ಕೊರೊನಾ ಗೆಲ್ಲಲು ಜನ ಸನ್ನದ್ಧ

-ಸವಿತಾ ಸುಬ್ರಹ್ಮಣ್ಯಂ

2021ನೇ ಇಸವಿಯಲ್ಲಿ ನಾವು ಬಯಸುವ ಆಶಾದಾಯಕ ಸಂಗತಿಗಳೆAದರೆ, ದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಬಲವಾಗಬೇಕು. 2021ನೇ ಇಸವಿಯಲ್ಲಿ ದೇಶದ ಆರ್ಥಿಕ ಬಿಕ್ಕಟ್ಟು ಬಗೆಹರಿಯುವುದೆಂಬ ನಂಬಿಕೆ, ಕುಸಿದಿದ್ದ ಆರ್ಥಿಕ ವಲಯವು ಸುಧಾರಿಸಬಹುದೆಂಬ ಆಶಾಭಾವನೆ ಜನರಲ್ಲಿ ಮೂಡಿದೆ. ಇದಕ್ಕೆ ಕಾರಣ ‘ಕೊರೊನಾ’ ಆರ್ಭಟ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಜನರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮೊದಲಿನ ಸ್ಥಿತಿಯನ್ನು ಕಂಡುಕೊಳ್ಳುತ್ತಿರುವ ಪ್ರಯತ್ನ.

ಕೊರೊನಾ ಬಗ್ಗೆ ಆರಂಭದಲ್ಲಿ ಇದ್ದ ಭಯ ಈಗ ಜನರಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಎಷ್ಟೋ ಜನರಿಗೆ ಕೊರೊನಾ ಬಂದು ಹೋಗಿದ್ದೇ ಗೊತ್ತಾಗಿಲ್ಲ. ಎಲ್ಲರೂ ತಮ್ಮ ವಲಯಗಳಲ್ಲಿ ಪ್ರಗತಿಯನ್ನು ಕಾಣುವತ್ತ ಗಮನ ಹರಿಸಿದ್ದಾರೆ.

ಕೊರೊನಾಗೆ ಹೆದರುತ್ತಾ ಕುಳಿತರೆ ಜೀವನ ನಡೆಸುವುದು ಕಷ್ಟವಾಗುವುದು ಎಂದು ಜನರಿಗೆ ಅರಿವಾಗಿದೆ. ಈ ನಿಟ್ಟಿನಲ್ಲಿ ಜನರು ಕೊರೊನಾ ವೈರಸ್‌ನ್ನು ಎದುರಿಸಲು ಉತ್ತಮ ಆರೋಗ್ಯ ಸೇವೆ, ಟೆಸ್ಟಿಂಗ್ ವ್ಯವಸ್ಥೆ, ಸಾಮಾಜಿಕ ಅಂತರದಲ್ಲಿ ಜನಜಾಗೃತಿ ಮುಂತಾದ ಕ್ರಮಗಳನ್ನು ತೆಗೆದುಕೊಂಡರೆ ಆರ್ಥಿಕತೆಯ ಜೊತೆಗೆ ಕೊರೊನಾವನ್ನು ಗೆಲ್ಲಬಹುದು ಎನ್ನುವ ಆತ್ಮವಿಶ್ವಾಸದಿಂದ ಧೈರ್ಯವಾಗಿ ತಮ್ಮ ಕ್ಷೇತ್ರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಪ್ರಗತಿಯನ್ನು ಕಾಣುವತ್ತ ಮುಖ ಮಾಡಿದ್ದಾರೆ.

2008-09ರಲ್ಲಿಯೂ ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಿತ್ತು. ಆದರೆ, ಆ ಬಿಕ್ಕಟ್ಟು ಇಷ್ಟೊಂದು ಘೋರವಾಗಿರಲಿಲ್ಲ. 2016ರಲ್ಲಿ ನೋಟ್ ಬ್ಯಾನ್ ಮತ್ತು ಜಿಎಸ್‌ಟಿಯ ಪರಿಣಾಮದಿಂದಾಗಿ ವಾಣಿಜ್ಯ ವ್ಯವಹಾರ ಸ್ಥಗಿತಗೊಂಡಿದ್ದವು.

