ಚಪ್ಪರದ ಮನೆಯಲ್ಲಿ ಹೈನುಗಾರಿಕೆ

ಎಮ್ಮೆ-ಮೇಕೆ ಸಾಕಾಣಿಕೆಯಲ್ಲಿ ಬದುಕು ಕಟ್ಟಿಕೊಂಡ ಹಾಎಮ್ಮೆ-ಮೇಕೆ ಸಾಕಾಣಿಕೆಯಲ್ಲಿ ಬದುಕು ಕಟ್ಟಿಕೊಂಡ ಹಾವೇರಿಯ ಚಿಕ್ಕ ಕುಟುಂಬದ ವಿವರ ಇಲ್ಲಿದೆ.ವೇರಿಯ ಚಿಕ್ಕ ಕುಟುಂಬದ ವಿವರ ಇಲ್ಲಿದೆ.

ಅತ್ತ ದೊಡ್ಡ ಶಹರವು ಅಲ್ಲದ, ಇತ್ತ ದೊಡ್ಡ ಹಳ್ಳಿಯು ಅಲ್ಲದ ಜಿಲ್ಲಾ ಕೇಂದ್ರ ಸ್ಥಳವಾಗಿರುವ ಹಾವೇರಿ ನಗರದ ನಾಗೇಂದ್ರನಮಟ್ಟಿಯ ಸ್ಲಂ ಪ್ರದೇಶ ನಾನಾ ಸ್ತರದ ಹತ್ತಾರು ಸಾವಿರ ಜನತೆಗೆ ಆಶ್ರಯ ನೀಡಿದೆ. ಈ ಪ್ರದೇಶದಲ್ಲಿ ಕಳೆದ ಎರಡು ದಶಕಗಳ ಹಿಂದೆ ರಮೇಶ ಹ್ಯಾಡ್ಲ, ಶಶಿಕಲಾ ಹ್ಯಾಡ್ಲ್ ದಂಪತಿ ತಮಗೆ ಸಿಕ್ಕ ಆಶ್ರಯ ನಿವೇಶನದಲ್ಲಿ ತಮ್ಮ ಮಕ್ಕಳೊಂದಿಗೆ ಚಿಕ್ಕ ಚಪ್ಪರದ ಮನೆ ನಿರ್ಮಿಸಿಕೊಂಡರು.

ವಾಸಕ್ಕೇನೋ ಚಪ್ಪರದ ಮನೆಯಾಯಿತು, ಊಟಕ್ಕೇನು? ಎನ್ನುವ ಆಲೋಚನೆಯಲ್ಲಿದ್ದ ಇವರಿಗೆ ಥಟ್ಟನೆ ಹೊಳೆದದ್ದು ಹೈನಾನುಗಾರಿಕೆ. ಹೇಗೂ ಮನೆಯ ಮುಂದೆ ಖಾಲಿ ಸ್ಥಳವಿದೆ, ಅಲ್ಲಿ ದನಗಳನ್ನು ಕಟ್ಟಬಹುದು, ಅವುಗಳಿಗೆ ಬೇಕಾದ ಮೇವನ್ನು ಸಹ ಸಂಗ್ರಹ ಮಾಡಬಹುದು ಎಂದು ಯೋಚಿಸಿ ಎರಡು ದಶಕಗಳ ಹಿಂದೆ ಸಾಲಮಾಡಿ ಎರಡು ಎಮ್ಮೆಗಳನ್ನು ಖರೀದಿಸಿದ್ದಾಯಿತು. ಆಗಿನಿಂದ ಎಮ್ಮೆಗಳೇ ಇವರ ಆದಾಯದ ಮೂಲಗಳಾಗಿವೆ. ಇಂದು ನಾಲ್ಕು ಆಕಳು, ಮೂರು ಎಮ್ಮೆಗಳು ಇವರ ಮನೆಯಲ್ಲಿವೆ. ಚಪ್ಪರಮನೆ ಇಂದು ಸಿಮೆಂಟ್ ಶೀಟಿನ ಮನೆಯಾಗಿದೆ. ಮನೆಯ ಯಜಮಾನ ರಾಮಣ್ಣ ಇದೀಗ ಎಮ್ಮೆ ರಾಮಣ್ಣನಾಗಿದ್ದಾನೆ.

ರಾಮಣ್ಣ ದಿನನಿತ್ಯ ಎಮ್ಮೆಗಳನ್ನು ಕಾಯ್ದುಕೊಂಡು ಅವುಗಳ ಜತನ ಮಾಡುವುದರ ಜೊತೆಗೆ ಹಾಲು ಕರೆದು ಮನೆಗಳಿಗೆ ಹಾಕುವುದರ ಜೊತೆಗೆ ಡೈರಿಗೂ ಹಾಲು ಹಾಕಿಬರುತ್ತಾರೆ. ಮನೆಯಲ್ಲಿ ಇವರ ಧರ್ಮಪತ್ನಿ ಹಾಲಿನ ಮಾರಾಟದ ಲೆಕ್ಕಪತ್ರ ನಿಭಾಯಿಸುತ್ತಾ, ಎಮ್ಮೆಗಳಿಗೆ ಮೇವು, ಅವುಗಳಿಗೆ ನೀರು ಕುಡಿಸುವುದು, ಕೊಟ್ಟಿಗೆಯನ್ನು ಸ್ವಚ್ಛಗೊಳಿಸುವುದು, ಮಕ್ಕಳಜವಾಬ್ದಾರಿ ನಿರ್ವಹಣೆ ಮಾಡುತ್ತಾರೆ.

