ಕಾಂಗ್ರೆಸ್ ಮುಕ್ತ ಆಗಬಾರದು!

-ಡಾ.ವಾಮನ ಆಚಾರ್ಯ, ಬಿಜೆಪಿ ಚಿಂತಕರು.

ವಿರೋಧ ಪಕ್ಷ ಇರಬೇಕು. ಇಲ್ಲದಿದ್ದರೆ ಬಿಜೆಪಿಯೂ ಹಾಗೇ ಆಗುತ್ತದೆ. ಕಾಂಗ್ರೆಸ್ ನ ಅಪ್ರೋಚ್ ನಲ್ಲಿ ಬದಲಾವಣೆ ಆಗಬೇಕೆಂಬುದು ಇದರರ್ಥ. ಏಕೆಂದರೆ ಪಕ್ಷದ ಚುಕ್ಕಾಣಿ ಕೆಲವೇ ಕೆಲವರ ಕೈಲಿದೆ. ವಂಶಪಾರOಪರ್ಯ ಎದ್ದು ಕಾಣುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಿಯಲ್ ಡೆಮೋಕ್ರಸಿ ಇಲ್ಲ. ಇಂಟರ್ನಲ್ ಡೆಮೋಕ್ರಸಿ ಇಲ್ಲ. ಸ್ಥಳೀಯ ಮಟ್ಟದ ಚುನಾವಣೆ ಪದ್ಧತಿ ಅವರಲ್ಲಿಲ್ಲ. ಪಿಕ್ ಅಂಡ್ ಚೂಸ್. ಅಲ್ಪಸಂಖ್ಯಾತರನ್ನು ಮಾತ್ರ ತುಷ್ಟೀಕರಣ ಮಾಡುತ್ತಿದ್ದಾರೆ. ಈ ಮೂಲಕ ಇಂತಹ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಯಿಂದ ದೂರ ಇಡುತ್ತಾ ಬಂದಿದ್ದಾರೆ ಕಾಂಗ್ರೆಸ್‌ನವರು.

ನಾವು ಕೂಡ ಅಲ್ಪಸಂಖ್ಯಾತರಿಗೆ ಒಳ್ಳೆಯದು ಆಗಬೇಕೆಂದು ಬಯಸಿದ್ದೇವೆ. ಆದರೆ, ಅವರು ನಮ್ಮ ಜತೆಗೆ ಬರಬೇಕು. ಎಲ್ಲರೊಳಗೆ ಆವರೂ ಒಬ್ಬರಾಗಬೇಕು. ಅವರು ಪ್ರತ್ಯೇಕವಾಗಿರಬಾರದು ಎಂಬುದು ನಮ್ಮ ಸದಿಚ್ಛೆ. ನೀವು ಪ್ರತ್ಯೇಕವಾಗಿದ್ದುಕೊಂಡು ಏನು ಬೇಕಾದರೂ ಮಾಡಿಕೊಳ್ಳಿ, ಆದರೆ ನಮಗೇ ಮತ ಹಾಕಿ ಎಂಬ ಧೋರಣೆ ಕಾಂಗ್ರೆಸ್ ಪಕ್ಷದಲ್ಲಿದೆ.

ಈ ರೀತಿಯ ದೃಷ್ಟಿಕೋನವನ್ನು ನಿರ್ಮೂಲನೆ ಮಾಡಬೇಕು. ಈ ದೃಷ್ಟಿಯಿಂದಲೇ ನಾವು ಕಾಂಗ್ರೆಸ್ ಮುಕ್ತ ಭಾರತ ಎಂದರೆ ಸಮುದಾಯಗಳ ತುಷ್ಟೀಕರಣ ಧೋರಣೆಯಿಂದ ಹೊರ ಬರಬೇಕು ಎಂದರ್ಥ. ಇದರಿಂದ ದೇಶಕ್ಕೆ ಒಳ್ಳೆಯದಾಗುತ್ತದೆ. ಅಂದರೆ, ವಿರೋಧ ಪಕ್ಷವೇ ಇರಬಾರದು ಎಂಬ ಧೋರಣೆ ಇದ್ದರೆ ಅದು ಆಡಳಿತಾರೂಢ ಬಿಜೆಪಿಗೂ ಒಳ್ಳೆಯದಾಗುವುದಿಲ್ಲ.

