ಗ್ರಾಮೀಣ ಗ್ರಂಥಾಲಯ ಓದುಗರಿಗೆ ಕೊಡುಗೆ

ಬದುಕು ಕಟ್ಟಿಕೊಳ್ಳಲು, ಬೌದ್ಧಿಕವಾಗಿ ಬೆಳೆಯಲು ಅಗತ್ಯವಾದ ಮಾಹಿತಿ, ವಿಶ್ಲೇಷಣೆ, ಸಿದ್ಧಾಂತಗಳನ್ನು ಮೀರಿದ ವೈಚಾರಿಕತೆ ಹೊತ್ತು ಬರುತ್ತಿರುವ ‘ಸಮಾಜಮುಖಿ’ ಮಾಸಿಕವನ್ನು ನೀವೆಲ್ಲಾ ಗಮನಿಸಿದ್ದೀರಿ. ಅಂತಃಸತ್ವ ಮತ್ತು ಬಾಹ್ಯ ಸ್ವರೂಪ ಎರಡರಲ್ಲೂ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡಿರುವ ಈ ಪತ್ರಿಕೆಯನ್ನು ನೀವು ಅಷ್ಟೇ ವಾತ್ಸಲ್ಯದಿಂದ ಬರಮಾಡಿಕೊಡಿರುವಿರಿ. ಸಮಾಜಮುಖಿಗೆ ವರ್ಷ ತುಂಬಿದ ಈ ಸಂದರ್ಭದಲ್ಲಿ ಓದುಗರ ಬಳಗವನ್ನು ವಿಸ್ತರಿಸಿಕೊಳ್ಳುವ ತವಕ ನಮ್ಮದು. ಈ ನಿಟ್ಟಿನಲ್ಲಿ ಹೀಗೊಂದು ಯೋಜನೆಯನ್ನು ನಿಮ್ಮೆದುರು ಮಂಡಿಸುತ್ತಿದ್ದೇವೆ.

ಯೋಜನೆಯ ವಿವರ

ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ ಗ್ರಂಥಾಲಯ ತಲುಪುವುದು ‘ಸಮಾಜಮುಖಿ’ಯ ಮಹಾದಾಸೆ. ಗ್ರಾಮಕ್ಕೆ ತಲುಪುವ ಪತ್ರಿಕೆಯ ಒಂದು ಪ್ರತಿ ನೂರಾರು ಓದುಗರ ದಾಹ ತಣಿಸುತ್ತದೆ ಎಂಬ ಕಾಳಜಿ, ಕಳಕಳಿ ನಮ್ಮದು. ಇಂತಹ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಲು ನಿಮಗೂ ಅವಕಾಶವಿದೆ. ನಿಮ್ಮ ಆಯ್ಕೆಯ ಒಂದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ (ಸುಮಾರು 20) ಗ್ರಂಥಾಲಯಗಳಿಗೆ ಪತ್ರಿಕೆಯನ್ನು ಪ್ರಾಯೋಜಿಸಬಹುದು.

ಹತ್ತು ಸಾವಿರ ರೂಪಾಯಿ ನೀಡಿದರೆ ನಿಮ್ಮ ಹೆಸರಿನಲ್ಲಿ ಆಯಾ ಗ್ರಂಥಾಲಯಗಳಿಗೆ ಒಂದು ವರ್ಷ ಸಮಾಜಮುಖಿ ಮಾಸಪತ್ರಿಕೆ ಕಳಿಸುತ್ತೇವೆ. ಹಾಗೆಯೇ ಕೃತಜ್ಞತಾಪೂರ್ವಕವಾಗಿ ಸಮಾಜಮುಖಿಯಲ್ಲಿ ನಿಮ್ಮ ಭಾವಚಿತ್ರ ಪ್ರಕಟಿಸುತ್ತೇವೆ. ಈ ಯೋಜನೆಯಡಿ ತಮ್ಮ ಆಯ್ಕೆಯ ತಾಲೂಕಿನ ಗ್ರಾಮೀಣ ಗ್ರಂಥಾಲಯಗಳಿಗೆ ಸಮಾಜಮುಖಿ ವಾರ್ಷಿಕ ಚಂದಾ ಕೊಡುಗೆ ನೀಡಬಯಸುವ ಆಸಕ್ತ ಹಿತೈಷಿಗಳು ಸಂಪರ್ಕಿಸ ಬಹುದು: 9606934018, 9844030819.

‘ಸಮಾಜಮುಖಿ’ ಕಾರ್ಯಕ್ಕೆ ಕೈಜೋಡಿಸಿದ ಹಿತೈಷಿಗಳು

‘ಸಮಾಜಮುಖಿ’ ಚಂದಾದಾರರ ಗಮನಕ್ಕೆ

ಸಮಾಜಮುಖಿ ಮಾಸ ಪತ್ರಿಕೆಯನ್ನು ಪ್ರತೀ ತಿಂಗಳು 2ನೇ ತಾರೀ ಖು ಬೆಂಗಳೂರಿನಿಂದ ಅಂಚೆ ಮೂಲಕ ಎಲ್ಲಾ ಚಂದಾದಾರ ರಿಗೆ ರವಾನಿಸಲಾಗುವುದು. ಸಾಮಾನ್ಯವಾಗಿ ಸಂಚಿಕೆ ಒಂದು ವಾರದೊಳಗೆ ಚಂದಾದಾರರು ನೀಡಿದ ವಿಳಾಸಕ್ಕೆ ತಲುಪುತ್ತದೆ. ಕಾರಣಾಂತರಗಳಿಂದ ಪ್ರತಿ ತಲುಪದಿದ್ದರೆ ನಿಮ್ಮ ಅಂಚೆ ಕಚೇರಿ ಯಲ್ಲಿ ವಿಚಾರಿಸಿ, 12ನೇ ತಾರೀಖಿನ ನಂತರ 9606934018, 9606934019 ಈ ಮೊಬೈಲ್ ಸಂಖ್ಯೆಗೆ ನಿಮ್ಮ ವಿಳಾಸ, ಚಂದಾ ವಿವರವನ್ನು ಮೆಸೇಜ್ ಮಾಡಿ. ನಾವು ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರಿನ ಕೆಲವು ಭಾಗಗಳ ಅಂಚೆ ಪಿನ್ ಕೋಡ್‍ಗಳು ಬದಲಾಗಿದ್ದು, ಚಂದಾದಾರರು ಕೂಡಲೇ ಹೊಸ ಪಿನ್ ಕೋಡ್‍ಗಳನ್ನು ಕಳುಹಿಸಿ ಕೊಡುವುದು ಅಗತ್ಯ.

ಚಂದಾ ಅವಧಿ ಮುಗಿದಾಗ ಎಸ್‍ಎಮ್‍ಎಸ್ ಮೂಲಕ ಮಾಹಿತಿ ನೀಡಲಾಗುವುದು. ಚಂದಾದಾರರು ಕೂಡಲೇ ಗಮನಹರಿಸಿ ಚಂದಾ ನವೀಕರಿಸಿಕೊಳ್ಳಬೇಕಾಗಿ ವಿನಂತಿ. 

Leave a Reply

Your email address will not be published.