ಚಾದಂಗಡಿ ಪ್ಯಾನೆಲ್

ನಮ್ಮ ಸಂಗಪ್ಪಜ್ಜನ ಚಾದಂಗಡಿ ಅಂದರ ಅದು ಯಾವುದೇ ಟಿವಿ ಚಾನೆಲ್‍ ಪ್ಯಾನೆಲ್ ಡಿಸ್ಕಶನ್ಗೂ ಕಡಿಮೆ ಇಲ್ಲದ ಹರಟೆ ಕಟ್ಟೆ.

‘ನಾನೂ ಒಮ್ಮೆರ ಎಲೆಕ್ಷನ್ಗೆ ನಿಲ್ಲಬೇಕಂತ ಮಾಡೀನಿ’ಅಂತ ಚಾ ಕುಡಕೊಂತ ಹೇಳಿದ ನಮ್ಮ ಕಡೆಮನಿ ಮಲ್ಲಪ್ಪ. ರಾಜಕೀಯ ಅಂದರ ಸಿಡಿಮಿಡಿಗೊಳ್ತಿದ್ದ ಮಲ್ಲಪ್ಪನ ಮಾರ್ನಿಂಗ್ ರಾಗ ಯಾಕೋ ಬದಲಾದಂಗ ಕಾಣಿಸ್ತು.

‘ಯಾಕಪಾ ಮಲ್ಲಪ್ಪ ಇವತ್ತ ನಿನ್ನ ರಾಗನ ಬದಲಾಗೈತೆಲ್ಲ…ಎಲೆಕ್ಷನ್ ನಡಿವಾಗ ಕುಂದಗೋಳ ಕಡೆ ಏನರ ಹೋಗಿದ್ದೆನು ಮತ್ತ..?’ ಕೆಂಡಕ್ಕ ಸೆದಿ ಹಾಕದ ನಾಗಪ್ಪ,‘ಕುಂದಗೋಳಕ್ಕ ಅಷ್ಟ ಅಲ್ಲ ಅದಕ್ಕಿಂತ ಮೊದಲ ಮಂಡ್ಯಕ್ಕೂ ಹೋಗಿದ್ದೆ. ಇದನ್ನೆಲ್ಲ ನೋಡಿದ ಮ್ಯಾಲ ನನಗಂತೂ ರಾಜಕೀಯದ ಹುಚ್ಚು ಹಿಡಿದಬಿಟ್ಟೈತಿ. ಏನು ರೊಕ್ಕ, ಏನು ಧಿಮಾಕ, ಏನು ದೌಲತ್ತು ಈ ರಾಜಕಾರಣಿಗಳದ್ದು…’ಒಂದೇ ಸಮನೇ ಭಾಷಣ ಶುರು ಮಾಡಿದ ಮಲ್ಲಪ್ಪ.

‘ಮುಂದ ಬರೋಗ್ರಾಮ ಪಂಚಾಯಿತಿ ಎಲೆಕ್ಷನ್ಗೆ ನಿಲ್ಲೂದಷ್ಟ ಅಲ್ಲ, ಒಂದು ಜಮಖಾನ ಹಾಸಿಗೊಂಡು ಹನುಮಂತ ದೇವರ ಕಟ್ಟಿಗೆ ಕುಂತು ಬಿಡಬೇಕಂತ ಮಾಡೀನಿ’. ಚಾದಂಗಡಿ ಪ್ಯಾನೆಲಿಸ್ಟುಗಳಿಗೆ ದಿಗಿಲು. ‘ಅಲ್ಲೋ ಎಲೆಕ್ಷನ್ಗೆ ನಿಲ್ಲವರು ಹಗಲು-ರಾತ್ರಿ ಊಟ-ನೀರು ಎಲ್ಲ ಬಿಟ್ಟು ಓಡಾಡ್ತಾರ… ನೀ ನೋಡಿದರ ಕಟ್ಟಿ ಮ್ಯಾಲ ಕೂಡತೀನಿ ಅಂತಿಯಲ್ಲೊ…’ಎಲ್ಲರೂ ಚಾ ಕುಡಿಯೂದು ಬಿಟ್ಟು ಉದ್ಗಾರ ತೆಗೆದಬಿಟ್ರು.

