ಕಾಲದ ಕನ್ನಡಿಯಲ್ಲಿ ಬದಲಾಗದ ಬಿಂಬಗಳು

ಇವೆರಡೂ ನಾಟಕಗಳು ಕಾಲೇಜುಗಳಲ್ಲಿ ಪ್ರದರ್ಶಿಸಲು, ವಿದ್ಯಾರ್ಥಿಗಳು ಅಭಿನಯಿಸಲು ಅತ್ಯಂತ ಸೂಕ್ತ ಮತ್ತು ಸರಳವಾದವು. ಅಲ್ಲದೆ ತುಂಬಾ ಕಡಿಮೆ ಅವಧಿಯಲ್ಲಿಯೇ ಮುಗಿಸಬಹುದಾದ ನಾಟಕಗಳು. ಕಾಲದ ಕನ್ನಡಿಯಲ್ಲಿ ಬದಲಾಗದ ಬಿಂಬಗಳು.

-ಎಸ್.ಭೂಮಿಸುತ

ಇತ್ತೀಚೆಗೆ ಬಿಡುಗಡೆಗೊಂಡ ‘ಹತ್ತು ಪತ್ರಗಳು ಮತ್ತು ನಮ್ಮ ಕನಸಿನ ಗೋರಿ’ ಎಂಬ ಎರಡು ಕಾಲೇಜು ನಾಟಕಗಳ ಕೃತಿ ಪ್ರಸ್ತುತ ಸಂದರ್ಭಕ್ಕೆ ತೀರಾ ಹತ್ತಿರವಾಗುವಂತಿದೆ. ಲೇಖಕ ಜಯರಾಮ್ ರಾಯಪುರ ಅವರು, ತಮ್ಮ ಕಾಲೇಜು ದಿನಗಳಲ್ಲಿ, ಅಂದರೆ 1987ರ ಹೊತ್ತಿನಲ್ಲಿ ಇವೆರಡು ನಾಟಕಗಳನ್ನು ರಚಿಸಿದ್ದು, ಇತ್ತೀಚೆಗೆ ಅವನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಮೂಲಕ ಎರಡು ಅತ್ಯುತ್ತಮ ನಾಟಕಗಳನ್ನು ಓದುಗರ ಮುಂದಿರಿಸಿದ್ದಾರೆ.

ಶಿವರಾಮ ಕಾರಂತರ ‘ಮೈಗಳ್ಳನ ದಿನಚರಿಯಿಂದ’ ಎಂಬ ಸ್ವಾರಸ್ಯಕರವಾದ ಪ್ರಬಂಧ ಶೈಲಿಯ ಕೃತಿಯಿದೆ. ಅದರಲ್ಲಿ ಒಂದು ಕಡೆ, ‘ಪತ್ರಿಕೆಗಳನ್ನು ಓದಬಾರದು’ ಎಂದು ಮೈಗಳ್ಳನ ಪರವಾಗಿ ನಿಂತು ಲೇಖಕರು ಹೇಳುತ್ತಾರೆ. ಅಲ್ಲದೆ ಅದನ್ನು ಸಮರ್ಥಿಸುತ್ತಾರೆ ಕೂಡಾ. ಐವತ್ತು ವರ್ಷಗಳಿಗೂ ಹಿಂದಿನ ಪತ್ರಿಕೆಯನ್ನು ತೆಗೆದು ನೋಡಿದರೂ, ಇಂದಿನ ಪತ್ರಿಕೆಯನ್ನು ಓದಿದರೂ ವಿಷಯಗಳು, ಘಟನೆಗಳು ಒಂದೇ ಇರುತ್ತವೆ. ಆದರೆ ಸಂದರ್ಭ, ಸನ್ನಿವೇಶ, ಬಳಕೆಯ ಉಪಕರಣಗಳು, ವ್ಯಕ್ತಿಗಳು ಬದಲಾಗಿರುತ್ತಾರೆ ಅಷ್ಟೆ ಎನ್ನುತ್ತಾನೆ ಮೈಗಳ್ಳ.

