ಕರ್ನಾಟಕದಲ್ಲಿ ಪರಿಸರ ಸಮತೋಲನ ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆಯೇ..?

ಪೃಥ್ವಿಯ ಮೇಲಾಗುತ್ತಿರುವ ಹವಾಮಾನ ವೈಪರೀತ್ಯ ಮತ್ತು ತಾಪಮಾನ ಹೆಚ್ಚಳದಿಂದ ಕರ್ನಾಟಕವೇನೂ ಹೊರತಾಗಿಲ್ಲ. ಬ್ರೆಜಿಲ್‌ನಲ್ಲಿ ಕಾಡು ಕಡಿದರೆ, ರಷ್ಯಾದಲ್ಲಿ ಕಲ್ಲಿದ್ದಲು ಸುಟ್ಟರೆ ಅಥವಾ ಅಭಿವೃದ್ಧಿಯ ಧಾವಂತದಲ್ಲಿ ಯುರೋಪಿಯನ್ ರಾಷ್ಟ್ರಗಳು ಓಝೋನ್ ಪದರ ಛೇದ ಮಾಡಿದರೆ ಅದರ ನೇರ ಪರಿಣಾಮ ಕರ್ನಾಟಕದ ಪರಿಸರದ ಮೇಲೆಯೂ ಬೀಳುತ್ತದೆ.

ಹಾಗೆಂದ ಮಾತ್ರಕ್ಕೆ ಪರಿಸರ ಸಮತೋಲನದ ಬಗ್ಗೆ ನಾವು ಕರ್ನಾಟಕದಲ್ಲಿ ಅಸಡ್ಡೆ-ಅನಾದರ ತೋರುವಂತಿಲ್ಲ. ನಮ್ಮ ಕೈಲಾದಷ್ಟು ಮಟ್ಟಿಗೆ ಪರಿಸರ ಹಾನಿಗೆ ಹಿನ್ನೆಡೆಯಾಗುವ ಕ್ರಮಗಳನ್ನು ಕೈಗೊಂಡು ಸಮತೋಲನ ಮತ್ತು ಸುಸ್ಥಿರ ಅಭಿವೃದ್ಧಿಗೆ ಕಾರಣಕರ್ತೃಗಳಾಗಬೇಕು.

  • ಪರಿಸರ ಸಮತೋಲನ ಸಾಧಿಸುವಲ್ಲಿ ನಾವು ಇದುವರೆಗೆ ಕೈಗೊಂಡಿರುವ ಕ್ರಮಗಳ ಯಶಸ್ಸಿನ ಬಗ್ಗೆ ನಾವು ಸಂತೃಪ್ತರಾಗಬಹುದೇ..?
  • ಸಾಧಿಸುವ ಗುರಿಯ ದೂರ ಮತ್ತು ಕ್ಲಿಷ್ಟತೆಯ ಮುಂದೆ ಇದುವರೆಗಿನ ನಮ್ಮ ಸಾಧನೆ ಅಲ್ಪಮಾತ್ರವೇ..?
  • ಇದುವರೆಗಿನ ಸಾಧನೆ ಸುಲಭ ಸಾಧ್ಯವಾದರೆ ಮುಂದೆ ಆಗಬೇಕಿರುವ ಕಾರ್ಯಗಳ ಸಂಪೂರ್ಣ ಅರಿವು ನಮಗಿದೆಯೇ..?
  • ಅಥವಾ ಪರಿಸರ ಸಮತೋಲನ ಸಾಧಿಸುವಲ್ಲಿನ ನಮ್ಮ ಸಾಧನೆ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತೆ ಆಗಿದೆಯೇ..?

ಮುಂದಿನ ದಶಕಗಳ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಲ್ಲಿ ಈ ಕುರಿತ ಪರಿಶೀಲನೆ ಅತ್ಯಂತ ಪ್ರಮುಖವೂ ಅನಿವಾರ್ಯವೂ ಆಗಿದೆ. ಈ ದಿಕ್ಕಿನಲ್ಲಿ ನಾವು ನಡೆಯಬೇಕಿರುವ ಹಾದಿಗೆ ಬೆಳಕು ಬೀರುವ ಆರಂಭಿಕ ಪ್ರಯತ್ನವಾಗಿ ಈ ಚರ್ಚೆ ಮೂಡಿಬಂದಿದೆ.

Leave a Reply

Your email address will not be published.