ಇದೀಗ ಇವರ ಇಬ್ಬರು ಮಕ್ಕಳು ವಯಸ್ಸಿಗೆ ಬಂದಿದ್ದು, ಎಮ್ಮೆ ಸಾಕಾಣೆಯ ಜೊತೆ ಮೇಕೆ ಸಾಕಾಣಿಕೆಯನ್ನು ವಿಸ್ತರಿಸಿಕೊಂಡಿದ್ದಾರೆ. ಈ ಆದಾಯದಲ್ಲಿಯೇ ತಮ್ಮ ಮಗಳ ಮದುವೆಯನ್ನು ಮಾಡಿದ್ದಾರೆ.

ಹಿರಿಯ ಮಗ ಮಹಾಂತೇಶ ಹೆಚ್ಚಿಗೆ ಓದದ ಕಾರಣ ಅವನೂ ಸಹ ಹೈನುಗಾರಿಕೆಯ ಕಾಯಕಕ್ಕೆ ಕೈಜೊಡಿಸಿದ್ದಾನೆ. ಇನ್ನೊಬ್ಬ ಮಗ ಈರಣ್ಣ ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿ ಪಡೆದಿದ್ದಾನೆ; ಕೆಲಕಾಲ ನೌಕರಿ ಮಾಡಿ ತೃಪ್ತಿ ಕಾಣದೆ ಹೈನೋದ್ಯೋಗಕ್ಕೆ ಜೈ ಎಂದಿದ್ದಾನೆ. ಅತ್ಯಾಧುನಿಕ ಮೇಕೆ ಸಾಕಾಣಿಕೆಯ ಕೇಂದ್ರ ಆರಂಭಿಸುವ ಹುಮ್ಮಸ್ಸಿನಲ್ಲಿದ್ದಾನೆ.

ಹೈನುಗಾರಿಕೆಯಿಂದ ಅಂತ ದೊಡ್ಡ ಲಾಭವಿಲ್ಲದಿದ್ದರೂ ಜೀವನ ನಿರ್ವಹಣೆಗೆ ತೊಂದರೆ ಇಲ್ಲ ಎನ್ನುವುದು ಈ ಕುಟುಂಬದ ಪ್ರಾಮಾಣಿಕ ಅನಿಸಿಕೆ. ನಾಲ್ವರು ಇರುವ ಈ ಕುಟುಂಬದ ಹೈನುಗಾರಿಕೆ ಆದಾಯ 18 ಸಾವಿರ ರೂಪಾಯಿ! ಇನ್ನು 40ಕ್ಕೂ ಹೆಚ್ಚು ಮೇಕೆಗಳು ಇರುವುದರಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಮೂರ್ನಾಲ್ಕು ಮೇಕೆಮರಿಗಳನ್ನು ಮಾರಾಟಮಾಡುತ್ತಾರೆ.

ಮೇಕೆ ಮಾರಾಟದಿಂದ ರೂ.10000 ಆದಾಯ ಬರುತ್ತದೆ. ಸದರಿ ಆದಾಯವನ್ನು ಇವರು ತಮ್ಮ ಮನೆಖರ್ಚಿಗೆ ಬಳಸಿಕೊಳ್ಳದೇ ಮೇಕೆಸಾಕಾಣಿಕೆಗೆ ತೊಡಗಿಸಿ ಮೇಕೆಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತಾ ಹೊರಟಿದೆ. ಅತ್ಯಾಧುನಿಕ ಮೇಕೆ ಸಾಕಾಣಿಕೆಯ ಕೇಂದ್ರವನ್ನು ಸ್ಥಾಪಿಸಬೇಕು, ಆ ಮೂಲಕ ಹತ್ತಾರು ಜನರಿಗೆ ಪ್ರೇರಣೆಯಾಗಬೇಕೆನ್ನುವ ಕನಸು ಕಾಣುತ್ತಿದ್ದಾನೆ ಈರಣ್ಣ ಹ್ಯಾಡ್ಲ.

ಮನೆಯ ಮಾಲಿಕನ ಹೆಸರು: ರಾಮಣ್ಣ ಹನುಮಂತಪ್ಪ ಹ್ಯಾಡ್ಲ, ಜಾತಿ: ಹಿಂದು ವಾಲ್ಮೀಕಿ (ಎಸ್ಟಿ), ಶಿಕ್ಷಣ: ಇಲ್ಲ, ಸ್ವತ್ತು: ಸರ್ಕಾರ ನೀಡಿರುವ ನಿವೇಶನ ಬಿಟ್ಟರೇ ಬೇರ್ಯಾವ ಸ್ವತ್ತು ಇಲ್ಲ, ವೃತ್ತಿ: ದನಕಾಯುವುದು. ಪತ್ನಿ: ಶಶಿಕಲಾ ರಾಮಣ್ಣ ಹ್ಯಾಡ್ಲ, ಶಿಕ್ಷಣ: ಎಸ್.ಎಸ್.ಎಲ್.ಸಿ., ವೃತ್ತಿ: ಮನೆಕೆಲಸದ ಜೊತೆಗೆ ದನಕರುಗಳ ಚಾಕರಿ. ಮಕ್ಕಳು: ಹಿರಿಯ ಮಗ ಮಾಹಂತೇಶ ವಯಸ್ಸು 26, ಶಿಕ್ಷಣ: ಎಸ್.ಎಸ್.ಎಲ್.ಸಿ., ಕಿರಿಯ ಮಗ: ವೀರೇಶ ವಯಸ್ಸು 24. ಮಗಳು: ವಿಜಯಲಕ್ಷ್ಮೀ, ಮದುವೆಯಾಗಿದೆ.ಯಾವುದೇ ರೀತಿಯ ಸಾಲಗಳಿಲ್ಲ, ಮನೆಯಲ್ಲಿ ಟಿವಿ ಇದೆ. ಮೊಬೈಲ್: 6360608403

Leave a Reply

Your email address will not be published.