ಕೋವಿಡ್ ಎಂಬ ಕನ್ನಡಿ

ಕೋವಿಡ್ ಎಂಬ ಕ್ಷುದ್ರ ಜೀವಿ ನಮ್ಮ ನರನಾಡಿಗಳನ್ನು ಹಿಂಡಿಹಿಚುಕಿ ನಿತ್ರಾಣಗೊಳಿಸಿದೆ. ಅಂಕೆಗೆ ನಿಲುಕದ ಸಾವು ನೋವುಗಳ ಲೆಕ್ಕಾಚಾರದಲ್ಲಿ ನಮ್ಮ ಕೆಲವು ನಂಬಿಕೆ, ವಿಶ್ವಾಸ ಮತ್ತು ಇದೇ ಸತ್ಯ ಇದೇ ನಿತ್ಯ ಎಂಬ ಮಾನಸಿಕತೆಗಳನ್ನೂ ಬುಡಮೇಲಾಗಿಸಿದೆ. ಇದರ ಜೊತೆಗೆ ನಮ್ಮ ರಾಷ್ಟ್ರ, ಸರ್ಕಾರಗಳು, ಪಕ್ಷಗಳು ಮತ್ತು ಸಂಸ್ಥೆಗಳ ಹಲವು ಗಂಭೀರ ನ್ಯೂನತೆಗಳನ್ನು ಬಯಲಿಗೆಳೆದು ನಮ್ಮ ಸಮಾಜದ ಕುರೂಪಕ್ಕೆ ಕನ್ನಡಿ ಹಿಡಿದಿದೆ.

  • ವಿಶ್ವದ ಅತ್ಯುತ್ತಮ ರಾಷ್ಟ್ರಗಳಲ್ಲಿ ನಮ್ಮದೂ ಒಂದೆಂದು ಬೀಗುತ್ತಿದ್ದ ನಮಗೆ ಇನ್ನೂ ಎಷ್ಟು ಹಿಂದುಳಿದಿದ್ದೇವೆ ಎಂದು ತೋರಿದೆ.
  • 56 ಇಂಚಿನ ಎದೆಯ ನಾಯಕತ್ವದ ಕೇಂದ್ರ ಸರ್ಕಾರದ ಅತಿಸೀಮಿತ

        ತಿಳಿವಳಿಕೆ ಮತ್ತು ಅಸಹಾಯಕತೆ ಬಯಲಿಗೆಳೆದಿದೆ.

  • ಜನರ ಜೀವದ ಜೊತೆಗೆ ಚೆಲ್ಲಾಟವಾಡುವ ಚುನಾವಣೆಗಳು ಮತ್ತು

        ಕುಂಭಮೇಳಗಳು ಅಧಿಕಾರಕ್ಕಾಗಿ ಹಪಹಪಿಸುವ ನಮ್ಮ ಪಕ್ಷಗಳ

        ದಿವಾಳಿತನ ಪ್ರದರ್ಶಿಸಿವೆ.

  • ಕೇರಳದಿಂದ ಉತ್ತರ ಪ್ರದೇಶಗಳವರೆಗೆ ನಮ್ಮ ರಾಜ್ಯಗಳ ಅಜಗಜಾಂತರ

        ಕ್ಷಮತೆ ತೆರೆದಿಟ್ಟಿವೆ.

  • ನಮ್ಮ ಶಿಥಿಲ ಆರೋಗ್ಯ ವ್ಯವಸ್ಥೆಯ ಜೊತೆಗೆ ಜನರ ಕುಂದಿದ ಆರೋಗ್ಯ

        ಸ್ಥಿತಿಗತಿಗಳನ್ನು ಬಿಚ್ಚಿಟ್ಟಿದೆ.

  • ನಮ್ಮಔಷಧಿ ರಾಜಧಾನಿ ಖ್ಯಾತಿಗೆ ಮಸಿ ಬಳಿದಿದ್ದರೂ ಕಡೆಗೆ ಖಾಸಗಿ

        ಉದ್ಯಮಗಳೇ ದೇಶದ ಕೈ ಹಿಡಿಯಬೇಕಾದ ಅನಿವಾರ್ಯತೆ ತೋರಿಸಿದೆ.

  • ನಾ ಮುಂದು ತಾ ಮುಂದು ಎನ್ನುವ ಸ್ವಾರ್ಥದ ನಡುವೆಯೂ ನಮ್ಮ

        ಜನರ ಸಹಿಷ್ಣುತೆ ಮತ್ತು ಪರಸ್ಪರ ಸಹಾಯದ ಹಲವು ನಿದರ್ಶನಗಳನ್ನೂ

        ತೋರಿದೆ.

ಹೀಗೆ ಈ ಕೋವಿಡ್ ಸಾಂಕ್ರಾಮಿಕ ನಮ್ಮ ದೇಶ ಮತ್ತು ಸಮಾಜದ ಹಲವು ಹುಳುಕು-ಥಳುಕಿಗೆ ಕನ್ನಡಿ ಹಿಡಿದಿದೆ. ಇದುವರೆಗೆ ಸುಲಭವಾಗಿ ನಮ್ಮ ಅರಿವಿಗೆ ನಿಲುಕದ ಸಾರ್ವಜನಿಕ ಸತ್ಯಗಳನ್ನು ಅನಾವಣಗೊಳಿಸಿದೆ. ಈ ಕುರಿತ ಮುಖ್ಯ ಚರ್ಚೆ…

Leave a Reply

Your email address will not be published.