ನಮಗೆ ಚೆಕ್ಸ್ ಅಂಡ್ ಬ್ಯಾಲೆನ್ಸ್ ಇರಬೇಕು, ಉತ್ತರದಾಯಿತ್ವ ಇರಬೇಕು. ಇಂದಲ್ಲಾ ನಾಳೆ ನಮ್ಮ ಸ್ಥಾನಕ್ಕೆ ಬೇರೆಯವರು ಬರುತ್ತಾರೆ. ಹೀಗಾಗಿ ನಾವು ಸರಿಯಾಗಿ ಕೆಲಸ ಮಾಡಬೇಕೆಂಬ ದುಗುಡ ಇರಬೇಕು. ಮನಸಿಗೆ ಬಂದOತೆ ವರ್ತಿಸುವ ಮನಃಸ್ಥಿತಿ ನಮ್ಮ ಕಾರ್ಯಕರ್ತರಲ್ಲಿ ಬರಬಾರದು. ಹೀಗಾಗಿ ಕಾಂಗ್ರೆಸ್ ಒಳಗಿರುವ ಪದ್ಧತಿಗಳಿಂದ ಭಾರತದ ಪ್ರಜಾಪ್ರಭುತ್ವ ಹೊರಗೆ ಬರಬೇಕು. ಇದುವೇ ಕಾಂಗ್ರೆಸ್ ಮುಕ್ತ ಭಾರತ.

ವಂಶಪಾರOಪರ್ಯದಿAದ ಹೊರ ಬರದಿದ್ದರೆ ಕಾಂಗ್ರೆಸ್ ಪಕ್ಷದ ವಿನಾಶವಾಗುವುದು ಶತಃಸಿದ್ಧ. ಏಕೆಂದರೆ, ವಂಶಪಾರOಪರ್ಯದಿAದ ನಡೆದುಕೊಂಡು ಬಂದಿರುವ ರಾಜಕೀಯ ಪಕ್ಷಗಳು ಅವನತಿ ಹೊಂದಿರುವ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಒಂದೇ ಕುಟುಂಬದ ರಾಜಕಾರಣಗಳು ನಡೆದಿರುವುದರಿಂದ, ಅಲ್ಲಿ ನಿಜವಾದ ಪ್ರಜೆಗಳಿಗೆ ಏನು ಬೇಕು, ಜನಸಾಮಾನ್ಯರಿಗೆ ಏನು ಮಾಡಬೇಕೆಂಬುದಕ್ಕೆ ಬೆಲೆಯೇ ಇರುವುದಿಲ್ಲ. ಇದು ಪ್ರಜಾಪ್ರಭುತ್ವವಾಗುವುದಿಲ್ಲ. ಈ ವಂಶಪಾರOಪರ್ಯದ ರಾಜ ಕಾರಣವನ್ನು ಯಾರು ಮಾಡಿದರೂ ತಪ್ಪೇ. ಬಿಜೆಪಿಯವರು ಅಥವಾ ಯಾವುದೇ ಪಕ್ಷದವರು ಮಾಡಿ ದರೂ ತಪ್ಪಾಗುತ್ತದೆ. ಆದರೆ, ಬಿಜೆಪಿ ಯಲ್ಲಿ ಅಷ್ಟರ ಮಟ್ಟಿಗಿಲ್ಲ.

ಗುಜರಾತಿನಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿದ್ದ ಅಮಿತ್ ಶಾ ಬಿಜೆಪಿ ಚುಕ್ಕಾಣಿ ಹಿಡಿದು ಬಿಜೆಪಿಯನ್ನು ಉನ್ನತ ಸ್ಥಾನಕ್ಕೆ ತಂದರು. ಕರ್ನಾಟಕದಲ್ಲಿಯೂ ನಳೀನ್ ಕುಮಾರ್ ಕಟೀಲ್ ಎಂಬ ಸಾಮಾನ್ಯ ಕಾರ್ಯಕರ್ತ ನಮ್ಮ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಇಂತಹ ವ್ಯವಸ್ಥೆ ಇಲ್ಲ.

ಎಲ್ಲಾ ಪಕ್ಷಗಳಲ್ಲಿಯೂ ಆದರ್ಶದ ಆಧಾರದಲ್ಲಿ ನಾಯಕತ್ವ ಮತ್ತು ಅವುಗಳ ಸಂವಿಧಾನ ನಿರ್ಮಾಣವಾಗಬೇಕೇ ಹೊರತು ಪಕ್ಷವನ್ನು ಅಪ್ಪ, ಮಗ, ಮೊಮ್ಮಗ ಹೀಗೆ ಕುಟುಂಬದವರೇ ನಾಯಕತ್ವ ವಹಿಸಿಕೊಳ್ಳುವ ಪರಿಪಾಠ ಇರಬಾರದು. ವಂಶಪಾರOಪರ್ಯ ಎನ್ನುವುದೇ ಪ್ರಜಾಪ್ರಭುತ್ವದ ವಿರೋಧಿ ವಿಷಯವಾಗಿದೆ. ನಮ್ಮಲ್ಲಿ ಈ ವಂಶಪಾರAಪರ್ಯ ಆಗಿಲ್ಲ ಎಂದು ಬಹಳ ದೊಡ್ಡದಾಗಿ ಹೇಳಿಕೊಳ್ಳುವುದಿಲ್ಲ. ಆದರೆ, ಬಹಳ ಕಡಿಮೆ ಇದೆ. ಅಲ್ಲಲ್ಲಿ ಇರುವುದನ್ನು ಕಡಿಮೆ ಮಾಡುವ ಪ್ರಯತ್ನವನ್ನು ನಾವು ಮಾಡುತ್ತಲೇ ಇದ್ದೇವೆ. ವಂಶಪಾರOಪರ್ಯ ರಾಜಕಾರಣ ಎಂಬುದು ನಮ್ಮ ನೀತಿಯೂ ಅಲ್ಲ. ಈ ವಿಚಾರದಲ್ಲಿ ನಮ್ಮಲ್ಲಿಯೂ ಸಣ್ಣ ಪುಟ್ಟ ತಪ್ಪುಗಳು ನಡೆದಿವೆ.