ಮಲ್ಲಪ್ಪ ತನ್ನ ತೊಡೆಗೆ ಪಟ್‍ ಅಂತ ಒಂದೇಟು ಹೊಡ್ಕೊಂಡು ಗೆದ್ದವನಂತೆ ಹೇಳಿದ-‘ಇಲ್ಲೇ ಇರೂದು, ನನಗ ನಿಮಗ ಇರೋ ವ್ಯತ್ಯಾಸ. ನೀವು ಬರೇ ವೋಟು ಹಾಕವ್ರು, 500-1,000 ರೂ. ತೊಗೊಂಡು ಖುಷಿಪಡ್ತೀರಿ. ನಾನಾ ಈ ಸಲ ಲಕ್ಷ ಲಕ್ಷ ದುಡಿತೀನಿ ನೋಡ್ತಿರ್ರಿ’.ಕಣ್ಣುಹೊಡೆದ ಮಲ್ಲಪ್ಪ ತನ್ನ ಇತ್ತೀಚೆಗಿನ ಮಂಡ್ಯ, ಕುಂದಗೋಳ ಪ್ರವಾಸ ಕಥನ ಬಿಚ್ಚಿದ.

ಒಂದು ಪಕ್ಷದಾಗ ಅದಾನ. ಆ ಪಕ್ಷದವರು ಏನು ಕೊಡೂದೆಲ್ಲ ಇವುಗ ಕೊಟ್ಟಬಿಟ್ಟಾರ. ಇನ್ನ ಇನ್ನೊಂದು ಪಕ್ಷದವರು, ‘ನೋಡ್ರೆಪಾ, ನೀವು ನಿಮ್ಮ ಪಕ್ಷದಾಗ ಇರ್ರಿ. ಆದರ ನಿಮ್ಮ ಮಂದಿಗೆಲ್ಲ ನಮಗ ವೋಟ್ ಹಾಕಾಕ ಹೇಳ್ರಿ ಅಂತ್ಹೇಳಿ ಎರಡು ಲಕ್ಷ ಪೆಂಡಿ ಇಟ್ಟು ಹೋಗ್ಯಾರ್ರಿ…’

‘ಕುಂದಗೋಳ ತಾಲೂಕಿನ ಹಳ್ಳಿಗೆ ನಮ್ಮ ಸೋದರತ್ತೆ ಮಗಳ್ನ ಕೊಟ್ಟಾರ. ಆಕಿ ಗಂಡನ ದೊಡ್ಡಪ್ಪನ ಮಗ ತಾಲೂಕು ಪಂಚಾಯಿತಿ ಎಲೆಕ್ಷನ್ಗೆ ನಿಂತು ಸೋತಾನ. ಸೋತರೂ ಅವ ಏನೂ ಕಳಕೊಂಡಿಲ್ಲ. ಮಂದಿ ಮುಂದ ಕಳಕೊಂಡಾರ ತರ ನಾಟಕ ಮಾಡ್ತಾನ. ಮೊನ್ನೆ ಎಲೆಕ್ಷನ್ನಾಗ ಅವುಂದು ಏನು ದುಡಿಮಿ ಅಂತೀರಿ. ಒಂದು ಪಕ್ಷದಾಗ ಅದಾನ. ಆ ಪಕ್ಷದವರು ಏನು ಕೊಡೂದೆಲ್ಲ ಇವುಗ ಕೊಟ್ಟಬಿಟ್ಟಾರ. ಇನ್ನ ಇನ್ನೊಂದು ಪಕ್ಷದವರು, ‘ನೋಡ್ರೆಪಾ, ನೀವು ನಿಮ್ಮ ಪಕ್ಷದಾಗ ಇರ್ರಿ. ಆದರ ನಿಮ್ಮ ಮಂದಿಗೆಲ್ಲ ನಮಗ ವೋಟ್ ಹಾಕಾಕ ಹೇಳ್ರಿ ಅಂತ್ಹೇಳಿ ಎರಡು ಲಕ್ಷ ಪೆಂಡಿ ಇಟ್ಟು ಹೋಗ್ಯಾರ್ರಿ…’

