ಕವನಗಳು

ಬುದ್ಧ ಬರುವ ತನಕ

ಗೆದ್ದವನ
ವಿಜಯೋತ್ಸಾಹದಲ್ಲೂ
ಸೋತವನ ಅಳು,
ನಿಟ್ಟುಸಿರುಗಳ ಪಿಸುಮಾತು
ಬಹುದೂರದವರೆಗೂ
ಕೇಳಿಸುತಿದೆ
ರಮಜಾನು
ದಸರಾ ದೀಪಾವಳಿ
ಈದ್ ಗಣೇಶ
ಕ್ರಿಸ್‍ಮಸ್ ಹಬ್ಬಗಳ
ಮುಂಜಾವಿಗೆ ಮಿಲಿಟರಿ ಯೇ
ಬೇಕೆಂದು
ಆರಕ್ಷಕರು ಮುಂಗಡ ಬೇಡಿಕೆ
ಸಲ್ಲಿಸಿದ್ದಾರೆಸೋರುತಿದೆ
ಗೆಳೆಯಾ …ಪೆಟ್ರೋಲು
ಮನೆಮನೆಯ
ಮೂರ್ಖಪೆಟ್ಟಿಗೆಗಳಿಂದ
ಹತ್ತುವುದಷ್ಟೇ ಬಾಕಿ
ಸಾಲಿಯಿಂದ ಬಂದ ಮಕ್ಕಳ ಸಂಖ್ಯೆಯನು
ತಾಯಿಯೊಬ್ಬಳು
ದಿನಾ ಎಣಿಸುತ್ತಾಳೆ
ರಿಜರ್ವ್ ವ್ಯಾನು,
ಆಂಬುಲೆನ್ಸುಗಳಿಗೆ ಹೊಸ ಚಕ್ರಗಳನು
ಜೋಡಿಸಿಡಲಾಗಿದೆಒಪ್ಪಂದಗಳೆ ಇವೆ
ಗಡಿಗಳಾಚೆಯ ಯುದ್ಧ
ವಿರಮಿಸಲುಒಪ್ಪಂದಗಳಾಗಿವೆ ಇಲ್ಲಿಯೂ… ಆರಂಭಿಸಲುಗಡಿಯಂಚಿಗೆ ಹೋದ ಬುದ್ಧನಿನ್ನೂ ಬಂದಿಲ್ಲ
ಇನ್ನೇನಿದ್ದರೂ ಒಳಗೇ ಯುದ್ಧ
ಎದೆಯಿಂದ ಹಾರಿಹೋದ ಬುದ್ಧ
ಬರುವತನಕ

                                    -ಬಿ.ಶ್ರೀನಿವಾಸ

 

ಸೂಜಿಗವನ

ಅವನ ಬೆವರಿನಲಿ
ನನ್ನ ಸಿಂಗಾರ
ಹೋಳಿಯಾಡುತ್ತಿರಲು
ಅವನ ಅಪ್ಪುಗೆಯ
ಬಿಗಿಶಾಖ ಮತ್ತದೇ
ಮೊನಚು ಓಕುಳಿಯಲ್ಲಿ
ನನ್ನ ಕಾಮದಹನದ
ಬೆಂಕಿ ಧಗ್ಗೆಂದು
                                          ಹೊತ್ತುರಿಯುತ್ತಿತ್ತು.

                                                                              -ಸೂಜಿ.

ಶೇಕ್‍ಸ್ಪಿಯರ್-ಬ್ರೆಖ್ಟ್ ವಾದಿ-ಸಂವಾದಿ

ಜನತೆ ಕುರಿಮಂದೆ
ಎಂದು ತೋರದಿದ್ದಿದ್ದರೆ
ಸೀಜರ್
ತೋಳ ತಾನಾಗುತ್ತಿರಲಿಲ್ಲ
 

ದಾರಿ ಸಾಗದು ಹೀರೋ
ಬೇಕು ಎಂಬ ನಾಡು ಅದು
ಅಯ್ಯೋ
ಮರುಕಕ್ಕೆ ಲಾಯಕ್ಕಾದವರ ಬೀಡು

-ರಘುನಂದನ.

 

ಟಿಪ್ಪಣಿ: ಚೌಪದಿ ಒಂದು: ವಿಲಿಯಮ್ ಶೇಕ್‍ಸ್ಪಿಯರ್ ಬರೆದ ಜೂಲಿಯಸ್ ಸೀಜರ್ ನಾಟಕದ ಸಾಲೊಂದರ ಭಾವಾನುವಾದ. ಚೌಪದಿ ಎರಡು: ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಖ್ಟ್ ಬರೆದ ಗೆಲಿಲಿಯೋ ನಾಟಕದ ಸಾಲೊಂದರ ಭಾವಾನುವಾದ. ಸೀಜರ್ ಪ್ರಾಚೀನ ರೋಮಿನ ದೊಡ್ಡ ದಂಡನಾಯಕ; ಸರ್ವಾಧಿಕಾರಿ ಎನಿಸಿಕೊಂಡವನು. ವಿಜ್ಞಾನಿ ಗೆಲಿಲಿಯೋ ಕ್ಯಾಥೊಲಿಕ್ ಚರ್ಚಿನ ಬೆದರಿಕೆಗೆ ಮಣಿದು, ತನ್ನ ವೈಜ್ಞಾನಿಕ ಕಾಣ್ಕೆಯನ್ನು ತಾನೇ ಅಲ್ಲಗಳೆದು ಜೀವವುಳಿಸಿಕೊಂಡಾಗ, ಅವನ ನೆಚ್ಚಿನ ಶಿಷ್ಯ ಆಂದ್ರಿಯಾ ದುಃಖದ ಭರದಲ್ಲಿ ತನ್ನ ಗುರುವನ್ನು ಹೀಯಾಳಿಸುತ್ತ, ‘ಹೀರೋನೇ ಇಲ್ಲದ ನಾಡು, ಅಯ್ಯೋ, ಮರುಕಕ್ಕೆ ಲಾಯಕ್ಕಾದವರ ಬೀಡು’ ಅನ್ನುತ್ತಾನೆ. ಅದಕ್ಕೆ ಗೆಲಿಲಿಯೋ ಕೊಡುವ ಉತ್ತರ ಚೌಪದಿ ಎರಡು.

Leave a Reply

Your email address will not be published.