ಕನ್ನಡ ಸಾಹಿತ್ಯ ಲೋಕ ಸಾಂಕ್ರಾಮಿಕ ರೋಗಗಳನ್ನು ಹೇಗೆ ಕಂಡಿದೆ..?

ಸಾಂಕ್ರಾಮಿಕ ರೋಗಗಳು ಕೇವಲ ಇಂದು ನಿನ್ನೆಯವಲ್ಲ. ಹದಿನಾರನೆಯ ಶತಮಾನದಲ್ಲಿ ಐರೋಪ್ಯ ರಾಷ್ಟçಗಳ ಜನರು ಬಂದಾಗಿನಿಂದಲೂ ಒಂದಲ್ಲಾ ಒಂದು ಸಾಂಕ್ರಾಮಿಕ ರೋಗ ಭಾರತೀಯರನ್ನು ಕಾಡಿದೆ. ಪ್ಲೇಗು, ಕಾಲರಾ, ಇನ್‌ಫ್ಲುಯೆಂಜಾ, ಮಲೇರಿಯಾ ಹಾಗೂ ಹತ್ತುಹಲವು ಬ್ಯಾಕ್ಟೀರಿಯಾ ಮತ್ತು ವೈರಸ್‌ಯುಕ್ತ ಸಾಂಕ್ರಾಮಿಕ ಕಾಯಿಲೆಗಳು ಕನ್ನಡ ನಾಡನ್ನೂ ಕಾಡಿವೆ.

ಸಾಂಕ್ರಾಮಿಕ ರೋಗಗಳಿಂದ ಘಟಿಸಿದ ಸಾವು ನೋವುಗಳು ಕನ್ನಡ ಬರಹ ಮತ್ತು ಸಾಹಿತ್ಯದಲ್ಲಿ ದಾಖಲಾಗಿವೆ. ರೋಗಗಳಿಂದ ಬದುಕುಳಿಯಲು ಹಳ್ಳಿಹಳ್ಳಿಗಳೇ ಗುಳೇ ಎದ್ದು ಹೋದದ್ದು ಕೂಡಾ ಅಲ್ಲಲ್ಲಿ ಬಿಂಬಿತವಾಗಿದೆ. ಅಂದಿನ ಗ್ರಾಮೀಣ ಸಾಮಾಜಿಕತೆಯ ಮೇಲೆ ಆದ ಪರಿಣಾಮಗಳನ್ನು ಕೂಡಾ ಬರೆಯಲಾಗಿದೆ. ಶಾಸನಗಳಲ್ಲಿ, ಕೈಫಿಯತ್ತುಗಳಲ್ಲಿ, ಸರ್ಕಾರಿ ವರದಿ ಹಾಗೂ ಅಂಕಿಅಂಶಗಳಲ್ಲಿ, ವೃತ್ತಪತ್ರಿಕೆಗಳಲ್ಲಿ ಮತ್ತು ಗೆಜೆಟಿಯರ್‌ಗಳಲ್ಲಿ ಸಾಂಕ್ರಾಮಿಕ ಪಿಡುಗುಗಳ ಬಗ್ಗೆ ವರದಿಯಾಗಿದೆ.

ಅದೇ ರೀತಿಯಲ್ಲಿ ಕನ್ನಡದ ಮೇರು ಸಾಹಿತಿಗಳು ಸಾಂಕ್ರಾಮಿಕ ರೋಗಗಳಲ್ಲಿ ಮಿಂದು ಎದ್ದ ಜನಜೀವನದ ಬಗ್ಗೆ ಬರೆದಿದ್ದಾರೆ. ಕುವೆಂಪು, ಭೈರಪ್ಪ, ಅನಂತಮೂರ್ತಿ ಆದಿಯಾಗಿ ಹಲವು ಮೇರು ಸಾಹಿತಿಗಳ ಕೃತಿಗಳಲ್ಲಿ ಸಾಂಕ್ರಾಮಿಕ ಪಿಡುಗುಗಳ ವರ್ಣನೆ ಹಾಗೂ ಪರಿಣಾಮಗಳ ದೀರ್ಘ ಉಲ್ಲೇಖಗಳಿವೆ. ಈ ರೋಗಗಳ ಕಾರಣಗಳಿಂದ ನಿರ್ಣಾಯಕವಾಗಿ ಬದಲಾದ ಜೀವನಗಳ ಚಿತ್ರಣಗಳಿವೆ.

ಇಂದಿನ ನವನವೀನ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಲೋಕವು ಇದುವರೆಗೆ ಕಂಡಿರುವ ರೋಗಗ್ರಸ್ತ ಹಾಗೂ ರೋಗವಿಮೋಚಿತ ಜನಜೀವನಗಳನ್ನು ಮತ್ತೊಮ್ಮೆ ಭೇಟಿ ಮಾಡುವ ಔಚಿತ್ಯವಿದೆ. ನಮ್ಮ ಆರೋಗ್ಯ ಮತ್ತು ಮಾನಸಿಕತೆಯನ್ನು ಕದಡಿರುವ ಈ ಕೊರೋನಾ ಪಿಡುಗಿನ ಸಮಯದಲ್ಲಿ ಸಾಹಿತ್ಯಿಕ ಸಾಂದರ್ಭಿಕತೆ ಮತ್ತು ಸಮಾಧಾನ ಪಡೆಯಬೇಕಾಗಿದೆ.

ಕನ್ನಡದ ಪ್ರಮುಖ ಲೇಖಕರು, ವಿಮರ್ಶಕರು, ಓದುಗರು ಈ ಸಾಹಿತ್ಯಸಂಗತಗಳನ್ನು ನಮಗೆ ಪರಿಚಯಿಸಿದ್ದಾರೆ. ಕೆಲವು ಹಿರಿಯರ ನೆನಪುಗಳೂ ಈ ಚರ್ಚೆಯಲ್ಲಿ ಬಂದಿವೆ.

Leave a Reply

Your email address will not be published.