ಮಲ್ಲಪ್ಪ ಬಿಚ್ಚಿಟ್ಟ ರಹಸ್ಯ ಕೇಳಿ ನಾಗಪ್ಪ, ಯಲ್ಲಪ್ಪ ಬೆಚ್ಚಿಬಿದ್ದರು. ಕಳಕಪ್ಪಜ್ಜ ಮಾತ್ರ,‘ದುಡಿದು ತಿನ್ರೋ ಗಂಡಸ ಮಕ್ಳ ಅಂದರ ತಿರಕೊಂಡ ತಿಂತೀವಿ ಅನ್ನಾವ್ರಲೇ ನೀವು…’ಅಂತ ಬುದ್ಧಿ ಹೇಳಾಕ ನೋಡಿದ. ಆಗ ಮಲ್ಲಪ್ಪನ ವಾದಕ್ಕೆ ಬಲಿಯಾದವನು ಸಂಗಪ್ಪಜ್ಜ. ‘ಏಯ್ ಕಳಕಪ್ಪಜ್ಜ, ಈ ಸಂಗಪ್ಪಜ್ಜ ಚಾದಂಗಡಿ ಇಟ್ಟು ಎಷ್ಟು ವರ್ಷಾತು? ಮೂವತ್ತು ವರ್ಷಾತಲ್ಲ? ಈ ಮೂವತ್ತು ವರ್ಷದಾಗ ಏನು ದುಡಿದು ಎಷ್ಟು ಸಾಧಿಸ್ಯಾನ? ಹೌದಲ್ಲೋ ಸಂಗಪ್ಪಜ್ಜ?’.ಚಾ ಸೋಸುತ್ತಿದ್ದ ಸಂಗಪ್ಪಜ್ಜ,‘ಏನೂ ಸಾಧಿಸಿಲ್ಲ ಬಿಡು’ ಅನ್ನವರಂಗ ತಲೆ ಆಡಿಸಿದ.

ಇಷ್ಟೊತ್ತಿಗೆ ಕಲ್ಲೇಶನ ಎಂಟ್ರಿ. ಸ್ವಲ್ಪ ಹೊತ್ತು ಈ ಪ್ಯಾನೆಲ್‍ ಡಿಸ್ಕಶನ್ ಕೇಳಿಸ್ಕೊಂಡ ಮೇಲೆ ಮಲ್ಲಪ್ಪಗ ಕೇಳಿದ. ‘ರಮೇಶ ಜಾರಕಿಹೊಳಿ ಒಂದು ವಸ್ತು ಕಳಕೊಂಡಾನ, ಅದಕ್ಕ ಹಂಗಾಡ್ತಾನ ಅಂತ ಸತೀಶ್ ಜಾರಕಿಹೊಳಿ ಹೇಳ್ಯಾರಲ್ಲ, ಆ ವಸ್ತು ಏನು ಅಂತ ಹೇಳಿಬಿಡು. ನಿನ್ನ ಪ್ರಚಾರಕ್ಕ ನಾ ಪುಕ್ಕಟ್ಟೆ ಬರ್ತೀನಿ’.ಕಲ್ಲೇಶನ ಸವಾಲು ಮೊಸರನ್ನದಲ್ಲಿ ಕಲ್ಲು ಬಂದಂಗಾತು ಮಲ್ಲಪ್ಪನಿಗೆ. ತಲೆ ಕೆರೆದುಕೊಂಡ, ಮೀಸೆ ಮ್ಯಾಲೆ ಕೈ ಆಡಿಸಿದ್ದೂ ಆತು, ಟೇಬಲ್ಗೆ ಬೆರಳಿಂದ ಬಾರಿಸಿದ್ದೂ ಆತು. ಊಹೂಂ ಏನೂ ಗೊತ್ತಾಗಲಿಲ್ಲ. ‘ಎಲೆಕ್ಷನ್ಗೆ ನಿಲ್ಲೂದಂದರ ಇವನ್ನೆಲ್ಲ ತಿಳ್ಕೊಂಡಿರಬೇಕಪ್ಪ ಮಲ್ಲಪ್ಪ…’ ಗೆಲುವಿನ ನಗೆ ಬೀರಿದ ಕಲ್ಲೇಶಿ.