 

ಹತ್ತು ಪತ್ರಗಳು ಮತ್ತು ನಮ್ಮ ಕನಸಿನ ಗೋರಿ
(ಎರಡು ಕಾಲೇಜು ನಾಟಕಗಳು)
ಜಯರಾಮ್ ರಾಯಪುರ
ಪುಟ: 76, ಬೆಲೆ: ರೂ.50
ಅಂಕುರ ಪ್ರಕಾಶನ, ನಂ 656,
2ನೇ ಮುಖ್ಯರಸ್ತೆ, 11ನೇ ಬ್ಲಾಕ್,
ನಾಗರಬಾವಿ 2ನೇ ಹಂತ, ಬೆಂಗಳೂರು- 560072

1987ರ ಹೊತ್ತಿನ ಈ ನಾಟಕಗಳು ಎರಡು ಪ್ರತ್ಯೇಕ ವಿಚಾರಗಳನ್ನು ಇಂದಿನ ಸಮಾಜದ ಮುಂದಿಡುವಾಗ ಈ ತಲೆಮಾರಿನ ಓದುಗರು ಬೆರಗಾಗುವುದರಲ್ಲಿ ಆಶ್ಚರ್ಯವಿಲ್ಲ. ತೀರಾ ಇತ್ತೀಚೆಗೆ ದೇಶದ ಪ್ರಮುಖ ವಿಶ್ವವಿದ್ಯಾಲಯವಾಗಿರುವ ಜೆಎನ್ಯೂನಲ್ಲಿ ನಡೆದ ಹಲ್ಲೆ, ಪ್ರತಿಭಟನೆಯ ಘಟನೆಗಳು ನಮಗೆ ಹೊಸತಾಗಿ ಕಂಡರೂ, ಮೂವತ್ತು ವರ್ಷಗಳ ಹಿಂದೆ ಅದೇ ಜೆಎನ್ಯೂನಲ್ಲಿ ವಿದ್ಯಾರ್ಥಿಯಾಗಿದ್ದಾಗ ಈ ಲೇಖಕರು ‘ನಮ್ಮ ಕನಸಿನ ಗೋರಿ’ ಎಂಬ ನಾಟಕವನ್ನು ಬರೆಯಬೇಕಾದರೆ ಅವರಿಗೆ ಪ್ರೇರಣೆಯಾಗಿ ಅಲ್ಲಿನ ಸದರ್ಭಗಳು ಹಾಗೇ ಇದ್ದಿರಬೇಕಲ್ಲವೇ ಎಂಆಲೋಚನೆ ಹುಟ್ಟುತ್ತದೆ. ಅಲ್ಲದೆ ನಾಟಕದಲ್ಲಿ ಬರುವ ಸನ್ನಿವೇಶಗಳೂ ಇಂದಿನ ಸಂದರ್ಭಗಳಿಗೂ ಹಿಂದಿನ ಸಂದರ್ಭಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ ಎನ್ನುವುದನ್ನು ಪುಷ್ಟೀಕರಿಸುತ್ತವೆ. ಜಯರಾಮ್ ರಾಯಪುರ ಅವರು ಹಿಂದೆ ಬರೆದ ನಾಟಕಗಳನ್ನು ಈಗ ಪ್ರಕಟಿಸಿದ್ದೇ ಸೂಕ್ತವಾಗಿದೆ (ಅಂದೇ ಪ್ರಕಟಿಸಿದ್ದರೆ ಇವು ಇಂದಿಗೂ ಪ್ರಸ್ತುತ ಎಂದು ಹುಡುಕಿ ಹೇಳುವುದು ಕಷ್ಟವಾಗುತ್ತಿತ್ತು).