ಇವೆಲ್ಲದರ ನಡುವೆ ಪರಿಸ್ಥಿತಿಯ ಚೇತರಿಕೆಯ ಹಂತದಲ್ಲಿ ಇರುವಾಗ 2019-20ರಲ್ಲಿ ಎಂದೂ ಕಾಣದ ಆರ್ಥಿಕ ಪರಿಸ್ಥಿತಿಯನ್ನು ಜನರು ಎದುರಿಸಿದರು. ಎಷ್ಟೋ ಜನರು ತಮ್ಮ ಉದ್ಯೋಗವನ್ನೇ ಕಳೆದುಕೊಂಡರು. ಅದೆಷ್ಟೋ ಕೈಗಾರಿಕೆಗಳು ಆಟೋಮೊಬೈಲ್‌ನಂತಹ

ಉತ್ಪನ್ನ ಘಟಕಗಳು, ಹೊಟೇಲ್ ಉದ್ಯಮಗಳು ನೆಲಕಚ್ಚಿದವು. ನಿರುದ್ಯೋಗ ಸಮಸ್ಯೆ ಎದುರಾಯಿತು. ಶಿಕ್ಷಣಕ್ಕೆ ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಲಭ್ಯವಾಗು ತ್ತಿಲ್ಲ. ಕೆಲಸ ಸಿಕ್ಕರೂ ಸೂಕ್ತ ಸಂಬಳ ಸಿಗುತ್ತಿಲ್ಲ. ಇದರಿಂದ ಜನರು ತತ್ತರಿಸಿ ಹೋದರು. ರಿಯಲ್ ಎಸ್ಟೇಟ್ ಕ್ಷೇತ್ರಗಳು ನಷ್ಟ ಅನುಭವಿಸಿದವು.

2019 ಡಿಸೆಂಬರ್‌ನಿAದ 2020 ಜನವರಿ, ಫೆಬ್ರವರಿಯಲ್ಲಿ ಸ್ವಲ್ಪ ಸುಧಾರಣೆಯ ಹಂತ ಕಂಡಿದ್ದ ಆರ್ಥಿಕ ಪರಿಸ್ಥಿತಿಯು ಮತ್ತೆ ಕೊರೊನಾ ವೈರಸ್‌ಗೆ ತುತ್ತಾಯಿತು. ಇದರಿಂದ ಜನರು ಮತ್ತಷ್ಟು ಕುಸಿದುಹೋದರು. ಕೊರೊನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಅಲ್ಲೋಲ ಕಲ್ಲೋಲವಾಯಿತು. ಅದನ್ನು ತಡೆಯುವ ನಿಟ್ಟಿನಲ್ಲಿ ಏನೆಲ್ಲಾ ಪ್ರಯತ್ನಗಳನ್ನು ಮಾಡಿದರು. ಕೋವಿಡ್-19 ಪರಿಣಾಮ ಭಾರತೀಯ ಆರ್ಥಿಕ ಕ್ಷೇತ್ರದ ಮೇಲೆ ಭಾರೀ ಹೊಡೆತ ನೀಡಿತು. ಕೊರೊನಾ ನಿಗ್ರಹಿಸಲು ಸರ್ಕಾರ ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿತು. ಇದರಿಂದ ಜನರ ಓಡಾಟ, ವಸ್ತುಗಳ ಸರಕು-ಸಾಗಾಣಿಕೆಗಳ ವಹಿವಾಟು ನಿಂತು ಹೋಯಿತು. ಇದರಿಂದ ಜನರು ಭಾರೀ ಸಂಕಷ್ಟವನ್ನು ಎದುರಿಸುವಂತಾಯಿತು. ಕೆಲಸವನ್ನು ಕಳೆದುಕೊಂಡು ಊಟಕ್ಕೂ ಪರದಾಡುವ ಸ್ಥಿತಿ ತಲುಪಿದರು.

ಈಗ ಕೊರೊನಾವನ್ನು ಎದುರಿಸಲು ಜನರು ಸನ್ನದ್ಧರಾಗಿದ್ದಾರೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡರೆ ಆರ್ಥಿಕತೆಯ ಜತೆಗೆ ಕೊರೊನಾವನ್ನು ಗೆಲ್ಲಬಹುದು ಎಂಬ ನಿಟ್ಟಿನಲ್ಲಿ ಜನರು ನಿಧಾನವಾಗಿ ತಮ್ಮ ವಲಯಗಳಲ್ಲಿ ಮೊದಲಿನಂತೆ ತೊಡಗಿಸಿಕೊಳ್ಳುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದರಿಂದ 2-3 ತಿಂಗಳಿನಿAದ ಸ್ವಲ್ಪ ಮಟ್ಟಿಗೆ ಆರ್ಥಿಕ ಚೇತರಿಕೆ ಕಾಣುತ್ತಿದೆ. ಸರಕು-ಸಾಗಾಣಿಕೆಗಳ ವಹಿವಾಟುಗಳು ನಡೆಯುತ್ತಿರುವುದರಿಂದ 2021ನೇ ಇಸವಿಯಲ್ಲಿ ಆರ್ಥಿಕ ಚೇತರಿಕೆಯು ಹೊಸ ಭರವಸೆಗಳನ್ನು ಹೊತ್ತು ತರುವ ಆಶಾದಾಯಕ ವರ್ಷವಾಗಿರಲಿ ಎನ್ನುವುದು ನಮ್ಮ ಆಶಯ.

 

Leave a Reply

Your email address will not be published.