ಗಜಲ್

-ಡಾ.ಬಸವರಾಜ ಸಾದರ

 

 

 

ಈಗಲಾದರೂ ದೂಡಬೇಡ ದೂರ, ಬಿಡು ನಿನ್ನ ಪಾದ ಮುಟ್ಟಲು

ಕಲ್ಲಾಗಬೇಡ ಕರಗು, ಕಾರಣವಾಗದಿರು ಈ ಪಾಪಿಗೆ ಶಾಪ ತಟ್ಟಲು

 

ಬೇಡಿದ್ದನೀವ ಮಾತು ಹೇಳುತ್ತ ಬಂದೆ, ಕೊಟ್ಟದ್ದೇನು ಖಾಲಿ ತಟ್ಟೆ

ಬಳಸಿಕೊಂಡೆ ಅರ್ಪಿಸಿದ್ದೆಲ್ಲ ಸುಂದರ ಸ್ಥಾವರ ಗೋಪುರ ಕಟ್ಟಲು 

 

ಬೇಡ ದಯೆ-ಧರ್ಮಗಳ ಮಾತು, ನಡೆಯಲೀಗ ಪಕ್ಕಾ ವ್ಯವಹಾರ

ಫಲವಿಲ್ಲ ನಿನ್ನ ಯಾಚಿಸಿ, ಸುರು ಮಾಡದಿರು ಮತ್ತೆ ತೌಡು ಕುಟ್ಟಲು

 

ಎಷ್ಟೆಂದು ತಂದು ನಿಲ್ಲಿಸಲಿ ಸಾಕ್ಷಿ, ನಂಬಲಿಲ್ಲ ಮಾರಿಬಿಟ್ಟೆ ಆತ್ಮಸಾಕ್ಷಿ  

ಸುಟ್ಟುಸತ್ತವು ಎದೆಭಾವ, ನೀ ಏರಿ ಹೋದೆ ಅಪನಂಬಿಕೆಯ ಮೆಟ್ಟಿಲು

 

ಸಾದರಪಡಿಸಿದ್ದೇನು ಕಮ್ಮಿಯೆ? ವ್ಯಥ್ರ್ಯವಾಯ್ತು ನಿನ್ನ ನಿತ್ಯದಾರಾಧನೆ

ಪಾಠವಾಯ್ತು ನಿನ್ನ ಆಟ, ನಿರ್ಧರಿಸಿರುವೆನೀಗ ಹಸಿದವರ ಕೈಮುಟ್ಟಲು.

-ಡಾ.ಬಸವರಾಜ ಸಾದರ

Leave a Reply

Your email address will not be published.