ಕೃತಿಯಲ್ಲಿರುವ ಮೊದಲ ನಾಟಕ ‘ಹತ್ತು ಪತ್ರಗಳು’. ಎರಡು ಪಾತ್ರಗಳನ್ನಿಟ್ಟುಕೊಂಡು ಎರಡು ಬಗೆಯ ಪತ್ರಗಳ ವಿನಿಮಯದ ಮೂಲಕ ಕಾಲದ, ಆಲೋಚನೆಗಳ ಬದಲಾವಣೆ ಹಾಗೂ ಸಂಧಿಸುವಿಕೆಯ ಸಾಧ್ಯತೆಯನ್ನು ಈ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಅಪ್ಪ ಹಾಗೂ ಮಗ ಸೂರಿಯ ನಡುವಿನ ಪತ್ರ ಸಂಭಾಷಣೆ ಕೇವಲ ಕುಶಲೋಪರಿಯ ಪತ್ರಗಳಾಗಿಯ ಷ್ಠೆ ಕಾಣುವುದಿಲ್ಲ. ಅವು ಸಮಾಜದ ಮುಂದಿರುವ ಸವಾಲುಗಳನ್ನು ಪ್ರಶ್ನೆ ಮಾಡುತ್ತವೆ, ಟೀಕಿಸುತ್ತವೆ, ವಿಮರ್ಶಿಸುತ್ತವೆ. ತನ್ನ ಹರೆಯದ ದಿನಗಳಿಂದಲೇ ಸಾಮಾಜಿಕ ವ್ಯವಸ್ಥೆ ಹೇಗಿತ್ತು ಎಂಬುದನ್ನು, ಜನರ ಮನಸ್ಥಿತಿ ಹಾಗೂ ಭಿನ್ನಾಭಿಪ್ರಾಯಗಳಜತೆ ಸೆಣಸಿಕೊಂಡು ಬದುಕುವಲ್ಲಿನ ಕಷ್ಟವನ್ನು ಅಪ್ಪನ ಪತ್ರಗಳು ತೆರೆದಿಡುತ್ತವೆ. ಜತೆಗೆ ತನ್ನ ಮಗನ ಕಾಲದವರೆಗೂ ಸಮಾಜದಲ್ಲಿ ಹೇಳಿಕೊಳ್ಳುವಂತಹ ಪರಿವರ್ತನೆ ಏನೂ ಆಗಿಲ್ಲ ಎನ್ನುವುದನ್ನು ಮನದಟ್ಟಾಗಿಸುತ್ತವೆ.

ಇದು ಸೂರಿಯ ತಲೆಮಾರಿನಿಂದ ಮುಂದಿನ ತಲೆಮಾರಿಗೆ ಒಂದು ಕೊಂಡಿಯನ್ನು ಕಲ್ಪಿಸಿಕೊಡುತ್ತದೆ. ಅಲ್ಲದೆ ಸೂರಿಯ ತಂದೆಯೂ ಪುಟ್ಟಮರಿಗೆ ಉತ್ತಮ ಶಿಕ್ಷಣ ಕೊಡಿಸಿ ಸೂರಿಯಂತೆ ಬೆಳೆಸುವ ಬಗ್ಗೆ ಮಾತನಾಡುವುದನ್ನೂ ಇಲ್ಲಿ ಗಮನಿಸಬಹುದು.

