ತೋರಿದ್ದೀರಿ; ಕೈಜೋಡಿಸಿದ್ದೀರಿ, ಬೆನ್ನು ತಟ್ಟಿದ್ದೀರಿ, ಸಹಭಾಗಿಗಳಾಗಿದ್ದೀರಿ, ಅಗತ್ಯವಿದ್ದಾಗ ಎಚ್ಚರಿಸಿದ್ದೀರಿ, ಭಿನ್ನಾಭಿಪ್ರಾಯವನ್ನೂ ಹಂಚಿಕೊಂಡಿದ್ದೀರಿ, ಆ ಮೂಲಕ ಸಮಾಜಮುಖಿಯ ಭಾಗವೇ ಆಗಿದ್ದೀರಿ.

ಈ ಸಲಿಗೆ ಮತ್ತು ಸಂಬಂಧ ಇಟ್ಟುಕೊಂಡು, ನೀವು ಅನ್ಯಥಾ ಭಾವಿಸುವುದಿಲ್ಲ ಎಂಬ ನಂಬಿಕೆಯಿಂದ ನಿಮ್ಮಲ್ಲಿ ನಾನೊಂದು ನೆರವು ಬೇಡಲು ಬಯಸುವೆ. ಮೂರನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ಈ ಹೊತ್ತಿನಲ್ಲಿ, ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕುಸಿದುಬಿದ್ದಿದೆ ಎಂಬ ಸಾರ್ವತ್ರಿಕ ಅನ್ನಿಸಿಕೆಯನ್ನು ಸುಳ್ಳಾಗಿಸುವ ಶಪಥ ನಮ್ಮದು. ಆ ಮೂಲಕ ಸಮಾಜಮುಖೀ ಚಿಂತನೆಯ ಕುಟುಂಬವನ್ನು ವಿಸ್ತರಿಸುವ ಸ್ವಾರ್ಥವೂ ನಮಗಿದೆ.

ನೆರವಾಗಲು ನೀವೇನು ಮಾಡಬಹುದು?

  • ನೀವು ಇಬ್ಬರು ವಾರ್ಷಿಕ ಚಂದಾದಾರರನ್ನು ಮಾಡಿಸಿ.
  • ನಿಮ್ಮ ಆಯ್ಕೆಯ ಇಬ್ಬರಿಗೆ ಚಂದಾ ಉಡುಗೊರೆ ನೀಡಿ.
  • ಇಬ್ಬರು ವಿದ್ಯಾರ್ಥಿ ಅಥವಾ ಶಾಲೆ/ಕಾಲೇಜು/ಹಾಸ್ಟೆಲಿಗೆ ಉಡುಗೊರೆ ನೀಡಿ.

ಪ್ರಾಮಾಣಿಕವಾಗಿ ಹೇಳುತ್ತೇನೆ: ಇದು ನಾವು ಲಾಭ ಮಾಡಿಕೊಳ್ಳುವ ಹುನ್ನಾರವಲ್ಲ, ನಷ್ಟ ಕಡಿಮೆ ಮಾಡಿಕೊಳ್ಳುವ ಹವಣಿಕೆ ಅಷ್ಠೆ. ನಿಮಗೆ ಗೊತ್ತಿರುವಂತೆ ಪತ್ರಿಕೆಯ ಉತ್ಪಾದನಾ ವೆಚ್ಚ ಮಾರಾಟ ಬೆಲೆಗಿಂತ ಹೆಚ್ಚಿರುತ್ತದೆ. ಹಾಗಾಗಿ ಪತ್ರಿಕೆಯ ಪ್ರಸಾರ ಹೆಚ್ಚಿಸುವುದರಿಂದ ನಷ್ಟದ ಪ್ರಮಾಣವೂ ಅಧಿಕಗೊಳ್ಳುತ್ತದೆ; ಪತ್ರಿಕೆ ಲಾಭ ಗಳಿಸಲು ಜಾಹೀರಾತುಗಳನ್ನು ಅವಲಂಬಿಸುವುದು ಅನಿವಾರ್ಯ. ಆದಾಗ್ಯೂ ಚಿಂತನಶೀಲ ವಲಯ ಹಿಗ್ಗಿಸುವ ಉಮೇದಿನಿಂದ ನಿಮ್ಮಲ್ಲಿ ಈ ಮನವಿ ಮಾಡುತ್ತಿರುವೆ. ನೀವು ವ್ಯಯಿಸುವ 1000 ರೂಪಾಯಿ ಮತ್ತು ಪರಿಚಯಿಸುವ ಇಬ್ಬರು ಓದುಗರಿಂದ ಬಹುದೊಡ್ಡ ಬದಲಾವಣೆಯಾಗಲಿದೆ.

ಇಂತಿ ನಿಮ್ಮ
ಚಂದ್ರಕಾಂತ ವಡ್ಡು

ಈ ಬ್ಯಾಂಕ್ ಖಾತೆಗೆ ಹಣ ಪಾವತಿಸಿ
ಪೂರ್ಣ ಅಂಚೆ ವಿಳಾಸಗಳನ್ನು
ಕೆಳಗಿನ ಮೊಬೈಲ್‍ಗೆ ಕಳುಹಿಸಿ.

Samajamukhi Prakashana Private Ltd,
Bank A/c No: 37262378162,
IFSC: SBIN0040252, SBI,
Sudhamanagar Branch, Bengaluru.
Mob No. 9606934018.

Leave a Reply

Your email address will not be published.