ಕಾಂಗ್ರೆಸ್ ಒಳಗೆ ಗಟ್ಟಿಯಾದ ಐಡಿಯಾಲಾಜಿ ಉಳಿದಿಲ್ಲ. ಸಾಮಾನ್ಯ ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಬೇಕೆಂಬ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಲಾಯಿತು. ಮುಂದೆ ಗಾಂಧೀಜಿ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಬೇಕಾದ ಆಯುಧವನ್ನಾಗಿ ಉಪಯೋಗಿಸಿಕೊಳ್ಳಲು ನಿರ್ಧರಿಸಲಾಯಿತು. ಅದರಿಂದ ತ್ಯಾಗ ಮಾಡಿದವರು, ಚಿಂತಕರು, ಗಟ್ಟಿತನವಿದ್ದವರು, ಧೈರ್ಯಶಾಲಿಗಳು ಆ ಪಕ್ಷದಲ್ಲಿದ್ದರು. ಸ್ವಾರ್ಥಿಗಳು, ಸ್ವಜನ ಪಕ್ಷಪಾತಿಗಳು ಇರಲಿಲ್ಲ. ಆದರೆ, ಸ್ವಾತಂತ್ರ್ಯ ನಂತರ ಕಾಂಗ್ರೆಸ್ ನಲ್ಲಿ ತ್ಯಾಗಿಗಳು ಕಾಣೆಯಾದರು. ಹೀಗಾಗಿ ಕಾಂಗ್ರೆಸ್ ಪಕ್ಷ ಸ್ವಾರ್ಥದ ಕೂಪವಾಯಿತು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟç ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ, ಸಣ್ಣ ಪುಟ್ಟ ಜಾತಿ, ಅಲ್ಪಸಂಖ್ಯಾತರ ಓಲೈಕೆ ಸೇರಿದಂತೆ ಜಾತಿ ಸಮುದಾಯದ ತುಷ್ಟೀಕರಣ ಹೆಚ್ಚು ನಡೆಯುವುದಿಲ್ಲ. ಈ ಪ್ರವೃತ್ತಿಯಿಂದ ಹೊರಬರದ ಹೊರತು ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿರುವುದಿಲ್ಲ.

ಏಕೆಂದರೆ, ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಮಾಯಾವತಿಯಂತವರು ಅಲ್ಪಸಂಖ್ಯಾತ, ಜಾತಿಗಳ ಓಲೈಕೆಯನ್ನು ಮಾಡಲು ಹೊರಟು ಕೈಸುಟ್ಟುಕೊಂಡಿರುವುದು ನಮ್ಮ ಕಣ್ಣ ಮುಂದಿದೆ. ಇನ್ನು ಅಲ್ಪಸಂಖ್ಯಾತರನ್ನೇ ಗುರಿಯಾಗಿಟ್ಟುಕೊಂಡು ಓವೈಸಿಯಂತಹವರು ಮಹಾರಾಷ್ಟç, ಬಿಹಾರ, ಆಂಧ್ರಪ್ರದೇಶದಲ್ಲಿ ತಮ್ಮ ಅಸ್ತಿತ್ವವನ್ನು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ನ ವೋಟ್ ಬ್ಯಾಂಕ್ ಎಂದು ಪರಿಗಣಿತವಾಗಿದ್ದ ಅಲ್ಪಸಂಖ್ಯಾತ ಮತಗಳು ಛಿದ್ರವಾಗಿವೆ. ಈ ಹಿನ್ನೆಲೆಯಲ್ಲಿ ತಾನು ನಂಬಿಕೊAಡಿದ್ದ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದಿಂದ ಕ್ರಮೇಣ ದೂರವಾಗಲು ಆರಂಭಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಕುಸಿಯುತ್ತಾ ಹೋಗುತ್ತಿದೆ.