ಸೂರಿ ಆಗಾಗ ತನ್ನ ಪತ್ರದಲ್ಲಿ ಪುಟ್ಟಮರಿಯ ಬಗ್ಗೆ ವಿಚಾರಿಸುತ್ತಲೇ ಇರುತ್ತಾನೆ. ಪುಟ್ಟಮರಿಯನ್ನು ಶಾಲೆಗೆ ಸೇರಿಸುವ ಬಗ್ಗೆ, ಮುಂದೆ ತನ್ನ ಜತೆ ಇರಿಸಿಕೊಂಡು ಕಾನ್ವೆಂಟ್‍ನಲ್ಲಿ ಶಿಕ್ಷಣ ಕೊಡಿಸುವ ಬಗ್ಗೆ ಮಾತನಾಡುತ್ತಾನೆ. ಈ ವಿಚಾರಗಳೂ, ಹೇಗಾದರೂ ಮಾಡಿ ಅನವಶ್ಯಕವಾಗಿ ನಾಟಕದ ಕತೆಯನ್ನು ಎಳೆದು ದೀರ್ಘವಾಗಿಸುವ ಉದ್ದೇಶದಿಂದ ತುರುಕಿದಂತಿಲ್ಲ. ಇದು ಸೂರಿಯ ತಲೆಮಾರಿನಿಂದ ಮುಂದಿನ ತಲೆಮಾರಿಗೆ ಒಂದು ಕೊಂಡಿಯನ್ನು ಕಲ್ಪಿಸಿಕೊಡುತ್ತದೆ. ಅಲ್ಲದೆ ಸೂರಿಯ ತಂದೆಯೂ ಪುಟ್ಟಮರಿಗೆ ಉತ್ತಮ ಶಿಕ್ಷಣ ಕೊಡಿಸಿ ಸೂರಿಯಂತೆ ಬೆಳೆಸುವ ಬಗ್ಗೆ ಮಾತನಾಡುವುದನ್ನೂ ಇಲ್ಲಿ ಗಮನಿಸಬಹುದು.

ನಮ್ಮ ಕನಸಿನ ಗೋರಿ, ವಿದ್ಯಾರ್ಥಿ ಚಳವಳಿಯ ಕುರಿತ ವಿಚಾರ ಒಳಗೊಂಡದ್ದು, ಕಾಲೇಜೊಂದರ ವಿದ್ಯಾರ್ಥಿಗಳ ಹಾಸ್ಟೆಲ್ ಶುಲ್ಕ ಹೆಚ್ಚಿಸಿದರ ವಿರುದ್ಧ ನಡೆಯುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೋಲೀಸರು ಲಾಠಿಚಾರ್ಜ್ ಮಾಡುತ್ತಾರೆ (ಜೆಎನ್ಯೂನಲ್ಲಿ ಇದೇ ಘಟನೆ ಇತ್ತೀಚೆಗೆ ನಡೆದಿರುವುದನ್ನು ನೆನಪಿಸಬಹುದು). ಚಿನ್ನಸ್ವಾಮಿ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದು ತೀವ್ರತರದ ಗಾಯಗಳಾಗಿ ಆತ ಆಸ್ಪತ್ರೆ ಸೇರುತ್ತಾನೆ. ಅಚ್ಚರಿ ಎಂದರೆ ಗಾಯಗೊಂಡ ವಿದ್ಯಾರ್ಥಿಯನ್ನು ಕಾಲೇಜಿನಿಂದ ಹೊರಹಾಕಲಾಗುತ್ತದೆ. ಬಳಿಕ ತಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಿನ್ಸಿಪಾಲ್ ಪ್ರಯತ್ನಿಸುವುದು, ಕಾಲೇಜಿನ ವಿ.ಸಿ., ಪ್ರಾಧ್ಯಾಪಕರು ನ್ಯಾಯಯುತವಾದ ಅಂಶಗಳನ್ನು ಬದಿಗಿರಿಸಿ ತಮ್ಮ ಬುಡಕ್ಕೆ ಸಮಸ್ಯೆ ಬಾರದ ಹಾಗೆ ಅಂತರ ಕಾಯ್ದುಕೊಳ್ಳುವ ಬಗೆ, ಪ್ರಸ್ತುತ ಸಮಾಜದ ವಾಸ್ತವ ಸಂಗತಿಗೆ ಈ ನಾಟಕದ ಸನ್ನಿವೇಶಗಳು ಕನ್ನಡಿ ಹಿಡಿಯುತ್ತವೆ. ಕಾಲೇಜುಗಳಲ್ಲಿ ಒಂದು ಘಟನೆ ಬೇರೆ ಬೇರೆ ಆಯಾಮಗಳಲ್ಲಿ ಎಂತೆಂತಹ ತಿರುವುಗಳನ್ನು ಪಡೆಯಬಹುದು ಎಂಬುದನ್ನು ಈ ನಾಟಕ ಚೊಕ್ಕದಾಗಿ, ಸೂಕ್ಷ್ಮವಾಗಿಯೇ ತಿಳಿಸುತ್ತದೆ.

