ಕಾಂಗ್ರೆಸ್ ಮುಕ್ತ ಭಾರತ ಅನಿವಾರ್ಯವೇ..? ಸದ್ಯಕ್ಕೆ ಬೇಡವೇ..?

ಭಾರತದಂತಹ ದೊಡ್ಡ ಮತ್ತು ವೈವಿಧ್ಯಮಯ ದೇಶಕ್ಕೆ ಕನಿಷ್ಠ ಎರಡಾದರೂ ರಾಷ್ಟ್ರೀಯ ಪಕ್ಷಗಳು ಬೇಕು. ಕಳೆದ ಆರು ವರ್ಷಗಳಲ್ಲಿ ಬಿಜೆಪಿ ದೇಶದ ಮೂಲೆಮೂಲೆಗಳಲ್ಲಿಯೂ ಬೆಳೆದು ಅಗ್ರಗಣ್ಯ ರಾಷ್ಟ್ರೀಯ ಪಕ್ಷವಾದರೆ ಅದೇ ಸಮಯದಲ್ಲಿ ಇದುವರೆಗೂ ಸರ್ವಮಾನ್ಯ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ದೇಶದ ಹಲವು ಭಾಗಗಳಲ್ಲಿ ತನ್ನ ನೆಲೆ ಕಳೆದುಕೊಂಡಿದೆ. ಬಿಜೆಪಿಯ ಅಬ್ಬರದ ‘ಕಾಂಗ್ರೆಸ್ ಮುಕ್ತ ಭಾರತ’ದ ಪ್ರಚಾರದಲ್ಲಿ ತನ್ನ ರಾಷ್ಟ್ರೀಯ ಸ್ಥಾನಮಾನ ಕಳೆದುಕೊಳ್ಳುವ ಭಯದಲ್ಲಿದೆ. ನಾಯಕತ್ವದ ಬಿಕ್ಕಟ್ಟು, ಕೌಟುಂಬಿಕ ಪಾರುಪತ್ಯ, ದೂರದೃಷ್ಟಿಯ ಕೊರತೆ, ರಾಜಕೀಯ ಮುತ್ಸದ್ದಿತನದ ಅಭಾವ ಮತ್ತು ಸಂಪನ್ಮೂಲದ ಕೊರತೆಯಲ್ಲಿ ಕಾಂಗ್ರೆಸ್ ಪಕ್ಷ ಸೊರಗಿದೆ.

ಕುಗ್ಗಿದ ಕಾಂಗ್ರೆಸ್ ಪ್ರಭಾವ ಬಿಜೆಪಿಗೆ ಸಂತಸ ತಂದಿರಬಹುದು. ಆದರೆ ಇದು ರಾಷ್ಟ್ರದ ರಾಜಕಾರಣ ಹಾಗೂ ಪ್ರಜಾಪ್ರಭುತ್ವಕ್ಕೆ ಹೇಗೆ ಪರಿಣಾಮ ಬೀರಬಲ್ಲುದು ಎಂಬುದನ್ನೂ ನಾವು ಗಮನಿಸಬೇಕಾಗುತ್ತದೆ. ದೇಶದ ಬೇರಾವುದೇ ಪಕ್ಷಗಳು ರಾಷ್ಟ್ರೀಯ ಪಕ್ಷವಾಗುವ ಸ್ಥಿತಿಯಲ್ಲಿ ಇಲ್ಲದ ಕಾರಣ ಕಾಂಗ್ರೆಸ್ ಪಕ್ಷದ ಬಲ ಮತ್ತು ವ್ಯಾಪ್ತಿಯ ಕುಗ್ಗುವಿಕೆ ದೇಶದ ಪ್ರಜಾಪ್ರಭುತ್ವದ ಮುಕ್ತ ಓಟಕ್ಕೆ ಕಂಟಕಪ್ರಾಯವಾಗಬಹುದು. ಸಮರ್ಥ ರಾಷ್ಟ್ರೀಯ ವಿರೋಧಪಕ್ಷವಿಲ್ಲದೆ ಸಾಂವಿಧಾನಿಕ ಸಂಸ್ಥೆಗಳು ಹಾಗೂ ಹಕ್ಕುಗಳಿಗೆ ಧಕ್ಕೆ ಒದಗಿಬರಬಹುದು.

ದೇಶದ ವಿರೋಧ ಪಕ್ಷಗಳ ರಾಜಕೀಯ ಸಂಕ್ರಮಣ ಕಾಲದಲ್ಲಿ

ಸಮಾಜಮುಖಿ ಮುನ್ನೆಲೆಗೆ ತಂದ ಪ್ರಶ್ನೆಗಳು:

  1. ಕಡ್ಡಾಯ ವಂಶಪಾರಂಪರ್ಯದ ಹಾದಿಯಿಂದ ಹೊರಬರದೆ ಇದ್ದರೆ ಕಾಂಗ್ರೆಸ್

 ವಿನಾಶ ಅನಿವಾರ್ಯವೇ..?

  1. ಸೋನಿಯಾ ಗಾಂಧಿ ಕುಟುಂಬದ ಹೊರತಾಗಿ ಬೇರೆ ಯಾರನ್ನಾದರೂ

 ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನಾಯಕನೆಂದು ಒಪ್ಪುವರೇ..?

 ಒಪ್ಪಿದರೆ ಕಾಂಗ್ರೆಸ್ ಪುನರುಜ್ಜೀವನ ಸಾಧ್ಯವೇ..?

  1. ನಾಯಕತ್ವ ಯಾರದಾದರೂ ಸರಿಯೇ ಎಂದು ಸದ್ಯಕ್ಕೆ ಆಡಳಿತಾರೂಢ

 ಬಿಜೆಪಿಯ ಅಬ್ಬರ ತಡೆಯಲು ಏಕಮಾತ್ರ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನ

 ಅಗತ್ಯವಿದೆಯೇ..?

  1. ಇಲ್ಲವಾದಲ್ಲಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಸಮರ್ಥ ವಿರೋಧಿ

 ಒಕ್ಕೂಟವಾಗಿ ಹೊರಹೊಮ್ಮುವುದು ಸಾಧ್ಯವೇ..?

ಇಲ್ಲಿ ಕಾಂಗ್ರೆಸ್ ಕೇಂದ್ರಬಿಂದುವಾದರೂ ನಮ್ಮ ಚಿಂತನೆಯ ಎಡ-ಬಲಗಳಲ್ಲಿ ಕಾಣುತ್ತಿರುವ ಎಲ್ಲಾ ವಿಚಾರಧಾರೆ-ಚಳವಳಿ ಪ್ರೇರಿತ ಸಾಧ್ಯತೆಗಳ ವಿಶ್ಲೇಷಣೆಯೂ ಆಗಬೇಕು ಎಂಬ ಆಶಯ ಹೊತ್ತು ಈ ಸಂಚಿಕೆಯ ಮುಖ್ಯಚರ್ಚೆ ಮೂಡಿಬಂದಿದೆ.

Leave a Reply

Your email address will not be published.