ಕಾಂಗ್ರೆಸ್ ಪಕ್ಷ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಂತೆಯೇ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹೆಚ್ಚಾಗತೊಡಗಿದೆ. ಈ ಮೂಲಕ ಬಿಜೆಪಿಗೆ ಪರ್ಯಾಯ/ವಿರೋಧ ಪಕ್ಷವೆಂದರೆ ಆಯಾ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳು. ಹೀಗಿರುವಾಗ ಬಿಜೆಪಿಗೆ ಕಾಂಗ್ರೆಸ್ ಪಕ್ಷ ಪರ್ಯಾಯವಾಗಿ ಉಳಿದಿಲ್ಲ. ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ತಮಿಳುನಾಡು ಹೀಗೆ ಬಹುತೇಕ ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳೇ ಸದೃಢವಾಗಿ ಬೆಳೆದಿವೆ. ಹೀಗಾಗಿ ಕಾಂಗ್ರೆಸ್ ಪಕ್ಷ ಒಂದು ರಾಷ್ಟಿçÃಯ ಪಕ್ಷವಾಗಿ ಉಳಿಯುವಂತಹ ತನ್ನ ಯಾವುದೇ ಸತ್ವವನ್ನು ಉಳಿಸಿಕೊಂಡಿಲ್ಲ. ಇದರಿಂದ ಕಾಂಗ್ರೆಸ್ ಪಕ್ಷವನ್ನು ನಾವು ನಾಶಪಡಿಸುವ ಪ್ರಶ್ನೆಯೇ ಇಲ್ಲ. ಏಕೆಂದರೆ, ಕಾಂಗ್ರೆಸ್ ಪಕ್ಷ ತನ್ನಿಂದ ತಾನೇ ವಿನಾಶದ ಅಂಚಿಗೆ ಹೋಗುತ್ತಿದೆ.

ಕಾಂಗ್ರೆಸ್ ತನ್ನ ಅವನತಿಯ ಬುನಾದಿಯನ್ನು ತಾನೇ ತೋಡಿಕೊಳ್ಳುತ್ತಾ ಬರುತ್ತಿದೆ. ಇದರ ವಂಶಪಾರOಪರ್ಯ ಮತ್ತು ಆಂತರಿಕ ಪ್ರಜಾಪ್ರಭುತ್ವ ಇಲ್ಲದ ನೀತಿಯಿಂದಾಗಿ ಪಕ್ಷದಲ್ಲಿದ್ದವರೇ ಹೊರ ಬಂದು ತಮ್ಮದೇ ಪಕ್ಷ ಕಟ್ಟಿಕೊಂಡು ಕಾಂಗ್ರೆಸ್ ಪಕ್ಷಕ್ಕೇ ಪರ್ಯಾಯವಾಗಿ ಬೆಳೆದು ಸೆಡ್ಡು ಹೊಡೆಯುತ್ತಿದ್ದಾರೆ. ವಿಚಿತ್ರವೆಂದರೆ, ಹೀಗೆ ಪ್ರತ್ಯೇಕ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿಕೊಂಡಿರುವವರು ಕಾಂಗ್ರೆಸ್ ಪಕ್ಷದ ನೀತಿಗಳನ್ನೇ ಅನುಸರಿಸುತ್ತಿದ್ದಾರೆ. ಅಲ್ಪಸಂಖ್ಯಾತರು, ದಲಿತರನ್ನು ಓಲೈಸುವುದನ್ನು ಕಾಯಕ ಮಾಡಿಕೊಂಡಿದ್ದಾರೆ.

ಈ ಎಲ್ಲಾ ಕಾರಣಗಳಿಂದಾಗಿ ಕಾಂಗ್ರೆಸ್ ಪಕ್ಷದ ಅವನತಿಗೆ ಬಿಜೆಪಿ ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿರುವವರೇ ಮತ್ತು ಕಾಂಗ್ರೆಸ್ ನಿಂದ ಹೊರ ಹೋಗಿರುವವರೇ ಕಾಂಗ್ರೆಸ್ ಮುಳುಗಲು ಕಾರಣರಾಗುತ್ತಿದ್ದಾರೆ. ಆದರೆ, ಕಾಂಗ್ರೆಸ್ ಗೆ ಅಂತಹ ದುಃಸ್ಥಿತಿ ಬರಬಾರದು. ಈ ಪಕ್ಷ ವಿರೋಧ ಪಕ್ಷವಾಗಿರಬೇಕು.

ಆದರೆ, ಜಾತ್ಯತೀತ, ಸಮಾಜ ಅಭಿಮುಖಿಯಾಗಿ, ನಿಜವಾದ ದೇಶದ ಪ್ರಜೆಗಳಿಗೆ ತುಡಿಯುವಂತಹ ಧೋರಣೆಗಳು ಮತ್ತು ನೀತಿಯನ್ನು ಅಳವಡಿಸಿಕೊಂಡು ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿರಬೇಕು.

 

Leave a Reply

Your email address will not be published.