‘ಈ ಉಸಿರುಗಟ್ಟಿಸೋ ವಾತಾವರಣದಲ್ಲಿ ಬದುಕೋದೇ ಹೆಚ್ಚು, ಇನ್ನು ಬೆಳೆಯೋದೆಲ್ಲಿ…’ ಎಂಬ ಆತಂಕದ ಸಾಲನ್ನು ಮಾಲವಿಕಾ ಎನ್ನುವ ಪಾತ್ರ ನುಡಿಯುತ್ತದೆ. ಬಹುಶಃ ಸದ್ಯ ಸುತ್ತಲಿನ ಸಮಾಜವನ್ನು, ನಾವೇ ಬೆಳೆಸಿರುವ, ಬೆಳೆಯಲು ಬಿಟ್ಟಿರುವ ವಾತಾವರಣವನ್ನು ಗಮನಿಸಿದರೂ ಪರೋಕ್ಷವಾಗಿ ಇಂತಹುದೇ ವಾತಾವರಣ ನಮ್ಮ ಮುಂದಿದೆ. ಹೆಚ್ಚಾಗಿ ಹಲವು ವಿಶ್ವವಿದ್ಯಾಲಯಗಳಲ್ಲೇ ಇವೆ. ಮಾಲವಿಕಾ ಎಂಬ ವಿದ್ಯಾರ್ಥಿಯ ಪಾತ್ರ ಈ ಮಾತನ್ನು ನಮ್ಮ ಮುಂದಿಟ್ಟರೂ, ವಾಸ್ತವದಲ್ಲಿ ಉಸಿರುಗಟ್ಟಿಸುವ ವಾತಾವರಣದಲ್ಲಿ ಚಿಂತಕರು, ಪ್ರಾಧ್ಯಾಪಕರೂ ಬದುಕುತ್ತಿದ್ದಾರೆ!

ನಾವೆಲ್ಲ ಅಸಂಗತದಲ್ಲಿ ಕ್ರಾಂತಿಯ ಬಗ್ಗೆ ಮಾತನಾಡಿ ಕ್ರಾಂತಿ ಎಂಬ ಪದ ಅರ್ಥ ಕಳೆದುಕೊಂಡಿದೆ, ಕ್ರಾಂತಿ ಎಂದರೆ ಬದಲಾವಣೆ ಎಂದು ಮಾತ್ರ ಎಂಬ ಮಾತನ್ನು ಮೊದಲೇ ಹೇಳುತ್ತಾನೆ.

ಕ್ರಾಂತಿಯ ವಿಚಾರವಾಗಿ ಮಾತನಾಡುತ್ತಾ, ‘ಜೇಡಕಟ್ಟಿದ ತಮ್ಮ ಮನೆಯನ್ನೇ ಶುದ್ಧಮಾಡಿಕೊಳ್ಳದ ಜನ ಊರಿನ ಕೊಳೆ ತೆಗೆದಾರೆ’ ಎಂಬ ಪ್ರಶ್ನೆಯನ್ನು ಮಧು ಕೇಳುತ್ತಾನೆ. ನಾವೆಲ್ಲ ಅಸಂಗತದಲ್ಲಿ ಕ್ರಾಂತಿಯ ಬಗ್ಗೆ ಮಾತನಾಡಿ ಕ್ರಾಂತಿ ಎಂಬ ಪದ ಅರ್ಥ ಕಳೆದುಕೊಂಡಿದೆ, ಕ್ರಾಂತಿ ಎಂದರೆ ಬದಲಾವಣೆ ಎಂದು ಮಾತ್ರ ಎಂಬ ಮಾತನ್ನು ಮೊದಲೇ ಹೇಳುತ್ತಾನೆ. ಇಂತಹ ಬದಲಾವಣೆಯ ವಿಚಾರದಲ್ಲಿ ಮುಂದಡಿಯಿಡಲು ಹಿಂಜರಿಕೆ ತೋರುವ, ಆಲಸಿತರಾಗುವ ಬಗ್ಗೆ ಈ ಮಾತು ಅಸಮಾಧಾನ ವ್ಯಕ್ತಪಡಿಸುತ್ತದೆ.