‘ಇವುಗ ಬರೇ ಎಲೆಕ್ಷನ್‍ ಚಿಂತಿನ ಹತ್ತಿ ಬಿಟ್ಟೈತಿ ನೋಡು’ ನಾಗಪ್ಪನ ಮಾತಿಗೆ ಎಲ್ಲರೂ ಗೊಳ್ಳೆಂದು ನಕ್ಕರು. ‘ನಾನು ಎಲೆಕ್ಷನ್ಗೆ ನಿಂತರ ಬ್ಯಾರೆ ಎದುರಾಳಿಗಳೆಲ್ಲ ನನ್ನ ಹತ್ತಿರ ನೋಟಿನ ಪೆಂಡಿ ಹಿಡ್ಕೊಂಡು ವಾಪಸ್ ತೊಕ್ಕೊಳೋ ತಮ್ಮ ಅಂತ ಓಡಿ ಬರ್ತಾರ.

‘ಅಲ್ಲಪಾ, ಮಂಡ್ಯಗೂ ಇಂಡಿಯಾಗೂ ಏನು ವ್ತತ್ಯಾಸಐತಿ? ಹ್ವಾದ ಲೋಕಸಭೆ ಚುನಾವಣ್ಯಾಗ ಎಲ್ಲ ಟಿ.ವಿ. ಚಾನೆಲ್, ಪತ್ರಿಕೆಗಳ ಗಮನ ಮಂಡ್ಯಾದ ಮೇಲೆನ ಇತ್ತಲ್ಲ ಯಾಕ?’ ನಾಗಪ್ಪ ಎಸೆದ ಪ್ರಶ್ನೆಗೆ ರೆಡಿ ಆಗಿಯೇ ಬಂದಿದ್ದ ಕಲ್ಲೇಶಿ. ‘ನೋಡಪಾ ಅದು ಭಾಳ ಡಿಫರೆನ್ಸ್ ಐತಿ. ಎಲ್ಲದರಾಗೂ ಐತಿ. ಅಲ್ಲಿ ಬಸ್ ಕಾಲುವೆಗೆ ಬಿದ್ದು ಸತ್ತರ ಒಂದು ಹೆಣಕ್ಕಐದು ಲಕ್ಷರುಪಾಯಿ. ಇತ್ತಾಗ ಧಾರವಾಡದಾಗ ಬಿಲ್ಡಿಂಗ್ ಬಿದ್ದು ಸತ್ತರ ಎರಡ ಲಕ್ಷ…’.

‘ಸತ್ತಾಗ ಅಷ್ಟ ಅಲ್ಲ, ಮೊನ್ನೆ ಎಲೆಕ್ಷನ್ದಾಗೂ ಅಲ್ಲಿ ವೋಟ್ ಹಾಕವ್ರಿಗೆ ಹತ್ತು ಸಾವಿರಗಟ್ಟಲೇ ರೊಕ್ಕ ಸಿಕ್ಕೈತಿ’ ಅಂದ ಮಲ್ಲಪ್ಪ. ‘ಇವುಗ ಬರೇ ಎಲೆಕ್ಷನ್‍ ಚಿಂತಿನ ಹತ್ತಿ ಬಿಟ್ಟೈತಿ ನೋಡು’ ನಾಗಪ್ಪನ ಮಾತಿಗೆ ಎಲ್ಲರೂ ಗೊಳ್ಳೆಂದು ನಕ್ಕರು. ‘ನಾನು ಎಲೆಕ್ಷನ್ಗೆ ನಿಂತರ ಬ್ಯಾರೆ ಎದುರಾಳಿಗಳೆಲ್ಲ ನನ್ನ ಹತ್ತಿರ ನೋಟಿನ ಪೆಂಡಿ ಹಿಡ್ಕೊಂಡು ವಾಪಸ್ ತೊಕ್ಕೊಳೋ ತಮ್ಮ ಅಂತ ಓಡಿ ಬರ್ತಾರ. 2-3 ಲಕ್ಷ ರೂ. ದುಡಕೊಂಡು ಸುಮ್ನ ಕುಂದರತೀನಿ’ ಮಲ್ಲಪ್ಪನ ಲೆಕ್ಕ ಕೇಳಿ ಭೇಷ್ ಭೇಷ್‍ ಅಂದರು ಸಕಲ ಪ್ಯಾನೆಲಿಸ್ಟುಗಳು!

Leave a Reply

Your email address will not be published.