ಚಿನ್ನಸ್ವಾಮಿ ಪ್ರತಿಭಟನೆಯಲ್ಲಿ ಗಂಭೀರ ಗಾಯಗೊಂಡ ಬಳಿಕ, ಮುಂದಿನ ಪ್ರತಿಭಟನೆಗಾಗಿ ಸಿದ್ಧಗೊಳ್ಳುವ ಸಂದರ್ಭ ಬಹಳಷ್ಟು ವಿಚಾರಗಳು ಚರ್ಚೆಯಾಗುತ್ತವೆ. ಅವು ಸಣ್ಣ ಪುಟ್ಟ ಸಂಭಾಷಣೆಗಳೇ ಆಗಿರಬಹುದು, ಆದರೆ ಪ್ರಸ್ತುತ ವ್ಯವಸ್ಥೆಗಳಲ್ಲಿನ ಅನ್ಯಾಯಗಳ ವಿರುದ್ಧ ಧ್ವನಿಯೆತ್ತುವ ಸಂದರ್ಭ ಬಂದಾಗ ಒಗ್ಗೂಡಬೇಕಾದ ಬಗೆಗೆ ವಿವೇಚನೆಯ ನಡೆಗಳನ್ನು ಈ ನಾಟಕದ ಸನ್ನಿವೇಶಗಳು ಹೇಳಿಕೊಡುತ್ತವೆ. ದುಡುಕುವಿಕೆ, ಕಲ್ಲೆಸೆಯುವುದು, ಪ್ರತಿಭಟನೆಯ ಶಿಸ್ತನ್ನು ಇಲ್ಲವಾಗಿಸಲು ಪ್ರಯತ್ನಿಸುವ ಮನಸ್ಥಿತಿಗಳು… ಇವೆಲ್ಲದರ ಬಗ್ಗೆಯೂ ಎಚ್ಚರ ವಹಿಸಬೇಕಾದ ಅನಿವಾರ್ಯತೆಯನ್ನು ತಿಳಿಸುತ್ತದೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಇವೆಲ್ಲಾ ಚರ್ಚೆಗಳಿಗೂ ನಾಯಕತ್ವದ ಕೊರತೆಯೇ ಮೂಲಕಾರಣ. ಸೂಕ್ತ ಮುಂದಾಳತ್ವ ಇಲ್ಲದ ಹೋರಾಟಗಳು ಹೇಗೆ ದಿಕ್ಕು ತಪ್ಪಬಹುದು, ಹೋರಾಟಗಾರರ ಸ್ಫೂರ್ತಿಯ ಮೇಲೆ ಯಾವ ರೀತಿಯ ಹೊಡೆತ ನೀಡಬಹುದು ಎಂಬುದೂ ಇಲ್ಲಿ ಅಡಕವಾದ ಸಂಗತಿಯೇ ಆಗಿದೆ.

ಇಲ್ಲಿನ ಎರಡೂ ನಾಟಕಗಳ ಅಂತ್ಯ ಆಶಾವಾದದಿಂದ ಕೂಡಿವೆ. ಬಹುಶಃ ಮುನ್ನುಡಿಯಲ್ಲಿ, ರಂಗಭೂಮಿಯ ಅನುಭವಿ ಶಶಿಧರ ಭಾರಿಘಾಟ್ ಅವರು ಈ ಎರಡೂ ನಾಟಕಗಳನ್ನು ಒಂದರೊಳಗೊಂದು ಸಮ್ಮಿಳಿತಗೊಳಿಸಿ ಪ್ರಯೋಗ ಮಾಡಬಹುದು ಎಂಬ ಸಲಹೆ ನೀಡುವುದಕ್ಕೂ ಈ ಅಂಶ ಕೊಂಚ ಕಾರಣವೂ ಆಗಿರಬಹುದು ಅನಿಸುತ್ತದೆ. ತಂದೆ, ಪ್ರೀತಿಸಿ ಅಂತರ್ಜಾತಿ ಮದುವೆಯಾಗಿ, ಸಮಾಜದ ಮುಂದೆ ಹಲವು ಸವಾಲುಗಳನ್ನು ಎದುರಿಸಿದ ಬಗೆಯನ್ನು ಮಗನ ಸಂದರ್ಭದಲ್ಲಿ ಪ್ರಸ್ತಾಪಿಸುತ್ತಾನೆ. ಅಲ್ಲದೆ ಆ ಕೊರಗಿನಲ್ಲಿ ಸೂರಿಯ ತಾಯಿ ಪ್ರಾಣತೆತ್ತ ಬಗ್ಗೆಯೂ ಹೇಳುತ್ತಾನೆ. ಮಗ ಇನ್ನೊಂದು ಧರ್ಮದ ಹುಡುಗಿಯನ್ನು ಮದುವೆಯಾಗಲು ಹೊರಟಾಗ ಇಂತಹ ಮಾತುಗಳು ತಂದೆಯಿಂದ ಬರುತ್ತವೆ.

ಹೋರಾಟ, ನ್ಯಾಯದ ವಿಷಯದಲ್ಲಿ ಎಲ್ಲವನ್ನೂ ಕಳಕೊಂಡ ಹೊತ್ತಿನಲ್ಲೇ, ಮಧು ತನ್ನ ಕವನದ ಕೊನೆಯ ಪ್ಯಾರಾದ ಮೂಲಕ ಹೊಸದೊಂದು ಆಶಾವಾದದ ಕಿಡಿ ಹೊತ್ತಿಸುತ್ತಾನೆ.

ಅಲ್ಲದೆ ಕೊನೆಯಲ್ಲಿ, ನಾನು ಸೋತೆನೆಂದು ನೀನು ಸೋಲಬಾರದು, ನೀನು ಗೆದ್ದೇ ಗೆಲ್ಲುವೆ ಎಂದು ಮಗನ ಪರವಾಗಿ ನಿಲ್ಲುವ ತಂದೆ, ಕೇವಲ ಮಗನ ಪರವಾಗಿಯಷ್ಠೆ ನಿಂತಿರುವುದಲ್ಲ, ಮಾನವತೆಯ, ಸ್ನೇಹಪರ ಬದುಕಿನ ಪರವಾಗಿ, ಜಾತಿ ಧರ್ಮದ ಕಟ್ಟು ಕಟ್ಟಳೆಗಳ ವಿರುದ್ಧವಾಗಿ ನಿಲ್ಲುತ್ತಾನೆ. ಸಮಾಜ ಇದ್ದಹಾಗೆ ಇರುವುದಿಲ್ಲ, ಎಂದಾದರೊಮ್ಮೆ ಬದಲಾಗುತ್ತದೆ ಎಂಬ ಆಶಾವಾದದೊಂದಿಗೇ ಈ ನಾಟಕ ಮುಗಿಯುತ್ತದೆ.

ಕವಿತೆಯ ಸಾಲಿನೊಂದಿಗೆ ಆರಂಭವಾಗುವ ನಮ್ಮ ಕನಸಿನ ಗೋರಿ, ಕವಿತೆ ಪೂರ್ಣಗೊಳ್ಳುವುದರ ಜತೆಗೆ ಅಂತ್ಯವಾಗುತ್ತದೆ. ಹೋರಾಟ, ನ್ಯಾಯದ ವಿಷಯದಲ್ಲಿ ಎಲ್ಲವನ್ನೂ ಕಳಕೊಂಡ ಹೊತ್ತಿನಲ್ಲೇ, ಮಧು ತನ್ನ ಕವನದ ಕೊನೆಯ ಪ್ಯಾರಾದ ಮೂಲಕ ಹೊಸದೊಂದು ಆಶಾವಾದದ ಕಿಡಿ ಹೊತ್ತಿಸುತ್ತಾನೆ. ಮಣ್ಣಾದ ಕನಸುಗಳು ಚಿಗುರುತ್ತವೆ ಎನ್ನುವ ನಂಬಿಕೆ ನನಗಿಲ್ಲ ಎನ್ನುವಾಗ, ‘ನನಗುಂಟು ಮಾರಾಯ ನನಗುಂಟು ಎಂದು ಕನವರಿಸುವವನಂತೆ ನುಡಿಯುವುದು ಆಶಾವಾದಕ್ಕೆ ಪೂರಕವಾಗಿಯೇ ಇದ್ದಂತಿದೆ.

ಒಬ್ಬ ಸೃಜನಶೀಲ ಲೇಖಕ, ನಾಟಕವನ್ನು ಬರೆಯುವಾಗ ತನ್ನ ಕಣ್ಮುಂದೆ ರಂಗವನ್ನೂ ತರುತ್ತಾನೆ. ಅವರಡನ್ನೂ ಗಮನದಲ್ಲಿಟ್ಟುಕೊಂಡೇ ಬರೆಯಬೇಕಾಗುತ್ತದೆ. ಆ ನಿಟ್ಟಿನಲ್ಲಿ ಜಯರಾಮ್ ರಾಯಪುರ ನೀಡಿರುವ ರಂಗದ ಸಲಹೆಗಳು ಕೂಡಾ ಈ ಕಿರುನಾಟಕಗಳಿಗೆ ಅಗತ್ಯವೂ ಹೌದು, ಸಹಕಾರಿಯೂ ಹೌದು. ಇವೆರಡೂ ನಾಟಕಗಳು ಕಾಲೇಜುಗಳಲ್ಲಿ ಪ್ರದರ್ಶಿಸಲು, ವಿದ್ಯಾರ್ಥಿಗಳು ಅಭಿನಯಿಸಲು ಅತ್ಯಂತ ಸೂಕ್ತ ಮತ್ತು ಸರಳವಾದವುಗಳು. ಅಲ್ಲದೆ ತುಂಬಾ ಕಡಿಮೆ ಅವಧಿಯಲ್ಲಿಯೇ ಮುಗಿಸಬಹುದಾದ ನಾಟಕಗಳು.

ಈ ನಾಟಕಗಳನ್ನು ರಂಗದ ಮೇಲೆ ಪ್ರಯೋಗಿಸುವುದಕ್ಕೂ ಮುಕ್ತ-ಉಚಿತ ಅವಕಾಶವಿದೆ. ಲೇಖಕರಿಗೆ ಹಾಗೂ ಪ್ರಕಾಶಕರಿಗೆ ಮಾಹಿತಿ ನೀಡಿದರಷ್ಠೆ ಸಾಕು ಎಂಬ ಸೂಚನೆಯನ್ನೂ ಪುಸ್ತಕದಲ್ಲಿ ನೀಡಲಾಗಿದ್ದು, ವಿದ್ಯಾರ್ಥಿಗಳಿಗಂತೂ ಹೆಚ್ಚಿನ ಅನುಕೂಲವಾಗಲಿದೆ.

Leave a Reply

Your email address will not be published.